Saturday, February 28, 2026
Saturday, February 28, 2026
Home Blog Page 1596

ಕಂದಾಯ ಇಲಾಖೆಗೆ ಭೂಮಿ ಹಸ್ತಾಂತರ ಬಗರ್ ಹುಕುಂ ಸಮಸ್ಯೆ ಕೊಂಚ ಪರಿಹಾರ

0

ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ 6 ಲಕ್ಷ ಹೆಕ್ಟೇರ್‌ ಭೂಮಿ ಹಸ್ತಾಂತರವಾಗಲಿದೆ.

ಈ ಪೈಕಿ ಸುಮಾರು 5 ಲಕ್ಷ ಹೆಕ್ಟೇರ್‌ ಅನ್ನು 15 ವರ್ಷಗಳಿಂದ ಸಾಗುವಳಿ ಮಾಡುತ್ತಿರುವವರಿಗೆ ಹಂಚಲಾಗುವುದು ಎಂದು ಕಂದಾಯ ಸಚಿವ ಆರ್‌. ಅಶೋಕ್‌ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,

ಇಲಾಖೆಯು ತನ್ನ ಅಗತ್ಯಕ್ಕೆ ಬೇಕಾದ ಭೂಮಿ ಯನ್ನು ಹೊರತುಪಡಿಸಿ ಉಳಿದ ಭೂಮಿಯನ್ನು ರೈತರಿಗೆ ಹಂಚಲಿದೆ. ಈ ಮೂಲಕ ಮೈಸೂರು, ಚಾಮರಾಜನಗರ, ಶಿವಮೊಗ್ಗ ಸಹಿತ ರಾಜ್ಯಾದ್ಯಂತ ಇರುವ ಬಗರ್‌ ಹುಕುಂ ಸಮಸ್ಯೆಗೆ ಶಾಶ್ವತ ತೆರೆ ಬೀಳಲಿದೆ ಎಂದು ತಿಳಿಸಿದರು.

ಈ ಮೊದಲು ಡೀಮ್ಡ್ ಫಾರೆಸ್ಟ್‌ ಎಂದು ಗುರುತಿಸಿ ಅರಣ್ಯ ಇಲಾಖೆ ವಶದಲ್ಲಿದ್ದ 6 ಲಕ್ಷ ಹೆಕ್ಟೇರ್‌ ಭೂಮಿ ಈಗ ಕಂದಾಯ ಇಲಾಖೆಗೆ ಹಸ್ತಾಂತರ ವಾಗಲಿದೆ ಎಂದು ಹೇಳಿದರು.

ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ 90 ಸಾವಿರ ಎಕರೆಗೂ ಹೆಚ್ಚು ಭೂಮಿ ಒತ್ತುವರಿ ಯಾಗಿದೆ. ಹೀಗೆ ಒತ್ತುವರಿಯಾದ ಜಮೀನನ್ನು ಒತ್ತುವರಿದಾರರಿಗೇ 30 ವರ್ಷಗಳ ಗುತ್ತಿಗೆ ಆಧಾರದ ಮೇಲೆ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಕೊಡಗು ಜಿಲ್ಲೆಯಲ್ಲಿ 12 ಸಾವಿರ ಎಕರೆ, ಹಾಸನದಲ್ಲಿ 30 ಸಾವಿರ ಎಕರೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ 45 ಸಾವಿರ ಎಕರೆ ಭೂಮಿ ಒತ್ತುವರಿ ಯಾಗಿದೆ. ಒತ್ತುವರಿಯಾದ ಭೂಮಿಯಲ್ಲಿ ಕಾಫಿ, ಏಲಕ್ಕಿ ಸಹಿತ ಹಲವು ಬೆಳೆಗಳನ್ನು ಬೆಳೆಯ ಲಾಗುತ್ತಿದೆ. ಈ ಪೈಕಿ ಐದು ಎಕರೆಗಿಂತ ಕಡಿಮೆ ಪ್ರಮಾಣದ ಒತ್ತುವರಿ ಮಾಡಿಕೊಂಡವರ ಸಂಖ್ಯೆ ಶೇ. 90ರಷ್ಟಿದೆ ಎಂದು ಸಚಿವರು ವಿವರಿಸಿದರು.

ಕಂದಾಯ ಇಲಾಖೆಗೆ ಮರಳಿ ಬರುವ ಪೈಕಿ ಎಷ್ಟು ಪ್ರಮಾಣದ ಭೂಮಿ ಸರಕಾರದ ಅಗತ್ಯಕ್ಕೆ ಬೇಕು ಎಂದು ಗುರುತಿಸ ಲಾಗುತ್ತಿದ್ದು, ಆಸ್ಪತ್ರೆ ಸಹಿತ ಸಾರ್ವಜನಿಕ ಸೇವೆಯ ಕಟ್ಟಡಗಳಿಗೆ ಇದು ಬಳಕೆಯಾಗಲಿದೆ ಎಂದರು.

ಬ್ಯಾಂಕ್ ಸಾಲದ ಬಡ್ಡಿ ದರದಲ್ಲಿ ಏರಿಕೆ

0

ತೈಲ ಬೆಲೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಬಳಿಕ ಬ್ಯಾಂಕ್​ ಸಾಲಗಾರರಿಗೆ ಬಡ್ಡಿ ಬರೆ ಎದುರಾಗಿದೆ. ಭಾರತೀಯ ರಿಸರ್ವ್​ ಬ್ಯಾಂಕ್​ (ಆರ್​ಬಿಐ) ಪ್ರಮುಖ ಪಾಲಿಸಿ ದರ ಏರಿಕೆ ಘೋಷಿಸಿದೆ.

ಇದರಿಂದಾಗಿ ಎಲ್ಲ ರೀತಿಯ ಬ್ಯಾಂಕ್​ ಸಾಲಗಳ ಮೇಲಿನ ಬಡ್ಡಿ ದರ ಹೆಚ್ಚಳವಾಗುವುದು ಬಹುತೇಕ ಖಚಿತವಾಗಿದ್ದರೆ, ನಿಶ್ಚಿತ ಠೇವಣಿ ಇರಿಸುವವರಿಗೆ ಕೊಂಚ ಪ್ರಯೋಜನವಾಗಲಿದೆ ಎಂದು ತಿಳಿದುಬಂದಿದೆ.

ಆರ್​ಬಿಐ ಗವರ್ನರ್​ ಶಕ್ತಿಕಾಂತ ದಾಸ್​ ಅವರು ಸುದ್ದಿಗೋಷ್ಠಿ ನಡೆಸಿ ಈ ನಿರ್ಧಾರ ಪ್ರಕಟಿಸಿದರು. ಯೂಕ್ರೇನ್​ ಮೇಲೆ ರಷ್ಯಾ ಯುದ್ಧ ಸಾರಿದ ಮೇಲೆ ಬದಲಾದ ಜಾಗತಿಕ ಸನ್ನಿವೇಶ ಅರ್ಥ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಪೂರೈಕೆ ಜಾಲದ ಮೇಲೆ ಅಡಚಣೆ ಉಂಟಾಗಿ ಹಣದುಬ್ಬರ ಪ್ರಮಾಣ ಹೆಚ್ಚಾಗಿದೆ ಎಂದು ತಿಳಿಸಿದರು.

ಬಡ್ಡಿ ದರ ಕೆಳಗಿನ ಹಂತದಿಂದ ಯೂರ್ಟನ್​ ತೆಗೆದುಕೊಂಡಾಗ ಸಾಮಾನ್ಯ ವಾಗಿ ಅಲ್ಪಾವಧಿ ಮತ್ತು ಮಧ್ಯಮಾವಧಿಯ ನಿಶ್ಚಿತ ಠೇವಣಿಗಳ ಬಡ್ಡಿದರ ಮೊದಲು ಏರಿಕೆಯಾಗುತ್ತದೆ. ದೀರ್ಘಾವಧಿ ನಿಶ್ಚಿತ ಠೇವಣಿ ಬಡ್ಡಿದರವು ಏರಿಕೆಯಾಗಲು ಸ್ವಲ್ಪ ಸಮಯ ಕಾಯಬೇಕಾಗಬಹುದು. ಹೀಗಾಗಿ ದೀರ್ಘಾವಧಿಯ ಠೇವಣಿಯಲ್ಲಿ ಹಣವನ್ನು ಕೂಡಿಡುವುದು ಸರಿಯಾದ ಕ್ರಮವಲ್ಲ. ಅದನ್ನು ನವೀಕರಿಸುವ ಸಮಯವಾಗಿದ್ದರೆ ಅಲ್ಪಾವಧಿಗೆ ಬದಲಾಯಿಸಲು ಇದು ಸರಿಯಾದ ಸಮಯ ಎನ್ನುತ್ತಾರೆ ಹೂಡಿಕೆ ಪರಿಣತರು.

ಆರ್​ಬಿಐ ರೆಪೋ ದರ, ಸಿಆರ್​ಆರ್​ ಏರಿಕೆ ಪ್ರಕಟಿಸಿದ ಬೆನ್ನಿಗೆ ಬಿಎಸ್​ಇ ಸೆನ್ಸೆಕ್ಸ್​ 1,306.96 ಅಂಶ (2.29%) ಕುಸಿದು 55,669.03 ಅಂಶದಲ್ಲಿ, ಎನ್​ಎಸ್​ಇ ನಿಫ್ಟಿ 50 ಸೂಚ್ಯಂಕ 391.50 ಅಂಶ (2.29%) ಕುಸಿದು 16,677.60 ಅಂಶದಲ್ಲಿ ದಿನದ ವಹಿವಾಟು ಮುಗಿಸಿವೆ.

ಆಟೋ, ಬ್ಯಾಂಕ್​, ಎ​ಎಂಸಿಜಿ, ಪವರ್​, ಮೆಟಲ್​, ರಿಯಾಲ್ಟಿ, ಹೆಲ್ತ್​ಕೇರ್​, ಕ್ಯಾಪಿಟಲ್​ ಗೂಡ್ಸ್​ ಸೂಚ್ಯಂಕಗಳು ಕೂಡ ಶೇ.1&3ರ ತನಕ ಕುಸಿತ ಕಂಡಿವೆ. ಬಿಎಸ್​ಇ ಲಿಸ್ಟೆಡ್​ ಕಂಪನಿಗಳ ಮಾರುಕಟ್ಟೆ ಬಂಡವಾಳ 6,27,359.72 ಕೋಟಿ ರೂ.ನಷ್ಟವಾಗಿದ್ದು 2,59,60,852.44 ಕೋಟಿ ರೂ.ಗೆ ತಲುಪಿದೆ ಎನ್ನಲಾಗಿದೆ.

ಪಿಎಸ್ ಐ ಪ್ರಕರಣ ತನಿಖೆಯಲ್ಲಿ ಸರ್ಕಾರದ ಮಧ್ಯಪ್ರವೇಶವಿಲ್ಲ

0

545 ಪಿಎಸ್ ಐ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸದ ತನಿಖೆಯಲ್ಲಿ ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಸಿಎಂ ಬೊಮ್ಮಾಯಿ ಅವರು ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್ ಐ ನೇಮಕಾತಿ ಅಕ್ರಮದಲ್ಲಿ ತನಿಖೆ ಪಾರದರ್ಶಕವಾಗಿ ನಡೆಯುತ್ತಿದೆ.
ತನಿಖೆಯಲ್ಲಿ ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡುವುದಿಲ್ಲ. ಕಾಂಗ್ರೆಸ್ ನವರು ಸಚಿವ ಡಾ. ಅಶ್ವತ್ಥ್ ನಾರಾಯಣ ವಿರುದ್ಧ ಹಿಟ್ ರನ್ ಅಂಡ್ ಮಾಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿಯೂ ಪರೀಕ್ಷಾ ಅಕ್ರಮ ನಡೆದಿತ್ತು. ಯಾರ ಬಳಿ ಸಾಕ್ಷ್ಯ ಇದ್ದರೆ ತಂದು ಕೊಡಲಿ ಎಂದರು.

ಪಶುವೈದ್ಯಕೀಯ ದಂಪತಿಗಳ ಸುವರ್ಣ ಸಾಧನೆ

0

ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರದ ಫಟೀಕೋತ್ಸವದಲ್ಲಿ ಪಶುವೈದ್ಯ ಡಾ. ಸಿ.ಎಲ್.ಮಣಿಕಾಂತ್ ಮತ್ತು ಅವರ ಪತ್ನಿ ಡಾ: ಪವಿತ್ರಾ ಇವರಿಗೆ ಎಂವಿಎಸ್‌ಸಿ ಸ್ನಾತಕೋತ್ತರ ಶಿಕ್ಷಣದಲ್ಲಿ ಅತ್ಯಂತ ಹೆಚ್ಚುವರಿ ಅಂಕ ಪಡೆದಿರುವುದಕ್ಕೆ ರಾಜ್ಯಪಾಲರಾದ ಥಾವರ್ ಚಂದ್ ಗೆಹಲೋಟ್ ಚಿನ್ನದ ಪದಕ ನೀಡುವುದರ ಮೂಲಕ ಗೌರವ ಪ್ರಧಾನ ಮಾಡಿದರು.

ಡಾ: ಮಣಿಕಾಂತ್ ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗದಲ್ಲಿ ಮತ್ತು ಡಾ: ಪವಿತ್ರಾ ಪಶುವೈದ್ಯಕೀಯ ಸೂಕ್ಷ್ಮಾಣುಜೀವಿಶಾಸ್ತ್ರ ವಿಭಾಗದಲ್ಲಿ ಬಂಗಾರದ ಪದಕ ಪಡೆದಿರುತ್ತಾರೆ.

ಸದ್ಯ ಚಿಕ್ಕಮಗಳೂರಿನ ಹಳ್ಳಿಗಾಡು ಭಾಗದಲ್ಲಿ ಜನಪ್ರಿಯ ಪಶುವೈದ್ಯರಾಗಿ ಕೆಲಸ ನಿರ್ವಹಿಸುತ್ತಿರುವ ಈ ಪಶುವೈದ್ಯ ದಂಪತಿ ರಾತ್ರಿ ಹಗಲೆನ್ನದೇ ಪಶುಸೇವೆಯಲ್ಲಿ ಅವರನ್ನು ತೊಡಗಿಸಿ ಕೊಂಡಿದ್ದಾರೆ. ಸ್ನಾತಕೋತ್ತರ ಸಂಶೋಧನಾ ಸಮಯದಲ್ಲಿ ಪಡೆದ ಪರಿಣತೆಯನ್ನು ಮತ್ತು ಕಲಿತ ವಿದ್ಯೆಯನ್ನು ಕ್ಷೇತ್ರ ಮಟ್ಟದಲ್ಲಿ ಕಾರ್ಯಗೊಳಿಸುತ್ತಿರುವುದು ಇವರ ಹೆಮ್ಮೆಯ ಕಾರ್ಯವಾಗಿದೆ.

ಪಶುಚಿಕಿತ್ಸಾಲಯದಲ್ಲಿ ಜಾನುವಾರು ಅಂಗಗಳ ವಸ್ತುಸಂಗ್ರಹಾಲಯ ಮತ್ತು ಪ್ರಯೋಗಾಲಯ ಸ್ಥಾಪಿಸಿ ಗೋಪಾಲಕರಿಗೆ ಜ್ಞಾನ ಮತ್ತು ಸೇವೆ ನೀಡುತ್ತಿರುವುದು ಇವರ ವಿಶೇಷತೆ. ಸದಾ ನೂತನ ವಿಷಯಗಳನ್ನು ಹಾಗೂ ಹೊಸ ಆವಿಷ್ಕಾರಗಳನ್ನು ಗ್ರಾಮೀಣ ರೈತರಿಗೆ ತಲುಪಿಸುವ ಕಾಯಕದಲ್ಲಿ ಇವರು ತೊಡಗಿರುವುದು ಇವರ ಕಾರ್ಯ ಚಟುವಟಿಕೆ ಸೂಚಿಸುತ್ತದೆ.

ಸ್ನಾತಕೋತ್ತರ ಅಧ್ಯಯನದ ಸಮಯದಲ್ಲಿಯೂ ಸಹ ಈ ದಂಪತಿಗಳು ದಕ್ಷವಾಗಿ ಕಾರ್ಯನಿರ್ವಹಿಸಿ ಉತ್ತಮ ಗುಣಮಟ್ಟದ ಸಂಶೋಧನೆ ಮಾಡಿದ್ದು, ಸದಾ ಚಿಂತನಶೀಲರಾಗಿದ್ದರು ಎನ್ನುತ್ತಾ ಇವರಿಬ್ಬರಿಗೆ ಶುಭ ಕೋರುತ್ತಾರೆ ಇವರ ಮಾರ್ಗದರ್ಶಕರಾದ ಶಿವಮೊಗ್ಗದ ಪಶುವೈದ್ಯಕೀಯ ಮಹಾವಿದ್ಯಾಲಯದ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ: ಎನ್.ಬಿ.ಶ್ರೀಧರ.

ಬಸವಣ್ಣನವರ ಆದರ್ಶಗಳು ಸಾರ್ವಕಾಲಿಕ- ಬಿವೈಆರ್

0

ವಿಶ್ವಗುರು ಬಸವಣ್ಣನವರ ಜೀವನಾದರ್ಶಗಳು ಸಾರ್ವಕಾಲಿಕವಾಗಿದ್ದು ಇಂದಿನ ಯುವ ಜನತೆಗೆ ಮಾರ್ಗದರ್ಶಿಯಾಗಿವೆ. ಅವರ ಸಾಮಾಜಿಕ ಸಾಮರಸ್ಯ, ಭ್ರಾತೃತ್ವ, ಏಕತೆ ಮತ್ತು ಸಹಾನುಭೂತಿಯ ಚಿಂತನೆಗಳು ಇಂದಿಗೂ ಪ್ರಭಾವಯುತವಾಗಿವೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದರು.

ಬಿ.ವೈ. ರಾಘವೇಂದ್ರ ಅವರು ನಿನ್ನೆ ಸಂಜೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಾಗೂ ಬಸವೇಶ್ವರ ವೀರಶೈವ ಸಮಾಜ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಜಗಜ್ಯೋತಿ ಬಸವೇಶ್ವರರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಬಸವಣ್ಣನವರ ಜೀವನಾದರ್ಶಗಳನ್ನು ಇಂದಿನ ಯುವ ಜನತೆ ಅಳವಡಿಸಿಕೊಂಡು ಉತ್ತಮ ಜೀವನವನ್ನು ರೂಪಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.

ಬಸವಣ್ಣನವರು ಜನಿಸಿದ ಈ ನಾಡಿನಲ್ಲಿ ಜನಿಸಿದ ನಾವೇ ಧನ್ಯರು. ಅವರ ಆಶಯದಂತೆ ಪ್ರತಿ ವ್ಯಕ್ತಿಯು ನಡೆ-ನುಡಿ ಶುದ್ಧವಾಗಿಸಿಕೊಂಡಲ್ಲಿ ತನ್ನಲ್ಲಿಯೇ ಕೈಲಾಸವನ್ನು ಕಾಣಬಹುದಾಗಿದೆ ಎಂದ ಅವರು, ಜಾತಿ, ಮತ ಪಂಥಗಳ ಎಲ್ಲೆ ಮೀರಿ ಬೆಳೆದವರು ಬಸವಣ್ಣನವರು. ಅಂತಹ ಮಹಾನ್ ಮಾನವತಾವಾದಿಯನ್ನು ಯಾವುದೋ ಒಂದು ಜನಾಂಗಕ್ಕೆ ಸೀಮಿತಗೊಳಿಸುವುದು ಸಲ್ಲದು ಎಂದು ನುಡಿದರು.

ಲಂಡನ್‌ನ ಥೇಮ್ಸ್ ನದಿ ತೀರದಲ್ಲಿ ಬಸವೇಶ್ವರ ಪ್ರತಿಮೆಯನ್ನು ನಿರ್ಮಿಸಲು ಅಗತ್ಯವಿರುವ ಅನುದಾನವನ್ನು ಬಿಡುಗಡೆಗೊಳಿಸಿ, ಬಸವೇಶ್ವರರಿಗೆ ಗೌರವ ಸಲ್ಲಿಸಿದೆ ಮಾತ್ರವಲ್ಲ ಅವರ ಆದರ್ಶಗಳನ್ನು ಜಗತ್ತಿಗೆ ಪಸರಿಸುವಲ್ಲಿ ಸಕ್ರಿಯವಾಗಿದೆ. ಬಸವಕಲ್ಯಾಣದಲ್ಲಿ ಬಸವಣ್ಣನವರು ಸ್ಥಾಪಿಸಿದ್ದ ಅನುಭವ ಮಂಟಪದ ಸ್ಥಳದಲ್ಲಿ ನೂತನ ಅನುಭವ ಮಂಟಪ ನಿರ್ಮಿಸಲು ಸರ್ಕಾರ ಬದ್ಧವಾಗಿದೆ. ಅಗತ್ಯವಿರುವ 500 ಕೋಟಿ ರೂ. ಅನುದಾನವನ್ನು ಬಿಡುಗಡೆಗೊಳಿಸಿದೆ. ಉತ್ತರ ಕರ್ನಾಟಕದ ಭಾಗವನ್ನು ಕಲ್ಯಾಣ ಕರ್ನಾಟಕ ಎಂದು ಘೋಷಿಸಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಉದ್ಧೇಶಿಸಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರು ಮಾತನಾಡಿ, ಬಸವಣ್ಣನವರನ್ನು ಅನುಸರಿಸುವವರು, ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ನಡೆಯುವವರು ಮಹಾಪುರುಷರಾಗಿ ಗುರುತಿಸಿಕೊಳ್ಳುತ್ತಾರೆ. ಬಸವಣ್ಣನವರ ಅನುಯಾಯಿಗಳು ಎಂಬುದೇ ನಮ್ಮ ಹೆಮ್ಮೆ. ಆದರೆ, ಬಹುಸಂಖ್ಯೆಯಲ್ಲಿ ಬಸವೇಶ್ವರ ಆದರ್ಶಗಳನ್ನು ಅನುಸರಿಸದಿರುವುದು ಬೇಸರದ ಸಂಗತಿ ಎಂದರು.

ಕಾರ್ಯಕ್ರಮದಲ್ಲಿ ಜಗಜ್ಯೋತಿ ಬಸವೇಶ್ವರ ಕುರಿತು ದಿಕ್ಸೂಚಿ ಭಾಷಣ ಮಾಡಿದ ಚಿಕ್ಕಮಗಳೂರಿನ ಹಿರಿಯ ಸಾಹಿತಿ ಚಟ್ನಳ್ಳಿ ಮಹೇಶ್ ಅವರು ಮಾತನಾಡಿ, ಬಸವಣ್ಣನವರ ವಚನಗಳಲ್ಲಿ ಗುರು-ಜಂಗಮ, ಕಾಯಕ, ದಾಸೋಹ, ಧರ್ಮ, ಮಹಿಳೆ, ನಿಸರ್ಗ, ಕಾರ್ಮಿಕ ಮುಂತಾದ ಅನೇಕ ವಿಷಯಗಳ ವ್ಯಾಖ್ಯಾನವಿದೆ. ಈ ವಚನಗಳೊಳಗಿನ ಅಂತಃಸತ್ವ ಇಂದಿಗೂ ಪ್ರಸ್ತುತವಾಗಿದೆ ಹೇಳಿದರು.

ಅವರ ವಚನಗಳಲ್ಲಿ ಬಾಳಿಗೆ ಪೂರಕವಾದ ಬಂಗಾರದ ಹೂರಣ ಉಣಬಡಿಸಿದ್ದಾರೆ. ಅವರ ಬರಹ, ಸಾಹಿತ್ಯ ಸರ್ವಕಾಲಕ್ಕೂ ಅನ್ವಯವಾಗುತ್ತವೆ. ಸಮಾಜದ ಓರೆ-ಕೋರೆಗಳನ್ನು ತಿದ್ದಿ ಮುನ್ನಡೆದವರು, ಬದುಕನ್ನು ಸರಿದಾರಿಗೆ ಶ್ರಮಿಸಿದವರಲ್ಲಿ ಬಸವಣ್ಣನವರು ಅಗ್ರಗಣ್ಯರು. ಸಮಸಮಾಜವನ್ನು ನಿರ್ಮಿಸುವಲ್ಲಿ ಅವರ ಸಂಕಲ್ಪ ಅದ್ವಿತೀಯವಾದುದು ಎಂದರು.

ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿ, ಬಸವ ಮರುಳಸಿದ್ಧ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಸೂಡಾ ಅಧ್ಯಕ್ಷ ಎನ್.ಜಿ.ನಾಗರಾಜ್, ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಎಸ್.ದತ್ತಾತ್ರಿ, ಮಹಾನಗರಪಾಲಿಕೆ ಸದಸ್ಯ ಹೆಚ್.ಎಂ.ಯೋಗೀಶ್, ಶ್ರೀಮತಿ ಅನಿತಾ ರವಿಶಂಕರ್, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ಎನ್.ಜೆ.ರಾಜಶೇಖರ್, ಟಿ.ಬಿ.ಜಗದೀಶ್, ಡಿ.ಬಿ.ವಿಜಯಕುಮಾರ್, ಜ್ಯೋತಿಪ್ರಕಾಶ್, ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ, ಸಿ.ಇ.ಒ. ಎಂ.ಎಲ್.ವೈಶಾಲಿ, ಅಪರ ಜಿಲ್ಲಾಧಿಕಾರಿ ಡಾ. ನಾಗೇಂದ್ರ ಎಫ್.ಹೊನ್ನಳ್ಳಿ, ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್. ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಶ್ರೀಮತಿ ನಾಗರತ್ನ ಚಂದ್ರಶೇಖರಯ್ಯ ಮತ್ತು ತಂಡದವರಿಂದ ವಚನಗಾಯನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಹೊಸ ಅನ್ವೇಷಣೆಗಳ ಮೂಲಕ ಮಾರುಕಟ್ಟೆ ಪ್ರವೇಶಿಸಬೇಕು

0

ಕಾರ್ಪೊರೆಟ್ ಸಂಸ್ಥೆಗಳು ಹೊಸ ಅನ್ವೇಷಣೆಗಳು ಮತ್ತು ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಕಾಲಕಾಲಕ್ಕೆ ಪರಿಚಯಿಸುತ್ತಿರಬೇಕು. ಇಲ್ಲವಾದರೆ ಜಾಗತಿಕ ಮಾರುಕಟ್ಟೆಯಲ್ಲಿ ಅವುಗಳು ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತವೆ. ಈ ರೀತಿಯ ಅನ್ವೇಷಣೆಗೆ ಒತ್ತು ನೀಡುವ ಸಂಸ್ಥೆಗಳ ಬಗ್ಗೆ ಹೂಡಿಕೆದಾರರು ಹೆಚ್ಚು ಗಮನಹರಿಸುವುದು ಸೂಕ್ತ ಎಂದು ಬೆಂಗಳೂರಿನ ಆನಂದ್ ರಾಠಿ ಸಂಸ್ಥೆಯ ವ್ಯವಸ್ಥಾಪಕ ರೆಹಮತ್ ಬೇಗ್ ಅಭಿಪ್ರಾಯಪಟ್ಟರು.

ಕುವೆಂಪು ವಿಶ್ವವಿದ್ಯಾಲಯದ ನಿರ್ವಹಣಾಶಾಸ್ತ್ರ ವಿಭಾಗವು ಬುಧವಾರದಂದು ಪ್ರೊ. ಎಸ್. ಪಿ. ಹಿರೇಮಠ್ ಸಭಾಂಗಣದಲ್ಲಿ “ಕ್ಯಾಪಿಟಲ್ ಮಾರ್ಕೆಟ್ ಡೈನಾಮಿಕ್ಸ್ ಮತ್ತು ಅವಕಾಶಗಳು” ಕುರಿತು ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಬಿಎಸ್‌ಇ ಮತ್ತು ಎನ್‌ಎಸ್‌ಇ ಷೇರು ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡುವಾಗ ಪ್ರಸಕ್ತ ವಿದ್ಯಮಾನಗಳು ಮತ್ತು ಜಾಗತಿಕ ಬೆಳವಣ ಗೆಗಳು ಸಂಸ್ಥೆಗಳ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದನ್ನು ಅರಿತು ಹೂಡಿಕೆದಾರರು ಮುಂದಡಿಯಿಡಬೇಕು ಎಂದರು.

ಗ್ರಾಮೀಣ ಭಾಗದ ಶೈಕ್ಷಣಿಕ ಸಂಸ್ಥೆಗಳಲ್ಲಿ ನಿರ್ವಹಣಾಶಾಸ್ತ್ರ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ನಗರ ಕೇಂದ್ರಿತ ಸಂಸ್ಥೆಗಳ ವಿದ್ಯಾರ್ಥಿಗಳಷ್ಟೇ ಬುದ್ಧಿಮತ್ತೆ, ಔದ್ಯೋಗಿಕ ಕೌಶಲ್ಯ ಹೊಂದಿದ್ದು, ಸಂವಹನ ಕೌಶಲ್ಯವನ್ನು ರೂಢಿಸಿಕೊಳ್ಳುವುದರತ್ತ ಹೆಚ್ಚು ಗಮನಹರಿಸಿದರೆ, ಉದ್ಯಮದಲ್ಲಿ ಉತ್ತಮ ಅವಕಾಶ ಪಡೆಯುವುದರಲ್ಲಿ ಸಂಶಯವಿಲ್ಲ ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಆನಂದ್ ರಾಠಿ ಸಂಸ್ಥೆಯಿಂದ ಮೌಖಿಕ ಪರೀಕ್ಷೆ ನಡೆಸಿ ವಿಭಾಗದ ಕೆಲವು ವಿದ್ಯಾರ್ಥಿಗಳನ್ನು ಸಂಸ್ಥೆಯ ಮುಂದಿನ ಉದ್ಯೋಗ ಪ್ರಕ್ರಿಯೆಗೆ ಆಯ್ಕೆ ಮಾಡಿಕೊಳ್ಳಲಾಯಿತು. ವಿಭಾಗದ ಅಧ್ಯಕ್ಷ ಪ್ರೊ. ಹೆಚ್. ಎನ್. ರಮೇಶ್, ಪ್ರೊ. ಹಿರೇಮಣ ನಾಯಕ್, ಡಾ. ಕೆ. ಆರ್. ಮಂಜುನಾಥ್, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪಂಜಾಬ್ ಗೆಲುವಿನ ಹೆಜ್ಜೆ

ಶಿಖರ್ ಧವನ್ (62) ಅವರ ಅಜೇಯ ಅರ್ಧಶತಕ ಹಾಗೂ ರಬಾಡ (33 ಕ್ಕೆ 4) ಅವರ ಮಾರಕ ಬೌಲಿಂಗ್ ದಾಳಿಯಿಂದ ಮಿಂಚಿದ ಪಂಜಾಬ್ ಕಿಂಗ್ಸ್ ತಂಡ ಐಪಿಎಲ್ 15ನೇ ಆವೃತ್ತಿಯ 48ನೇ ಪಂದ್ಯದಲ್ಲಿ ಗುಜರಾತ್ ವಿರುದ್ಧ ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿತು. ಇದುವರೆಗೆ ಆಡಿರುವ 10 ಪಂದ್ಯಗಳಲ್ಲಿ ಐದು ಪಂದ್ಯ ಗೆದ್ದು ಹತ್ತು ಅಂಕಗಳಿಸಿದ ಪಂಜಾಬ್, ಟಿವಿಯನ್ನು ಹಿಂದಕ್ಕೆ ತಳ್ಳಿ ಐದನೇ ಸ್ಥಾನಕ್ಕೇರಿತು. ಗುಜರಾತ್ ಟೈಟನ್ಸ್ ಬಳಗ ಟೂರ್ನಿಯಲ್ಲಿ ಎರಡನೇ ಸೋಲಿಗೆ ಒಳಗಾಯಿತು.
ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಮಂಗಳವಾರ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಗುಜರಾತ ತಂಡ ನಿಗದಿತ 20 ಓವರುಗಳಲ್ಲಿ 8 ವಿಕೆಟ್ ನಷ್ಟಕ್ಕೆ 143 ರನ್ ಬಾರಿಸಿತು. ಪ್ರೀತಿಯಾಗಿ ಮಯಂಕ್ ಅಗರ್ವಾಲ್ ನೇತೃತ್ವದ ಪಂಜಾಬ್ ತಂಡ ಇನ್ನೂ 24 ಎಸೆತಗಳು ಬಾಕಿ ಇರುವಂತೆಯೇ ಎರಡು ವಿಕೆಟ್ ನಷ್ಟಕ್ಕೆ 145 ರನ್ ಬಾರಿಸಿ ಗೆಲುವು ಸಾಧಿಸಿತು. ಧವನ್ ಮತ್ತು ಬಾನುಪಕ್ಸ(40) ಎರಡನೆಯ ವಿಕೆಟ್ ಗೆ 87 ರನ್ ಜೊತೆಯಾಟ ನೀಡಿದರೆ ಲಿವಿಂಗ್ಸ್ಟನ್ 10 ಎಸೆತಗಳಲ್ಲಿ ಅಜೇಯ 30ರಂದು ಬಾರಿಸಿ ಗೆಲುವಿಗೆ ಸಹಕಾರ ನೀಡಿದರು.

ಬ್ಯಾಟಿಂಗ್ ಆರಂಭಿಸಿದ ಗುಜರಾತ್ ತಂಡಕ್ಕೆ ಉತ್ತಮ ಆರಂಭ ದೊರಕಲಿಲ್ಲ. ಮತ್ತೊಮ್ಮೆ ವಿಫಲ ಪ್ರದರ್ಶನ ನೀಡಿದ ಶುಬ್ಮನ್ ಗಿಲ್ 9 ರನ್ ಗಳಿಗೆ ಟೈಟಾಗಿ ನಿರಾಸೆ ಮೂಡಿಸಿದರು. ಆದರೆ, ಆರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದ ಸಾಯಿ ಸುದರ್ಶನ್ ನಿಧಾನಗತಿಯಲ್ಲಿ ರನ್ ಗಳಿಸಲು ಆರಂಭಿಸಿದರು. ಆರಂಭಿಕ ಬ್ಯಾಟರ್ ವೃದ್ಧಿಮಾನ್ ಸಹಾ ಇಂದಿನ ಪಂದ್ಯದಂತೆ ಸ್ಫೋಟಕ ಬ್ಯಾಟಿಂಗ್ ಮಾಡುವ ಸೂಚನೆ ನೀಡಿದರೊ 21 ರನ್ ಗಳಿಗೆ ಸೀಮಿತ ಗೊಂಡರು. ರಬಾಡ ಎಸೆತಕ್ಕೆ ಮಯಂಕ್ ಗೆ ಕ್ಯಾಚ್ ಕೊಟ್ಟು ಅವರು ನಿರಾಸೆಯಿಂದ
ಮರಳಿದರು. ಆ ಬಳಿಕ ಗುಜರಾತ್ ತಂಡದ ವಿಕೆಟ್ ಗಳು ಪತನಗೊಳ್ಳುತ್ತದೆ ಸಾಗಿದವು. ನಾಯಕ ಹಾರ್ದಿಕ್ ಪಾಂಡ್ಯ ಬಂದಷ್ಟೇ ವೇಗದಲ್ಲಿ ಎಲ್ಬಿಡಬ್ಲ್ಯು ಗೆ ಮರಳಿದರು. ಇಂದಿನ ಪಂದ್ಯದಲ್ಲಿ ಹೀರೋ ಗಳಾದ ಡೇವಿಡ್ ಮಿಲ್ಲರ್ ಹಾಗೂ ರಾಹುಲ್ ತೆವತಿಯಾ ತಲ 11 ರನ್ ಗಳನ್ನು ಮಾತ್ರ ಗಳಿಸಿ ವಾಪಸಾದರು. ಈ ವೇಳೆ 16 ಓವರ್ ಗಳಲ್ಲಿ 5 ವಿಕೆಟ್ ಗೆ 112 ರನ್ ಗಳಿಸಿದ ಗುಜರಾತ್ ಹಿನ್ನಡೆಗೆ ಒಳಗಾಯಿತು. ಆಲ್-ರೌಂಡರ್ ಬ್ಯಾಟ್ಸ್ಮನ್ ರೆಸಿಪಿ ಪಂದ್ಯದಲ್ಲಿ ಆಪತ್ಬಾಂಧವ ಎನಿಸಿಕೊಳ್ಳಲು ಶೂನ್ಯಕ್ಕೆ ಔಟಾಗಿ ಮರಳಿದರು. ಪ್ರದೀಪ್ (2), ಫರ್ಗ್ಯೂಸನ್ (5) ಹಾಗೂ ಜೋಸೆಫ್ (4) ಅವರಿಂದ ಹೆಚ್ಚು ನೆರವು ಲಭಿಸಲಿಲ್ಲ.
ಪಂಜಾಬ್ ತಂಡದ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ರಬಾಡ 33 ರನ್ ಗಳಿಗೆ 4 ವಿಕೆಟ್ ಪಡೆದು ಮಿಂಚಿದರು.

ಸುಖಾಸುಮ್ಮನೆ ಕಾಂಗ್ರೆಸ್ ನವರಿಂದ ಆರೋಪ- ಬೊಮ್ಮಾಯಿ

0

ಯಾವುದೇ ಹಗರಣ, ಅಕ್ರಮ ಪ್ರಕರಣಗಳೇ ಆಗಲಿ ರಾಜ್ಯ ಪೊಲೀಸ್‌ ಇಲಾಖೆ ದಕ್ಷ ಹಾಗೂ ನಿಷ್ಪಕ್ಷಪಾತ ತನಿಖೆ ಮಾಡುತ್ತಿದೆ. ಇದರಿಂದ ಕೆಲವರಿಗೆ ತೊಂದರೆಯಾಗುತ್ತಿದ್ದು, ಎಲ್ಲಿ ತಮ್ಮ ಬುಡಕ್ಕೇ ಬರುತ್ತದೋ ಎಂಬ ಭಯದಿಂದ ನಿತ್ಯ ಏನನ್ನಾದರೂ ಮಾತನಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪರೋಕ್ಷವಾಗಿ ಪ್ರತಿಪಕ್ಷಗಳ ನಾಯಕರುಗಳಿಗೆ ತಿರುಗೇಟು ನೀಡಿದ್ದಾರೆ.

ಬೆಂಗಳೂರು ನಗರದ ನೃಪತುಂಗ ವಿಶ್ವವಿದ್ಯಾಲಯದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಯಾವುದೇ ಅಕ್ರಮ, ಹಗರಣಗಳಿದ್ದರೂ ನಮ್ಮ ಪೊಲೀಸರು ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ. ಯಾವುದೇ ವಿಷಯದಲ್ಲಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಿದ್ದಾರೆ.

ಇದರಿಂದ ಕೆಲವರಿಗೆ ತೊಂದರೆಯಾಗಿದೆ. ಹಾಗಾಗಿ ಅವರು ದಿನನಿತ್ಯ ಅನಗತ್ಯವಾಗಿ ಒಂದಿಲ್ಲೊಂದು ಮಾತನಾಡುತ್ತಿದ್ದಾರೆ. ಎಲ್ಲಿ ತನಿಖೆ ಅವರ ಬುಡಕ್ಕೇ ಬಂದು ಬಿಡುತ್ತದೋ ಎಂಬ ಭಯದಿಂದ ಅವರು ಹಾಗೆ ಮಾತನಾಡುತ್ತಿದ್ದಾರೆ. ಆದರೆ, ನಾನು ಸ್ಪಷ್ಟವಾಗಿ ಹೇಳುತ್ತೇನೆ. ನಮ್ಮ ಸರ್ಕಾರ ಯಾರ ವಿರುದ್ಧವೂ ಇಲ್ಲ. ಅಪರಾಧಿಗಳ ವಿರುದ್ಧ ಇದೆ. ಅಪರಾಧಿಗಳನ್ನು ರಕ್ಷಣೆ ಮಾಡುವ ಕೆಲಸವನ್ನು ಯಾರೇ ಮಾಡಿದರೂ ಸಹಿಸುವುದಿಲ್ಲ ಎಂದರು.

ಗಡಿ ಹಾಳು ಮಾಡುವವರಿಗೆ ಭಾರತ ಸೆಟೆದು ನಿಲ್ಲುತ್ತದೆ-ಶಾ

0

ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಗಡಿ ಹಾಳು ಮಾಡುವವರಿಗೆ ಅಮೆರಿಕ, ಇಸ್ರೇಲ್ʼನಂತೆ ಭಾರತವೂ ಸೆಡ್ಡು ಹೊಡೆಯಬಹುದು ಎಂದು ಹೇಳಿದರು.

ಈ ಹಿಂದೆ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ದಾಳಿ ನಡೆಸಿದಾಗ ಭಾರತ ಹೇಳಿಕೆ ನೀಡುತ್ತಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವ್ರ ಸರ್ಕಾರ ರಚನೆಯಾದ ನಂತ್ರ ಪರಿಸ್ಥಿತಿ ಸುಧಾರಿಸಿದೆ ಎಂದು ಗೃಹ ಸಚಿವರು ಹೇಳಿದರು.

ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತ್ರ ನಡೆದ ಸರ್ಜಿಕಲ್ ಸ್ಟ್ರೈಕ್ʼನ್ನ ಶಾ ಉಲ್ಲೇಖಿಸಿದರು.

ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ 2016ರಲ್ಲಿ ಉರಿ ಹಾಗೂ 2019ರಲ್ಲಿ ಪುಲ್ವಾಮಾದಲ್ಲಿ ಉಗ್ರರ ದಾಳಿ ನಡೆದಿದ್ದು, 10 ದಿನಗಳಲ್ಲಿ ಪಾಕಿಸ್ತಾನದೊಳಗೆ ಸರ್ಜಿಕಲ್ ಸ್ಟ್ರೈಕ್ ಮತ್ತು ವೈಮಾನಿಕ ದಾಳಿ ನಡೆಸಿದ್ದೇವೆ ಎಂದು ಶಾ ಹೇಳಿದರು.

ನೃಪತುಂಗ ವಿಶ್ವವಿದ್ಯಾನಿಲಯ, ಅದರ ಶೈಕ್ಷಣಿಕ ವಿಭಾಗ ಮತ್ತು ಇತರ ಹಲವಾರು ಯೋಜನೆಗಳನ್ನ ಉದ್ಘಾಟಿಸಿ ಮಾತನಾಡಿದ ಸಚಿವರು, ‘ಈ ಹಿಂದೆ ಕೇವಲ ಎರಡು ದೇಶಗಳು, ಯುಎಸ್ ಮತ್ತು ಇಸ್ರೇಲ್, ತಮ್ಮ ಗಡಿ ಮತ್ತು ಮಿಲಿಟರಿಯನ್ನ ಹಾಳು ಮಾಡಿದಾಗ ಪ್ರತೀಕಾರ ತೀರಿಸಿಕೊಳ್ಳುತ್ತಿದ್ವು. ಆದ್ರೆ, ಈಗ ಪ್ರಧಾನಿ ನರೇಂದ್ರ ಮೋದಿಯವರಿಂದಾಗಿ ನಮ್ಮ ಶ್ರೇಷ್ಠ ದೇಶ ಭಾರತವೂ ಈ ಗುಂಪಿಗೆ ಸೇರಿದೆ ಎಂದರು.

ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ ಭಾರತದ ಶ್ರೇಯಾಂಕ ಕುಸಿತ

0

ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕವು 180 ದೇಶಗಳಲ್ಲಿ ಕಳೆದ ವರ್ಷ 142 ನೇ ಸ್ಥಾನದಿಂದ 150 ನೇ ಸ್ಥಾನಕ್ಕೆ ಕುಸಿದಿದೆ ಎಂದು ಬಿಡುಗಡೆಯಾದ ಜಾಗತಿಕ ಮಾಧ್ಯಮ ವಾಚ್‌ಡಾಗ್ ವರದಿ ತಿಳಿಸಿದೆ.

ಸೂಚ್ಯಂಕವು ಪಾಕಿಸ್ತಾನವನ್ನು 157 ನೇ ಸ್ಥಾನ, ಶ್ರೀಲಂಕಾ 146 ನೇ ಸ್ಥಾನ, ಬಾಂಗ್ಲಾದೇಶ 162 ನೇ ಮತ್ತು ಮೇನ್ಮಾರ್ 176 ನೇ ಸ್ಥಾನದಲ್ಲಿದೆ ಎಂದು ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ ಬಿಡುಗಡೆ ಮಾಡಿದ ವರದಿ ತಿಳಿಸಿದೆ.

ನೇಪಾಳವನ್ನು ಹೊರತುಪಡಿಸಿ ಭಾರತದ ನೆರೆಹೊರೆಯವರ ಶ್ರೇಯಾಂಕವು ಸಹ ಕುಸಿದಿದೆ.

RSF 2022 ರ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದ ಪ್ರಕಾರ, ನೇಪಾಳವು ಜಾಗತಿಕ ಶ್ರೇಯಾಂಕದಲ್ಲಿ 30 ಅಂಕಗಳಿಂದ 76 ನೇ ಸ್ಥಾನದಲ್ಲಿದೆ ಎನ್ನಲಾಗುತ್ತಿದೆ.

ಕಳೆದ ವರ್ಷ, ಸೂಚ್ಯಂಕದಲ್ಲಿ ಹಿಮಾಲಯ ರಾಷ್ಟ್ರವು 106 ನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನ 145 ನೇ, ಶ್ರೀಲಂಕಾ 127 ನೇ, ಬಾಂಗ್ಲಾದೇಶ 152 ನೇ ಮತ್ತು ಮ್ಯಾನ್ಮಾರ್ 140 ನೇ ಸ್ಥಾನದಲ್ಲಿತ್ತು.

ಈ ವರ್ಷ, ನಾರ್ವೆ (1 ನೇ) ಡೆನ್ಮಾರ್ಕ್ (2 ನೇ), ಸ್ವೀಡನ್ (3 ನೇ) ಎಸ್ಟೋನಿಯಾ (4 ನೇ) ಮತ್ತು ಫಿನ್ಲ್ಯಾಂಡ್ (5 ನೇ) ಉನ್ನತ ಸ್ಥಾನಗಳನ್ನು ಪಡೆದುಕೊಂಡರೆ, ವರದಿಗಾರರು 180 ದೇಶಗಳು ಮತ್ತು ಪ್ರಾಂತ್ಯಗಳ ಪಟ್ಟಿಯಲ್ಲಿ ಉತ್ತರ ಕೊರಿಯಾ ಕೊನೆಯ ಸ್ಥಾನದಲ್ಲಿದೆ.

ಕಳೆದ ವರ್ಷ 150ನೇ ಸ್ಥಾನದಲ್ಲಿದ್ದ ರಷ್ಯಾ 155ನೇ ಸ್ಥಾನದಲ್ಲಿದ್ದರೆ, ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್‌ನೊಂದಿಗೆ ಚೀನಾ ಎರಡು ಸ್ಥಾನ ಮೇಲೇರಿದ್ದು 175ನೇ ಸ್ಥಾನದಲ್ಲಿದೆ.

ಕಳೆದ ವರ್ಷ ಚೀನಾ 177ನೇ ಸ್ಥಾನದಲ್ಲಿತ್ತು.
ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನದಂದು, ಗಡಿಗಳಿಲ್ಲದ ವರದಿಗಾರರು ಮತ್ತು ಇತರ ಒಂಬತ್ತು ಮಾನವ ಹಕ್ಕುಗಳ ಸಂಘಟನೆಗಳು ತಮ್ಮ ಕೆಲಸಕ್ಕಾಗಿ ಪತ್ರಕರ್ತರು ಮತ್ತು ಆನ್‌ಲೈನ್ ವಿಮರ್ಶಕರನ್ನು ಗುರಿಯಾಗಿಸಿಕೊಳ್ಳುವುದನ್ನು ನಿಲ್ಲಿಸುವಂತೆ ಭಾರತೀಯ ಅಧಿಕಾರಿಗಳನ್ನು ಕೇಳುತ್ತವೆ ಎಂದು ಅಂತರರಾಷ್ಟ್ರೀಯ ಲಾಭರಹಿತ ಸಂಸ್ಥೆ ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೆಯಲ್ಲಿ ತಿಳಿಸಿದೆ.