Saturday, February 28, 2026
Saturday, February 28, 2026
Home Blog Page 1597

ವಿಜಯಪುರದಲ್ಲಿ ಭಾವೈಕ್ಯತೆ ಮೆರೆದ ರಂಜಾನ್- ಬಸವಜಯಂತಿ

0

ಹಿಜಾಬ್, ಆಜಾನ್ ಮೈಕ್, ವ್ಯಾಪಾರಕ್ಕೆ ನಿರ್ಬಂಧ ಸೇರಿದಂತೆ ಅನೇಕ ವಿವಾದಗಳು ರಾಜ್ಯದಲ್ಲಿ ಹಿಂದೂ,ಮುಸ್ಲಿಂ ಕೋಮು ಸಾಮರಸ್ಯಕ್ಕೆ ಧಕ್ಕೆ ತಂದಿದ್ದವು.‌ ಹುಬ್ಬಳ್ಳಿ ಗಲಭೆ ಬಳಿಕ ಮುಂದೆ ರಂಜಾನ್-ಬಸವ ಜಯಂತಿಗೆ ಹೇಗೆ ನಡೆಯುತ್ವೆ ಎನ್ನುವ ಅನುಮಾನ ಮೂಡುವಂತೆ ಮಾಡಿತ್ತು.

ಆದರೆ ವಿಜಯಪುರ ಜಿಲ್ಲೆಯಲ್ಲಿ ಒಟ್ಟೊಟ್ಟಿಗೆ ಬಂದ ಬಸವ ಜಯಂತಿ ಹಾಗೂ ರಂಜಾನ್ ಹಬ್ಬ ಭಾವೈಕ್ಯತೆಗೆ ಸಾಕ್ಷಿಯಾಗಿವೆ.

ವಿಜಯಪುರ ಜಿಲ್ಲೆಯ ಹಲವೆಡೆ ರಂಜಾನ್ ಹಬ್ಬ ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಹಿಂದೂ-ಮುಸ್ಲಿಂರು ಸಾಮರಸ್ಯದಿಂದ ಬಸವ ಜಯಂತಿ ಹಾಗೂ ರಂಜಾನ್ ಹಬ್ಬವನ್ನ ಆಚರಿಸಿದ್ದಾರೆ. ವಿಜಯಪುರ ಜಿಲ್ಲೆಯ ತಾಲೂಕಾ ಕೇಂದ್ರಗಳಲ್ಲಿ ಮುಸ್ಲಿಂರು ನಮಾಜ್ ಬಳಿಕ ಬಸವ ಜಯಂತಿ ನಡೆದ ಸ್ಥಳಕ್ಕೆ ಬಂದು ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರೆ. ಇನ್ನೊಂದೆಡೆ ರಂಜಾನ್ ನಮಾಜ್ ಮುಗಿಸಿಕೊಂಡು ಬಂದ ಮುಸ್ಲಿಂರಿಗೆ ಹಿಂದೂಗಳು ಉಪಹಾರ, ಮಜ್ಜಿಗೆ-ನೀರು ನೀಡುವ ಮೂಲಕ ಭಾವೈಕ್ಯತೆ ಸಾಕ್ಷಿಯಾಗಿದ್ದಾರೆ.

ರಷ್ಯ-ಉಕ್ರೇನ್ ಮಾತುಕತೆ ಮೂಲಕಕದನವಿರಾಮ ಘೋಷಿಸಿ-ಮೋದಿ

0

ಉಕ್ರೇನ್ ಹಾಗೂ ರಷ್ಯಾ ಕದನ ವಿರಾಮ ಘೋಷಿಸಬೇಕು. ಬಳಿಕ ಮಾತುಕತೆ ಮೂಲಕವೇ ಬಿಕ್ಕಟ್ಟನ್ನು ಪರಿಹರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪ್ರಧಾನಿ ಮೋದಿ ಸದ್ಯ ವಿದೇಶಿ ಪ್ರವಾಸದಲ್ಲಿಯೇ ಇದ್ದಾರೆ.
ಈ ವೇಳೆ ಡೆನ್ಮಾರ್ಕ್ ಗೂ ಭೇಟಿಕೊಟ್ಟಿದ್ದಾರೆ.

ಉಕ್ರೇನ್‌ ನಲ್ಲಿ ನಡೆಯುತ್ತಿರೋ ನಾಗರಿಕರ ಹತ್ಯೆಯನ್ನ ಮೋದಿ ತೀವ್ರವಾಗಿಯೇ ಖಂಡಿಸಿದ್ದಾರೆ. ಶೀಘ್ರವೇ ಉಕ್ರೇನ್ ಮತ್ತು ರಷ್ಯಾ ಯುದ್ಧ ವಿರಾಮ ಘೋಷಿಸಿ ಇರೋ ಬಿಕ್ಕಟ್ಟನ್ನ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಮೋದಿ ಕರೆ ನೀಡಿದ್ದಾರೆ.

ಡ್ಯಾನಿಶ್ ಪ್ರಧಾನಿ ಮೆಟ್ಟಿಫ್ರೆಡ್ರಿಕ್‌ಸನ್ ಜೊತೆಗೆ ಉಕ್ರೇನ್ ಬಿಕ್ಕಟ್ಟಿನಿಂದಾಗಿ ಎದುರಿಸುತ್ತಿರೋ ಆರ್ಥಿಕ ಮುಗ್ಗಟ್ಟಿನ ಬಗ್ಗೆ ಚರ್ಚೆ ನಡೆಸಿದರು.

ನೆನಪಿರಲಿ ಟ್ವಿಟ್ಟರ್ ಇನ್ನುಮುಂದೆ ಸಂಪೂರ್ಣ ಉಚಿತವಿರುವುದಿಲ್ಲ

0

ಜನಪ್ರಿಯ ಸಾಮಾಜಿಕ ಜಾಲತಾಣವಾದ ಟ್ವಿಟರ್ ಇನ್ನು ಉಚಿತ ಸಾಮಾಜಿಕ ಜಾಲತಾಣವಾಗಿ ಮುಂದುವರಿಯುವುದಿಲ್ಲ ಎಂಬ ಸುಳಿವನ್ನು ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ನೀಡಿದ್ದಾರೆ.

ಸಾಂದರ್ಭಿಕ ಬಳಕೆದಾರರಿಗೆ ಟ್ವಿಟ್ಟರ್ ಸದಾ ಉಚಿತವಾಗಿರುತ್ತದೆ. ವಾಣಿಜ್ಯ ಅಥವಾ ಸರ್ಕಾರಿ ಬಳಕೆದಾರರಿಗೆ ಸ್ವಲ್ಪ ಶುಲ್ಕ ವಿಧಿಸಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಟ್ವಿಟರ್ ಮಂದಿನ ದಿನಗಳಲ್ಲಿ ಪೇವಾಲ್ ಸಾಮಾಜಿಕ ಜಾಲತಾಣದ ಸ್ವರೂಪ ಪಡೆಯಲಿದೆ ಎಂದು ಹೇಳಿದ್ದಾರೆ.

ಅಂತಿಮವಾಗಿ ಉಚಿತ ಮೇಸ್ತ್ರಿಗಳು ಯಾವ ಪ್ರತಿಫಲವೂ ಇಲ್ಲದೇ ಕಲ್ಲು ಕಡಿಯುವ ಸೇವೆ ಕೈಬಿಡಲಿದ್ದಾರೆ ಎಂದು ಮಸ್ಕ್ ಟ್ವೀಟ್ ಮಾಡಿದ್ದಾರೆ.

ಶುಲ್ಕ ಆಧರಿತ ಚಂದಾದಾರಿಕೆಯ ಯೋಜನೆಯೇನೂ ಹೊಸದಲ್ಲ. ಟ್ವಿಟರ್ ಬ್ಲೂ ಇಂಥದ್ದೇ ಪರಿಕಲ್ಪನೆ. ಈ ಸೇವೆಯಡಿ ಟ್ವಿಟರ್ ತನ್ನ ನಿಷ್ಠಾವಂತ ಗ್ರಾಹಕರಿಗೆ ಪ್ರಮುಖ ವಿಶೇಷತೆಗಳ ಲಭ್ಯತೆಯನ್ನು ನೀಡುತ್ತದೆ ಹಾಗೂ ಮಾಸಿಕ ಚಂದಾದಾರಿಕೆ ಶುಲ್ಕಕ್ಕೆ ಕಸ್ಟಮೈಸ್ ಮಾಡಲಾದ ಆಯಪ್ ಸೇವೆ ಒದಗಿಸುತ್ತದೆ.

ಟ್ವಿಟರ್ ಬ್ಲೂ, ಐಓಎಸ್, ಆಂಡ್ರಾಯ್ಡ್ ಮತ್ತು ವೆಬ್‍ನಲ್ಲಿ ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಝಿಲೆಂಡ್‍ನಲ್ಲಿ ಲಭ್ಯ ಎಂದು ತಿಳಿದುಬಂದಿದೆ.

ರಷ್ಯ-ಬ್ರಿಟನ್ ಅಣು ಯುದ್ಧದ ಮಾತಿನ ಚಾಟಿ

0

ಇಂಗ್ಲೆಂಡ್ ಅನ್ನು ಅನಾಮಧೇಯಗೊಳಿಸಲಾಗುತ್ತದೆ ಎಂದು ರಷ್ಯಾದ ಮುಖ್ಯ ಪ್ರಚಾರಕ ಡಿಮಿಟ್ರಿ ಕಿಸೆಲಿಯೊವ್ ಎಚ್ಚರಿಕೆ ನೀಡಿದ್ದಾರೆ.

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ರಷ್ಯಾ ಮೇಲೆ ಪರಮಾಣು ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ. ನಾವು ಇಂಗ್ಲೆಂಡ್ ಮೇಲೆ ಪರಮಾಣು ಸಿಡಿತಲೆಯೊಂದಿಗೆ ಪೋಸಿಡಾನ್ ಟಾರ್ಪಿಡೊವನ್ನು ಪ್ರಾರಂಭಿಸುತ್ತೇವೆ.

ಅದರ ಹಾನಿಗೆ, ವಿಕಿರಣಶೀಲ ಅಲೆಗಳು 1,600 ಅಡಿಗಳಿಗೆ ಏರುತ್ತದೆ.
ಹಾಗೂ ಇಂಗ್ಲೆಂಡ್ ಅನ್ನು ಶಾಶ್ವತವಾಗಿ ಮತ್ತು ಶಾಶ್ವತವಾಗಿ ಸಮುದ್ರತಳದ ಅಡಿಯಲ್ಲಿ ಆವರಿಸುತ್ತದೆ ಎಂದು ಅವರು ಟಿವಿ ಕಾರ್ಯಕ್ರಮವೊಂದರಲ್ಲಿ ಬೆದರಿಕೆ ಹಾಕಿದರು.

ಬಸವರಾಜ ಹೊರಟ್ಟಿ ಬಿಜೆಪಿ ಸೇರ್ಪಡೆ

0

ಬಿಜೆಪಿ ನಾಯಕ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಬೆಳಿಗ್ಗೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಬಸವರಾಜ ಹೊರಟ್ಟಿ ಪ್ರತಿನಿಧಿಸುತ್ತಿರುವ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಇದುವರೆಗೆ ಯಾರಿಗೂ ಟಿಕೆಟ್ ಘೋಷಿಸಿಲ್ಲ. ಹೊರಟ್ಟಿ ಸೇರ್ಪಡೆ ಬಳಿಕ ಘೋಷಣೆ ಮಾಡಲು ನಿರ್ಧರಿಸಲಾಗಿತ್ತು.
ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯಿತ ನಾಯಕತ್ವ ಬಲಪಡಿಸಲು ಹಿರಿಯ ನಾಯಕ ಬಸವರಾಜ ಹೊರಟ್ಟಿಯವರನ್ನು ಪಕ್ಷಕ್ಕೆ ಕರೆತರಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ‌ ಜಗದೀಶ್ ಶೆಟ್ಟರ್ ಜತೆ ಹೊರಟ್ಟಿ ಅಮಿತ್ ಶಾ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು.ನಂತರ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು.

ತೀರ್ಥಹಳ್ಳಿ to ಶಿವಮೊಗ್ಗ ಕಿಮ್ಮನೆ ಪಾದಯಾತ್ರೆ

0

ಬಿಜೆಪಿ ಸರ್ಕಾರದ ದುರಾಡಳಿತ ಖಂಡಿಸಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ದ ತವರು ಗೃಹ ಸಚಿವರ ತವರು ಕ್ಷೇತ್ರ ತೀರ್ಥಹಳ್ಳಿಯಲ್ಲಿ ಹೋರಾಟ ಆರಂಭವಾಗಲಿದೆ.

ಮಾಜಿ ಸಚಿವ, ಕಾಂಗ್ರೆಸ್‌ ವಕ್ತಾರ ಕಿಮ್ಮನೆ ರತ್ನಾಕರ್ ಗೃಹ ಸಚಿವರ ತವರೂರು ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿ ಮುಂಭಾಗದಿಂದ ಶಿವಮೊಗ್ಗ ತನಕ ಪಾದಯಾತ್ರೆ ನಡೆಸಲಿದ್ದಾರೆ.

ಮೇ 6 ರಿಂದ 10ರ ತನಕ ನಾಲ್ಕು ದಿನಗಳ ಕಾಲ ಈ ಬೃಹತ್ ಪಾದಯಾತ್ರೆ ನಡೆಯಲಿದೆ. ಈ ಮೂಲಕ ಗೃಹ ಸಚಿವರ ವಿರುದ್ಧ ತವರು ಕ್ಷೇತ್ರದಲ್ಲಿಯೇ ದೊಡ್ಡ ಹೋರಾಟವನ್ನು ಪ್ರತಿಪಕ್ಷ ಕಾಂಗ್ರೆಸ್ ಹಮ್ಮಿಕೊಂಡಿದೆ.

ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿ ಮುಂಭಾಗದಿಂದ ಮೇ 6ರಂದು ಆರಂಭವಾಗುವ ಮೌನ ಪ್ರತಿಭಟನೆ ಹೊದಲ ಮಾರ್ಗವಾಗಿ ಬೆಜ್ಜವಳ್ಳಿ, ಮಂಡಗದ್ದೆ, ಸಕ್ರೆಬೈಲು, ಹರಕೆರೆ ಮೂಲಕ ಮೇ 10ರಂದು ಜಿಲ್ಲಾ ಕೇಂದ್ರ ಶಿವಮೊಗ್ಗ ತಲುಪಲಿದೆ.

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಈ ಕುರಿತು ಮಾತನಾಡಿದ್ದು, “ಬಿಜೆಪಿ ಸರ್ಕಾರದ ಎಲ್ಲಾ ಅಕ್ರಮಗಳನ್ನು ಬಹಿರಂಗಪಡಿಸುವ ಉದ್ದೇಶದಿಂದ ಮೇ 6 ರಿಂದ 10ರ ತನಕ ಬೃಹತ್ ಪಾದಯಾತ್ರೆ ಚಳವಳಿ ಹಮ್ಮಿಕೊಂಡಿದ್ದೇವೆ” ಎಂದು ಹೇಳಿದ್ದಾರೆ.

ಕೋವಿಡ್ ಮಾರ್ಗಸೂಚಿ ತಪ್ಪದೇ ಪಾಲಿಸಿ-ರಾಷ್ಟ್ರಪತಿ

0

ಕೋವಿಡ್‌ ಇನ್ನೂ ಮುಗಿದಿಲ್ಲ. ಸೋಂಕು ತಡೆಗಟ್ಟಲು ಸರ್ಕಾರ ಜಾರಿಗೊಳಿಸಿರುವ ಮಾರ್ಗಸೂಚಿಯನ್ನು ತಪ್ಪದೆ ಪಾಲಿಸಿ ಎಂದು ಸಾರ್ವಜನಿಕರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ ಸಲಹೆ ನೀಡಿದರು.

ದೆಹಲಿಯಲ್ಲಿ ಭಗವಾನ್‌ ಮಹಾವೀರ್‌ ಸೂಪರ್‌ ಸ್ಪೆಷಾಲಿಟಿ ಹಾಸ್ಪಿಟಲ್ ನಿರ್ಮಾಣಕ್ಕೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು.

ಸೋಂಕು ತಡೆಗಟ್ಟಲು ಮಾಸ್ಕ್‌ ಪರಿಣಾಮಕಾರಿ ಅಸ್ತ್ರ.
250 ಹಾಸಿಗೆಗಳ ಸಾಮರ್ಥ್ಯದ ಈ ಆಸ್ಪತ್ರೆಯ ನಿರ್ಮಾಣ ಕಾರ್ಯ 2023ರ ವೇಳೆಗೆ ಮುಕ್ತಾಯವಾಗಲಿದೆ. ಇಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಸಮಾಜದ ಎಲ್ಲ ವರ್ಗದವರಿಗೂ ಕೈ ಗೆಟಕುವ ದರದಲ್ಲಿ ಮತ್ತು ಬಡವರಿಗೆ ಉಚಿತವಾಗಿ ದೊರಕಲಿದೆ. ಇದು ಸಂತಸದ ಸಂಗತಿ ಎಂದರು.

ಹಲೋ ಕಂದಾಯ ಸಚಿವರೆ-ಪಿಂಚಣಿ ಸೌಲಭ್ಯಕ್ಕೆ ಅರ್ಹರು ಕರೆಮಾಡಬಹುದು

0

ರಾಜ್ಯ ಸರ್ಕಾರವು ಪಿಂಚಣಿದಾರರಿಗೆ ಸಿಹಿಸುದ್ದಿಯೊಂದನ್ನು ನೀಡಿದೆ. ಈ ನಂಬರ್ ಗೆ ಕರೆ ಮಾಡಿದರೆ 72 ಗಂಟೆಯಲ್ಲೇ ಮನೆ ಬಾಗಿಲಿಗೆ ಪಿಂಚಣಿ ಆದೇಶ ಬರಲಿದೆ.

ಹೌದು, ಕಂದಾಯ ಇಲಾಖೆಯಿಂದ 72 ಮನೆ ಬಾಗಿಲಿಗೆ ಪಿಂಚಣಿ ಆದೇಶ ಜಾರಿಗೆ ತರಲಾಗಿದೆ.
ಹಲೋ ಕಂದಾಯ ಸಂಚಿವರೇ ಎಂಬ ಶುಲ್ಕ ರಹಿತ ಸಹಾಯವಾಣಿ ಸಂಖ್ಯೆ 155245 ಕೆರೆ ಮಾಡಿ ಮಾಸಿಕ ಪಿಂಚಣಿ ಸೌಲಭ್ಯಕ್ಕಾಗಿ ಕೋರಿಕೆ ಸಲ್ಲಿಸಬಹುದೆಂದು ಹಾವೇರಿ ತಹಶೀಲ್ದಾರ ಎನ್.ಬಿ.ಗೆಜ್ಜಿ ಅವರು ತಿಳಿಸಿದ್ದಾರೆ.

ವಾರ್ಷಿಕ 32 ಸಾವಿರಕ್ಕಿಂತ ಕಡಿಮೆ ಆದಾಯ ಹೊಂದಿರುವ ವೃದ್ಧರು, ವಿಶೇಷ ಚೇತನರು, ವಿಧವೆಯರು ಹಾಗೂ ಅವಿವಾಹಿತ ಅಥವಾ ವಿಚ್ಛೇದಿತ ಮಹಿಳೆಯರು ಮಾಸಿಕ ಪಂಚಣಿ ಸೌಲಭ್ಯಕ್ಕಾಗಿ ಅರ್ಹರು ಕೋರಿಕೆ ಸಲ್ಲಿಸಬಹುದು. ಅರ್ಹರು ಈ ಯೋಜನೆ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ.

ಆಕಾಶದೆತ್ತರ ಬೆಳೆದವರು ಪುನೀತ್- ಮುರುಘಾ ಶರಣರು

0

ಮುರುಘಾ ಮಠದ 2021ನೇ ಸಾಲಿನ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿಯನ್ನು ಮರಣೋತ್ತರವಾಗಿ ಸ್ಯಾಂಡಲ್​ವುಡ್​ನ ಡಾ.ಪುನೀತ್‌ ರಾಜ್‌ಕುಮಾರ್ ಅವರಿಗೆ ನೀಡಲಾಗಿದೆ. ಅಶ್ವಿನಿ ಪುನೀತ್​ರಾಜ್​ಕುಮಾರ್​ ಅವರು ಪ್ರಶಸ್ತಿ ಸ್ವೀಕರಿಸಿದರು.

ಬಸವ ಜಯಂತಿ ದಿನವಾದ ಇಂದು ಮಂಗಳವಾರ ಚಿತ್ರದುರ್ಗ ಮುರುಘಾ ಮಠದ ಅನುಭವ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕ್ರದಲ್ಲಿ ಬಸವಶ್ರೀ ಪ್ರಶಸ್ತಿಯನ್ನು ಡಾ. ಶಿವಮೂರ್ತಿ ಮುರುಘಾ ಶರಣರು ಪ್ರದಾನ ಮಾಡಿದರು. ಪ್ರಶಸ್ತಿಯು 5 ಲಕ್ಷ ರೂ. ನಗದು ಮತ್ತು ಫಲಕ ಒಳಗೊಂಡಿದೆ.

ಡಾ.ಶಿವಮೂರ್ತಿ ಮುರುಘ ಶರಣರು ಮಾತನಾಡಿ, ಡಾ.ರಾಜ್​ಕುಮಾರ್ ಅವರ ಮುದ್ದಿನ ಮಗ ಪುನೀತ್‌. ಅಭಿನಯ, ಹಾಡುಗಾರಿಕೆಯಲ್ಲಿ ಪುನೀತರು, ಪರಿಣಿತರು. ತಂದೆಯ ಮಾರ್ಗದರ್ಶನ ಆಂತರ್ಯದಲ್ಲಿಟ್ಟುಕೊಂಡು ಆಕಾಶದ ಎತ್ತರಕ್ಕೆ ಬೆಳೆದರು. ಕನ್ನಡ ಚಲನಚಿತ್ರ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಪುನೀತ್​ರಂತಹ ಪ್ರತಿಭೆಯನ್ನು ಕಂಡ ನಾವುಗಳೇ ಧನ್ಯರು ಎಂದರು.

ಈ ಸಂದರ್ಭದಲ್ಲಿ ಸಚಿವ ಬಿ.ಸಿ. ಪಾಟೀಲ್, ಶಾಸಕ ತಿಪ್ಪಾರೆಡ್ಡಿ, ಜಿಲ್ಲಾಧಿಕಾರಿ ಕವಿತಾ ಮನ್ನಿಕೆರಿ, ಸಿಇಒ ನಂದಿನಿ ದೇವೆ, ಪೊಲೀಸ್ ವರಿಷ್ಠಾಧಿಕಾರಿ ಪರುಶುರಾಮ್ ಇನ್ನೂ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಭಾರತ- ಜರ್ಮನಿ ವಿವಿಧ 9 ಒಪ್ಪಂದಗಳಿಗೆ ಸಹಿ

0

ಉಭಯ ದೇಶಗಳ ನಡುವೆ ಸೋಮವಾರ ಸಹಿ ಹಾಕಲಾದ ಹಸಿರು ಮತ್ತು ಸುಸ್ಥಿರ ಅಭಿವೃದ್ಧಿ ಪಾಲುದಾರಿಕೆಯ ಜಂಟಿ ಉದ್ದೇಶ ಘೋಷಣೆ ಅಡಿಯಲ್ಲಿ, 2030ರವರೆಗೆ ಭಾರತದಲ್ಲಿ 10 ಬಿಲಿಯನ್ ಯುರೋಗಳ ಹೊಸ ಮತ್ತು ಹೆಚ್ಚುವರಿ ಅಭಿವೃದ್ಧಿ ನೆರವನ್ನು ಒದಗಿಸಲು ಜರ್ಮನಿ ಮುಂಗಡ ಬದ್ಧತೆಯನ್ನ ವ್ಯಕ್ತಪಡಿಸಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರ ಯುರೋಪ್ ಭೇಟಿಯ ಮೊದಲ ಹಂತದ ಸಮಾರೋಪದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಅವರು, ಭಾರತ ಮತ್ತು ಜರ್ಮನಿ ನಡುವಿನ ಅಭಿವೃದ್ಧಿ ಸಹಕಾರ ಕಾರ್ಯಸೂಚಿಗೆ ಜೆಡಿಐ ದೀರ್ಘಕಾಲೀನ ಕಾರ್ಯತಂತ್ರದ ದೃಷ್ಟಿಕೋನವನ್ನು ಒದಗಿಸುತ್ತದೆ ಎಂದು ಹೇಳಿದರು.

ಉದ್ದೇಶದ ಈ ಘೋಷಣೆಯು ನಮ್ಮ ಸಂಪೂರ್ಣ ಅಭಿವೃದ್ಧಿ ಸಹಕಾರ ಕಾರ್ಯಸೂಚಿಗೆ ದೀರ್ಘಕಾಲೀನ ಕಾರ್ಯತಂತ್ರದ ದೃಷ್ಟಿಕೋನವನ್ನು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ. ಇನ್ನು ಇದರ ಭಾಗವಾಗಿ ಜರ್ಮನಿ 2030 ರವರೆಗೆ 10 ಬಿಲಿಯನ್ ಯುರೋಗಳ ಹೊಸ ಮತ್ತು ಹೆಚ್ಚುವರಿ ಅಭಿವೃದ್ಧಿ ನೆರವಿನ ಮುಂಗಡ ಬದ್ಧತೆಯನ್ನ ಮಾಡಲು ಒಪ್ಪಿಕೊಂಡಿದೆ ಎಂದು ಕ್ವಾತ್ರಾ ಹೇಳಿದರು.

ಹಸಿರು ಜಲಜನಕ ಮತ್ತು ನವೀಕರಿಸಬಹುದಾದ ವಸ್ತುಗಳ ಸಹಯೋಗಕ್ಕಾಗಿ ಉಭಯ ದೇಶಗಳ ನಡುವೆ ಸಹಿ ಹಾಕಲಾದ ಒಪ್ಪಂದವನ್ನ ವಿದೇಶಾಂಗ ಕಾರ್ಯದರ್ಶಿ ಎತ್ತಿ ತೋರಿಸಿದರು.

ಈ ಕ್ಷೇತ್ರದಲ್ಲಿನ ನಮ್ಮ ಪಾಲುದಾರಿಕೆಯ ಭಾಗವಾಗಿ, ಜರ್ಮನ್ ಬೆಂಬಲದೊಂದಿಗೆ ಭಾರತದಲ್ಲಿ ಹಸಿರು ಹೈಡ್ರೋಜನ್ ಹಬ್ ಸ್ಥಾಪಿಸುವ ನಿಟ್ಟಿನಲ್ಲಿ ಕಾರ್ಯಪಡೆಯು ಕೆಲಸ ಮಾಡಲಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಮಾಹಿತಿ ನೀಡಿದರು.

ಪ್ರಧಾನಿ ಮೋದಿ ಮತ್ತು ಜರ್ಮನ್ ಚಾನ್ಸಲರ್ ಶೋಲ್ಜ್ ಅವರ ಜಂಟಿ ಹೇಳಿಕೆಯಲ್ಲಿ ಹಸಿರು ಜಲಜನಕ ಪಾಲುದಾರಿಕೆಯ ಬಗ್ಗೆ ಮಾತನಾಡಿದ ಅವರು, ಇಂಡೋ ಜರ್ಮನ್ ಎನರ್ಜಿ ಫೋರಂ ಬೆಂಬಲಿತ ಇಂಡೋ ಜರ್ಮನ್ ಗ್ರೀನ್ ಹೈಡ್ರೋಜನ್ ಟಾಸ್ಕ್ ಫೋರ್ಸ್ನ ಇನ್ಪುಟ್ಗಳ ಆಧಾರದ ಮೇಲೆ ಇಂಡೋ ಜರ್ಮನ್ ಹಸಿರು ಹೈಡ್ರೋಜನ್ ಮಾರ್ಗಸೂಚಿಯನ್ನು 2 ದೇಶಗಳು ಅಭಿವೃದ್ಧಿಪಡಿಸಲಿವೆ ಎಂದು ಹೇಳಿದರು.

ಆರನೇ ಭಾರತ-ಜರ್ಮನಿ ಅಂತರ್ ಸರ್ಕಾರಿ ಸಮಾಲೋಚನೆಯ ಸಂದರ್ಭದಲ್ಲಿ ಸೋಮವಾರ ಭಾರತ ಮತ್ತು ಜರ್ಮನಿ ನಡುವೆ ವಿವಿಧ ಕ್ಷೇತ್ರಗಳಲ್ಲಿ ಒಟ್ಟು 9 ಒಪ್ಪಂದಗಳಿಗೆ ಸಹಿ ಹಾಕಲಾಯಿತು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ 3 ದಿನಗಳ ಯುರೋಪ್ ಭೇಟಿಯ ಮೊದಲ ದಿನವಾದ ಸೋಮವಾರ ಬರ್ಲಿನ್ ಗೆ ಆಗಮಿಸಿದರು.