Saturday, February 28, 2026
Saturday, February 28, 2026
Home Blog Page 1594

ಸಮ ಸಮಾಜದ ಆಧ್ಯಾತ್ಮಿ, ಶ್ರೀರಾಮಾನುಜರು

0

ಜಾತಿ, ಮತ, ಧರ್ಮ, ಲಿಂಗ, ಭೇದವಿಲ್ಲದೆ ಎಲ್ಲರೂ ಮುಕ್ತಿ ಮಾರ್ಗದಲ್ಲಿ ಹೋಗಬಹುದು ಎಂದು ಸಾರಿದವರು ಶ್ರೀರಾಮಾನುಜಾಚಾರ್ಯರು. ಆಗಿನ ಕಾಲದಲ್ಲಿ ಅಸ್ಪೃಶ್ಯತೆಯನ್ನು ಸಮಾಜದಿಂದ ತೊಡೆದು ಹಾಕುವಲ್ಲಿ ಪ್ರಯತ್ನ ಮಾಡಿದವರಲ್ಲಿ ಮೊದಲಿಗರು.

ಹಿಂದುಳಿದ ವರ್ಗಗಳ ಜನರನ್ನು ಹತ್ತಿರ ಕರೆದು ಅವರಿಗೆ ದೇವಸ್ಥಾನಕ್ಕೆ ಪ್ರವೇಶ ಮಾಡಿಸಿ, ಅವರನ್ನು ಶ್ರೇಷ್ಠ ಕುಲದವರು ಎಂದು ಹೇಳಿದ ಮಹಾಮರು.

ಶ್ರೀರಾಮಾನುಜಾಚಾರ್ಯರು ತಮಿಳುನಾಡಿನ ಮದರಾಸು ಪಟ್ಟಣ ಬಳಿಯಿರುವ ಶ್ರೀ ಪೇರಂಬದೂರಿನಲ್ಲಿ ಜನಿಸಿದರು. 120 ವರ್ಷಗಳ ಕಾಲ ಬದುಕಿದ್ದರು. ರಾಮಾನುಜಾಚಾರ್ಯರು ತಮ್ಮ 16ನೇ ವಯಸ್ಸಿನಲ್ಲಿ ವಿವಾಹವಾದರು. ಇದರಲ್ಲಿ ವಿವಾಹವಾಗಿ ಒಂದು ತಿಂಗಳ ನಂತರ ಇವರ ತಂದೆ ದೈವಾಧೀನರಾದರು. ನಂತರ ರಾಮಾನುಜಾಚಾರ್ಯರು ಕಾಂಚೀಪುರಕ್ಕೆ ಹೋಗಿ ಅಲ್ಲಿ ಯಾದವ ಪ್ರಕಾಶ ಎಂಬ ಪ್ರಸಿದ್ಧ ವಿದ್ವಾಂಸರ ಶಿಷ್ಯರಾದರು.

ಯಾದವ ಪ್ರಕಾಶರು ಅದ್ವೆತ್ರೈತ ಸಿದ್ದಾಂತವನ್ನು ಪ್ರಚಾರ ಮಾಡುತ್ತಿದ್ದರು. ಮುಂದೊಂದು ದಿನ ರಾಮಾನುಜಾಚಾರ್ಯರು ತಮ್ಮ ಊರನ್ನು ತೊರೆದು ಬಿಟ್ಟರು. ನಂತರದಲ್ಲಿ ಶ್ರೀರಂಗಪಟ್ಟಣದಲ್ಲಿ ವಾಸಿಸುತ್ತಿದ್ದರು. ತಮ್ಮ ದೇಹ ಬಿಟ್ಟು ಹೊರಡುವ ಕಾಲದಲ್ಲಿ ಅದನ್ನು ಮುಂಚಿತವಾಗಿಯೇ ತಮ್ಮ ಶಿಷ್ಯರಿಗೆ ತಿಳಿಸಿದ್ದರು. 1137ನೇ ಶನಿವಾರ ಮಧ್ಯಾಹ್ನ ಮಾಘ ಶುದ್ಧ ಸಪ್ತಮಿಯ ದಿನ ಇವರು ದೈವಾಧೀನರಾದರು.

ರಾಮಾನುಜಾಚಾರ್ಯರು ಆಚಾರ್ಯತ್ರಯರಲ್ಲಿ ಒಬ್ಬರಾಗಿದ್ದರು. ಇವರ ಬಗ್ಗೆ ಬಹಳಷ್ಟು ಜನರಿಗೆ ತಿಳಿದಿಲ್ಲ. ಆದರೆ ಅವರ ಹೆಸರು ಕೇಳಿದ್ದಾರೆಂಬುವುದೆ ಸಮಾದಾನದ ವಿಷಯ.

ರಾಮಾನುಜಾಚಾರ್ಯರು ಮೂಲತಹ ಬ್ರಾಹ್ಮಣ ಕುಟುಂಬದವರಾಗಿದ್ದರು. ಹಿಂದುಳಿದ ವರ್ಗಗಳಿಗೆ ಸಮಾನತೆ ಹರಿಕಾರ ರಲ್ಲಿ ಪ್ರಮುಖರಾಗಿದ್ದರು.

ಓಂ ನಮೋ ನಾರಾಯನಾಯಣಾಯ ನಮಃ ಎನ್ನುವಂತಹ ಅಷ್ಟಕ್ಷರಿ ಯ ಮಂತ್ರದಲ್ಲಿ ಜಾತಿ, ಮತ, ಪಂಥವನ್ನು ಮೀರಿ ಎಲ್ಲರಿಗೂ ಉಪದೇಶಿಸಿದ ಮಹಾನ್ ವ್ಯಕ್ತಿ ಎಂದರೆ ತಪ್ಪಾಗಲಾರದು.

ಹೊಸ ಸಂಕಲ್ಪಕ್ಕೆ ಜೆಡಿಎಸ್ ಜನತಾ ಜಲಧಾರೆ ಸಮಾವೇಶ

0

ಜೆಡಿಎಸ್‌ನಿಂದ ಕಳೆದ ತಿಂಗಳು 16ರಂದು ಆರಂಭವಾದ ಜನತಾ ಜಲಧಾರೆ ಕಾರ್ಯಕ್ರಮ ರಾಜ್ಯಾದ್ಯಂತ ಯಸ್ವಿಯಾಗಿ ನಡಿದಿದ್ದು ಮೇ 13ರಂದು ಸಮಾರೋಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಬೃಹತ್ ಸಮಾವೇಶದ ಸಿದ್ಧತೆ ಮತ್ತು ರೂಪುರೇಶೆಗಳ ಬಗ್ಗೆ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ವಿಸ್ತೃತವಾಗಿ ಚರ್ಚೆ ನಡೆಸಲಾಯಿತು.

ಇದೇ ಮೇ ತಿಂಗಳ 13ರಂದು ನೆಲಮಂಗಲ ಟೋಲ್ ಪ್ಲಾಜಾ ಬಳಿ ಬೃಹತ್ ಜನತಾ ಜಲಧಾರೆ ಸಮಾವೇಶದ ಮೂಲಕ ಸಮಾಪ್ತಿಯಾಗಲಿದೆ ಎಂದು ತಿಳಿದುಬಂದಿದೆ.

ಮಾಜಿ ಪ್ರಧಾನಮಂತ್ರಿಗಳಾದ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸಮಕ್ಷಮದಲ್ಲಿ ಮಾಜಿ ಸಚಿವ ಬಂಡೆಪ್ಪ ಖಾಷೆಂಪೂರ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಿತು. ಸಭೆಯ ಬಳಿಕ ಮಾಜಿ ಸಚಿವ ಬಂಡೆಪ್ಪ ಖಾಷೆಂಪೂರ ಮಾಧ್ಯಮಗೋಷ್ಠಿ ನಡೆಸಿದರು.

ರಾಜ್ಯದ 184 ವಿಧಾನಸಭೆ ಕ್ಷೇತ್ರಗಳಲ್ಲಿ ಜಲಧಾರೆಯ 15 ಗಂಗಾ ರಥಗಳು ಯಶಸ್ವಿಯಾಗಿ ಸಂಚರಿಸುತ್ತಿವೆ. ಇವುಗಳ ಮೂಲಕ ರಾಜ್ಯದ ಎಲ್ಲಾ ಜೀವ ನದಿಗಳಿಂದ ಸಂಗ್ರಹ ಮಾಡಲಾಗಿರುವ ಪುಣ್ಯಜಲವನ್ನು ಒಂದು ಬೃಹತ್ ಕಲಶಕ್ಕೆ ತುಂಬಿಸಿ ಸಮಾವೇಶದಲ್ಲಿ ಪೂಜೆ ನೆರವೇರಿಸಲಾಗುವುದು. ಈ ಸಮಾವೇಶದಲ್ಲಿ 5 ಲಕ್ಷಕ್ಕಿಂತ ಹೆಚ್ಚು ಜನ ಸೇರಲಿದ್ದಾರೆ ಮಾಜಿ ಸಚಿವ ಬಂಡೆಪ್ಪ ಖಾಷೆಂಪೂರ ಹೇಳಿದರು.

ಮೇ 16ರ ಸಂಜೆ 4 ಗಂಟೆಗೆ ಆರಂಭ ಆಗಲಿರುವ ಸಮಾವೇಶದಲ್ಲಿ ಮಾಜಿ ಹೆಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಪಕ್ಷದ ರಾಜ್ಯ ಅಧ್ಯಕ್ಷ ಸಿಎಂ ಇಬ್ರಾಹಿಂ, ಸಂಸದೀಯ ಮಂಡಳಿ ಅಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಸೇರಿದಂತೆ ಪಕ್ಷದ ಎಲ್ಲ ಶಾಸಕರು, ಹಿರಿಯ ಮುಖಂಡರು, ಸಾಹಿತಿಗಳು, ಬುದ್ಧಿಜೀವಿಗಳು, ಕನ್ನಡಪರ, ರೈತಪರ ಹೋರಾಟಗಾರರು ಭಾಗಿಯಾಗುವರು.

ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ಬಹುಮತ ಸಿಕ್ಕರೆ ಐದು ವರ್ಷಗಳಲ್ಲಿ ಜನತಾ ಸರಕಾರ ಕೈಗೊಳ್ಳಲಿರುವ ಕಾರ್ಯಕ್ರಮಗಳ ಬಗ್ಗೆ ಆ ಸಮಾವೇಶದಲ್ಲಿ ಸಂಕಲ್ಪ ಮಾಡಲಾಗುವುದು ಎಂದು ಹೇಳಿದರು.

ಎರಡನೇ ತರಗತಿವರೆಗೆ ನೋ ಹೋಂ ವರ್ಕ್- ನಾಗೇಶ್

0

ಪುಟ್ಟ ಪುಟ್ಟ ಮಕ್ಕಳು ಬೆನ್ನಮೇಲೆ ಬ್ಯಾಗು ಹಾಕಿಕೊಂಡು ಶಾಲೆ ಕಡೆ ಬೆಳಗ್ಗೆ ಮುಖ ಮಾಡಿದರೆ, ವಾಪಸ್ ಬರುವುದು ಮಧ್ಯಾಹ್ನ ಇಲ್ಲ ಸಂಜೆಯೇ ಆಗಿ ಬಿಡುತ್ತದೆ.

ತನ್ನ ಅರ್ಧ ದಿನವನ್ನ ಶಾಲೆಯಲ್ಲಿ ಕಳೆದುಕೊಂಡು ಬರುವ ಮಕ್ಕಳು ಉಳಿದ ಸ್ವಲ್ಪ ಸಮಯದಲ್ಲಿ ಕೂಡ ಮನೆಯವರ ಜೊತೆ ಕಳೆಯೋದಕ್ಕೂ ಆಗುವುದಿಲ್ಲ. ಅಷ್ಟೊಂದು ತಲೆ ಭಾರವಾದಂತ ಹೋಂ ವರ್ಕ್​ಗಳ ರಾಶಿಯನ್ನು ಶಾಲೆಗಳು ಕೊಡುತ್ತಿವೆ.

ಪೋಷಕರು ಕೂಡ ನೈತಿಕ ಶಿಕ್ಷಣ ಹೇಳಿ ಕೊಡುವ ಬದಲು ಮಕ್ಕಳ ಜೊತೆ ಕೂತು ಹೋಂ ವರ್ಕ್ ಹೇಳಿ ಕೊಡೋದೇ ದೊಡ್ಡ ಕೆಲಸವಾಗಿ ಬಿಡುತ್ತದೆ. ಹೀಗಾಗಿ ಚಿಕ್ಕ ಮಕ್ಕಳಿಗೆ ಆದಷ್ಟು ಹೋಂ ವರ್ಕ್ ಪದ್ದತಿಯನ್ನು ತೆರವು ಮಾಡಬೇಕೆಂದು ಪೋಷಕರು, ಸೇರಿ ಮಕ್ಕಳ ತಜ್ಞರು ಸರ್ಕಾರಕ್ಕೆ ಮನವಿ ಮಾಡಿದ್ದರು. ಹೀಗಾಗಿ ಸರ್ಕಾರ ಕೂಡ ಮಕ್ಕಳ ಮನಸ್ಥಿತಿ ತಕ್ಕಹಾಗೆ ಚಿಂತನೆ ನಡೆಸಿದೆ.

ಈ ಹೋಂ ವರ್ಕ್ ವಿಚಾರದ ಬಗ್ಗೆ ಶಿಕ್ಷಣ ಇಲಾಖೆ ಕೂಡ ದಿಟ್ಟ ನಿರ್ಣಯ ಕೈಗೊಂಡಿದ್ದು ಇನ್ಮುಂದೆ ಎರಡನೇ ತರಗತಿಯವರೆಗಿನ ಮಕ್ಕಳಿಗೆ ಹೋಂ ವರ್ಕ್ ಕೊಡುವಂತಿಲ್ಲ ಎಂಬ ಬಗ್ಗೆ ಆಲೋಚಿಸಿದೆ.

ರಾಜ್ಯದಲ್ಲಿ ಎರಡನೇ ತರಗತಿವರೆಗಿನ ಮಕ್ಕಳಿಗೆ ಯಾವುದೇ ರೀತಿಯಾದಂತಹ ಹೋಂ ವರ್ಕ್​ಗಳನ್ನು ನೀಡುವಂತಿಲ್ಲ ಎಂಬ ಉಲ್ಲೇಖವಿದೆ. ಆದ್ದರಿಂದ ಸರ್ಕಾರಿ ಶಾಲೆಗಳಲ್ಲಿ ಎರಡನೇ ತರಗತಿವರೆಗಿನ ಮಕ್ಕಳಿಗೆ ಹೋಮ್‌ ವರ್ಕ್ ನೀಡುವಂತಿಲ್ಲ.
ಆದರೆ, ಖಾಸಗಿ ಶಾಲೆಯಲ್ಲಿ ಅತಿ ಹೆಚ್ಚು ಹೋಂ ವರ್ಕ್ ನೀಡುತ್ತಾರೆ. ಖಾಸಗಿ ಶಾಲೆಗಳಲ್ಲಿ ಬಾಲ್ಯಾವಸ್ಥೆಯ ಮಕ್ಕಳಿಗೆ ವಿದ್ಯಾಭ್ಯಾಸದ ಒತ್ತಡ ಹೇರಬಾರದು ಎನ್ನುವ ಕಾರಣಕ್ಕೆ ಖಾಸಗಿ ಶಾಲೆಯಲ್ಲಿ ಕೂಡ ಹೋಂ ವರ್ಷ ನಿಷೇಧದ ಬಗ್ಗೆ ಶಿಕ್ಷಣ ಇಲಾಖೆ ಒಲವು ತೋರಿದೆ. ಈ ಬಗ್ಗೆ ಸ್ವತಃ ಶಿಕ್ಷಣ ಸಚಿವರಾದ ಬಿಸಿ ನಾಗೇಶ್ ಅವರು ಸ್ಪಷ್ಟಪಡಿಸಿದ್ದಾರೆ.

₹532 ಕೋಟಿ ವೆಚ್ಚದ ಅನುಭವ ಮಂಟಪ ಯೋಜನೆಗೆ ಒಪ್ಪಿಗೆ

0

ಬಸವ ಕಲ್ಯಾಣದಲ್ಲಿ 532 ಕೋಟಿ ರೂಪಾಯಿ ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಾಣ ಯೋಜನೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.

ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ ಕೈಗೆತ್ತಿಕೊಂಡಿರುವ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಸರ್ಕಾರ 532 ಕೋಟಿ ರೂ.ಗಳ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ಅನುಮತಿ ನೀಡಿದೆ. ಮೂರು ವರ್ಷಗಳೊಳಗಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲು ಮುಖ್ಯಮಂತ್ರಿಗಳು ಸೂಚಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು.

ಅನುಭವ ಮಂಟಪ ಬಸವಣ್ಣನವರ ಕ್ರಾಂತಿಕಾರಿ ವೇದಿಕೆ. ಈ ಮಂಟಪದ ಮೂಲಕ ಸಮಾಜದ ಓರೆಕೋರೆಗಳನ್ನು ತಿದ್ದುವ ಕೆಲಸವನ್ನು ಬಸವಣ್ಣನವರು ಮಾಡಿದ್ದಾರೆ. ಅವರು ಮಾಡಿರುವ ಸಾಮಾಜಿಕ ಕ್ರಾಂತಿಯನ್ನು ಪ್ರತಿಬಿಂಬಿಸುವ ರೂಪದಲ್ಲಿ ಅನುಭವ ಮಂಟಪ ನಿರ್ಮಾಣವಾಗಲಿದೆ. ಅನುಭವ ಮಂಟಪದಲ್ಲಿ 12ನೇ ಶತಮಾನದಲ್ಲಿ ಇದ್ದಂತಹ ವಚನಕಾರರು ದಾರ್ಶನಿಕ ಪುರುಷರ ಕುರಿತಾದ ಮಾಹಿತಿ ನೀಡುವಂತಹ ಕಿರು ಚಿತ್ರಗಳ ಪ್ರದರ್ಶನ, ಬಸವಣ್ಣನವರ ಜೀವನ ಸಾಧನೆ ಬಿಂಬಿಸುವ ಮಾಹಿತಿಗಳನ್ನು ಅನುಭವ ಮಂಟಪಕ್ಕೆ ಆಗಮಿಸುವ ಎಲ್ಲರಿಗೂ ವಿವರಿಸುವ ವ್ಯವಸ್ಥೆ ಈ ಅನುಭವ ಮಂಟಪದಲ್ಲಿ ಇರಲಿದೆ ಎಂದರು.

ಕಂದಾಯ ಸಚಿವ ಆರ್.ಅಶೋಕ್, ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್, ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ಬಸವರಾಜ ಪಾಟೀಲ್ ಸೇಡಂ, ರಘುನಾಥ ರಾವ್ ಮಾಲ್ಕಪುರ್, ಅಮರನಾಥ ಪಾಟೀಲ್, ಶಾಸಕರಾದ ಈಶ್ವರ ಖಂಡ್ರೆ, ಶಶೀಲ್ ನಮೋಶಿ ಮೊದಲಾದವರು ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ವಿಶೇಷ ಅಧಿಕಾರಿ ಹಾಗೂ ಬೀದರ್ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಬಸವಕಲ್ಯಾಣ ವೃದ್ಧಿ ಮಂಡಳಿಯ ಆಯುಕ್ತ ಶಿವಕುಮಾರ್ ಶೀಲವಂತ ಉಪಸ್ಥಿತರಿದ್ದರು.

ಶೇ 85 ರಷ್ಟು ಗ್ರಾಮಲೆಕ್ಕಿಗರ ನೇಮಕಾತಿ:ಜಿಲ್ಲಾಧಿಕಾರಿಗಳಿಗೆಸರ್ಕಾರದ ಅನುಮತಿ

0

ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಇನ್ನು ಮುಂದೆ ಖಾಲಿ ಇರುವ ಗ್ರಾಮ ಲೆಕ್ಕಿಗರ ಹುದ್ದೆಗಳ ಪೈಕಿ ಶೇ. 85 ರಷ್ಟು ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಆಯಾ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಅನುಮತಿ ನೀಡಿದೆ.

ಖಾಲಿ ಇರುವ ಗ್ರಾಮ ಲೆಕ್ಕಿಗರ ಹುದ್ದೆಗಳ ನೇರ ನೇಮಕಾತಿಗೆ ಅನುಮತಿ ಕೋರಿ ರಾಜ್ಯದ 6 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸಲ್ಲಿಸಿರುವ ಪ್ರಸ್ತಾವನೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಇನ್ಮುಂದೆ ಇತರೆ ಯಾವುದೇ ಜಿಲ್ಲೆಗಳಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಿಗರ ಹುದ್ದೆಗಳಲ್ಲಿ ಶೇ.85 ರಷ್ಟು ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿದೆ.

ಉತ್ತರ ಕನ್ನಡದಲ್ಲಿ 26, ಕೋಲಾರದಲ್ಲಿ 11, ತುಮಕೂರು 13, ಚಿಕ್ಕಬಳ್ಳಾಪುರ 10, ಚಿತ್ರದುರ್ಗ 11, ಕೊಡಗು 13 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.

ನಮಾಮಿ ಶಂಕರಂ

0

ಜಗದ್ಗುರು ಶಂಕರಾಚಾರ್ಯ’ ಎಂದೂ ಕರೆಯಲ್ಪಡುವ ಆದಿ ಶಂಕರಾಚಾರ್ಯರ ಜನ್ಮದಿನವಿಂದು. ಆದ್ದರಿಂದ ಇಂದು ಶಂಕರ ಜಯಂತಿಯನ್ನು ಆಚರಿಸಲಾಗುತ್ತದೆ.

ಭಗವಾನ್ ಶಂಕರಾಚಾರ್ಯರು ವೈಶಾಖ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಜನಿಸಿದರು. ಆದಿ ಗುರು ಶಂಕರಾಚಾರ್ಯರು ಕೇರಳದ ಕಾಲಡಿ ಗ್ರಾಮದಲ್ಲಿ ಶಿವಗುರು ನಾಮ್ ಪುದ್ರಿ ಮತ್ತು ವಿಶಿಷ್ಟ ದೇವಿ ಎಂಬ ಬ್ರಾಹ್ಮಣ ದಂಪತಿಗಳಿಗೆ ಜನಿಸಿದರು.

ಮಗನನ್ನು ಪಡೆಯಲು ಶಿವಗುರುಗಳು ತಮ್ಮ ಪತ್ನಿಯೊಂದಿಗೆ ಶಿವನನ್ನು ಆರಾಧಿಸಿದ್ದರು. ಇದರ ನಂತರ, ಶಿವನು ಸಂತೋಷಪಟ್ಟನು ಮತ್ತು ಅವನಿಗೆ ಪುತ್ರ ವರವನ್ನು ನೀಡಿದನು. ಆದರೆ ಮಗುವಿಗೆ ಅಲ್ಪಾಯುಷ್ಯವಿರುತ್ತದೆ ಎನ್ನುವ ಷರತ್ತನ್ನು ನೀಡಿದನು ಎಂಬ ಪ್ರತೀತಿ ಇದೆ.

ಕೇವಲ 7 ವರ್ಷ ವಯಸ್ಸಿನಲ್ಲಿ, ಆದಿ ಶಂಕರಾಚಾರ್ಯರು ಸನ್ಯಾಸಿ ಜೀವನಕ್ಕೆ ಕಾಲಿಟ್ಟರು. 2 ನೇ ವಯಸ್ಸಿನಲ್ಲಿ, ಅವರು ವೇದಗಳು ಮತ್ತು ಉಪನಿಷತ್ತುಗಳ ಜ್ಞಾನವನ್ನು ಹೊಂದಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ಜೀವನದಲ್ಲಿ ಹಲವಾರು ಯಶಸ್ಸುಗಳನ್ನು ಗಳಿಸಿದ ಅವರು ಯಶಸ್ಸಿನ ಹಿಂದೆ ತಾಯಿಯ ಕೈವಾಡವಿದೆ ಎಂಬುದನ್ನು ದೃಢವಾಗಿ ನಂಬಿಕೊಂಡಿದ್ದರು.

ಶಂಕರಾಚಾರ್ಯರಿಗೆ ಜಗದ್ಗುರುವಾಗಲು ಅವರ ತಾಯಿಯೇ ದಾರಿ ಮಾಡಿಕೊಟ್ಟರು. ಅವರು ಕೇವಲ 32 ವರ್ಷ ವಯಸ್ಸಿನವರಾಗಿದ್ದಾಗ ನಿಧನರಾದರು. ಅವರು ಜೀವಿಸಿದ ಅಲ್ಪಾವಧಿಯಲ್ಲೆ ಅವರು ನೀಡಿದ ಕೊಡುಗೆ ಅಪಾರವಾದದ್ದು..

ಭಾರತೀಯ ಸಾಂಸ್ಕೃತಿಕ ಇತಿಹಾಸದಲ್ಲಿ ಶ್ರೇಷ್ಠ ಮಹಾಪುರಷರೆಂದು ಗುರುತಿಸಲ್ಪಟ್ಟವರಲ್ಲಿ ಶ್ರೀ ಶಂಕರಾಚಾರ್ಯರು ಪ್ರಮುಖರು. ಪ್ರಾಚೀನ ಕಾಲದ ಸಂರ್ಭದಲ್ಲಿ ಪ್ರಯಾಣ ಎಂಬುದು ಕಷ್ಟಕರವಾಗಿತ್ತು. ಆ ಪರಿಸ್ಥಿತಿಯಲ್ಲಿಯೇ ದೇಶಾದ್ಯಂತ ಸಂಚರಿಸಿ ಜನಮನ ಗೆದ್ದರು. ಸನಾತನ ಧರ್ಮ ಮತ್ತು ರಾಷ್ಟ್ರೀಯ ಏಕತೆಗೆ ಭಾರೀ ಅಪಾಯ ಬಂದಿದ್ದ ಕಾಲಘಟ್ಟದಲ್ಲಿ ಹಾಗೂ ಅಂತಹ ದುಃಸ್ಥಿತಿಯ ಸಂದರ್ಭದಲ್ಲಿ ದೇಶವನ್ನು ಸಂರಕ್ಷಿಸಿ, ಧರ್ಮ ಸಂಸ್ಥಾಪನೆ ಮಾಡಲು ಪರಮೆಶ್ವರನೇ ಧರೆಗಿಳಿದು ಬರಬೇಕಾಯಿತು. ಅಂತಹ ಪರಮಾವತಾರವೇ ಶ್ರೀಶಂಕರರು.

ಶ್ರೀ ಆದಿ ಶಂಕರಾಚಾರ್ಯರು ಒಬ್ಬ ಮಹಾನ್ ದಾರ್ಶನಿಕನಲ್ಲದೆ, ಅವರು ಒಬ್ಬ ಮಹಾನ್ ಕವಿಯೂ ಆಗಿದ್ದರು ಮತ್ತು ಅವರ ಜೀವಿತಾವಧಿಯಲ್ಲಿ ಹಲವಾರು ಭಕ್ತಿ ಪ್ರಾರ್ಥನೆಗಳನ್ನು ರಚಿಸಿದರು. ಸೌಂದರ್ಯ ಲಹರಿ, ನಿರ್ವಾಣ ಶಾಲ್ಕಂ ಮತ್ತು ಶಿವಾನಂದ ಲಹರಿ ಅವರ ಗಮನಾರ್ಹ ಸಂಯೋಜನೆಗಳಾಗಿವೆ. ಅಷ್ಟೇ ಅಲ್ಲ, ಆದಿ ಶಂಕರರು ಉಪನಿಷತ್ತುಗಳ, ಭಗವದ್ಗೀತೆ ಮತ್ತು ಬ್ರಹ್ಮ ಸೂತ್ರಗಳ ಬಗ್ಗೆ ತಮ್ಮ ತಿಳುವಳಿಕೆಯನ್ನು ಬರೆದಿದ್ದಾರೆ. ದ್ವಾರಕಾ, ಕಾಶ್ಮೀರ, ಶೃಂಗೇರಿ ಮತ್ತು ಪುರಿಯಲ್ಲಿ ನೆಲೆಗೊಂಡಿರುವ ಪ್ರಮುಖ ಮಠಗಳನ್ನು ಭಾರತದಲ್ಲಿ ನಿರ್ಮಿಸಿದ ಕೀರ್ತಿ ಶ್ರೀ ಶಂಕರಾಚಾರ್ಯರಿಗೆ ಸಲ್ಲುತ್ತದೆ.
ಶಂಕರಾಚಾರ್ಯರನ್ನು ಶಿವನ ಅವತಾರವೆಂದು ಪರಿಗಣಿಸಲಾಗುತ್ತದೆ.

ನಾವೆಲ್ಲರೂ ಶ್ರೀ ಆದಿ ಶಂಕರಚಾರ್ಯರ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸೋಣ..

ಹರ-ಲೀಲಾವತಾರಾಯ ಶಂಕರಾಯ ಪರೌಜಸೇ|
ಕೈವಲ್ಯ ಕಲನಾ ಕಲ್ಪತರವೇ ಗುರವೇ ನಮಃ||
ವಕ್ತಾರಮಾಸಾದ್ಯ ಯಮೇವ ನಿತ್ಯಾ ಸರಸ್ವತೀ ಸ್ವಾರ್ಥಸಮನ್ವಿತಾ ಸೀತ್||
ನಿರಸ್ತ ದುಸ್ತರ್ಕ ಕಳಂಕಪಂಕಂ ನಮಾಮಿ ತಂ ಶಂಕರಮರ್ಚಿತಾಂಘ್ರಿ||
ಶ್ರುತಿ-ಸ್ಮೃತಿ-ಪುರಾಣಾನಾಂ ಆಲಯಂ ಕರುಣಾಲಯಂ|
ನಮಾಮಿ ಭಗವತ್ಪಾದಂ ಶಂಕರಂ ಲೋಕಶಂಕರಂ||

“ಶ್ರೀ ಶಂಕರಾಚಾರ್ಯ ವರ್ಯಂ”

ಪಕ್ಷಾಂತರ ಸುಳಿವು ನೀಡದ ದತ್ತರ ಚಿತ್ತ?

0

ಜೆಡಿಎಸ್ ಪಕ್ಷ ಹಮ್ಮಿಗೊಂಡಿರುವ ಜನತಾ ಜಲಧಾರೆ ಸೇರಿದಂತೆ ಪಕ್ಷದ ಯಾವುದೇ ಚಟುವಟಿಕೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಮಾನಸ ಪುತ್ರ ವೈ.ಎಸ್.ವಿ.ದತ್ತಾ ಸುಳಿದಿಲ್ಲ. ಆದ್ದರಿಂದ ಪಕ್ಷ ಬಿಡುವ ಚಿಂತನೆಯಲ್ಲಿ ದತ್ತಾ ಇದ್ದಾರಾ ಎನ್ನುವ ಚರ್ಚೆ ಈಗ ರಾಜ್ಯ ರಾಜಕಾರಣದಲ್ಲಿ ಹರಿದಾಡುತ್ತಿದೆ.

ದತ್ತಾ ಕಾಂಗ್ರೆಸ್ ಸೇರುತ್ತಾರೆ ಎನ್ನುವ ಮಾತುಗಳು ಕೂಡ ಇದೆ. ಇದೆಲ್ಲದಕ್ಕೂ ವೈ.ಎಸ್.ವಿ.ದತ್ತಾ ಅಡ್ಡ ಗೋಡೆ ಮೇಲೆ ದೀಪವಿಟ್ಟಂತೆ ನಾನು ಜೆಡಿಎಸ್‌ನಲ್ಲಿ ಇರುತ್ತೇನೆ ಎಂದು ಹೇಳುವುದಕ್ಕೂ ಕಾಲ ಬರಬೇಕು. ಮಾತ್ರವಲ್ಲದೇ ಕಾಂಗ್ರೆಸ್ ಸೇರುತ್ತೇನೆ ಎಂದು ಹೇಳುವುದಕ್ಕೂ ಸಮಯ ಬರಬೇಕೆಂದು ಚಿಕ್ಕಮಗಳೂರಿನಲ್ಲಿ ದತ್ತಾ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮ ಮಿತ್ರರೊಂದಿಗೆ ಮಾತಾನಾಡಿ ಕಾಲ ಬಂದಾಗ ನನ್ನ ನಿರ್ಧಾರ ಹೇಳುತ್ತೇನೆ. ಎಲ್ಲದಕ್ಕೂ ಸಮಯ ಬರಬೇಕೆಂದರು. ಜೆಡಿಎಸ್ ತೊರೆಯುವ ಕುರಿತು ಮಾಧ್ಯಮದವರ ಪ್ರಶ್ನೆಯನ್ನು ನಯವಾಗಿ ತಿರಸ್ಕರಿಸಿದ ವೈ.ಎಸ್.ವಿ.ದತ್ತಾ ಮುಂದಿನ ದಿನಗಳಲ್ಲಿ ನಿರ್ಧಾರ ಪ್ರಕಟಿಸುತ್ತೇನೆಂದು ಹೇಳಿದರು.

ರಾಜ್ಯದಲ್ಲಿ 750 ಹಳ್ಳಿಗಳು ಅಮೃತಗ್ರಾಮ ಯೋಜನೆಗೆ ಆಯ್ಕೆ

0

ದೇಶದ 75ನೇ ಸ್ವಾತಂತ್ರ್ಯ ಮಹೋತ್ಸವದ ನೆನಪಿಗೆ ಕಳೆದ ವರ್ಷ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿಸಿದ್ದ ಅಮೃತ ಗ್ರಾಮ ಪಂಚಾಯಿತಿ ಯೋಜನೆಯ ಪ್ರಥಮ ಹಂತ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಹೊಸದಾಗಿ 750 ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿ, ಸಮಗ್ರ ಅಭಿವೃದ್ಧಿ ಮಾಡಲು ಉದ್ದೇಶಿಸಲಾಗಿದೆ.

ಆಯ್ಕೆಯಾಗಿರುವ ಗ್ರಾಮ ಪಂಚಾಯಿತಿಗಳಲ್ಲಿ ಬೀದಿ ದೀಪಗಳು ಅಥವಾ ಸೋಲಾರ್‌ ಬೀದಿ ದೀಪಗಳು, ಪ್ರತಿ ಮನೆಗೆ ಕುಡಿಯುವ ನೀರಿನ ನಳ ಸಂಪರ್ಕ, ಶೇ. 100 ರಷ್ಟು ಘನತ್ಯಾಜ್ಯ ವಿಂಗಡಣೆ ಮತ್ತು ವಿಲೇವಾರಿ, ತ್ಯಾಜ್ಯ ನೀರನ್ನು ವೈಜ್ಞಾನಿಕವಾಗಿ ವಿಸರ್ಜಿಸುವುದು. ಗ್ರಾ.ಪಂ. ಕಟ್ಟಡಗಳಲ್ಲಿ ಸೌರ ವಿದ್ಯುತ್‌ ಅಳವಡಿಕೆ, ಅಮೃತ ಉದ್ಯಾನವನ, ಗ್ರಾ.ಪಂ. ಗ್ರಂಥಾಲಯದ ಡಿಜಿಟಲೀಕರಣ, ಶಾಲೆ ಅಥವಾ ಅಂಗನವಾಡಿಗಳಿಗೆ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಶಾಲೆಗಳಲ್ಲಿ ಆಟದ ಮೈದಾನ ಮತ್ತು ಆವರಣ ಗೋಡೆಗಳನ್ನು ನಿರ್ಮಾಣ, ಕೆರೆಗಳು ಮತ್ತು ಕಲ್ಯಾಣಿಗಳ ಪುನಶ್ಚೇತನಗೊಳಿಸಲಾಗುತ್ತದೆ.ಜೊತೆಗೆ ಗ್ರಾಮಗಳ ಇತರ ಮೂಲಭೂತ ಸೌಕರ್ಯ ಅಭಿವೃದ್ಧಿಗೊಳಿಸಲಾಗುತ್ತದೆ.

ಚೀನಾಕ್ಕೀಗ ಹಿಂದಿ ಭಾಷೆ ಮೇಲೆ ಎಲ್ಲಿಲ್ಲದ ಒಲವು

0

ವಾಸ್ತವಿಕ ಗಡಿ ರೇಖೆ(ಎಲ್‌ಎಸಿ)ಯಲ್ಲಿ ತಾನು ನಡೆಸುತ್ತಿರುವ ಕುಕೃತ್ಯಗಳಿಗೆ ಮತ್ತಷ್ಟು ವೇಗ ನೀಡಲು ಮುಂದಾಗಿರುವ ಚೀನ ಈಗ “ಹಿಂದಿ’ಯ ಕದ ತಟ್ಟಿದೆ.

ಟಿಬೆಟ್‌ನ ಸ್ವಾಯತ್ತ ಪ್ರದೇಶದ ಎಲ್‌ಎಸಿಯಲ್ಲಿ ಕದ್ದಾಲಿಕೆ ಹಾಗೂ ಗುಪ್ತಚರ ಮಾಹಿತಿ ಸಂಗ್ರಹಿಸುವ ಉದ್ದೇಶದ ಭಾಗವಾಗಿ ಪೀಪಲ್ಸ್‌ ಲಿಬರೇಷನ್‌ ಆರ್ಮಿಯು ಹಿಂದಿ ಭಾಷಾಂತರ ಬಲ್ಲಂಥ ಪದವೀಧರರನ್ನು ಚೀನದ ವಿವಿಧ ವಿಶ್ವವಿದ್ಯಾನಿಲಯಗಳಿಂದ ನೇರವಾಗಿ ನೇಮಕ ಮಾಡಿಕೊಳ್ಳಲು ಚಿಂತನೆ ನಡೆಸಿದೆ.

ಪಶ್ಚಿಮ ಥಿಯೇಟರ್‌ ಕಮಾಂಡ್‌ನ‌ ಅಡಿ ಬರುವ ಟಿಬೆಟ್‌ ಮಿಲಿಟರಿ ಡಿಸ್ಟ್ರಿಕ್ಟ್ ಮುಂಬರುವ ಜೂನ್‌ ತಿಂಗಳೊಳಗಾಗಿ ಈ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಲು ಯೋಜಿಸಿದೆ ಎಂದು ಮೂಲಗಳು ತಿಳಿಸಿದೆ.

ಭಾರತದೊಂದಿಗೆ ಚೀನ‌ ಗಡಿಯ ಮೇಲ್ವಿಚಾರಣೆಯ ಕೆಲಸವನ್ನೂ ಇದೇ ಕಮಾಂಡ್‌ ನಡೆಸುತ್ತದೆ.

ಕಳೆದ 2 ತಿಂಗಳಲ್ಲಿ ಟಿಬೆಟ್‌ ಮಿಲಿಟರಿ ಡಿಸ್ಟ್ರಿಕ್ಟ್ ಚೀನದ ವಿವಿಧ ಕಾಲೇಜುಗಳು ಹಾಗೂ ವಿವಿಗಳಿಗೆ ಭೇಟಿ ಕೊಟ್ಟು, ಪಿಎಲ್‌ಎಯಲ್ಲಿ ಹಿಂದಿ ಭಾಷಾಂತರ ಬರುವವರಿಗೆ ಸಾಕಷ್ಟು ಅವಕಾಶಗಳಿವೆ ಎಂದು ಹೇಳಿತ್ತು.

ಅನಾಥಮಕ್ಕಳಿಗೆ ಆಹ್ಲಾದ ತಂದ ಮಂಗಳೂರು ಡಿಸಿ ಡಾ.ರಾಜೇಂದ್ರ

0

ಮಂಗಳೂರು ನಗರದ ಬೊಂದೇಲ್‌ನಲ್ಲಿ ಇರುವ ಬಾಲಕರ ಬಾಲ ಮಂದಿರದಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಸೇರಿದ 6ರಿಂದ 17 ವರ್ಷದೊಳಗಿನ 13 ಅನಾಥ ಮಕ್ಕಳಿದ್ದು, ಅವರನ್ನು ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು ಪಿಲಿಕುಳ ನಿಸರ್ಗಧಾಮಕ್ಕೆ ಪ್ರವಾಸ ಕರೆದೊಯ್ದಿದ್ದರು.

ಈ ಮಕ್ಕಳಿಗೆ ಪೋಷಕರಿಲ್ಲದ ನೋವು ಕಾಡಬಾರದೆಂದು ಮಂಗಳವಾರ ಪಿಲಿಕುಳ ನಿಸರ್ಗಧಾಮಕ್ಕೆ ಪ್ರವಾಸ ಕರೆದೊಯ್ಯಲಾಗಿತ್ತು. ಜಿಲ್ಲಾಧಿಕಾರಿಯವರೇ ಈ ಮಕ್ಕಳ ವಾಹನ, ಊಟ-ಉಪಾಹಾರ ವ್ಯವಸ್ಥೆ ಕಲ್ಪಿಸಿದ್ದರು.

ಸಂಜೆ ಸ್ವತಃ ಪಿಲಿಕುಳಕ್ಕೆ ಆಗಮಿಸಿ ಮಕ್ಕಳೊಂದಿಗೆ ಕಾಲ ಕಳೆದರು. ಪಿಲಿಕುಳ ನಿಸರ್ಗಧಾಮದ ಆಯುಕ್ತ ವೆಂಕಟೇಶ್‌, ನಿರ್ದೇಶಕರು, ಕಾರ್ಯನಿರ್ವಹಣಾಧಿಕಾರಿ ಮತ್ತು ಸಿಬಂದಿ ಮಕ್ಕಳಿಗೆ ಅಚ್ಚುಕಟ್ಟಾದ ವ್ಯವಸ್ಥೆ ಕಲ್ಪಿಸಿದರು.

ಮಹಿಳಾ ಮತ್ತು ಮಕ್ಕಳ ಸಂರಕ್ಷಣಾಧಿಕಾರಿ ಯಮುನಾ, ಮಕ್ಕಳ ರಕ್ಷಣ ವಿಭಾಗದ ಸಿಬಂದಿ ಸಂಧ್ಯಾ, ಸೌಭಾಗ್ಯಾ, ಪ್ರತಿಮಾ, ದೀಕ್ಷಾ, ಅಧೀಕ್ಷಕ ಶ್ರೀಧರ್‌, ರಕ್ಷಕ ತಾರಾನಾಥ್‌, ಸ್ವತ್ಛತ ಸಿಬಂದಿ ಲವೀನಾ ಹಾಗೂ ಬಾಲ ಮಂದಿರದ ಸಿಬಂದಿ ಉಪಸ್ಥಿತರಿದ್ದರು.