Saturday, February 28, 2026
Saturday, February 28, 2026
Home Blog Page 1593

ಧರ್ಮರಕ್ಷಣೆ ಬಗ್ಗೆ ಶಂಕರರು ನಮಗೆ ಆದರ್ಶ

0

ಧರ್ಮರಕ್ಷಣೆಯ ಬಗ್ಗೆ ಜಗತ್ತಿಗೆ ಸಾರಿ ಹೇಳಿದ ಆಚಾರ್ಯತ್ರಯರಲ್ಲಿ ಶಂಕರಾಚಾರ್ಯರು ಮೊದಲಿಗರು ಅವರ ಆದರ್ಶ ಗುಣಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ಸಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಹೇಳಿದರು.

ದಾವಣಗೆರೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ಧರ್ಮ ಅವನತಿಯಲ್ಲಿ ಸಾಗುತ್ತಿರುವಾಗ ಜ್ಞಾನದ ಮೂಲಕ ಧರ್ಮ ರಕ್ಷಣೆಗೆ ನಿಂತ ಮಹಾನೀಯರು ಶ್ರೀ ಶಂಕರಾಚಾರ್ಯರ ಅವರ ಜಯಂತಿ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ. ಮಹಾನ್ ನಾಯಕರುಗಳ ಆದರ್ಶ ಗುಣಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ನಡೆಯುವಂತೆ ತಿಳಿಸಿದರು.

ಸಮಾಜದ ಮುಖಂಡರಾದ ಅಧ್ಯಕ್ಷ ಡಾ.ಬಿ.ಟಿ ಅಚ್ಚುತ್ ಕುಮಾರ್ ಮಾತನಾಡಿ, ಆದಿ ಶಂಕರಾಚಾರ್ಯರ ದಿನಾಚರಣೆಯನ್ನು ಜಿಲ್ಲಾಡಳಿತದಿಂದ ಆಚರಿಸುತ್ತಿರುವುದರಿಂದ ಸಮಾಜದ ಪರವಾಗಿ ಕೃತಜ್ಞತೆ ಸಲ್ಲಿಸಿದರು. ಶಂಕರಾಚಾರ್ಯರ ವಿಚಾರಧಾರೆಗಳನ್ನು ಎಲ್ಲರೂ ತಿಳಿಯಬೇಕು. ಈ ನಿಟ್ಟಿನಲ್ಲಿ ನಾವು ಶಂಕರ ಜಯಂತಿ ಹಾಗೂ ದಸರಾ ಹಬ್ಬದ ಸಮಯದಲ್ಲಿ 9 ದಿನಗಳ ಕಾಲ ಅವರ ಕುರಿತು ಉಪನ್ಯಾಸವನ್ನು ನೀಡುತ್ತಾ ಬರುತ್ತಿದ್ದೇವೆ ಎಂದು ಹೇಳಿದರು.

ಸಮಾಜದ ಎಂ.ಎಸ್ ವಿನಾಯಕ್ ಉಪನ್ಯಾಸ ನೀಡಿ, ಶಂಕರಾಚಾರ್ಯರನ್ನು ಇಡೀ ವಿಶ್ವವೇ ಆರಾಧಿಸುತ್ತಿದೆ. ಮನುಷ್ಯರ ಜೀವನದಲ್ಲಿ ಗುರು ಮುಖ್ಯ, ಗುರು ಇಲ್ಲದೆ ಏನು ನಡೆಯಯಲಾಗದು. ನಾವೆಲ್ಲರೂ ಭಗವಂತನ ಸ್ಮರಣೆ ಮಾಡಬೇಕು, ಶಂಕರಾಚಾರ್ಯರನ್ನು ಯಾವುದೇ ಒಂದು ಸಮುದಾಯಕ್ಕೆ ಸೀಮಿತಗೊಳಿಸದೆ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಿ ಎಲ್ಲರೂ ಸಹ ಅವರ ಚಿಂತನೆಗಳನ್ನು ಪರಿಪಾಲಿಸಬೇಕು ಎಂದರು.
ಕಾರ್ಯಕ್ರಮಕ್ಕೂ ಮುನ್ನ ನಳಿನಿ ಮತ್ತು ತಂಡದಿಂದ ಶಂಕರಾಚಾರ್ಯರ ಕೀರ್ತನೆಗಳನ್ನು ಹಾಡಿದರು.

ಇದೇ ವೇಳೇ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ರವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಮಿತ್ ಬಿದರಿ, ಸಮಾಜದ ಪಿ.ಸಿ ಶ್ರೀನಿವಾಸ್, ಗಿರೀಶ್ ನಾಡಿಗ್, ಹೆಚ್.ಕೆ ವೆಂಕಟೇಶ್, ಸುಬ್ಬಣ್ಣ, ಡಾ.ಶಶಿಕಾಂತ್, ಶ್ರೀ ರಾಮ್, ರಾಘವೇಂದ್ರ, ಪಿ.ಸಿ ರಾಮನಾಥ್, ಶಂಕರ ಭಕ್ತರು ಹಾಗೂ ಮಹಿಳೆಯರು ಸೇರಿದಂತೆ ಹಲವಾರು ಜನರು ಉಪಸ್ಥಿತರಿದ್ದರು.

ಚರ್ಚಾಸ್ಪದವಾಗಿರುವ ಕೋವಿಡ್ ಸಾವಿನ ಸಂಖ್ಯೆ

0

ಕೋವಿಡ್ ಸಾವಿನ ಸಂಖ್ಯೆ ಮುಚ್ಚಿಟ್ಟ ಆರೋಪ ವಿಚಾರವಾಗಿ ಕಾಂಗ್ರೆಸ್ ಮುಖಂಡ ರಾಮಲಿಂಗಾರೆಡ್ಡಿ ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.

ಈ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ನಾನು ಕೋವಿಡ್ ಡೆತ್ ಬಗ್ಗೆ ಪ್ರಶ್ನೆ ಕೇಳಿದ್ದೆ.
ಅಂಕಿ ಅಂಶಗಳ ಸಮೇತ ಸಾವಿನ ಸಂಖ್ಯೆ ಎತ್ತಿದ್ದೆ. ಕೋವಿಡ್ ಸಾವಿನ ಸಂಖ್ಯೆ ಮುಚ್ಚಿಟ್ಟಿದ್ದರು. ಈಗ ಡಬ್ಲ್ಯೂ‌ಹೆಚ್​ಒನವರು ವರದಿ ಕೊಟ್ಟಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಳದ ವರದಿ ಕೊಟ್ಟಿದ್ದಾರೆ. ಇವರು ಸಾವಿನ ಸಂಖ್ಯೆ ಕಡಿಮೆ ನೀಡಿದ್ದರು ಎಂದು ರಾಮಲಿಂಗಾ ರೆಡ್ಡಿ ಆರೋಪಿಸಿದರು.

ನಾನು 42 ಲಕ್ಷ ಜನ ಸಾವನ್ನಪ್ಪಿದ್ದಾರೆ ಎಂದಿದ್ದೆ. ವರದಿಯಲ್ಲಿ 47 ಲಕ್ಷ ಜನ ಸತ್ತಿದ್ದಾರೆಂದಿದೆ. ಕೇಂದ್ರ ಸರ್ಕಾರ ಈಗ ಏನು‌ ಹೇಳುತ್ತದೆ. 2019ಕ್ಕೆ ಹೋಲಿಕೆ ಮಾಡಿದರೆ 2021ರಲ್ಲಿ ಹೆಚ್ಚು ಸಾವನ್ನಪ್ಪಿದ್ದಾರೆ.

ಒಂದೆರಡು ಮಾಧ್ಯಮ ಬಿಟ್ಟರೆ ಎಲ್ಲರೂ ವರದಿ ಮಾಡಿದ್ದಾರೆ. ಕೋವಿಡ್ ಸಮರ್ಥವಾಗಿ ಎದುರಿಸಿದ್ದೇವೆ ಎಂದಿದ್ದರು, ಜಂಭ ಕೊಚ್ಚಿಕೊಳ್ಳುತ್ತಿದ್ದರು.

ಯಾವ ಸಾಂಕ್ರಾಮಿಕ ರೋಗದ ವೇಳೆಯೂ ಇಷ್ಟು ಸಾವಾಗಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮಾರಾಯ್ರೆ ನಮ್ಮಲ್ಲಿ ಟೊಮಾಟೋ ರೇಟು ಕೇಳಂಗಿಲ್ಲ!!!

0

ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಮತ್ತೊಂದು ಶಾಕ್ ಎದುರಾಗಿದೆ. ದಿನದಿಂದ ದಿನಕ್ಕೆ ಟೊಮೆಟೋ ಬೆಲೆಯಲ್ಲಿ ಭಾರೀ ಏರಿಕೆಯಾಗುತ್ತಿದೆ.

ರಾಜ್ಯದ ಪ್ರಮುಖ ಟೊಮೆಟೊ ಮಾರುಕಟ್ಟೆಗಳಲ್ಲಿ ಒಂದಾದ ಕೋಲಾರ ಮಾರುಕಟ್ಟೆಯಲ್ಲಿ ಶುಕ್ರವಾರ 15 ಕೆಜಿ ಟೊಮೆಟೊ ಬಾಕ್ಸ್ 1080 ರೂ.ಗೆ ಮಾರಾಟವಾಗಿದೆ. ಚಿಲ್ಲರೆ ಕೆಜಿಗೆ 100 ರೂ. ಗಡಿದಾಟಿದೆ. ಕಳೆದ ತಿಂಗಳು ಬೆಲೆ ಇಳಿಕೆಯಾಗಿದ್ದ ಟೊಮೇಟೊ ಬೆಲೆಯಲ್ಲಿ ಇದೀಗ ಭಾರೀ ಏರಿಕೆಯಾಗಿದ್ದು, ಅಕಾಲಿಕ ಮಳೆಯಿಂದ ಬೆಳೆ ನಾಶವಾಗಿದೆ, ಹೊರರಾಜ್ಯದ ವ್ಯಾಪಾರಿಗಳು ಬಾರದ ಕಾರಣ ಬೆಲೆ ಕುಸಿತವಾಗಿತ್ತು. ಈಗ ಬೆಳೆ ಕಡಿಮೆ ಇರುವುದರಿಂದ ಟೊಮೆಟೊ ದರ ದಿಢೀರ್ ಏರಿಕೆ ಕಂಡಿದೆ.

ಮಳೆಯಿಂದಾಗಿ ತರಕಾರಿ ಬೆಲೆ ನಾಶವಾಗಿರುವುದರಿಂದ ಟೊಮೆಟೊ ಬೆಲೆ ಏರಿಕೆಗೆ ಕಾರಣವಾಗಿದ್ದು, ಮಳೆಯಿಂದಾಗಿ ತರಕಾರಿ ಬೆಳೆಗಳು ನಾಶವಾಗಿರುವುದರಿಂದ ಟೊಮೆಟೊ ಬೇಡಿಕೆಯಷ್ಟು ಪೂರೈಕೆಯಾಗುತ್ತಿಲ್ಲ.
ಅಗತ್ಯದಷ್ಟು ಟೊಮೆಟೊ ಪೂರೈಕೆಗೆ ಇನ್ನು ಕೆಲವು ದಿನ ಕಾಯಬೇಕಾಗಿದೆ. ಹೀಗಾಗಿ ಟೊಮೆಟೋ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.

ಅಬ್ಬರಿಸಿದ ವಾರ್ನರ್ ಡೆಲ್ಲಿ ಎದುರು ಹೈದ್ರಾಬಾದ್ ಸೋಲು

ಸನ್​ರೈಸರ್ಸ್​​ ಹೈದರಾಬಾದ್ ವಿರುದ್ಧ ನಡೆದ ಹೈ ಸ್ಕೋರ್ ಗೇಮ್​​ನಲ್ಲಿ ಡೆಲ್ಲಿ ಪರ ಡೇವಿಡ್ ವಾರ್ನರ್ ಅಬ್ಬರಿಸಿದರು.

ಮೊದಲ ಓವರ್​ನಿಂದ ಸಂಪೂರ್ಣ 20 ಓವರ್ ವರೆಗೂ ಆಡಿದ ವಾರ್ನರ್ ಶತಕದ ಅಂಚಿಗೆ ಬಂದು ಅಜೇಯರಾಗಿ ಉಳಿದರು.
ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿಯಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅಮೋಘ ಪ್ರದರ್ಶನ ನೀಡಿ ಭರ್ಜರಿ ಗೆಲುವು ಸಾಧಿಸಿ ತನ್ನ ಪ್ಲೇ ಆಫ್ ಹಾದಿಯನ್ನು ಜೀವಂತವಾಗಿರಿಸಿದೆ.

ಮೊದಲ ಓವರ್​ನಿಂದ ಸಂಪೂರ್ಣ 20 ಓವರ್ ವರೆಗೂ ಆಡಿದ ವಾರ್ನರ್ ಶತಕದ ಅಂಚಿಗೆ ಬಂದು ಅಜೇಯರಾಗಿ ಉಳಿದರು. 58 ಎಸೆತಗಳನ್ನು ಅಜೇಯ 92 ರನ್ ಚಚ್ಚಿದ ವಾರ್ನರ್ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳು ಸೇರಿದ್ದವು. ಇದರ ಜೊತೆಗೆ ವಿಶೇಷ ದಾಖಲೆ ಕೂಡ ಬರೆದಿದ್ದಾರೆ. ಟಿ20 ಕ್ರಿಕೆಟ್ ಇತಿಹಾಸದಲ್ಲೇ ಇವರು ದಾಖಲೆಯ 89 ನೇ ಅರ್ಧಶತಕ ಗಳಿಸಿದರು. ಈ ಮೂಲಕ ವೆಸ್ಟ್‌ ಇಂಡೀಸ್‌ನ ದೈತ್ಯ ಕ್ರಿಸ್ ಗೇಲ್ (88 ಅರ್ಧಶತಕ) ದಾಖಲೆ ಮುರಿದಿದ್ದಾರೆ. ಅಲ್ಲದೆ ಐಪಿಎಲ್‌ನಲ್ಲೂ ದಾಖಲೆಯ 54ನೇ ಅರ್ಧಶತಕ ಬಾರಿಸಿದರು.

ಮೊದಲ ಓವರ್‌ನ ಭುನವೇಶ್ವರ್ ಕುಮಾರ್ ಬೌಲಿಂಗ್​ನಲ್ಲಿ ಮಂದೀಪ್‌ ಸಿಂಗ್‌ ಸೊನ್ನೆ ಸುತ್ತಿ ಪೆವಿಲಿಯನ್ ಸೇರಿಕೊಂಡರು. ನಂತರ ಬಂದ ಮಿಚೆಲ್‌ ಮಾರ್ಷ್‌ ನಿರೀಕ್ಷಿತ ಆಟವಾಡಲಿಲ್ಲ. ಆದರೆ 3ನೇ ವಿಕೆಟ್‌ಗೆ ಜೊತೆಯಾದ ವಾರ್ನರ್‌ ಹಾಗೂ ರಿಷಬ್‌ ಪಂತ್‌(26) ಉತ್ತಮ ಬ್ಯಾಟಿಂಗ್‌ನಿಂದ 48 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು.

ಭರ್ಜರಿಯಾಗಿ ಆಟವಾಡಿದ ಡೇವಿಡ್‌ ವಾರ್ನರ್‌ 92 ರನ್‌ (58 ಬಾಲ್‌, 12 ಬೌಂಡರಿ, 3 ಸಿಕ್ಸ್‌) ತಂಡಕ್ಕೆ ಬೆನ್ನೆಲುಬಾದರು. ಬಳಿಕ ಮಧ್ಯಮ ಕ್ರಮಾಂಕದಲ್ಲಿ ಬಂದ ರೋವ್ಮನ್‌ ಪೋವೆಲ್‌ 67* ರನ್‌ (35 ಬಾಲ್‌, 3 ಬೌಂಡರಿ, 6 ಸಿಕ್ಸ್‌) ಸಹ ಭರ್ಜರಿ ಬ್ಯಾಟಿಂಗ್‌ ಮೂಲಕ ಐಪಿಎಲ್‌ ಟೂರ್ನಿಯ ಚೊಚ್ಚಲ ಅರ್ಧಶತಕ ಸಿಡಿಸಿದರು.

ಹೈದರಬಾದ್‌ ಬೌಲಿಂಗ್‌ ದಾಳಿಯನ್ನ ಮನಬಂದಂತೆ ದಂಡಿಸಿದ ಈ ಜೋಡಿ 4ನೇ ವಿಕೆಟ್‌ಗೆ ಮುರಿಯದ 122(66 ಬಾಲ್) ರನ್‌ಗಳ ಜೊತೆಯಾಟವಾಡಿ ಅಬ್ಬರಿಸಿದರು. ಪರಿಣಾಮ ಡೆಲ್ಲಿ 20 ಓವರ್​​ಗೆ 3 ವಿಕೆಟ್ ನಷ್ಟಕ್ಕೆ 207 ರನ್ ಸಿಡಿಸಿತು.

ಗೆಲ್ಲಲು 208 ರನ್ ಗುರಿ ಪಡೆದ ಹೈದರಾಬಾದ್ ತಂಡ ನಿಕೊಲಸ್ ಪೂರನ್ (62 ರನ್, 34 ಎಸೆತ, 2 ಬೌಂಡರಿ, 6 ಸಿಕ್ಸರ್) ಏಕಾಂಗಿ ಹೋರಾಟದ ಹೊರತಾಗಿಯೂ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತು. ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ(7)ಹಾಗೂ ನಾಯಕ ವಿಲಿಯಮ್ಸನ್(4)ವಿಕೆಟನ್ನು ಅಲ್ಪ ಮೊತ್ತಕ್ಕೆ ಕಳೆದುಕೊಂಡಿತು. ಏಡೆನ್ ಮರ್ಕ್ರಾಮ್ (42 ರನ್) ಹಾಗೂ ರಾಹುಲ್ ತ್ರಿಪಾಠಿ(22) ಎರಡಂಕೆಯ ಸ್ಕೋರ್ ಗಳಿಸಿದರು. ಡೆಲ್ಲಿ ಪರ 3 ವಿಕೆಟ್ ಕಿತ್ತು ಖಲೀಲ್ ಅಹ್ಮದ್ ಯಶಸ್ವಿ ಬೌಲರ್ ಎನಿಸಿಕೊಂಡರೆ, ಶಾರ್ದೂಲ್ ಠಾಕೂರ್(2-44) ಎರಡು ವಿಕೆಟ್ ಪಡೆದರು. ಡೇವಿಡ್ ವಾರ್ನರ್ ಪಂದ್ಯಶ್ರೇಷ್ಠ ಬಾಜಿಕೊಂಡರು.

ಜಮ್ಮು,& ಕಾಶ್ಮೀರ ಈಗ 90 ವಿಧಾನಸಭಾ ಕ್ಷೇತ್ರ ಗಳ ರಾಜ್ಯ

0

ಕೇಂದ್ರಾಡಳಿತ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಕ್ಷೇತ್ರ ಪುನರ್‌ವಿಂಗಡಣಾ ಆಯೋಗ ತನ್ನ ವರದಿಯನ್ನು ಅಂತಿಮಗೊಳಿಸಿದೆ. ಒಟ್ಟು 90 ಕ್ಷೇತ್ರಗಳು ಇರಲಿದ್ದು, 43 ಜಮ್ಮು, 47 ಕಾಶ್ಮೀರ ಪ್ರದೇಶದಲ್ಲಿ ಇರಲಿದೆ.

ಐದು ಸಂಸದೀಯ ಕ್ಷೇತ್ರಗಳಲ್ಲಿ ಇರುವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯನ್ನು ಆಯಾ ಜಿಲ್ಲೆಯ ವ್ಯಾಪ್ತಿಯಲ್ಲಿಯೇ ಇರಿಸುವಂತೆ ರಚಿಸಲಾಗಿದೆ.ಜಮ್ಮು ಪ್ರದೇಶದಲ್ಲಿ ಹಾಲಿ 37ರಿಂದ 43ಕ್ಕೆ ವಿಧಾನಸಭಾ ಕ್ಷೇತ್ರಗಳ ಏರಿಕೆಯಾಗಿರುವುದು ಗಮನಾರ್ಹವಾಗಿದೆ.

ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್‌ ದೇಸಾಯಿ, ಮುಖ್ಯ ಚುನಾವಣಾ ಆಯುಕ್ತ ಸುಶೀಲ್‌ಚಂದ್ರ, ಜಮ್ಮು ಮತ್ತು ಕಾಶ್ಮೀರದ ಚುನಾವಣಾ ಆಯುಕ್ತ ಕೆ.ಕೆ.ಶರ್ಮಾ ಅವರನ್ನೊಳಗೊಂಡ ಸಮಿತಿ ಈ ವರದಿ ಸಿದ್ಧಪಡಿಸಿದೆ ಮತ್ತು ಅದಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನೂ ಹೊರಡಿಸಲಾಗಿದೆ.

2020ರಲ್ಲಿ ರಚಿಸಲಾಗಿದ್ದ ಸಮಿತಿ 2011ರ ಜನಗಣತಿಯ ಆಧಾರದಲ್ಲಿ ವರದಿ ಸಿದ್ಧಗೊಳಿಸಿದೆ.
ಕೆಲವೊಂದು ವಿಧಾನಸಭಾ ಕ್ಷೇತ್ರಗಳ ಹೆಸರುಗಳನ್ನು ಬದಲಿಸಲಾಗಿದೆ. ಕಾಶ್ಮೀರ ಭಾಗದ ಕುಪ್ವಾರ ಜಿಲ್ಲೆಯಲ್ಲಿ ಒಂದು ಕ್ಷೇತ್ರ ಹೆಚ್ಚುವರಿಯಾಗಿ ಸಿಗಲಿದೆ.

ಹೀಗಾಗಿ, ಶೀಘ್ರದಲ್ಲಿಯೇ ಅಲ್ಲಿ ವಿಧಾನಸಭೆ ಚುನಾವಣೆ ನಡೆಸುವ ಸಾಧ್ಯತೆ ಇದೆ. 2018 ಜೂನ್‌ ಬಳಿಕ ಇಲ್ಲಿ ಚುನಾಯಿತ ಸರ್ಕಾರ ಇಲ್ಲ. 2019ರಲ್ಲಿ ವಿಶೇಷ ಸ್ಥಾನಮಾನ ರದ್ದುಗೊಳಿಸಿ, ಕೇಂದ್ರಾಡಳಿತ ಪ್ರದೇಶವನ್ನಾಗಿ ಬದಲಾಯಿಸಲಾಯಿತು.

ಗೊಂದಲತುಂಬಿದ್ದ ಹಿಂದೂ ಸಮಾಜಕ್ಕೆತಾತ್ವಿಕ ತಳಹದಿ ಕೊಟ್ಟ ಶಂಕರಾಚಾರ್ಯರು

0

ಭಾರತದಲ್ಲಿ ಹಲವಾರು ಪಂಥಗಳು, ಟೀಕೆ ಟಿಪ್ಪಣಿಗಳು, ಗೊಂದಲಗಳಿಂದ ಹಿಂದೂ ಸಮಾಜ ನಲುಗಿ ಹೋಗಿದ್ದ ಸಂದರ್ಭದಲ್ಲಿ ವೈದಿಕ ಸಂಪ್ರದಾಯಗಳನ್ನು ಗಟ್ಟಿಗೊಳಿಸಿದರು ಶಂಕರಾಚಾರ್ಯರು ಎಂದು ವಿಧಾನ ಪರಿಷತ್ ಶಾಸಕರಾದ ಆಯನೂರು ಮಂಜುನಾಥ್ ಬಣ್ಣಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಇಂದು ಆಯೋಜಿಸಲಾಗಿದ್ದ ಶ್ರೀ ಶಂಕರಾಚಾರ್ಯರ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜನಸಾಮಾನ್ಯರಿಗೆ, ಸಂಸಾರಿಗಳಿಗೆ ನಿಬಂಧನೆ ವಿಧಿಸದೆ ಸಾಮಾನ್ಯ ವ್ಯಕ್ತಿಗಳಿಗೆ ಸರಳವಾಗಿ ವೈದಿಕ ಸಂಪ್ರದಾಯವನ್ನು ತಿಳಿಯುವಂತೆ ಮಾಡಿದವರು ಶಂಕರಾಚಾರ್ಯರು. ವೈದಿಕ ಸಂಪ್ರದಾಯದಲ್ಲಿದ್ದ ದೋಷಗಳನ್ನು ತೊಡೆದು ಹಾಕಿದ ಬಗೆಯನ್ನು ನಾವುಗಳು ತಿಳಿಯಬೇಕು ಹಾಗೂ ಅವರು ಹಾಕಿ ಕೊಟ್ಟಂತಹ ಮಾರ್ಗದಲ್ಲಿ ನಡೆದರೆ ದೇಶಕ್ಕೆ ಉತ್ತಮ ಭವಿಷ್ಯವಿದೆ ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ನಾಗೇಂದ್ರ ಎಫ್ ಹೊನ್ನಳ್ಳಿ ಮಾತನಾಡಿ, ಮಹನೀಯರ ಜಯಂತಿ ಆಚರಿಸುವ ಮೂಲಕ ಅವರ ದಾರ್ಶನಿಕ ವಿಚಾರಗಳನ್ನು ಜನಸಾಮಾನ್ಯರಿಗೆ ತಲುಪಿಸಿ, ಎಲ್ಲರಲ್ಲಿ ಸಾಮರಸ್ಯ ಬೆಳೆಸುವುದು ಜಯಂತಿಗಳ ಉದ್ದೇಶ ಎಂದರು.

ಕೆಎಸ್‍ಎಸ್‍ಐಡಿಸಿ ಉಪಾಧ್ಯಕ್ಷ ದತ್ತಾತ್ರಿ ಎಸ್ ಮಾತನಾಡಿ, ವೈದಿಕ ಸಂಪ್ರದಾಯದಂತೆ ಪೂಜೆ ಪುನಸ್ಕಾರ ಮಾಡುವವರ ಮನೆಯಲ್ಲ್ಲಿ ಯಾವುದೇ ಲೋಭ ಮೋಹಗಳಿಗೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದರು.

ಕಾರ್ಕಳದ ವಾಗ್ಮಿ ಆದರ್ಶ ಗೋಖಲೆ ಅವರು ಶ್ರಿ ಶಂಕರಾಚಾರ್ಯರ ಕುರಿತು ಉಪನ್ಯಾಸ ನೀಡಿ, ಶಂಕರಾಚಾರ್ಯರ ಜೀವನ ಮತ್ತು ವೇದ, ಸನಾತನ ಧರ್ಮದ ಪರಂಪರೆ, ಅವರು ಸ್ಥಾಪಿಸಿದ ಚಾತುರ್ ಪೀಠಗಳ ಬಗ್ಗೆ ಹಾಗೂ ತಾಯಿಯ ಒಡನಾಟ, ಸನ್ಯಾಸತ್ವ ,ಶಂಕರಾಚಾರ್ಯರ ಸಾಹಿತ್ಯ ಮತ್ತು ರಾಷ್ಟ್ರೀಯತೆಯ ಬಗ್ಗೆ ತಿಳಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ಮಾಜಿ ಉಪ ಪೌರರಾದ ಸುರೇಖಾ ಮುರಳೀಧರ್, ಪಾಲಿಕೆಯ ಸದಸ್ಯರಾದ ರೇಖಾ ರಂಗನಾಥ್, ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಕೆ.ಸಿ ನಟರಾಜ ಭಾಗವತ್, ಶೃಂಗೇರಿ ಶಂಕರ ಮಠದ ಧರ್ಮಾಧಿಕಾರಿಗಳಾದ ಪಿ. ನಾರಾಯಣ್, ಪದ್ಮನಾಭ್ ರಾಮಭಟ್ಟರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಎಚ್.ಉಮೇಶ್, ಸಮಾಜದ ಮುಖಂಡರು ಸೇರಿದಂತೆ ಹಲವರು ಭಾಗಿಯಾಗಿದ್ದರು.

ಉಕ್ರೇನ್ ಗೆ ₹90.000 ಕೋಟಿ ನೆರವು ಹರಿದು ಬಂದಿದೆ-ಉಕ್ರೇನ್ ಪ್ರಧಾನಿ

0

ರಷ್ಯಾ ಉಕ್ರೇನ್‌ ಮೇಲೆ ಆಕ್ರಮಣ ಮಾಡಿದಾಗಿನಿಂದ ಇಲ್ಲಿಯವರೆಗೆ ಒಟ್ಟು 12 ಬಿಲಿಯನ್‌ ಅಂದ್ರೆ ಭಾರತದ ರೂಪಾಯಿಗಳಲ್ಲಿ ಸುಮಾರು 90 ಸಾವಿರ ಕೋಟಿಯಷ್ಟು ಮಿಲಿಟರಿ ಮತ್ತು ಹಣಕಾಸು ನೆರವು ಪಡೆದಿದೆ ಅಂತ ಉಕ್ರೇನ್‌ ಪ್ರಧಾನಿ ಡೆನಿಸ್‌ ಶ್ಮಿಹಾಲ್‌ ಅವರು ತಿಳಿಸಿದ್ದಾರೆ.

ಪೋಲ್ಯಾಂಡ್‌ನ ರಾಜಧಾನಿ ವಾರ್ಸಾದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡುತ್ತಾ, ಈ ಮಾಹಿತಿಯನ್ನ ನೀಡಿದ್ದಾರೆ. ಜೊತೆಗೆ ಸಮಾವೇಶದಲ್ಲಿ ಯುದ್ದದ ಸಮಯದಲ್ಲಿ ದೃಢವಾದ ಬೆಂಬಲ ನೀಡಿದಕ್ಕೆ ಧನ್ಯವಾದ ತಿಳಿಸಿದ್ದಾರೆ.

ಪ್ರಸ್ತುತ ಉದ್ಯಮಿ ಸ್ನೇಹೀ ವಾತಾವರಣ ಸೃಷ್ಟಿಯಾಗಿದೆ- ಮಂಜುನಾಥ್

0

ಪ್ರಸ್ತುತ ಕೈಗಾರಿಕೋದ್ಯಮಿಯಾಗಲು ಅವಶ್ಯಕವಾದ ನೆರವು ಮತ್ತು ಮಾರ್ಗದರ್ಶನ ನೀಡಿ ಕೈಹಿಡಿಯುವ ವಾತಾವರಣ ಸೃಷ್ಟಿಯಾಗಿದ್ದು ಯುವ ಉದ್ಯಮಿಗಳು ಇದರ ಸದುಪಯೋಗ ಪಡೆದು ಧೈರ್ಯದಿಂದ ಮುಂದೆ ಬರಬೇಕೆಂದು ವಿಧಾನ ಪರಿಷತ್ ಶಾಸಕರಾದ ಆಯನೂರು ಮಂಜುನಾಥ ಹೇಳಿದರು.

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಶಿವಮೊಗ್ಗ, ಕರ್ನಾಟಕ ತಾಂತ್ರಿಕ ಸಲಹಾ ಸೇವಾ ಸಂಸ್ಥೆ(ಟೆಕ್ಸಾಕ್) ಮತ್ತು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಇಂದು ನಗರದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ ಏರ್ಪಡಿಸಲಾಗಿದ್ದ ಹೊಸ ಕೈಗಾರಿಕಾ ನೀತಿ 2020-25 ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೈಗಾರಿಕೋದ್ಯಮಿಯಾಗಲು ಹಿಂದೆ ಇದ್ದಂತಹ ಕಷ್ಟ ಮತ್ತು ಮಾರ್ಗದರ್ಶನ ಕೊರತೆ ಎರಡೂ ಈಗ ಇಲ್ಲ. ಮೊದಲು ಉದ್ಯಮ ಆರಂಭಿಸುವುದು ಹುಲಿ ಸವಾರಿ ಮಾಡಿದಷ್ಟು ಸವಾಲಿನ ಕೆಲಸವಾಗಿತ್ತು. ಆದರೆ ಈಗ ವ್ಯವಸ್ಥೆ ಬದಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವಂತಹ ಉದ್ಯಮಗಳು ಇವೆ. ಹಿಂದುಳಿದ ತಾಲ್ಲೂಕುಗಳಲ್ಲಿ ಉದ್ಯಮ ಆರಂಭಕ್ಕೆ ಪ್ರೋತ್ಸಾಹಿಸುವ ಮೂಲಕ ಕೈಗಾರಿಕೆಗಳ ವಿಕೇಂದ್ರೀಕರಣಗೊಳಿಸಲಾಗುತ್ತಿದೆ. ಹೊಸ ಪ್ರತಿಭೆಗಳಿಗೆ ಧೈರ್ಯ ನೀಡುವ ಸರ್ಕಾರಿ ನೀತಿಗಳು ಜಾರಿಯಲ್ಲಿವೆ. ಜೊತೆಗೆ ಮಾರ್ಗದರ್ಶನ ನೀಡಲು ಟೆಕ್ಸಾಕ್‍ನಂತಹ ಸಂಸ್ಥೆಗಳಿವೆ ಎಂದರು.

ಶಿವಮೊಗ್ಗ ಜಿಲ್ಲೆಯಲ್ಲಿ ವೈಯಕ್ತಿಕವಾಗಿ ಸಾಧನೆ ಮಾಡಿದ ಸಂಸ್ಥೆಗಳು ಸಾಕಷ್ಟಿವೆ, ಇವರು ಅನೇಕರ ಬದುಕಿಗೆ ಆಸರೆಯಾಗಿ ಸಾರ್ಥಕತೆ ಮೆರೆದಿದ್ದಾರೆ. ನಮ್ಮ ವಿಧಾನ ಪರಿಷತ್ ಶಾಸಕರಾದ ರುದ್ರೇಗೌಡರು ಸಹ ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದಾರೆ. ಕೈಗಾರಿಕೆಗಳು ಶಿವಮೊಗ್ಗದಲ್ಲಿ ಈ ಮಟ್ಟಕ್ಕೆ ನೆಲೆ ನಿಲ್ಲಲು ಹಿಂದಿನ ಹಿರಿಯ ಕೈಗಾರಿಕೋದ್ಯಮಿಗಳ ಶ್ರಮ ಸಾಕಷ್ಟಿದೆ ಎಂದ ಅವರು ಶಿವಮೊಗ್ಗದಲ್ಲಿ ಕೈಗಾರಿಕೆಗಳ ನಡುವೆ ಅನ್ಯೋನ್ಯ ಸಂಬಂಧವಿದೆ ಎಂದರು.

ಸಾಧಿಸುವ ಹುಚ್ಚು ಇರುವವರು ಸಾಧಿಸುತ್ತಾರೆ. ಇಂತಹ ಹುಚ್ಚುತನ ಹೊಂದಿರುವ ಸಮೂಹ ನಮ್ಮ ಜಿಲ್ಲೆಯಲ್ಲಿದೆ. ಹೊಸ ಯುವ ಉದ್ಯಮಿಗಳು ತಮ್ಮ ಆಸಕ್ತಿಯ ಕ್ಷೇತ್ರದ ಉದ್ದಿಮೆಗಳನ್ನು ಪ್ರಾರಂಭಿಸಲು ಧೈರ್ಯ ಮಾಡಿ ಮುಂದೆ ಬರಬೇಕು. ಸರ್ಕಾರದ ಸವಲತ್ತುಗಳು ಮತ್ತು ಮಾರ್ಗದರ್ಶನವನ್ನು ಸದುಪಯೋಗಪಡಿಸಿಕೊಂಡು ಜಿಲ್ಲೆಗೆ ಒಳ್ಳೆಯ ಹೆಸರು ತರಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್ ಅವರು ವಿವರಿಸಿದರು.

ವಿಧಾನ ಪರಿಷತ್ ಶಾಸಕರಾದ ಡಿ.ಎಸ್.ಅರುಣ್ ಮಾತನಾಡಿ, ನಮ್ಮ ಹಿಂದಿನ ಪೀಳಿಗೆಯ ಹಿರಿಯ ಉದ್ಯಮಿಗಳು ಕೃಷಿಯಾಧಾರಿತ ಶಿವಮೊಗ್ಗ ಜಿಲ್ಲೆಯಲ್ಲಿಯೂ ಉತ್ತಮ ಉದ್ದಿಮೆಗಳನ್ನು ಕಟ್ಟಿ ಬೆಳೆಸಿದ್ದಾರೆ ಎಂದರು.

ಯಾವುದೇ ಹೊಸ ಕೈಗಾರಿಕಾ ನೀತಿ ಜಾರಿಗೆ ಮುನ್ನ ಪ್ರಮುಖ ಅಂಶಗಳ ಕುರಿತು ಸರ್ಕಾರದ ಗಮನಕ್ಕೆ ತರಲು ಕೈಗಾರಿಕೋದ್ಯಮಿಗಳು ಕೂತು ಚರ್ಚಿಸಬೇಕು. 2025-30 ರ ಕೈಗಾರಿಕಾ ನೀತಿ ಕುರಿತು ಕೈಗಾರಿಕೋದ್ಯಮಿಗಳು ಮುಂಚಿತವಾಗಿ ಚರ್ಚಿಸುವುದು ಒಳಿತು ಎಂದು ಅಭಿಪ್ರಾಯಪಟ್ಟರು.

ನಮ್ಮ ಹವಾಮಾನಕ್ಕೆ ತಕ್ಕುದಾದ ಕೈಗಾರಿಕೆಗಳ ಸ್ಥಾಪನೆಯಾಗಬೇಕು. ಇಂಡಸ್ಟ್ರಿಯಲ್ ಕಾರಿಡಾರ್ ಆಗುವ ನಿಟ್ಟಿನಲ್ಲಿ ವ್ಯವಸ್ಥೆಗಳು ಆಗಬೇಕು. ಹೊಸ ಕೈಗಾರಿಕಾ ನೀತಿಯು 5 ಲಕ್ಷ ಕೋಟಿ ಬಂಡವಾಳ ಹೂಡಿಕೆ ಆಕರ್ಷಿಸುವ, 20 ಲಕ್ಷ ಜನರಿಗೆ ಉದ್ಯೋಗ ನೀಡುವ ಉದ್ದೇಶ ಹೊಂದಿದ್ದು ಕೈಗಾರಿಕೆಗಳು ಬೆಂಗಳೂರಿಗೆ ಹೆಚ್ಚು ಕೇಂದ್ರೀಕೃತವಾಗದೆ ವಿಕೇಂದ್ರಿಕೃತವಾಗಬೇಕು. ಸರ್ಕಾರ ಸಂಶೋಧನೆಗೆ ಹೆಚ್ಚು ಒತ್ತು ನೀಡಬೇಕೆಂದ ಅವರು ಪ್ರಸ್ತುತ ನಮ್ಮ ಮುಖ್ಯಮಂತ್ರಿಗಳು ವಿಕೇಂದ್ರೀಕರಣಕ್ಕೆ ಪ್ರಾಶಸ್ತ್ಯ ನೀಡುತ್ತಿದ್ದಾರೆ ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಪ್ರಸ್ತುತ 23 ಲಕ್ಷ ಕೋಟಿ ಫಲಾನುಭವಿಗಳಿಗೆ ನೇರವಾಗಿ ಡಿಬಿಟಿ ಮೂಲಕ ಸೌಲಭ್ಯ ದೊರೆಯುತ್ತಿರುವುದು ಹೆಮ್ಮೆಯ ವಿಚಾರ ಎಂದರು.

ಕೆಎಸ್‍ಎಸ್‍ಐಡಿಸಿ ಉಪಾಧ್ಯಕ್ಷ ಎಸ್.ದತ್ತಾತ್ರಿ ಮಾತನಾಡಿ, ನಮ್ಮ ದೇಶದ ಜಿಡಿಪಿ ಹೆಚ್ಚಿಸುವ ಶಕ್ತಿ ಕೈಗಾರಿಕೆಗಳಿಗೆ ಇದೆ. ಪ್ರಸ್ತುತ ಕೈಗಾರಿಗಳನ್ನು ಪ್ರೋತ್ಸಾಹಿಸಲು, ಸಹಾಯಹಸ್ತ ನೀಡಲು ಸರ್ಕಾರದ ವಿವಿಧ ಸಂಸ್ಥೆಗಳಿವೆ. ಪ್ರತಿ ಜಿಲ್ಲೆಗಳನ್ನು ಕ್ಲಸ್ಟರ್‍ಗಳನ್ನಾಗಿ ಗುರುತಿಸಲಾಗಿದ್ದು, ಜಿಲ್ಲಾವಾರು ಕೈಗಾರಿಕೆಗಳನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಶಾಸಕ ಎಸ್.ರುದ್ರೇಗೌಡರು ಮಾತನಾಡಿ, ಒಂದು ಉದ್ದಿಗೆ ಯಶಸ್ವಿಯಾಗಬೇಕಾದರೆ ಸರಿಯಾದ ತಂಡ ಕಟ್ಟಬೇಕು. ಇಷ್ಟವಾದ ಕ್ಷೇತ್ರ ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಿ ತೊಡಗಿಸಿಕೊಂಡಲ್ಲಿ ಉದ್ದಿಮೆ ಯಶಸ್ಸು ಕಾಣುತ್ತದೆ. ಉದಾಹರಣೆಗೆ ಹೋಳಿಗೆ ಗೌರಮ್ಮನವರ ಹೋಳಿಗೆ ಅಮೇರಿಕಾವರೆಗೆ ಹೋಗುತ್ತಿದೆ. ಸಾಗರದ ಮಂಡಿಗೆ ಕೂಡ ಪ್ರಸಿದ್ದಿ ಪಡಿದಿದೆ ಹೀಗೆ ನಮ್ಮ ದೇಶದಲ್ಲಿ ಸಾಕಷ್ಟು ಅವಕಾಶಗಳಿವೆ. ಉದ್ಯಮಿಗಳು ಇನ್ನು 25 ವರ್ಷಗಳವರೆಗೆ ಹಿಂದುರಿಗಿ ನೋಡಬೇಕಾಗಿಲ್ಲ. ಆ ರೀತಿ ವಾತಾವರಣ ಇದೆ. ಸರ್ಕಾರ ಕೈಗಾರಿಕೋದ್ಯಗಳ ಜೊತೆಗಿದೆ ಎಂದರು.

ವಿದೇಶಿ ನೇರ ಹೂಡಿಕೆಯಲ್ಲಿ ಶೇ.45 ರಷ್ಟು ಹೂಡಿಕೆಯನ್ನು ನಮ್ಮ ರಾಜ್ಯದಲ್ಲಿ ಮಾಡಲಾಗಿದೆ. ಇಲ್ಲಿ ಪೂರಕವಾದ ವಾತಾವರಣದೊಂದಿಗೆ ಬುದ್ದಿವಂತ ಜನರಿದ್ದಾರೆ. ಭೂಮಿ ಕೂಡ ಸುಲಭವಾಗಿ ಸಿಗುವ ರೀತಿ ವ್ಯವಸ್ಥೆ ಮಾಡಲಾಗುತ್ತಿದೆ. ಮೂಲಭೂತ ಸೌಕರ್ಯಗಳು ಸಾಕಷ್ಟಿದೆ. ಆದ್ದರಿಂದ ಯುವಜನತೆ ತಮ್ಮ ಆಸಕ್ತಿದಾಯಕ ಉದ್ಯಮ ಆರಂಭಿಸಲು ಆಲೋಚಿಸಬೇಕು ಹಾಗೂ ಸರ್ಕಾರದ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಬಕೆಂದರು.

ಇದೇ ವೇಳೆ ಶಿವಮೊಗ್ಗದಲ್ಲಿ 60 ಮತ್ತು 80 ದಶಕದಲ್ಲಿ ಉದ್ದಿಮೆ ನಿರ್ಮಿಸಲು ಇದ್ದ ಸವಾಲುಗಳ ಕುರಿತು ಸ್ಮರಿಸಿದ ಅವರು ಪ್ರಸ್ತುತ ಕೈಗಾರಿಕೆ ಆರಂಭಿಸಲು ಸರ್ಕಾರದ ನೆರವು, ಟೆಕ್ಸಾಕ್, ಸಿಡಾಕ್ ಸಂಸ್ಥೆಯಂತಹ ಮಾರ್ಗದರ್ಶನ ಮತ್ತು ಉದ್ದಿಮೆಗೆ ಅವಶ್ಯಕವಾಗಿ ಬೇಕಾದ ಕೌಶಲ್ಯ ವೃದ್ದಿಸಲು ಕೌಶಲ್ಯಾಭಿವೃದ್ದಿ ಇಲಾಖೆಯೇ ಇದೆ ಎಂದರು.

ಇಂಡಸ್ಟ್ರಿಯಲ್ ಕಮಿಟಿಯ ಛೇರ್ಮನ್ ಎಂ.ರಾಜು ಸ್ವಾಗತಿಸಿದರು. ಟೆಕ್ಸಾಕ್‍ನ ಸಿಇಓ ರಮಾನಂದ ನಾಯಕ್ ಮಾತನಾಡಿದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಅಧಿಕ ನಿರ್ದೇಶಕ ಹೆಚ್.ಎಂ.ಶ್ರೀನಿವಾಸ್, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಸತ್ಯನಾರಾಯಣ ಭಟ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಆರ್.ಗಣೇಶ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ವಸಂತ ಹೋಬಳಿದಾರ, ಕೈಗಾರಿಕೋದ್ಯಮಿಗಳ ಸಂಘಗಳ ಅಧ್ಯಕ್ಷರಾದ ರಮೇಶ್ ಹೆಗ್ಡೆ, ಘೇವರ್‍ಚಂದ್, ಉಮೇಶ್ ಶಾಸ್ತ್ರಿ, ಸುರೇಶ್, ಕೈಗಾರಿಕಾ ಸಂಘಗಳ ಪದಾಧಿಕಾರಿಗಳು, ಹಿರಿಯ ಮತ್ತು ಕಿರಿಯ ಉದ್ದಿಮೆದಾರರು, ವಿದ್ಯಾರ್ಥಿಗಳು ಹಾಜರಿದ್ದರು.

ಜಿಲ್ಲೆಯ 571 ನ್ಯಾಯಬೆಲೆ ಅಂಗಡಿಗಳಲ್ಲಿ ಸಾರವರ್ಧಿತ ಅಕ್ಕಿ ವಿತರಣೆ

0

ಶಿವಮೊಗ್ಗ ಜಿಲ್ಲೆಯ 571 ನ್ಯಾಯಬೆಲೆ ಅಂಗಡಿಗಳ ಮೂಲಕ ಎಲ್ಲಾ ಪಡಿತರದಾರರಿಗೆ ಪ್ರಸಕ್ತ ಮಾಹೆಯಿಂದಲೇ ಸಾರವರ್ಧಿತ ಅಕ್ಕಿ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಅವರು ಹೇಳಿದರು.

ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ವಿವರ ನೀಡಿ ಮಾತನಾಡುತ್ತಿದ್ದರು. ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 75ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ತಮ್ಮ ಭಾಷಣದಲ್ಲಿ ಘೋಷಿಸಿದಂತೆ ಈ ಬಲವರ್ಧಿತ ಅಕ್ಕಿಯನ್ನು ಶಿವಮೊಗ್ಗ ಸೇರಿದಂತೆ ರಾಜ್ಯದ ಆಯ್ದ 18 ಜಿಲ್ಲೆಗಳಲ್ಲಿ ವಿತರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ವಿತರಿಸಲಾಗುತ್ತಿದೆ ಎಂದವರು ನುಡಿದರು.

ದೇಶದ ಪ್ರತಿಯೊಬ್ಬ ಬಡವರಿಗೂ ಪೌಷ್ಠಿಕಾಂಶವನ್ನು ಒದಗಿಸುವ ಹಾಗೂ ಮಹಿಳೆಯರು, ಮಕ್ಕಳು ಹಾಗೂ ಹಾಲುಣಿಸುವ ತಾಯಂದಿರಲ್ಲಿ ಅಪೌಷ್ಠಿಕತೆ ಮತ್ತು ಅವರ ಬೆಳವಣಿಯಲ್ಲಿ ಅಗತ್ಯ ಪೋಷಕಾಂಶಗಳ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಈ ಬಲವರ್ಧಿತ ಅಕ್ಕಿ ಸಹಕಾರಿಯಾಗಲಿದೆ. ಈಗಾಗಲೇ ಸರ್ಕಾರದ ಎಲ್ಲಾ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಊಟ ಯೋಜನೆ ಹಾಗೂ ಅಂಗನವಾಡಿ ಮಕ್ಕಳಿಗಾಗಿ ಇರುವ ಯೋಜನೆಗಳಲ್ಲಿ ಈ ಅಕ್ಕಿಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದವರು ನುಡಿದರು.

ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರಚೀಟಿದಾರರಿಗೆ ವಿತರಿಸಲಾಗುವ ಅಕ್ಕಿಯಲ್ಲಿ ಬಲವರ್ಧಿತ ಅಕ್ಕಿಯನ್ನು ಬೆರೆಸಿ ವಿತರಿಸಲಾಗುತ್ತದೆ. ಒಂದು ಕ್ವಿಂಟಾಲ್ ಅಕ್ಕಿಯಲ್ಲಿ ಒಂದು ಕೆ.ಜಿ. ಸಾರವರ್ಧಿತ ಅಕ್ಕಿಯನ್ನು ಬೆರೆಸಲಾಗಿರುತ್ತದೆ. ವೈಜ್ಞಾನಿಕ ವಿಧಾನಗಳಿಂದ ಬೆರೆಸಿ ವಿತರಿಸಲಾಗುವ ಈ ಅಕ್ಕಿಯನ್ನು ಗ್ರಾಹಕರು ಅನುಮಾನ, ಸಂಶಯದಿಂದ ನೋಡುವ ಅಗತ್ಯವಿಲ್ಲ. ಇದನ್ನು ಆಹಾರ ಗುಣಮಟ್ಟ ನಿಯಂತ್ರಣ ಇಲಾಖೆಯಿಂದ ದೃಢೀಕರಿಸಲಾಗಿದೆ ಎಂದವರು ತಿಳಿಸಿದ್ದಾರೆ.

ಈ ಬಲವರ್ಧಿತ ಅಕ್ಕಿಯಲ್ಲಿ ಕಬ್ಬಿಣಾಂಶ, ಪೋಲಿಕ್ ಆಮ್ಲ ಮತ್ತು ವಿಟಮಿನ್ ಬಿ-12, ಜಿಂಕ್, ವಿಟಮಿನ್-ಎ, ವಿಟಮಿನ್ ಬಿ-2, ವಿಟಮಿನ್‌ಬಿ-3, ವಿಟಮಿನ್ ಬಿ-6 ಮತ್ತಿತರ ಪೋಷಕಾಂಶಗಳನ್ನು ಸೇರ್ಪಡೆಗೊಳಿಸಲಾಗಿದೆ. ಈ ಬಲವರ್ಧಿತ ಅಕ್ಕಿಯು ಸಾಮಾನ್ಯ ಅಕ್ಕಿಯಂತೆಯೇ ಕಾಣಲಿದೆ. ಬೇಯಿಸುವ ಅಕ್ಕಿಯೊಂದಿಗೆ ಇದು ಬೆರೆತು ಹೋಗಲಿದೆ. ಬೆರೆತ ಅಕ್ಕಿಯಲ್ಲಿ ಯಾವುದೆ ಅಂತರ ಕಂಡುಬರಲಾರದು. ಈ ಅಕ್ಕಿಯಲ್ಲಿ ಯಾವುದೇ ಅಡ್ಡವಾಸನೆ, ಬಣ್ಣ ಮತ್ತು ರುಚಿಯಲ್ಲಿ ವೆತ್ಯಾಸ ಕಂಡುಬರುವುದಿಲ್ಲ ಎಂದವರು ತಿಳಿಸಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಡಾ. ಮಂಜುನಾಥ್ ಅವರು ಮಾತನಾಡಿ, ಜಿಲ್ಲೆಯಲ್ಲಿ 571 ನ್ಯಾಯಬೆಲೆ ಅಂಗಡಿಗಳಿದ್ದು, ಅವುಗಳಲ್ಲಿ 3,88,907 ಬಿ.ಪಿ.ಎಲ್. ಪಡಿತರದಾರರು, 1,02,142 ಎ.ಪಿ.ಎಲ್. ಪಡಿತರದಾರರು ಸೇರಿದಂತೆ ಒಟ್ಟು 491,989ಪಡಿತರ ಚೀಟಿದಾರರು ಬಲವರ್ಧಿತ ಅಕ್ಕಿಯನ್ನು ಪಡೆಯಲಿದ್ದಾರೆ ಎಂದವರು ನುಡಿದರು.

ಕಳೆದ ಸಾಲಿನಲ್ಲಿ ಅಕ್ರಮವಾಗಿ ಪಡಿತರ ಚೀಟಿಯನ್ನು ಹೊಂದಿದ್ದ 3,729 ಜನರನ್ನು ಗುರುತಿಸಿ, ಅವರಿಂದ ಸುಮಾರು 25 ಲಕ್ಷ ರೂ.ಗಳ ದಂಡವನ್ನು ವಸೂಲಿ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ 8,272, ಗ್ರಾಹಕರನ್ನು ಗುರುತಿಸಿ, 16 ಲಕ್ಷ ರೂ.ಗಳ ದಂಡ ವಸೂಲಿ ಮಾಡಲಾಗಿದೆ. ಆದಾಯ ತೆರಿಗೆ ಇಲಾಖೆ, ಸರ್ಕಾರಿ ನೌಕರರ ಹೆಚ್.ಆರ್.ಎಂ.ಎಸ್. ತಂತ್ರಾಂಶ ಮತ್ತು ಕಂದಾಯ ಇಲಾಖೆಗಳು ಹೊಂದಿರುವ ತಂತ್ರಾಂಶದ ಆಧಾರದ ಮೇಲೆ ಅಕ್ರಮ ಪಡಿತರ ಚೀಟಿದಾರರನ್ನು ಗುರುತಿಸಿ, ಅಂತಹವರ ಪಡಿತರ ಚೀಟಿಗಳನ್ನು ರದ್ದುಗೊಳಿಸಲಾಗುತ್ತಿದೆ ಅಲ್ಲದೆ ದಂಡ ವಸೂಲಿ ಮಾಡಲಾಗುತ್ತಿದೆ. ಈ ಪ್ರಕ್ರಿಯೆ ನಿರಂತರವಾಗಿ ಮುಂದುವರೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಡಾ.ಮಂಜುನಾಥ್, ಫುಡ್ ಕಾರ್ಪೋರೇಶನ್ ಆಫ್ ಇಂಡಿಯಾದ ವಿಭಾಗೀಯ ವ್ಯವಸ್ಥಾಪಕ ಭಗವಾನ್‌ಸಿಂಗ್, ಗುಣಮಟ್ಟ ನಿಯಂತ್ರಣಾಧಿಕಾರಿ ಶಿವಕುಮಾರ್ ಸೇರಿದಂತೆ ಆಹಾರ ಇಲಾಖೆಯ ಅಧಿಕಾರಿ-ಸಿಬ್ಬಂಧಿಗಳು ಉಪಸ್ಥಿತರಿದ್ದರು.

ಕೇದಾರನಾಥ ದೇಗುಲದ ಬಾಗಿಲು ತೆರೆದಿವೆ

0

ಸುಪ್ರಸಿದ್ಧ ಕೇದಾರನಾಥ ಧಾಮ ಇಂದಿನಿಂದ ಭಕ್ತರ ದರ್ಶನಕ್ಕೆ ಮುಕ್ತವಾಗಿದೆ.
ಬೆಳಗ್ಗೆ ದೇಗುಲದ ಬಾಗಿಲು ತೆರೆಯುವುದಕ್ಕೂ ಮುಂಚಿತವಾಗಿ ಧಾರ್ಮಿಕ ವಿಧಿ ಮತ್ತು ವೈದಿಕ ಮಂತ್ರಗಳ ಪಠಣ ನಡೆಯಿತು. ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಉಪಸ್ಥಿತರಿದ್ದರು.

ಪುರಾಣಪ್ರಸಿದ್ಧ ದೇವಸ್ಥಾನವನ್ನು 15 ಕ್ವಿಂಟಲ್​ ಹೂವುಗಳಿಂದ ಆಕರ್ಷಕವಾಗಿ ಅಲಂಕರಿಸಲಾಗಿದೆ. 10 ಸಾವಿರಕ್ಕೂ ಹೆಚ್ಚು ಯಾತ್ರಾರ್ಥಿಗಳು ಕೇದಾರನಾಥನ ದರ್ಶನ ಭಾಗ್ಯಕ್ಕೆ ಹಾತೊರೆಯುತ್ತಿದ್ದಾರೆ.ದೇವಾಲಯ ಓಪನ್​ ಆಗ್ತಿದ್ದಂತೆ ಮೊದಲಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಪೂಜೆ ಸಹ ಸಲ್ಲಿಸಲಾಗಿದೆ.

ಕೊರೋನಾ ಮುನ್ನೆಚ್ಚರಿಕೆ ಕ್ರಮವಾಗಿ ಗಂಗೋತ್ರಿ, ಯಮುನೋತ್ರಿ, ಕೇದಾರನಾಥ ಮತ್ತು ಬದರಿನಾಥ ದರ್ಶನಕ್ಕೆ ನಿಗದಿತ ಕಾಲಮಿತಿಯಲ್ಲಿ ಯಾತ್ರಾರ್ಥಿಗಳಿಗೆ ಅವಕಾಶ ನೀಡಲಾಗಿದೆ. ಚಾರ್​ ಧಾಮ್​ಗೆ ತೆರಳುವ ಯಾತ್ರಿಗಳು ಆನ್​ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ದೇಗುಲದ ವೆಬ್​ಸೈಟ್​ಗೆ ಭೇಟಿ ನೀಡಬೇಕಾಗುತ್ತದೆ.

ಬದರಿನಾಥಕ್ಕೆ 15,000, ಕೇದಾರನಾಥಕ್ಕೆ 12,000, ಗಂಗೋತ್ರಿಗೆ 7,000 ಮತ್ತು ಯಮುನೋತ್ರಿಗೆ 4,000 ಯಾತ್ರಾರ್ಥಿಗಳಿಗೆ ಮಾತ್ರ ಪ್ರವೇಶ ನೀಡಲಾಗಿದೆ. ಈ ಸ್ಥಳಗಳಿಗೆ ಭೇಟಿ ನೀಡಲು ಕೋವಿಡ್ ಪರೀಕ್ಷೆ ಕಡ್ಡಾಯ. ಲಸಿಕೆ ಪಡೆದುಕೊಂಡಿರುವ ಪ್ರಮಾಣ ಪತ್ರ ಒದಗಿಸುವುದು ಕೂಡಾ ಅವಶ್ಯಕವಾಗಿದೆ.