Thursday, April 17, 2025
Thursday, April 17, 2025

ಅಬ್ಬರಿಸಿದ ವಾರ್ನರ್ ಡೆಲ್ಲಿ ಎದುರು ಹೈದ್ರಾಬಾದ್ ಸೋಲು

Date:

ಸನ್​ರೈಸರ್ಸ್​​ ಹೈದರಾಬಾದ್ ವಿರುದ್ಧ ನಡೆದ ಹೈ ಸ್ಕೋರ್ ಗೇಮ್​​ನಲ್ಲಿ ಡೆಲ್ಲಿ ಪರ ಡೇವಿಡ್ ವಾರ್ನರ್ ಅಬ್ಬರಿಸಿದರು.

ಮೊದಲ ಓವರ್​ನಿಂದ ಸಂಪೂರ್ಣ 20 ಓವರ್ ವರೆಗೂ ಆಡಿದ ವಾರ್ನರ್ ಶತಕದ ಅಂಚಿಗೆ ಬಂದು ಅಜೇಯರಾಗಿ ಉಳಿದರು.
ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿಯಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅಮೋಘ ಪ್ರದರ್ಶನ ನೀಡಿ ಭರ್ಜರಿ ಗೆಲುವು ಸಾಧಿಸಿ ತನ್ನ ಪ್ಲೇ ಆಫ್ ಹಾದಿಯನ್ನು ಜೀವಂತವಾಗಿರಿಸಿದೆ.

ಮೊದಲ ಓವರ್​ನಿಂದ ಸಂಪೂರ್ಣ 20 ಓವರ್ ವರೆಗೂ ಆಡಿದ ವಾರ್ನರ್ ಶತಕದ ಅಂಚಿಗೆ ಬಂದು ಅಜೇಯರಾಗಿ ಉಳಿದರು. 58 ಎಸೆತಗಳನ್ನು ಅಜೇಯ 92 ರನ್ ಚಚ್ಚಿದ ವಾರ್ನರ್ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳು ಸೇರಿದ್ದವು. ಇದರ ಜೊತೆಗೆ ವಿಶೇಷ ದಾಖಲೆ ಕೂಡ ಬರೆದಿದ್ದಾರೆ. ಟಿ20 ಕ್ರಿಕೆಟ್ ಇತಿಹಾಸದಲ್ಲೇ ಇವರು ದಾಖಲೆಯ 89 ನೇ ಅರ್ಧಶತಕ ಗಳಿಸಿದರು. ಈ ಮೂಲಕ ವೆಸ್ಟ್‌ ಇಂಡೀಸ್‌ನ ದೈತ್ಯ ಕ್ರಿಸ್ ಗೇಲ್ (88 ಅರ್ಧಶತಕ) ದಾಖಲೆ ಮುರಿದಿದ್ದಾರೆ. ಅಲ್ಲದೆ ಐಪಿಎಲ್‌ನಲ್ಲೂ ದಾಖಲೆಯ 54ನೇ ಅರ್ಧಶತಕ ಬಾರಿಸಿದರು.

ಮೊದಲ ಓವರ್‌ನ ಭುನವೇಶ್ವರ್ ಕುಮಾರ್ ಬೌಲಿಂಗ್​ನಲ್ಲಿ ಮಂದೀಪ್‌ ಸಿಂಗ್‌ ಸೊನ್ನೆ ಸುತ್ತಿ ಪೆವಿಲಿಯನ್ ಸೇರಿಕೊಂಡರು. ನಂತರ ಬಂದ ಮಿಚೆಲ್‌ ಮಾರ್ಷ್‌ ನಿರೀಕ್ಷಿತ ಆಟವಾಡಲಿಲ್ಲ. ಆದರೆ 3ನೇ ವಿಕೆಟ್‌ಗೆ ಜೊತೆಯಾದ ವಾರ್ನರ್‌ ಹಾಗೂ ರಿಷಬ್‌ ಪಂತ್‌(26) ಉತ್ತಮ ಬ್ಯಾಟಿಂಗ್‌ನಿಂದ 48 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು.

ಭರ್ಜರಿಯಾಗಿ ಆಟವಾಡಿದ ಡೇವಿಡ್‌ ವಾರ್ನರ್‌ 92 ರನ್‌ (58 ಬಾಲ್‌, 12 ಬೌಂಡರಿ, 3 ಸಿಕ್ಸ್‌) ತಂಡಕ್ಕೆ ಬೆನ್ನೆಲುಬಾದರು. ಬಳಿಕ ಮಧ್ಯಮ ಕ್ರಮಾಂಕದಲ್ಲಿ ಬಂದ ರೋವ್ಮನ್‌ ಪೋವೆಲ್‌ 67* ರನ್‌ (35 ಬಾಲ್‌, 3 ಬೌಂಡರಿ, 6 ಸಿಕ್ಸ್‌) ಸಹ ಭರ್ಜರಿ ಬ್ಯಾಟಿಂಗ್‌ ಮೂಲಕ ಐಪಿಎಲ್‌ ಟೂರ್ನಿಯ ಚೊಚ್ಚಲ ಅರ್ಧಶತಕ ಸಿಡಿಸಿದರು.

ಹೈದರಬಾದ್‌ ಬೌಲಿಂಗ್‌ ದಾಳಿಯನ್ನ ಮನಬಂದಂತೆ ದಂಡಿಸಿದ ಈ ಜೋಡಿ 4ನೇ ವಿಕೆಟ್‌ಗೆ ಮುರಿಯದ 122(66 ಬಾಲ್) ರನ್‌ಗಳ ಜೊತೆಯಾಟವಾಡಿ ಅಬ್ಬರಿಸಿದರು. ಪರಿಣಾಮ ಡೆಲ್ಲಿ 20 ಓವರ್​​ಗೆ 3 ವಿಕೆಟ್ ನಷ್ಟಕ್ಕೆ 207 ರನ್ ಸಿಡಿಸಿತು.

ಗೆಲ್ಲಲು 208 ರನ್ ಗುರಿ ಪಡೆದ ಹೈದರಾಬಾದ್ ತಂಡ ನಿಕೊಲಸ್ ಪೂರನ್ (62 ರನ್, 34 ಎಸೆತ, 2 ಬೌಂಡರಿ, 6 ಸಿಕ್ಸರ್) ಏಕಾಂಗಿ ಹೋರಾಟದ ಹೊರತಾಗಿಯೂ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತು. ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ(7)ಹಾಗೂ ನಾಯಕ ವಿಲಿಯಮ್ಸನ್(4)ವಿಕೆಟನ್ನು ಅಲ್ಪ ಮೊತ್ತಕ್ಕೆ ಕಳೆದುಕೊಂಡಿತು. ಏಡೆನ್ ಮರ್ಕ್ರಾಮ್ (42 ರನ್) ಹಾಗೂ ರಾಹುಲ್ ತ್ರಿಪಾಠಿ(22) ಎರಡಂಕೆಯ ಸ್ಕೋರ್ ಗಳಿಸಿದರು. ಡೆಲ್ಲಿ ಪರ 3 ವಿಕೆಟ್ ಕಿತ್ತು ಖಲೀಲ್ ಅಹ್ಮದ್ ಯಶಸ್ವಿ ಬೌಲರ್ ಎನಿಸಿಕೊಂಡರೆ, ಶಾರ್ದೂಲ್ ಠಾಕೂರ್(2-44) ಎರಡು ವಿಕೆಟ್ ಪಡೆದರು. ಡೇವಿಡ್ ವಾರ್ನರ್ ಪಂದ್ಯಶ್ರೇಷ್ಠ ಬಾಜಿಕೊಂಡರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sonia Gandhi ಸೋನಿಯಾ & ರಾಹುಲ್ ಮೇಲೆ ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣ- ಶಿವಮೊಗ್ಗ ಎನ್ಎಸ್ ಯು ಐ ಆರೋಪ- ಪ್ರತಿಭಟನೆ

ಕೇಂದ್ರ ಬಿ ಜೆ ಪಿ ಸರ್ಕಾರ ಜಾರಿ ನಿರ್ದೇಶನಾಲಯದ ಮೂಲಕ ನ್ಯಾಷನಲ್...

MESCOM ಏಪ್ರಿಲ್ 18 ಆಲ್ಕೊಳ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ...

ದತ್ತಿ ನಿಧಿ ಕಾರ್ಯಕ್ರಮಗಳು ಸಮಾಜಮುಖಿಯಾಗಿರಲಿ-ಮಾನಸ ಶಿವರಾಮಕೃಷ್ಣ

ವಮೊಗ್ಗ ಜಿಲ್ಲಾ ಲೇಖಕಿಯರ ಮತ್ತು ವಾಚಕಿಯರ ಸಂಘದಿಂದ ದತ್ತಿ ಕಾರ್ಯಕ್ರಮ ಆಯೋಜಿಸಲಾಗಿತ್ತು....