Wednesday, March 26, 2025
Wednesday, March 26, 2025

ಜಿಲ್ಲೆಯ 571 ನ್ಯಾಯಬೆಲೆ ಅಂಗಡಿಗಳಲ್ಲಿ ಸಾರವರ್ಧಿತ ಅಕ್ಕಿ ವಿತರಣೆ

Date:

ಶಿವಮೊಗ್ಗ ಜಿಲ್ಲೆಯ 571 ನ್ಯಾಯಬೆಲೆ ಅಂಗಡಿಗಳ ಮೂಲಕ ಎಲ್ಲಾ ಪಡಿತರದಾರರಿಗೆ ಪ್ರಸಕ್ತ ಮಾಹೆಯಿಂದಲೇ ಸಾರವರ್ಧಿತ ಅಕ್ಕಿ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಅವರು ಹೇಳಿದರು.

ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ವಿವರ ನೀಡಿ ಮಾತನಾಡುತ್ತಿದ್ದರು. ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 75ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ತಮ್ಮ ಭಾಷಣದಲ್ಲಿ ಘೋಷಿಸಿದಂತೆ ಈ ಬಲವರ್ಧಿತ ಅಕ್ಕಿಯನ್ನು ಶಿವಮೊಗ್ಗ ಸೇರಿದಂತೆ ರಾಜ್ಯದ ಆಯ್ದ 18 ಜಿಲ್ಲೆಗಳಲ್ಲಿ ವಿತರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ವಿತರಿಸಲಾಗುತ್ತಿದೆ ಎಂದವರು ನುಡಿದರು.

ದೇಶದ ಪ್ರತಿಯೊಬ್ಬ ಬಡವರಿಗೂ ಪೌಷ್ಠಿಕಾಂಶವನ್ನು ಒದಗಿಸುವ ಹಾಗೂ ಮಹಿಳೆಯರು, ಮಕ್ಕಳು ಹಾಗೂ ಹಾಲುಣಿಸುವ ತಾಯಂದಿರಲ್ಲಿ ಅಪೌಷ್ಠಿಕತೆ ಮತ್ತು ಅವರ ಬೆಳವಣಿಯಲ್ಲಿ ಅಗತ್ಯ ಪೋಷಕಾಂಶಗಳ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಈ ಬಲವರ್ಧಿತ ಅಕ್ಕಿ ಸಹಕಾರಿಯಾಗಲಿದೆ. ಈಗಾಗಲೇ ಸರ್ಕಾರದ ಎಲ್ಲಾ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಊಟ ಯೋಜನೆ ಹಾಗೂ ಅಂಗನವಾಡಿ ಮಕ್ಕಳಿಗಾಗಿ ಇರುವ ಯೋಜನೆಗಳಲ್ಲಿ ಈ ಅಕ್ಕಿಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದವರು ನುಡಿದರು.

ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರಚೀಟಿದಾರರಿಗೆ ವಿತರಿಸಲಾಗುವ ಅಕ್ಕಿಯಲ್ಲಿ ಬಲವರ್ಧಿತ ಅಕ್ಕಿಯನ್ನು ಬೆರೆಸಿ ವಿತರಿಸಲಾಗುತ್ತದೆ. ಒಂದು ಕ್ವಿಂಟಾಲ್ ಅಕ್ಕಿಯಲ್ಲಿ ಒಂದು ಕೆ.ಜಿ. ಸಾರವರ್ಧಿತ ಅಕ್ಕಿಯನ್ನು ಬೆರೆಸಲಾಗಿರುತ್ತದೆ. ವೈಜ್ಞಾನಿಕ ವಿಧಾನಗಳಿಂದ ಬೆರೆಸಿ ವಿತರಿಸಲಾಗುವ ಈ ಅಕ್ಕಿಯನ್ನು ಗ್ರಾಹಕರು ಅನುಮಾನ, ಸಂಶಯದಿಂದ ನೋಡುವ ಅಗತ್ಯವಿಲ್ಲ. ಇದನ್ನು ಆಹಾರ ಗುಣಮಟ್ಟ ನಿಯಂತ್ರಣ ಇಲಾಖೆಯಿಂದ ದೃಢೀಕರಿಸಲಾಗಿದೆ ಎಂದವರು ತಿಳಿಸಿದ್ದಾರೆ.

ಈ ಬಲವರ್ಧಿತ ಅಕ್ಕಿಯಲ್ಲಿ ಕಬ್ಬಿಣಾಂಶ, ಪೋಲಿಕ್ ಆಮ್ಲ ಮತ್ತು ವಿಟಮಿನ್ ಬಿ-12, ಜಿಂಕ್, ವಿಟಮಿನ್-ಎ, ವಿಟಮಿನ್ ಬಿ-2, ವಿಟಮಿನ್‌ಬಿ-3, ವಿಟಮಿನ್ ಬಿ-6 ಮತ್ತಿತರ ಪೋಷಕಾಂಶಗಳನ್ನು ಸೇರ್ಪಡೆಗೊಳಿಸಲಾಗಿದೆ. ಈ ಬಲವರ್ಧಿತ ಅಕ್ಕಿಯು ಸಾಮಾನ್ಯ ಅಕ್ಕಿಯಂತೆಯೇ ಕಾಣಲಿದೆ. ಬೇಯಿಸುವ ಅಕ್ಕಿಯೊಂದಿಗೆ ಇದು ಬೆರೆತು ಹೋಗಲಿದೆ. ಬೆರೆತ ಅಕ್ಕಿಯಲ್ಲಿ ಯಾವುದೆ ಅಂತರ ಕಂಡುಬರಲಾರದು. ಈ ಅಕ್ಕಿಯಲ್ಲಿ ಯಾವುದೇ ಅಡ್ಡವಾಸನೆ, ಬಣ್ಣ ಮತ್ತು ರುಚಿಯಲ್ಲಿ ವೆತ್ಯಾಸ ಕಂಡುಬರುವುದಿಲ್ಲ ಎಂದವರು ತಿಳಿಸಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಡಾ. ಮಂಜುನಾಥ್ ಅವರು ಮಾತನಾಡಿ, ಜಿಲ್ಲೆಯಲ್ಲಿ 571 ನ್ಯಾಯಬೆಲೆ ಅಂಗಡಿಗಳಿದ್ದು, ಅವುಗಳಲ್ಲಿ 3,88,907 ಬಿ.ಪಿ.ಎಲ್. ಪಡಿತರದಾರರು, 1,02,142 ಎ.ಪಿ.ಎಲ್. ಪಡಿತರದಾರರು ಸೇರಿದಂತೆ ಒಟ್ಟು 491,989ಪಡಿತರ ಚೀಟಿದಾರರು ಬಲವರ್ಧಿತ ಅಕ್ಕಿಯನ್ನು ಪಡೆಯಲಿದ್ದಾರೆ ಎಂದವರು ನುಡಿದರು.

ಕಳೆದ ಸಾಲಿನಲ್ಲಿ ಅಕ್ರಮವಾಗಿ ಪಡಿತರ ಚೀಟಿಯನ್ನು ಹೊಂದಿದ್ದ 3,729 ಜನರನ್ನು ಗುರುತಿಸಿ, ಅವರಿಂದ ಸುಮಾರು 25 ಲಕ್ಷ ರೂ.ಗಳ ದಂಡವನ್ನು ವಸೂಲಿ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ 8,272, ಗ್ರಾಹಕರನ್ನು ಗುರುತಿಸಿ, 16 ಲಕ್ಷ ರೂ.ಗಳ ದಂಡ ವಸೂಲಿ ಮಾಡಲಾಗಿದೆ. ಆದಾಯ ತೆರಿಗೆ ಇಲಾಖೆ, ಸರ್ಕಾರಿ ನೌಕರರ ಹೆಚ್.ಆರ್.ಎಂ.ಎಸ್. ತಂತ್ರಾಂಶ ಮತ್ತು ಕಂದಾಯ ಇಲಾಖೆಗಳು ಹೊಂದಿರುವ ತಂತ್ರಾಂಶದ ಆಧಾರದ ಮೇಲೆ ಅಕ್ರಮ ಪಡಿತರ ಚೀಟಿದಾರರನ್ನು ಗುರುತಿಸಿ, ಅಂತಹವರ ಪಡಿತರ ಚೀಟಿಗಳನ್ನು ರದ್ದುಗೊಳಿಸಲಾಗುತ್ತಿದೆ ಅಲ್ಲದೆ ದಂಡ ವಸೂಲಿ ಮಾಡಲಾಗುತ್ತಿದೆ. ಈ ಪ್ರಕ್ರಿಯೆ ನಿರಂತರವಾಗಿ ಮುಂದುವರೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಡಾ.ಮಂಜುನಾಥ್, ಫುಡ್ ಕಾರ್ಪೋರೇಶನ್ ಆಫ್ ಇಂಡಿಯಾದ ವಿಭಾಗೀಯ ವ್ಯವಸ್ಥಾಪಕ ಭಗವಾನ್‌ಸಿಂಗ್, ಗುಣಮಟ್ಟ ನಿಯಂತ್ರಣಾಧಿಕಾರಿ ಶಿವಕುಮಾರ್ ಸೇರಿದಂತೆ ಆಹಾರ ಇಲಾಖೆಯ ಅಧಿಕಾರಿ-ಸಿಬ್ಬಂಧಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of School Education ಮಾರ್ಚ್ 27 & 28 ರಂದು ಜಿಲ್ಲಾಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ‌ ಕ್ರೀಡಾಕೂಟ

Department of School Education ಶಾಲಾ ಶಿಕ್ಷಣ ಇಲಾಖೆಯು 2024-25ನೇ ಸಾಲಿನ...

BJP Protest 18 ಶಾಸಕರ ಅಮಾನತು. ಸರ್ಕಾರದಿಂದ ಅಧಿಕಾರ ದುರುಪಯೋಗ. ಜಿಲ್ಲಾ ಬಿಜೆಪಿ‌‌ ಪ್ರತಿಭಟನೆ

BJP Protest ಮುಸ್ಲಿಮರಿಗೆ ಅಸಂವಿಧಾನಿಕ 4% ಮೀಸಲಾತಿ, SCP-TSP ನಿಧಿಗಳ ದುರ್ಬಳಕೆ,...

ಶೀಘ್ರ ಬಾಡಿಗೆ ಕರಾರನ್ನ ನವೀಕರಣಗೊಳಿಸಿ- ಪಿ.ಮಂಜುನಾಥ್

ಶಿವಮೊಗ್ಗ ನಗರದ ಬಸ್ ನಿಲ್ದಾಣದ ಅವರಣದಲ್ಲಿರುವ ಅಂಗಡಿ ಮಳಿಗೆಗಳ ಬಾಡಿಗೆ ಕರಾರು...

World Tuberculosis Day ಕ್ಷಯರೋಗವು ಹರಡುವ ರೋಗ ಕುಟುಂಬಸ್ಥರು ಬಹಳ ಎಚ್ಚರದಿಂದಿರಬೇಕು- ಡಾ.ಕೆ. ಎಸ್.ನಟರಾಜ್

World Tuberculosis Day ಕ್ಷಯರೋಗ ಒಬ್ಬರಿಂದ ಒಬ್ಬರಿಗೆ ಹರಡುವ ರೋಗವಾಗಿದ್ದು ಭಾರತ...