ಜೆಡಿಎಸ್ ಪಕ್ಷ ಹಮ್ಮಿಗೊಂಡಿರುವ ಜನತಾ ಜಲಧಾರೆ ಸೇರಿದಂತೆ ಪಕ್ಷದ ಯಾವುದೇ ಚಟುವಟಿಕೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಮಾನಸ ಪುತ್ರ ವೈ.ಎಸ್.ವಿ.ದತ್ತಾ ಸುಳಿದಿಲ್ಲ. ಆದ್ದರಿಂದ ಪಕ್ಷ ಬಿಡುವ ಚಿಂತನೆಯಲ್ಲಿ ದತ್ತಾ ಇದ್ದಾರಾ ಎನ್ನುವ ಚರ್ಚೆ ಈಗ ರಾಜ್ಯ ರಾಜಕಾರಣದಲ್ಲಿ ಹರಿದಾಡುತ್ತಿದೆ.
ದತ್ತಾ ಕಾಂಗ್ರೆಸ್ ಸೇರುತ್ತಾರೆ ಎನ್ನುವ ಮಾತುಗಳು ಕೂಡ ಇದೆ. ಇದೆಲ್ಲದಕ್ಕೂ ವೈ.ಎಸ್.ವಿ.ದತ್ತಾ ಅಡ್ಡ ಗೋಡೆ ಮೇಲೆ ದೀಪವಿಟ್ಟಂತೆ ನಾನು ಜೆಡಿಎಸ್‌ನಲ್ಲಿ ಇರುತ್ತೇನೆ ಎಂದು ಹೇಳುವುದಕ್ಕೂ ಕಾಲ ಬರಬೇಕು. ಮಾತ್ರವಲ್ಲದೇ ಕಾಂಗ್ರೆಸ್ ಸೇರುತ್ತೇನೆ ಎಂದು ಹೇಳುವುದಕ್ಕೂ ಸಮಯ ಬರಬೇಕೆಂದು ಚಿಕ್ಕಮಗಳೂರಿನಲ್ಲಿ ದತ್ತಾ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮ ಮಿತ್ರರೊಂದಿಗೆ ಮಾತಾನಾಡಿ ಕಾಲ ಬಂದಾಗ ನನ್ನ ನಿರ್ಧಾರ ಹೇಳುತ್ತೇನೆ. ಎಲ್ಲದಕ್ಕೂ ಸಮಯ ಬರಬೇಕೆಂದರು. ಜೆಡಿಎಸ್ ತೊರೆಯುವ ಕುರಿತು ಮಾಧ್ಯಮದವರ ಪ್ರಶ್ನೆಯನ್ನು ನಯವಾಗಿ ತಿರಸ್ಕರಿಸಿದ ವೈ.ಎಸ್.ವಿ.ದತ್ತಾ ಮುಂದಿನ ದಿನಗಳಲ್ಲಿ ನಿರ್ಧಾರ ಪ್ರಕಟಿಸುತ್ತೇನೆಂದು ಹೇಳಿದರು.