ನಮ್ಮ ಪರಿಸರದ ಗಿಡಮರಗಳ ಬೇರನ್ನ ಹುಡುಕ ಬಹುದು.ಆದರೆ ಈ ಭ್ರಷ್ಟಾಚಾರದ ಬೇರನ್ನ ಹುಡುಕಿದರೆ ಎಲ್ಲಿಗೆ ಮುಟ್ಟುತ್ತೇವೆ? ಗೊತ್ತಿಲ್ಲ!.
ಈಗ ಪಿಎಸ್ ಐ ನೇಮಕಾತಿ ಹಗರಣ ಎಲ್ಲರಿಗೂ ತಿಳಿದ ಸುದ್ದಿ. ಹುದ್ದೆಗಳ ನೇಮಕಾತಿಗೆ ಹಣ ಕೊಡುವವರೇ ಮೊದಲು ಭ್ರಷ್ಟಾಚಾರ ಬೆಳೆಸಿದ ಹೊಣೆ ಹೊರಬೇಕಾಗುತ್ತದೆ. ಮನೆ ಮಾರುವುದು. ಐವತ್ತು ಲಕ್ಷ ಕೊಟ್ಟೆ ಎಂದು ಕಣ್ಣೀರು ಹಾಕುವುದು.!ಇವೆಲ್ಲ ಕೈಬಿಟ್ಟ ಹಣವನ್ನ ಮರಳಿ ಕೊಡುವಂತೆ ಮಾಡುವುದಿಲ್ಲ. ಬದಲಾಗಿ ಮಾಧ್ಯಮಗಳಿಗೆ ಒಂದಿಷ್ಟು ಆಹಾರವಷ್ಟೇ..
ಕೆಪಿಎಸ್ ಸಿ ಬರುವುದಕ್ಕೆ ಮುಂಚೆ ಜಿಲ್ಲಾ ನೇಮಕಾತಿ ಸಮಿತಿಗಳಿದ್ದವು.
ಅಲ್ಲಿ ನಡೆಯುತ್ತಿದ್ದದ್ದೂ ಇದೇ ವ್ಯವಹಾರವೆ? ಕಡಿಮೆ ಹಣ ಪೀಕುತ್ತಿದ್ದರು.ಅಂದರೆ ಆಸಾಮಿಗಳು ಕಡಿಮೆ ಆಸೆಯನ್ನ ಹೊಂದಿದ್ದರು.
ಈಗ ಎಲ್ಲದರ ಧಾರಣೆ ಏರಿದಂತೆ ನೇಮಕಾತಿ ವಲಯಕ್ಕೂ ಬಂದಿದೆ.
ಹಿಂದೆ ಪರಿಣಿತರ ಪಟ್ಟಿಯಿರುತ್ತಿತ್ತು. ಅವರು ನೇಮಕಾತಿ ಸಮಿತಿಯಲ್ಲಿರುತ್ತಿದ್ದರು. ಈಗ ಹಾಗಲ್ಲ ಪಕ್ಷಕ್ಕಾಗಿ ದುಡಿದ ಹೋರಾಟಗಾರರಿಗೆ ಗಂಜಿ ಕೇಂದ್ರಗಳಂತಾಗಿಬಿಟ್ಟಿವೆ. ಪರಿಣತಿ ಮಾತೇ ಇಲ್ಲ.ಅಧಿಕಾರಿಯೊಬ್ಬನ ಸೂತ್ರದಂತೆ ನಡೆಯುವುದೂ ಬಹಳ. ಕಡೆಗೆ ದಿನದ ಕಲೆಕ್ಷನ್ ಕೊಟ್ಟಂತೆ ಆಯಾ ನೇಮಕಾತಿ ಪ್ರಕ್ರಿಯೆ ಮುಗಿಯುವಷ್ಟರಲ್ಲಿ ಸೂಟ್ ಕೇಸು ಮನೆಗೆ ತಲುಪಿರುತ್ತದೆ. ಇದು ಎಲ್ಲಾ ಪಕ್ಷಗಳ ಆಡಳಿತದಲ್ಲೂ ನಡೆಯುವ ಸುಗ್ಗಿ.
ಕ್ಲಾಸ್ ಒನ್,ಕ್ಲಾಸ್ ಟು ಕೇಡರ್ ಗಳ ಮಾರುಕಟ್ಟೆ ಮಿತಿಯೇ ಇಲ್ಲ. ಕೋಟಿಗಟ್ಟಲೆ ವ್ಯಾಪಾರ. ಇದು ಎಲ್ಲ ರಾಜಕೀಯದವರಿಗೂ ಗೊತ್ತಿರುವ ಸಂಗತಿ. ಮುಚ್ಚಿಟ್ಟ
ನಡೆದು ಎಷ್ಟೋ ವರ್ಷಗಳಾಗಿವೆ .ಹೊರಬಂದಿಲ್ಲ.ಈಗ ಕೆಲವು ಹೊರಬರುತ್ತಿವೆ.
ನಮ್ಮದೇ ವ್ಯವಸ್ಥೆ. ನಾವೇ ತೆರಿಗೆ ಕಟ್ಟುವವರು. ನೇಮಕಾತಿ ವಲಯಗಳಲ್ಲಿ ಈ ರೀತಿಯ ಭ್ರಷ್ಟತೆಯ ಬೀಜ ಬಿತ್ತಿದರೆ ಅದು ಪ್ರತೀಬಾರಿಯೂ ಕ್ರಿಮಿಯಂತೆ ನಮ್ಮ ಸಮಾಜವನ್ನ ಹಾಳುಮಾಡುತ್ತಿರುತ್ತದೆ. ಈಗ ಅದೇ ಆಗಿದೆ.
ಮಾಧ್ಯಮಗಳ ಮುಂದೆ ಅತ್ತುಬಿಟ್ಟರೆ ಏನೂ ಸಾಧನೆಯಾಗುವುದಿಲ್ಲ.
ಈ ನಡುವೆ ಪ್ರತಿಭೆಯನ್ನ ನೆಚ್ಚಿಕೊಂಡು ಆಯ್ಕೆಯಾದವರೂ ಬಲಿಪಶುಗಳಾಗುತ್ತಾರಲ್ಲ ಅದಕ್ಕೆ ಯಾರು ಹೊಣೆ?