Monday, March 2, 2026
Monday, March 2, 2026
Home Blog Page 1568

ಆಗ ಕೋವಿಡ್ ಈಗ ಮಂಕಿಪಾಕ್ಸ್!

0

ಕರೋನಾ ನಂತರ, ಇದೀಗ ಜಗತ್ತು ಹೊಸ ರೀತಿಯ ಕಾಯಿಲೆಯ ಹಿಡಿತದಲ್ಲಿ ಸಿಲುಕಿಕೊಳ್ಳುತ್ತಿದೆ. ಈ ರೋಗದ ಹೆಸರು ಮಂಕಿಪಾಕ್ಸ್ ವೈರಸ್, ಇದು ಇದೀಗ ಸಮುದಾಯ ಹರಡುವಿಕೆ ರೂಪ ಪಡೆದುಕೊಳ್ಳುತ್ತಿದೆ.

ಬ್ರಿಟನ್‌ನಲ್ಲಿ ಮೇ 7 ರಂದು ಇತ್ತೀಚೆಗೆ ನೈಜೀರಿಯಾಕ್ಕೆ ಪ್ರಯಾಣಿಸಿದ ರೋಗಿಯಲ್ಲಿ ಈ ರೋಗದ ಲಕ್ಷಣಗಳು ಮೊದಲ ಬಾರಿಗೆ ಕಂಡುಬಂದಿದ್ದವು ಎಂಬುದು ಇಲ್ಲಿ ಗಮನಾರ್ಹ. ಕ್ರಮೇಣ ಈ ರೋಗವು ಈಗ ಯುರೋಪ್ ಮತ್ತು ಉತ್ತರ ಅಮೆರಿಕಾದಲ್ಲಿಯೂ ಹರಡುತ್ತಿದೆ.
ಮಂಕಿ ಪಾಕ್ಸ್ ಸೋಂಕಿತ ವ್ಯಕ್ತಿ ಬಳಸಿದ ಹಾಸಿಗೆ ಅಥವಾ ಟವೆಲ್ ಅನ್ನು ಮರುಬಳಕೆ ಮಾಡುವ ಮೂಲಕ ಸಾಮಾನ್ಯವಾಗಿ ಮಂಕಿಪಾಕ್ಸ್ ವೈರಸ್ ಹರಡುತ್ತದೆ. ಜ್ವರ, ಸ್ನಾಯು ನೋವು, ಶೀತ, ಸುಸ್ತು, ಮತ್ತು ಕೈ ಮತ್ತು ಮುಖದ ಮೇಲೆ ಚಿಕನ್ಪಾಕ್ಸ್ ತರಹದ ದದ್ದುಗಳು ಏಳುವುದು ಈ ರೋಗದ ಪ್ರಮುಖ ಲಕ್ಷಣಗಳಾಗಿವೆ. ಈ ರೋಗಕ್ಕೆ ಯಾವುದೇ ಪ್ರತ್ಯೇಕ ಚಿಕಿತ್ಸೆ ಇಲ್ಲ, ಆದರೆ ಸಿಡುಬು ವಿರುದ್ಧದ ಲಸಿಕೆಯು ಮಂಕಿಪಾಕ್ಸ್ ಅನ್ನು ತಡೆಗಟ್ಟುವಲ್ಲಿ ಸುಮಾರು ಶೇ.85 ರಷ್ಟು ಪರಿಣಾಮಕಾರಿಯಾಗಿದೆ ಎಂದು ತಿಳಿದುಬಂದಿದೆ.

ಬ್ರಿಟನ್‌ನ ಆರೋಗ್ಯ ಸಂಸ್ಥೆಯ ಪ್ರಕಾರ, ದೇಶದಲ್ಲಿ ಮಂಕಿಪಾಕ್ಸ್ ವೈರಸ್ ಹರಡಲು ಪ್ರಾರಂಭಿಸಿದೆ. ಈ ಕುರಿತು ಮಾತನಾಡಿರುವ UKHSA ಮುಖ್ಯ ವೈದ್ಯಕೀಯ ಸಲಹೆಗಾರ ಸುಸಾನ್ ಹಾಪ್ಕಿನ್ಸ್, ನಾವು ಪಶ್ಚಿಮ ಆಫ್ರಿಕಾದ ವ್ಯಕ್ತಿಗಳೊಂದಿಗೆ ಯಾವುದೇ ಸಂಪರ್ಕವನ್ನು ಹೊಂದಿರದ ಪ್ರಕರಣಗಳನ್ನು ನೋಡುತ್ತಿದ್ದೇವೆ. ಅವರು ರೋಗಕ್ಕೆ ಗುರಿಯಾಗುತ್ತಿದ್ದಾರೆ. ಈ ಕಾಯಿಲೆಯಿಂದ ಬಳಲುತ್ತಿರುವವರ ದೈನಂದಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಸುಸಾನ್ ಹಾಪ್ಕಿನ್ಸ್ ಪ್ರಕಾರ,
ಈ ರೋಗವು ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶಗಳಲ್ಲಿ ವೇಗವಾಗಿ ಹರಡುತ್ತಿದೆ.
ಈ ರೋಗದ ಬಗ್ಗೆ ಜನರು ಜಾಗೃತರಾಗಬೇಕು. ಹೆಚ್ಚಿನ ವಯಸ್ಕರಲ್ಲಿ ಈ ರೋಗದ ಲಕ್ಷಣಗಳು ಸ್ವಲ್ಪಮಟ್ಟಿಗೆ ಕಾಣಿಸಿಕೊಳ್ಳಬಹುದು. ಆದ್ದರಿಂದ ಮಂಗನ ಕಾಯಿಲೆಯ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ ಮತ್ತು ತಕ್ಷಣ ಹತ್ತಿರದ ಆರೋಗ್ಯ ಕೇಂದ್ರಕ್ಕೆ ವರದಿ ಮಾಡಿ ವೈದ್ಯರನ್ನು ಸಂಪರ್ಕಿಸಿ ಎಂದು ಸುಸಾನ್ ಹಾಪ್ಕಿನ್ಸ್ ಹೇಳಿದ್ದಾರೆ.

ಸರ್ಕಾರವು ಸಿಡುಬು ಲಸಿಕೆಯ ದಾಸ್ತಾನುಗಳನ್ನು ಖರೀದಿಸಲು ಪ್ರಾರಂಭಿಸಿದೆ ಎನ್ನಲಾಗಿದೆ.

ಜಗ್ಗದ ಬಗ್ಗದ ಪ್ಲಾಸ್ಟಿಕ್ ನಾಶಮಾಡಲು ಕಿಣ್ವದ ಸಂಶೋಧನೆ

0

ಪ್ಲಾಸ್ಟಿಕ್ ಅನ್ನು 16 ಗಂಟೆಗೂ ಕಡಿಮೆ ಅವಧಿಯಲ್ಲಿ ನಾಶಮಾಡುವ ಹೊಸ ಕಿಣ್ವವನ್ನು ಜರ್ಮನಿಯ ವಿಜ್ಞಾನಿಗಳು ಸಂಶೋಧಿಸಿದ್ದಾರೆ.

ಪಿಎಚ್‌ಎಲ್7 ಎಂದು ಹೆಸರಿಸಲಾದ ಈ ಕಿಣ್ವ 2016ರಲ್ಲಿ ಜಪಾನ್‌ನಲ್ಲಿ ಸಂಶೋಧಿಸಿದ ಎಲ್‌ಎಲ್ಸಿ ಕಿಣ್ವಕ್ಕಿಂತ ಕನಿಷ್ಟ 2 ಪಟ್ಟು ಕ್ಷಿಪ್ರವಾಗಿ ಕಾರ್ಯನಿರ್ವಹಿಸುತ್ತದೆ ಎಂದು ವರದಿಯಾಗಿದೆ.

ಸಾಮಾನ್ಯವಾಗಿ, ಪ್ಲಾಸ್ಟಿಕ್‌ಗಳು ಸಹಜವಾಗಿ ನಾಶವಾಗಲು ನೂರಾರು ವರ್ಷಗಳು ಬೇಕಾಗುತ್ತದೆ. ಆದರೆ, ಜರ್ಮನಿಯ ವಿಜ್ಞಾನಿಗಳು ದಾಖಲೆಯ ಕನಿಷ್ಟ ಅವಧಿಯಲ್ಲಿ ಪ್ಲಾಸ್ಟಿಕ್ ಅನ್ನು ನಾಶಗೊಳಿಸುವ ಕಿಣ್ವವನ್ನು ಅಭಿವೃದ್ಧಿಗೊಳಿಸಿದ್ದಾರೆ. ಜಾಗತಿಕವಾಗಿ ಪ್ಲಾಸ್ಟಿಕ್ ಮಾಲಿನ್ಯದ ಸಮಸ್ಯೆ ತೀವ್ರಗೊಂಡಿರುವ ಈ ಸಂದರ್ಭದಲ್ಲಿ ಜರ್ಮನಿಯ ವಿಜ್ಞಾನಿಗಳ ಸಾಧನೆ ಅತ್ಯಂತ ನಿರ್ಣಾಯಕವಾಗಿದೆ.

ಪಾಲಿಸ್ಟರ್ ಹೈಡ್ರೊಲೇಸ್ ಎಂದು ಹೆಸರಿಸಲಾದ ಈ ಕಿಣ್ವವು ಇತ್ತೀಚೆಗೆ ಜರ್ಮನಿಯ ಸ್ಮಶಾನವೊಂದರಲ್ಲಿ ಗೊಬ್ಬರವನ್ನು ಜಗಿಯುತ್ತಿರುವುದನ್ನು ಪತ್ತೆಹಚ್ಚಿದ ಲೀಪ್‌ಝಿಗ್ ವಿವಿಯ ವಿಜ್ಞಾನಿಗಳು ಅದನ್ನು ಪ್ರಯೋಗಾಲಯಕ್ಕೆ ಕೊಂಡೊಯ್ದರು. ಅಲ್ಲಿ ನಡೆಸಿದ ಪ್ರಯೋಗದಲ್ಲಿ ಈ ಕಿಣ್ವವು ಪ್ಲಾಸ್ಟಿಕ್ ಅನ್ನು 16 ಗಂಟೆಗೂ ಕಡಿಮೆ ಅವಧಿಯಲ್ಲಿ ನಾಶ ಪಡಿಸುವುದು ದೃಢಪಟ್ಟಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ವಿಜ್ಞಾನಿಗಳ ಸಂಶೋಧನಾ ವರದಿ ಚೆಮ್‌ಸುಸ್‌ಚೆಮ್ ವೈಜ್ಞಾನಿಕ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಪಿಎಚ್‌ಎಲ್ 7 ಕಿಣ್ವವು ಪರ್ಯಾಯ ಶಕ್ತಿ ಉಳಿಸುವ ಪ್ಲಾಸ್ಟಿಕ್ ಮರುಬಳಕೆಯ ಪ್ರಕ್ರಿಯೆಗಳನ್ನು ಸ್ಥಾಪಿಸಲು ಪ್ರಮುಖ ಕೊಡುಗೆ ನೀಡುತ್ತದೆ ಎಂದು ಲೀಪ್‌ಝಿಗ್ ವಿವಿಯ ವಿಜ್ಞಾನಿ ವೋಲ್ಫ್‌ಗ್ಯಾಂಗ್ ಝಿಮರ್‌ಮನ್ ಹೇಳಿದ್ದಾರೆ.

‘ಶಾ’ಣಕ್ಯರಿಂದ ರಾಜ್ಯದ ಹಾಲಿ ವಿಧಾನ ಸಭಾ ಸದಸ್ಯರ ಮೌಲ್ಯಮಾಪನ

0

ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೇನು ಕೇವಲ ಒಂದೇ ಒಂದು ವರ್ಷ ಬಾಕಿ ಇದೆ. ರಾಜ್ಯದಲ್ಲಿ ಸ್ವತಂತ್ರವಾಗಿ ಪಕ್ಷವನ್ನು ಅಧಿಕಾರಕ್ಕೆ ತರಲು ಬಿಜೆಪಿ ಹೈಕಮಾಂಡ್ ತನ್ನದೇ ಆದ ಕಾರ್ಯತಂತ್ರ ರೂಪಿಸುತ್ತಿದೆ.

ರಾಜ್ಯದ 30 ಕ್ಷೇತ್ರಗಳಲ್ಲಿರುವ ಬಿಜೆಪಿಯ ಹಾಲಿ ಶಾಸಕರಿಗೆ ಕೋಕ್ ನೀಡಿ, ಹೊಸ ಮುಖಗಳಿಗೆ ಟಿಕೆಟ್ ನೀಡಲು ಗಂಭೀರ ಚಿಂತನೆ ಪಕ್ಷದಲ್ಲಿ ನಡೆದಿವೆ ಎಂದು ಬಿಜೆಪಿ ಉನ್ನತ ಮೂಲಗಳು ಖಚಿತಪಡಿಸಿವೆ.

ಕೇಂದ್ರ ಗೃಹಸಚಿವ ಅಮಿತ್ ಶಾ ಸೂಚನೆ ಮೇರೆಗೆ ಖಾಸಗಿ ಏಜೆನ್ಸಿಯ 150 ಸದಸ್ಯರು ರಾಜ್ಯದಲ್ಲಿ ಠಿಕಾಣಿ ಹೂಡಿ ಸಮೀಕ್ಷೆ ನಡೆಸಿದ್ದಾರೆ. ಮೇ 1ರಂದು ರಾಜ್ಯಕ್ಕೆ ಭೇಟಿ ನೀಡಿದ್ದ ಈ ತಂಡ ಮೇ 15ರವರೆಗೆ ಪ್ರತಿ ವಿಧಾನಸಭೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ. ಗೌಪ್ಯವಾಗಿ ನಡೆದ ಸಮೀಕ್ಷಾ ವರದಿಯನ್ನು ಕೇಂದ್ರ ಸಚಿವ ಅಮಿತ್ ಶಾಗೆ ಸಲ್ಲಿಸಿದೆ ಎಂದು ಹೇಳಲಾಗಿದೆ.

ಕಳೆದೊಂದು ದಶಕದಿಂದ ದೇಶದಲ್ಲಿ ಬಿಜೆಪಿ ವರ್ಚಸ್ಸು ಹೆಚ್ಚಿದೆ. ಅನೇಕ ರಾಜ್ಯಗಳಲ್ಲಿ ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದಿದೆ. ದಕ್ಷಿಣ ಭಾರತದಲ್ಲಿ ಕರ್ನಾಟಕ ಬಿಟ್ಟರೆ ಬೇರೆ ರಾಜ್ಯಗಳಲ್ಲಿ ಬಿಜೆಪಿ ಸಂಘಟನಾತ್ಮಕವಾಗಿ ಬೆಳೆದಿಲ್ಲ. ಆದ್ದರಿಂದ, ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಸ್ವತಂತ್ರವಾಗಿ ಅಧಿಕಾರಕ್ಕೆ ತರಲು ಬಿಜೆಪಿ ದೊಡ್ಡದೊಂದು ಉಪಾಯ ಮಾಡಿದೆ. ಅದಕ್ಕಾಗಿಯೇ ಅಮಿತ್ ಶಾ ರಾಜ್ಯದಲ್ಲಿ ಖಾಸಗಿ ಏಜೆನ್ಸಿಯಿಂದ ಸರ್ವೆ ಮಾಡಿಸಿದ್ದಾರೆ ಎನ್ನಲಾಗುತ್ತದೆ.

ಸಮೀಕ್ಷಾ ವರದಿ ಅಮಿತ್ ಶಾ ಕೈ ಸೇರಿದೆ. ರಾಜ್ಯದ 30 ಕ್ಷೇತ್ರದ ಹಾಲಿ ಶಾಸಕರಿಗೆ ಮುಂದಿನ ಚುನಾವಣೆಯಲ್ಲಿ ಕೋಕ್ ನೀಡಬೇಕು. ಹೊಸ ಮುಖಗಳಿಗೆ ಅವಕಾಶ ನೀಡಬೇಕು. ಅದರಿಂದ ಬಿಜೆಪಿ ಮತ್ತಷ್ಟು ಸಂಘಟನಾತ್ಮಕವಾಗಿ ಬೆಳೆಯಲು ಅನುಕೂಲವಾಗಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಜನರ ಸಮಸ್ಯೆಗೆ ಸ್ಪಂದಿಸದ, ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸದ, ಸಂಘಟನೆಯಲ್ಲಿ ತೊಡಗದ ರಾಜ್ಯದ 30 ಹಾಲಿ ಶಾಸಕರನ್ನು ಈ ತಂಡ ಪಟ್ಟಿ ಮಾಡಿದೆ. ಮುಂದಿನ ಚುನಾವಣೆಯಲ್ಲಿ ಇವರಿಗೆ ಟಿಕೆಟ್ ನೀಡಿದರೆ ಅಲ್ಲಿ ಪಕ್ಷಕ್ಕೆ ಹಿನ್ನಡೆ ಆಗಲಿದೆ ಎಂದೂ ಈ ತಂಡ ವರದಿಯಲ್ಲಿ ಸಲಹೆ ನೀಡಿದೆ ಎಂದು ಮೂಲಗಳು ಖಚಿತಪಡಿಸಿವೆ.

ಖಾಸಗಿ ಏಜೆನ್ಸಿ ನೀಡಿದ ವರದಿ ಅನುಷ್ಠಾನವಾದರೆ ರಾಜ್ಯದ 30 ಹಾಲಿ ಬಿಜೆಪಿ ಶಾಸಕರು ಮುಂದಿನ ಚುನಾವಣೆಯಲ್ಲಿ ಟಿಕೆಟ್ ವಂಚಿತರಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಿಂದ ಮಳೆಹಾನಿ ಪ್ರದೇಶಗಳಿಗೆ ಭೇಟಿ

0

ಶಿವಮೊಗ್ಗ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಸುಮಾರು 40ಕೋಟಿ ರೂ. ಹಾನಿ ಅಂದಾಜಿಸಲಾಗಿದ್ದು, ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಶೀಘ್ರ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ ಅವರು ತಿಳಿಸಿದರು.

ಅವರು ಸೋಮವಾರ ಶಿವಮೊಗ್ಗ ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಅತಿವೃಷ್ಟಿಯಿಂದ ಹಾನಿಗೀಡಾಗಿರುವ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಒಂದು ವಾರ ಸುರಿದ ಅಕಾಲಿಕ ಮಳೆಯಿಂದಾಗಿ ನಗರ ಪ್ರದೇಶದಲ್ಲಿ ನೀರು ಮನೆಗಳಿಗೆ ನುಗ್ಗಿ ವ್ಯಾಪಕ ಹಾನಿ ಉಂಟಾಗಿದೆ. ಇದೇ ರೀತಿ ಮೆಕ್ಕೆಜೋಳ ಹಾಗೂ ಭತ್ತದ ಬೆಳೆಗಳಿಗೂ ಹಾನಿ ಉಂಟಾಗಿದೆ. ಸುಮಾರು 3ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ. 2139ಮನೆಗಳಿಗೆ ಭಾಗಶಃ ಹಾನಿ ಉಂಟಾಗಿದೆ. 24ಶಾಲೆಗಳು ಹಾಗೂ 17ಅಂಗನವಾಡಿ ಕಟ್ಟಡಗಳಿಗೆ ಹಾನಿ ಉಂಟಾಗಿದೆ. ಬೆಳೆ ಹಾನಿಗೆ ಪ್ರಸ್ತುತ ಹೆಕ್ಟೇರ್‍ಗೆ 13ರಿಂದ 15ಸಾವಿರ ರೂ. ಪರಿಹಾರ ಒದಗಿಸಲಾಗುತ್ತಿದೆ. ಇದನ್ನು ಹೆಚ್ಚಿಸುವ ಕುರಿತು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಮಾತನಾಡಿ, ಮಳೆಯಿಂದ ಶಿವಮೊಗ್ಗ ನಗರದ 7ವಾರ್ಡ್‍ಗಳಲ್ಲಿ ನೀರು ತುಂಬಿ ಹಾನಿ ಉಂಟಾಗಿದೆ. ಪ್ರತಿ ವರ್ಷ ಮಳೆಯಿಂದ ತೊಂದರೆಗೊಳಗಾಗುವ ಪ್ರದೇಶಗಳನ್ನು ಗುರುತಿಸಿ ಶಾಶ್ವತ ಪರಿಹಾರ ಕಂಡು ಕೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅತಿವೃಷ್ಟಿಯಿಂದ ಶಿಕಾರಿಪುರ ಹಾಗೂ ಸೊರಬ ತಾಲೂಕಿನಲ್ಲಿ ಮೆಕ್ಕೆಜೋಳ ಸುಮಾರು 30ಕ್ವಿಂಟಾಲ್ ಬೆಳೆ ಹಾನಿ ಉಂಟಾಗಿದೆ. ಕೆರೆಕಟ್ಟೆ ಒಡೆದು ಭತ್ತ ಹಾಗೂ ಅಡಿಕೆ ತೋಟಗಳಿಗೂ ವ್ಯಾಪಕ ಹಾನಿ ಉಂಟಾಗಿದ್ದು, ರೈತರಿಗೆ ಸೂಕ್ತ ಪರಿಹಾರವನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು.

ಶಿವಮೊಗ್ಗ ನಗರದ ಕೋರ್ಟ್ ಮುಂಭಾಗ, ಬಾಪೂಜಿ ನಗರ, ಹೊಳೆಹೊನ್ನೂರು ರಸ್ತೆ, ಬಿ.ಬೀರನಹಳ್ಳಿಯಲ್ಲಿ ಕೆರೆ ಒಡೆದು ಹಾನಿಗೀಡಾಗಿರುವ ರೈತರ ಜಮೀನು, ನ್ಯೂ ಮಂಡ್ಲಿ ಪ್ರದೇಶಗಳಿಗೆ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶಾಸಕ ಅಶೋಕ ನಾಯ್ಕ್, ಡಿ.ಎಸ್.ಅರುಣ್, ಮಹಾನಗರ ಪಾಲಿಕೆ ಮೇಯರ್ ಸುನಿತಾ ಅಣ್ಣಪ್ಪ, ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೈಶಾಲಿ, ಸ್ಮಾರ್ಟ್‍ಸಿಟಿ ಮ್ಯಾನೇಜಿಂಗ್ ಡೈರೆಕ್ಟರ್ ಚಿದಾನಂದ ವಟಾರೆ, ಉಪವಿಭಾಗಾಧಿಕಾರಿ ಪ್ರಕಾಶ್ ಮತ್ತಿತರ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಶಿವಮೊಗ್ಗದಲ್ಲಿ ವಿದ್ವಾಂಸ ಡಾ.ನಾರಾಯಣಾಚಾರ್ಯರಿಗೆ ನುಡಿ ನಮನ

0

ತಾ.22-5-22 ರಂದು ಶಿವಮೊಗ್ಗದಲ್ಲಿ ನಾಡಿನ ಸುಪ್ರಸಿದ್ಧ ವಿದ್ವಾಂಸ ಡಾ.ಕೆ.ಎಸ್.ನಾರಾಯಣಾ ಚಾರ್ಯರ ಸ್ಮರಣೆ ಕಾರ್ಯಕ್ರಮ ನಡೆಯಿತು.
ನಾರಾಯಣ ಸ್ಮರಣೆ ಕಾರ್ಯಕ್ರಮವನ್ನ ಸಂಸದ ಶ್ರೀ ಬಿ.ವೈ.ರಾಘವೇಂದ್ರ ಅವರು ಆಚಾರ್ಯರ ಪ್ರಕಟಿತ ಕೃತಿಗಳ ಬಳಿ ಸಾಲುದೀಪ ಬೆಳಗಿಸಿದರು.
ನಿರ್ಭೀತಿಯಿಂದ ಕಟು ಸತ್ಯಗಳನ್ನು, ದೇಶದ ಭವ್ಯ ಪರಂಪರೆಯನ್ನು, ಕೃತಿಗಳಮೂಲಕ ಅವರ ಮಾತುಗಳ ಮೂಲಕ ಹಿಡಿದಿಟ್ಟು, ಅದನ್ನು ಜನಮಾನಸಕ್ಕೆ ದಾಟಿಸುತ್ತ ಬಂದಿದ್ದ ಒಬ್ಬ ಮೇಧಾವಿ ಸಂತನ ಸ್ಮರಣೆಯನ್ನು ಅತ್ಯಂತ ವಿನಮ್ರತೆಯಿಂದ
ಮಾಡಲಾಯಿತು.

ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಅಜೇಯ ಸಂಸ್ಕೃತಿ ಬಳಗ ಹಾಗೂ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘ ಜಂಟಿಯಾಗಿ ಶ್ರೀ ಡಾ. ಕೆ.ಎಸ್. ನಾರಾಯಣಾಚಾರ್ಯ ರವರ ದಿವ್ಯ ಸ್ಮರಣೆಯ ಸಾರ್ಥಕ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಮಾನ್ಯ ಸಂಸದರಾದ ಶ್ರೀ ಬಿ.ವೈ ರಾಘವೇಂದ್ರ ರವರು ನಾರಾಯಣಾಚಾರ್ಯರು ಜೀವಿತದಲ್ಲಿ ಸರ್ಕಾರದ ಮನ್ನಣೆ ಸಿಗದೇ ವಂಚಿತರಾದ ಬಗ್ಗೆ ತಿಳಿದು ಖೇದವಾಗಿದೆ.ಇನ್ನುಮುಂದಾದರೂ ಸರಸ್ವತಿಪುತ್ರರಾದ ಅವರ ಕೊಡುಗೆ ಬಗ್ಗೆ ವಿವೇಚಿಸಬೇಕಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ನಾರಾಯಣ ಸ್ಮರಣೆ ಸಮಿತಿಯ ಗೌರವಾಧ್ಯಕ್ಷ ಶ್ರೀ ದತ್ತಾತ್ರೇಯ ಅವರು ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಹಾಗೂ ಡಾ. ಎಸ್. ಎಲ್. ಎನ್. ಸ್ವಾಮಿ ರವರು ಪ್ರೊ. ಕೆ.ಎಸ್. ನಾರಾಯಣಾಚಾರ್ಯ ರವರ ಬಗ್ಗೆ ಅದ್ಬುತ ಉಪನ್ಯಾಸವನ್ನು ನೀಡಿದರು…

ಆಂಗ್ಲ ಸಾಹಿತ್ಯಕ್ಕೆ ಸಂಬಂಧಿಸಿದ ವಿಷಯದಲ್ಲಿ ಡಾಕ್ಟರೇಟ್ ಮಾಡಿದ್ದ ಪ್ರೊ. ನಾರಾಯಣಾಚಾರ್ಯರು ಇನ್ನೊಂದೆಡೆ ವೇದಾಧ್ಯಯನದಲ್ಲೂ, ವಿಶೇಷವಾಗಿ ಕೃಷ್ಣ ಯಜುರ್ವೇದದಲ್ಲಿ ಪಾರಂಗತರಾಗಿದ್ದರು. ವೇದ ಸಂಸ್ಕೃತಿಯ ಪರಿಚಯ, ರಾಮಾಯಣ ಪಾತ್ರ ಪ್ರಪಂಚ, ಶ್ರೀ ಕೃಷ್ಣಾವತಾರದ ಕೊನೆಯ ಗಳಿಗೆಗಳು, ಮಹಾಭಾರತ ಕಾಲನಿರ್ಣಯ ಹೀಗೆ ಅವರ ಕೃತಿಗಳ ಹೆಸರೇ ಅವರು ಬಿಟ್ಟುಹೋಗಿರುವ ಮಹಾಸಂಪತ್ತಿನ ಪರಿಚಯವನ್ನು ಕೊಡುವಂಥದ್ದಾಗಿದೆ…

ಅವರ ಅಗಲಿಕೆ ದೇಶದ ಹಾಗೂ ರಾಜ್ಯದ ವಿದ್ವಾಂಸ ಪರಂಪರೆಗೆ ಆದ ನಷ್ಟ, ಅವರ ಸಾವಿರಾರು ಲೇಖನಗಳು, ನೂರೈವತ್ತಕ್ಕೂ ಹೆಚ್ಚಿನ ಕೃತಿಗಳು, ವೈಚಾರಿಕ ಪ್ರಖರತೆ ಹಾಗೂ ನಿಷ್ಟುರತೆಗಳು ಮತ್ತಷ್ಟು ಜನರನ್ನು ಉದ್ದೀಪಿಸುತ್ತದೆ.

ಕಾರ್ಯಕ್ರಮವು ಶಾರದಾ ಸಂಗೀತ ವಿದ್ಯಾಲಯದ ಮಹಿಳೆಯರ ಪ್ರಾರ್ಥನೆಯೊಂದಿಗೆ ಆರಂಭವಾಯಿತು.
ವಂದಾನಾರ್ಪಣೆಯೊಂದಿಗೆ ಮುಗಿಯಿತು.

ಸ್ವಚ್ಛತೆ ಬಗ್ಗೆ ನಾಯಿ ಮಾಲಿಕರಿಗೆ ಸೀಎಂ ಯೋಗಿ ಅವರ ಸೂಚನೆ

0

ಉತ್ತರ ಪ್ರದೇಶದಲ್ಲಿ ಸ್ವಚ್ಛತೆ ವ್ಯವಸ್ಥೆ ಬಗ್ಗೆ ಗಮನ ಹರಿಸುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಜವಾಬ್ದಾರಿಯುತವಾದ ಒಂದು ಸೂಚನೆ ನೀಡಿದ್ದಾರೆ.

ಅದೇನು ಅಂದರೆ ಸಾಕು ನಾಯಿ ಸಾಕುವವರಿಗೆ ವಿಶೇಷ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಮನೆಯಲ್ಲಿ ಸಾಕಿದ ನಾಯಿಗಳನ್ನು ಸಾಕುವವರು ಬೀದಿಗೆ ಬಿಟ್ಟು ಕೊಳಕು ಮಾಡಬಾರದು ಎಂದು ಹೇಳಿದ್ದಾರೆ.

ಅಗತ್ಯವಿದ್ದರೆ ಅವುಗಳ ನೋಂದಾಯಿಸಲು ಖಚಿತಪಡಿಸಿಕೊಳ್ಳಿ. ಸಮಯಕ್ಕೆ ಸರಿಯಾಗಿ ಲಸಿಕೆ ಹಾಕುವುದನ್ನು ಸಹ ಖಚಿತಪಡಿಸಿಕೊಳ್ಳಿ. ಮಹಾನಗರ ಪಾಲಿಕೆ ಮತ್ತು ಇತರೆ ಜವಾಬ್ದಾರಿಯುತ ಇಲಾಖೆಗಳು ಈ ಬಗ್ಗೆ ಗಮನಹರಿಸಿ ಕ್ರಮಕೈಗೊಳ್ಳುವಂತೆ ತಿಳಿಸಿದ್ದಾರೆ.

ರಸ್ತೆ ನಿಮ್ಮ ಸೊಸೈಟಿಗೆ ಸೇರಿರಲಿ ಅಥವಾ ಮಹಾನಗರ ಪಾಲಿಕೆಗೆ ಸೇರಿರಲಿ, ಯಾರಾದರೂ ತಮ್ಮ ನಾಯಿಯನ್ನು ಶೌಚ ಮಾಡಿಸುವ ಉದ್ದೇಶದಿಂದ ಹೊರತಂದು ತಿರುಗಾಡಿಸುವುದನ್ನು ಕಂಡುಬಂದರೆ ತಕ್ಷಣವೇ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ವಾಸ್ತವವಾಗಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನಾಯಿ ಮಾಲೀಕರಿಗೆ ಅಂದರೆ ಸಾಕುಪ್ರಾಣಿಗಳ ಮಾಲೀಕರಿಗೆ ದೊಡ್ಡ ಆದೇಶವನ್ನು ಹೊರಡಿಸಿದ್ದಾರೆ. ನಾಯಿ ಸಾಕುವವರಿಗೆ ಸ್ವಚ್ಛತೆ ಬಗ್ಗೆ ಸ್ಪಷ್ಟ ಎಚ್ಚರಿಕೆ ನೀಡಿದ ಮುಖ್ಯಮಂತ್ರಿ ಯೋಗಿ, ಕಾನ್ಪುರ ಮತ್ತು ಲಖನೌ ನಾಯಿ ಮಾಲೀಕರಿಗೆ ಪ್ರಾಣಿಗಳನ್ನು ರಸ್ತೆಗೆ ಕರೆದೊಯ್ಯುವಾಗ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಿ. ಹಾಗೆ ಮಾಡದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಮೋದಿ ನೇತೃತ್ವದ ಸರ್ಕಾರ 2014ರಿಂದ 2022 ರವರೆಗೆ ನೀಡಿದ ಅಭಿವೃದ್ದಿ ವೆಚ್ಚದ ಮಾಹಿತಿ

0

2014 ರಿಂದ 2022 ರ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು 90.9 ಲಕ್ಷ ಕೋಟಿ ಹಣವನ್ನು ಅಭಿವೃದ್ಧಿ ವೆಚ್ಚಗಳಿಗೆ ವಿನಿಯೋಗಿಸಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದ್ದಾರೆ.

2004ರಿಂದ 2014 ರವರೆಗಿನ ಅಭಿವೃದ್ಧಿ ವೆಚ್ಚಗಳಿಗೆ ಕೇವಲ 49.2 ಲಕ್ಷ ಕೋಟಿ ಹಣವನ್ನು ಖರ್ಚು ಮಾಡಲಾಗಿದೆ. ಇದನ್ನು ಭಾರತೀಯ ರಿಸರ್ವ್ ಬ್ಯಾಂಕ್‌ನ ಅಂಕಿಅಂಶಗಳು ತೋರಿಸುತ್ತವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಂದಿನ ಯುಪಿಎ ಸರ್ಕಾರದ ಅಂಕಿ ಅಂಶಗಳನ್ನು ಮಾಹಿತಿ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಮಾಡಿದ ವೆಚ್ಚದಲ್ಲಿ ಆಹಾರ, ಇಂಧನ ಮತ್ತು ರಸಗೊಬ್ಬರ ಸಬ್ಸಿಡಿಗಾಗಿ ಇದುವರೆಗೆ 24.85 ಲಕ್ಷ ಕೋಟಿ ಮತ್ತು ಬಂಡವಾಳ ಸೃಷ್ಟಿಗೆ 26.3 ಲಕ್ಷ ಕೋಟಿ ಹಣವನ್ನು ಖರ್ಚು ಮಾಡಲಾಗಿದೆ ಎಂದು ಅವರು ಹೇಳಿದರು.

ಯುಪಿಎ ಆಡಳಿತದ 10 ವರ್ಷಗಳಲ್ಲಿ ಕೇವಲ 13.9 ಲಕ್ಷ ಕೋಟಿ ಮಾತ್ರ ಸಬ್ಸಿಡಿಗಾಗಿ ಖರ್ಚು ಮಾಡಲಾಗಿತ್ತು ಎಂದು ಅಂಕಿ ಅಂಶಗಳನ್ನು ಹೋಲಿಸಿ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲೂ ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆ ನಿರೀಕ್ಷೆಯಲ್ಲಿ ಜನತೆ

0

ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ತೆರಿಗೆ ಕಡಿತಗೊಳಿಸಿದೆ.

ರಾಜ್ಯದಲ್ಲಿಯೂ ತೆರಿಗೆ ಕಡಿತ ಮಾಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆಯನ್ನು 9.5 ರೂ., ಡೀಸೆಲ್ ಬೆಲೆಯನ್ನು 8 ರೂ.ನಷ್ಟು ಕಡಿಮೆ ಮಾಡಿದ್ದು, ಜನಸಾಮಾನ್ಯರಿಗೆ ಅನುಕೂಲವಾಗಿದೆ. ಇದೇ ರೀತಿ ರಾಜ್ಯದಲ್ಲಿ ತೆರಿಗೆ ಕಡಿಮೆ ಮಾಡಿ ಹೊರೆ ಇಳಿಸಬೇಕೆಂಬ ಅಭಿಪ್ರಾಯ ಕೇಳಿಬಂದಿದೆ.
ಇದಕ್ಕೆ ಪೂರಕವಾಗಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ತೆರಿಗೆ ಕಡಿತ ಮಾಡುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ಹೇಳಿದ್ದಾರೆ.

ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿಮೆ ಮಾಡಿದ ಬೆನ್ನಲ್ಲೇ ಕೇರಳ, ಒಡಿಶಾ, ಮಹಾರಾಷ್ಟ್ರದಲ್ಲಿ ತೆರಿಗೆ ಇಳಿಕೆ ಮಾಡಲಾಗಿದೆ.
ರಾಜ್ಯದಲ್ಲಿಯೂ ಸುಂಕ ಇಳಿಕೆ ಮಾಡಬೇಕೆಂದು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಮತ್ತು ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ಒತ್ತಾಯಿಸಿದ್ದಾರೆ.

ಈ ಹಿಂದೆ ಕೇಂದ್ರ ಸರ್ಕಾರ ತೈಲ ಬೆಲೆ ಕಡಿಮೆ ಮಾಡಿದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕೂಡ ತೆರಿಗೆ ಕಡಿತಗೊಳಿಸಿದ್ದು, ಈ ಬಾರಿ ಕೂಡ ಪೆಟ್ರೋಲ್-ಡೀಸೆಲ್ ತೆರಿಗೆ ಕಡಿತಗೊಳಿಸುವ ಸಾಧ್ಯತೆ ಇದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ದಾವೋಸ್ ಪ್ರವಾಸದಿಂದ ವಾಪಸಾದ ಬಳಿಕ ಈ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಇಬ್ಬರು ಉಗ್ರರನ್ನ ಬಂಧಿಸಿದ ಕಾಶ್ಮೀರ ಪೋಲಿಸ್

0

ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ (ಎಲ್​ಇಟಿ)ಯ ಇಬ್ಬರು ಸ್ಥಳೀಯ ಉಗ್ರರನ್ನು ಶ್ರೀನಗರದಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡುಗಳೊಂದಿಗೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇವರಿಬ್ಬರಿಂದ 15 ಪಿಸ್ತೂಲ್ 30,300 ರೌಂಡ್ ಗೊಂಡುಗಳು ಮತ್ತು ಸೈಲೆನ್ಸರ್ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಾಶ್ಮೀರದ ಪೊಲೀಸ್ ಮಹಾನಿರೀಕ್ಷಕ ವಿಜಯ್ ಕುಮಾರ್ ತಿಳಿಸಿದ್ದಾರೆ.

ಹೈಬ್ರಿಡ್ ಉಗ್ರಗಾಮಿಗಳು ಎಂದು ಪರಿಗಣಿಸಲಾಗಿದ್ದು ,ಭಯೋತ್ಪಾದಕ ದಾಳಿಯನ್ನು ನಡೆಸಿ ನಂತರ ದಿನನಿತ್ಯದ ಜೀವನ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೋಲಿಸರು ತಿಳಿಸಿದ್ದಾರೆ.
ಇದು ಪೊಲೀಸರಿಗೆ ದೊಡ್ಡ ಯಶಸ್ಸು ಎಂದು ಐಜಿಪಿ ಅವರು ತಿಳಿಸಿದ್ದಾರೆ.

ವಿದೇಶೀ ಸೈಕ್ಲರ್ ಮೆಚ್ವಿದ ಕರ್ನಾಟಕದ ಕಡಲ ತೀರ

0

ನಾರ್ವೇ ದೇಶದ ಪ್ರಜೆ ಎರಿಕ್ ಸೋಲ್ಹೀಮ್ ಅವರು ಕರ್ನಾಟಕದ ಉಡುಪಿ ಜಿಲ್ಲೆಯ ಕಡಲತೀರದ ರಸ್ತೆಯ ಚಿತ್ರವನ್ನು ಟ್ವೀಟ್ ಮಾಡಿ ವಿಶ್ವದ ಅತ್ಯಂತ ಸುಂದರವಾದ ಸೈಕ್ಲಿಂಗ್ ಮಾರ್ಗ ಎಂದು ಬರೆದುಕೊಂಡಿದ್ದಾರೆ.

ಸೋಲ್ಹೀಮ್ ಟ್ವೀಟ್‌ನಲ್ಲಿ, ವಿಶ್ವದ ಅತ್ಯಂತ ಸುಂದರವಾದ ಸೈಕ್ಲಿಂಗ್ ಮಾರ್ಗ ಯಾವುದೆಂದರೆ ಭಾರತದ, ಕರ್ನಾಟಕದ ಉಡುಪಿ ಕಡಲ ತೀರ ಎಂದು ಹೇಳಿದ್ದಾರೆ.

ನಾರ್ವೇ ದೇಶದ ಪ್ರಜೆ ಎರಿಕ್ ಸೋಲ್ಹೀಮ್ ಅವರು ಕರ್ನಾಟಕದ ಉಡುಪಿ ಜಿಲ್ಲೆಯ ಕಡಲತೀರದ ರಸ್ತೆಯ ಚಿತ್ರವನ್ನು ಟ್ವೀಟ್ ಮಾಡಿ ವಿಶ್ವದ ಅತ್ಯಂತ ಸುಂದರವಾದ ಸೈಕ್ಲಿಂಗ್ ಮಾರ್ಗ ಎಂದು ಬರೆದುಕೊಂಡಿದ್ದಾರೆ.

ಸೋಲ್ಹೈಮ್ ಚಿತ್ರವನ್ನು ಹಂಚಿಕೊಂಡ ನಂತರ ಚಿತ್ರಕ್ಕೆ 47,000 ಕ್ಕೂ ಹೆಚ್ಚು ಲೈಕ್​ಗಳು ಬಂದಿವೆ. ಆದರೆ ಎರಿಕ್ ಸೋಲ್ಹೀಮ್ ರಸ್ತೆಯ ಸ್ಥಳವನ್ನು ಬಹಿರಂಗಪಡಿಸಲಿಲ್ಲ.

ಆದರೆ, ಇದು ಉಡುಪಿ ಜಿಲ್ಲೆಯ ಬೈಂದೂರು ಸಮೀಪದ ಮರವಂತೆ ಬೀಚ್‌ ಎಂದು ನೆಟ್ಟಿಗರ ಅಭಿಪ್ರಾಯವಾಗಿದೆ.

ಸೋಲ್ಹೀಮ್ ಹಂಚಿಕೊಂಡ ಚಿತ್ರವನ್ನು ಮೂಲತಃ ಧೆನೇಶ್ ಅಣ್ಣಾಮಲೈ ತೆಗೆದಿದ್ದಾರೆ. ಅವರು ತಮ್ಮ Instagram ಹ್ಯಾಂಡಲ್ @aerial_holic ನಲ್ಲಿ ಚಿತ್ರವನ್ನು ಮೊದಲು ಹಂಚಿಕೊಂಡಿದ್ದಾರೆ. ಅವರು ಮಾರ್ಚ್ 9 ರಂದು ಚಿತ್ರವನ್ನು ಹಂಚಿಕೊಂಡಿದ್ದರು.