ನಾರ್ವೇ ದೇಶದ ಪ್ರಜೆ ಎರಿಕ್ ಸೋಲ್ಹೀಮ್ ಅವರು ಕರ್ನಾಟಕದ ಉಡುಪಿ ಜಿಲ್ಲೆಯ ಕಡಲತೀರದ ರಸ್ತೆಯ ಚಿತ್ರವನ್ನು ಟ್ವೀಟ್ ಮಾಡಿ ವಿಶ್ವದ ಅತ್ಯಂತ ಸುಂದರವಾದ ಸೈಕ್ಲಿಂಗ್ ಮಾರ್ಗ ಎಂದು ಬರೆದುಕೊಂಡಿದ್ದಾರೆ.
ಸೋಲ್ಹೀಮ್ ಟ್ವೀಟ್‌ನಲ್ಲಿ, ವಿಶ್ವದ ಅತ್ಯಂತ ಸುಂದರವಾದ ಸೈಕ್ಲಿಂಗ್ ಮಾರ್ಗ ಯಾವುದೆಂದರೆ ಭಾರತದ, ಕರ್ನಾಟಕದ ಉಡುಪಿ ಕಡಲ ತೀರ ಎಂದು ಹೇಳಿದ್ದಾರೆ.
ನಾರ್ವೇ ದೇಶದ ಪ್ರಜೆ ಎರಿಕ್ ಸೋಲ್ಹೀಮ್ ಅವರು ಕರ್ನಾಟಕದ ಉಡುಪಿ ಜಿಲ್ಲೆಯ ಕಡಲತೀರದ ರಸ್ತೆಯ ಚಿತ್ರವನ್ನು ಟ್ವೀಟ್ ಮಾಡಿ ವಿಶ್ವದ ಅತ್ಯಂತ ಸುಂದರವಾದ ಸೈಕ್ಲಿಂಗ್ ಮಾರ್ಗ ಎಂದು ಬರೆದುಕೊಂಡಿದ್ದಾರೆ.
ಸೋಲ್ಹೈಮ್ ಚಿತ್ರವನ್ನು ಹಂಚಿಕೊಂಡ ನಂತರ ಚಿತ್ರಕ್ಕೆ 47,000 ಕ್ಕೂ ಹೆಚ್ಚು ಲೈಕ್ಗಳು ಬಂದಿವೆ. ಆದರೆ ಎರಿಕ್ ಸೋಲ್ಹೀಮ್ ರಸ್ತೆಯ ಸ್ಥಳವನ್ನು ಬಹಿರಂಗಪಡಿಸಲಿಲ್ಲ.
ಆದರೆ, ಇದು ಉಡುಪಿ ಜಿಲ್ಲೆಯ ಬೈಂದೂರು ಸಮೀಪದ ಮರವಂತೆ ಬೀಚ್ ಎಂದು ನೆಟ್ಟಿಗರ ಅಭಿಪ್ರಾಯವಾಗಿದೆ.
ಸೋಲ್ಹೀಮ್ ಹಂಚಿಕೊಂಡ ಚಿತ್ರವನ್ನು ಮೂಲತಃ ಧೆನೇಶ್ ಅಣ್ಣಾಮಲೈ ತೆಗೆದಿದ್ದಾರೆ. ಅವರು ತಮ್ಮ Instagram ಹ್ಯಾಂಡಲ್ @aerial_holic ನಲ್ಲಿ ಚಿತ್ರವನ್ನು ಮೊದಲು ಹಂಚಿಕೊಂಡಿದ್ದಾರೆ. ಅವರು ಮಾರ್ಚ್ 9 ರಂದು ಚಿತ್ರವನ್ನು ಹಂಚಿಕೊಂಡಿದ್ದರು.