ಕನ್ನಡ ಸಾಹಿತ್ಯಕ್ಕೆ ಜೈನ ಕವಿಗಳು ನೀಡಿರುವ ಕೊಡುಗೆ ಅವಿಸ್ಮರಣೀಯವಾದದ್ದು. ಮತ್ತು ಕನ್ನಡದ ಭಾಷೆ ಹಾಗೂ ಸಾಹಿತ್ಯ ಶ್ರೀಮಂತ ಉಳಿಸುವುದಕ್ಕೆ ಜೈನ ಕವಿಗಳು ಅದರಲ್ಲೂ ವಿಶೇಷವಾಗಿ ಪಂಪ ಮಹಾಕವಿ ನೀಡಿರುವ ಕೊಡುಗೆ ಚಾರಿತ್ರಿಕ ವಾದುದು ಎಂದು ರಿಪ್ಪನ್ ಪೇಟೆಯ ಸರ್ಕಾರಿ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ರತ್ನಾಕರ ಸಿ ಕುನಗೋಡು ಅವರು ತಿಳಿಸಿದ್ದಾರೆ.
ಮೇ 21ರಂದು ಹೊಸನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ರಿಪ್ಪನ್ ಪೇಟೆಯ ಗೌಡಸಾರಸ್ವತ ಕಲ್ಯಾಣ ಮಂದಿರದಲ್ಲಿ ನಡೆದ ಹೊಂಬುಜ ಜೈನ ಮಠದ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ದತ್ತಿದಾನದಲ್ಲಿ ನಡೆದ ಕನ್ನಡ ಸಾಹಿತ್ಯಕ್ಕೆ ಪಂಪ ಮಹಾಕವಿಯ ಕೊಡುಗೆ ವಿಷಯವಾಗಿ ದತ್ತಿ ಉಪನ್ಯಾಸದಲ್ಲಿ ಮಾತನಾಡುತ್ತಾ ಹೇಳಿದರು.
ಇಂತಹ ದತ್ತಿ ಕಾರ್ಯಕ್ರಮಗಳು ಕನ್ನಡದ ಸಾಹಿತ್ಯದ ಮಜಲುಗಳನ್ನು ತಿಳಿಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟನೆ ಮಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಮಂಜುನಾಥ್ ಮಾತನಾಡಿ ಕನ್ನಡ ನಾಡಿಗೆ ಹಾಗೂ ಕನ್ನಡಕ್ಕೆ ಇರುವ ಇಂದಿನ ಆತಂಕದ ವಾತಾವರಣವನ್ನು ವಿವರಿಸುತ್ತಾ ಕನ್ನಡದ ಭಾಷೆ ಮತ್ತು ಸಂಸ್ಕೃತಿಯನ್ನು ಬಲಿಷ್ಠಗೊಳಿಸುವ ಅಗತ್ಯತೆ ಇದೆ. ಈ ಕಾರಣಕ್ಕಾಗಿ ಸಂಘಟನಾತ್ಮಕವಾಗಿ ಕಾರ್ಯಾಚರಿಸಬೇಕಾದ ಅನಿವಾರ್ಯತೆಯ ಹಿನ್ನಲೆಯಲ್ಲಿ ಎಲ್ಲಾ ಕನ್ನಡಿಗರು ಕೈಜೋಡಿಸಬೇಕೆಂದು ಹೇಳಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕು ಸಮಿತಿ ಅಧ್ಯಕ್ಷ ಎಂ.ಎಂ.ಪರಮೇಶ್ ಹಾಗೂ ಜಿಲ್ಲಾ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಹೊಸನಗರ ತಾಲೂಕು ಅಧ್ಯಕ್ಷ ನಗರ ರಾಘವೇಂದ್ರ ಮಾತನಾಡಿದರು. ಕಸಾಪ ಹಿರಿಯ ಸದಸ್ಯ ಮಂಜುನಾಥ್ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಹೊಸನಗರ ತಾಲೂಕು ಸಾಹಿತ್ಯ ಪರಿಷತ್ತಿನ ತಾಲೂಕು ಸಮಿತಿ ಅಧ್ಯಕ್ಷ ತ.ಮ.ನರಸಿಂಹ ಅವರು ವಹಿಸಿದ್ದರು ಕಾರ್ಯಕ್ರಮದ ಮಧ್ಯ- ಮಧ್ಯೆ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಹೆಚ.ಸಿ. ತಿಮ್ಮಪ್ಪ ಮತ್ತು ಕೃಷ್ಣರಾಜ ಹಾಗೂ ಕಸಾಪ ರವಿ ಕನ್ನಡ ಗೀತೆಗಳನ್ನು ಹಾಡಿದರು.
ಹೊಸನಗರದ ಬಾಲಪ್ರತಿಭೆ ಕುಮಾರಿ ಆರ್ವಿ ಕೀಬೋರ್ಡ್ ಪಿಯಾನೋ ನುಡಿಸಿ ರಂಜಿಸಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಹಾಕಿ ಆಟಗಾರ್ತಿ ರಿಪ್ಪನ್ ಪೇಟೆಯ ಕುಮಾರಿ ಪೂಜಿತ ಇವರನ್ನು ಹಾಗೂ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಮಂಜುನಾಥ್ ಮತ್ತು ಕೀಬೋರ್ಡ್ ಪಿಯಾನೋ ನುಡಿಸಿ ರಂಜಿಸಿದ ಕುಮಾರಿ ಅರ್ವಿ ಅವರನ್ನು ಸನ್ಮಾನಿಸಲಾಯಿತು. ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ರಿಪ್ಪನ್ ಪೇಟೆ ಹೋಬಳಿ ಸಮಿತಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಹೋಬಳಿ ಸಮಿತಿ ಘೋಷಿಸಲಾಯಿತು.
ಸಭೆಯ ಮೊದಲಲ್ಲಿ ಶ್ರೀಮತಿ ನಾಗರತ್ನ ದೇವರಾಜ್ ಪ್ರಾರ್ಥಿಸಿದರು. ಕಸಾಪ ತಾಲೂಕು ಸಮಿತಿ ಗೌರವ ಕಾರ್ಯದರ್ಶಿ ಹೆಚ್ಆರ್ ಪ್ರಕಾಶ್ ಸ್ವಾಗತಿಸಿದರು. ತಾಲೂಕು ಕಸಾಪ ಸಮಿತಿ ಸದಸ್ಯ ಕಸಾಪ ರವಿ ಯವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.