Monday, March 2, 2026
Monday, March 2, 2026
Home Blog Page 1567

ರಜನಿಕಾಂತ್:ಅತಿ ಹೆಚ್ಚು ಸಂಭಾವನೆ ಪಡೆದ ಭಾರತೀಯ ಚಿತ್ರತಾರೆ

0

ಭಾರತದ ಸೂಪರ್ ಸ್ಟಾರ್ ಎಂದೇ ಪ್ರಸಿದ್ದಿ ಪಡೆದಿರುವ ನಟ ರಜನಿಕಾಂತ್ ಅವರ ಪರಿಚಯ ಎಲ್ಲರಿಗೂ ಇದ್ದೆ ಇರತ್ತೆ. ರಜನಿಕಾಂತ್ ಅನೇಕ ವರ್ಷಗಳಿಂದ ಸಿನಿಮಾರಂಗದಲ್ಲಿ. ಅನೇಕ ಹಿಟ್ ಸಿನಿಮಾಗಳನ್ನು ಮಾಡುವ ಮುಖಾಂತರ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಅದೇ ರೀತಿ ತಮಿಳು ಸಿನಿಮಾರಂಗದ ಇತಿಹಾಸದಲ್ಲಿ ನಟ ರಜನಿಕಾಂತ್ ಅಚ್ಚರಿಯೊಂದಕ್ಕೆ ಕಾರಣ ಆಗಿದ್ದಾರೆ.

ಅದೇನು ಅಂದ್ರೆ, ರಜನಿಕಾಂತ್ ಅವರು ತಮ್ಮ ಸಂಭಾವನೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಅರೆ ಸಂಭಾವನೆ ಹೆಚ್ಚಿಸಿಕೊಳ್ಳುವುದು ಸಹಜ. ಅದರಲ್ಲೇನು ಆಶ್ಚರ್ಯ ಇರೋದಿಲ್ಲ ಅಲ್ವಾ. ಇದರಲ್ಲಿ ಅಚ್ಚರಿ ಪಡುವಂತಹದ್ದು ಏನಿದೆ ಎನ್ನುವ ಕುತೂಹಲ ನಿಮಗೆ ಮೂಡಬಹುದು.

ರಜನಿಕಾಂತ್ ಅವರು ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಳ್ಳುವುದರ ಮೂಲಕ ಮತ್ತೊಂದು ದಾಖಲೆಗೆ ಕಾರಣರಾಗಿದ್ದಾರೆ. ಈ ವಿಚಾರ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಏಕೈಕ ನಟ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ.

ನಿರ್ದೇಶಕ ನೆಲ್ಸನ್ ನಟ ರಜನಿಕಾಂತ್ ಮುಂದಿನ ಸಿನಿಮಾವನ್ನು ನಿರ್ಮಾಣವಾಗುತ್ತಿದೆ. ಇದು ನಟ ರಜನಿಕಾಂತ್ ಅವರ 169ನೇ ಸಿನಿಮಾ. ಇದೇ ಸಿನಿಮಾಗೆ ನಟ ರಜನಿಕಾಂತ್ ಅವರ 150 ಕೋಟಿ ರೂ. ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ. ಈ ಮೂಲಕ ರಜನಿಕಾಂತ್ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ನಟ ಎನಿಸಿಕೊಂಡಿದ್ದಾರೆ.

ಇದರಿಂದ ಈ ಸಿನಿಮಾದ ಬಜೆಟ್ ಎಷ್ಟು ಎನ್ನುವ ಅನೇಕ ಕುತೂಹಲಗಳು ಎಲ್ಲರಲ್ಲೂ ಮೂಡಿವೆ. ಮೂಲಗಳ ಪ್ರಕಾರ ಈ ಚಿತ್ರದ ಒಟ್ಟಾರೆ ಬಜೆಟ್ 250 ಕೋಟಿ ರೂ. ಎಂದು ತಿಳಿದು ಬಂದಿದೆ. ಈ ಚಿತ್ರ ಕೂಡ ದೊಡ್ಡ ಬಜೆಟ್‌ನಲ್ಲಿ ಅದ್ದೂರಿಯಾಗಿ ತಯಾರಾಗಲಿದೆ. ಆದರಿಂದ ಈ ಸಿನಿಮಾದ ಬಗ್ಗೆ ದೊಡ್ಡ ಪ್ರಮಾಣದ ನಿರೀಕ್ಷೆಗಳಿವೆ ಎಂದು ತಿಳಿದು ಬಂದಿದೆ.

ಕೇಂದ್ರ ಮಾದರಿ ವೇತನ ರಾಜ್ಯಕ್ಕೆ ಅನುಸರಣೆ ಪೂರ್ವಭಾವಿ ಸಭೆ

0

ಕೇಂದ್ರ ಮಾದರಿ ವೇತನ ಪರಿಷ್ಕರಣೆ ಕುರಿತಂತೆ ಇಂದು ಆರ್ಥಿಕ ಇಲಾಖೆಯ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.

ಈ ಸಭೆಯಲ್ಲಿ ಆರ್ಥಿಕ ಇಲಾಖೆಯ ಕಾರ್ಯದರ್ಶಿಗಳಾದ ಶ್ರೀ ಪಿ.ಸಿ. ಜಾಫರ್,ಐ.ಎ.ಎಸ್.,ರವರಿಗೆ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್.ಷಡಾಕ್ಷರಿರವರು ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ನಡುವೆ ಇರುವ ವೇತನ ಶ್ರೇಣಿ ಮತ್ತು ವೇತನ-ಭತ್ಯೆ ವ್ಯತ್ಯಾಸಗಳ ಕುರಿತಂತೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಆರ್ಥಿಕ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಸಂಘದ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಚಿತ್ತವಿಕಲತೆ ಕಾಯಿಲೆ ಪ್ರಾರಂಭಿಕ ಹಂತದಲ್ಲೇ ಪತ್ತೆಮಾಡಿ- ಡಾ.ಮುರಳೀಧರ್ ಪಿ. ಡಿ.

0

ಪ್ರತಿವರ್ಷ ಮೇ 24 ರಂದು ವಿಶ್ವ ಸ್ಕಿಜೋಫ್ರೀನಿಯಾ (ಚಿತ್ತ ವಿಕಲತೆ) ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ವರ್ಷ ಭರವಸೆಯನ್ನು ಬೆಸೆಯೋಣ ಎಂಬ ಘೋಷವಾಕ್ಯದೊಂದಿಗೆ ಸಮುದಾಯದಲ್ಲಿ ಮತ್ತು ಶಾಲಾ / ಕಾಲೇಜಿನ ವಿದ್ಯಾರ್ಥಿಗಳಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವತಿಯಿಂದ ದಾವಣಗೆರೆ ಜಿಲ್ಲೆಯಲ್ಲಿ ಜಾಗೃತಿಯನ್ನು ಮೂಡಿಸಲಾಗುತ್ತಿದೆ.

ಸ್ಕಿಜೋಫ್ರೇನಿಯಾವೊಂದು ತೀವ್ರತರವಾದ ಮಾನಸಿಕ ಖಾಯಿಲೆಯಾಗಿದೆ.
ಸ್ಕಿಜೋಫ್ರೇನಿಯಾ ಎಂದರೆ ಮನಸ್ಸಿನ ಕ್ರಿಯೆಗಳಲ್ಲಿ ಏರು ಪೇರು ಮಾತು ನಡತೆಯಲ್ಲಿ ವಿಚಿತ್ರ ಅಸಹಜ ರೂಪಗಳಾಗಿವೆ ಎಂದು ಹೇಳಬಹುದು.

ವಿಶ್ವ ಆರೋಗ್ಯ ಸಂಸ್ಥೆ ಸಮೀಕ್ಷೆ ಪ್ರಕಾರ ವಿಶ್ವಾದಾದ್ಯಂತ ಈ ಖಾಯಿಲೆಯೂ 24 ಮಿಲಿಯನ್ ಜನರನ್ನು ಬಾದಿಸುತ್ತಿದೆ. ಈ ಖಾಯಿಲೆಯೂ ಪ್ರತಿ 300 ಜನರಲ್ಲಿ ಒಬ್ಬರಿಗೆ ಬರಬಹುದಾಗಿದೆ. ಹಾಗೂ ಸಾಮಾನ್ಯವಾಗಿ 15 ರಿಂದ 30 ವರ್ಷದ ವಯಸ್ಸಿನವರಲ್ಲಿ ಕಾಣಿಸಿಕೊಳ್ಳುತ್ತದೆ. ಈ ಖಾಯಿಲೆಯು ಸ್ತ್ರೀ ಮತ್ತು ಪುರುಷರಲ್ಲಿ ಸಮಾನವಾಗಿ ಕಾಣಿಸಿಕೊಳ್ಳುತ್ತದೆ.
ಸ್ಕೀಜೊಫ್ರೇನಿಯಾ ಖಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯು ಅರ್ಥವಿಲ್ಲದ ಮತ್ತು ಅಸಂಭದ್ದ ಮಾತುಗಳು, ಸೂಕ್ತವಲ್ಲದ ಭಾವನೆಗಳನ್ನು ವ್ಯಕ್ತಪಡಿಸುವುದು, ಕಾರಣವಿಲ್ಲದೆ ಅಳುವುದು, ನಗುವುದು ಮತ್ತು ಕೋಪ ಮಾಡಿಕೊಳ್ಳುವುದು, ಭಾವನೆಗಳೇ ಇಲ್ಲದ ಹಾಗೆ ಇರುವುದು, ತನ್ನ ಲೋಕದಲ್ಲಿ ಒಂಟಿಯಾಗಿರುವುದು, ಇಲ್ಲದ ವಾಸನೆ, ಇದೆ ಎನ್ನುವುದು, ಸ್ಪರ್ಶಾನುಭವ ಸ್ವಚ್ಚತೆಯ ಬಗ್ಗೆ ನಿರ್ಲಕ್ಷ್ಯ ರೋಗಿಗೆ ಹಸಿವು ಮತ್ತು ಬಾಯಾರಿಕೆ ಬಗ್ಗೆ ನಿರ್ಲಕ್ಷ್ಯ ಕೆಲಸ ಕರ್ತವ್ಯಗಳನ್ನು ಮಾಡದೇ ಇರುವುದಾಗಿದೆ.

ಈ ಮೇಲ್ಕಂಡ ಲಕ್ಷಣಗಳನ್ನು ಪ್ರಾರಂಭಿಕ ಹಂತದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆ ನೀಡಬಹುದಾಗಿದೆ.
ಇದರಲ್ಲಿ ಭಯಪಡುವಂತಹದ್ದೇನಿಲ್ಲ. ಮಾನಸಿಕ ರೋಗಿಗಳು ಕೂಡ ನಮ್ಮ ನಿಮ್ಮಂತೆಯೇ ಮನುಷ್ಯರು ನಾವು ನೀವು ಸೇರಿ ಈ ತರನಾದ ರೋಗಿಗಳನ್ನು ಗುರುತಿಸಿ ಕಂಡುಬಂದಲ್ಲಿ ನಿಮ್ಮ ಹತ್ತಿರದ ಪ್ರಾಥಮಿಕ ಸಮುದಾಯ, ತಾಲ್ಲೂಕು ಆರೋಗ್ಯ ಕೇಂದ್ರ, ಪೋಲಿಸ್ ಇಲಾಖೆಗೆ ಅಥವಾ ಸರ್ಕಾರೇತರ ಸಂಸ್ಥೆಯವರಿಗೆ ಮಾಹಿತಿಯನ್ನು ನೀಡಿ ಅವರಿಗೆ ಮನೋವೈದ್ಯರ ತಂಡದವರಿಂದ ಚಿಕಿತ್ಸೆ ಕೊಡಿಸುವುದು, ಜೊತೆಗೆ ರೋಗಿಗಳ ಮೇಲೆ ಹಲ್ಲೆ, ದೌರ್ಜನ್ಯ, ಅಪಹಾಸ್ಯ ಮಾಡುವುದು, ಹುಚ್ಚ ಎಂದು ಕರೆಯುವುದು, ಮತ್ತು ರೋಗಿಯನ್ನು ಕೋಣೆಯಲ್ಲಿ ಬಂಧಿಸುವುದು ಶಿಕ್ಷಾರ್ಹ ಅಪರಾದ, ಈ ರೀತಿಯಾಗಿ ಮಾಡುತ್ತಿರುವವರ ವಿರುದ್ಧ ಮಾನಸಿಕ ಆರೋಗ್ಯ ಆರೈಕೆ ಕಾಯ್ದೆ 2017ರಡಿಯಲ್ಲಿ ದೂರನ್ನು ದಾಖಲಿಸಬಹುದಾಗಿದೆ.

ಇವುಗಳನ್ನು ತಡೆಯುವುದು, ರೋಗಿಯನ್ನು ಆರೈಕೆ ಮಾಡುವವರಿಲ್ಲದಿದ್ದರೆ ಅವರನ್ನು ಪುರ್ನವಸತಿ ಕೇಂದ್ರಗಳಿಗೆ ಸೇರಿಸುವುದು, ಅವರಿಗೆ ಸಾಮಾಜಿಕ ಬೆಂಬಲ ನೀಡುವುದಾಗಿದೆ. ಈ ರೀತಿಯಾಗಿ ನಾವು ನೀವು ಸ್ಕ್ಕಿಜೋಫ್ರೇನಿಯಾ ರೋಗಿಗಳಿಗೆ ಸಹಾಯ ಮಾಡಬಹುದಾಗಿದೆ.
ಒಟ್ಟಾರೆ ಪ್ರಸ್ತುತವಾಗಿ ನಮ್ಮ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ದಾವಣಗೆರೆ ಜಿಲ್ಲೆಯಲ್ಲಿ 3000 ಸಾವಿರಕ್ಕೂ ಹೆಚ್ಚು ಜನ ಮನೋರೋಗಿಗಳಿದ್ದು. ಅದರಲ್ಲಿ 750 ಕ್ಕೂ ಹೆಚ್ಚು ಸ್ಕೀಜೋಫ್ರೇನಿಯಾ ಖಾಯಿಲೆಗೆ ಒಳಗಾದ ಮನೊರೋಗಿಗಳೂ, ನಮ್ಮ ಕಾರ್ಯಕ್ರಮದಡಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಮ್ಮ ಕಾರ್ಯಕ್ರಮದಲ್ಲಿ ಮನೋವೈದ್ಯರ ತಂಡವಿದ್ದು. ಪ್ರತಿ ಮಂಗಳವಾರ ಮತ್ತು ಶುಕ್ರವಾರದಂದು ಸಮುದಾಯದಲ್ಲಿ ಜನಸಾಮಾನ್ಯರಲ್ಲಿ ಜಾಗೃತಿಯನ್ನು ಮೂಡಿಸಿ ತಾಲ್ಲೂಕುವಾರು (ಮನೋಚೈತನ್ಯ) ದಿನದಂದು ಮಾನಸಿಕ ಆರೋಗ್ಯ ಶಿಬಿರವನ್ನು ಏರ್ಪಡಿಸಿ, ಮನೊರೋಗಿಗಳಿಗೆ ಚಿಕಿತ್ಸೆ ಮತ್ತು ಆಪ್ತಸಮಾಲೋಚನೆಯನ್ನು ನೀಡುತ್ತಿದ್ದಾರೆ.

ಜೊತೆಗೆ ಜಿಲ್ಲೆಯಲ್ಲಿರುವ ವೈದ್ಯರಿಗೆ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರಿಗೆ, ಪೋಲೀಸ್ ಸಿಬ್ಬಂದಿಗಳಿಗೆ, ಮಹಿಳಾ ಮತ್ತು ಮಕ್ಕಳ ಇಲಾಖೆ, ಶಿಕ್ಷಣ ಇಲಾಖೆ ಸಿಬ್ಬಂದಿ ವರ್ಗದವರಿಗೆ, ಕೃಷಿ ಮತ್ತು ತೋಟಗಾರಿಕೆ ಸಿಬ್ಬಂದಿ ವರ್ಗದವರಿಗೂ, ಧಾರ್ಮಿಕ ಚಿಂತಕರುಗಳಿಗೆ ಸೇರಿದಂತೆ ಇನ್ನೂ ಮುಂತಾದ ಇಲಾಖಾವಾರು ಸಿಬ್ಬಂದಿಗಳಿಗೆ ಮಾನಸಿಕ ಆರೋಗ್ಯದ ಬಗ್ಗೆ, ಒತ್ತಡ ನಿರ್ವಹಣೆ ಬಗ್ಗೆ, ಆತ್ಮಹತ್ಯೆ ತಡೆಗಟ್ಟುವ ಕುರಿತು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಳೆದ 6 ವರ್ಷಗಳಿಂದಲೂ ಕೂಡ ಜಾಗೃತಿ ಮೂಡಿಸಲಾಗುತ್ತಿದೆ.

ನಮ್ಮ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಲ್ಲಿ ಸಿಗುವಂತಹ ಸೌಲಭ್ಯಗಳು: ಗುಣಮಟ್ಟದ ಔಷದಿ, ಚಿಕಿತ್ಸೆ, ಆಪ್ತಸಮಾಲೋಚನೆ ಮತ್ತು ಸಲಹೆ, ಮನೋವೈದ್ಯಕೀಯ ಶಿಕ್ಷಣ ಮತ್ತು, ಮನೆಭೇಟಿ ಕಾರ್ಯಕ್ರಮ, ವೃತ್ತಿಪರ ತರಬೇತಿ ಶಿಕ್ಷಣ, ಆರೋಗ್ಯ ಸಹಾಯವಾಣಿ “104” ಈ ರೀತಿಯ ಎಲ್ಲಾ ಸೌಲಭ್ಯಗಳು ಲಭ್ಯವಿದೆ.

ಡಾ.ಮುರಳಿಧರ ಪಿ. ಡಿ.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿಗಳು
ದಾವಣಗೆರೆ

ಹುಟ್ಟಿದ ಮಗುವಿಗೆ ಇನ್ನು ಸಿಗಲಿದೆ ಆಯುಷ್ಮಾನ್ ಭಾರತ್ ಐಡಿ

0

ಇಲ್ಲಿಯವರೆಗೆ ಹುಟ್ಟಿದ ಮಗುವಿಗೆ ಸಂಬಂಧಿಸಿದಂತೆ ಮಾಹಿತಿಯ ಸಂಪೂರ್ಣ ವಿವರ ಆಯುಷ್ಮಾನ್ ಆರೋಗ್ಯ ಭಾರತದ ಐಡಿಯಲ್ಲಿ ದಾಖಲಿಸಲಾಗುತ್ತಿರಲಿಲ್ಲ. ಆದ್ದರಿಂದ, ಕೆಲವು ಸಂದರ್ಭದಲ್ಲಿ ಮಗುವಿನ ಸಂಪೂರ್ಣ ಮಾಹಿತಿ ದೊರೆಯದೇ, ವೈದ್ಯರ ಚಿಕಿತ್ಸೆಗೆ ತೊಂದರೆ ಆಗಿತ್ತು.

ಆದರೆ ಇದಕ್ಕೆ ತೆರೆ ಬೀಳಲಿದೆ. ಹುಟ್ಟಿದ ಮಗುವಿಗೂ ಇನ್ನು ಮುಂದೆ ಆಯುಷ್ಮಾನ್ ಭಾರತ ಐಡಿ ದೊರೆಯಲಿದೆ.

ಈ ಕಾರ್ಡ್ ಸಿಗಲು, 18 ವರ್ಷ ಕಾಯುವ ಅಗತ್ಯವೂ ತಪ್ಪಲಿದೆ. ಹೆಲ್ತ್ ಐಡಿ ಎಂದು ಕರೆಯಲಾಗುವ ಇದರಲ್ಲಿ ಮಗುವಿನ ಆರೋಗ್ಯಕ್ಕೆ ಸಂಬಂಧಿಸಿದಂತ ಸಂಪೂರ್ಣ ಮಾಹಿತಿ ಇರಲಿದೆ.

ಮಗುವಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ವೈದ್ಯರಿಗೆ ಈ ಆಯುಷ್ಮಾನ್ ಭಾರತ ಐಡಿಯಲ್ಲಿ ಇರಲಿದೆ. ಆದ್ದರಿಂದ ಮಗುವಿನ ಆರೋಗ್ಯ ಸಮಸ್ಯೆಯನ್ನು ವೈದ್ಯರು ಈ ಐಡಿಯಲ್ಲಿ ಚೆಕ್ ಮಾಡಿ, ಒಂದೇ ಅಡಿಯಲ್ಲಿ ಮಗುವಿನ ಸಂಪೂರ್ಣ ಇತಿಹಾಸವೇ ದೊರೆತು, ಚಿಕಿತ್ಸೆಗೆ ಅನುಕೂಲವಾಗಲಿದೆ.

ಕುವೆಂಪು ವಿವಿ ಪದವಿ ಪರೀಕ್ಷೆ ಮುಂದೂಡಿಕೆ

0

ಕುವೆಂಪು ವಿವಿಯ ಆಂತರೀಕ ಮೌಲ್ಯಮಾಪನ ಆಧರಿಸಿ ಪ್ರಮೋಟ್ ಮಾಡಿದ್ದ ದೂರಶಿಕ್ಷಣ ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳ ಫಲಿತಾಂಶ ರದ್ದುಪಡಿಸಿ ಪರೀಕ್ಷೆ ನಡೆಸುವ ನಿರ್ಧಾರಕ್ಕೆ ಹೈಕೋರ್ಟ್ ತಡೆ ನೀಡಿತ್ತು.
ಆದರೆ ಇದುವರೆಗೂ ಮಧ್ಯಂತರ ತಡೆಯಾಜ್ಞೆಯನ್ನು ತೆರವಾಗಿಸಿಲ್ಲ.

ಈ ಕುರಿತು ಕುವೆಂಪು ವಿವಿಯ ಮೌಲ್ಯಮಾಪನ ಕುಲಸಚಿವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಮೇ.26ರಿಂದ ಆರಂಭವಾಗಬೇಕಿದ್ದಂತ ವಿವಿಯ ಪದವಿ ಪರೀಕ್ಷೆಯನ್ನು ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ಕಾರಣ ಮುಂದೂಡಲಾಗುತ್ತಿದೆ ಎಂದು ಹೇಳಿದ್ದಾರೆ.

ಪ್ರಮೋಟ್ ಮಾಡಿ ಹೊರಡಿಸಿದ್ದ ಆದೇಶ ರದ್ದುಪಡಿಸಿ ಪರೀಕ್ಷೆ ನಡೆಸುವ ವಿವಿ ನಿರ್ಧಾರವನ್ನು ಕೆಲವು ವಿದ್ಯಾರ್ಥಿಗಳು ಏಪ್ರಿಲ್ 21ರಂದು ಹೈಕೋರ್ಟ್ ನಲ್ಲಿ ಪ್ರಶ್ನೆ ಮಾಡಿ, ಪರೀಕ್ಷೆಗೆ ತಡೆಯಾಜ್ಞೆ ತಂದಿದ್ದಾರೆ. ಈ ಕಾರಣದಿಂದ ಮುಂದೂಡಿಕೆ ಮಾಡಲಾಗಿದೆ. ಈ ಮೂಲಕ ಇದುವರೆಗೆ 4 ಬಾರಿ ಪರೀಕ್ಷೆ ಮುಂದೂಡಿಕೆ ಮಾಡಿದಂತೆ ಆಗಿದೆ.

ಶಿವಮೊಗ್ಗಕ್ಕೆ ಮಳೆಹಾನಿ ತಪ್ಪಿಸಲು ₹ 99 ಕೋಟಿ ಅಂದಾಜಿನ ಯೋಜನೆ-ಸಚಿವ ಕೆಸಿಎನ್

0

ಸಧ್ಯದಲ್ಲೇ ಆರಂಭವಾಗಲಿರುವ ಮುಂಗಾರು ಅವಧಿಯಲ್ಲಿ ಮಳೆಯ ಹಾನಿಯನ್ನು ತಪ್ಪಿಸಲು ಮುಂಜಾಗರೂಕತಾ ಕ್ರಮಗಳನ್ನು ಈಗಲೇ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇತ್ತೀಚಿನ ಮಳೆಯಿಂದ ಉಂಟಾಗಿರುವ ಹಾನಿ ಕುರಿತು ಪರಿಶೀಲನಾ ಸಭೆ ನಡೆಸಿದರು.

ಕೆರೆಗಳ ಏರಿ ದುರ್ಬಲವಾಗಿರುವುದನ್ನು ಗುರುತಿಸಿ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು. ಮರದ ಕೊಂಬೆಗಳು ವಿದ್ಯುತ್ ಕಂಬಗಳ ಮೇಲೆ ಬೀಳದಂತೆ ಅವುಗಳನ್ನು ತೆರವುಗೊಳಿಸಬೇಕು. ಹಾನಿಗೀಡಾಗಿರುವ ಸಂಪರ್ಕ ರಸ್ತೆಗಳ ದುರಸ್ತಿ, ಕೆರೆ ದುರಸ್ತಿ ಕಾರ್ಯಗಳನ್ನು ಕೈಗೊಂಡು ಮತ್ತೆ ಕರೆ ಒಡೆಯದಂತೆ ಎಚ್ಚರಿಕೆ ವಹಿಸಬೇಕು. ಶಿವಮೊಗ್ಗ ನಗರದಲ್ಲಿ ರಾಜಕಾಲುವೆಗಳಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಹೂಳೆತ್ತುವ ಕಾರ್ಯವನ್ನು ಮಾಡಬೇಕು ಎಂದು ಹೇಳಿದರು.

ಕಳೆದ ವಾರ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಬೆಳೆಗಳು ಹಾಗೂ ಮೂಲಸೌಕರ್ಯಗಳಿಗೆ ವ್ಯಾಪಕ ಹಾನಿ ಉಂಟಾಗಿದೆ. 24ರಸ್ತೆ, 20 ಸೇತುವೆ ಮತ್ತು ಮೋರಿಗಳು, 427 ವಿದ್ಯುತ್ ಕಂಬಗಳು, 54 ವಿದ್ಯುತ್ ಪರಿವರ್ತಕಗಳು, 24ಶಾಲಾ ಕಟ್ಟಡ, 17 ಅಂಗನವಾಡಿ ಕಟ್ಟಡಗಳು, 43 ಕೆರೆಗಳಿಗೆ ಹಾನಿ ಉಂಟಾಗಿದೆ. 2139 ಮನೆಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿದೆ. 5ಮನೆಗಳಿಗೆ ತೀವ್ರ ಹಾನಿ ಉಂಟಾಗಿದ್ದು, 257 ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದೆ.

486 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆಗಳಿಗೆ ಹಾಗೂ 2518 ಹೆಕ್ಟೇರ್ ವ್ಯಾಪ್ತಿಯಲ್ಲಿ ಮೆಕ್ಕೆಜೋಳ ಬೆಳೆಗಳಿಗೆ ಹಾನಿ ಉಂಟಾಗಿದೆ. 154 ಹೆಕ್ಟೇರ್ ಬಾಳೆ ಸೇರಿದಂತೆ 178 ಹೆಕ್ಟೇರ್ ತೋಟಗಾರಿಕಾ ಬೆಳೆಗಳೂ ಹಾನಿಗೀಡಾಗಿವೆ. ಮೆಕ್ಕೆಜೋಳ ಮತ್ತು ಭತ್ತವನ್ನು ಕಟಾವು ಮಾಡಿ ರಾಶಿ ಹಾಕಿದ್ದ ಫಸಲು ಮಳೆಯಿಂದ ಸಂಪೂರ್ಣ ಹಾನಿಗೀಡಾಗಿದ್ದು 210ರೈತರು ಇದರಿಂದ ನಷ್ಟ ಅನುಭವಿಸಿದ್ದಾರೆ.

ಇದರಲ್ಲಿ 8775ಕ್ವಿಂಟಾಲ್ ಭತ್ತ ಹಾಗೂ 68670 ಕ್ವಿಂಟಾಲ್ ಮೆಕ್ಕೆಜೋಳ ಇಳುವರಿ ಸೇರಿದೆ. ಇದರಲ್ಲಿ ಶೇ.90ರಷ್ಟು ಇಳುವರಿ ನಾಶವಾಗಿದೆ. ಪರಿಹಾರ ಧನ ನೀಡಲು ಅನುದಾನ ಕೊರತೆಯಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ತಿಳಿಸಿದರು.

ಶಿವಮೊಗ್ಗ ನಗರದಲ್ಲಿ ಮಳೆ ಹಾನಿ ತಪ್ಪಿಸಲು 99ಕೋಟಿ ರೂ. ಅಂದಾಜು ವೆಚ್ಚದಲ್ಲಿ ಸಮಗ್ರ ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗಿದೆ. ಕಾಲುವೆಗಳಲ್ಲಿನ ಹೂಳೆತ್ತುವ ಕಾರ್ಯ ಸೇರಿದಂತೆ ಮುಂಜಾಗರೂಕತಾ ಕಾಮಗಾರಿಗಳನ್ನು ಮಳೆಗಾಲ ಆರಂಭಕ್ಕಿಂತ ಮೊದಲು ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು.

ಗೃಹ ಸಚಿವ ಅರಗ ಜ್ಞಾನೇಂದ್ರ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕರಾದ ಕುಮಾರ ಬಂಗಾರಪ್ಪ, ಅಶೋಕ ನಾಯ್ಕ್, ಡಿ.ಎಸ್.ಅರುಣ್, ಮೇಯರ್ ಸುನಿತಾ ಅಣ್ಣಪ್ಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೈಶಾಲಿ, ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮೀ ಪ್ರಸಾದ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

ದಾವೋಸ್ ನ ವಿಶ್ವ ಆರ್ಥಿಕ ವೇದಿಕೆಯಲ್ಲಿ₹2000 ಕೋಟಿ ಹೂಡಿಕೆಗೆ ಒಪ್ಪಂದ

0

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮ್ಮುಖದಲ್ಲಿ ಸ್ವಿಟ್ಸರ್ಲೆಂಡಿನ ದಾವೋಸ್ ನಲ್ಲಿ ನಡೆಯುತ್ತಿರುವ ವರ್ಲ್ಡ್ ಎಕನಾಮಿಕ್ ಫೋರಮ್ ಸಮಾವೇಶದಲ್ಲಿ ಲುಲು ಗ್ರೂಪ್ ಇಂಟರ್ ನ್ಯಾಷನಲ್ ನ ನಿರ್ದೇಶಕ ಎ.ವಿ.ಅನಂತ ರಾಮನ್ ಅವರೊಂದಿಗೆ ಕರ್ನಾಟಕದಲ್ಲಿ ಹೂಡಿಕೆ ಮಾಡುವ ಕುರಿತು ಒಪ್ಪಂದಕ್ಕೆ ಸಹಿ ಮಾಡಲಾಯಿತು.

ರಾಜ್ಯದ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಲುಲು ಗ್ರೂಪ್ ರಾಜ್ಯದಲ್ಲಿ ಸುಮಾರು ಎರಡು ಸಾವಿರ ಕೋಟಿ ರೂ. ಹೂಡಿಕೆ ಮಾಡಲು ಮುಂದಾಗಿದ್ದು, 4 ಶಾಪಿಂಗ್ ಮಾಲ್ ಮತ್ತು ಹೈಪರ್ ಮಾರ್ಕೆಟ್ ಹಾಗೂ ರಫ್ತು ಆಧಾರಿತ ಆಹಾರ ಮಳಿಗೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.

ಈ ಮೂಲಕ 10 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.

ದಕ್ಷಿಣ ಚಿರಾಪುಂಜಿ ಪಟ್ಟದಿಂದ ಜಾರುತ್ತಿರುವ ಆಗುಂಬೆ

0

ದಕ್ಷಿಣ ಭಾರತದ ಚಿರಾಪುಂಜಿ ಎಂದೇ ಬಿರುದು ಪಡೆದುಕೊಂಡಿದ್ದ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ.

ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಕೆಎಸ್‌ಡಿಎಂಎ) ಪ್ರಕಾರ 2015 ಮತ್ತು 2021ರ ನಡುವಿನ ಏಳು ವರ್ಷಗಳಲ್ಲಿ 5 ಬಾರಿ ಉಡುಪಿ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಹೆಚ್ಚು ಮಳೆ ಪ್ರಮಾಣ ದಾಖಲಾಗಿದೆ.
ಅಂಕಿ-ಅಂಶಗಳ ಪ್ರಕಾರ ಉಡುಪಿ ಜಿಲ್ಲೆಯ ಬೈರಂಪಳ್ಳಿಯಲ್ಲಿ 2016ರಲ್ಲಿ ಅತಿ ಹೆಚ್ಚು ಅಂದರೆ 5,916 ಮಿ. ಮೀ. ಪ್ರಮಾಣದ ಮಳೆ ದಾಖಲಾಗಿದೆ. 2017ರಲ್ಲಿ ಕಾರ್ಕಳ ತಾಲೂಕಿನ ಶಿರಾಳುವಿನಲ್ಲಿ 6,936 ಮಿ. ಮೀ. ಮಳೆಯಾಗಿದೆ.

ಉಡುಪಿ ಜಿಲ್ಲೆ ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾಗಿ ಗುರುತಿಸಿಕೊಂಡಿದೆ.

ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ 2016ರಲ್ಲಿ 5,524 ಮಿ.ಮೀ. ಮತ್ತು 2017ರಲ್ಲಿ 5,345 ಮಿ.ಮೀ. ಮಳೆಯೊಂದಿಗೆ ಅಗ್ರಸ್ಥಾನ ಪಡೆದಿತ್ತು.

ಆದರೆ 2019ರಲ್ಲಿ ಉಡುಪಿಯ ಹೆಬ್ರಿಯ ದಾಖಲೆ ಪ್ರಮಾಣದ 9,340 ಮಿ. ಮೀ. ಮಳೆಯೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. 2020ರಲ್ಲಿ ಇನ್ನಂಜೆಯಲ್ಲಿ 7,988 ಮಿ. ಮೀ. ಮಳೆ ಪ್ರಮಾಣ ದಾಖಲಾಗುವ ಮೂಲಕ ಅಗ್ರಸ್ಥಾನ ಪಡೆದಿದೆ.

ಪಠ್ಯಪುಸ್ತಕ ಸಮಿತಿಯಿಂದ ಚಕ್ರತೀರ್ಥ ಅವರನ್ನು ಕೈಬಿಡುವಂತೆ ಪ್ರತಿಭಟನೆ ನಿರ್ಧಾರ

0

ಈಗಾಗಲೇ ರಾಜ್ಯ ಸರ್ಕಾರಕ್ಕೆ ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಕೇಸರೀಕರಣ ವಿರೋಧಿಸಿ, ನೂರಾರು ಸಾಹಿತಿಗಳು ಪತ್ರ ಬರೆದು ವಿರೋಧ ವ್ಯಕ್ತ ಪಡಿಸಿದ್ದರು.

ಇದರ ಬೆನ್ನಲ್ಲೇ ಭಾರತೀಯ ವಿದ್ಯಾರ್ಥಿ ಫೆಡರೇಷನ್ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಹಲವು ಸಂಘಟನೆಗಳ ಮುಖಂಡರು, ಸಾಹಿತಗಳು, ಶಿಕ್ಷಣ ತಜ್ಞರು ಸೇರಿದಂತೆ ವಿವಿಧ ವಲಯದ ಪರಿಣಿತರು ಭಾಗಿಯಾಗಿದ್ದರು.

ಇದೀಗ ಪಠ್ಯಪುಸ್ತಕ ಕೇಸರೀಕರಣ ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸೋದಕ್ಕೆ ಸಾಹಿತಿಗಳು ನಿರ್ಧಾರ ಕೈಗೊಂಡಿದ್ದಾರೆ.

ಸಭೆಯಲ್ಲಿ ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಹಲವು ಪಾಠಗಳನ್ನು ಬಿಟ್ಟಿರೋದು, ಅಧ್ಯಕ್ಷರನ್ನಾಗಿ ರೋಹಿತ್ ಚಕ್ರತೀರ್ಥ ಅವರನ್ನು ನೇಮಕ ಮಾಡಿದ್ದನ್ನು ರದ್ದು ಪಡಿಸುವಂತೆ ಒತ್ತಾಯಿಸಿ, ಮೇ.31ರಂದು ಪ್ರತಿಭಟನೆಗೆ ನಿರ್ಧರಿಸಲಾಗಿದೆ.

ಮೇ.31ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಒಂದು ದಿನ ರಾಜ್ಯ ಸರ್ಕಾರದ ನಡೆ ವಿರೋಧಿಸಿ ಪ್ರತಿಭಟನೆಗೆ ಸಾಹಿತಿಗಳು, ಶಿಕ್ಷಣ ತಜ್ಞರು ಇಳಿಯಲಿದ್ದಾರೆ.

ಕೆಳದಿ ಚನ್ನಮ್ಮಾಜಿ ಬಗ್ಗೆ ಹೆಚ್ಚಿನ ಅಧ್ಯಯನವಾಗಬೇಕು- ಪ್ರೊ.ವೀರಭದ್ರಪ್ಪ

0

ತನ್ನ ಪತಿಯ ಸಾವಿನ ನಂತರ ದೃತಿಗೆಡದೆ 25 ವರ್ಷಗಳ ಕಾಲ ಕೆಳದಿ ಸಾಮ್ರಾಜ್ಯದ ರಾಣಿಯಾಗಿ ಆಡಳಿತ ನಡೆಸಿದ ಚೆನ್ನಮ್ಮಾಜಿಯ ಕಾರ್ಯವೈಖರಿ ಕುರಿತು ಹೆಚ್ಚಿನ ಜೈನ ನಡೆಯಬೇಕಿದೆ ಎಂದು ಕುವೆಂಪು ವಿಶ್ವವಿದ್ಯಾಲಯ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ಅವರು ಹೇಳಿದ್ದಾರೆ.

ಸಾಗರ ಸಮೀಪದ ಕೆಳದಿ ಗ್ರಾಮದಲ್ಲಿ ಕುವೆಂಪು ವಿಶ್ವವಿದ್ಯಾಲಯ, ಕೆಳದಿ ರಾಣಿ ಚೆನ್ನಮ್ಮಾಜಿ ಅಧ್ಯಯನಪೀಠ ಸ್ನಾತಕೋತ್ತರ ಇತಿಹಾಸ ಹಾಗೂ ಪ್ರಾಕ್ತನಶಾಸ್ತ್ರ ಅಧ್ಯಯನ ಸಂಸ್ಥೆ, ಕೆಳದಿ ವಸ್ತು ಸಂಗ್ರಹಾಲಯ ಶನಿವಾರ ಏರ್ಪಡಿಸಿದ್ದ ಕೆಳದಿ ರಾಣಿ ಚೆನ್ನಮ್ಮಾಜಿ ಆಡಳಿತ 350ನೇ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೆಳದಿ ಚೆನ್ನಮ್ಮಾಜಿ ಅಧೀನ ಪೀಠದಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಗೆ ಬೋಧನಾ ಕೊಠಡಿ, ವಿಶಾಲವಾದ ಆಡಳಿತ ವಿಭಾಗ, ಡಿಪ್ಲೋಮಾ ಸರ್ಟಿಫಿಕೇಟ್ ಕೋರ್ಸ್, ವಿದ್ಯಾರ್ಥಿನಿಲಯ ಸೇರಿ ಈ ಪೀಠವನ್ನು ಮಾದರಿ ಅಧ್ಯಯನ ಕೇಂದ್ರವನ್ನಾಗಿ ರೂಪಿಸುವ ಉದ್ದೇಶವಿದೆ ಎಂದು ಹೇಳಿದ್ದಾರೆ.

ರಾಣಿ ಚೆನ್ನಮ್ಮಾಜಿ ಅಧ್ಯಯನಪೀಠದ ಅಭಿವೃದ್ಧಿಗೆ 10 ಕೋಟಿ ಅನುದಾನ ನೀಡುವಂತೆ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಧ್ಯಯನ ಪೀಠಕ್ಕೆ ಕೆಳದಿ ಗ್ರಾಮದಲ್ಲಿ ರಾಜ್ಯ ಸರ್ಕಾರ ಎರಡು ಎಕರೆ ಜಾಗವನ್ನು ನೀಡಿದೆ. ಇದರ ಸಮಗ್ರ ಅಭಿವೃದ್ಧಿಗೆ ಕುವೆಂಪು ವಿಶ್ವವಿದ್ಯಾಲಯ ಚಿಂತನೆ ನಡೆಸಿದೆ ಎಂದು ತಿಳಿಸಿದ್ದಾರೆ.

ಇತಿಹಾಸ ಸಂಶೋಧಕ ಡಾ. ಕೆಳದಿ ಗುಂಡಾಜೋಯಿಸ್ ಅವರು ಮಾತನಾಡಿ, ಕೆಳದಿ ಇತಿಹಾಸ ತೀವ್ರ ನಿರ್ಲಕ್ಷಕ್ಕೆ ಒಳಗಾಗಿದೆ. ವಿದೇಶದ ಸಂಶೋಧಕರು ಕೆಳದಿ ಇತಿಹಾಸದ ಬಗ್ಗೆ ತೋರಿಸುವಷ್ಟು ಆಸಕ್ತಿಯನ್ನು ಸ್ಥಳೀಯ ವಿದ್ವಾಂಸರು ತೋರುತ್ತಿಲ್ಲ. ಈ ಕಾರಣಕ್ಕಾಗಿ ಕೆಳದಿ ಇತಿಹಾಸದ ಮಹತ್ವ ಯುವ ತಲೆಮಾರಿಗೆ ತಲುಪುತ್ತಿಲ್ಲ ಎಂದು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಸಾಂಸ್ಕೃತಿಕ ನೆಲೆಯಲ್ಲಿ ಕೆಳದಿ ರಾಣಿ ಚೆನ್ನಮ್ಮಾಜಿ ಎಂಬ ವಿಷಯದ ಕುರಿತು ರಂಗಕರ್ಮಿ ದೇವೇಂದ್ರ ಬೆಳೆಯೂರು ಮಾತನಾಡಿದರು. ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ ಕಿರಣ್ ದೇಸಾಯಿ ಗ್ರಾಮ ಪಂಚಾಯತ್ ಸದಸ್ಯ ಸಂದೀಪ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.