ಇಲ್ಲಿಯವರೆಗೆ ಹುಟ್ಟಿದ ಮಗುವಿಗೆ ಸಂಬಂಧಿಸಿದಂತೆ ಮಾಹಿತಿಯ ಸಂಪೂರ್ಣ ವಿವರ ಆಯುಷ್ಮಾನ್ ಆರೋಗ್ಯ ಭಾರತದ ಐಡಿಯಲ್ಲಿ ದಾಖಲಿಸಲಾಗುತ್ತಿರಲಿಲ್ಲ. ಆದ್ದರಿಂದ, ಕೆಲವು ಸಂದರ್ಭದಲ್ಲಿ ಮಗುವಿನ ಸಂಪೂರ್ಣ ಮಾಹಿತಿ ದೊರೆಯದೇ, ವೈದ್ಯರ ಚಿಕಿತ್ಸೆಗೆ ತೊಂದರೆ ಆಗಿತ್ತು.
ಆದರೆ ಇದಕ್ಕೆ ತೆರೆ ಬೀಳಲಿದೆ. ಹುಟ್ಟಿದ ಮಗುವಿಗೂ ಇನ್ನು ಮುಂದೆ ಆಯುಷ್ಮಾನ್ ಭಾರತ ಐಡಿ ದೊರೆಯಲಿದೆ.
ಈ ಕಾರ್ಡ್ ಸಿಗಲು, 18 ವರ್ಷ ಕಾಯುವ ಅಗತ್ಯವೂ ತಪ್ಪಲಿದೆ. ಹೆಲ್ತ್ ಐಡಿ ಎಂದು ಕರೆಯಲಾಗುವ ಇದರಲ್ಲಿ ಮಗುವಿನ ಆರೋಗ್ಯಕ್ಕೆ ಸಂಬಂಧಿಸಿದಂತ ಸಂಪೂರ್ಣ ಮಾಹಿತಿ ಇರಲಿದೆ.
ಮಗುವಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ವೈದ್ಯರಿಗೆ ಈ ಆಯುಷ್ಮಾನ್ ಭಾರತ ಐಡಿಯಲ್ಲಿ ಇರಲಿದೆ. ಆದ್ದರಿಂದ ಮಗುವಿನ ಆರೋಗ್ಯ ಸಮಸ್ಯೆಯನ್ನು ವೈದ್ಯರು ಈ ಐಡಿಯಲ್ಲಿ ಚೆಕ್ ಮಾಡಿ, ಒಂದೇ ಅಡಿಯಲ್ಲಿ ಮಗುವಿನ ಸಂಪೂರ್ಣ ಇತಿಹಾಸವೇ ದೊರೆತು, ಚಿಕಿತ್ಸೆಗೆ ಅನುಕೂಲವಾಗಲಿದೆ.