ಈಗಾಗಲೇ ರಾಜ್ಯ ಸರ್ಕಾರಕ್ಕೆ ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಕೇಸರೀಕರಣ ವಿರೋಧಿಸಿ, ನೂರಾರು ಸಾಹಿತಿಗಳು ಪತ್ರ ಬರೆದು ವಿರೋಧ ವ್ಯಕ್ತ ಪಡಿಸಿದ್ದರು.
ಇದರ ಬೆನ್ನಲ್ಲೇ ಭಾರತೀಯ ವಿದ್ಯಾರ್ಥಿ ಫೆಡರೇಷನ್ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಹಲವು ಸಂಘಟನೆಗಳ ಮುಖಂಡರು, ಸಾಹಿತಗಳು, ಶಿಕ್ಷಣ ತಜ್ಞರು ಸೇರಿದಂತೆ ವಿವಿಧ ವಲಯದ ಪರಿಣಿತರು ಭಾಗಿಯಾಗಿದ್ದರು.
ಇದೀಗ ಪಠ್ಯಪುಸ್ತಕ ಕೇಸರೀಕರಣ ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸೋದಕ್ಕೆ ಸಾಹಿತಿಗಳು ನಿರ್ಧಾರ ಕೈಗೊಂಡಿದ್ದಾರೆ.
ಸಭೆಯಲ್ಲಿ ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಹಲವು ಪಾಠಗಳನ್ನು ಬಿಟ್ಟಿರೋದು, ಅಧ್ಯಕ್ಷರನ್ನಾಗಿ ರೋಹಿತ್ ಚಕ್ರತೀರ್ಥ ಅವರನ್ನು ನೇಮಕ ಮಾಡಿದ್ದನ್ನು ರದ್ದು ಪಡಿಸುವಂತೆ ಒತ್ತಾಯಿಸಿ, ಮೇ.31ರಂದು ಪ್ರತಿಭಟನೆಗೆ ನಿರ್ಧರಿಸಲಾಗಿದೆ.
ಮೇ.31ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಒಂದು ದಿನ ರಾಜ್ಯ ಸರ್ಕಾರದ ನಡೆ ವಿರೋಧಿಸಿ ಪ್ರತಿಭಟನೆಗೆ ಸಾಹಿತಿಗಳು, ಶಿಕ್ಷಣ ತಜ್ಞರು ಇಳಿಯಲಿದ್ದಾರೆ.