Monday, March 2, 2026
Monday, March 2, 2026
Home Blog Page 1569

ಕನ್ನಡಕ್ಕೆ ಪಂಪ ಮಹಾಕವಿಯ ಕೊಡುಗೆ ಅದ್ವಿತೀಯ

0

ಕನ್ನಡ ಸಾಹಿತ್ಯಕ್ಕೆ ಜೈನ ಕವಿಗಳು ನೀಡಿರುವ ಕೊಡುಗೆ ಅವಿಸ್ಮರಣೀಯವಾದದ್ದು. ಮತ್ತು ಕನ್ನಡದ ಭಾಷೆ ಹಾಗೂ ಸಾಹಿತ್ಯ ಶ್ರೀಮಂತ ಉಳಿಸುವುದಕ್ಕೆ ಜೈನ ಕವಿಗಳು ಅದರಲ್ಲೂ ವಿಶೇಷವಾಗಿ ಪಂಪ ಮಹಾಕವಿ ನೀಡಿರುವ ಕೊಡುಗೆ ಚಾರಿತ್ರಿಕ ವಾದುದು ಎಂದು ರಿಪ್ಪನ್ ಪೇಟೆಯ ಸರ್ಕಾರಿ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ರತ್ನಾಕರ ಸಿ ಕುನಗೋಡು ಅವರು ತಿಳಿಸಿದ್ದಾರೆ.

ಮೇ 21ರಂದು ಹೊಸನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ರಿಪ್ಪನ್ ಪೇಟೆಯ ಗೌಡಸಾರಸ್ವತ ಕಲ್ಯಾಣ ಮಂದಿರದಲ್ಲಿ ನಡೆದ ಹೊಂಬುಜ ಜೈನ ಮಠದ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ದತ್ತಿದಾನದಲ್ಲಿ ನಡೆದ ಕನ್ನಡ ಸಾಹಿತ್ಯಕ್ಕೆ ಪಂಪ ಮಹಾಕವಿಯ ಕೊಡುಗೆ ವಿಷಯವಾಗಿ ದತ್ತಿ ಉಪನ್ಯಾಸದಲ್ಲಿ ಮಾತನಾಡುತ್ತಾ ಹೇಳಿದರು.

ಇಂತಹ ದತ್ತಿ ಕಾರ್ಯಕ್ರಮಗಳು ಕನ್ನಡದ ಸಾಹಿತ್ಯದ ಮಜಲುಗಳನ್ನು ತಿಳಿಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟನೆ ಮಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಮಂಜುನಾಥ್ ಮಾತನಾಡಿ ಕನ್ನಡ ನಾಡಿಗೆ ಹಾಗೂ ಕನ್ನಡಕ್ಕೆ ಇರುವ ಇಂದಿನ ಆತಂಕದ ವಾತಾವರಣವನ್ನು ವಿವರಿಸುತ್ತಾ ಕನ್ನಡದ ಭಾಷೆ ಮತ್ತು ಸಂಸ್ಕೃತಿಯನ್ನು ಬಲಿಷ್ಠಗೊಳಿಸುವ ಅಗತ್ಯತೆ ಇದೆ. ಈ ಕಾರಣಕ್ಕಾಗಿ ಸಂಘಟನಾತ್ಮಕವಾಗಿ ಕಾರ್ಯಾಚರಿಸಬೇಕಾದ ಅನಿವಾರ್ಯತೆಯ ಹಿನ್ನಲೆಯಲ್ಲಿ ಎಲ್ಲಾ ಕನ್ನಡಿಗರು ಕೈಜೋಡಿಸಬೇಕೆಂದು ಹೇಳಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕು ಸಮಿತಿ ಅಧ್ಯಕ್ಷ ಎಂ.ಎಂ.ಪರಮೇಶ್ ಹಾಗೂ ಜಿಲ್ಲಾ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಹೊಸನಗರ ತಾಲೂಕು ಅಧ್ಯಕ್ಷ ನಗರ ರಾಘವೇಂದ್ರ ಮಾತನಾಡಿದರು. ಕಸಾಪ ಹಿರಿಯ ಸದಸ್ಯ ಮಂಜುನಾಥ್ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಹೊಸನಗರ ತಾಲೂಕು ಸಾಹಿತ್ಯ ಪರಿಷತ್ತಿನ ತಾಲೂಕು ಸಮಿತಿ ಅಧ್ಯಕ್ಷ ತ.ಮ.ನರಸಿಂಹ ಅವರು ವಹಿಸಿದ್ದರು ಕಾರ್ಯಕ್ರಮದ ಮಧ್ಯ- ಮಧ್ಯೆ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಹೆಚ.ಸಿ. ತಿಮ್ಮಪ್ಪ ಮತ್ತು ಕೃಷ್ಣರಾಜ ಹಾಗೂ ಕಸಾಪ ರವಿ ಕನ್ನಡ ಗೀತೆಗಳನ್ನು ಹಾಡಿದರು.

ಹೊಸನಗರದ ಬಾಲಪ್ರತಿಭೆ ಕುಮಾರಿ ಆರ್ವಿ ಕೀಬೋರ್ಡ್ ಪಿಯಾನೋ ನುಡಿಸಿ ರಂಜಿಸಿದರು.

ಇದೇ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಹಾಕಿ ಆಟಗಾರ್ತಿ ರಿಪ್ಪನ್ ಪೇಟೆಯ ಕುಮಾರಿ ಪೂಜಿತ ಇವರನ್ನು ಹಾಗೂ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಮಂಜುನಾಥ್ ಮತ್ತು ಕೀಬೋರ್ಡ್ ಪಿಯಾನೋ ನುಡಿಸಿ ರಂಜಿಸಿದ ಕುಮಾರಿ ಅರ್ವಿ ಅವರನ್ನು ಸನ್ಮಾನಿಸಲಾಯಿತು. ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ರಿಪ್ಪನ್ ಪೇಟೆ ಹೋಬಳಿ ಸಮಿತಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಹೋಬಳಿ ಸಮಿತಿ ಘೋಷಿಸಲಾಯಿತು.

ಸಭೆಯ ಮೊದಲಲ್ಲಿ ಶ್ರೀಮತಿ ನಾಗರತ್ನ ದೇವರಾಜ್ ಪ್ರಾರ್ಥಿಸಿದರು. ಕಸಾಪ ತಾಲೂಕು ಸಮಿತಿ ಗೌರವ ಕಾರ್ಯದರ್ಶಿ ಹೆಚ್ಆರ್ ಪ್ರಕಾಶ್ ಸ್ವಾಗತಿಸಿದರು. ತಾಲೂಕು ಕಸಾಪ ಸಮಿತಿ ಸದಸ್ಯ ಕಸಾಪ ರವಿ ಯವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಕಾಗೋಡು ಹೋರಾಟ ಕುರಿತ ಚಿಂತನ ಕಾರ್ಯಕ್ರಮ

0

ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದ ಸಭಾಂಗಣದಲ್ಲಿ ಮೇ. 21ರಂದು ಶನಿವಾರ ಬೆಳಿಗ್ಗೆ ಶಾಂತವೇರಿ ಗೋಪಾಲಗೌಡರ ದತ್ತಿ ಮತ್ತು ಕಾಗೋಡು ಹೋರಾಟ ಒಂದು ಚಿಂತನೆ ದತ್ತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮವನ್ನು ದತ್ತಿ ದಾನಿಗಳಾದ ಪ್ರೊ. ಎಂ. ಬಿ. ನಟರಾಜ್ ಉದ್ಘಾಟಿಸಿದರು. ಕಸಾಪ ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ರೈತನಾಯಕರಾದ ಕೆ. ಟಿ. ಗಂಗಾಧರ ಉಪನ್ಯಾಸ ನೀಡಿದರು. ಎನ್. ಹೆಚ್. ಶ್ರೀಕಾಂತ್, ಡಾ. ಮಧು, ಟಿ. ಪಿ. ನಾಗರಾಜ್, ಮೂರ್ತಿ ಅವರು ಭಾಗವಹಿಸಿದ್ದರು.

ಇತ್ತೀಚೆಗೆ ನಡೆದ ಕೆಲವು ಗ್ರಾಪಂ ಗಳ ಚುನಾವಣಾ ಫಲಿತಾಂಶ

0

ಗ್ರಾಮ ಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ/ಉಪ ಚುನಾವಣೆಯ ಮತ ಏಣಿಕೆ ಕಾರ್ಯವು 2022ರ ಮೇ 22ರಂದು ಮುಕ್ತಾಯಗೊಂಡಿದೆ. ಚುನಾವಣೆಯ ಫಲಿತಾಂಶವನ್ನು ಸಂಬಂಧಪಟ್ಟ ಚುನಾವಣಾಧಿಕಾರಿಗಳು ಪ್ರಕಟಿಸಿದ್ದಾರೆ.

ಬೆಂಗಳೂರು ಜಿಲ್ಲೆ, ಧಾರವಾಡ, ಬಾಗಲಕೋಟೆ ಜಿಲ್ಲೆಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆದಿದ್ದು, ಇಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮತದಾನದ ನಂತರ 30 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ತುಮಕೂರು, ದಾವಣಗೆರೆ, ಬೀದರ್, ಹಾಸನ, ಕಲಬುರಗಿ, ಬೆಳಗಾವಿ ಜಿಲ್ಲೆಗಳಲ್ಲಿ ನಗರ ಸ್ಥಳೀಯ ಸಂಸ್ಥೆ ಚುನಾವಣೆ ನಡೆದಿದ್ದು, ಐಎನ್‍ಸಿ ಪಕ್ಷದ 3 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಬಿಜೆಪಿ-4, ಜೆಡಿಎಸ್ ಪಕ್ಷದ ಒಬ್ಬರು ಅಭ್ಯರ್ಥಿಗಳು ಗೆಲುವು ಕಂಡಿದ್ದಾರೆ.

ರಾಜ್ಯದಲ್ಲಿ ನಡೆದ ಗ್ರಾಮ ಪಂಚಾಯಿತಿ ಉಪ ಚುನಾವಣೆಯಲ್ಲಿ ಒಟ್ಟು 207 ಸ್ಥಾನಗಳ ಫೈಕಿ ಅವಿರೋಧವಾಗಿ 63 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಮತದಾನದ ಬಳಿಕ 107 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ರಾಜ್ಯ ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಫಲಿತಾಂಶದ ಅಂಕಿ ಅಂಶಗಳನ್ನು ಆಯೋಗದ ಅಧಿಕೃತ ಅಂತರ್ಜಾಲ ತಾಣ www.karsec.gov.in ನಲ್ಲಿ ಪ್ರಕಟಿಸಲಾಗಿದೆ.

ದ್ವಿ ಚಕ್ರವಾಹನ ಚಾಲಕರೇ ,ಗಮನಿಸಿ

0

ದ್ವಿ ಚಕ್ರ ವಾಹನದ ಗ್ರಾಹಕರೇ, ಬೈಕ್‌ ಅಥವಾ ಸ್ಕೂಟರ್‌ ಏರಿ ಸಾಗುವಾಗುವವರು ಹೆಲ್ಮೆಟ್‌ ಧರಿಸದಿದ್ದರೆ ಮಾತ್ರ ಟ್ರಾಫಿಕ್‌ ಪೊಲೀಸರಿಂದ ದಂಡ ಹಾಕುತ್ತಾರೆಂದು ಭಾವಿಸಿದ್ದರೆ ಅದು ತಪ್ಪು.

ಹೆಲ್ಮೆಟ್‌ ಅನ್ನು ಸಡಿಲವಾಗಿ ಧರಿಸಿದರೆ ಅದಕ್ಕೆ ತಕ್ಷಣ ಪಾವತಿಸಬೇಕಾದ 2 ಸಾವಿರ ರೂ.ದಂಡ ವಿಧಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಹೆಲ್ಮೆಟ್‌ ಸರಿಯಾಗಿ ಧರಿಸದೇ ಇದ್ದರೆ ಯಾವುದೇ ಸುರಕ್ಷತೆ ಸಿಗುವುದಿಲ್ಲ. ಆದ್ದರಿಂದ,ಜನರು ಹೆಲ್ಮೆಟ್‌ ಧರಿಸುವುದನ್ನು ಕ‌ಡ್ಡಾಯಗೊಳಿಸುವುದಕ್ಕೋಸ್ಕರ ಕೇಂದ್ರ ಮೋಟಾರು ನಿಯಮಗಳಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ರೂಪಿಸಿದೆ.

ಹೆಲ್ಮೆಟ್‌ ಹಾಕಿದ್ದರೂ ಹೆಲ್ಮೆಟ್‌ನ ಬಕಲ್‌ ಹಾಕಿಕೊಳ್ಳದಿದ್ದರೆ 1 ಸಾವಿರ ರೂ. ತೆರಬೇಕಾಗುತ್ತದೆ. ಜೊತೆಗೆ ಧರಿಸಿರುವ ಹೆಲ್ಮೆಟ್‌ ಬಿಐಎಸ್‌ ಪ್ರಮಾಣೀಕೃತವಾಗಿರದಿದ್ದರೆ ಅದಕ್ಕೆ 1 ಸಾವಿರ ರೂ. ದಂಡ ತೆರಬೇಕಾಗುತ್ತದೆ. ಆದ್ದರಿಂದ, ಒಟ್ಟಾರೆ 2 ಸಾವಿರ ರೂ. ದಂಡ ವಿಧಿಸಲಾಗುತ್ತದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಇದಲ್ಲದೆ ಹೆಲ್ಮೆಟ್‌ ಸರಿಯಾಗಿ ಧರಿಸಿಯೂ ಸಿಗ್ನಲ್‌ ಜಂಪ್‌ ಮಾಡಿದರೆ ಅದಕ್ಕೆ 2 ಸಾವಿರ ರೂ. ದಂಡ ದಂಡ ಹಾಗೂ 3 ವರ್ಷಗಳವರೆಗೆ ಚಾಲನಾ ಪರವಾನಿಗೆ ಮುಟ್ಟುಗೋಲು ಹಾಕಿ ಕೊಳ್ಳುವ ಸಾಧ್ಯತೆಯಿದೆ.

ಆನ್ ಲೈನ್ ಶೀಘ್ರ ಚೆಸ್ : ಪ್ರಗ್ನಾನಂದ ಅವರಿಗೆ ಜಯ

ಭಾರತದ ಗ್ರ್ಯಾಂಡ್ ಮಾಸ್ಟರ್ ಎಂದೇ ಪ್ರಖ್ಯಾತಿ ಪಡೆದಿರುವ ಪ್ರಗ್ನಾನಂದ ರಮೇಶಬಾಬು ಅವರು ಕೇವಲ 3 ತಿಂಗಳ ಅಂತರದಲ್ಲಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸೆನ್ ವಿರುದ್ಧ 2ನೇ ಗೆಲುವು ಸಾಧಿಸಿದ್ದಾರೆ.

ಶುಕ್ರವಾರ ನಡೆದ ಚೆಸ್ಸಬಲ್ ಮಾಸ್ಟರ್ಸ್ ಆನ್‌ಲೈನ್ ರ್ಯಾಪಿಡ್ ಚೆಸ್ ಪಂದ್ಯಾವಳಿಯ 5 ನೇ ಸುತ್ತಿನಲ್ಲಿ ಇಬ್ಬರು ಆಟಗಾರರು ಭೇಟಿಯಾದರು. ಕಾರ್ಲ್‌ಸನ್ ವಿರುದ್ಧದ ಗೆಲುವಿನ ಬಳಿಕ ಪ್ರಗ್ನಾನಂದ ಅವರು ನಾಕೌಟ್ ಹಂತಕ್ಕೆ ಮುನ್ನಡೆಯುವ ಅವಕಾಶವನ್ನು ಹಾಗೆ ಉಳಿಸಿಕೊಂಡಿದ್ದಾರೆ.

ಪಂದ್ಯಾವಳಿಯ 2 ನೇ ದಿನದಂದು ಚೀನಾದ ವೈ ಯಿ ನಂತರ ಕಾರ್ಲ್‌ಸೆನ್ ಲೀಡರ್‌ ಬೋರ್ಡ್‌ನಲ್ಲಿ 2 ನೇ ಸ್ಥಾನದಲ್ಲಿದ್ದರೆ ಪ್ರಗ್ನಂಧ ಅವರು ತಮ್ಮ ಮೊತ್ತವನ್ನು 12 ಅಂಕಗಳಿಗೆ ತೆಗೆದುಕೊಂಡರು.

ವಿಶ್ವದ ಅತ್ಯಂತ ಕಿರಿಯ ಗ್ರ್ಯಾಂಡ್ ಮಾಸ್ಟರ್ ಅಭಿಮನ್ಯು ಮಿಶ್ರಾ ಕೂಡ 16 ಮಂದಿ ಪಂದ್ಯಾವಳಿಯ ಭಾಗವಾಗಿದ್ದಾರೆ.

16 ವರ್ಷ ವಯಸ್ಸಿನ ಪ್ರಗ್ನಾನಂದ ಅವರು ಫೆಬ್ರವರಿಯಲ್ಲಿ ಆನ್‌ಲೈನ್ ರ್ಯಾಪಿಡ್ ಚೆಸ್ ಪಂದ್ಯಾವಳಿಯಾದ ಏರ್‌ಥಿಂಗ್ಸ್ ಮಾಸ್ಟರ್ಸ್‌ನಲ್ಲಿ ಮ್ಯಾಗ್ನಸ್ ಕಾರ್ಲ್‌ಸೆನ್ ಅವರನ್ನು ಮೊದಲ ಬಾರಿಗೆ
ಸೋಲಿಸಿದರು. ಪ್ರಗ್ನಾನಂದ ಅವರು ಕಾರ್ಲ್‌ಸೆನ್‌ರ 3 ಪಂದ್ಯಗಳ ಗೆಲುವಿನ ಓಟವನ್ನು ಕೊನೆಗೊಳಿಸಿದ್ದರು.

ಮೀಸಲಾತಿಗೆ ಯಾರೂ ಬೀದಿಗಿಳಿದು ಹೋರಾಟ ಮಾಡುವ ಅಗತ್ಯವಿಲ್ಲ

0

ಮೀಸಲಾತಿಗಾಗಿ ಯಾರೂ ಬೀದಿಗೆ ಬಂದು ಹೋರಾಡುವ ಆವಶ್ಯಕತೆ ಇಲ್ಲ. ಕೊಟ್ಟ ಮಾತಿನಂತೆ ನಡೆದುಕೊಂಡು ಪರಿಶಿಷ್ಟರಿಗೆ ನ್ಯಾಯ ಒದಗಿಸಲು ಬದ್ಧನಾಗಿದ್ದೇನೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.

ಸಂಡೂರು ತಾಲೂಕಿನ ಚೋರನೂರು ಗ್ರಾಮದಲ್ಲಿ ಶನಿವಾರ ನೂತನ ಪೊಲೀಸ್‌ ಠಾಣೆ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಚೋರನೂರು ಠಾಣೆಯ ಕಟ್ಟಡವನ್ನು . 3 ಕೋಟಿ 77 ಲಕ್ಷದಲ್ಲಿ ನಿರ್ಮಿಸಲಾಗುತ್ತಿದೆ. ಪೊಲೀಸ್‌ ವ್ಯವಸ್ಥೆಯಲ್ಲಿ ಮೂಲಭೂತ ಸೌಲಭ್ಯಗಳು ಬಹಳ ಮುಖ್ಯ. ಇದರಿಂದ ಅಪರಾಧ ಪ್ರಮಾಣ ಕಡಿಮೆ ಮಾಡಲು ಸಾಧ್ಯ. ಜಿಲ್ಲೆಯಲ್ಲಿ ಎಫ್‌ಎಸ್‌ಎಲ್‌ ಲ್ಯಾಬರೇಟರಿ ಜಾಥಾ ದಿನಗಳ . ಇದಕ್ಕೆ ಮುಖ್ಯಮಂತ್ರಿ ಹಾಗೂ ಕೇಂದ್ರದ ಗೃಹಸಚಿವರು ಸ್ಪಂದಿಸಿದ್ದಾರೆ. ಜನಸಂಖ್ಯೆ ಆಧಾರದ ಮೇಲೆ ಪೊಲೀಸ್‌ ಶಕ್ತಿ ಕೂಡಾ ಹೆಚ್ಚಬೇಕಿದೆ. ಪೊಲೀಸ್‌ ಸಿಬ್ಬಂದಿಗೆ ಕ್ವಾರ್ಟರ್ಸ್‌ ಬೇಕು ಎಂಬ ಕಾರಣಕ್ಕೆ ಮುಖ್ಯಮಂತ್ರಿಗಳು . 2 ಸಾವಿರ ಕೋಟಿ ಮೀಸಲಿಡಲಾಗಿದೆ ಎಂದರು.
ಶಾಸಕ ಈ. ತುಕಾರಾಮ ಭಾಗವಹಿಸಿದ್ದರು. ಕಟ್ಟಡ ನಿರ್ಮಾಣಕ್ಕೆ ಬೇಕಾದ ಅನುದಾನದ ಕುರಿತು ಮಾಹಿತಿ ನೀಡಿರುವ ಅವರು, ಮೂರೂವರೆ ಕೋಟಿಯಲ್ಲಿ . 2.50 ಕೋಟಿಯನ್ನು ಜಿಲ್ಲಾ ಖನಿಜ ನಿಧಿಯಿಂದಲೂ ಮತ್ತು ಉಳಿದ ಅನುದಾನವನ್ನು ಇಲಾಖೆ ಅನುದಾನವನ್ನು ಒದಗಿಸಲಾಗುತ್ತಿದೆ ಎಂದರು.

ಮೀಸಲಾತಿ ಎಂಬುದು ಇಂದಿನ ಹೋರಾಟವಲ್ಲ. ಅನೇಕ ವರ್ಷಗಳಿಂದ ಈ ಹೋರಾಟ ನಡೆದುಕೊಂಡು ಬಂದಿದೆ. ಇಂದು ಮೀಸಲಾತಿ ಬಗ್ಗೆ ಮಾತಾಡುವವರು ತಾವು ಅಧಿಕಾರದಲ್ಲಿದ್ದಾಗ ಏನೂ ಮಾಡಲು ಆಗಿಲ್ಲ. ಎಸ್‌ಸಿ ಸಮುದಾಯಕ್ಕೆ ಶೇ. 15ರಿಂದ 17 ಮೀಸಲಾತಿ, ಎಸ್‌ಟಿ ಸಮುದಾಯಕ್ಕೆ ಶೇ. 7.5 ಮೀಸಲಾತಿಯನ್ನು ಶ್ರೀರಾಮುಲು ಮಾಡುತ್ತಾನೆ ಎಂಬ ನಂಬಿಕೆಯಿಂದ ಸ್ವಾಮಿಗಳು ಧರಣಿ ಕುಳಿತಿದ್ದಾರೆ. ಡಾ. ಬಿ.ಆರ್‌. ಅಂಬೇಡ್ಕರ್‌ ಆಶಯದಂತೆ ಪರಿಶಿಷ್ಟಪಂಗಡದ ಹಿತಕಾಯಲು ನಾವು ಬದ್ಧರಾಗಿದ್ದೇವೆ. ಈ ಬಗ್ಗೆ ಸಾಕಷ್ಟು ಆಶ್ವಾಸನೆ ನೀಡಿದ್ದೇನೆ. ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಮಾತುಕೊಟ್ಟಿದ್ದೇನೆ. ಅದರಿಂದ ಹಿಂದೆ ಸರಿಯುವ ಮಾತೇ ಇಲ್ಲ. ಕಾನೂನು ತೊಡಕಿನಿಂದ ಹಾಗೂ ಕೆಲವು ರಾಜ್ಯಗಳಲ್ಲಿ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸಿದಾಗ ಸುಪ್ರೀಂ ಕೋರ್ಚ್‌ನಲ್ಲಿ ಆದ ಕೆಲವು ತೊಡಕುಗಳಿಂದಾಗಿ ಹಿಂಜರಿದಿದ್ದೇವೆ. ನಮ್ಮ ಸರ್ಕಾರವು ಕಾನೂನಿನ ಪರಿಮಿತಿಯನ್ನು ನೋಡಿಕೊಂಡು ನಿರ್ಧರಿಸುತ್ತದೆ. ಮೀಸಲಾತಿ ಹೆಚ್ಚಳ ಮಾಡದವರು ಆ ಬಗ್ಗೆ ಮಾತಾಡುತ್ತಿದ್ದಾರೆ. ಮೀಸಲಾತಿಯನ್ನು ನಾನು ಕೊಡಿಸಿಯೇ ತೀರುತ್ತೇನೆ ಎಂದರು.

ಸಂಸದ ದೇವೇಂದ್ರಪ್ಪ, ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಎಸ್‌. ದಿವಾಕರ್‌, ಜಿ.ಟಿ. ಪಂಪಾಪತಿ, ಜಿಲ್ಲಾಧಿಕಾರಿ ಪವನ್‌ಕುಮಾರ್‌ ಮಾಲಪಾಟಿ, ಎಸ್‌ಪಿ ಸೈದುಲ್ಲಾ ಅದಾವತ್‌, ಡಿವೈಎಸ್ಪಿ ಮಲ್ಲೇಶ್‌ ದೊಡ್ಡಮನಿ, ತಹಸೀಲ್ದಾರ್‌ ಕೆ.ಎಂ. ಗುರುಬಸವರಾಜ್‌, ಸಿಪಿಐ ಎಂ.ಎಂ. ಡಪ್ಪಿನ್‌, ಮತ್ತಾಜನಹಳ್ಳಿ ಬಸವರಾಜ್‌,ನರಸಿಂಹ, ವಕೀಲರಾದ ಪರಶುರಾಮ್‌, ಜಿ. ಚನ್ನಬಸಪ್ಪ, ರಾಮಕೃಷ್ಣ, ಕಾಂಗ್ರೆಸ್‌ ಮುಖಂಡ ಜಯರಾಂ, ರೈತ ಮೋರ್ಚಾ ತಾಲೂಕು ಉಪಾಧ್ಯಕ್ಷ ಟಿ.ಪಿ. ಸಿದ್ದನಗೌಡ, ಜಿ. Ðಣ್ಮುಖಪ್ಪ,ದೇವೇಂದ್ರಪ್ಪ, ಮುಖಂಡರಾದ ಯರ್ರಿಸ್ವಾಮಿ, ಗುರುರಾಜ್‌, ಶಿವನಗೌಡ, ನರೇಂದ್ರ ಪಾಟೀಲ್‌, ಸೀತಮ್ಮ ಕುಮಾರಸ್ವಾಮಿ, ಗಂಡಿ ಮಾರೆಪ್ಪ, ಸೋವೇನಹಳ್ಳಿ ಪುರುಷೋತ್ತಮ್‌,ದರೋಜಿ ರಮೇಶ್‌ ಇತರರು ಇದ್ದರು.

ಬೆಂಗಳೂರಿನಲ್ಲಿ ಕೋವಿಡ್ ಹೊಸಪ್ರಕರಣ ಪತ್ತೆ!

0

ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ 100 ಆಸುಪಾಸಿನಲ್ಲಿದ್ದ ಕೊರೋನಾ ಸೋಂಕು ಹೊಸ ಪ್ರಕರಣಗಳು 150ಕ್ಕೆ ಹೆಚ್ಚಳವಾಗಿವೆ.

ನಗರದಲ್ಲಿ ಶನಿವಾರ 150 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, 162 ಮಂದಿ ಗುಣಮುಖರಾಗಿದ್ದಾರೆ.
ಸೋಂಕಿತರ ಸಾವು ವರದಿಯಾಗಿಲ್ಲ. ಸದ್ಯ 1579 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಸೋಂಕು ಪರೀಕ್ಷೆಗಳು 12 ಸಾವಿರ ನಡೆದಿದ್ದು, ಪಾಸಿಟಿವಿಟಿ ದರ ಶೇ.1.2ರಷ್ಟುದಾಖಲಾಗಿದೆ.

ಶುಕ್ರವಾರಕ್ಕೆ ಹೋಲಿಸಿದರೆ ಪರೀಕ್ಷೆಗಳಲ್ಲಿ ಹೆಚ್ಚಿನ ವ್ಯತ್ಯಯವಾಗದಿದ್ದರೂ ಹೊಸ ಪ್ರಕರಣಗಳು ಬರೋಬ್ಬರಿ 61 ಹೆಚ್ಚಳವಾಗಿವೆ. (ಶುಕ್ರವಾರ 89 ಕೇಸ್‌, ಸಾವು ಶೂನ್ಯ, ಪಾಸಿಟಿವಿಟಿ ದರ ಶೇ.0.84)ಬೀದಿಗೆ ಬಂದ ಕೋವಿಡ್ ವಾರಿಯರ್ಸ್ ಕುಟುಂಬಗಳು
ಈ ಹಿಂದೆ ಮೇ 11ರಂದು 156 ಪ್ರಕರಣಗಳು ಪತ್ತೆಯಾಗಿದ್ದವು.

ಬಳಿಕ ಇಳಿಮುಖವಾಗಿ ಕಳೆದ ಒಂದು ವಾರದಿಂದ ಕೊರೋನಾ ಪ್ರಕರಣಗಳು 100ರ ಗಡಿಯಲ್ಲಿ ವರದಿಯಾಗುತ್ತಿದ್ದವು. ಈಗ ಮತ್ತೆ 11 ದಿನಗಳ ಬಳಿಕ 150ಕ್ಕೆ ಹೆಚ್ಚಳವಾಗಿವೆ. ರಾಜ್ಯದ ಒಟ್ಟಾರೆ ಸೋಂಕು ಪ್ರಕರಣಗಳ ಪೈಕಿ ಶೇ.97ರಷ್ಟು(155ರಲ್ಲಿ 150 ಕೇಸ್‌) ಬೆಂಗಳೂರು ಒಂದರಲ್ಲಿಯೇ ಪತ್ತೆಯಾಗಿವೆ.

ಇನ್ನು ಪರೀಕ್ಷೆ ಹೆಚ್ಚಳವಾಗದಿದ್ದರೂ ಹೊಸ ಪ್ರಕರಣಗಳು ಹೆಚ್ಚಾಗಿರುವುದು ಒಂದಿಷ್ಟುಆತಂಕ ಮೂಡಿಸಿದೆ.
ಸದ್ಯ ಸಕ್ರಿಯ ಸೋಂಕಿತರ ಪೈಕಿ 9 ಮಂದಿ ಮಾತ್ರ ಆಸ್ಪತ್ರೆಯಲ್ಲಿದ್ದು, ಈ ಪೈಕಿ ಐಸಿಯುನಲ್ಲಿ ಒಬ್ಬರು, ಆಕ್ಸಿಜನ್‌ ಹಾಸಿಗೆಯಲ್ಲಿ ಇಬ್ಬರು, ಸಾಮಾನ್ಯ ಹಾಸಿಗೆಗಳಲ್ಲಿ ಆರು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉಳಿದ 1570 ಮಂದಿ ಮನೆಯಲ್ಲಿ ಆರೈಕೆಯಲ್ಲಿದ್ದಾರೆ. 5ಕ್ಕಿಂತ ಕಡಿಮೆ ಪ್ರಕರಣಗಳಿರುವ ನಾಲ್ಕು ಕ್ಲಸ್ಟರ್‌ ಪ್ರದೇಶಗಳಿವೆ. ಈವರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ 17.86 ಲಕ್ಷಕ್ಕೆ, ಗುಣಮುಖರ ಸಂಖ್ಯೆ 17.67 ಲಕ್ಷಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 16,964 ಇದೆ ಎಂದು ಬಿಬಿಎಂಪಿ ಕೊರೋನಾ ವರದಿಯಲ್ಲಿ ತಿಳಿಸಲಾಗಿದೆ.

ದತ್ತಾತ್ರೇಯ- ಬಾಬಾಬುಡನ್ ಗಿರಿ ದರ್ಗಾದ ವಿವಾದಿತ ವಿಡಿಯೊ ಕಿಡಿಗೇಡಿಗಳ ಸೃಷ್ಟಿ

0

ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದ ಆವರಣದಲ್ಲಿ ನಮಾಝ್ ಮಾಡಿರುವ ವೈರಲ್ ವಿಡಿಯೋ ಸಂಬಂಧ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಸ್ಪಷ್ಟನೆ ನೀಡಿದ್ದಾರೆ.

ವಿವಾದಿತ ಸ್ಥಳದಲ್ಲಿ ನಮಾಜ್ ಮಾಡಿಲ್ಲ. ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಿ ವಿವಾದ ಹುಟ್ಟುಹಾಕಲು ಕಿಡಿಗೇಡಿಗಳು ಹಳೆಯ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ ಎಂದು ತಿಳಿಸಿದರು.

ಈ ವಿಡಿಯೋ ಸಂಬಂಧ ಸುದ್ದಿಗಾರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಇನಾಂ ದತ್ತಾತ್ರೇಯ ಬಾಬಾಬುಡನ್ ದರ್ಗಾದಲ್ಲಿನ ಪೂಜಾವಿಧಾನಗಳು ಹಾಗೂ ನಿರ್ವಹಣೆಯನ್ನು ಯಾರು ಮಾಡಬೇಕೆಂಬ ಬಗೆಗಿನ ವಿವಾದ ನ್ಯಾಯಾಲಯದಲ್ಲಿದೆ. ವಿಷಯಕ್ಕೆ ಸಂಬಂಧಿಸಿದಂತೆ 2008ರಲ್ಲಿ ನ್ಯಾಯಾಲಯ ಯಥಾಸ್ಥಿತಿ ಕಾಪಾಡಲು ಆದೇಶಿಸಿದ್ದು, 1989ರ ಫೆ.25ರಂದು ಮುಜರಾಯಿ ಆಯುಕ್ತರ ಆದೇಶ ಪಾಲನೆಗೆ ನ್ಯಾಯಾಲಯ ಆದೇಶಿಸಿದ್ದು, ಇದನ್ನು ಜಿಲ್ಲಾಡಳಿತ ಚಾಚೂ ತಪ್ಪದೇ ಪಾಲಿಸುತ್ತಿದೆ ಎಂದರು.

ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿರುವ ವಿವಾದಿತ ಸ್ಥಳವೆ ಬೇರೆ, ನಮಾಝ್ ಮಾಡಿರುವ ಸ್ಥಳವೇ ಬೇರೆಯಾಗಿದ್ದು, ವಿವಾದಿತ ಸ್ಥಳದಲ್ಲಿ ಯಾರೂ ನಮಾಝ್ ಮಾಡಿಲ್ಲ, ಯಾವ ಕಾನೂನು ಉಲ್ಲಂಘನೆಯಾಗಿಲ್ಲ ಎಂದು ತಿಳಿಸಿದ್ದಾರೆ.

ಗುಹೆ ಹೊರಭಾಗದಲ್ಲಿ 38 ಕೊಠಡಿಗಳಿವೆ. ಶಾಖಾದ್ರಿಯ ಸಂಬಂಧಿಕರಿಗೆ 3 ವಸತಿಗೃಹಗಳನ್ನು ನೀಡಲಾಗಿದೆ. ಉಳಿದ 32 ಕೊಠಡಿಗಳಲ್ಲಿ ಪ್ರವಾಸಿಗರು ಉಳಿದುಕೊಳ್ಳಲು ಅವಕಾಶ ನೀಡಲಾಗುತ್ತಿದೆ. ಅದರಲ್ಲಿ ಒಂದು ಕೊಠಡಿಯನ್ನು ನಮಾಝ್ ಗೆ ಬಳಸಿಕೊಳ್ಳಲಾಗುತ್ತಿದೆ ಎಂದ ಅವರು, ನಮಾಝ್ ಮಾಡಿರುವ ವಿಡಿಯೋ 1-2ತಿಂಗಳಷ್ಟು ಹಳೆಯದ್ದಾಗಿದೆ. ನಮಾಝ್ ಮಾಡಿರುವ ಜಾಗ, ವಿವಾದಿತ ಪ್ರದೇಶದ ಹೊರಗಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟ ನೀಡಿದರು.

ಇನಾಂ ದತ್ತಾತ್ರೇಯ ಬಾಬಾಬುಡನ್‍ಸ್ವಾಮಿ ದರ್ಗಾದ ಗುಹೆಯ ಒಳಗಡೆ ಯಾರು ಪೂಜೆ ಸಲ್ಲಿಸಬೇಕು. ಹೇಗೆ ಪೂಜೆ ಸಲ್ಲಿಸಬೇಕು, ಯಾವ ಪೂಜಾ ವಿಧಾನಗಳನ್ನು ಮಾಡಬೇಕು ಹಾಗೂ ಅಲ್ಲಿನ ಆಡಳಿತವನ್ನು ಯಾರು ನೋಡಿಕೊಳ್ಳಬೇಕೆಂಬ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಹಿಂದೆ ಹೊರಡಿಸಿರುವ ಆದೇಶದಲ್ಲಿ
ತಿಳಿಸಿದ್ದಾರೆ.

ಅದರಂತೆ ಜಿಲ್ಲಾಡಳಿತ ನೇಮಿಸಿರುವ ಮುಜಾವರ್ ಮಾತ್ರ ದತ್ತಜಯಂತಿ ಮತ್ತು ಉರೂಸ್ ವೇಳೆಯಲ್ಲಿ ಪದ್ಧತಿಯಂತೆ ಪಾದುಕೆಗಳಿಗೆ ಹೂವು ಹಾಕಿ ಪೂಜೆ ಸಲ್ಲಿಸಬೇಕು. ಬೇರೆಯವರು ಗರ್ಭಗುಡಿಗೆ ಹೋಗಿ ಪೂಜೆ ಸಲ್ಲಿಸುವಂತಿಲ್ಲ, ಧಾರ್ಮಿಕ ಗುರುಗಳು ಬಂದು ಪೂಜೆ ಸಲ್ಲಿಸಲು ಇಚ್ಛೆ ವ್ಯಕ್ತಪಡಿಸಿದರೆ ಅವಕಾಶ ಕಲ್ಪಿಸಲಾಗುತ್ತಿದೆ.
ಇದರ ಹೊರತಾಗಿ ಬೇರೆ ಆಚರಣೆಗೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು.

ಯಾವುದೇ ಕಾರಣಕ್ಕೂ ನ್ಯಾಯಾಲಯದ ಆದೇಶ ಉಲ್ಲಂಘನೆಗೆ ಅವಕಾಶ ಮಾಡಿಕೊಡುವುದಿಲ್ಲ. ಆದೇಶದ ಉಲ್ಲಂಘನೆಯಾಗಿದ್ದರೇ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು. ವಿವಾದಿತ ಸ್ಥಳದಲ್ಲಿರುವ ಗುಹೆಯೊಳಗೆ ತೆರಳಲು ಎರಡು ಸಮುದಾಯದವರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.

ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಲು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಕಿಡಿಗೇಡಿಗಳ ಪತ್ತೆಗೆ ತನಿಖೆ ನಡೆಸುವ ಕುರಿತು ಚಿಂತನೆ ನಡೆಸಲಾಗುವುದು. ಈ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಲಾಗುವುದು ಎಂದರು.

ಸ್ಕಾಟ್ಲೆಂಡಿನ ದಂಡಿ ವಿವಿಗೆ ಸಚಿವ ಅಶ್ವತ್ಥನಾರಾಯಣ ಭೇಟಿ

0

ಜೀವವಿಜ್ಞಾನ ಕ್ಷೇತ್ರದ ಅಧ್ಯಯನ ಮತ್ತು ಸಂಶೋಧನೆಯಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಸ್ಕಾಟ್ಲೆಂಡ್ ನ ದಂಡಿ ವಿಶ್ವವಿದ್ಯಾಲಯದ ಜೀವವಿಜ್ಞಾನ ವಿಭಾಗ ಮತ್ತು ಅತ್ಯಾಧುನಿಕಜೀವವಿಜ್ಞಾನ ಕ್ಷೇತ್ರದ ಅಧ್ಯಯನ ಮತ್ತು ಸಂಶೋಧನೆಯಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಇಲ್ಲಿನ ದಂಡಿ ವಿಶ್ವವಿದ್ಯಾಲಯದ ಜೀವವಿಜ್ಞಾನ ವಿಭಾಗ ಮತ್ತು ಅತ್ಯಾಧುನಿಕ ಪ್ರಯೋಗಾಲಯಗಳಿಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಶನಿವಾರ ಭೇಟಿ ನೀಡಿ, ಸಮಗ್ರವಾಗಿ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಸಚಿವರೊಂದಿಗೆ ಮಾತನಾಡಿದ ವಿ.ವಿ.ದ ಉನ್ನತಾಧಿಕಾರಿಗಳ ನಿಯೋಗವು, `ನಮ್ಮ ತಂಡವು ಬರುವ ಸೆಪ್ಟೆಂಬರಿನಲ್ಲಿ ಭಾರತಕ್ಕೆ ಭೇಟಿ ನೀಡಲಿದೆ. ಕರ್ನಾಟಕ ಸರಕಾರವು ಆಸಕ್ತಿ ವಹಿಸಿದರೆ ಜೀವವಿಜ್ಞಾನ ಅಧ್ಯಯನಕ್ಕೆ ಸಹಭಾಗಿತ್ವ ಹೊಂದಲು ಒಡಂಬಡಿಕೆಗೆ ಸಿದ್ಧರಿದ್ದೇವೆ. ಇಂತಹ ಕೇಂದ್ರಗಳನ್ನು ರಾಜ್ಯದ ಹಲವು ವಿ.ವಿ.ಗಳಲ್ಲಿ ತೆರೆಯಬಹುದು’ ಎಂದು ತಿಳಿಸಿತು.

ಕರ್ನಾಟಕ ಸರಕಾರವು ಒಡಂಬಡಿಕೆ ಮಾಡಿಕೊಂಡರೆ, ತಮ್ಮ ವಿವಿ ವತಿಯಿಂದ ರಾಜ್ಯದಲ್ಲಿ ಅಧ್ಯಯನ ಮತ್ತು ಸಂಶೋಧನೆ ಕೈಗೊಳ್ಳಲು ಸಹಕಾರ ನೀಡಲಾಗುವುದು. ಇದಲ್ಲದೆ, ಜೀವವಿಜ್ಞಾನ ವಿಭಾಗವು ಹೊರಗಿನ ಮಾರುಕಟ್ಟೆಯಲ್ಲಿ ಕೈಗೊಳ್ಳುವ ವಾಣಿಜ್ಯ ಚಟುವಟಿಕೆಗಳ ಮೂಲಕ ಹಣಕಾಸು ಕ್ರೋಡೀಕರಣ ಮಾಡಬಹುದು ಎಂದು ದಂಡಿ ವಿ.ವಿ.ದ ಪ್ರತಿನಿಧಿಗಳು ಭರವಸೆ ನೀಡಿದ್ದಾರೆ.

ಇದಕ್ಕೆ ಸ್ಪಂದಿಸಿದ ಸಚಿವರು, ಒಡಂಬಡಿಕೆಗೆ ಇರುವ ಸಾಧ್ಯತೆಗಳನ್ನು ಪರಿಶೀಲಿಸಿ, ಮುಂದಿನ ಹೆಜ್ಜೆ ಇಡುವುದಾಗಿ ಅವರಿಗೆ ಹೇಳಿದ್ದಾರೆ.

`ದಂಡಿ ವಿ.ವಿ.ದಲ್ಲಿ ದುಬಾರಿ ಮತ್ತು ಅತ್ಯಾಧುನಿಕ ಜೀವವಿಜ್ಞಾನ ಸಾಧನ-ಸಲಕರಣೆಗಳಿವೆ. ಇಲ್ಲಿ ಇಮೇಜ್ ಅನಾಲಿಸಿಸ್, ಡೇಟಾ ಕಮ್ಯುನಿಕೇಷನ್, ಸೈನ್ಸ್ ಕಮ್ಯುನಿಕೇಷನ್, ಡೇಟಾ ಸೈನ್ಸ್, ಮಶೀನ್ ಲರ್ನಿಂಗ್ ಕೋರ್ಸುಗಳಿವೆ. ಇದರಿಂದ ಕರ್ನಾಟಕದ ವಿದ್ಯಾರ್ಥಿಗಳ ಸಾಮರ್ಥ್ಯ ವೃದ್ಧಿಗೆ ಹೇರಳ ಅವಕಾಶಗಳು ಸಿಗಲಿವೆ. ಜತೆಗೆ, ನಾವು ಪದವಿ, ಸ್ನಾತಕೋತ್ತರ ಮತ್ತು ಪಿಎಚ್.ಡಿ. ಸಂಶೋಧನಾ ಕ್ರಮಗಳ ವಿನ್ಯಾಸವನ್ನೂ ಅಭಿವೃದ್ಧಿ ಪಡಿಸಿ ಕೊಡಲಿದ್ದೇವೆ’ ಎಂದು ನಿಯೋಗವು ವಿವರಿಸಿದೆ.

ದಂಡಿ ವಿ.ವಿ. ಈಗಾಗಲೇ ಸಿಂಗಪುರ ಮತ್ತು ಚೀನಾದೊಂದಿಗೆ ಇಂತಹ ಸಹಭಾಗಿತ್ವ ಹೊಂದಿದೆ. ಇಲ್ಲಿನ ಬೋಧಕರು ಪ್ರತೀವರ್ಷ ಚೀನಾಗೆ ಹೋಗಿ, ಬೋಧಿಸುತ್ತಿದ್ದಾರೆ. ಎರಡು ವರ್ಷಗಳ ಕಾಲ ಸ್ಥಳೀಯವಾಗಿ ಅಧ್ಯಯನ ಮಾಡುವ ವಿದ್ಯಾರ್ಥಿಗಳನ್ನು ನಂತರ ಇಂಗ್ಲೆಂಡಿನ ಕ್ಯಾಂಪಸ್ಸಿಗೇ ಕರೆಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ರಾಜ್ಯ ಸರಕಾರದ ನಿಯೋಗದಲ್ಲಿ ಸಚಿವರ ಜತೆಗೆ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ.ಕುಮಾರ್ ನಾಯಕ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್, ಡಾ.ಬಿ.ಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿವಿ ಕುಲಪತಿ ಡಾ.ಭಾನುಮೂರ್ತಿ, ಉನ್ನತ ಶಿಕ್ಷಣ ಪರಿಷತ್ತಿನ ಗೋಪಾಲಕೃಷ್ಣ ಜೋಶಿ, ಆಡಳಿತಾಧಿಕಾರಿ ತಾಂಡವ ಗೌಡ ಇದ್ದರು.

ಸಚಿವ ಅಶ್ವತ್ಥನಾರಾಯಣ ನೇತೃತ್ವದ ರಾಜ್ಯ ನಿಯೋಗವು ಇದೇ ಸಂದರ್ಭದಲ್ಲಿ ಇಂಗ್ಲೆಂಡಿನ ಸಂಸದ ಮಾರ್ಟಿನ್ ಡೇ ಅವರನ್ನು ಎಡಿನ್ ಬರೊದಲ್ಲಿ ಭೇಟಿ ಮಾಡಿ, ಹಲವು ವಿಚಾರಗಳನ್ನು ಚರ್ಚಿಸಿತು. ಈ ಸಂದರ್ಭದಲ್ಲಿ ಡೇ ಅವರು, ಸಚಿವರ ಗೌರವಾರ್ಥ ಔತಣಕೂಟ ಏರ್ಪಡಿಸಿದ್ದರು. ಇದರಲ್ಲಿ ಡೇ ಅವರ ಭಾರತೀಯ ಮೂಲದ ಪತ್ನಿಯಾಗಿರುವ ಕೇರಳದ ನಿಧಿನ್ ಚಂದ್ ಕೂಡ ಉಪಸ್ಥಿತರಿದ್ದರು. ಪ್ರಯೋಗಾಲಯಗಳಿಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಶನಿವಾರ ಭೇಟಿ ನೀಡಿ, ಸಮಗ್ರವಾಗಿ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಸಚಿವರೊಂದಿಗೆ ಮಾತನಾಡಿದ ವಿ.ವಿ.ದ ಉನ್ನತಾಧಿಕಾರಿಗಳ ನಿಯೋಗವು, `ನಮ್ಮ ತಂಡವು ಬರುವ ಸೆಪ್ಟೆಂಬರಿನಲ್ಲಿ ಭಾರತಕ್ಕೆ ಭೇಟಿ ನೀಡಲಿದೆ. ಕರ್ನಾಟಕ ಸರಕಾರವು ಆಸಕ್ತಿ ವಹಿಸಿದರೆ ಜೀವವಿಜ್ಞಾನ ಅಧ್ಯಯನಕ್ಕೆ ಸಹಭಾಗಿತ್ವ ಹೊಂದಲು ಒಡಂಬಡಿಕೆಗೆ ಸಿದ್ಧರಿದ್ದೇವೆ. ಇಂತಹ ಕೇಂದ್ರಗಳನ್ನು ರಾಜ್ಯದ ಹಲವು ವಿ.ವಿ.ಗಳಲ್ಲಿ ತೆರೆಯಬಹುದು’ ಎಂದು ತಿಳಿಸಿತು.

ಕರ್ನಾಟಕ ಸರಕಾರವು ಒಡಂಬಡಿಕೆ ಮಾಡಿಕೊಂಡರೆ, ತಮ್ಮ ವಿವಿ ವತಿಯಿಂದ ರಾಜ್ಯದಲ್ಲಿ ಅಧ್ಯಯನ ಮತ್ತು ಸಂಶೋಧನೆ ಕೈಗೊಳ್ಳಲು ಸಹಕಾರ ನೀಡಲಾಗುವುದು. ಇದಲ್ಲದೆ, ಜೀವವಿಜ್ಞಾನ ವಿಭಾಗವು ಹೊರಗಿನ ಮಾರುಕಟ್ಟೆಯಲ್ಲಿ ಕೈಗೊಳ್ಳುವ ವಾಣಿಜ್ಯ ಚಟುವಟಿಕೆಗಳ ಮೂಲಕ ಹಣಕಾಸು ಕ್ರೋಡೀಕರಣ ಮಾಡಬಹುದು ಎಂದು ದಂಡಿ ವಿ.ವಿ.ದ ಪ್ರತಿನಿಧಿಗಳು ಭರವಸೆ ನೀಡಿದ್ದಾರೆ.

ಯುದ್ಧದಲ್ಲಾದ ನಷ್ಟವನ್ನ ರಷ್ಯ ಭರಿಸಬೇಕು- ಝೆಲೆನ್ಸ್ಕಿ

0

ಉಕ್ರೇನ್ ಹಾಗೂ ರಷ್ಯಾ ಯುದ್ಧ ಆರಂಭಗೊಂಡು ಸುಮಾರು ಮೂರು ತಿಂಗಳೇ ಕಳೆದಿದೆ. ಯುದ್ಧದಿಂದ ಉಕ್ರೇನ್ ಗೆ ಸುಮಾರು 100 ಬಿಲಿಯನ್ ಡಾಲರ್ ನಷ್ಟು ನಷ್ಟ ಸಂಭವಿಸಿದೆ. ಇದಕ್ಕೆ ರಷ್ಯಾ ಪರಿಹಾರ ನೀಡಬೇಕು ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‌ಸ್ಕಿ ಅವರು ತಿಳಿಸಿದ್ದಾರೆ.

ಹೀಗೆ ಮಾಡುವುದು ನ್ಯಾಯೋಚಿತವಾಗಿದೆ. ನಮ್ಮ ದೇಶದ ಮೇಲೆ ಸುರಿದ ಪ್ರತೀ ಬಾಂಬ್ ನ, ನಮ್ಮತ್ತ ಉಡಾಯಿಸಿದ ಪ್ರತಿಯೊಂದು ಕ್ಷಿಪಣಿಯ ಭಾರವನ್ನೂ ಅವರು ಅನುಭವಿಸಬೇಕು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಬಹುಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಲು ನಾವು ಪಾಲುದಾರ ದೇಶವನ್ನು ಆಹ್ವಾನಿಸುತ್ತೇವೆ. ಮತ್ತು ರಷ್ಯಾದ ಕ್ರಮದಿಂದ ತೊಂದರೆ ಅನುಭವಿಸಿದ ಎಲ್ಲರೂ ತಮಗಾದ ಎಲ್ಲಾ ನಷ್ಟಗಳಿಗೂ ಪರಿಹಾರ ಪಡೆಯುವುದನ್ನು ಖಚಿತಪಡಿಸುವ ಕಾರ್ಯವಿಧಾನವನ್ನು ರಚಿಸಲಿದ್ದೇವೆ ಎಂದು ಅವರು ದೇಶವನ್ನುದ್ದೇಶಿಸಿ ನೀಡಿದ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.

ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದ ಶನಿವಾರದ ಕೆಲವು ಮಹತ್ವದ ಬೆಳವಣಿಗೆಗಳು ಹೀಗಿವೆ. ಅಝೊವ್‌ಸ್ತಲ್ ಉಕ್ಕು ಸ್ಥಾವರವನ್ನು ಸಂಪೂರ್ಣ ನಿಯಂತ್ರಣಕ್ಕೆ ಪಡೆದಿರುವುದಾಗಿ ರಷ್ಯಾ ಪ್ರತಿಪಾದನೆ. ಇದರೊಂದಿಗೆ ಉಕ್ರೇನ್ ನ ಅತ್ಯಂತ ಆಯಕಟ್ಟಿನ ಬಂದರು ನಗರ ಮರಿಯುಪೋಲ್‌ನಲ್ಲಿ ಉಕ್ರೇನ್ ಯೋಧರ ಅಂತಿಮ ಪ್ರತಿರೋಧವನ್ನು ಹತ್ತಿಕ್ಕಿದ್ದು ಸ್ಥಾವರದಲ್ಲಿದ್ದ 2,439 ಉಕ್ರೇನ್ ಯೋಧರು ಶರಣಾಗಿರುವುದಾಗಿ ರಶ್ಯದ ರಕ್ಷಣಾ ಇಲಾಖೆ ಹೇಳಿದೆ.

ಯುದ್ಧದಿಂದ ಜರ್ಝರಿತಗೊಂಡಿರುವ ಉಕ್ರೇನ್‌ಗೆ ಈ ವರ್ಷ ಸುಮಾರು 20 ಬಿಲಿಯನ್ ಡಾಲರ್ನಷ್ಟು ನೆರವು ಒದಗಿಸುವುದಾಗಿ ಜಿ7 ದೇಶಗಳ ಘೋಷಣೆ. ಉಕ್ರೇನ್‌ನ ಪೂರ್ವದ ಲುಹಾಂನ್ಸ್ಕ್ ಪ್ರಾಂತದಲ್ಲಿ ರಷ್ಯಾ ಸೇನೆ ಭಾರೀ ಆಕ್ರಮಣ ಮುಂದುವರಿಸಿದೆ. ಸಿವಿಯೆರೊಡೊನೆಟ್ಸ್ಕ್ ನಗರದಲ್ಲಿ ಬಾಂಬ್ ದಾಳಿಯಿಂದ ತೀವ್ರ ಹಾನಿಯಾಗಿದೆ. ಜನವಸತಿ ಪ್ರದೇಶದ ಮೇಲೆ ಬಾಂಬ್ ದಾಳಿ ನಡೆಸುತ್ತಿದೆ.ಇದರಿಂದ ಅನೇಕ ಜನ ಸಾವನ್ನಪ್ಪಿದ್ದಾರೆ ಎಂದು ಲುಹಾನ್ಸ್ಕ್ ಗವರ್ನರ್ ಸೆರ್ಹಿಯ್ ಗೈದಾಯಿಯನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿಯಲ್ಲಿ ತಿಳಿಸಿದೆ.

ಉಕ್ರೇನ್‌ನಲ್ಲಿ ರಷ್ಯಾ ನಡೆಸುತ್ತಿರುವ ಬಾಂಬ್ ದಾಳಿಯಿಂದಾಗಿ ಅಲ್ಲಿಂದ ಅಗತ್ಯದ ಆಹಾರ ವಸ್ತುಗಳ ರಫ್ತಿಗೆ ಅಡ್ಡಿಯಾಗಿದೆ. ಇದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಆಹಾರ ವಸ್ತುಗಳ ದರ ಗಗನಕ್ಕೇರಿದ್ದು ಬಡಜನರಿಗೆ ತೀವ್ರ ಸಮಸ್ಯೆಯಾಗಿದೆ . ರಷ್ಯಾವು ತನ್ನ ಅನಾಗರಿಕ ಯುದ್ಧವನ್ನು ಕೊನೆಗೊಳಿಸಿ ಉಕ್ರೇನ್‌ನ ರೈತರು ತಮ್ಮ ಕಾಯಕ ಮುಂದುವರಿಸಲು ಅನುವು ಮಾಡಿಕೊಡಬೇಕಾಗಿದೆ ಎಂದು ಬ್ರಿಟನ್ ಆಗ್ರಹಿಸಿದೆ.

ಉಕ್ರೇನ್‌ಗೆ ಅಮೆರಿಕದ 40 ಬಿಲಿಯನ್ ಡಾಲರ್ ನೆರವಿನ ಮಸೂದೆಗೆ ಅಲ್ಲಿನ ಸಂಸತ್ತು ಅನುಮೋದನೆ ನೀಡಿದೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.

ಉಕ್ರೇನ್‌ನ ಝಿಟೊಮಿರ್ ಪ್ರದೇಶದಲ್ಲಿ ಸಂಗ್ರಹಿಸಿಟ್ಟಿದ್ದ ಬೃಹತ್ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಕ್ಯಾಲಿಬ್ರ್ ಕ್ರೂಸ್ ಕ್ಷಿಪಣಿಯ ಮೂಲಕ ಧ್ವಂಸಗೊಳಿಸಲಾಗಿದೆ. ಇವು ಉಕ್ರೇನ್‌ಗೆ ಪಾಶ್ಚಿಮಾತ್ಯ ದೇಶಗಳಿಂದ ಲಭಿಸಿದ ಶಸ್ತ್ರಾಸ್ತ್ರಗಳಾಗಿತ್ತು ಎಂದು ರಶ್ಯದ ರಕ್ಷಣಾ ಇಲಾಖೆ ನಿನ್ನೆ ಶನಿವಾರ ತಿಳಿಸಿದೆ.

ಅಮೆರಿಕ ಮತ್ತು ಯುರೋಪ್ ದೇಶಗಳು ಪೂರೈಸಿದ ಬೃಹತ್ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಮಿಲಿಟರಿ ಉಪಕರಣಗಳನ್ನು ನಾಶಗೊಳಿಸಲಾಗಿದೆ. ಸಂಘರ್ಷ ತೀವ್ರಗೊಂಡಿರುವ ಪೂರ್ವದ ಡೊನ್ಬಾಸ್ ವಲಯದಲ್ಲಿ ಈ ಶಸ್ತ್ರಾಸ್ತ್ರಗಳನ್ನು ಬಳಸಲು ಉಕ್ರೇನ್ ಯೋಜಿಸಿತ್ತು.