ತಾ.22-5-22 ರಂದು ಶಿವಮೊಗ್ಗದಲ್ಲಿ ನಾಡಿನ ಸುಪ್ರಸಿದ್ಧ ವಿದ್ವಾಂಸ ಡಾ.ಕೆ.ಎಸ್.ನಾರಾಯಣಾ ಚಾರ್ಯರ ಸ್ಮರಣೆ ಕಾರ್ಯಕ್ರಮ ನಡೆಯಿತು.
ನಾರಾಯಣ ಸ್ಮರಣೆ ಕಾರ್ಯಕ್ರಮವನ್ನ ಸಂಸದ ಶ್ರೀ ಬಿ.ವೈ.ರಾಘವೇಂದ್ರ ಅವರು ಆಚಾರ್ಯರ ಪ್ರಕಟಿತ ಕೃತಿಗಳ ಬಳಿ ಸಾಲುದೀಪ ಬೆಳಗಿಸಿದರು.
ನಿರ್ಭೀತಿಯಿಂದ ಕಟು ಸತ್ಯಗಳನ್ನು, ದೇಶದ ಭವ್ಯ ಪರಂಪರೆಯನ್ನು, ಕೃತಿಗಳಮೂಲಕ ಅವರ ಮಾತುಗಳ ಮೂಲಕ ಹಿಡಿದಿಟ್ಟು, ಅದನ್ನು ಜನಮಾನಸಕ್ಕೆ ದಾಟಿಸುತ್ತ ಬಂದಿದ್ದ ಒಬ್ಬ ಮೇಧಾವಿ ಸಂತನ ಸ್ಮರಣೆಯನ್ನು ಅತ್ಯಂತ ವಿನಮ್ರತೆಯಿಂದ
ಮಾಡಲಾಯಿತು.
ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಅಜೇಯ ಸಂಸ್ಕೃತಿ ಬಳಗ ಹಾಗೂ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘ ಜಂಟಿಯಾಗಿ ಶ್ರೀ ಡಾ. ಕೆ.ಎಸ್. ನಾರಾಯಣಾಚಾರ್ಯ ರವರ ದಿವ್ಯ ಸ್ಮರಣೆಯ ಸಾರ್ಥಕ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಮಾನ್ಯ ಸಂಸದರಾದ ಶ್ರೀ ಬಿ.ವೈ ರಾಘವೇಂದ್ರ ರವರು ನಾರಾಯಣಾಚಾರ್ಯರು ಜೀವಿತದಲ್ಲಿ ಸರ್ಕಾರದ ಮನ್ನಣೆ ಸಿಗದೇ ವಂಚಿತರಾದ ಬಗ್ಗೆ ತಿಳಿದು ಖೇದವಾಗಿದೆ.ಇನ್ನುಮುಂದಾದರೂ ಸರಸ್ವತಿಪುತ್ರರಾದ ಅವರ ಕೊಡುಗೆ ಬಗ್ಗೆ ವಿವೇಚಿಸಬೇಕಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ನಾರಾಯಣ ಸ್ಮರಣೆ ಸಮಿತಿಯ ಗೌರವಾಧ್ಯಕ್ಷ ಶ್ರೀ ದತ್ತಾತ್ರೇಯ ಅವರು ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಹಾಗೂ ಡಾ. ಎಸ್. ಎಲ್. ಎನ್. ಸ್ವಾಮಿ ರವರು ಪ್ರೊ. ಕೆ.ಎಸ್. ನಾರಾಯಣಾಚಾರ್ಯ ರವರ ಬಗ್ಗೆ ಅದ್ಬುತ ಉಪನ್ಯಾಸವನ್ನು ನೀಡಿದರು…
ಆಂಗ್ಲ ಸಾಹಿತ್ಯಕ್ಕೆ ಸಂಬಂಧಿಸಿದ ವಿಷಯದಲ್ಲಿ ಡಾಕ್ಟರೇಟ್ ಮಾಡಿದ್ದ ಪ್ರೊ. ನಾರಾಯಣಾಚಾರ್ಯರು ಇನ್ನೊಂದೆಡೆ ವೇದಾಧ್ಯಯನದಲ್ಲೂ, ವಿಶೇಷವಾಗಿ ಕೃಷ್ಣ ಯಜುರ್ವೇದದಲ್ಲಿ ಪಾರಂಗತರಾಗಿದ್ದರು. ವೇದ ಸಂಸ್ಕೃತಿಯ ಪರಿಚಯ, ರಾಮಾಯಣ ಪಾತ್ರ ಪ್ರಪಂಚ, ಶ್ರೀ ಕೃಷ್ಣಾವತಾರದ ಕೊನೆಯ ಗಳಿಗೆಗಳು, ಮಹಾಭಾರತ ಕಾಲನಿರ್ಣಯ ಹೀಗೆ ಅವರ ಕೃತಿಗಳ ಹೆಸರೇ ಅವರು ಬಿಟ್ಟುಹೋಗಿರುವ ಮಹಾಸಂಪತ್ತಿನ ಪರಿಚಯವನ್ನು ಕೊಡುವಂಥದ್ದಾಗಿದೆ…

ಅವರ ಅಗಲಿಕೆ ದೇಶದ ಹಾಗೂ ರಾಜ್ಯದ ವಿದ್ವಾಂಸ ಪರಂಪರೆಗೆ ಆದ ನಷ್ಟ, ಅವರ ಸಾವಿರಾರು ಲೇಖನಗಳು, ನೂರೈವತ್ತಕ್ಕೂ ಹೆಚ್ಚಿನ ಕೃತಿಗಳು, ವೈಚಾರಿಕ ಪ್ರಖರತೆ ಹಾಗೂ ನಿಷ್ಟುರತೆಗಳು ಮತ್ತಷ್ಟು ಜನರನ್ನು ಉದ್ದೀಪಿಸುತ್ತದೆ.
ಕಾರ್ಯಕ್ರಮವು ಶಾರದಾ ಸಂಗೀತ ವಿದ್ಯಾಲಯದ ಮಹಿಳೆಯರ ಪ್ರಾರ್ಥನೆಯೊಂದಿಗೆ ಆರಂಭವಾಯಿತು.
ವಂದಾನಾರ್ಪಣೆಯೊಂದಿಗೆ ಮುಗಿಯಿತು.