Tuesday, March 3, 2026
Tuesday, March 3, 2026
Home Blog Page 1556

ಪತ್ರಿಕಾ ವಿತರಕರ ಸಂಘದಿಂದ ಅಪರೂಪದ ಕಾರ್ಯಕ್ರಮ

0

ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಪತ್ರಿಕೆ ಹಂಚುವ ಕಾರ್ಯ ಬೆನ್ನುಲುಬಾಗಲಿದೆ ಎಂದು ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ದಿ ಸಂಘದ ರಾಜ್ಯಾಧ್ಯಕ್ಷ ಶಂಕರ ಕುದುರೆಮೋತಿ ಹೇಳಿದರು.

ಶಿವಮೊಗ್ಗ ದಿನಪತ್ರಿಕೆ ಉಪಪ್ರತಿನಿಧಿಗಳ ಕ್ಷೇಮಾಭಿವೃದ್ದಿ ಸಂಘ (ರಿ) ವತಿಯಿಂದ ನಗರದ ಜೈಲ್ ರಸ್ತೆಯಲಿರುವ ಸಂಘದ ಪ್ರಧಾನ ಕಛೇರಿಯಲ್ಲಿ ಏರ್ಪಡಿಸಲಾಗಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಡ ವಿದ್ಯಾರ್ಥಿಗಳು ಶಾಲಾ ಶುಲ್ಕವನ್ನು ಕಟ್ಟಲಾಗದೆ ಶಾಲೆಯನ್ನೇ ಬಿಟ್ಟ ನಿದರ್ಶನಗಳು ಬಹಳಷ್ಟು ಇವೆ.

ಅಂತಹ ವಿದ್ಯಾರ್ಥಿಗಳಿಗೆ ಪತ್ರಿಕಾ ವಿತರಣಾ ಕಾರ್ಯ ನೆರವಾಗಲಿದೆ ಎಂದರು.
ವಿದ್ಯಾರ್ಥಿಗಳ ಸಾಧನೆಗೆ ಯಾವುದೂ ಅಡ್ಡಿಯಾಗಲ್ಲ, ಪತ್ರಿಕೆ ವಿತರಣೆ ಮಾಡಿಕೊಂಡೇ ಉತ್ತಮ ಅಂಕ ಗಳಿಸಿರುವ ವಿದ್ಯಾರ್ಥಿಗಳ ಸಾಧನೆ ಶ್ಲಾಘನೀಯ. ಬಾಲ್ಯದಲ್ಲೇ ಪತ್ರಿಕಾ ವಿತರಣೆ ಜೊತೆಯಲ್ಲಿಯೇ ವಿದ್ಯಾಭ್ಯಾಸವನ್ನು ಮಾಡಿ ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ.

ಇವರ ವಿದ್ಯಾಭ್ಯಾಸಕ್ಕೆ ಸರ್ಕಾರವೂ ಪ್ರೋತ್ಸಾಹ ನೀಡಿ ಧನ ಸಹಾಯ ಮಾಡಬೇಕೆಂದು ಆಗ್ರಹಿಸಿದರು.
ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ದಿ ಸಂಘದ ಪ್ರಧಾನ ಕಾರ್ಯದರ್ಶಿ ಅಕ್ಷಯಕುಮಾರ್ ಮಾತನಾಡಿ, ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿತರಕರ ಕಷ್ಟಗಳ ಬಗ್ಗೆ ಮಾತನಾಡಿದ ಅವರು, ಸರ್ಕಾರವು ನಮ್ಮನ್ನು ಕೆಳಮಟ್ಟದಲ್ಲಿಯೇ ನೋಡುತ್ತಿದೆ. ಮೀಸಲಾತಿಯಲ್ಲಿ ಪತ್ರಿಕೆ ವಿತರಣೆ ಮಾಡುತ್ತಿರುವವರಿಗೂ ಸ್ಥಾನವನ್ನು ಕಲ್ಪಿಸಿ, ಅವರ ಉನ್ನತ ವಿದ್ಯಾಭ್ಯಾಸ ಮತ್ತು ಅಭಿವೃದ್ದಿಗೆ ಸರ್ಕಾರ ಅನುಕೂಲ ಮಾಡಿಕೊಡಬೇಕೆಂದು ವಿನಂತಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗ ದಿನಪತ್ರಿಕೆ ಉಪಪ್ರತಿನಿಧಿಗಳ ಕ್ಷೇಮಾಭಿವೃದ್ದಿ ಸಂಘದ ಸತ್ಯನಾರಾಯಣ್ ಮಾತನಾಡಿ, ಮುಂದಿನ ದಿನಗಳಲ್ಲಿ ಪತ್ರಿಕೆ ವಿತರಣೆ ಮಾಡುವ ಹುಡುಗರಿಗೆ ಪ್ರೋತ್ಸಾಹ ಧನ ವಿತರಿಸುವಂತಹ ಕೆಲಸವನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದರು.

ಶಿವಮೊಗ್ಗ ದಿನಪತ್ರಿಕೆ ಉಪಪ್ರತಿನಿಧಿಗಳ ಕ್ಷೇಮಾಭಿವೃದ್ದಿ ಸಂಘದ ಕಾರ್ಯದರ್ಶಿ ಧನಂಜಯ ಹೆಚ್ ಮಾತನಾಡಿ, ದಿನಪತ್ರಿಕೆ ವಿತರಣೆ ಮಾಡಿ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕ ಪಡೆದು ಸಾಧನೆ ಮಾಡಿರುವುದು ಭವಿಷ್ಯದಲ್ಲಿ ಉನ್ನತ ಹುದ್ದೆಯನ್ನೇ ಅಲಂಕರಿಸುತ್ತಾರೆ.

ಶ್ರಮಪಟ್ಟಟವನಿಗೆ ಸುಖ ಸಿಕ್ಕೇ ಸಿಗುತ್ತದೆ. ಇದು ಹಿರಿಯರು ಹೇಳುವ ಅನುಭವದ ಮಾತು. ಅದು ಸತ್ಯವು ಹೌದು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಂಘದ ಗೌರವಾಧ್ಯಕ್ಷರಾದ ಗಣೇಶ್ ಭಟ್, ಖಜಾಂಚಿ ಯೋಗಿಶ್ ಪಿ,ಎಸ್., ಸದಸ್ಯರಾದ ಮಂಜುನಾಥ್ ಬಿ., ಚೇತನ್, ಪ್ರವೀಣ್, ಮನೋಜ್, ಮಂಜುನಾಥ್ ಎಸ್.ಹೆಚ್., ನಾಗೇಂದ್ರ, ಅರವಿಂದ್, ಸುಧೀರ್, ಸಂಜಯ್‌ಕುಮಾರ್, ರಾಮಣ್ಣ, ಶ್ರೀನಿವಾಸ್, ರಾಜ್‌ಕುಮಾರ್, ಪರಮೇಶ್ವರಪ್ಪ, ಎನ್. ಮಾಲತೇಶ್, ಗದಗ ಜಿಲ್ಲಾಧ್ಯಕ್ಷರಾದ ಶಂಕರಗುರು ಕಂದಗಲ್, ಮಂಜುನಾಥ್ ಕಬನೂರ್, ವಿನಾಯಕ ಬದಿ, ಕೊಪ್ಪಳದ ನಾಗರಾಜ್ ಕಲಾಲ್, ನರಗುಂದದ ಘಟ್ಟಿ ಸಂಘದ ನಿರ್ದೇಶಕರು, ಸದಸ್ಯರು, ವಿತರಕರು ಸೇರಿದಂತೆ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಕಿರಣ್ ಎಂ., ಸತೀಶ್ ಎಸ್., ಲೋಕೇಶ್ ಆರ್.ಪಿ., ನವೀನ್ ಡಿ., ಧನುಷ್ ಎಸ್.ಎಂ. ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಗರೀಬ್ ಕಲ್ಯಾಣ್ ಸಮ್ಮೇಳನ: ಪ್ರಧಾನಿಅವರಿಂದ ಮೇ 31 ರಂದು ಆನ್ ಲೈನ್ ಉದ್ಘಾಟನೆ

0

ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ದೇಶದ ಪ್ರಧಾನಮಂತ್ರಿಗಳು ಮೇ 31 ರಂದು ಬೆಳಿಗ್ಗೆ 11 ಗಂಟೆಗೆ ಹಿಮಾಚಲ ಪ್ರದೇಶದ ಶಿಮ್ಲಾದಿಂದ ಕೇಂದ್ರ ಸರ್ಕಾರದ ಒಂಭತ್ತು ಸಚಿವಾಲಯದ ಸುಮಾರು 16 ಯೋಜನೆ-ಕಾರ್ಯಕ್ರಮಗಳ ಫಲಾನುಭವಿಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ.

ಸರ್ಕಾರದ ಈ ಎಲ್ಲ ಜನಪರ ಯೋಜನೆಗಳು ದೇಶದ ಬಡ ಜನರ ಕಲ್ಯಾಣಕ್ಕಾಗಿ ರೂಪಿಸಲಾಗಿರುವ ಹಿನ್ನೆಲೆಯಲ್ಲಿ ವಿಡಿಯೋ ಸಂವಾದ ಕಾರ್ಯಕ್ರಮಕ್ಕೆ “ಗರೀಬ್ ಕಲ್ಯಾಣ್ ಸಮ್ಮೇಳನ” ಎಂದು ಹೆಸರಿಸಲಾಗಿದೆ. ಈ ಯೋಜನೆಗಳು ನಾಗರಿಕರಿಗೆ ಸುಲಭ ಜೀವನ ನಡೆಸಲು ಹೇಗೆ ಕಾರಣವಾಗಿವೆ ಎಂಬುದನ್ನು ಅರ್ಥಮಾಡಿಕೊಳ್ಳುವುದರ ಜೊತೆಗೆ ಇದರ ಒಮ್ಮುಖ ಮತ್ತು ಶುದ್ಧತ್ವದ ಸಾಧ್ಯತೆಯನ್ನು ಅನ್ವೇಷಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಹಾಗೂ ಇದರಿಂದ 2047 ರಲ್ಲಿ ಭಾರತದ ಸ್ವಾತಂತ್ರ್ಯ ಶತಮಾನೋತ್ಸವ ಸಂದರ್ಭದಲ್ಲಿ ದೇಶದ ಪ್ರಗತಿಗೆ ನಾಗರೀಕರ ಆಕಾಂಕ್ಷೆಯನ್ನು ತಿಳಿಯಲು ಸಹಕಾರಿಯಾಗುತ್ತದೆ.

ಗರೀಬ್ ಕಲ್ಯಾಣ ಸಮ್ಮೇಳನ ದೇಶದ ಎಲ್ಲಾ ಜಿಲ್ಲೆಗಳನ್ನೊಳಗೊಂಡ ಅತಿದೊಡ್ಡ ರಾಷ್ಟ್ರೀಯ ಸಂವಾದಗಳಲ್ಲಿ ಒಂದಾಗಿದೆ. ದೇಶದ ಆಯ್ದ ಜಿಲ್ಲೆಗಳ ಕೆಲ ಫಲಾನುಭವಿಗಳೊಂದಿಗೆ ಪ್ರಧಾನ ಮಂತ್ರಿಗಳು ಯೋಜನೆಗಳಾದ ಪ್ರಧಾನ ಮಂತ್ರಿ ಆವಾಸ್ ಯೋಜನೆ(ಗ್ರಾಮೀಣ & ನಗರ), ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ಪ್ರಧಾನ ಮಂತ್ರಿ ಉಜ್ವಲ ಯೋಜನೆ, ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ, ಸ್ವಚ್ಛ ಭಾರತ್ ಮಿಷನ್, ಜಲ ಜೀವನ್ ಮಿಷನ್ ಮತ್ತು ಅಮೃತ್ ಯೋಜನೆ, ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ, ಒಂದು ರಾಷ್ಟ್ರ ಒಂದು ಪಡಿತರ ಚೀಟಿ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ, ಆಯುಷ್ಮಾನ್ ಭಾರತ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ, ಆಯುಷ್ಮನ್ ಭಾರತ್ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರ, ಪ್ರಧಾನ ಮಂತ್ರಿ ಮುದ್ರಾ ಯೋಜನೆಗಳ ಕುರಿತು ಸಂವಾದ ನಡೆಸಿ ಫಲಾನುಭವಿಗಳ ಜೀವನೋಪಾಯ ಮತ್ತು ಆರ್ಥಿಕ ಒಳಗೊಳ್ಳುವಿಕೆ ಇತ್ಯಾದಿಗಳ ಮೇಲೆ ಯೋಜನೆ ಮತ್ತು ಕಾರ್ಯಕ್ರಮಗಳು ಹೇಗೆ ಪ್ರಭಾವ ಬೀರಿವೆ ಎಂಬುದನ್ನು ತಿಳಿಯಲಿದ್ದಾರೆ.

ಇಂತಹ ಐತಿಹಾಸಿಕ ಕಾರ್ಯಕ್ರಮಕ್ಕೆ ಶಿವಮೊಗ್ಗ ಜಿಲ್ಲೆಯೂ ಸಾಕ್ಷಿಯಾಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಇದೇ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳು ಕಿಸಾನ್ ಸಮ್ಮಾನ್ ನಿಧಿಯ 11 ನೇ ಕಂತನ್ನು ಸಹ ಬಿಡುಗಡೆ ಮಾಡಲಿದ್ದಾರೆ.

ಈ ಕಾರ್ಯಕ್ರಮವನ್ನು ದೂರದರ್ಶನದ ಮೂಲಕ ರಾಷ್ಟ್ರೀಯ ಮತ್ತು ಪ್ರಾದೇಶಿಕ ಚಾನೆಲ್‍ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಒಥಿಉov ಮೂಲಕ ವೆಬ್‍ಕಾಸ್ಟ್ ಸಹ ಮಾಡಲಾಗುತ್ತಿದ್ದು, ಜನರು ಇದರ ವೀಕ್ಷಣೆಗೆ ನೋಂದಾಯಿಸಿಕೊಳ್ಳಬೇಕು. ಇದಲ್ಲದೆ ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್, ಫೇಸ್‍ಬುಕ್, ಟ್ವಿಟರ್, ಇನ್‍ಸ್ಟಾಗ್ರಾಂ ಇತ್ಯಾದಿಗಳ ಮೂಲಕವೂ ವೀಕ್ಷಿಸಬಹುದಾಗಿದೆ.

ಈ ಸಂವಾದವು ಜನರ ಜೀವನ ಸುಲಭಗೊಳಿಸುವುದಕ್ಕೆ ಕಾರಣವಾಗುವ ಬಡವರ ಪರವಾದ ಯೋಜನೆಗಳ ಜನ-ಕೇಂದ್ರಿತ ವಿಧಾನವನ್ನು ಮಾತ್ರ ಎತ್ತಿ ತೋರಿಸುವುದಲ್ಲದೆ, ಜನರ ಆಕಾಂಕ್ಷೆಗಳನ್ನು ಸಹ ತಿಳಿದುಕೊಳ್ಳುವುದು ಮತ್ತು ರಾಷ್ಟ್ರದ ಪ್ರಗತಿಯ ಹಾದಿಯಲ್ಲಿ ಯಾರೂ ಹಿಂದುಳಿದಿಲ್ಲ ಎಂಬುದನ್ನು ಖಚಿತಪಡಿಸುತ್ತದೆ.

ಪುಟಿನ್ ಆರೋಗ್ಯ ಕ್ಷೀಣಿಸುತ್ತಿದೆಯೆ?

0

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ರಷ್ಯಾದ ಬೇಹುಗಾರಿಕಾ ಸಂಸ್ಥೆ ಎಫ್ ಎಸ್ ಬಿ ಯ ವರದಿಯಲ್ಲಿ ತಿಳಿಸಿದೆ.

ವ್ಲಾಡಿಮಿರ್ ಪುಟಿನ್ ಗರಿಷ್ಠ 3 ವರ್ಷ ಬದುಕಬಹುದೆಂದು ವೈದ್ಯರು ಹೇಳಿರುವುದಾಗಿ ಗುಪ್ತಚರ ಸಂಸ್ಥೆಯ ಮೂಲವನ್ನು ಉಲ್ಲೇಖಿಸಿ ಮಿರರ್ ವರದಿ ಮಾಡಿದೆ.

69 ವರ್ಷದ ರಷ್ಯಾದ ಅಧ್ಯಕ್ಷರು ತೀವ್ರಗತಿಯಲ್ಲಿ ಹೆಚ್ಚಾಗುತ್ತಿರುವ ಕ್ಯಾನ್ಸರ್ ನಿಂದ ಬಳಲುತ್ತಿರುವುದಾಗಿ ಮಿರರ್ ವರದಿ ಮಾಡಿದೆ. ಪುಟಿನ್ ಅವರ ಕಣ್ಣಿನ ದೃಷ್ಟಿ ಗಂಭೀರವಾಗಿ ಹದಗೆಟ್ಟಿದೆ. ಅವರ ಬೆರಳುಗಳು ಕೂಡಾ ನಿಯಂತ್ರಿಸಲಾಗದಷ್ಟು ಅಲುಗಾಡತೊಡಗಿವೆ ಎಂದು ವರದಿಯಲ್ಲಿ ಹೇಳಿದೆ.

ಗುಜರಾತ್ ಟೈಟನ್ಸ್ ಟಾಟಾ ಐಪಿಎಲ್ 22 ಪ್ರಶಸ್ತಿಯ ಹೆಮ್ಮೆ

ರಾಜಸ್ಥಾನ್ ರಾಯಲ್ಸ್ ವಿರುದ್ಧ ಬ್ಯಾಟಿಂಗ್-ಬೌಲಿಂಗ್​ನಲ್ಲಿ ಬೊಂಬಾಟ್ ಪ್ರದರ್ಶನ ನೀಡಿದ ಜಿಟಿ 7 ವಿಕೆಟ್​ಗಳ ಜಯ ತನ್ನದಾಗಿಸಿತು.

ರಾಜಸ್ಥಾನ್ ರಾಯಲ್ಸ್ ವಿರುದ್ಧ ಬ್ಯಾಟಿಂಗ್ – ಬೌಲಿಂಗ್​ನಲ್ಲಿ ಬೊಂಬಾಟ್ ಪ್ರದರ್ಶನ ನೀಡಿದ ಜಿಟಿ 7 ವಿಕೆಟ್​ಗಳ ಜಯ ತನ್ನದಾಗಿಸಿತು. ಹಾರ್ದಿಕ್ ಪಾಂಡ್ಯ ಅವರ ನಾಯಕನ ಆಟ ತಂಡಕ್ಕೆ ನೆರವಾದರೆ ಇತ್ತ ಸಂಜು ಸ್ಯಾಮ್ಸನ್ ತಾವು ಮಾಡಿದ ಕೆಲ ಎಡವಟ್ಟಿನಿಂದ ರಾಜಸ್ಥಾನ್ ಎರಡನೇ ಬಾರಿ ಕಪ್ ಎತ್ತಿ ಹಿಡಿಯುವ ಅವಕಾಶವನ್ನು ಕಳೆದುಕೊಂಡಿತು.

ಹಾರ್ದಿಕ್ ಪಾಂಡ್ಯ ಅವರ ನಾಯಕನ ಆಟ ತಂಡಕ್ಕೆ ನೆರವಾದರೆ ಇತ್ತ ಸಂಜು ಸ್ಯಾಮ್ಸನ್ ತಾವು ಮಾಡಿದ ಕೆಲ ಎಡವಟ್ಟಿನಿಂದ ರಾಜಸ್ಥಾನ್ ಎರಡನೇ ಬಾರಿ ಕಪ್ ಎತ್ತಿ ಹಿಡಿಯುವ ಅವಕಾಶವನ್ನು ಕಳೆದುಕೊಂಡಿತು.

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿಗೆ ಅದ್ಧೂರಿ ತೆರೆ ಬಿದ್ದಿದೆ. ಚೊಚ್ಚಲ ಆವೃತ್ತಿಯಲ್ಲೇ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡ ಪ್ರಶಸ್ತಿ ಗೆಲ್ಲುವ ಮೂಲಕ ವಿಶೇಷ ಸಾಧನೆಯನ್ನೂ ಮಾಡಿದೆ.

ಒಂದು ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರು ಸೇರಿದ್ದ ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ಕಾದಾಟ ಅಂದುಕೊಂಡಷ್ಟರ ಮಟ್ಟಿಗೆ ರೋಚಕತೆ ಪಡೆಯಲಿಲ್ಲ. ಟೈಟಾನ್ಸ್ ತಂಡದ ಟೈಟ್ ಬೌಲಿಂಗ್​ಗೆ ರಾಜಸ್ಥಾನ್ ಸುಸ್ತಾಯಿತು. ಅಚ್ಚರಿ ಎಂಬಂತೆ ಪ್ರಮುಖ ಪಂದ್ಯದಲ್ಲೇ ಆರ್​ ಆರ್ ನಾಯಕ ಸಂಜು ಸ್ಯಾಮ್ಸನ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.

ಬ್ಯಾಟಿಂಗ್​ಗೆ ಇಳಿದ ರಾಜಸ್ಥಾನಕ್ಕೆ ಉತ್ತಮ ಆರಂಭ ಕೂಡ ಸಿಗಲಿಲ್ಲ. ನಿಧಾನ ಗತಿಯಲ್ಲಿ ಬ್ಯಾಟ್ ಮಾಡುವ ಜೊತೆಗೆ 100 ರನ್​ಗೂ ಮೊದಲೇ 6 ವಿಕೆಟ್ ಕಳೆದುಕೊಂಡಿತು.

₹500 ರ ನೋಟನ್ನ ಅಸಲಿ ಅಂತ ಪತ್ತೆಮಾಡುವುದು ಹೇಗೆ?

0

ಕಳೆದ ಹಣಕಾಸು ವರ್ಷ (2021-22)ದಲ್ಲಿ ಎಲ್ಲ ಮುಖಬೆಲೆಯ ನಕಲಿ ನೋಟುಗಳ ಸಂಖ್ಯೆ ಹೆಚ್ಚಾಗಿದೆ.

ಈ ಪೈಕಿ 500 ರೂಪಾಯಿ ನಕಲಿ ನೋಟು 100%, 2,000 ರೂಪಾಯಿ ನಕಲಿ ನೋಟು ಶೇಕಡ 50ಕ್ಕಿಂತ ಹೆಚ್ಚು ಚಲಾವಣೆಗೆ ಬಂದಿವೆ ಎಂಬ ಕಳವಳಕಾರಿ ವಿಚಾರವನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ಶುಕ್ರವಾರ ಬಹಿರಂಗಪಡಿಸಿದೆ.

ಕೇಂದ್ರೀಯ ಬ್ಯಾಂಕ್ ಇತ್ತೀಚಿನ ವರದಿಯ ಪ್ರಕಾರ, ನಕಲಿ ನೋಟುಗಳ ಹೆಚ್ಚಳವನ್ನು ಕಂಡ ಎಲ್ಲ ನೋಟುಗಳ ಪೈಕಿ 500 ರೂ. ಕಳೆದ ವರ್ಷಕ್ಕೆ ಹೋಲಿಸಿದರೆ, 101.9% ಹೆಚ್ಚು ನಕಲಿ ನೋಟುಗಳಿರುವುದು ದೃಢಪಟ್ಟಿದೆ.

500 ರೂಪಾಯಿ ನೋಟು ಅಸಲಿಯೋ ನಕಲಿಯೋ ತಿಳಿಯುವುದು ಹೇಗೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

ಕರೆನ್ಸಿ ನೋಟಿನ ಮೇಲೆ ದೇವನಾಗರಿಯಲ್ಲಿ 500 ಎಂದು ಬರೆದಿದೆ.

ಕರೆನ್ಸಿ ನೋಟಿನ ಮೇಲೆ ಬೆಳಕು ಚೆಲ್ಲಿದರೆ, ವಿಶೇಷ ಸ್ಥಳಗಳಲ್ಲಿ 500 ಬರೆದಿರುವುದನ್ನು ನೀವು ಗಮನಿಸಬಹುದು.
500 ರೂಪಾಯಿ ಕರೆನ್ಸಿ ನೋಟಿನ ಮೇಲೆ ಭಾರತ ಎಂದು ಬರೆದಿದೆ.

ಮಹಾತ್ಮ ಗಾಂಧಿಯವರ ಫೋಟೋದ ದೃಷ್ಟಿಕೋನ ಮತ್ತು ಸಂಬಂಧಿತ ಸ್ಥಾನವು ಬಲಕ್ಕೆ ಬದಲಾಗುತ್ತದೆ.

ಕರೆನ್ಸಿ ನೋಟು ಬಾಗಿದಾಗ, ಭದ್ರತಾ ತಲೆಯ ಬಣ್ಣವು ಹಸಿರು ಬಣ್ಣದಿಂದ ಬದಲಾಗುತ್ತದೆ.

ಕರೆನ್ಸಿ ನೋಟಿನ ಮೇಲೆ ಮಹಾತ್ಮಾ ಗಾಂಧಿಯವರ ಫೋಟೋ ಮತ್ತು ಎಲೆಕ್ಟ್ರೋಟೈಪ್ ವಾಟರ್‌ಮಾರ್ಕ್ ಇದೆ.

ನೋಟಿನ ಮೇಲೆ ಬರೆದಿರುವ
500 ರೂಪಾಯಿ ಬಣ್ಣವು ಹಸಿರು ಬಣ್ಣದಿಂದ ನೀಲಿ ಬಣ್ಣಕ್ಕೆ ಬದಲಾಗುತ್ತದೆ.

ಗವರ್ನರ್ ಸಹಿ, ಗ್ಯಾರಂಟಿ ಷರತ್ತು, ಭರವಸೆ ಷರತ್ತು ಮತ್ತು ಆರ್‌ಬಿಐ ಲಾಂಛನವನ್ನು ಕರೆನ್ಸಿ ನೋಟಿನ ಬಲಕ್ಕೆ ಸ್ಥಳಾಂತರವಾಗಿದೆ.

ಕರೆನ್ಸಿ ನೋಟಿನ ಬಲಭಾಗದಲ್ಲಿ ಅಶೋಕ ಸ್ತಂಭ

ಮುದ್ರಿತ ಸ್ವಚ್ಛ ಭಾರತ ಲೋಗೋ ಮತ್ತು ಘೋಷಣೆ

ಜೈರಾಮ್ ರಮೇಶ್ ರಾಜ್ಯಸಭೆಗೆ ಕಾಂಗ್ರೆಸ್ ಅಭ್ಯರ್ಥಿ:ಹಲವರ ಅಸಮಾಧಾನ

0

ಕರ್ನಾಟಕ ರಾಜ್ಯಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಇದೀಗ ಕಾಂಗ್ರೆಸ್‌ ಸಹ ಒಂದು ಸ್ಥಾನಕ್ಕೆ ತನ್ನ ಅಭ್ಯರ್ಥಿ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಿದೆ.

ಜೈರಾಮ್ ರಮೇಶ್ 2016ರಲ್ಲಿ ಕರ್ನಾಟಕದಿಂದಲೇ ರಾಜ್ಯಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದರು. ಈಗ ಜೈರಾಮ್ ರಮೇಶ್ ಅವರೇ ಮತ್ತೊಮ್ಮೆ ಕರ್ನಾಟಕದಿಂದ ಕಾಂಗ್ರೆಸ್ ಅಭ್ಯರ್ಥಿಯಾಗ್ತಿದ್ದಾರೆ.

ಇದಕ್ಕೂ ಮೊದಲು ಜೈರಾಮ್ ರಮೇಶ್ ಅವರು ಪ್ರತ್ಯೇಕವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

ಕರ್ನಾಟಕ ರಾಜ್ಯಸಭೆಗೆ ಜೈರಾಮ್ ರಮೇಶ್ ಅವರಿಗೆ ಮತ್ತೊಮ್ಮೆ ಅವಕಾಶ ನೀಡಲಾಗಿದೆ.
ಹಲವರ ವಿರೋಧದ ನಡುವೆ ಕಾಂಗ್ರೆಸ್ ಹೈಕಮಾಂಡ್ ಜೈರಾಮ್ ರಮೇಶ್ ಅವರಿಗೆ ಮಣೆ ಹಾಕಿದೆ.ರಾಜ್ಯಸಭೆಗೆ ರಾಜ್ಯದಿಂದ ಜೈರಾಮ್‌ ರಮೇಶ್‌ ಅವರನ್ನು ಪುನಾರಾಯ್ಕೆಯ ತೀರ್ಮಾನದ ವಿರುದ್ಧ ಕೆಪಿಸಿಸಿ ಹಿರಿಯ ನಾಯಕರಾದ ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಕೊರೋನದಿಂದ ಅನಾಥರಾದ ಮಕ್ಕಳಿಗೆ ಸ್ಟೈಪಂಡ್ ನೀಡಲಾಗುವುದು-ಮೋದಿ

0

ಕೊರೋನಾ ಸೋಂಕಿನಿಂದ ತಮ್ಮ ಪೋಷಕರನ್ನು ಕಳೆದುಕೊಂಡ ಮಕ್ಕಳಿಗಾಗಿ ಪಿಎಂ ಕೇರ್ಸ್ ಅಡಿಯಲ್ಲಿ ಮಕ್ಕಳ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿದ್ದಾರೆ.

ಅನಾಥ ಮಕ್ಕಳಿಗೆ ತಮ್ಮ ದೈನಂದಿನ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಈ ಯೋಜನೆಯಡಿ ಪ್ರತಿ ತಿಂಗಳು 4,000 ರೂಪಾಯಿಗಳ ಸ್ಟೈಪಂಡ್ ಅನ್ನು ನೀಡಲಾಗುತ್ತದೆ.

ವೃತ್ತಿಪರ ಕೋರ್ಸ್ ಗಳಿಗೆ ಅಥವಾ ಉನ್ನತ ವ್ಯಾಸಂಗಕ್ಕೆ ಶೈಕ್ಷಣಿಕ ಸಾಲವನ್ನೂ ಪಡೆಯಲು ಪಿಎಂ-ಕೇರ್ಸ್ ನೆರವಾಗಲಿದೆ.

ದೇಶದ ಅನೇಕ ಭಾಗಗಳ ಮಕ್ಕಳೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, ನಾನು ಮಕ್ಕಳೊಂದಿಗೆ ಓರ್ವ ಪ್ರಧಾನಿಯಾಗಿ ಅಲ್ಲ. ಅವರ ಕುಟುಂಬದ ಸದಸ್ಯನಾಗಿ ಮಾತನಾಡಿದ್ದೇವೆ. ನಾನು ಇಂದು ಮಕ್ಕಳೊಂದಿಗೆ ಇದ್ದೇನೆ ಎಂಬುದು ನನಗೆ ಸಮಾಧಾನ ತಂದಿದೆ. ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಎಂಬುದು ಪ್ರತಿಯೊಬ್ಬ ನಾಗರಿಕನಿಗೂ ಅರ್ಥವಾಗಿದೆ ಎಂದು ಹೇಳಿದ್ದಾರೆ.

ಅನಾಥ ಮಕ್ಕಳ ಶಾಲಾಭ್ಯಾಸ ಮುಗಿದ ನಂತರ ಭವಿಷ್ಯದ ಕನಸುಗಳನ್ನು ಸಾಕಾರ ಮಾಡಿಕೊಳ್ಳಲು ಹೆಚ್ಚು ಹಣದ ಅಗತ್ಯವಿರುತ್ತದೆ. ಇದಕ್ಕಾಗಿ 18 ರಿಂದ 23 ವರ್ಷದವರೆಗಿನ ಯುವ ಸಮುದಾಯ ಪ್ರತಿ ತಿಂಗಳ ಸ್ಟೈಪಂಡ್ ಅನ್ನು ಪಡೆಯಲಿದೆ. 23 ವರ್ಷ ತುಂಬಿದ ನಂತರ ಅವರು 10 ಲಕ್ಷ ರೂಪಾಯಿಯನ್ನು ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.

ಮಕ್ಕಳಿಗೆ ಸೂಕ್ತ ವಸತಿ, ಊಟ ಸೌಲಭ್ಯದೊಂದಿಗೆ ಅವರನ್ನು ಸಬಲರನ್ನಾಗಿ ಮಾಡುವ ಪ್ರಮುಖ ಉದ್ದೇಶ ಈ ಯೋಜನೆ ಹೊಂದಿದೆ. ಅಲ್ಲದೇ, 23 ವರ್ಷ ಪೂರ್ಣಗೊಂಡ ನಂತರ 10 ಲಕ್ಷ ರೂಪಾಯಿ ಪಡೆಯುವುದು.ಹಾಗೂ ಆರೋಗ್ಯ ವಿಮೆಯ ಮೂಲಕ ಅವರ ಯೋಗಕ್ಷೇಮವನ್ನು ಖಾತರಿಪಡಿಸುವುದು. ಈ ಯೋಜನೆಯ ಪ್ರಮುಖ ಗುರಿಯಾಗಿದೆ ಎಂದು ನರೇಂದ್ರ ಮೋದಿ ಅವರು ಯೋಜನೆಯ ಮಹತ್ವವನ್ನು ವಿವರಿಸಿದ್ದಾರೆ.

ಈ ಯೋಜನೆಯ ಸೌಲಭ್ಯ ಪಡೆಯಲು ನೋಂದಣಿ ಮಾಡಿಸಿಕೊಳ್ಳಲು pmcaresforchildren.in ಎಂಬ ಹೆಸರಿನ ಪೋರ್ಟಲ್ ಅನ್ನು ಆರಂಭಿಸಲಾಗಿದೆ. ಇದೊಂದು ಏಕಗವಾಕ್ಷಿ ವ್ಯವಸ್ಥೆಯಾಗಿದೆ. ಅನುಮೋದನೆ ಪ್ರಕ್ರಿಯೆ ಸೇರಿದಂತೆ ಎಲ್ಲಾ ನೆರವನ್ನು ಮಕ್ಕಳಿಗೆ ಇದರ ಮೂಲಕ ನೀಡಲಾಗುತ್ತದೆ.

ಬೆಂಗಳೂರಿನಲ್ಲಿ ರೈತ ಮುಖಂಡ ಟಿಕಾಯತ್ ಮುಖಕ್ಕೆ ಮಸಿ ಎರಚಿದ ಪ್ರಸಂಗ

0

ರೈತ ಮುಖಂಡರ ಸಭೆ ಅಕ್ಷರಶಃ ರಣಾಂಗಣವಾದ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಸಭೆ ವೇಳೆಯೇ ಭಾರತೀಯ ಕಿಸಾನ್ ಯುನಿಯನ್ ಮುಖಂಡ ರಾಕೇಶ್ ಟಿಕಾಯತ್ ಮುಖಕ್ಕೆ ಮಸಿ ಎರಚಿ ಹಲ್ಲೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ರೈತ ಮುಖಂಡರ ಸಭೆ ವೇಳೆ ಏಕಾಏಕಿ ಗೊಂದಲ, ಗಲಾಟೆ ಆರಂಭವಾಗಿದೆ. ರೈತ ಮುಖಂಡ ರಾಕೇಶ್ ಟಿಕಾಯತ್ ಮತ್ತು ಯಧುವೀರ್ ಸಿಂಗ್ ಅವರ ಮೇಲೆ ಮಸಿ ಎರಚಲಾಗಿದೆ.

ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಸಭೆ ನಡೆಸಿ ಸುದ್ದಿಗೋಷ್ಠಿ ನಡೆಸುತ್ತಿದ್ದ ರಾಕೇಶ್ ಟಿಕಾಯತ್, ನಾವು ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಕೋಡಿಹಳ್ಳಿ ವಿರುದ್ಧ ಕೇಳಿಬಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸುತ್ತಿದ್ದಂತೆ ಮುಖಂಡರ ನಡುವೆ ವಾಗ್ವಾದ ಆರಂಭವಾಗಿದೆ. ಕುರ್ಚಿಯನ್ನು ಎಳೆದಾಡಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಇದೇ ವೇಳೆಯಲ್ಲಿ ಟಿಕಾಯತ್ ಮತ್ತು ಯಧುವೀರ್ ಸಿಂಗ್ ಮೇಲೆ ಕಪ್ಪು ಮಸಿ ಎರಚಿ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಇನ್ನೆರಡು ದಿನಗಳಲ್ಲಿ ಮಾಮೂಲು ಮಳಗಾಲ ಆರಂಭ

0

ಬಿಸಿಲಿನ ತಾಪದಿಂದ ಸುಸ್ತಾಗಿದ್ದ ಜನರಿಗೆ ನಿರಾಳತೆ ಸಿಕ್ಕಿದೆ. ಭಾರತದ ಜೀವನಾಡಿ ಎಂದು ಪರಿಗಣಿಸಲ್ಪ ಟ್ಟಿರುವ ನೈಋತ್ಯ ಮಾನ್ಸೂನ್ ಈ ಬಾರಿ 3 ದಿನಗಳ ಮುನ್ನವೇ ಕೇರಳಕ್ಕೆ ಪ್ರವೇಶಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಮೇ 29ಕ್ಕೆ ಕೇರಳಕ್ಕೆ ಮಾನ್ಸೂನ್ ಪ್ರವೇಶಿಸಿದೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇನ್ನು 2 ದಿನಗಳಲ್ಲಿ ಕರ್ನಾಟಕಕ್ಕೆ ಪ್ರವೇಶ ಪಡೆಯುವ ನಿರೀಕ್ಷೆ ಇದೆ ಎನ್ನಲಾಗಿದೆ.

ಕೇರಳದ ಮೇಲೆ ಮಾನ್ಸೂನ್‌ನ ಆರಂಭವು 4 ತಿಂಗಳ ಅವಧಿಯ ಮೂಲಕ ಭಾರತದ ಮೇಲೆ ನೈಋತ್ಯ ಮಾನ್ಸೂನ್ ಋತುವಿನ ಆರಂಭವನ್ನು ಸೂಚಿಸುತ್ತದೆ. ಭಾರತದ ಕೃಷಿ ಆಧಾರಿತ ಆರ್ಥಿಕತೆಯ ಜೀವನಾಡಿ ಎಂದು ಪರಿಗಣಿಸಲ್ಪಟ್ಟಿರುವ ನೈಋತ್ಯ ಮಾನ್ಸೂನ್ ತನ್ನ ಸಾಮಾನ್ಯ ಆರಂಭದ ದಿನಾಂಕವಾದ ಜೂನ್ 1 ಕ್ಕಿಂತ 3 ದಿನಗಳ ಮುಂಚಿತವಾಗಿ ಆಗಮಿಸಿದೆ.

ಪ್ರಪಂಚದ ಕೃಷಿ ಉತ್ಪನ್ನಗಳ ಅತಿದೊಡ್ಡ ಉತ್ಪಾದಕರು ಹಾಗೂ ಕೃಷಿ ಸರಕುಗಳ ಗ್ರಾಹಕರಾಗಿರುವ ಭಾರತದ ರೈತರು ತಮ್ಮ ಭೂಮಿಗೆ ನೀರುಣಿಸಲು ಮಾನ್ಸೂನ್ ಮಳೆಯ ಮೇಲೆ ಹೆಚ್ಚಾಗಿ ಅವಲಂಬಿತರಾಗಿದ್ದಾರೆ. ಶೇ. 50 ರಷ್ಟು ಭಾರತದ ಕೃಷಿ ಭೂಮಿಗೆ ನೀರಾವರಿ ಕೊರತೆ ಇದೆ.

ನೈಋತ್ಯ ಮಾನ್ಸೂನ್ ಜೂನ್ 1 ರಂದು ಪ್ರಾರಂಭವಾಗುವ ಸಾಮಾನ್ಯ ದಿನಾಂಕದ ಬದಲು ಮೇ 29 ರ ಭಾನುವಾರದಂದು ಕೇರಳದಲ್ಲಿ ಆರಂಭವಾಗಿದೆ ಎಂದು ಐಎಂಡಿಯ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಹೇಳಿದ್ದಾರೆ.

ಕನ್ನಡ ಡಿಂಡಿಮವನ್ನ ರಾಷ್ಟ್ರಮಟ್ಟದಲ್ಲಿ ಮುಟ್ಟಿಸುವ ಯತ್ನ ಮಾಡುವೆ- ಜಗ್ಗೇಶ್

0

ನನಗೆ ಯಾವ ನಿರೀಕ್ಷೆ ಇರಲಿಲ್ಲ. ನಾನು ಬಹಳ ನಿಷ್ಠೆಯಿಂದ ಪಕ್ಷಕ್ಕೆ ಕೆಲಸ ಮಾಡಿದ್ದೆ ಮುಖ್ಯಮಂತ್ರಿಗಳು ಮತ್ತು ಸ್ನೇಹಿತರು, ಶಾಸಕರು ಸಂಘದ ಹಿರಿಯರು ಎಲ್ಲರೂ ನಿರ್ಧಾರ ಮಾಡಿ ಈ ಸ್ಥಾನ ಕೊಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯಸಭೆ ಅಭ್ಯರ್ಥಿ ನಟ ಜಗ್ಗೇಶ್ ಅವರು ತಿಳಿಸಿದ್ದಾರೆ.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತಾನಾಡಿದ ಅವರು, ಚಿಂತನೆಗಳು ಇತ್ತು ಮುಂದಿನ ದಿನಗಳಲ್ಲಿ ಯಾವ ರೀತಿ ಕೆಲಸ ಮಾಡಬೇಕು ಎಂದು ನನಗೆ ಕಲ್ಪನೆ ಇರಲಿಲ್ಲ. ಪಕ್ಷ ಮತ್ತು ಸಂಘಟನೆಗೆ ಧನ್ಯವಾದಗಳು. ನನಗೆ ಹಿರಿಯರು ಪೋನ್ ಮಾಡಿ ದಾಖಲೆ ತಯಾರಿ ನಡೆಸಿಕೊಳ್ಳಲು ಹೇಳಿದ್ದರು. ಆಗಲು ನನಗೆ ನಂಬಿಕೆ ಇರಲಿಲ್ಲ. ಹಾಗಾಗಿ ಇದು ಸಂಪೂರ್ಣ ರಾಯರ ಆಶೀರ್ವಾದದಿಂದ ಬಂದಿದೆ ಎಂದು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

ನಾಳೆ ನಾಮಿನೇಷನ್ ಮಾಡುತ್ತೇನೆ. ಇವತ್ತು ಇದಕ್ಕೆ ಬೇಕಾದ ದಾಖಲೆ ಸಿದ್ದತೆ ಮಾಡಿಕೊಳ್ಳುತ್ತೇನೆ. ನನಗೆ ನನ್ನ ಹೆಂಡತಿ ಕೂಡ ಇದರಲ್ಲಿ ಬಹಳ ಸಹಾಯ ಮಾಡುತ್ತಿದ್ದಾಳೆ. ಅವಳಿಗೂ ಧನ್ಯವಾದ. ನನಗೆ ನಿರೀಕ್ಷೆ ಇಲ್ಲದಿರುವುದರಿಂದ ದಾಖಲೆ ಸಂಗ್ರಹಿಸಲು ವಿಳಂಬ ಆಗಿದೆ. ದಾಖಲೆ ಸಂಗ್ರಹದ ಒತ್ತಡದಲ್ಲಿ ಇದ್ದೇನೆ. ಎಲ್ಲಾ ಮುಗಿಸಿಕೊಂಡು ನಾಳೆ ನಾಮಪತ್ರ ಸಲ್ಲಿಕೆ‌ ಮಾಡುತ್ತೇನೆ ಎಂದು ನವರಸ ನಾಯಕ ಜಗ್ಗೇಶ್ ಅವರು ತಿಳಿಸಿದ್ದಾರೆ.

ನಾನು ಯಾವುದೇ ಪ್ರಯತ್ನ ಮಾಡಿಲ್ಲ. ನಾನು ಯಾವ ಹುದ್ದೆನೂ ಕೇಳಿಲ್ಲ. ಕಳೆದ ಬಾರಿ ಕಡೆಗಳಿಗೆಯಲ್ಲಿ ಯಶವಂತಪುರದಲ್ಲಿ ನಿಲ್ಲಲು ಹೇಳಿದರು. ಆಗ ನಾನು ಬೇಡ ಅಂದೆ ಕಾರಣ ಏನಂದರೆ ನಾವು ವಿಧಾನಸಭೆಗೆ ಸ್ಪರ್ಧೆ ಮಾಡಬೇಕಾದರೆ ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಿರಬೇಕು. ಆಗ ನನ್ನ ಮೇಲೆ ವಿಶ್ವಾಸ ಇತ್ತು. 12 ಸಾವಿರ ಇದ್ದ ಮತಗಳನ್ನು 61ಸಾವಿರ ಮತಕ್ಕೆ ತಂದಿದ್ದೆ. ನನಗೂ ಆಶ್ಚರ್ಯ ಆಯಿತು. ಇದರಿಂದ ನನಗೆ ಮುಂದಿನ ದಿನಗಳಲ್ಲಿ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಆದ್ದರಿಂದ, ನನ್ನ ವೃತ್ತಿಯಲ್ಲಿ ಮುಂದುವರೆಯಿತ್ತಿದ್ದೆ. ನನಗೆ ವಕ್ತಾರ ಹುದ್ದೆ ಕೊಟ್ಟಿದ್ದರು, ಸಂಪೂರ್ಣವಾಗಿ ಸಾಮಾಜಿಕ ಜಾಲತಾಣದಲ್ಲಿ ಕೆಲಸ ಮಾಡುತ್ತಿದ್ದೆ ಎಂದು ಹೇಳಿದ್ದಾರೆ.

ನನಗೆ ಭಾಷೆ ಸಮಸ್ಯೆ ಇಲ್ಲ. ನಾನು ಹಿಂದಿ, ಇಂಗ್ಲಿಷ್, ಕನ್ನಡ ತಮಿಳು ಈ ಎಲ್ಲಾ ಭಾಷೆ ಮಾತನಾಡುತ್ತೇನೆ. ಸ್ವಲ್ಪ ಓದಿ ತಿಳಿದುಕೊಂಡಿದ್ದೇನೆ. ಹೆಚ್ಚಿನ ವಿಚಾರ ತಿಳಿದುಕೊಳ್ಳಲು ಹಿರಿಯರ ಸಲಹೆ ಪಡೆಯುತ್ತೇನೆ. ಕಾಯಾ, ವಾಚಾ, ಮನಸ್ಸಾ ಕನ್ನಡದ ಡಿಂಡಿಮವನ್ನು ಖಂಡಿತವಾಗಿ ರಾಷ್ಟ್ರ ಮಟ್ಟದಲ್ಲಿ ಮುಟ್ಟಿಸುವ ಕೆಲಸ ಮಾಡುತ್ತೇನೆ. ಹಿಂದಿ ಹೇರಿಕೆ ಬಗ್ಗೆ ಪ್ರತಿಕ್ರಿಯಿಸದೆ, ಒಳ್ಳೆಯ ಕೆಲಸಕ್ಕೆ ಹೋಗುತ್ತಿದ್ದೇನೆ ಎಂದು ಜಗ್ಗೇಶ್ ಅವರು ಹೇಳಿದ್ದಾರೆ.