Tuesday, March 3, 2026
Tuesday, March 3, 2026
Home Blog Page 1557

ಭಾರತ ಈಗ ಅಮೆರಿಕದ ದೊಡ್ಡ ಟ್ರೇಡ್ ಪಾರ್ಟ್ ನರ್

0

ಇತ್ತೀಚೆನ ವರ್ಷಗಳಲ್ಲಿ ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಹೆಚ್ಚಾಗುತ್ತಿದೆ.

ಅಂದಹಾಗೆ, ಚೀನಾ ಮತ್ತು ಭಾರತದ ನಡುವಿನ ವ್ಯಾಪಾರ 2020 – 21ರ ಅವಧಿಯಲ್ಲಿ 86.4 ಬಿಲಿಯನ್‌ ಡಾಲರ್‌ ಇತ್ತು. ಭಾರತದ ರೂಪಾಯಿ ಲೆಕ್ಕದಲ್ಲಿ ಸುಮಾರು 6.65 ಲಕ್ಷ ಕೋಟಿ . ಅದು 2021 – 22ರ ಅವಧಿಯಲ್ಲಿ115.42 ಬಿಲಿಯನ್‌ ಡಾಲರ್‌ ಎಂದರೆ ಸುಮಾರು 8.88 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

ಆದರೆ, ಇದೇ ಅವಧಿಯಲ್ಲಿ ಅಮೆರಿಕ ನಡುವಿನ ಭಾರತದ ವ್ಯಾಪಾರ ಗಣನೀಯ ಮಟ್ಟದಲ್ಲಿ ಹೆಚ್ಚಾಗಿದೆ.

ಈ ಮೂಲಕ, ಚೀನಾವನ್ನು ಹಿಂದಿಕ್ಕಿದ ಅಮೆರಿಕ ಭಾರತದ ಅತಿದೊಡ್ಡ ವ್ಯಾಪಾರಿ ಪಾಲುದಾರ ರಾಷ್ಟ್ರ ಎಂದು ಕರೆಸಿಕೊಂಡಿದೆ.

ಉಭಯ ದೇಶಗಳ ನಡುವಿನ ವ್ಯಾಪಾರ ವಹಿವಾಟು 2020-21ನೇ ಸಾಲಿನಲ್ಲಿ 80.51ಬಿಲಿಯನ್‌ ಡಾಲರ್‌ ಅಂದರೆ ಸುಮಾರು 6.16 ಲಕ್ಷ ಕೋಟಿ ರೂಪಾಯಿ ಇತ್ತು.

ಆದರೆ ಈ ವರ್ಷ ಅದರ ಗಾತ್ರ 2021 -22ನೇ ಸಾಲಿನ ಭಾರತ ಅಮೆರಿಕ ನಡುವಿನ ವ್ಯಾಪಾರ 119.42 ಬಿಲಿಯನ್‌ ಡಾಲರ್‌ ಅಂದ್ರೆ ಭಾರತದ ರೂಪಾಯಿ ಲೆಕ್ಕದಲ್ಲಿ 9.19 ಲಕ್ಷ ಕೋಟಿಗೆ ದಾಟಿದೆ. ಈ ಮೂಲಕ ಭಾರತದ ಅತಿದೊಡ್ಡ ಪಾರ್ಟ್ನರ್ ಎಂದು ಅಮೆರಿಕ ಕರೆಸಿಕೊಂಡಿದೆ.

ಆರ್ ಎಸ್ಎಸ್ ಟೀಕಿಸುವ ಮೂಲಕ ಸಿದ್ಧರಾಮಯ್ಯ ಮುಂಚೂಣಿಗೆ ಯತ್ನ- ಕಟೀಲ್

0

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ 3 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡರು. ಹೆಸರು ಮಾತ್ರ ರಾಮಂದು, ಮುಖ ರಾವಣಂದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.

ತುಮಕೂರಿನಲ್ಲಿ ಆಯೋಜಿಸಿದ್ದ ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಟಿಪ್ಪು ಜಯಂತಿ ಬಗ್ಗೆ ಯೋಚನೆ ಮಾಡಿದ ಸಿದ್ದರಾಮಯ್ಯ, ರೈತರ ಬದುಕು ಹಸನು ಮಾಡುವ ಬಗೆ ಯೋಚನೆ ಮಾಡಲಿಲ್ಲ. ರೈತರ ಶಾಪ ಕಾಂಗ್ರೆಸ್‌ಗೆ ತಟ್ಟಿದೆ. ಹಾಗಾಗಿ ಅನೇಕ ನಾಯಕರು ಕಾಂಗ್ರೆಸ್ ತೊರೆದಿದ್ದರು. ಅತಿ ಹೆಚ್ಚು ಗೋ ಹತ್ಯೆ ನಡೆದಿದ್ದು ಸಿದ್ದರಾಮಯ್ಯ ಕಾಲದಲ್ಲಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯನವರ ಕಾರಣದಿಂದ 61 ಮಂದಿ ಕಾಂಗ್ರೆಸ್ ನಾಯಕರು ಪಕ್ಷ ತೊರೆದಿದ್ದಾರೆ ಎಂದು ಹೇಳಿದ ಅವರ ಅವರ ಹೆಸರು ಹೇಳಲು ಹೇಳಲಿಲ್ಲ.

ಕುವೆಂಪು ಅವರ ಹಾಡನ್ನು ರೈತ ಗೀತೆ ಮಾಡಿದ್ದು ನಮ್ಮ ಯಡಿಯೂರಪ್ಪನವರ ಸರ್ಕಾರ. ಕಾಂಗ್ರೆಸ್ ರೈತರು ದೇಶದ ಬೆನ್ನೆಲಬು ಎಂದು ಹೇಳಿದ್ದಾರೆ. ಆದರೆ, ಯಾವತ್ತೂ ರೈತರ ಬೆನ್ನಿಗೆ ನಿಲ್ಲಲಿಲ್ಲ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರೈತರ ಬೆನ್ನಿಗೆ ನಿಂತಿದೆ. ಕಿಸಾನ್ ಸಮ್ಮಾನ್‌ ಯೋಜನೆ, ಫಸಲ್ ಭೀಮಾ‌ ಯೋಜನೆ ಮೂಲಕ ರೈತರ ಬೆನ್ನಿಗೆ ನಿಂತಿದೆ.

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಗಂಜಿ ಕೇಂದ್ರದ ಆಸೆಗಾಗಿ ಆರ್​ಎಸ್​ಎಸ್ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಿದ್ದರಾಮಯ್ಯ ಟ್ವೀಟ್​ಗೆ ತಿರುಗೇಟು ನೀಡಿದ್ದಾರೆ. ಇಟಲಿ ಮೂಲದ ನಾಯಕರಿಗೆ ಹತ್ತಿರವಾಗಲು ಸಿದ್ದರಾಮಯ್ಯ ಆ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಇನ್ಮೇಲೆ ನಾನು ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯೆ ನೀಡಬಾರದೆಂದು ತೀರ್ಮಾನಿಸಿದ್ದೇನೆ ಎಂದು ಜೋಶಿ ಅವರು ಹೇಳಿದ್ದಾರೆ. ಸಿದ್ದರಾಮಯ್ಯ ಓರ್ವ ಡ್ಯುಪ್ಲಿಕೇಟ್ ಕಾಂಗ್ರೆಸ್​ನ ಡ್ಯುಪ್ಲಿಕೇಟ್ ಲೀಡರ್.

ನಾವ್ಯಾರೂ ಕೇವಲ ಬಿಜೆಪಿಯವರೇ ಹಿಂದೂಗಳೆಂದು ಹೇಳಿಲ್ಲ. ಸದ್ಯ ಇವರು ನಾವು ಹಿಂದೂಗಳೆಂದು ಹೇಳುತ್ತಿದ್ದಾರೆ ಅನ್ನೋದೇ ಸಂತೋಷ. ಈ ಹಿಂದೆ ಇವರು ನಾವು ಹಿಂದೂಗಳೇ ಅಲ್ಲ ಎನ್ನುತ್ತಿದ್ದರು. ಇವಾಗ ಹಿಂದೂ ಎನ್ನುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಮಲ್ಲಿಕಾರ್ಜುನ ಖರ್ಗೆ ಅವರಂತಹ ಹಿರಿಯ ನಾಯಕರನ್ನು ಪಕ್ಕಕ್ಕೆ ಸರಿಸಿ ಸಿದ್ದರಾಮಯ್ಯ ಸಿಎಂ ಆದರು, ಆದರೆ ಅವರಿಗೆ ಪಕ್ಷ ನಿಷ್ಠೆ ಇಲ್ಲ ಎಂದು ಜೋಶಿ ಆರೋಪಿಸಿದ್ದಾರೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅವರ ಮಾತಿಗೆ ತೂಕವಿತ್ತು. ಈಗ ಅವರ ಮಾತನ್ನು ಅವರ ಪಕ್ಷದ ಕಾರ್ಯಕರ್ತರೇ ಕೇಳುತ್ತಿಲ್ಲ. ಅವರ ಮಾತಿಗೆ ಕಿಮ್ಮತ್ತು ಇಲ್ಲ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್ ಅವರು ತಿಳಿಸಿದ್ದಾರೆ.

ಪಕ್ಷದಲ್ಲಿ ಸಿದ್ದರಾಮಯ್ಯ ಅವರನ್ನು ಕಡೆಗಣನೆ ಮಾಡಿರುವುದರಿಂದ ಆರ್‌ಎಸ್‌ಎಸ್‌, ಟೀಕಿಸಿ ಮುಂಚೂಣಿಗೆ ಬರಲು ಯತ್ನಿಸುತ್ತಾರೆ. ಸಿದ್ದರಾಮಯ್ಯ ಆರ್‌ಎಸ್‌ಎಸ್‌ ಬಗ್ಗೆ ಅಧ್ಯಯನ ಮಾಡಿಲ್ಲ. ಅವರಿಗೆ ಆ ಕುರಿತು ಕನಿಷ್ಠ ಜ್ಞಾನವೂ ಇಲ್ಲ. ಅವರನ್ನು ಒಮ್ಮೆ ಆರ್‌ಎಸ್‌ಎಸ್‌ ಕಚೇರಿಗೆ ಕರೆದೊಯ್ಯುತ್ತೇವೆ. ಅವರು ಅಲ್ಲಿನ ಕಾರ್ಯಕ್ರಮಗಳ ಬಗ್ಗೆ ಅಧ್ಯಯನ ಮಾಡಲಿ. ಇಲ್ಲವೇ ಆರ್‌ಎಸ್‌ಎಸ್‌ ಕುರಿತ ಪುಸ್ತಕ ನೀಡುತ್ತೇವೆ. ಆಗಲಾದರೂ ಅವರಿಗೆ ಆರ್‌ಎಸ್‌ಎಸ್‌ ಮಾಡುವ ಸಮಾಜಮುಖಿ ಕಾರ್ಯಗಳು ಅರ್ಥವಾಗಬಹುದು ಎಂದು ಹೇಳಿದ್ದಾರೆ.

ಆರ್ ಎಸ್ಎಸ್ ಮೂಲದ ಪ್ರಶ್ನೆ ಬಗ್ಗೆ ಜ್ಞಾನೇಂದ್ರರಿಂದ ಸಿದ್ಧುಗೆ ತಿರುಗೇಟು

0

ಆರ್.ಎಸ್.ಎಸ್ ಮೂಲ ಪ್ರಶ್ನಿಸಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು, ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನವರಿಗೆ ಮಾತನಾಡಲು ಈ ದೇಶದಲ್ಲಿ ಬೇರೆ ವಿಚಾರಗಳಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಈ ದೇಶದ ಪ್ರಧಾನಿ, ರಾಷ್ಟ್ರಪತಿ, ಉಪ ರಾಷ್ಟ್ರಪತಿ ಆರ್.ಎಸ್.ಎಸ್ ನವರು. ಅನೇಕ ರಾಜ್ಯಗಳ ಮುಖ್ಯಮಂತ್ರಿಗಳು, ಸಚಿವರು ಆರ್.ಎಸ್.ಎಸ್ ನವರು, ನಾನು ಕೂಡ ಆರ್.ಎಸ್.ಎಸ್ ನಿಂದ ಬಂದವನು. ದೇಶದಲ್ಲಿ ಆರ್.ಎಸ್.ಎಸ್ ನಿಂದ ಬಂದವರು ಲಕ್ಷ ಲಕ್ಷ ಜನರಿದ್ದಾರೆ. ಇಂತಹ ವಿಚಾರ ಚರ್ಚೆಯಿಂದ ಕಾಂಗ್ರೆಸ್ ನಾಯಕರು ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಲ್ಲ. ಅವರ ಪಕ್ಷ ಸಂಘಟನೆ, ಅಧಿಕಾರದ ಅಂತಿಮ ದಿನಗಳು ಬಂದಿವೆ. ಅದೆಲ್ಲವೂ ಗೊತ್ತಾಗಿ ವಿಚಲಿತರಾಗಿ ಈ ರೀತಿ ಹೇಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ದೇಶದಲ್ಲಿ ಕೋವಿಡ್ ಸೋಂಕು ಇಳಿಕೆ

0

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಕಡಿಮೆ ಆಗಿರುವುದು ಕಂಡುಬಂದಿದೆ. ಕಳೆದ 24 ಗಂಟೆಯಲ್ಲಿ 2,706 ಜನರಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿದೆ.

ಕೊರೋನಾ ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಏರಿಕೆಯಾಗಿದೆ. 24 ಗಂಟೆಯಲ್ಲಿ 25 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.

ದೇಶದಲ್ಲಿ 17,698 ಕೊರೋನಾ ಸಕ್ರಿಯ ಪ್ರಕರಣಗಳಿವೆ. 24 ಗಂಟೆಯಲ್ಲಿ 2070 ಜನರು ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.

2,28,823 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. ದೇಶದಲ್ಲಿ ಈವರೆಗೆ 1,93,31,57,352 ಡೋಸ್ ಲಸಿಕೆ ಹಾಕಲಾಗಿದೆ. 2,78,267 ಜನರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ.

ಗೋವಾದ ಜನತೆಗೆ ರಾಷ್ಟ್ರಪತಿಯವರಿಂದ ರಾಜ್ಯ ಸ್ಥಾಪನಾ ದಿನ ಶುಭಾಶಯ ಹಾರೈಕೆ

0

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಗೋವಾದ ಜನತೆಗೆ ಅವರ ರಾಜ್ಯ ಸ್ಥಾಪನಾ ದಿನದಂದು ಶುಭಾಶಯ ಕೋರಿದ್ದಾರೆ. ರಾಜ್ಯದ ಶ್ರೀಮಂತ ಸಂಸ್ಕೃತಿಯು ಎಲ್ಲಾ ಭಾರತೀಯರಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದ್ದಾರೆ.

ಗೋವಾ, ದಮನ್ ಹಾಗೂ ದಿಯು ಕೇಂದ್ರಾಡಳಿತ ಪ್ರದೇಶದ ಭಾಗವಾಗಿದ್ದ ಗೋವಾಕ್ಕೆ 1987 ರಲ್ಲಿ ಇದೇ ದಿನದಂದು ರಾಜ್ಯ ಸ್ಥಾನಮಾನ ನೀಡಲಾಯಿತು.

ಗೋವಾ ರಾಜ್ಯ ಸ್ಥಾಪನಾ ದಿನದಂದು ಎಲ್ಲಾ ಗೋವಾ ಪ್ರಜೆಗಳಿಗೆ ಶುಭಾಶಯಗಳು. ಭಾರತದ ಕೆಲವು ಸುಂದರವಾದ ಸ್ಥಳಗಳಿಗೆ ನೆಲೆಯಾಗಿರುವ ಗೋವಾ ರಾಜ್ಯ, ಶ್ರೀಮಂತ ಉತ್ಕೃಷ್ಟ ಸಂಸ್ಕೃತಿಯನ್ನು ಹೊಂದಿದೆ. ಇದು ಎಲ್ಲಾ ಭಾರತೀಯರಿಗೆ ಹೆಮ್ಮೆಯ ವಿಷಯವಾಗಿದೆ.

ಅಭಿವೃದ್ಧಿ ನಿಯತಾಂಕಗಳಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಅದರ ನಿರಂತರ ಪ್ರಗತಿ ಹಾಗೂ ಸಮೃದ್ಧಿಗೆ ಶುಭ ಹಾರೈಕೆಗಳು ಎಂದು ರಾಮನಾಥ್ ಕೋವಿಂದ್ ಅವರು ಟ್ವೀಟ್ ಮೂಲಕ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಸಿದ್ಧು ಮತ್ತು ಬೊಮ್ಮಾಯಿ ಜಾಲತಾಣದಲ್ಲಿ ಬರಹ ಜಟಾಪಟಿ

0

ಸಿದ್ದರಾಮಯ್ಯನವರು ದ್ರಾವಿಡರಾ ? ಆರ್ಯರಾ? ಹಾಗೂ ನೆಹರೂ ಅವರನ್ನು ಮೋದಿಗೆ ಹೋಲಿಸಲು ಸಾಧ್ಯವೇ ಇಲ್ಲ ಎನ್ನುವ ಸಿಎಂ ಬೊಮ್ಮಾಯಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ.

ಈ ಬಗ್ಗೆ ಸಿದ್ದರಾಮಯ್ಯನವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಬಸವರಾಜ ಬೊಮ್ಮಾಯಿಯವರೇ, ನಾನು ಮಾತ್ರವಲ್ಲ, ನೀವೂ ದ್ರಾವಿಡರೇ ಆಗಿದ್ದೀರಿ. ಈ ಸ್ಪಷ್ಟತೆ ನನಗಿದೆ. ನಾನು ದ್ರಾವಿಡ ಮೂಲವನ್ನು ಉಳಿಸಿಕೊಂಡಿದ್ದೇನೆ. ನೀವು ಮಾತ್ರ ಅಧಿಕಾರದ ದುರಾಸೆಯಿಂದ ಮೂಲವನ್ನು ತೊರೆದು ಪಕ್ಷಾಂತರ ಮಾಡಿದ್ದೀರಿ ಎಂದಿದ್ದಾರೆ.

ಬೇಗ “ಘರ್ ವಾಪಸಿ”‘ ಆಗಿಬಿಡಿ.
ನೆಹರೂ ಅವರನ್ನು ಮೋದಿಗೆ ಹೋಲಿಸಲು ಸಾಧ್ಯವೇ ಇಲ್ಲ ಎಂದು ಮತ್ತೆ ಮತ್ತೆ ಹೇಳುತ್ತೇನೆ. ಇಬ್ಬರು ನಾಯಕರ ಸಾಧನೆ ಬಗ್ಗೆ ಮುಕ್ತ ಚರ್ಚೆಗೆ ನೀವು ಸಿದ್ಧ ಇದ್ದರೆ ನಾನೂ ಸಿದ್ಧನಿದ್ದೇನೆ. ನನ್ನ ಮಾತಿಗೆ ನೀವು ಖರೀದಿಸಿಟ್ಟಿರುವ ”ಟ್ರೋಲ್ ಗ್ಯಾಂಗ್” ಮೂಲಕ ಉತ್ತರ ಕೊಡಿಸಲು ಹೋಗಬೇಡಿ. ”ಭಾರತ ಮಾತೆ ತನ್ನ ಭಕ್ತನನ್ನು ಕಳೆದುಕೊಂಡಿದ್ದಾಳೆ, ಶಾಂತಿ ತನ್ನ ರಕ್ಷಕನನ್ನು ಕಳೆದುಕೊಂಡು ಅನಾಥಳಾಗಿದ್ದಾಳೆ, ನಿರಾಶ್ರಿತರು ತನ್ನ ಆಶ್ರಯದಾತನನ್ನು, ಸಾಮಾನ್ಯ ಜನ ತಮ್ಮ ಕಣ್ಮಣಿಯನ್ನು ಕಳೆದುಕೊಂಡಿದ್ದಾರೆ.. ಪರದಿ ಬಿದ್ದಿದೆ” -ಹೀಗೆಂದು ನೆಹರೂ ಸಾವಿಗೆ ಎ.ಬಿ.ವಾಜಪೇಯಿ ಕಂಬನಿ ಮಿಡಿದಿದ್ದನ್ನು ಹಿರಿಯ ಬಿಜೆಪಿ ನಾಯಕರಿಂದ ಕೇಳಿ ತಿಳಿದುಕೊಳ್ಳಿ ಎಂದಿದ್ದಾರೆ.

ನಾಪತ್ತೆಯಾಗಿದ್ದ ತಾರಾ ಏರ್ ನಂ 9 ವಿಮಾನ ಅಫಘಾತ: ಮಾಹಿತಿಗೆ ನಿರೀಕ್ಷೆ

0

ಪರ್ವತ ಪ್ರದೇಶವಾದ ಮುಸ್ತಾಂಗ್ ನಲ್ಲಿ ಭಾನುವಾರ ಬೆಳಿಗ್ಗೆ ನಾಪತ್ತೆಯಾಗಿದ್ದ ತಾರಾ ಏರ್ ನ 9 ಎನ್‌ಎಇಟಿ ಅವಳಿ ಎಂಜಿನ್ ವಿಮಾನವು ಜಿಲ್ಲೆಯ ಕೊವಾಂಗ್ ಗ್ರಾಮದಲ್ಲಿ ಪತ್ತೆಯಾಗಿದೆ ಎಂದು ನೇಪಾಳ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ನೇಪಾಳ ಸೇನೆಗೆ ಸ್ಥಳೀಯರು ನೀಡಿದ ಮಾಹಿತಿಯ ಪ್ರಕಾರ, ತಾರ ಏರ್ ವಿಮಾನವು ಮನಪತಿ ಹಿಮಲ್ ಅವರ ಭೂಕುಸಿತದ ಅಡಿಯಲ್ಲಿ ಲಾಮ್ಚೆ ನದಿಯ ಮುಖಭಾಗದಲ್ಲಿ ಅಪಘಾತಕ್ಕೀಡಾಯಿತು. ನೇಪಾಳ ಸೇನೆಯು ನೆಲ ಮತ್ತು ವಾಯು ಮಾರ್ಗದಿಂದ ಸ್ಥಳದ ಕಡೆಗೆ ಚಲಿಸುತ್ತಿದೆ ಎಂದು ಸೇನಾ ವಕ್ತಾರ ನಾರಾಯಣ್ ಸಿಲ್ವಾಲ್ ಹೇಳಿದ್ದಾರೆ.

ಪರಿಸ್ಥಿತಿ ಏನು ಎನ್ನುವುದು ಪತ್ತೆಯಾಗಿಲ್ಲ ಎಂದು ತ್ರಿಭುವನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮುಖ್ಯಸ್ಥರು ದೃಢಪಡಿಸಿದ್ದಾರೆ.

ಆರೋಗ್ಯ ಸೇವಾ ವೃತ್ತಿಪರರ ಆನ್ ಲೈನ್ ಪೋರ್ಟಲ್

0

ಆರೋಗ್ಯ ಕ್ಷೇತ್ರದ ಜಾಗತಿಕ ಕೇಂದ್ರವಾಗಿರುವ ಭಾರತವನ್ನು ಬಿಂಬಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಆರೋಗ್ಯ ಸೇವಾ ವೃತ್ತಿಪರರ ಆನ್‌ಲೈನ್‌ ಪೋರ್ಟಲ್‌ವೊಂದನ್ನು ಅಭಿವೃದ್ಧಿಪಡಿಸುತ್ತಿದೆ.

ಮುಂದಿನ ಆಗಸ್ಟ್‌ 15ರಂದು ಈ ಪೋರ್ಟಲ್‌ ಅನಾವರಣಗೊಳ್ಳಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಕೇಂದ್ರ ಸರ್ಕಾರದ “ಹೀಲ್‌ ಬೈ ಇಂಡಿಯಾ’ ಯೋಜನೆಯ ಭಾಗವಾಗಿ ಆಯುಷ್ಮಾನ್‌ ಭಾರತ್‌ ಡಿಜಿಟಲ್‌ ಮಿಷನ್‌ನಡಿ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ(ಎನ್‌ಎಚ್‌ಎ)ವು ಈ ಪೋರ್ಟಲ್‌ ಅನ್ನು ಅಭಿವೃದ್ಧಿಪಡಿಸುತ್ತಿದೆ.

ಪೋರ್ಟಲ್‌ನಲ್ಲಿ ಸಂಗ್ರಹಿಸಲಾಗುವ ಮಾಹಿತಿಗಳನ್ನು ನೀಡುವುದು, ಬಿಡುವುದು ಆರೋಗ್ಯ ವೃತ್ತಿಪರರ ಸ್ವಇಚ್ಛೆಗೆ ಬಿಟ್ಟಿದ್ದು. ದತ್ತಾಂಶಗಳ ಸುರಕ್ಷತೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಜೂ.15ರ ವೇಳೆಗೆ ಪೋರ್ಟಲ್‌ ಸಿದ್ಧವಾಗಲಿದ್ದು, ಅಂದಿನಿಂದ ಆರೋಗ್ಯ ಸಿಬ್ಬಂದಿ ನೋಂದಣಿ ಆರಂಭಿಸಬಹುದು ಎಂದು ಮೂಲಗಳು ಹೇಳಿವೆ.

ವೈದ್ಯರು, ದಾದಿಯರು ಮತ್ತು ಫಾರ್ಮಾಸಿಸ್ಟ್‌ಗಳು ಸೇರಿದಂತೆ ಆರೋಗ್ಯಸೇವಾ ಸಿಬ್ಬಂದಿಗೆ ಸಂಬಂಧಿಸಿದ ಮಾಹಿತಿಯು ಈ ಪೋರ್ಟಲ್‌ನಲ್ಲಿ ಇರಲಿದ್ದು, ಅದರಲ್ಲಿ ಅವರು ಯಾವ ದೇಶದಲ್ಲಿ ಸೇವೆ ಸಲ್ಲಿಸಲು ಬಯಸುತ್ತಾರೆ ಎಂಬ ವಿವರವೂ ದಾಖಲಾಗಿರುತ್ತದೆ.

ಸಾಮಾನ್ಯ ಮಾಹಿತಿಯ ಜೊತೆಗೆ ಕೆಲಸ ಮಾಡಲು ಇಚ್ಛಿಸುವ ದೇಶ, ಗೊತ್ತಿರುವ ಭಾಷೆ, ವೀಸಾ, ಆಯಾ ದೇಶಕ್ಕೆ ಸಂಬಂಧಿಸಿದ ಅರ್ಹತಾ ಪರೀಕ್ಷೆಯ ವಿವರಗಳನ್ನೂ ನಮೂದಿಸಬಹುದಾಗಿದೆ.

ಆಧುನಿಕ ವೈದ್ಯಪದ್ಧತಿ ಮಾತ್ರವಲ್ಲದೇ ಸಾಂಪ್ರದಾಯಿಕ ವೈದ್ಯರೂ ಇದರಲ್ಲಿ ನೋಂದಣಿ ಮಾಡಬಹುದು.

ರಾಜ್ಯಸಭಾ ಚುನಾವಣೆ: ನಟ ಜಗ್ಗೇಶ್ & ನಿರ್ಮಲಾ ಸೀತಾರಾಮನ್ ಬಿಜೆಪಿ ಅಭ್ಯರ್ಥಿಗಳು

0

ಜೂನ್ 10 ರಂದು ನಡೆಯಲಿರುವ ಮುಂಬರುವ ರಾಜ್ಯಸಭಾ ಚುನಾವಣೆಗೆ ಕರ್ನಾಟಕದಿಂದ ಪಕ್ಷದ ಅಭ್ಯರ್ಥಿಗಳನ್ನಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ನಟ ಮತ್ತು ರಾಜಕಾರಣಿ ಜಗ್ಗೇಶ್ ಅವರ ಹೆಸರನ್ನು ಬಿಜೆಪಿ ಹೈಕಮಾಂಡ್ ಘೋಷಿಸಿದೆ.

ವಿಧಾನಸಭೆಯಲ್ಲಿನ ಸಂಖ್ಯಾಬಲದ ಆಧಾರದಲ್ಲಿ ಬಿಜೆಪಿ ಪಕ್ಷವು ಈಗ ನಾಲ್ಕು ಸ್ಥಾನಗಳಲ್ಲಿ ಇಬ್ಬರನ್ನು ಅಭ್ಯರ್ಥಿಗಳನ್ನು ಘೋಷಿಸಿದೆ, ಇನ್ನೊಂದೆಡೆಗೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಕರ್ನಾಟಕದ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲು ಉತ್ತರ ಪ್ರದೇಶದಿಂದ ಸೀತಾರಾಮನ್ ಅವರನ್ನು ಕಣಕ್ಕಿಳಿಸಬಹುದು ಎಂಬ ಊಹಾಪೋಹಗಳ ನಡುವೆಯೇ ಈ ಘೋಷಣೆ ಹೊರಬಿದ್ದಿದೆ.ಕರ್ನಾಟಕದಲ್ಲಿನ ರಾಜ್ಯಸಭಾ ಚುನಾವಣೆಯಲ್ಲಿ ನಾಲ್ಕು ಸ್ಥಾನಗಳ ಪೈಕಿ ಮೂರನ್ನು ಭದ್ರಪಡಿಸಿಕೊಳ್ಳಲು ಚರ್ಚೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆಗೂ ಮುನ್ನ ಹೇಳಿದ್ದಾರೆ.

ಶಾಸಕಾಂಗ ಸಭೆಯಲ್ಲಿ ಯಾವುದೇ ಪಕ್ಷಗಳಿಗೆ ಮತ್ತೊಬ್ಬ ಅಭ್ಯರ್ಥಿಯನ್ನು ಅವಿರೋಧವಾಗಿ ಆಯ್ಕೆ ಮಾಡುವ ಶಕ್ತಿ ಇಲ್ಲದ ಕಾರಣ ನಾಲ್ಕನೇ ಸ್ಥಾನದ ಬಗ್ಗೆ ಅನಿಶ್ಚಿತತೆ ಮುಂದುವರಿದಿದೆ.

ಕೆಲವು ಐಎಎಸ್ ಅಧಿಕಾರಿಗಳ ವರ್ಗಾವಣೆ ಆದೇಶ

0

11 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ವಿನೋಥ್ ಪ್ರಿಯಾ- ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಎಂಡಿಯಾಗಿ, ರಮೇಶ್ ಡಿ.ಎಸ್ – ಗಣಿ ಹಾಗೂ ಭೂ ವಿಜ್ಞಾನ ಇಲಾಖೆಯ ನಿರ್ದೇಶಕರಾಗಿ, ಶರತ್.ಬಿ- ಕೃಷಿ ಇಲಾಖೆಯ ಆಯುಕ್ತರಾಗಿ, ಸತ್ಯಭಾಮರನ್ನು ಅತಿಸಣ್ಣ, ಸಣ್ಣ, ಮಧ್ಯಮ ಉದ್ಯಮ, ವಾಣಿಜ್ಯ ಹಾಗೂ ಕೈಗಾರಿಕಾ ಇಲಾಖೆಯ ನಿರ್ದೇಶಕರಾಗಿ ಹಾಗೂ ಸೋಮಶೇಖರ್ ಎಸ್.ಜೆ. ಅವರನ್ನು ಕರ್ನಾಟಕ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಎಂಡಿಯಾಗಿ ವರ್ಗಾಯಿಸಲಾಗಿದೆ.

ಉಮಾಶಂಕರ್ ಅವರನ್ನು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ.
ರಜನೀಶ್ ಗೋಯಲ್​ಗೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ.

ಐಎಸ್​ಎನ್ ಪ್ರಸಾದ್​ ಅಭಿವೃದ್ಧಿ ಆಯುಕ್ತರ ಹೆಚ್ಚುವರಿ ಜವಾಬ್ದಾರಿ ಹೊಂದಿದ್ದಾರೆ.
ರಶ್ಮಿ ವಿ.ಮಹೇಶ್- ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ, ಪಂಕಜ್ ಕುಮಾರ್ ಪಾಂಡೆ- ವಾಣಿಜ್ಯ ಹಾಗೂ ಕೈಗಾರಿಕೆ ಇಲಾಖೆಯ ಕಾರ್ಯದರ್ಶಿಯಾಗಿ, ರಾಮ್ ಪ್ರಸಾದ್​ ಮನೋಹರ್ ಅವರನ್ನು ಬಿಬಿಎಂಪಿ ವಿಶೇಷ ಆಯುಕ್ತರಾಗಿ ವರ್ಗಾಯಿಸಲಾಗಿದೆ.