Tuesday, March 3, 2026
Tuesday, March 3, 2026
Home Blog Page 1558

ಕೋವಿಡ್ ನಿರ್ವಹಣೆ ಮಾಡಿದ ಭಾರತದ ಬಗ್ಗೆ ಬಿಲ್ ಗೇಟ್ಸ್ ಮೆಚ್ಚುಗೆ

0

ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರೊಂದಿಗೆ ನಡೆದ ಸಭೆಯಲ್ಲಿ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಭಾರತದ ಲಸಿಕೆ ಅಭಿಯಾನವನ್ನು ಶ್ಲಾಘಿಸಿದ್ದಾರೆ.

ಈ ವೇಳೆ ಮಾತನಾಡಿದ ಬಿಲ್ ಗೇಟ್ಸ್, ವ್ಯಾಕ್ಸಿನೇಷನ್ ಡ್ರೈವ್‌ನೊಂದಿಗೆ ಭಾರತದ ಆರೋಗ್ಯ ಫಲಿತಾಂಶಗಳನ್ನು ಹೆಚ್ಚಿಸಲು ತಂತ್ರಜ್ಞಾನದ ಬಳಕೆ ಯಶಸ್ಸು ಜಗತ್ತಿಗೆ ಅನೇಕ ಪಾಠಗಳನ್ನು ನೀಡುತ್ತದೆ ಎಂದರು.

ಡಾ. ಮನ್ಸುಖ್ ಮಾಂಡವಿಯಾ ಅವರನ್ನು ಭೇಟಿಯಾಗಲು ಮತ್ತು ಜಾಗತಿಕ ಆರೋಗ್ಯದ ದೃಷ್ಟಿಕೋನಗಳನ್ನು ವಿನಿಮಯ ಮಾಡಿಕೊಳ್ಳಲು ಇದು ಅದ್ಭುತ ಸಮಯವಾಗಿದೆ. ಎಂದು ತಿಳಿಸಿದರು.

ಇನ್ನೂ, ಬಿಲ್ ಗೇಟ್ಸ್ ಅವರೊಂದಿಗೆ ಫೋಟೋಗಳನ್ನು ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವಿಯಾ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ʻಬಿಲ್ಗೇಟ್ಸ್ ಅವರೊಂದಿಗೆ ಸಂವಹನ ನಡೆಸಲು ಸಂತೋಷವಾಗಿದೆ. ಅವರು ಕೋವಿಡ್‌ ನಿರ್ವಹಣೆ ಮತ್ತು ಬೃಹತ್ ವ್ಯಾಕ್ಸಿನೇಷನ್ ಪ್ರಯತ್ನಗಳಲ್ಲಿ ಭಾರತದ ಯಶಸ್ಸನ್ನು ಶ್ಲಾಘಿಸಿದರು ಎಂದು ಬರೆದುಕೊಂಡಿದ್ದಾರೆ.

ಮುಂದಿನ ವರ್ಷದಿಂದ ಪ್ರೌಢ ಶಾಲೆ & ಕಾಲೇಜುಗಳಲ್ಲಿ ಯೋಗ ಪ್ರಾರಂಭ

0

ಮುಂದಿನ ವರ್ಷದಿಂದ ಪ್ರೌಢಶಾಲೆ ಮತ್ತು ಕಾಲೇಜಿನಲ್ಲಿ ಯೋಗ ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರುರಾಜ್ಯದಲ್ಲಿ ಇತ್ತೀಚೆಗೆ ಮಕ್ಕಳು ಒತ್ತಡದಲ್ಲಿದ್ದಾರೆ. ಅದರಲ್ಲೂ ಕೋವಿಡ್ ನಂತರ ಹೊಸ ರೀತಿಯ ಒತ್ತಡಗಳು ಅವರ ಮೇಲೆ ಉಂಟಾಗಿದೆ. ಯಾವುದೇ ಒತ್ತಡವಿಲ್ಲದೆ ಬಾಲ್ಯವನ್ನು ಸಂತೋಷದಿಂದ ಕಳೆಯಬೇಕು. ಯೋಗ ಮಕ್ಕಳ ಆರೋಗ್ಯಕ್ಕೂ ಅನುಕೂಲಕರವಾಗಿದೆ ಎಂದರು.

ಶಾಲಾಕಾಲೇಜುಗಳಲ್ಲಿ ಯೋಗ ಆರಂಭಿಸಲು ಬೇಕಾದ ಸಿದ್ದತೆ ಮಾಡಿಕೊಳ್ಳಬೇಕಿದೆ.
ಸಂಬಂಧ ಯೋಗ ಪರಿಣಿತರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಯೋಗಾ ದಿನಾಚರಣೆಯಂದು ಮೈಸೂರಿಗೆ ಪ್ರಧಾನಿ ನರೇಂದ್ರಮೋದಿ ಆಗಮಿಸುವ ಕಾರ್ಯಕ್ರಮವಿದೆ. ಅವರು ರಾಜ್ಯಕ್ಕೆ ಬರುವುದೇ ವಿಶೇಷ. ಅಂದು ದೊಡ್ಡ ಪ್ರಮಾಣದಲ್ಲಿ ಶಾಲಾ ಕಾಲೇಜು, ಸಂಘಸಂಸ್ಥೆಗಳಿಂದ ಯೋಗಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು.
ರಾಜ್ಯದಲ್ಲಿ ಯೋಗದ ಬೆಳವಣಿಗೆಗೆ ಏನೇನು ಕ್ರಮ ಕೈಗೊಂಡಿದ್ದೇವೆ. ಯೋಗಾಕ್ಕೆ ರಾಜ್ಯ ಏನು ಕೊಡುಗೆ ನೀಡಿದೆ ಎಂಬುದನ್ನು ಪ್ರಧಾನಿ ಸಮ್ಮುಖದಲ್ಲಿ ಆರೋಗ್ಯ ಎಂಬ ಥೀಮ್‍ನಡಿಯಲ್ಲಿ ಅನಾವರಣ ಮಾಡಲಾಗುವುದು ಎಂದರು.

ಮಂಡ್ಯದ ಗಂಡು ಅಂಬರೀಶ್71 ನೇ ಜಯಂತಿ

0

ಕನ್ನಡ ಚಿತ್ರರಂಗ ಮರೆಯಲಾಗದ ಕಲಿಯುಗ ಕರ್ಣ ರೆಬೆಲ್ ಸ್ಟಾರ್ ಅಂಬರೀಶ್ ಅವರ ಜನ್ಮ ದಿನೋತ್ಸವ.

ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದಾಗಿ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸಲು ಸಾಧ್ಯವಾಗಿರಲಿಲ್ಲ.

ಆದರೆ ಈ ವರ್ಷ ತಮ್ಮ ನೆಚ್ಚಿನ ನಟನ 71ನೇ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಪತ್ನಿ ಸುಮಲತಾ ಮತ್ತು ಪುತ್ರ ಅಭಿಷೇಕ್ ಹಾಗೂ ಕುಟುಂಬ ವರ್ಗದವರು ಇಂದು ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

ಅಷ್ಟೇ ಅಲ್ಲದೆ ಸಾವಿರಾರು ಅಭಿಮಾನಿಗಳು ಸಹ ಸ್ಥಳಕ್ಕೆ ಭೇಟಿಕೊಟ್ಟು ನಮಿಸಿದ್ದಾರೆ.
ಅಂಬರೀಶ್ ಅಭಿಮಾನಿಗಳ ಬಳಗ, ಕನ್ನಡ ಚಿತ್ರರಂಗದ ಕಲಾವಿದರು ಮತ್ತು ತಂತ್ರಜ್ಞರು ಬೆಂಗಳೂರಿನ ಅನೇಕ ಕಡೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.

ಮಂಡ್ಯ ಜಿಲ್ಲೆಯ ಎಲ್ಲ ತಾಲೂಕಿನ ಹಳ್ಳಿಗಳಲ್ಲಿ ಊರಮಗನ ಹುಟ್ಟುಹಬ್ಬವನ್ನು ಅಭಿಮಾನದಿಂದ ಆಚರಿಸಲಾಗಿದೆ. ಮದ್ದೂರು ತಾಲೂಕು ಅಂಬರೀಶ್ ಅಭಿಮಾನಿಗಳ ಒಕ್ಕೂಟ ಪ್ರಧಾನ ಕಚೇರಿ ಕೂಡ ಉದ್ಘಾಟನೆಯಾಗಿದೆ

ಯುದ್ಧದಲ್ಲಿ ಸುಸ್ತಾದರೂ ತೈಲ ರಫ್ತಿನಲ್ಲಿ ರಷ್ಯದ ದಾಖಲೆ

0

ರಷ್ಯಾದ ತೈಲ ಆಮದಿನ ಮೇಲೆ ಪಾಶ್ಚೀಮಾತ್ಯ ದೇಶಗಳು ನಿರ್ಬಂಧ ಹೇರಿವೆ. ಹಾಗಿದ್ದರೂ ಸಹ ತೈಲ ಮಾರಾಟದಲ್ಲಿ ರಷ್ಯಾ ದಾಖಲೆ ಬರೆದಿದೆ ಎಂದು ವರದಿಯೊಂದು ತಿಳಿಸಿದೆ.

ಕಳೆದ ತಿಂಗಳ ಲೆಕ್ಕಾಚಾರದ ಪ್ರಕಾರ ಯೂರೋಪ್‌ ದೇಶವನ್ನು ಹಿಂದಿಕ್ಕಿರುವ ಏಷ್ಯಾ ಈಗ ರಷ್ಯಾದ ಅತಿದೊಡ್ಡ ತೈಲ ಖರೀದಿದಾರ ಎನ್ನುವ ಸ್ಥಾನ ಪಡೆದುಕೊಂಡಿದೆ.

ಇದಲ್ಲದೇ ಉಕ್ರೇನ್‌ ಯುದ್ದದ ಮೊದಲಿನಿಂದಲೂ ರಷ್ಯಾ ಮಾಡುತ್ತಿದ್ದ ತೈಲ ರಪ್ತು ಈಗ ಡಬಲ್‌ ಆಗಿದೆ. ಹೆಚ್ಚಿನ ಪ್ರಮಾಣವನ್ನ ಭಾರತ ಮತ್ತು ಚೀನಾಗಳೇ ಆಮದು ಮಾಡಿಕೊಳ್ಳುತ್ತಿವೆ ಎಂದು ರಷ್ಯಾ ಹೇಳಿದೆ.

ಇನ್ನು ಈ ಬಗ್ಗೆ ಮಾತನಾಡಿರುವ ಅಂತರಾಷ್ಟ್ರೀಯ ಆರ್ಥಿಕ ತಜ್ಞರೊಬ್ಬರು ʻಏಷ್ಯಾದ ಖರೀದಿದಾರ ದೇಶಗಳು ರಾಜಕೀಯ ನಿಲುವಿನ ಬಗ್ಗೆ ಯೋಚನೆ ಮಾಡುವುದನ್ನ ಬಿಟ್ಟು ತಮ್ಮ ಆರ್ಥಿಕತೆಗೆ ತುಂಬಾ ಆಸಕ್ತಿ ತೋರಿಸುತ್ತಿವೆ ಎಂದು ಹೇಳಿದ್ದಾರೆ.

ಮೊದಲು ಕಾರು ಮಾರಾಟ ನಂತರ ಭಾರತದಲ್ಲೇ ಉತ್ಪಾದನ ಘಟಕ-ಇಲೊನ್ ಮಸ್ಕ್

0

ಮೊದಲು ಕಾರು ಮಾರಾಟಕ್ಕೆ ಅವಕಾಶ ನೀಡಿ. ಮಾರಾಟಕ್ಕೆ ಅವಕಾಶ ನೀಡಿದ ಬಳಿಕ ಉತ್ಪಾದನಾ ಘಟಕ ತೆರೆಯುತ್ತೇವೆ ಎಂದು ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರು ಭಾರತ ಸರ್ಕಾರ ನೀಡಿದ ಷರತ್ತಿಗೆ ಈ ಪ್ರತಿಯಾಗಿ ಷರತ್ತು ಹಾಕಿದ್ದಾರೆ.

ಈ ಬಗ್ಗೆ ಟ್ವೀಟ್‌ನಲ್ಲಿ ಉತ್ತರಿಸಿದ ಎಲೋನ್ ಮಸ್ಕ್ ಅವರು, ಅಮೆರಿಕ ಮೂಲದ ಕಾರುಗಳನ್ನು ಮೊದಲು ಮಾರಾಟ ಮಾಡಲು ಹಾಗೂ ಸೇವೆ ನೀಡಲು ಯಾವುದೇ ದೇಶದಲ್ಲೇ ಅನುಮತಿ ಸಿಗದೇ ಉತ್ಪಾದನಾ ಘಟಕವನ್ನು ತೆರೆಯುವುದಿಲ್ಲ ಎಂದಿದ್ದಾರೆ.

ಪ್ರಸಿದ್ಧ ಎಲೆಕ್ಟ್ರಿಕ್ ಕಾರು ತಯಾರಿಕಾ ಕಂಪನಿ ಟೆಸ್ಲಾ ಕಳೆದ ಹಲವು ವರ್ಷಗಳಿಂದ ಭಾರತದಲ್ಲಿ ತನ್ನ ಉತ್ಪಾದನಾ ಘಟಕವನ್ನು ಪ್ರಾರಂಭಿಸುವ ಬಗ್ಗೆ ನಿರಂತರವಾಗಿ ಸುದ್ದಿ ಹರಡುತ್ತಲೇ ಇದೆ. ಆದರೆ ಭಾರತ ಟೆಸ್ಲಾ ಕಂಪನಿಗೆ ಕಾರುಗಳನ್ನು ಮಾರಾಟ ಮಾಡಲು ಅವಕಾಶ ನೀಡದೇ ಇರುವ ಹಿನ್ನೆಲೆ, ಉತ್ಪಾದನಾ ಘಟಕಗಳನ್ನೂ ತೆರೆಯುವುದು ಅಸಾಧ್ಯವಾಗಿದೆ.

ಎಲೋನ್ ಮಸ್ಕ್ ಭಾರತದಲ್ಲಿ ಕಾರುಗಳನ್ನು ತಯಾರು ಮಾಡಲು ಅಗತ್ಯದ ಆಮದಿಗೆ ಸುಂಕವನ್ನು ಕಡಿತಗೊಳಿಸುವ ಕುರಿತು ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದರು. ಆದರೆ ಮಾತುಕತೆ ಫಲ ನೀಡದ ಕಾರಣ ಮಸ್ಕ್ ಫೆಬ್ರವರಿಯಲ್ಲಿ ಟೆಸ್ಲಾವನ್ನು ಭಾರತಕ್ಕೆ ತರುವ ಯೋಜನೆ ಕೈ ಬಿಟ್ಟರು.

ಈಗ ಆನ್ ಲೈನ್ ನಲ್ಲಿ ಓದುಗರಿಗೆ ಪುಸ್ತಕ ಮಾಹಿತಿ-ಖರೀದಿ ವ್ಯವಸ್ಥೆ

0

ಜಗತ್ತು ಬದಲಾಗುತ್ತಿದೆ. ಆಟವಾಡುವ ಮಕ್ಕಳ ಕೈಯಲ್ಲೂ ಈಗ ಮೊಬೈಲ್ ತನ್ನ ಸ್ಥಾನ ಪಡೆದುಕೊಂಡಿದೆ. ಮನೆಯಿಂದ ಹೊರಬಂದು ಇತರ ಮಕ್ಕಳೊಂದಿಗೆ ಬೆರೆತು ಮಕ್ಕಳೆಲ್ಲರೂ ಆಟವಾಡುತ್ತಿದ್ದ ದಿನಗಳು ಈಗ ನೆನಪು ಮಾತ್ರ.

ಆಧುನಿಕತೆಗೆ ಜೋತುಬಿದ್ದು, ಎಲ್ಲರೂ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರು ಕೂಡ ಮೊಬೈಲ್, ಲ್ಯಾಪ್ ಟಾಪ್, ವಿಡಿಯೋ ಗೇಮ್ಸ್, ಎಂದೆಲ್ಲಾ ಸಮಯ ಕಳಿತಾ ಇದ್ದಾರೆ.
ಯಾರಿಗೂ ಈಗ ಪುಸ್ತಕಗಳನ್ನು ಮುಟ್ಟುವಷ್ಟೂ ಸಮಯವಿಲ್ಲ. ಏನೇ ಮಾಹಿತಿ ಬೇಕಿದ್ದರೂ ಗೂಗಲ್ ಕಡೆ ಮುಖ ಮಾಡ್ತಾರೆ.
ಪುಸ್ತಕಗಳೆಲ್ಲವೂ ಮನೆಯ ಕಪಾಟಿನಲ್ಲೇ ಕುಳಿತುಕೊಂಡಿವೆ.

ಇದೆಲ್ಲದರ ನಡುವೆ ಪುಸ್ತಕಗಳನ್ನು ಪ್ರೀತಿಸುವ, ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಂಡಿರುವವರು ಬೆರಳೆಣಿಕೆಯಷ್ಟು.

ಪುಸ್ತಕ ಪ್ರೇಮಿಗಳಿಗೆ ಇಲ್ಲೊಂದು ಖುಷಿಯ ಸಂಗತಿ ಇದೆ. ಅದೇನೆಂದರೆ, ಇನ್ನು ಮುಂದೆ
ಕಾಫಿ ಶಾಪ್‌, ಹೋಟೆಲ್, ರೆಸ್ಟೋರೆಂಟ್, ಔಷಧ ಮಳಿಗೆ, ಆಸ್ಪತ್ರೆ, ಮಾಲ್‌, ಕಾರ್ಪೊರೇಟ್‌ ಕಂಪನಿಗಳ ಕಚೇರಿಗಳು ಸೇರಿದಂತೆ ವಿವಿಧೆಡೆ ಪುಸ್ತಕಗಳು ದೊರೆಯಲಿವೆ. ಅದರಲ್ಲೂ ಕನ್ನಡ ಪುಸ್ತಕಗಳು ದೊರೆಯಲಿವೆ ಎನ್ನುವುದು ವಿಶೇಷ.

ವೀರಲೋಕ ಬುಕ್ಸ್‌ ಪ್ರೈ.ಲಿ. ಸಂಸ್ಥೆಯು ಈ ಹೊಚ್ಚ ಹೊಸ ಪ್ರಯೋಗಕ್ಕೆ ಮುಂದಾಗಿದೆ.
ಕಾರ್ಪೋರೇಟ್ ಶೈಲಿಯಲ್ಲಿ ಕನ್ನಡ ಪುಸ್ತಕಗಳಿಗೆ ಪ್ರಚಾರ ನೀಡಿ, ಓದುಗರಿದ್ದಲ್ಲಿಯೇ ಪುಸ್ತಕ ಒದಗಿಸಲು ಯೋಜನೆ ರೂಪಿಸಿದೆ. ಈ ಸಂಬಂಧ ನಿಗದಿತ ಮಳಿಗೆ ಹಾಗೂ ಕೇಂದ್ರಗಳ ಮುಖ್ಯಸ್ಥರ ಜತೆಗೆ ಪುಸ್ತಕ ಸಂಸ್ಥೆ ಒಪ್ಪಂದ ಮಾಡಿಕೊಳ್ಳುತ್ತಿದೆ. ಪುಸ್ತಕದ ರ್‍ಯಾಕ್‌ನಲ್ಲಿ ಪ್ರಕಟಗೊಂಡ ಹೊಸ ಕನ್ನಡದ ಪುಸ್ತಕಗಳು ಲಭ್ಯವಿರಲಿದ್ದು, ಆಸ್ತಕರು ಅಲ್ಲಿಯೇ ಹಣ ಪಾವತಿಸಿ ಪುಸ್ತಕ ಖರೀದಿಸಬಹುದಾಗಿದೆ.

ಈ ವ್ಯವಸ್ಥೆಗೆ ಜೂ.8 ರಂದು ಚಾಲನೆ ದೊರೆಯಲಿದೆ.
ಪುಸ್ತಕಗಳ ಮಾರಾಟಕ್ಕೆ ಸಂಸ್ಥೆಯು ಕಾಲ್ ಸೆಂಟರ್‌ ಅನ್ನು ಕೂಡ ಸಿದ್ಧಪಡಿಸಿರುವುದು ಗಮನಾರ್ಹ.

ಈಗಾಗಲೇ ಈ ಸಂಸ್ಥೆಯು 11 ಲಕ್ಷ ಮಂದಿಯ ಮೊಬೈಲ್ ದೂರವಾಣಿ ಸಂಖ್ಯೆಯನ್ನು ಸಂಗ್ರಹಿಸಿದೆ. ಈ ಸಂಖ್ಯೆಗೆ ಕರೆ ಮಾಡಿ, ಪ್ರಕಟಗೊಂಡ ಕನ್ನಡದ ಹೊಸ ಪುಸ್ತಕಗಳ ಬಗ್ಗೆ ತಿಳಿಸಲಾಗುತ್ತದೆ. ಪುಸ್ತಕ ಖರೀದಿಸಲು ಇಚ್ಛಿಸಿದಲ್ಲಿ, ಮನೆಗೆ ತಲುಪಿಸಲಾಗುತ್ತದೆ.

ಹಣ ಪಾವತಿ ಮೊಬೈಲ್ ಆಫ್ ಮೂಲಕ ಪುಸ್ತಕದ ದರ ಪಾವತಿಸಬಹುದಾಗಿದೆ.
ಕಟ್ಟ ಕಡೆಯ ಓದುಗನಿಗೂ ಅವನಿದ್ದ ಕಡೆಯೇ ಪುಸ್ತಕ ದೊರೆಯುವಂತೆ ಮಾಡಬೇಕು ಎನ್ನುವುದು ನಮ್ಮ ಉದ್ದೇಶ. ಓದುವ ಸಂಸ್ಕೃತಿಯನ್ನು ಹೆಚ್ಚಿಸುವ ಕೈಂಕರ್ಯಕ್ಕೆ ಮುಂದಾಗಿದ್ದೇವೆ. ವಿವಿಧೆಡೆ ಪುಸ್ತಕಗಳ ರ್‍ಯಾಕ್ ಇರಿಸಲಾಗುತ್ತದೆ. ಕಾಲ್‌ ಸೆಂಟರ್ ಸಹ ಪ್ರಾರಂಭಿಸಲಾಗುತ್ತಿದೆ. ಸಿನಿಮಾ ಪೋಸ್ಟರ್‌ಗಳ ಮಾದರಿಯಲ್ಲಿಯೇ ಪುಸ್ತಕಗಳ ಪೋಸ್ಟರ್‌ಗಳನ್ನೂ ಪ್ರದರ್ಶಿಸಲಾಗುತ್ತದೆ’ ಎಂದು ಸಂಸ್ಥೆಯ ಮುಖ್ಯಸ್ಥ ವೀರಕಪುತ್ರ ಶ್ರೀನಿವಾಸ್ ತಿಳಿಸಿದ್ದಾರೆ.

‘ಪ್ರತಿ ಲೇಖಕರಿಗೆ 500ರಿಂದ 10 ಸಾವಿರ ಓದುಗರನ್ನು ಒದಗಿಸಿಕೊಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಕನ್ನಡ ಪುಸ್ತಕೋದ್ಯಮ ಬೆಳೆಯಬೇಕು ಎನ್ನುವುದು ನಮ್ಮ ಉದ್ದೇಶ ಎಂದು ವಿವರಿಸಿದ್ದಾರೆ.

ಈ ವಿಶಿಷ್ಟ ಪ್ರಯೋಗದಿಂದಾರೂ ಓದುಗರ ಸಂಖ್ಯೆ ಹೆಚ್ಚಾಗಲಿ. ಕನ್ನಡ ಪುಸ್ತಕ ಪ್ರೇಮಿಗಳ ಬಳಗ ಹೆಮ್ಮರವಾಗಿ ಬೆಳೆಯಲಿ. ಪುಸ್ತಕ ಓದುವ ಹವ್ಯಾಸ ಎಲ್ಲರಲ್ಲೂ ಮೈಗೂಡಿಲಿ ಎಂದು ಕೆ ಲೈವ್ ಮಾದ್ಯಮ ಆಶಿಸುತ್ತದೆ.

ತಿಂಗಳಿಗೊಮ್ಮೆ ಡಿಸಿ ಅವರಿಂದ ತಾಲ್ಲೂಕು ಕಚೇರಿ ಭೇಟಿ-ಸಚಿವ ಅಶೋಕ್

0

ಇನ್ಮುಂದೆ ವಾರಕ್ಕೊಂದು ದಿನ ಜಿಲ್ಲಾಧಿಕಾರಿಗಳು ತಾಲೂಕು ಕಚೇರಿಗೆ ಭೇಟಿ ನೀಡಿ ಜನರ ಅಹವಾಲು ಸ್ವೀಕರಿಸುವಂತೆ ಮೂರು ದಿನದಲ್ಲಿ ಆದೇಶ ಹೊರಡಿಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ಬೀದರ್ ಜಿಲ್ಲೆಯ ವಡಗಾಂವ ದೇಶಮುಖ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮುಗಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಜಿಲ್ಲಾಧಿಕಾರಿಗಳು ತಿಂಗಳಿಗೆ ನಾಲ್ಕು ಬಾರಿ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆವರೆಗೆ ತಹಸೀಲ್ದಾರ್ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳು ಭೇಟಿ ನೀಡಬೇಕು. ಯಾವ್ಯಾವ ಜಿಲ್ಲಾಧಿಕಾರಿಗಳು ಯಾವ್ಯಾವ ತಾಲೂಕಿಗೆ ಭೇಟಿ ನೀಡಬೇಕು ಎಂಬ ಕುರಿತು ಪಟ್ಟಿ ತಯಾರಿಸಿ ನೀಡುತ್ತೇನೆ ಎಂದು ತಿಳಿಸಿದ್ದಾರೆ.

ತಿಂಗಳಿಗೊಮ್ಮೆ ಜಿಲ್ಲಾಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡುತ್ತಿದ್ದು, ಜನರಿಗೆ ಇನ್ನಷ್ಟು ಹತ್ತಿರವಾಗಲು ತಿಂಗಳಿಗೆ ನಾಲ್ಕು ಬಾರಿ ತಹಸೀಲ್ದಾರ್ ಕಚೇರಿಗಳಿಗೆ ಭೇಟಿ ನೀಡಿ ಅಹವಾಲು ಸ್ವೀಕರಿಸಿ ಪರಿಹರಿಸುವ ಸಂಬಂಧ ಶೀಘ್ರದಲ್ಲಿಯೇ ಆದೇಶ ಹೊರಡಿಸುತ್ತೇನೆ ಎಂದು ಹೇಳಿದ್ದಾರೆ.

ಹಲಸು ಪ್ರಿಯರನ್ನ ಸೆಳೆಯುತ್ತಿರುವ ಹೊಳೆಹೊನ್ನೂರು ಹಲಸಿನ ಹಣ್ಣು

0

ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಸಮೀಪದ ಮಲ್ಲಾಪುರ ಗ್ರಾಮದ ಬಸವರಾಜಪ್ಪ ಎಂಬುವವರ ತೋಟದಲ್ಲಿ 70 ಕೆ.ಜಿ. ತೂಕದ ಅಪರೂಪದ ಹಲಸಿನ ಹಣ್ಣು ದೊರೆತಿದ್ದು, ಇದು ಎಲ್ಲರ ಗಮನಸೆಳೆದಿದೆ.

ತೋಟದ ಸುತ್ತಲೂ 20ಕ್ಕೂ ಹೆಚ್ಚು ಹಲಸಿನ ಹಣ್ಣಿನ ಮರಗಳಿದ್ದು, ಎಲ್ಲ ಮರಗಳಲ್ಲಿನ ಹಣ್ಣುಗಳು 7ರಿಂದ 8 ಕೆ.ಜಿ.ತೂಗುತ್ತವೆ.

ಒಂದು ಮರದಲ್ಲಿ ಮಾತ್ರ 70 ಕೆ.ಜಿ. ಹಣ್ಣು ಸಿಕ್ಕಿದೆ. ಇದರ ಮಾರುಕಟ್ಟೆ ಮೌಲ್ಯ ₹ 4 ಸಾವಿರ ಎಂದು ಅಂದಾಜಿಸಲಾಗಿದೆ.

ಸಂಶೋಧಕನಿಗೆ ಸೂಕ್ಷ್ಮಮತಿ & ಸಮಗ್ರ ದೃಷ್ಟಿ ಇರಬೇಕು- ಪ್ರೊ.ಕಲ್ಗುಡಿ

0

ಯಾವುದೇ ಸಂಶೋಧನೆ ಏಕಮುಖಿಯಾಗಿರುವುದಿಲ್ಲ. ಬಹುಶಿಸ್ತೀಯ ಆಯಾಮ ಹೊಂದಿರುತ್ತದೆ. ಹೀಗಾಗಿ ಸಂಶೋಧಕರು ಸೂಕ್ಷಮತಿಗಳಾಗಿರಬೇಕು ಮತ್ತು ಸಮಗ್ರ ದೃಷ್ಟಿಕೋನ ಹೊಂದಿರಬೇಕು ಎಂದು ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ಬಸವರಾಜ ಕಲ್ಗುಡಿ ಅಭಿಪ್ರಾಯಪಟ್ಟರು.

ಕುವೆಂಪು ವಿಶ್ವವಿದ್ಯಾಲಯದ ಕನ್ನಡಭಾರತಿ ವಿಭಾಗ ‘ಕನ್ನಡ ಸಾಹಿತ್ಯ ಮತ್ತು ಅನ್ಯ ಶಿಸ್ತು’ ಕುರಿತು ಆಯೋಜಿಸಿರುವ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ಸಮಕಾಲೀನ ಸಂಶೋಧನೆಗಳು ಬದ್ಧತೆಯನ್ನು ಕಳೆದುಕೊಂಡಿವೆ.

ಸಮಾಜಮುಖಿ ಉದ್ದಿಶ್ಯಗಳನ್ನು ಮರೆತಂತಿದೆ.
ಈ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳದ ಹೊರತು ಅಂತರ್ ಶಿಸ್ತೀಯ ಸಂಶೋಧನೆಗಳು ಯಶಸ್ಸು ಕಾಣಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಸಂಶೋಧನೆಗೆ ಭವ್ಯ ಪರಂಪರೆ ಇದೆ. ಎಲ್. ಬಸವರಾಜು, ಎಂ ಎಂ ಕಲಬುರ್ಗಿ, ಚಿದಾನಂದ ಮೂರ್ತಿ ಅವರಂಥಹ ದಿಗ್ಗಜರು ತಮ್ಮ ಸಂಶೋಧನಾ ಕಾರ್ಯಗಳ ಮೂಲಕ ಕನ್ನಡದ ಅಸ್ಮಿತೆಗೆ ಅನನ್ಯವಾದ ಕೊಡುಗೆ ನೀಡಿದ್ದಾರೆ. ಈ ಮಹನೀಯರು ಅನುಸರಿಸಿದ ವಸ್ತುನಿಷ್ಠ ವಿಧಾನಗಳು ಸಮಕಾಲೀನ ಸಂಶೋಧಕರಿಗೆ ಮಾದರಿಯಾಗಬಲ್ಲದು ಎಂದರು.

ವಿಭಾಗದ ಮುಖ್ಯಸ್ಥ ಪ್ರೊ. ಜಿ. ಪ್ರಶಾಂತ ನಾಯಕ ಮಾತನಾಡಿ, ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ಕೈಗೊಳ್ಳುವ ವಿದ್ಯಾರ್ಥಿಗಳು ಅಂತರ್ ಶಿಸ್ತೀಯ ವಿಷಯಗಳ ಬಗ್ಗೆ ಗಮನಹರಿಸುವುದು ಸೂಕ್ತ. ಈ ನಿಟ್ಟಿನಲ್ಲಿ ಪ್ರಸ್ತುತ ಬಳಕೆಯಲ್ಲಿರುವ ಸಂಶೋಧನಾ ವಿಧಾನಗಳನ್ನು ಮರುರೂಪಿಸುವ ಅಗತ್ಯವಿದೆ ಎಂದರು.
ಪ್ರೊ. ಶಿವಾನಂದ ಕೆಳಗಿನಮನಿ, ಡಾ. ನೆಲ್ಲಿಕಟ್ಟೆ ಸಿದ್ದೇಶ್, ಡಾ. ಮೋಹನ್ ಚಂದ್ರಗುತ್ತಿ, ಅಧ್ಯಾಪಕರು ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸ್ಟಾರ್ಟ್ ಅಪ್ ಮೂಲಕ ಭವ್ಯ ಭಾರತ ನಿರ್ಮಾಣವಾಗುತ್ತಿದೆ-ಮೋದಿ

0

ಭವಿಷ್ಯದಲ್ಲಿ ನಾವು ಭಾರತದಲ್ಲಿ ಹೊಸ ಎತ್ತರವನ್ನು ತಲುಪುವ ಸ್ಟಾರ್ಟ್‌ ಅಪ್‌ ಗಳಿಗೆ ಸಾಕ್ಷಿಯಾಗುತ್ತೇವೆ ಎಂದು ನನಗೆ ವಿಶ್ವಾಸವಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

‘ಮನ್ ಕಿ ಬಾತ್‌’ನ 89 ನೇ ಆವೃತ್ತಿಯಲ್ಲಿ ದೇಶದ ಜನ್ನರನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮಲ್ಲಿ ವೈವಿಧ್ಯಮಯ ಸಂಸ್ಕೃತಿ ಇದೆ. ಭಾರತ ವಿವಿಧ ಭಾಷೆ ಮತ್ತು ಸಂಸ್ಕೃತಿಯಿಂದ ಶ್ರೀಮಂತವಾಗಿದೆ. ತೀರ್ಥಯಾತ್ರೆಗೆ ಹೊರಟಾಗಲೆಲ್ಲಾ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಸಾವಿರಾರು ಯಾತ್ರಿಕರು ಆಗಮಿಸುತ್ತಿರುವ ಉತ್ತರಾಖಂಡದಲ್ಲಿ ಚಾರ್ ಧಾಮ್ ಯಾತ್ರೆ ನಡೆಯುತ್ತಿದೆ. ಕೇದಾರನಾಥದಲ್ಲಿ ಕೆಲವು ಯಾತ್ರಾರ್ಥಿಗಳು ಹರಡಿದ ಕಸದಿಂದ ಯಾತ್ರಿಕರು ಬೇಸರವಾಗಿರುವುದನ್ನು ನಾನು ನೋಡಿದ್ದೇನೆ. ಕೆಲವು ಯಾತ್ರಾರ್ಥಿಗಳು ತಮ್ಮ ಯಾತ್ರೆಯ ಸಮಯದಲ್ಲಿ ತಮ್ಮ ವಾಸ್ತವ್ಯದ ಹತ್ತಿರದ ಪ್ರದೇಶಗಳನ್ನು ಸ್ವಚ್ಛಗೊಳಿಸುತ್ತಿದ್ದಾರೆ ಎಂದು ಹೇಳಿದರು.

ಸ್ಟಾರ್ಟ್ ಅಪ್ ಮೂಲಕ ನವಭಾರತ ನಿರ್ಮಾಣವಾಗುತ್ತಿದೆ.ಉತ್ತಮ ಮಾರ್ಗದರ್ಶನದೊಂದಿಗೆ ಸ್ಟಾರ್ಟ್ ಅಪ್ ವಿಸ್ತರಣೆಯಾಗುತ್ತಿವೆ. ಸ್ಟಾರ್ಟ್‌ ಅಪ್‌ ಗಳು ಯುವ ಭಾರತದ ಸ್ಪೂರ್ತಿ. ಅವು ನವ ಭಾರತದ ಚೈತನ್ಯವನ್ನು ಪ್ರತಿಬಿಂಬಿಸುತ್ತವೆ. ಸರಿಯಾದ ಮಾರ್ಗದರ್ಶನವು ಸ್ಟಾರ್ಟ್ ಅಪ್‌ ಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬಹುದು ಎಂದು ಹೇಳಿದರು.

ದೇಶದಲ್ಲಿ ಇಂದು ಗ್ರಾಮಗಳಲ್ಲಿಯೂ ಸ್ಟಾರ್ಟ್ ಅಪ್ ಶುರುವಾಗಿವೆ. ವಿಶ್ವದಲ್ಲಿ ಭಾರತದ ಸಾಮರ್ಥ್ಯದ ಬಗ್ಗೆ ಭರವಸೆ ಮೂಡಿದೆ
ಸರಿಯಾದ ಮಾರ್ಗದರ್ಶನ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ. ಭಾರತದಲ್ಲಿ ಸಹಾಯ ಮಾಡಲು ಬದ್ಧವಾಗಿರುವ ಅನೇಕ ಮಾರ್ಗದರ್ಶಕರು ಇದ್ದಾರೆ ಎಂದರು.