Tuesday, March 3, 2026
Tuesday, March 3, 2026
Home Blog Page 1559

ರಾಜ್ಯ ಚಲಚ್ಚಿತ್ರ & ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಹರೀಶ್ ಆಯ್ಕೆ

0

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ2022 ಹಾಗೂ 23ನೇ ಸಾಲಿನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಪದಾಧಿಕಾರಿಗಳ ಸ್ಥಾನಕ್ಕೆ ಇತ್ತಿಚೆಗೆ ಚುನಾವಣೆ ನಡೆಸಲಾಗಿತ್ತು.

ಈ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಹಿರಿಯ ನಿರ್ಮಾಪಕ ಭಾ. ಮ.ಹರೀಶ್‌ ಅವರು ಅತ್ಯಧಿಕ ಮತಗಳಿಂದ ಜಯಗಳಿಸಿದ್ದಾರೆ.

ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಭಾ.ಮ.ಹರೀಶ್‌ ಹಾಗೂ ಸಾರಾ ಗೋವಿಂದು ಇಬ್ಬರೂ ಸ್ಪರ್ಧಿಸಿದ್ದರಿಂದ ಕಳೆದ ವರ್ಷಕ್ಕಿಂತಲೂ ಈ ಬಾರಿ ಪೈಪೋಟಿ ಜೋರಾಗಿತ್ತು.

ಇಬ್ಬರ ನಡುವೆ ಪ್ರಬಲ ಸ್ಪರ್ಧೆ ನಡೆದು ಕೊನೆಗೆ 781 ಮತಗಳನ್ನು ಪಡೆಯುವ ಮೂಲಕ 403 ಮತಗಳ ಅಂತರದಿಂದ ಸಾರಾ ಗೋವಿಂದು ಅವರನ್ನು ಸೋಲಿಸಿ, ಭಾ.ಮ.ಹರೀಶ್‌ ಅವರು ವಾಣಿಜ್ಯ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೇರಿದರು.

ಇನ್ನು ಭಾ.ಮ.ಹರೀಶ್‌ ಅವರ ಬೆಂಬಲಿತ ಅಭ್ಯರ್ಥಿಗಳಾಗಿ ಉಪಾಧ್ಯಕ್ಷ ಸ್ಥಾನಕ್ಕೆ ನಿರ್ಮಾಪಕ ವಲಯದಿಂದ ಹಿರಿಯ ನಟ ಜೈ ಜಗದೀಶ್‌ ಹಾಗೂ ವಿತರಕರ ವಲಯದಿಂದ ಶಿಲ್ಪಾ ಶ್ರೀನಿವಾಸ್‌ ಎಚ್‌.ಸಿ. ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಗಗನ ಯಾನದಲ್ಲೇ ಸಂಪರ್ಕ ಕಳೆದುಕೊಂಡ ನೇಪಾಳದ ವಿಮಾನ

0

ನೇಪಾಳದಲ್ಲಿ 22 ಪ್ರಯಾಣಿಕರಿದ್ದ ವಿಮಾನವೊಂದು ಸಂಪರ್ಕ ಕಳೆದುಕೊಂಡಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

22 ಮಂದಿ ಪ್ರಯಾಣಿಕರೊಂದಿಗೆ ಪೋಖರಾದಿಂದ ನೇಪಾಳದ ಜೋಮ್ಸೋಮ್‌ ಗೆ ಹಾರುತ್ತಿದ್ದ ವಿಮಾನವು ಇಂದು ಬೆಳಗ್ಗೆ ಸಂಪರ್ಕ ಕಳೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಪತ್ತೆಯಾಗಿರುವ ವಿಮಾನದಲ್ಲಿ ನಾಲ್ವರು ಭಾರತೀಯರು ಹಾಗೂ ಇಬ್ಬರು ವಿದೇಶಿ ಪ್ರಜೆಗಳಿದ್ದಾರೆ. ಉಳಿದ ಪ್ರಯಾಣಿಕರು ನೇಪಾಳಿ ಪ್ರಜೆಗಳಾಗಿದ್ದಾರೆ ಎಂದು ತಿಳಿದುಬಂದಿದೆ.

ತಾರಾ ಏರ್‌ನ 9 NAET ಅವಳಿ-ಎಂಜಿನ್ ವಿಮಾನವು ಬೆಳಿಗ್ಗೆ 9.55 ಕ್ಕೆ ಹಾರಿದ್ದು, ಸ್ವಲ್ಪ ಸಮಯದ ನಂತರ ರಾಡಾರ್‌ ನಿಂದ ಸಂಪರ್ಕ ಕಳೆದುಕೊಂಡಿದೆ.

ವಿಮಾನದ ಪತ್ತೆಗೆ ಫೀಸ್ಟೆಲ್ ಹೆಲಿಕಾಪ್ಟರ್ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ವಿಮಾನದ ಪೈಲಟ್ ಅವರನ್ನು ಪ್ರಭಾಕರ ಪ್ರಸಾದ್ ಘಿಮಿರೆ ಎಂದು ಗುರುತಿಸಲಾಗಿದೆ.

ಚೀನಾದಲ್ಲಿ ಮತ್ತೆ ಕೋವಿಡ್ ಪ್ರಕರಣ ಪತ್ತೆ

0

ಕಳೆದ 24 ಗಂಟೆಗಳಲ್ಲಿ ಚೀನಾದಲ್ಲಿ ಹೊಸದಾಗಿ 54 ಕರೋನಾ ಪ್ರಕರಣಗಳು ವರದಿಯಾಗಿವೆ ಎಂದು ತಿಳಿದುಬಂದಿದೆ.

ಬೀಜಿಂಗ್ ಪುರಸಭೆಯ ಆರೋಗ್ಯ ಆಯೋಗದ ಪ್ರಕಾರ, ಬೀಜಿಂಗ್‌ನಲ್ಲಿ ಶನಿವಾರ 14 ಹೊಸ ಕೇಸ್​ಗಳು ವರದಿಯಾಗಿವೆ.
ಶಾಂಘೈನಲ್ಲಿ 29 ಮತ್ತು ಬೀಜಿಂಗ್‌ನಲ್ಲಿ 14 ಕೇಸ್​ಗಳು ದೃಢಪಟ್ಟಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಮಾಹಿತಿ ನೀಡಿದೆ.

ಇನ್ನು ಕೋವಿಡ್​ನಿಂದ 50 ಸೋಂಕಿತರು ಚೇತರಿಸಿಕೊಂಡಿದ್ದು, ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಚೀನಾದಲ್ಲಿ ಶನಿವಾರ ಕೋವಿಡ್​ನಿಂದ ಚೇರಿಸಿಕೊಂಡ 252 ಕ್ಕೂ ಹೆಚ್ಚು ರೋಗಿಗಳನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ. ಈ ಮೂಲಕ ಚೀನಾದಲ್ಲಿ ಸೋಂಕಿತರ ಸಂಖ್ಯೆ ಸುಮಾರು 215,860 ತಲುಪಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.
ಇದರಲ್ಲಿ ಏಳು ಲಕ್ಷಣರಹಿತ ಪ್ರಕರಣಗಳು ವರದಿಯಾಗಿವೆ ಎನ್ನಲಾಗಿದೆ.

ಇಂದು ವಿಶ್ವಸಂಸ್ಥೆ ಶಾಂತಿಪಾಲಕರ ದಿನಾಚರಣೆ

0

ಇಂದು ವಿಶ್ವಸಂಸ್ಥೆಯ ಶಾಂತಿಪಾಲಕರ ಅಂತರಾಷ್ಟ್ರೀಯ ದಿನ.

ಈ ಸಂದರ್ಭದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಡಾ ಎಸ್ ಜೈಶಂಕರ್ ಅವರು ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಪುರುಷರು ಮತ್ತು ಮಹಿಳೆಯರ ಸಮರ್ಪಣಾ ಮನೋಭಾವ ಮತ್ತು ಧೈರ್ಯವನ್ನು ಗೌರವಿಸಿದರು.

ಜೈಶಂಕರ್ ಅವರು ಟ್ವೀಟ್‌ ಮಾಡಿ, ಇಂದು ಶಾಂತಿಪಾಲಕರ ಅಂತರಾಷ್ಟ್ರೀಯ ದಿನ. ಪ್ರಪಂಚದಾದ್ಯಂತ ಶಾಂತಿಪಾಲನೆಯನ್ನು ನಿರ್ವಹಿಸುವ ವೀರ ಪುರುಷರು ಮತ್ತು ಮಹಿಳೆಯರ ಧೈರ್ಯ ಮತ್ತು ಸಮರ್ಪಣೆಗೆ ನನ್ನ ವಂದನೆಗಳು.

ವಿಶೇಷವಾಗಿ ಶಾಂತಿಯ ಕಾರಣಕ್ಕಾಗಿ ಸರ್ವೋಚ್ಚ ತ್ಯಾಗ ಮಾಡಿದವರನ್ನು ಸ್ಮರಸಿ ಗೌರವಿಸಿʼ ಎಂದು ಬರೆದುಕೊಂಡಿದ್ದಾರೆ.

ಹೈಪರ್ಸಾನಿಕ್ ಕ್ಷಿಪಣಿ ಪರೀಕ್ಷೆ:ರಷ್ಯದ ಯಶಸ್ವಿ ಪ್ರಯೋಗ

0

ರಷ್ಯಾದ ನೌಕಾಪಡೆಯು ನಿರೀಕ್ಷಿತ ಹೈಪರ್ಸಾನಿಕ್ ಕ್ಷಿಪಣಿಯ ಮತ್ತೊಂದು ಯಶಸ್ವಿ ಪರೀಕ್ಷೆಯನ್ನು ನಡೆಸಿತು. ಇದು ಉಕ್ರೇನ್‌ನಲ್ಲಿನ ಹೋರಾಟದ ನಡುವೆ ಮಿಲಿಟರಿಯ ದೀರ್ಘ-ಶ್ರೇಣಿಯ ದಾಳಿಯ ಸಾಮರ್ಥ್ಯದ ಪ್ರದರ್ಶನ ಎಂದು ಹೇಳಲಾಗಿದೆ.

ಶ್ವೇತ ಸಮುದ್ರದಲ್ಲಿ ಸುಮಾರು 1 ಸಾವಿರ ಕಿಲೋಮೀಟರ್ ಅಂದರೆ 540 ನಾಟಿಕಲ್ ಮೈಲಿಗಳ ದೂರದಲ್ಲಿದ್ದ ಗುರಿಯನ್ನು ಜಿರ್ಕಾನ್ ಕ್ಷಿಪಣಿ ಯಶಸ್ವಿಯಾಗಿ ಹೊಡೆದುರುಳಿಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ

ಶ್ವೇತ ಸಮುದ್ರದಲ್ಲಿ ಉತ್ತರ ನೌಕಾಪಡೆಯ ಅಡ್ಮಿರಲ್ ಗೋರ್ಶ್ಕೋವ್ ಯುದ್ಧನೌಕೆಯು ಬ್ಯಾರೆಂಟ್ಸ್ ಸಮುದ್ರದಲ್ಲಿ ಜಿರ್ಕಾನ್ ಕ್ರೂಸ್ ಕ್ಷಿಪಣಿಯನ್ನು ಉಡಾಯಿಸಿತು.

ಈ ಉಡಾವಣೆಯು ಜಿರ್ಕಾನ್‌ನ ಕ್ಷಿಪಣಿಗಳ ಪರೀಕ್ಷೆಗಳ ಸರಣಿಯಲ್ಲಿ ತೀರಾ ಇತ್ತೀಚಿನದಾಗಿದೆ. ಇದು ಈ ವರ್ಷದ ಕೊನೆಯಲ್ಲಿ ಸೇವೆಗೆ ಪ್ರವೇಶಿಸಲು ಸಿದ್ಧವಾಗಿದೆ.

ಜಿರ್ಕಾನ್ ಕ್ಷಿಪಣಿಯಿ ಶಬ್ದಕ್ಕಿಂತ ಒಂಬತ್ತು ಪಟ್ಟು ವೇಗದಲ್ಲಿ ಗುರಿ ತಲುಪುವ ಸಾಮರ್ಥ್ಯವನ್ನು ಹೊಂದಿದ್ದು, ಅಂದಾಜು 600 ಮೈಲಿಗಳ ವ್ಯಾಪ್ತಿಯನ್ನು ಹೊಂದಿದೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.

ಅದರ ನಿಯೋಜನೆಯು ರಷ್ಯಾದ ಮಿಲಿಟರಿಯ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂದು ಪುಟಿನ್ ಒತ್ತಿಹೇಳಿದ್ದಾರೆ.

ಎಸ್.ಸಿ & ಎಸ್.ಟಿ. ಬಿಪಿಎಲ್ ಕುಟುಂಬಗಳಿಗೆ 75 ಯೂನಿಟ್ ಉಚಿತ ವಿದ್ಯುತ್ ಆದೇಶ

0

ಎಸ್​ಸಿ-ಎಸ್​ಟಿ ಬಡ ಕುಟುಂಬಗಳಿಗೆ 75 ಯೂನಿಟ್‌ ವಿದ್ಯುತ್‌ ಉಚಿತವಾಗಿ ನೀಡುವ ಯೋಜನೆಗೆ ಬೆಂಗಳೂರಿನಲ್ಲಿ ಸಿಎಂ ಅನುಮೋದನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಬಾಬು ಜಗಜೀವನ್‌ 115ನೇ ಜಯಂತಿ ಅಂಗವಾಗಿ ಈ ಹಿಂದೆ ಭಾಗ್ಯಜ್ಯೋತಿ ಮತ್ತು ಕುಟೀರಜ್ಯೋತಿ ಯೋಜನೆಯಡಿ ಈ ಹಿಂದೆ ನೀಡಲಾಗುತ್ತಿದ್ದ 40 ಯೂನಿಟ್‌ ಉಚಿತ ವಿದ್ಯುತ್‌ ಯೋಜನೆಯನ್ನು 75 ಯೂನಿಟ್​​​​​ಗೆ ಹೆಚ್ಚಿಸಲಾಗಿದೆ.

ಮೇ 1ರಿಂದ ಪೂರ್ವಾನ್ವಯ ಆಗುವಂತೆ ಈ ಆದೇಶ ಜಾರಿಗೆ ಬಂದಿದ್ದು, ನಗರ ಪ್ರದೇಶಕ್ಕೂ ಈ ಯೋಜನೆ ವಿಸ್ತರಿಸಿ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.

ಗ್ರಾಮೀಣ ಪ್ರದೇಶಗಳಿಗೆ ಸೀಮಿತವಾಗಿದ್ದ ಈ ಯೋಜನೆಯನ್ನು ನಗರ ಪ್ರದೇಶಕ್ಕೂ ವಿಸ್ತರಿಸಲಾಗಿದೆ.
ಬಿಪಿಎಲ್ ಕುಟುಂಬಗಳಿಗೆ ಮಾತ್ರ ಅನ್ವಯ ಇದು ಅನ್ವಯವಾಗಲಿದೆ

ಮುಖ್ಯಮಂತ್ರಿ ಚಂದ್ರು ಬೇಸರದಿಂದ ಕಾಂಗ್ರೆಸ್ ಗೆ ರಾಜಿನಾಮೆ

0

ರಾಜ್ಯಸಭೆ ಟಿಕೆಟ್ ನಿರೀಕ್ಷೆಯಲ್ಲಿದ್ದ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅವರು ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ಗೆ ರಾಜೀನಾಮೆ ಸಲ್ಲಿಸಿದ ಮುಖ್ಯಮಂತ್ರಿ ಚಂದ್ರು ಅವರು, ಎರಡು ದಿನಗಳ ಹಿಂದಷ್ಟೇ ಕೆಪಿಸಿಸಿ ಘಟಕ ಸಾಂಸ್ಕೃತಿಕ ಸಮಿತಿ ಚೇರ್ ಮನ್ ಆಗಿ ನೇಮಕ ಮಾಡಿತ್ತು.ವೈಯಕ್ತಿಕ ಕಾರಣಕ್ಕೆ ಸೇವೆ ಸಲ್ಲಿಸುತ್ತಿದ್ದೇನೆ ಎಂದರು.

ಜನಸೇವೆ ಮಾಡುವ ನಿಟ್ಟಿನಲ್ಲಿ ದೇಶದಲ್ಲೇ ಸುದೀರ್ಘ ಇತಿಹಾಸವಿರುವ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೆ. ಪಕ್ಷದಲ್ಲಿದ್ದು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಇಲ್ಲಿವರೆಗೂ ನನಗೆ ಪಕ್ಷದಲ್ಲಿ ಬೆಂಬಲಿಸಿ, ಪ್ರೀತಿ ನೀಡಿದ ಎಲ್ಲರಿಗೂ ಧನ್ಯವಾದ ಎಂದು ತಿಳಿಸಿದ್ದಾರೆ.

ಪಕ್ಷಕ್ಕೆ ಪ್ರಾಮಾಣಿಕ ಸೇವೆ ಸಲ್ಲಿಸಿದ್ರೂ‌ ಗುರುತಿಸಿಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದರು.

ಐತಿಹಾಸಿಕ ನಗರಕೋಟೆಯಲ್ಲಿ ಅಮೃತಭಾರತಿಗೆ ಕನ್ನಡದಾರತಿ ಉದ್ಘಾಟನೆ

0

ಇಂದು ಮಾನ್ಯ ಗೃಹ ಸಚಿವರಾದ ಶ್ರೀ ಆರಗ ಜ್ಞಾನೇಂದ್ರ ಅವರು ಹೊಸನಗರ ತಾಲೂಕು ನಗರ ಕೋಟೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ “ಅಮೃತ ಭಾರತಿಗೆ ಕನ್ನಡದಾರತಿ ಅಭಿಯಾನ”ವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾರಂಭಕ್ಕೂ ಮುನ್ನ ನಗರದ ಪ್ರಮುಖ ಮಾರ್ಗಗಳಲ್ಲಿ ಅತಿಥಿಗಳನ್ನು ಜನಪದ ವಾದನಗಳ ಮೆರವಣಗೆಯಲ್ಲಿ ಕರೆತರಲಾಯಿತು.
ಐತಿಹಾಸಿಕ ಬಿದನೂರಿನ ಕೋಟೆಯ ಹೃದಯಭಾಗದಲ್ಲೇ ಸಮಾರಂಭ ನಡೆಯಿತು.

ನಮ್ಮಲ್ಲಿ ಒಂದೇ ಒಂದು ಕೊರತೆಯಿದೆ . ಅದೇನೆಂದರೆ ಪ್ರಾಮಾಣಿಕತೆ. ನಮ್ಮ ದೇಶದಲ್ಲಿ ಭ್ರಷ್ಟಾಚಾರ ಇಲ್ಲದಿದ್ದರೆ ನಾವು ಅಮೆರಿಕಕ್ಕೇ ಸಾಲ ನೀಡಬಹುದಿತ್ತು. ಆದರೆ ಪ್ರಾಮಾಣಿಕತೆಯ ಕೊರತೆಯಿಂದಾಗಿ ಯಾರಿಂದ ಏನನ್ನೂ ಮಾಡಲು ಸಾಧ್ಯವಿಲ್ಲ. ನಾವೆಲ್ಲರೂ ಪ್ರಾಮಾಣಿಕತೆಯಿಂದ ರೂಢಿಸಿಕೊಳ್ಳಬೇಕಿರುವುದು ಅಗತ್ಯವಾಗಿದೆ ಎಂದರು.

ಕೇಶವ ಹೆಡಗೆವಾರ್ ಪಠ್ಯ ಸೇರ್ಪಡೆ: ಸಿಎಫ್ಐ ಪ್ರತಿಭಟನೆ

0

ಶೈಕ್ಷಣಿಕ ವರ್ಷದ ಹತ್ತನೇ ತರಗತಿಯ ಕನ್ನಡ ಪಠ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕ ಕೇಶವ್ ಬಲಿರಾಮ್‌ ಹೆಡಗೇವಾರ್‌ ಅವರ ಭಾಷಣವನ್ನು ಸೇರ್ಪಡೆ ಮಾಡಿದ್ದು, ಕೂಡಲೇ ಇದನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ ಜಿಲ್ಲಾ ಘಟಕ ಶುಕ್ರವಾರ ಪ್ರತಿಭಟನೆ ನಡೆಸಿತು.

ಚಿತ್ರದುರ್ಗದ ಒನಕೆ ಓಬವ್ವ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಕಾರರು,
ಪಠ್ಯಪುಸ್ತಕದ ಪಠ್ಯಕ್ರಮವನ್ನು ಬ್ರಾಹ್ಮಣೀಕರಣಗೊಳಿಸುವ ಗುರಿಯೊಂದಿಗೆ ಸಂಘದಲ್ಲಿ ಪಳಗಿರುವ ರೋಹಿತ್ ಚಕ್ರತೀರ್ಥ ಅಂತಹವರನ್ನು ಪರಿಷ್ಕರಣಾ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ದೇಶದಲ್ಲಿ ಹಲವು ಬಾರಿ ನಿಷೇಧಿಸಲ್ಪಟ್ಟ ಭಯೋತ್ಪಾದನಾ ಸಂಘಟನೆಯಾದ ಆರ್‌ಎಸ್‌ಎಸ್‌ ಸಂಸ್ಥಾಪಕ ಹೆಡಗೇವಾರ್‌ ಹೇಗೆ ಆದರ್ಶ ಪುರುಷನಾಗಲು ಸಾಧ್ಯ ಎಂದು ಪ್ರಶ್ನಿಸಿದರು.

ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ತನ್ನದೇ ಆದ ಹಿಂದೂ ರಾಷ್ಟ್ರದ ಕಲ್ಪನೆಯೊಂದಿಗೆ ಜನರ ದಾರಿ ತಪ್ಪಿಸಿದ ವ್ಯಕ್ತಿಯ ಭಾಷಣವನ್ನು ಪಠ್ಯಕ್ರಮದಲ್ಲಿ ಸೇರಿಸಿರುವುದು ಶಿಕ್ಷಣದಲ್ಲಿ ಹಿಂದುತ್ವ ಹೇರಿಕೆಯ ಭಾಗ.
ಕೂಡಲೇ ಆ ಪಠ್ಯವನ್ನು ತೆಗೆದು ಹಾಕಿ ವಿದ್ಯಾರ್ಥಿಗಳಿಗೆ ಸಂವಿಧಾನದ ಆಶಯಗಳನ್ನು ಕಲಿಸಬೇಕು. ಸಮಾಜದಲ್ಲಿ ಸೌಹಾರ್ದ, ಸಾಮರಸ್ಯಕ್ಕೆ ಒತ್ತುಕೊಡುವ ನಿಟ್ಟಿನಲ್ಲಿ ವಿದ್ಯೆಯನ್ನು ನೀಡಬೇಕು. ಈ ಬಗ್ಗೆ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದರು.

ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯು ‘ನಿಜವಾದ ಆದರ್ಶ ಪುರುಷ ಯಾರಾಗಬೇಕು? ಎಂಬ ತಲೆಬರಹದಲ್ಲಿ ಹೆಡಗೇವಾರ್‌ ಭಾಷಣ ಪಠ್ಯವಾಗಿ ಸೇರಿಸಿದೆ. ಇದು ಶಿಕ್ಷಣದ ಕೇಸರೀಕರಣದ ಮುಂದುವರಿದ ಭಾಗವಾಗಿದೆ. ಇದನ್ನು ಕೂಡಲೇ ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.

ಟಾಟಾ ಐಪಿಎಲ್22 ಮತ್ತೆ ತಪ್ ಮಾಡಿ ಕಪ್ ಗೆಲ್ಲದ ಆರ್ ಸಿಬಿ

ಈ ಬಾರಿಯಾದರೂ ಪ್ರಶಸ್ತಿ ಗೆಲ್ಲುತ್ತದೆ. ಹೊಸ ಇತಿಹಾಸ ಬರೆಯುತ್ತದೆ, ದಾಖಲೆ ನಿರ್ಮಾಣವಾಗುತ್ತೆ ಅನ್ನೋ ಆರ್‌ಸಿಬಿ ಅಭಿಮಾನಿಗಳ ಕನಸು ಮತ್ತೆ ಕನಸಾಗಿಯೇ ಉಳಿದುಕೊಂಡಿದೆ.

ಐಪಿಎಲ್ 2022 ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೋರಾಟ ಅಂತ್ಯಗೊಂಡಿದೆ.
ಆರ್‌ಸಿಬಿ ವಿರುದ್ಧ ಅಬ್ಬರಿಸಿದ ಜೋಸ್ ಬಟ್ಲರ್ ಸೆಂಚುರಿ ಸಿಡಿಸಿದರು. ಈ ಮೂಲಕ ರಾಜಸ್ಥಾನ ರಾಯಲ್ಸ್ 7 ವಿಕೆಟ್ ಗೆಲುವು ದಾಖಲಿಸಿ ಫೈನಲ್ ಪ್ರವೇಶಿಸಿದೆ.

ಸ್ಫೋಟಕ ಬ್ಯಾಟಿಂಗ್ ಮೂಲಕ ಅಬ್ಬರಿಸಿದ ಬಟ್ಲರ್ 59 ಎಸೆತದಲ್ಲಿ ಸೆಂಚುರಿ ಪೂರೈಸಿದರು. ಈ ಮೂಲಕ ಆರ್‌ಸಿಬಿ ಕನಸು ಛಿದ್ರಗೊಳಿಸಿದರು. ಐಪಿಎಲ್ 2022 ಟೂರ್ನಿಯಲ್ಲಿ ಫೈನಲ್ ಪ್ರವಶಿಸಿ ಪ್ರಶಸ್ತಿ ಗೆಲ್ಲುವ ಕನಸು ಕಂಡಿದ್ದ ಆರ್‌ಸಿಬಿ ಬಟ್ಲರ್ ಅಬ್ಬರಕ್ಕೆ ಬೆಚ್ಚಿ ಬಿದ್ದಿತು. ಐಪಿಎಲ್ 2022 ಹೋರಾಟವನ್ನೂ ಅಂತ್ಯಗೊಳಿಸಿತು.

ಈ ಮೂಲಕ ಐಪಿಎಲ್ ಟೂರ್ನಿಯಲ್ಲಿ ಒಟ್ಟ 5 ಸೆಂಚುರಿ ಸಿಡಿಸಿದ ಸಾಧನೆ ಮಾಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದದ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಅಬ್ಬರಿಸಿದ ಜೋಸ್ ಬಟ್ಲರ್ ಆಕರ್ಷಕ ಶತಕ ದಾಖಲಿಸಿದ್ದಾರೆ.

2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ಯಾಟಿಂಗ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಪರಿಣಾಮ 157 ರನ್ ಸಿಡಿಸಿತು. ಸುಲಭ ಟಾರ್ಗೆಟ್ ಪಡೆದ ರಾಜಸ್ಥಾನ ರಾಯಲ್ಸ್ ನಿರಾಯಾಸವಾಗಿ ಚೇಸಿಂಗ್ ಮಾಡಿತು. ಪ್ರಮುಖವಾಗಿ ಜೋಸ್ ಬಟ್ಲರ್ ಬ್ಯಾಟಿಂಗ್ ಆರ್‌ಸಿಬಿ ಐಪಿಎಲ್ ಹೋರಾಟಕ್ಕೆ ಬ್ರೇಕ್ ಹಾಕಿತು.

ದೇವದತ್ ಪಡಿಕ್ಕಲ್ 9 ರನ್ ಸಿಡಿಸಿ ಔಚಾದರು. ಜೋಸ್ ಬಟ್ಲರ್ ಸೆಂಚುರಿ ಸಿಡಿಸಿ ದಾಖಲೆ ಬೆರೆದರು. ರಾಜಸ್ಥಾನ 18.1 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವು ದಾಖಲಿಸಿತು.
ಆರ್‌ಸಿಬಿ ಇನ್ನಿಂಗ್ಸ್
ಮಹತ್ವದ ಪಂದ್ಯದಲ್ಲಿ ಆರ್‌ಸಿಬಿ ಬ್ಯಾಟಿಂಗ್‌ನಲ್ಲಿ ಎಡವಿತು. ವಿರಾಟ್ ಕೊಹ್ಲಿ 7 ರನ್ ಸಿಡಿಸಿ ಔಟಾದರು. ಫಾಫ್ ಡುಪ್ಲೆಸಿಸ್ 25 ರನ್ ಸಿಡಿಸಿ ಔಟಾದರು.

ಎಲಿಮಿನೇಟರ್ ಪಂದ್ಯದಲ್ಲಿ ಅಬ್ಬರಿಸಿದ ರಜತ್ ಪಾಟಿದಾರ್ , 2ನೇ ಕ್ವಾಲಿಫೈಯರ್ ಪಂದ್ಯದಲ್ಲೂ ಅಬ್ಬರಿಸಿದರು. ರಜತ್ ಪಾಟಿದಾರ್ 58 ರನ್ ಕಾಣಿಕೆ ನೀಡಿದರು. ಮ್ಯಾಕ್ಸ್‌ವೆಲ್ 28 ರನ್ ಸಿಡಿಸಿ ಔಟಾದರು. ಇನ್ನುಳಿದವರಿಂದ ನಿರೀಕ್ಷಿತ ರನ್ ಹರಿದುಬರ್ಲಿಲ್ಲ. ಇದರಿಂದ 157 ರನ್ ಸಿಡಿಸಿತು.

ಐಪಿಎಲ್ ಫೈನಲ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಣಿಸಿದ ರಾಜಸ್ಥಾನ ರಾಯಲ್ಸ್ ಫೈನಲ್ ಪ್ರವೇಶಿಸಿದೆ. ಮೇ.29 ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಮುಖಾಮುಖಿಯಾಗಲಿದೆ.

ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ವಿರುದ್ದ ಮುಗ್ಗರಿಸಿದ್ದ ರಾಜಸ್ಥಾನ ಇದೀಗ ಸೇಡು ತೀರಿಸಿಕೊಳ್ಳಲು ರೆಡಿಯಾಗಿದೆ. ಇಷ್ಟೇ ಅಲ್ಲ ಎರಡನೇ ಐಪಿಎಲ್ ಟ್ರೋಫಿ ಕೈವಶ ಮಾಡಲು ಸಜ್ಜಾಗಿದೆ.