ಆರ್.ಎಸ್.ಎಸ್ ಮೂಲ ಪ್ರಶ್ನಿಸಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು, ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನವರಿಗೆ ಮಾತನಾಡಲು ಈ ದೇಶದಲ್ಲಿ ಬೇರೆ ವಿಚಾರಗಳಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಈ ದೇಶದ ಪ್ರಧಾನಿ, ರಾಷ್ಟ್ರಪತಿ, ಉಪ ರಾಷ್ಟ್ರಪತಿ ಆರ್.ಎಸ್.ಎಸ್ ನವರು. ಅನೇಕ ರಾಜ್ಯಗಳ ಮುಖ್ಯಮಂತ್ರಿಗಳು, ಸಚಿವರು ಆರ್.ಎಸ್.ಎಸ್ ನವರು, ನಾನು ಕೂಡ ಆರ್.ಎಸ್.ಎಸ್ ನಿಂದ ಬಂದವನು. ದೇಶದಲ್ಲಿ ಆರ್.ಎಸ್.ಎಸ್ ನಿಂದ ಬಂದವರು ಲಕ್ಷ ಲಕ್ಷ ಜನರಿದ್ದಾರೆ. ಇಂತಹ ವಿಚಾರ ಚರ್ಚೆಯಿಂದ ಕಾಂಗ್ರೆಸ್ ನಾಯಕರು ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಲ್ಲ. ಅವರ ಪಕ್ಷ ಸಂಘಟನೆ, ಅಧಿಕಾರದ ಅಂತಿಮ ದಿನಗಳು ಬಂದಿವೆ. ಅದೆಲ್ಲವೂ ಗೊತ್ತಾಗಿ ವಿಚಲಿತರಾಗಿ ಈ ರೀತಿ ಹೇಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.