ಇತ್ತೀಚೆನ ವರ್ಷಗಳಲ್ಲಿ ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಹೆಚ್ಚಾಗುತ್ತಿದೆ.
ಅಂದಹಾಗೆ, ಚೀನಾ ಮತ್ತು ಭಾರತದ ನಡುವಿನ ವ್ಯಾಪಾರ 2020 – 21ರ ಅವಧಿಯಲ್ಲಿ 86.4 ಬಿಲಿಯನ್ ಡಾಲರ್ ಇತ್ತು. ಭಾರತದ ರೂಪಾಯಿ ಲೆಕ್ಕದಲ್ಲಿ ಸುಮಾರು 6.65 ಲಕ್ಷ ಕೋಟಿ . ಅದು 2021 – 22ರ ಅವಧಿಯಲ್ಲಿ115.42 ಬಿಲಿಯನ್ ಡಾಲರ್ ಎಂದರೆ ಸುಮಾರು 8.88 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.
ಆದರೆ, ಇದೇ ಅವಧಿಯಲ್ಲಿ ಅಮೆರಿಕ ನಡುವಿನ ಭಾರತದ ವ್ಯಾಪಾರ ಗಣನೀಯ ಮಟ್ಟದಲ್ಲಿ ಹೆಚ್ಚಾಗಿದೆ.
ಈ ಮೂಲಕ, ಚೀನಾವನ್ನು ಹಿಂದಿಕ್ಕಿದ ಅಮೆರಿಕ ಭಾರತದ ಅತಿದೊಡ್ಡ ವ್ಯಾಪಾರಿ ಪಾಲುದಾರ ರಾಷ್ಟ್ರ ಎಂದು ಕರೆಸಿಕೊಂಡಿದೆ.
ಉಭಯ ದೇಶಗಳ ನಡುವಿನ ವ್ಯಾಪಾರ ವಹಿವಾಟು 2020-21ನೇ ಸಾಲಿನಲ್ಲಿ 80.51ಬಿಲಿಯನ್ ಡಾಲರ್ ಅಂದರೆ ಸುಮಾರು 6.16 ಲಕ್ಷ ಕೋಟಿ ರೂಪಾಯಿ ಇತ್ತು.
ಆದರೆ ಈ ವರ್ಷ ಅದರ ಗಾತ್ರ 2021 -22ನೇ ಸಾಲಿನ ಭಾರತ ಅಮೆರಿಕ ನಡುವಿನ ವ್ಯಾಪಾರ 119.42 ಬಿಲಿಯನ್ ಡಾಲರ್ ಅಂದ್ರೆ ಭಾರತದ ರೂಪಾಯಿ ಲೆಕ್ಕದಲ್ಲಿ 9.19 ಲಕ್ಷ ಕೋಟಿಗೆ ದಾಟಿದೆ. ಈ ಮೂಲಕ ಭಾರತದ ಅತಿದೊಡ್ಡ ಪಾರ್ಟ್ನರ್ ಎಂದು ಅಮೆರಿಕ ಕರೆಸಿಕೊಂಡಿದೆ.