ರಾಜಸ್ಥಾನ್ ರಾಯಲ್ಸ್ ವಿರುದ್ಧ ಬ್ಯಾಟಿಂಗ್-ಬೌಲಿಂಗ್ನಲ್ಲಿ ಬೊಂಬಾಟ್ ಪ್ರದರ್ಶನ ನೀಡಿದ ಜಿಟಿ 7 ವಿಕೆಟ್ಗಳ ಜಯ ತನ್ನದಾಗಿಸಿತು.
ರಾಜಸ್ಥಾನ್ ರಾಯಲ್ಸ್ ವಿರುದ್ಧ ಬ್ಯಾಟಿಂಗ್ – ಬೌಲಿಂಗ್ನಲ್ಲಿ ಬೊಂಬಾಟ್ ಪ್ರದರ್ಶನ ನೀಡಿದ ಜಿಟಿ 7 ವಿಕೆಟ್ಗಳ ಜಯ ತನ್ನದಾಗಿಸಿತು. ಹಾರ್ದಿಕ್ ಪಾಂಡ್ಯ ಅವರ ನಾಯಕನ ಆಟ ತಂಡಕ್ಕೆ ನೆರವಾದರೆ ಇತ್ತ ಸಂಜು ಸ್ಯಾಮ್ಸನ್ ತಾವು ಮಾಡಿದ ಕೆಲ ಎಡವಟ್ಟಿನಿಂದ ರಾಜಸ್ಥಾನ್ ಎರಡನೇ ಬಾರಿ ಕಪ್ ಎತ್ತಿ ಹಿಡಿಯುವ ಅವಕಾಶವನ್ನು ಕಳೆದುಕೊಂಡಿತು.
ಹಾರ್ದಿಕ್ ಪಾಂಡ್ಯ ಅವರ ನಾಯಕನ ಆಟ ತಂಡಕ್ಕೆ ನೆರವಾದರೆ ಇತ್ತ ಸಂಜು ಸ್ಯಾಮ್ಸನ್ ತಾವು ಮಾಡಿದ ಕೆಲ ಎಡವಟ್ಟಿನಿಂದ ರಾಜಸ್ಥಾನ್ ಎರಡನೇ ಬಾರಿ ಕಪ್ ಎತ್ತಿ ಹಿಡಿಯುವ ಅವಕಾಶವನ್ನು ಕಳೆದುಕೊಂಡಿತು.
ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿಗೆ ಅದ್ಧೂರಿ ತೆರೆ ಬಿದ್ದಿದೆ. ಚೊಚ್ಚಲ ಆವೃತ್ತಿಯಲ್ಲೇ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡ ಪ್ರಶಸ್ತಿ ಗೆಲ್ಲುವ ಮೂಲಕ ವಿಶೇಷ ಸಾಧನೆಯನ್ನೂ ಮಾಡಿದೆ.
ಒಂದು ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರು ಸೇರಿದ್ದ ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ಕಾದಾಟ ಅಂದುಕೊಂಡಷ್ಟರ ಮಟ್ಟಿಗೆ ರೋಚಕತೆ ಪಡೆಯಲಿಲ್ಲ. ಟೈಟಾನ್ಸ್ ತಂಡದ ಟೈಟ್ ಬೌಲಿಂಗ್ಗೆ ರಾಜಸ್ಥಾನ್ ಸುಸ್ತಾಯಿತು. ಅಚ್ಚರಿ ಎಂಬಂತೆ ಪ್ರಮುಖ ಪಂದ್ಯದಲ್ಲೇ ಆರ್ ಆರ್ ನಾಯಕ ಸಂಜು ಸ್ಯಾಮ್ಸನ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.
ಬ್ಯಾಟಿಂಗ್ಗೆ ಇಳಿದ ರಾಜಸ್ಥಾನಕ್ಕೆ ಉತ್ತಮ ಆರಂಭ ಕೂಡ ಸಿಗಲಿಲ್ಲ. ನಿಧಾನ ಗತಿಯಲ್ಲಿ ಬ್ಯಾಟ್ ಮಾಡುವ ಜೊತೆಗೆ 100 ರನ್ಗೂ ಮೊದಲೇ 6 ವಿಕೆಟ್ ಕಳೆದುಕೊಂಡಿತು.