ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ರಷ್ಯಾದ ಬೇಹುಗಾರಿಕಾ ಸಂಸ್ಥೆ ಎಫ್ ಎಸ್ ಬಿ ಯ ವರದಿಯಲ್ಲಿ ತಿಳಿಸಿದೆ.
ವ್ಲಾಡಿಮಿರ್ ಪುಟಿನ್ ಗರಿಷ್ಠ 3 ವರ್ಷ ಬದುಕಬಹುದೆಂದು ವೈದ್ಯರು ಹೇಳಿರುವುದಾಗಿ ಗುಪ್ತಚರ ಸಂಸ್ಥೆಯ ಮೂಲವನ್ನು ಉಲ್ಲೇಖಿಸಿ ಮಿರರ್ ವರದಿ ಮಾಡಿದೆ.
69 ವರ್ಷದ ರಷ್ಯಾದ ಅಧ್ಯಕ್ಷರು ತೀವ್ರಗತಿಯಲ್ಲಿ ಹೆಚ್ಚಾಗುತ್ತಿರುವ ಕ್ಯಾನ್ಸರ್ ನಿಂದ ಬಳಲುತ್ತಿರುವುದಾಗಿ ಮಿರರ್ ವರದಿ ಮಾಡಿದೆ. ಪುಟಿನ್ ಅವರ ಕಣ್ಣಿನ ದೃಷ್ಟಿ ಗಂಭೀರವಾಗಿ ಹದಗೆಟ್ಟಿದೆ. ಅವರ ಬೆರಳುಗಳು ಕೂಡಾ ನಿಯಂತ್ರಿಸಲಾಗದಷ್ಟು ಅಲುಗಾಡತೊಡಗಿವೆ ಎಂದು ವರದಿಯಲ್ಲಿ ಹೇಳಿದೆ.