Monday, March 9, 2026
Monday, March 9, 2026
Home Blog Page 1527

ಪಾಪ್ಯುಲರ್ ಭಾರಧ್ವಾಜ್ ಒಂದು ನೆನಪು

0

ಶಿವಮೊಗ್ಗದ ಮನೆಮಾತು. ಒಂದು ರೀತಿ ಉದ್ಯಮಿಗಳ ಲೋಕದ ದಂತಕತೆ.
ಸಾಂಸ್ಕೃತಿಕ ಮನಸ್ಸು,
ದಣಿವರಿಯದ ಸಮಾಜ ಸೇವಕ …ಇಷ್ಟೆಲ್ಲಾ ಹೇಳಿದರೂ ಮತ್ತೂ ಇನ್ನೇನೋ ಹೇಳಬೇಕು ಅನಿಸುತ್ತದೆ ಹಿರಿಯ ಭಾರದ್ವಾಜ್ ಬಗ್ಗೆ. ಅವರು ಸಿಹಿಮೊಗೆಯ ಮರೆಯದ ಮಾಣಿಕ್ಯ.

ಇಡೀ ಶಿವಮೊಗ್ಗದ ವ್ಯವಹಾರ ಜಗತ್ತು , ಜಿಲ್ಲೆಯ ವ್ಯಾಪಾರ ವಹಿವಾಟುಗಳ ಬಗ್ಗೆ ಅತ್ಯಂತ ಕಾಳಜಿ ಹೊಂದಿದ್ದ ಮನುಷ್ಯ.
ಮೊನ್ನೆ ಮೊನ್ನೆಯವರೆಗೂ ಸ್ಥಳೀಯವಾಗಿ ಕೆಲ ಹೊತ್ತು ಅವರು ನಡೆದು ಹೋಗುತ್ತಿದ್ದನ್ನ ಕಂಡಿದ್ದೆ. ಇಷ್ಟು ವಯಸ್ಸಾದರೂ ನಡೆದಾಡುತ್ತಿದ್ದಾರೆ ಪರವಾಗಿಲ್ಲ ಎಂದು ಅಭಿಮಾನ ಉಕ್ಕುತ್ತಿತ್ತು.

ಅವರು ನನಗೆ ಬಹಳ ವರ್ಷಗಳಿಂದಲೂ ಪರಿಚಯ. ಭದ್ರಾವತಿ ಆಕಾಶವಾಣಿ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದರು. ಶಿವಮೊಗ್ಗದಲ್ಲಿ ನಡೆದ ಹಲವಾರು ಸಭೆ ಸಮಾರಂಭಗಳಲ್ಲಿ ವೇದಿಕೆಯಲ್ಲಿರುತ್ತಿದ್ದರು.

ನೋಡಿ ಮಾತಾಡಿಸುತ್ತಿದ್ದರು.
ಒಮ್ಮೆ ಹಿರಿಯ ಸಂಗೀತಜ್ಞ ಡಾ.ಎಂ.ಬಾಲ ಮುರಳಿ ಕೃಷ್ಣ ಅವರ ಗಾಯನ ಕಚೇರಿಗೆ ನನ್ನನ್ನ ನಿರೂಪಣೆಗೆ ಕರೆಸಿದ್ದರು. ಕುವೆಂಪು ರಂಗ ಮಂದಿರದಲ್ಲಿ ಖ್ಯಾತ ಬಾಲಮುರಳಿಕೃಷ್ಣರಿಂದ ಸ್ಮರಣಿಕೆ ಸ್ವೀಕರಿಸಿದ ನೆನಪು ಹಸಿರಾಗಿದೆ.

ನಾನು ಜೊತೆಯಲ್ಲಿದ್ದಾಗ ಮಿಕ್ಕವರಿಗೆ ನಾನು ಸಂಕೋಚಪಡುವಷ್ಟು ಹೊಗಳಿ ಪರಿಚಯಿಸುತ್ತಿದ್ದರು.
ವಿವಿಧ ಸಂಘ ಸಂಸ್ಥೆಗಳಲ್ಲಿ ಅವರು ಪದಾಧಿಕಾರಿಗಳಾಗಿ
ಸೇವೆ ಸಲ್ಲಿಸಿದ್ದಾರೆ.
ಪ್ರಧಾನವಾಗಿ ಅವರು ಬೆಳೆಸಿದ ಶಿವಮೊಗ್ಗ ಚೇಂಬರ್ ಆಫ್ ಕಾಮರ್ಸ್ ಈಗ ತಿಲಕ ಪ್ರಾಯವಾಗಿ ನಿಂತಿದೆ.

ಶಿವಮೊಗ್ಗದ ಅಭಿವೃದ್ಧಿ ಬಗ್ಗೆ ಸದಾ ಚಿಂತಿಸುತ್ತಿದ್ದ ಮಾಗಿದ ಮನಸ್ಸಿನ ಚೇತನ
ಈಗ ನಮ್ಮನ್ನಗಲಿದ್ದಾರೆ.
ಅವರಿಗೆ ನಮ್ಮ ನುಡಿ ನಮನಗಳು

ವೃಕ್ಷಮಾತೆಗೆ ಸೂಕ್ತ ಜಮೀನು ಮತ್ತು ನಿವೇಶನ ನೀಡಲಾಗುತ್ತದೆ-ಬೊಮ್ಮಾಯಿ

0

ಸಾಲು ಮರದ ತಿಮ್ಮಕ್ಕ ಅವರಿಗೆ ಮತ್ತಷ್ಟು ಮರ ಬೆಳೆಸಿ ಪೋಷಿಸಲು ಸೂಕ್ತ ಜಮೀನು ಮತ್ತು ಒಂದು ಸೈಟು ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದ್ದಾರೆ.

ವೃಕ್ಷ ಮಾತೆ ಖ್ಯಾತಿಯ ಸಾಲುಮರದ ತಿಮ್ಮಕ್ಕ ಅವರು ಬೆಂಗಳೂರಿನಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾದರು. ಶತಾಯುಷಿ ಆಗಿರುವ ತಿಮ್ಮಕ್ಕ ಅವರ ಕಾಲಿಗೆ ನಮಸ್ಕರಿಸಿ ಆಶೀವಾರ್ದ ಪಡೆದ ಸಿಎಂ ಬೊಮ್ಮಾಯಿ ಅವರ ತಲೆ ಮುಟ್ಟಿದ ತಿಮ್ಮಕ್ಕ, ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದರು.

ಇದೇ ಸಂದರ್ಭದಲ್ಲಿ ತಿಮ್ಮಕ್ಕ ಅವರ ಯೋಗ ಕ್ಷೇಮ ವಿಚಾರಿಸಿದ ಸಿಎಂ, ಒಂದು ಸೈಟು ಹಾಗೂ ಮರಗಳನ್ನು ಬೆಳೆಸಲು ತಿಮ್ಮಕ್ಕ ಅವರಿಗೆ ಸೂಕ್ತ ಜಮೀನು ನೀಡಲು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ರಾಜ್ಯ ಸರ್ಕಾರದಿಂದ ಭಕ್ತರಿಗೆ ಉಚಿತ ಕಾಶಿಯಾತ್ರೆ ಯೋಜನೆ- ಶಶಿಕಲಾ ಜೊಲ್ಲೆ

0

ಕಾಶಿಯಾತ್ರೆಗೆ ಹೋಗುವ ಭಕ್ತರಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಲಿದೆ. ಮುಜರಾಯಿ ಇಲಾಖೆ ವತಿಯಿಂದ ಭಕ್ತರಿಗೆ ಉಚಿತವಾಗಿ ಕಾಶಿಯಾತ್ರೆ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಬೆಂಗಳೂರಿನಿಂದ ಹೊರಡಲಿರುವ ಕಾಶಿಯಾತ್ರೆಗೆ ಅಗಸ್ಟ್ ನಲ್ಲಿ ಚಾಲನೆ ನೀಡಲಾಗುತ್ತದೆ. ಒಂದು ವಾರದ ಕಾಶಿ ಯಾತ್ರೆಯಲ್ಲಿ ಅಯೋಧ್ಯ, ಕಾಶಿ, ಪ್ರಯಾಗ ದರ್ಶನ ಮಾಡಿಸಲಾಗುತ್ತದೆ. ಕಾಶಿಯಾತ್ರಾರ್ಥಿಗಳಿಗಾಗಿ ವಿಶೇಷ ರೈಲಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸಚಿವೆ ಶಶಿಕಲಾ ಜೊಲ್ಲೆ ಅವರು ತಿಳಿಸಿದ್ದಾರೆ.

ಉಡುಪಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು ಮುಜರಾಯಿ ಬರುವ ಅಗಸ್ಟ್, ಶ್ರಾವಣ ಮಾಸದಲ್ಲಿ ರಾಜ್ಯದ 30,000 ಭಕ್ತರಿಗೆ ಉಚಿತವಾಗಿ ಕಾಶಿಯಾತ್ರೆ ಯೋಜನೆಯನ್ನು ಹಮ್ಮಿಕೊಳ್ಳಲಾಗಿದ್ದು, ಯಾತ್ರೆ ಕೈಗೊಳ್ಳುವವರ ಬ್ಯಾಂಕ್ ಖಾತೆಗೆ ಸರ್ಕಾರದ ವತಿಯಿಂದ 5000 ರೂ. ಜಮಾ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಹತ್ತುಸಾವಿರ ಪೊಲೀಸ್ ವಸತಿ ಗೃಹ ನಿರ್ಮಾಣ- ಆರಗ ಜ್ಞಾನೇಂದ್ರ

0

ಗೃಹ ಸಚಿವ ಅರಗ ಜ್ಞಾನೇಂದ್ರ ಪೊಲೀಸರಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, 2000 ಕೋಟಿ ರೂಪಾಯಿ ವೆಚ್ಚದಲ್ಲಿ 10 ಸಾವಿರ ಪೊಲೀಸ್ ವಸತಿ ಗೃಹಗಳನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಪೊಲೀಸ್ ಇಲಾಖೆಯನ್ನು ಅತ್ಯಾಧುನಿಕಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ಪೊಲೀಸ್ ಇಲಾಖೆಗೆ ರಾಜ್ಯ ಸರ್ಕಾರ ಸಾಕಷ್ಟು ಅನುದಾನ ಬಿಡುಗಡೆ ಮಾಡಿದ್ದು, ಈ ಹಿನ್ನೆಲೆಯಲ್ಲಿ 200 ಕೋಟಿ ರೂಪಾಯಿ ವೆಚ್ಚದಲ್ಲಿ ನೂರು ಪೊಲೀಸ್ ಠಾಣೆ, 50 ಕೋಟಿ ರೂಪಾಯಿ ವೆಚ್ಚದಲ್ಲಿ ಅಗ್ನಿಶಾಮಕ ಠಾಣೆಗಳನ್ನು ಸಹ ನಿರ್ಮಿಸಲಾಗುತ್ತದೆ ಎಂದು ಹೇಳಿದ್ದಾರೆ.

ರಾಜಕೀಯ ಬಿಕ್ಕಟ್ಟಿನಲ್ಲಿ ಸಿಎಂ ಉದ್ಧವ್ ಸರ್ಕಾರ

0

ಮಹಾರಾಷ್ಟ್ರದಲ್ಲಿ ರಾಜಕೀಯ ಭೂಕಂಪನದ ನಂತರ, ಈಗ ಮತ್ತೊಂದು ದೊಡ್ಡ ಘಟನೆಯ ಸಾಧ್ಯತೆ ಇದೆ. ಇಂದು ಸಂಜೆಯ ವೇಳೆಗೆ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗುತ್ತದೆಯೇ? ಅನ್ನೋ ಪ್ರಶ್ನೆ ಉದ್ಭವಿಸುತ್ತಿದೆ. ಸಂಜೆಯ ವೇಳೆಗೆ ಈ ಬಗ್ಗೆ ಪ್ರಕಟಣೆ ಹೊರಡಿಸಬಹುದು ಎಂದು ಮೂಲಗಳು ತಿಳಿಸಿವೆ.

ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆ ಫಲಿತಾಂಶ ನಿನ್ನೆ ಹೊರಬಿದ್ದ ನಂತರ ಮಹಾರಾಷ್ಟ್ರದಲ್ಲಿ ರಾಜಕೀಯ ಬೆಳವಣಿಗೆಗಳು ವೇಗ ಪಡೆದುಕೊಂಡಿವೆ.

ಏಕನಾಥ್ ಶಿಂಧೆ ಅವರೊಂದಿಗೆ ಸೂರತ್‌ನಲ್ಲಿ 29 ಶಿವಸೇನಾ ಶಾಸಕರಿದ್ದಾರೆ. ನಾವು ಕಾಂಗ್ರೆಸ್-ಎನ್ಸಿಪಿಯನ್ನು ಬೆಂಬಲಿಸುವುದಿಲ್ಲ ಎಂದು ಈ ಶಾಸಕರು ರಾಜ್ಯಪಾಲರಿಗೆ ಪತ್ರ ನೀಡಬಹುದು. ಆದರೆ, ಈ ಪತ್ರದಲ್ಲಿ ಶಿವಸೇನೆಯ ಹೆಸರನ್ನು ತೆಗೆದುಕೊಳ್ಳಲಾಗುವುದಿಲ್ಲ ಎಂದು ಹೇಳಲಾಗುತ್ತಿದೆ.

ಮತ್ತೊಂದೆಡೆ, ಸಿಎಂ ಉದ್ಧವ್ ಠಾಕ್ರೆ ಅವರೊಂದಿಗಿನ ಸಭೆಯಲ್ಲಿ ಪ್ರಸ್ತುತ ಹಾಜರಿರುವ ಏಳು ಶಾಸಕರು ಏಕನಾಥ್ ಶಿಂಧೆ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭಾರತೀಯರಿಗೆ ವಿಧಿಸಿದ ನಿರ್ಬಂಧ ಹಿಂಪಡೆದ ಸೌದಿಅರೇಬಿಯ

0

ಕೊರೊನಾ ತಡೆಯುವ ಸಲುವಾಗಿ, ಟರ್ಕಿ, ಭಾರತ, ವಿಯೆಟ್ನಾಂ, ಇಥಿಯೋಪಿಯಾ, ಸೇರಿದಂತೆ 16 ದೇಶಗಳ ಪ್ರಜೆಗಳ ಮೇಲೆ ಸೌದಿ ಪ್ರವೇಶಿಸದಂತೆ ಹೇರಲಾಗಿದ್ದ ನಿಷೇಧವನ್ನು ಸೌದಿ ಅರೇಬಿಯಾ ಹಿಂಪಡೆದಿದೆ ಎಂದು ತಿಳಿದುಬಂದಿದೆ.

ಕೊರೊನಾ ಪ್ರಕರಣಗಳನ್ನು ತಡೆಯುವ ಸಲುವಾಗಿ ಜೂ. 20ರಿಂದ ಜಾರಿಗೆ ಬರುವಂತೆ ನಿಷೇಧ ಹೇರಲಾಗಿತ್ತು. ಈಗ, ಕೊರೊನಾ ತಡೆಗೆ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ನಿರ್ಬಂಧವನ್ನು ಹಿಂಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಧಾನಿಯವರೊಂದಿಗೆ ಯೋಗ ದಿನಾಚರಣೆ ಭಾಗಿಯಾದದ್ದು ಸಂತೋಷ-ಯದುವೀರ್

0

ನಮ್ಮ ದೇಶದ ಪ್ರತಿಯೊಬ್ಬರ ಪ್ರತಿನಿಧಿಯಾಗಿರುವಂತಹ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಅರಮನೆ ಆವರಣದಲ್ಲಿ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದು ಬಹಳ ಸಂತೋಷವಾಯಿತು ಎಂದು ಯದುವೀರ್ ಒಡೆಯರ್ ಅವರು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾಚೀನ ಕಾಲದಿಂದಲೂ ಮೈಸೂರು ಆಸ್ಥಾನದ ಒಡೆಯರ ಕಾಲದಿಂದಲೂ ಯೋಗಾಭ್ಯಾಸ ನಡೆಯುತ್ತಿದೆ. ಮೈಸೂರು ಆಸ್ಥಾನದಲ್ಲಿ ಯೋಗ ಮುಂದುವರೆಯುವುದಕ್ಕೆ ಹೆಚ್ಚಿನ ಪ್ರೋತ್ಸಾಹವನ್ನು ಮುಮ್ಮಡಿ ಕೃಷ್ಣರಾಜ ಒಡೆಯರ್ ಹಾಗೂ ನಾಲ್ವಡಿ ಕೃಷ್ಣ ರಾಜ ಒಡೆಯರ್ ನೀಡುತ್ತಿದ್ದರು.

ಈ ಕಾರ್ಯಕ್ರಮ ಆ ಪರಂಪರೆಯ ಪ್ರತಿಬಿಂಬ ಎಂದೇ ಹೇಳಬಹುದು. ವಿಶೇಷವೆಂದರೆ 2 ವರ್ಷಗಳ ನಂತರ ಸಾರ್ವಜನಿಕವಾಗಿ ಕಾರ್ಯಕ್ರಮ ನಡೆಯುತ್ತಿರುವುದು ಅತ್ಯಂತ ಸಂತೋಷಕರವಾದ ವಿಚಾರವಾಗಿದೆ ಎಂದು ಹೇಳಿದರು.

ರಾಷ್ಟ್ರಪತಿ ಹುದ್ದೆ ಅಭ್ಯರ್ಥಿ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ Z+ ಭದ್ರತೆ

0

ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮ ಅವರಿಗೆ ಕೇಂದ್ರವು ಸಿಆರ್‌ಪಿಎಫ್ ಕಮಾಂಡೋಗಳ Z+ ಭದ್ರತೆಯನ್ನು ನೀಡಿದೆ.

ಸಶಸ್ತ್ರ ಪಡೆ ಮುರ್ಮು ಅವರ ಭದ್ರತೆಯನ್ನು ವಹಿಸಿಕೊಂಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಗೃಹ ಸಚಿವಾಲಯದಿಂದ ಬಂದ ಆದೇಶದ ನಂತರ ಸಿಆರ್‌ಪಿಎಫ್ ಮುರ್ಮು ಅವರಿಗೆ ಭದ್ರತೆಯನ್ನು ಒದಗಿಸಿದೆ ಎಂದು ಗೌಪ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿಜೆಪಿಯು ಜಾರ್ಖಂಡ್‌ನ ಮಾಜಿ ಗವರ್ನರ್ ದ್ರೌಪದಿ ಮುರ್ಮು ಅವರನ್ನು ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಹೆಸರಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಇವರು ಚುನಾಯಿತರಾದರೆ ಭಾರತದ ರಾಷ್ಟ್ರಪತಿಯಾದ ಮೊದಲ ಬುಡಕಟ್ಟು ಮಹಿಳೆ ಮತ್ತು ಭಾರತದ 2ನೇ ಮಹಿಳಾ ರಾಷ್ಟ್ರಪತಿಯಾಗಲಿದ್ದಾರೆ.

ಬೆಂಗಳೂರು ಶಾಲೆಗಳಲ್ಲಿ ಕೋವಿಡ್ ಮಾರ್ಗಸೂಚಿ ಜಾರಿಗೆ

0

ರಾಜಧಾನಿಯ ಹಲವು ಶಾಲೆಗಳಲ್ಲಿ ಕೊರೊನಾ ಸೋಂಕು ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

ಈ ಕುರಿತು ಅಧಿಕೃತ ಸುತ್ತೋಲೆ ಹೊರಡಿಸಿರುವ ಶಿಕ್ಷಣ ಇಲಾಖೆ, ರಾಜ್ಯದಲ್ಲಿ ಮೇ.15ರಿಂದ ಶಾಲೆಗಳನ್ನು ಪ್ರಾರಂಭಿಸಲಾಗಿದೆ.
ಒಂದು ವೇಳೆ ಕೋವಿಡ್ ಪ್ರತಿಕೂಲ ಸನ್ನಿವೇಶ ಉಂಟಾದರೆ, ಶೈಕ್ಷಣಿಕ ಚಟುವಟಿಕೆಗಳನ್ನು ಪರ್ಯಾಯ ಮಾರ್ಗದ ಮೂಲಕ ಮುಂದುವರೆಸಬೇಕು. ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿಯದಂತೆ ಕ್ರಮ ಜರುಗಿಸಬೇಕು ಎಂದು ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಬೆಂಗಳೂರು ನಗರದ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿರುವ ಬಗ್ಗೆ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಶಾಲೆಗಳಲ್ಲಿಕೊರೊನಾ ಸೋಂಕು ಹರಡದಂತೆ ಶಾಲಾ ಆಡಳಿತ ಮಂಡಳಿಗಳು ಕ್ರಮ ವಹಿಸಬೇಕು. ಈಗಾಗಲೇ ಕೊರೊನಾ ಸೋಂಕು ನಿಯಂತ್ರಣ ಸಂಬಂಧ ಬಿಡುಗಡೆ ಮಾಡಿರುವ ಎಸ್‌ಓಪಿ (ಮಾರ್ಗಸೂಚಿ)ಗಳನ್ನು ಶಾಲಾ ಆಡಳಿತ ಮಂಡಳಿಗಳು ಕಡ್ಡಾಯವಾಗಿ ಪಾಲಿಸಬೇಕು ಎಂದು ಶಾಲಾ ಮುಖ್ಯೋಪಾಧ್ಯಾಯರಿಗೆ ಸೂಚನೆ ನೀಡಲಾಗಿದೆ.

ಕೋವಿಡ್ ದೃಢಪಟ್ಟ ಮಕ್ಕಳಿಗೆ ತಾತ್ಕಾಲಿಕವಾಗಿ ಶಾಲೆಗೆ ಹಾಜರಾಗದಂತೆ ರಜೆ ನೀಡಬೇಕು

ಶಾಲಾ ಕಟ್ಟಡಕ್ಕೆ ಮತ್ತು ಕೊಠಡಿಗಳಿಗೆ ಸ್ಯಾನಿಟೈಸ್ ಮಾಡುವುದು.

ರಜಾ ದಿನಗಳಲ್ಲಿನ ಪಾಠ ಪ್ರವಚನ ಮುಂದಿನ ಸರ್ಕಾರಿ ರಜಾ ದಿನಗಳಲ್ಲಿ ಸರಿ ದೂಗಿಸಬೇಕು.

ಶಿಕ್ಷಕರು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಎರಡು ಡೋಸ್ ಲಸಿಕೆ ಹಾಕಿಸಿಕೊಂಡಿರಬೇಕು

50 ವರ್ಷ ಮೇಲ್ಪಟ್ಟ ಶಿಕ್ಷಕರು ಮತ್ತು ಸಿಬ್ಬಂದಿ ಪೂರ್ವಭಾವಿಯಾಗಿ ಆರೋಗ್ಯ ತಪಾಸಣೆಗೆ ಒಳಪಡಬೇಕು.
ಅನಾರೋಗ್ಯ ಪೀಡಿತರು ಸುರಕ್ಷತಾ ಕ್ರಮ ಕೈಗೊಳ್ಳಬೇಕು.

ಶಾಲೆಗಳಲ್ಲಿ ಕೋವಿಡ್ ಮುನ್ನೆಚ್ಚರಿಕೆ ಕ್ರಮ ಕುರಿತು ವಿದ್ಯಾರ್ಥಿಗಳ ಪೋಷಕರಿಗೆ ತಿಳಿಸಬೇಕು.

ಪ್ರತಿ ದಿನ ಮಕ್ಕಳಿಗೆ ಶಾಲೆಗಳಲ್ಲಿ ಅರಿವು ಮೂಡಿಸಬೇಕು.
ಶಾಲೆಗಳಲ್ಲಿ ಕುಡಿಯಲು ಬಿಸಿ ನೀರಿನ ವ್ಯವಸ್ಥೆ ಮಾಡಬೇಕು.

ಮನೆಯಿಂದಲೇ ಅಗತ್ಯ ಬಿಸಿ ನೀರನ್ನು ಮಕ್ಕಳು ತರಬೇಕು
12 ರಿಂದ 14 ವರ್ಷದ ಒಳಗಿನ ಮಕ್ಕಳಿಗೆ ಲಸಿಕೆ ಹಾಕಿಸಿರುವ ಬಗ್ಗೆ ಪರಿಶೀಲನೆ ನಡೆಸಬೇಕು
ಲಸಿಕೆ ಪಡೆಯದ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು.

ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ಬಂದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಪೋಷಕರ ಉಪಸ್ಥಿತಿಯಲ್ಲಿ ಆರೋಗ್ಯ ತಪಾಸಣೆಗೆ ಒಳಪಡಿಸಬೇಕು.

ಬಿಜೆಪಿಯಿಂದ ದ್ರೌಪದಿ ಮುರ್ಮು ಹಾಗೂ ವಿಪಕ್ಷಗಳಿಂದಯಶವಂತ ಸಿನ್ಹಾ ಹೆಸರು ಮುನ್ನೆಲೆಯಲ್ಲಿ

0

ಬಿಜೆಪಿ ನೇತೃತ್ವದ ಎನ್‌ಡಿಎ ಮುಂಬರುವ ಚುನಾವಣೆಗೆ ರಾಷ್ಟ್ರಪತಿ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಅವರ ಹೆಸರನ್ನು ಘೋಷಿಸಿದೆ.

ದ್ರೌಪದಿ ಮುರ್ಮು ಅವರು ಒಡಿಸ್ಸಾದ ಮಾಯರ್ಭಾಂಜ್‌ ಜಿಲ್ಲೆಯವರಾಗಿದ್ದಾರೆ. ಇವರು ಬುಡಕಟ್ಟು ಜನಾಂಗ ಮೂಲದ ಮಹಿಳೆಯಾಗಿದ್ದು, ಪಕ್ಷದ ನೇತೃತ್ವದಲ್ಲಿ ನಾನಾ ಸ್ಥಾನಗಳನ್ನು ಅಲಂಕರಿಸಿ ಸೇವೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ವಿಪಕ್ಷಗಳು ಅಭ್ಯರ್ಥಿಯಾಗಿ ಯಶವಂತ ಸಿನ್ಹಾ ಆಯ್ಕೆ ಮಾಡಿದ್ದವು. ಇದರ ಬೆನ್ನಲ್ಲೇ ಎನ್‌ಡಿಎ ಒಕ್ಕೂಟದಿಂದ ಅಭ್ಯರ್ಥಿ ಘೋಷಿಸಲಾಗಿದೆ. ಜುಲೈ 18 ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದೆ.

ಬಿಜೆಪಿ ಹಿರಿಯ ಮುಖಂಡರಾದ ದ್ರೌಪದಿ ಮುರ್ಮು ಅವರು 2015-21ರ ಅವಧಿಯಲ್ಲಿ ಜಾರ್ಖಂಡ್‌ನ ರಾಜ್ಯಪಾಲರಾಗಿದ್ದರು. 16ನೇ ರಾಷ್ಟ್ರಪತಿ ಚುನಾವಣೆಯ ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.