Monday, March 9, 2026
Monday, March 9, 2026
Home Blog Page 1528

ಮೋದೀಜಿಯವರನ್ನ ಬೀಳ್ಕೊಟ್ಟ ಜನತೆಗೆ ಪುಳಕ

0

ಮಾನ್ಯ ಪ್ರಧಾನಿ ನರೇಂದ್ರ ಮೋದಿ 2 ದಿನಗಳ ರಾಜ್ಯ ಪ್ರವಾಸಕ್ಕಾಗಿ ಕರ್ನಾಟಕಕ್ಕೆ ಆಗಮಿಸಿದ್ದರು. ಪ್ರಧಾನಿ ಅವರು ರಾಜ್ಯ ರಾಜಧಾನಿ ಬೆಂಗಳೂರಿಗೆ ಬಂದಿಳಿದಿದ್ದಾರೆ. ವಿಮಾನದ ಮೂಲಕ ಯಲಹಂಕ ವಾಯು ನೆಲೆಗೆ ಬಂದಿಳಿದ ಮೋದಿ ಅವರು, ರಸ್ತೆ ಮಾರ್ಗವಾಗಿ IIScಗೆ ತೆರಳಿ, ಮೆದುಳು ಸಂಶೋಧನಾ ಕೇಂದ್ರ ಉದ್ಘಾಟಿಸಿದ್ದಾರೆ.

IIScಗೆ ತೆರಳುವ ಮಾರ್ಗ ಕಾರ್ಯಕರ್ತರು ಹರ್ಷದಿಂದ ಮೋದಿ, ಮೋದಿ ಎನ್ನುವ ಜೈಕಾರ ಹಾಕಿದ್ದಾರೆ. ಇದರಿಂದ ಸಂತೋಷಗೊಂಡ ಪ್ರಧಾನಿ, ಮಾರ್ಗ ಮಧ್ಯೆ ಮೇಖ್ರಿ ಸರ್ಕಲ್‌ ಬಳಿ ಕಾರು ನಿಲ್ಲಿಸಿ ಬಿಜೆಪಿ ಕಾರ್ಯಕರ್ತರಿಗೆ ಕೈಬೀಸಿ ಅಲ್ಲಿರುವ ಜನರಿಗೆ ನಮಸ್ಕರಿಸಿ ದ್ದಾರೆ. ಇದು ಕಾರ್ಯಕರ್ತರನ್ನು ಮತ್ತಷ್ಟು ಪುಳಕಗೊಳಿಸಿದೆ.

ನಮೋ ನಮಃ ಘೋಷಣೆ ಕೂಗಿದರು. ಇನ್ನು ನಂತರ IIScಗೆ ಆಗಮನಿಸಿದ ಪ್ರಧಾನಿ ಮೋದಿ, ಮೆದುಳು ಸಂಶೋಧನಾ ಕೇಂದ್ರ ಉದ್ಘಾಟಿಸಿದ್ದಾರೆ.

ಅಗ್ನಿವೀರರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಟಾಟಾ ಸನ್ಸ್ ಅಧ್ಯಕ್ಷ

0

ಟಾಟಾ ಸನ್ಸ್ ಅಧ್ಯಕ್ಷ ಎನ್.ಚಂದ್ರಶೇಖರನ್ ಅವರು ಕೇಂದ್ರದ ಅಗ್ನಿಪಥ್ ಯೋಜನೆಯನ್ನು ಬೆಂಬಲಿಸಿದೆ. ಇದು ಯುವಜನರಿಗೆ ರಕ್ಷಣಾ ಪಡೆಗಳಲ್ಲಿ ಸೇವೆ ಸಲ್ಲಿಸುವ ಅವಕಾಶದ ಜೊತೆಗೆ, ಉದ್ಯಮಕ್ಕೆ ಅತ್ಯಂತ ಶಿಸ್ತುಬದ್ಧ ಮತ್ತು ತರಬೇತಿ ಪಡೆದ ಉದ್ಯೋಗಿಗಳನ್ನು ಲಭ್ಯವಾಗುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ.

ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ, ಆರ್‌ಪಿಜಿ ಎಂಟರ್‌ಪ್ರೈಸಸ್ ಅಧ್ಯಕ್ಷ ಹರ್ಷ್ ಗೋಯೆಂಕಾ, ಬಯೋಕಾನ್ ಲಿಮಿಟೆಡ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಮತ್ತು ಅಪೊಲೊ ಹಾಸ್ಪಿಟಲ್ಸ್ ಗ್ರೂಪ್ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಸಂಗೀತಾ ರೆಡ್ಡಿ ಸಹ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಗ್ನಿಪಥ್ ಯುವಜನರಿಗೆ ರಾಷ್ಟ್ರದ ರಕ್ಷಣಾ ಪಡೆಗಳಿಗೆ ಸೇವೆ ಸಲ್ಲಿಸಲು ಶ್ರೇಷ್ಠ ಅವಕಾಶ ಮಾತ್ರವಲ್ಲದೇ, ಇದು ಟಾಟಾ ಗ್ರೂಪ್ ಸೇರಿದಂತೆ ಹಲವು ಉದ್ಯಮಕ್ಕೆ ಅತ್ಯಂತ ಶಿಸ್ತು ಹಾಗೂ ತರಬೇತಿ ಪಡೆದ ಯುವಕರನ್ನು ಲಭ್ಯವಾಗುವಂತೆ ಮಾಡುತ್ತದೆ ಎಂದು ಎನ್. ಚಂದ್ರಶೇಖರನ್‌ ಅವರು ತಿಳಿಸಿದ್ದಾರೆ.

ನಾವು ಟಾಟಾ ಸಮೂಹದಲ್ಲಿ ಅಗ್ನಿವೀರರ ಸಾಮರ್ಥ್ಯವನ್ನು ಗುರುತಿಸುತ್ತೇವೆ. ಹಾಗೂ ಇದು ಪ್ರತಿನಿಧಿಸುವ ಅವಕಾಶವನ್ನು ನಾವು ಸ್ವಾಗತಿಸುತ್ತೇವೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಇಂದು ಅಗ್ನಿಪಥ್​ ಯೋಜನೆಯ ವಿರುದ್ಧದ ಪ್ರತಿಭಟನೆಯಿಂದಾಗಿ 500ಕ್ಕೂ ರೈಲುಗಳನ್ನು ರದ್ದುಗೊಳಿಸಲಾಗಿದೆ. ಪ್ರತಿಪಕ್ಷಗಳು ಹಾಗೂ ಮಿಲಿಟರಿ ತಜ್ಞರು ಅಲ್ಪಾವಧಿಯ ಈ ನೇಮಕಾತಿ ಯೋಜನೆಯನ್ನು ಟೀಕಿಸುತ್ತಿದ್ದಾರೆ.

ಶೀಘ್ರದಲ್ಲೇ ಬೆಂಗಳೂರಿನಿಂದ ಸ್ಯಾನ್ ಫ್ರಾನ್ಸಿಸ್ಕೋಗೆವಿಮಾನ ಸಂಚಾರ

0

ಕೊರೋನಾ ಕಾರಣದಿಂದಾಗಿ ಅಂತಾರಾಷ್ಟ್ರೀಯ ವಿಮಾನ ಸಂಪರ್ಕ ಕಡಿತಗೊಂಡಿತ್ತು.

ಇದೀಗ, ಸಾಂಕ್ರಾಮಿಕ ತಗ್ಗಿದ ಕಾರಣ ಬೆಂಗಳೂರಿನಿಂದ ಹಲವು ದೇಶಗಳಿಗೆ ವಿಮಾನಯಾನ ಸೇವೆ ಮರುಸ್ಥಾಪಿಸಲಾಗಿದೆ. ಅದರಂತೆ, ವರ್ಷಾಂತ್ಯದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಮೆರಿಕದ ಸ್ಯಾನ್​ ಫ್ರಾನ್ಸಿಸ್ಕೋಗೆ ಯುನೈಟೆಡ್​​ ಏರ್​ಲೈನ್ಸ್​ ಸಂಸ್ಥೆಯು ವಿಮಾನಯಾನ ಶುರು ಮಾಡಲಿದೆ.

ಯುನೈಟೆಡ್ ಏರ್‌ಲೈನ್ಸ್ 2022 ರ ಕೊನೆಯಲ್ಲಿ ಬೆಂಗಳೂರಿನಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ದೈನಂದಿನ ವಿಮಾನಯಾನವನ್ನು ಪ್ರಾರಂಭಿಸಲಿದೆ ಎಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹೇಳಿಕೆಯಲ್ಲಿ ತಿಳಿಸಿದೆ.

ಆಸ್ಟ್ರೇಲಿಯಾದ ರಾಷ್ಟ್ರೀಯ ವಾಹಕ ಕ್ವಾಂಟಾಸ್ ಕೂಡ ಸೆಪ್ಟೆಂಬರ್ 14 ರಿಂದ ಸಿಡ್ನಿಗೆ ವಾರಕ್ಕೆ 4 ವಿಮಾನಗಳನ್ನು ಪ್ರಾರಂಭಿಸಲಿದೆ. ಟೆಲ್ ಅವಿವ್‌ನ 2 ವಿಮಾನಗಳು ವಾರಕ್ಕೆ ಎರಡು ಬಾರಿ, ಅಮೆರಿಕನ್ ಏರ್‌ಲೈನ್ಸ್​ನ ಸಿಯಾಟಲ್‌ ದೈನಂದಿನ ವಿಮಾನಗಳನ್ನು ಸಹ ಮುಂದಿನ ದಿನಗಳಲ್ಲಿ ಯೋಜಿಸಲಾಗಿದೆ. ಕೊರೊನಾ ಸಾಂಕ್ರಾಮಿಕ ರೋಗ ಹರಡುವ ಅನೇಕ ತಿಂಗಳ ಮೊದಲು ಪ್ರಾರಂಭಿಸಲಾದ ಈ ಹೊಸ ಮಾರ್ಗಗಳನ್ನು ಈಗಾಗಲೇ ಮರು ಸಂಪರ್ಕಿಸಲಾಗಿದೆ.

ಜಪಾನ್ ಏರ್‌ಲೈನ್ಸ್ ವಾರಕ್ಕೆ 3 ಬಾರಿ ಟೋಕಿಯೊದ ನರಿಟಾಗೆ ಸಂಚಾರ ನಡೆಸಲಿದೆ. ಈ ವರ್ಷದ ಆಗಸ್ಟ್‌ನಿಂದ ಇದು ಜಾರಿಗೆ ಬರಲಿದೆ. ಬೆಂಗಳೂರು ಆಮ್‌ಸ್ಟರ್‌ಡ್ಯಾಮ್ ಮಾರ್ಗದಲ್ಲಿ ಪ್ರಸ್ತುತ ವಾರಕ್ಕೆ 3 ವಿಮಾನಗಳು ಸಂಚರಿಸುತ್ತಿವೆ. ಮುಂದಿನ ತಿಂಗಳಿನಿಂದ ಇದು ನಾಲ್ಕಕ್ಕೆ ಹೆಚ್ಚಲಿದೆ.

ಕೊರೋನಾ ತಗ್ಗಿದ ಕಾರಣ ಕೆಂಪೇಗೌಡ ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ವಿಮಾನಯಾನವನ್ನು ಹೆಚ್ಚಳ ಮಾಡಿದೆ. ಮೇ ತಿಂಗಳಿನಿಂದ 23 ದೇಶಗಳಿಗೆ ಸೇವೆಯನ್ನು ಮರು ಸ್ಥಾಪಿಸಲಾಗಿದೆ ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ಉಪನಗರ ರೈಲು ಯೋಜನೆಗೆ ಪ್ರಧಾನಿ ಶಂಕುಸ್ಥಾಪನೆ

0

ಬೆಂಗಳೂರು ಉಪನಗರ ರೈಲು ಯೋಜನೆಗೆ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಶಂಕುಸ್ಥಾಪನೆ ನೆರವೇರಿಸಿದರು. ಈ ಯೋಜನೆಯ ಮಾಹಿತಿ ಇಲ್ಲಿದೆ ಹೀಗಿದೆ.

ಬೆಂಗಳೂರು ಉಪನಗರ ರೈಲು ಯೋಜನೆಗೆ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಜೂ.20) ಶಂಕುಸ್ಥಾಪನೆ ನೆರವೇರಿಸಿದರು.
64 ನಿಲ್ದಾಣಗಳೊಂದಿಗೆ ಅನುಮೋದಿತ 149.348 ಕಿಮೀ ಉದ್ದದ ಉಪನಗರ ರೈಲು ಯೋಜನೆಯ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರವು 2020ರ ಅಕ್ಟೋಬರ್​ನಲ್ಲಿ ಅಂದಾಜು 15,767 ಕೋಟಿ ರೂ.ಗೆ ಅನುಮೋದನೆ ನೀಡಿತ್ತು.

ಯೋಜನೆಯನ್ನು ರೈಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಕಂಪನಿ (ಕರ್ನಾಟಕ) ಲಿಮಿಟೆಡ್ (ಕೆ-ರೈಡ್) ಅನುಷ್ಠಾನಗೊಳಿಸುತ್ತಿದ್ದು, ಯೋಜನೆ ಪೂರ್ಣಗೊಳಿಸಲು 2026ರ ಗಡುವು ನೀಡಲಾಗಿದೆ

ಮನುಕುಲದ ಒಳಿತಿಗೆ ಮತ್ತು ಮಾನವೀಯತೆಗಾಗಿಯೋಗ-ಮೋದೀಜಿ

0

ಯೋಗ ಕೇವಲ ವ್ಯಕ್ತಿಗಾಗಿ ಅಲ್ಲ ಅದು ಮನು ಕುಲದ ಒಳಿತಿಗಾಗಿ, ಇಡೀ ವಿಶ್ವಕ್ಕೆ ಶಾಂತಿ ನೀಡುವ ಶಕ್ತಿ ನಮ್ಮ ಯೋಗಕ್ಕಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಮೈಸೂರು ಅರಮನೆ ಮೈದಾನದಲ್ಲಿ ಆಯೋಜಿಸಿರುವ ವಿಶೇಷ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಿದರು.

ಈ ಇಡೀ ವಿಶ್ವವು ನಮ್ಮ ದೇಹ ಮತ್ತು ಆತ್ಮದಿಂದ ಆರಂಭವಾಗುತ್ತದೆ. ವಿಶ್ವವು ನಮ್ಮಿಂದ ಪ್ರಾರಂಭವಾಗುತ್ತದೆ ಮತ್ತು ಯೋಗವು ನಮ್ಮೊಳಗಿನ ಎಲ್ಲವನ್ನೂ ಜಾಗೃತಗೊಳಿಸುತ್ತದೆ ಮತ್ತು ಅರಿವಿನ ಪ್ರಜ್ಞೆಯನ್ನು ನಿರ್ಮಿಸುತ್ತದೆ ಎಂದರು.

ಕೆಲವು ವರ್ಷಗಳ ಹಿಂದೆ ಯೋಗ ಮನೆಯೊಳಗೆ, ಆಧ್ಯಾತ್ಮಿಕ ಕೇಂದ್ರಗಳಲ್ಲಿ ನಡೆಯುತ್ತಿತ್ತು. ಈಗ ದೇಶದ ಮೂಲೆ ಮೂಲೆಗಳಲ್ಲಿ ಯೋಗ ನಡೆಯುತ್ತಿದೆ. ಇದು ವ್ಯಕ್ತಿಗಾಗಿ ಯೋಗವಲ್ಲ. ಮನು ಕುಲದ ಒಳಿತಿಗಾಗಿ ಯೋಗ. ಈ ಕಾರಣಕ್ಕೆ ಈ ಬಾರಿ ಮಾನವೀಯತೆಗಾಗಿ ಯೋಗ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಈ ದಿನ ಆಚರಿಸುತ್ತಿರುವ 8ನೇ ಅಂತಾರಾಷ್ಟ್ರೀಯ ಯೋಗ ದಿನದಂದು ನಾನು ಎಲ್ಲರಿಗೂ ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಇಂದು ಪ್ರಪಂಚದ ಎಲ್ಲಾ ಭಾಗಗಳಲ್ಲಿ ಯೋಗವನ್ನು ಅಭ್ಯಾಸ ಮಾಡಲಾಗುತ್ತಿದೆ. ಯೋಗವು ನಮಗೆ ಶಾಂತಿಯನ್ನು ತರುತ್ತದೆ. ಕೇವಲ ನಮಗೆ ಮಾತ್ರವಲ್ಲ ಯೋವು ನಮ್ಮ ರಾಷ್ಟ್ರ ಸೇರಿದಂತೆ ಇಡೀ ಜಗತ್ತಿಗೆ ಶಾಂತಿಯನ್ನು ತರುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

ಸೂರ್ಯೋದಯ ಸಮಯಕ್ಕೆ ಇಡೀ ವಿಶ್ವದಲ್ಲಿ ಯೋಗ ಮಾಡಲಾಗುತ್ತಿದೆ. ಇಂದು ಯೂನಿವರ್ಸಲ್ ಯೋಗ ಚೈನ್ ಸೃಷ್ಟಿಯಾಗಲಿದೆ. ಒಂದೆರಡು ನಿಮಿಷದ ಧಾನ್ಯ ನಮ್ಮ ಮನಸ್ಸಿಗೆ ಶಕ್ತಿ ತುಂಬುತ್ತದೆ. ನಾವು ಯೋಗವನ್ನು ಬದುಕಿನ ಬಹು ದೊಡ್ಡ ಭಾಗವಾಗಿ ಸ್ವೀಕರಿಸಬೇಕು. ಯೋಗದ ಬಗ್ಗೆ ತಿಳಿದುಕೊಂಡು ಯೋಗದ ಜೊತೆಗೆ ಬದುಕುವುದ ಕಲಿಯಬೇಕು ಎಂದರು.

ಇಡೀ ವಿಶ್ವಕ್ಕೆ ಶಾಂತಿ ನೀಡುವ ಶಕ್ತಿ ಯೋಗಕ್ಕೆ ಇದೆ. ಬದಲಾಗುತ್ತಿರುವ ಜೀವನ ಶೈಲಿಯಲ್ಲಿ ಮಾನಸಿಕ ಶಾಂತಿ, ಸದೃಢತೆಗೆ ಪ್ರತಿಯೊಬ್ಬರು ಯೋಗ ಮಾಡಬೇಕು. ಯೋಗಕ್ಕೆ ಇರುವ ಶಕ್ತಿಯನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು ಎಂದು ಪ್ರಧಾನಿ ಸಲಹೆ ನೀಡಿದರು.

2014ರ ಸೆಪ್ಟೆಂಬರ್ 27ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾಡಿದ ಭಾಷಣದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಅಂತಾರಾಷ್ಟ್ರೀಯ ಯೋಗ ದಿನದ ಕಲ್ಪನೆಯನ್ನು ಮೊದಲ ಬಾರಿಗೆ ಮುಂದಿಟ್ಟರು. ಭಾರತವು ಅಂಗೀಕರಿಸಿದ ಕರಡು ನಿರ್ಣಯವನ್ನು 177 ರಾಷ್ಟ್ರಗಳು ಬೆಂಬಲಿಸಿದವು. ಯೋಗದ ಸಾರ್ವತ್ರಿಕ ಮನ್ನಣೆ ಮತ್ತು ಹೆಚ್ಚುತ್ತಿರುವ ಜನಪ್ರಿಯತೆಯೊಂದಿಗೆ, ವಿಶ್ವಸಂಸ್ಥೆಯು ಜೂನ್ 21 ಅನ್ನು 2014ರ ಡಿಸೆಂಬರ್ 11 ರಂದು ಅಂತಾರಾಷ್ಟ್ರೀಯ ಯೋಗ ದಿನವೆಂದು ಘೋಷಿಸಿತು.

ನೂಪುರ್ ಶರ್ಮ ಹೇಳಿಕೆ ವಿವಾದ: ಬಂಗಾಳ ವಿಧಾನ ಸಭೆ ಖಂಡನಾ ನಿರ್ಣಯ

0

ಪ್ರವಾದಿ ಮೊಹಮ್ಮದ್ ಪೈಗಂಬರ್‌ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿಯ ಮಾಜಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಹೇಳಿಕೆಯನ್ನು ಖಂಡಿಸುವ ನಿರ್ಣಯವನ್ನು ಬಂಗಾಳ ವಿಧಾನಸಭೆ ಅಂಗೀಕರಿಸಿತು. ರಾಜ್ಯ ಸರ್ಕಾರ ನಿರ್ಣಯವನ್ನು ಅಂಗೀಕರಿಸಿದಾಗ ಬಿಜೆಪಿ ನಾಯಕರು ವಾಕ್ಸಮರ ನಡೆಸಿದರು.

ರಾಜ್ಯ ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, “ಬಿಜೆಪಿ ಪ್ರಚೋದನೆ ಮತ್ತು ದ್ವೇಷದ ರಾಜಕೀಯವನ್ನು ಮಾಡುತ್ತಿದೆ. ರಾಜ್ಯದಲ್ಲಿ ಹಿಂಸಾಚಾರ ನಡೆದಾಗ ನಾವು ಕ್ರಮ ಕೈಗೊಂಡಿದ್ದೇವೆ. ಆದರೆ ಈ ಮಹಿಳೆಯನ್ನು (ನೂಪುರ್ ಶರ್ಮಾ) ಇನ್ನೂ ಬಂಧಿಸಲಾಗಿಲ್ಲ ಹೇಗೆ? ಆಕೆಯನ್ನು ಬಂಧಿಸುವುದಿಲ್ಲ ಎಂದು ನನಗೆ ತಿಳಿದಿದೆ” ಎಂದರು.

ನೂಪೂರ್‌ ಶರ್ಮಾ ಪ್ರವಾದಿ ಮುಹಮ್ಮದ್ ಅವರ ವಿವಾದಾತ್ಮಕ ಹೇಳಿಕೆಗಳ ಕುರಿತು ತಮ್ಮ ಜೀವ ಬೆದರಿಕೆಯ ಕಾರಣ ಕೋಲ್ಕತ್ತಾ ಪೊಲೀಸರ ಮುಂದೆ ಹಾಜರಾಗಲು ನಾಲ್ಕು ವಾರಗಳ ಕಾಲಾವಕಾಶವನ್ನು ಕೇಳಿದ್ದಾರೆ. ಅವರು ಸೋಮವಾರ ಪೊಲೀಸರ ಮುಂದೆ ಹಾಜರಾಗಬೇಕಿತ್ತು.
ದೇಶದಲ್ಲಿ ಬಿಜೆಪಿಯು ನಿರುದ್ಯೋಗದ ಪ್ರಮುಖ ಸಮಸ್ಯೆಯನ್ನು ಪರಿಹರಿಸುತ್ತಿಲ್ಲ. ಬಿಜೆಪಿಯು ಅಗ್ನಿಪಥ್ ಮೂಲಕ ಅವರ ಕಾರ್ಯಕರ್ತರ ಪಡೆಯನ್ನು ರಚಿಸಲು ಪ್ರಯತ್ನಿಸುತ್ತಿದೆ. ನಾವು ಸೇನಾ ಯೋಧರಿಗೆ ನಮಸ್ಕರಿಸುತ್ತೇವೆ. ಅವರು ರಕ್ಷಣೆಯಲ್ಲಿ ಕೆಲಸ ಮಾಡುತ್ತಾರೆ ಮತ್ತು ತರಬೇತಿಯ ಸಮಯದಲ್ಲಿ ಶಸ್ತ್ರಾಸ್ತ್ರಗಳನ್ನು ಬಳಸುವ ಕೌಶಲ್ಯವನ್ನು ಕಲಿಯುತ್ತಾರೆ.

ಆದರೆ ಯೋಜನೆಯಡಿ ನೇಮಕಗೊಳ್ಳುವವರು 4 ವರ್ಷಗಳ ನಂತರ, ಅವರು ಹೊರಗುಳಿಯುತ್ತಾರೆ ಎಂದು ಬ್ಯಾನರ್ಜಿ ಹೇಳಿದ್ದಾರೆ.

ಯೋಗದಿಂದ ಮನಸ್ಸು ಮತ್ತು ದೇಹದ ಸಾಮರಸ್ಯ- ಬಿ.ಸಿ.ಪಾಟೀಲ್

0

ಯೋಗ ಎನ್ನುವುದು ಬರೀ ದೇಹದ ದಂಡನೆಯಲ್ಲ, ಇದು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಸ್ವಾಸ್ಥ್ಯಕ್ಕೂ ಅದ್ಭುತ ಕ್ರಿಯಾ ಸಾಧನ ಎಂದು ಕೃಷಿ ಸಚಿವರೂ ಆಗಿರುವ ಗದಗ ಮತ್ತು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ‌ ಬಿ.ಸಿ.ಪಾಟೀಲ್ ಹೇಳಿದರು.

ಯೋಗ ದಿನದ ಅಂಗವಾಗಿ ಹಾವೇರಿ ಜಿಲ್ಲಾ ಆಡಳಿತ,ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ,ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಯೋಗಾಸನ ಕ್ರೀಡಾ ಸಂಸ್ಥೆ ಇವರ ಸಹಯೋಗದಲ್ಲಿ “ಆಜಾದಿ ಕಾ ಅಮೃತ್ ಮಹೋತ್ಸವ್ ” ಹಿರೇಕೆರೂರಿನ ಅಬಲೂರು ಗ್ರಾಮದ ಬಸವೇಶ್ವರ ದೇವಸ್ಥಾನದ ಮೈದಾನದ ಆವರಣದಲ್ಲಿ ನಡೆದ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಅಂತಾರಾಷ್ಟ್ರೀಯ ಯೋಗ‌ ದಿನಾಚರಣೆಯ ಶುಭಾಶಯ ಕೋರಿದ ಸಚಿವರು,ಪ್ರಧಾನಿ ನರೇಂದ್ರ ಮೋದಿಯವರು ಹೇಳವಂತೆ ಈ ಇಡೀ ವಿಶ್ವವು ನಮ್ಮ ದೇಹ ಮತ್ತು ಆತ್ಮದಿಂದ ಆರಂಭವಾಗುತ್ತದೆ . ವಿಶ್ವವು ನಮ್ಮಿಂದ ಪ್ರಾರಂಭವಾಗುತ್ತದೆ ಮತ್ತು ಯೋಗವು ನಮ್ಮೊಳಗಿನ ಎಲ್ಲವನ್ನೂ ಜಾಗೃತಗೊಳಿಸುತ್ತದೆ ಮತ್ತು ಅರಿವಿನ ಪ್ರಜ್ಞೆಯನ್ನು ನಿರ್ಮಿಸುತ್ತದೆ.ಈ ಬಾರಿ ಮಾನವೀಯತೆಗಾಗಿ ಯೋಗ ಮಾಡುತಿದ್ದೇವೆ.ಭಾರತದ ಯೋಗದ ಲಾಭವನ್ನು ವಿದೇಶಿಗರು ಸಹ ಅರಿತು ದೇಹ ಮತ್ತು ಮನಸಿನ ಆರೋಗ್ಯಕ್ಕಾಗಿ ಇಂದು ಯೋಗವನ್ನು ಒಪ್ಪಿ ಅನುಸರಿಸುತ್ತಿದ್ದಾರೆ.

ಯೋಗವು ಮೂಲಭೂತವಾಗಿ ಅತ್ಯಂತ ಸೂಕ್ಷ್ಮವಾದ ವಿಜ್ಞಾನವನ್ನು ಆಧರಿಸಿದ ಆಧ್ಯಾತ್ಮಿಕ ಶಿಸ್ತು ಕ್ರಮವಾಗಿದೆ. ಇದು ಮನಸ್ಸು ಮತ್ತು ದೇಹದ ನಡುವೆ ಸಾಮರಸ್ಯವನ್ನು ತರುವುದರ ಮೇಲೆ ಕೇಂದ್ರೀಕರಿಸುತ್ತದೆ. ಇದು ಆರೋಗ್ಯಕರ ಜೀವನ ಕಲೆ ಮತ್ತು ವಿಜ್ಞಾನವಾಗಿದೆ.ಎಲ್ಲರೂ ಯೋಗವನ್ನು ದಿನನಿತ್ಯ ಮಾಡುತ್ತಾ ಸುಯೋಗಿಗಳಾಗಲಿ ಎಂದು ಕರೆ ನೀಡಿದರು.

ಸಚಿವರ ಜೊತೆ ಯೋಗಾಚರಣೆಯಲ್ಲಿ
ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ ಬಣಕಾರ್. ಪಟ್ಟಣ ಪಂಚಾಯತಿ ಅಧ್ಯಕ್ಷ ಕಂಠಾದ ಅಂಗಡಿ. ಅಶೋಕ್ ಪಾಟೀಲ್ ರವಿಶಂಕರ್ ಬಾಳಿಕಾಯಿ ಬಿಇಓ ಶ್ರೀಧರ ಎನ್. ತಾಲೂಕ ದೈಹಿಕ ಶಿಕ್ಷಣ ಅಧಿಕಾರಿ ಎಂಬಿ ಮಕಾಂದಾರ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

ಯೋಗವು ಜಾತಿ ಧರ್ಮ ದೇಶಾತೀತವಾಗಿದೆ- ಈಶ್ವರಪ್ಪ

0

ಜಾತಿ, ವರ್ಗ, ಧರ್ಮ, ದೇಶಗಳಾಚೆ ಬೆಳೆದಿರುವ ನಮ್ಮ ಪ್ರಾಚೀನ ವಿದ್ಯೆಯಾದ ಯೋಗವು ಇಂದು ಇಡೀ ವಿಶ್ವವನ್ನು ಒಂದು ಮಾಡುತ್ತಿದೆ ಎಂದು ಶಾಸಕರಾದ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಬೋಧನಾ ಆಸ್ಪತ್ರೆ ಶಿವಮೊಗ್ಗ, ಮಹಾನಗರಪಾಲಿಕೆ ಶಿವಮೊಗ್ಗ, ಕೆಜಿಎಎಂಒಎ, ಎನ್‍ಐಎಂಎ ಮತ್ತು ಎಎಫ್‍ಐ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಇಂದು ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಆವರಣದಲ್ಲಿ ಆಯೋಜಿಸಲಾಗಿದ್ದ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯೋಗಾಭ್ಯಾಸದಿಂದ ಶಾರೀರಿಕ ಮತ್ತು ಮಾನಸಿಕ ನೆಮ್ಮದಿ ಲಭಿಸುತ್ತದೆ. ಇದು ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲದ ಕಾರಣ ಎಲ್ಲರನ್ನು ಒಂದುಗೂಡಿಸುತ್ತಿದೆ. ಯೋಗಾಭ್ಯಾಸದಿಂದ ಎಲ್ಲರೂ ಸದೃಢರಾಗಬೇಕೆಂದು ವಿಶ್ವ ಸಂಸ್ಥೆಯಲ್ಲಿ ವಿಶ್ವ ಯೋಗ ದಿನಾಚರಣೆ ನಿರ್ಣಯ ಕೈಗೊಳ್ಳಲು ಕಾರಣಕರ್ತರಾದವರು ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು. ಇಂದು 190 ರಾಷ್ಟ್ರಗಳು ಯೋಗ ದಿನಾಚರಣೆ ಆಚರಿಸುತ್ತಿವೆ ಎಂದ ಅವರು ನಾವು ಪ್ರತಿ ದಿನ ಯೋಗಾಭ್ಯಾಸವನ್ನು ಮಾಡುವ ಮೂಲಕ ಸದೃಢರಾಗಿರಬೇಕೆಂದು ಆಶಿಸಿದ್ದಾರೆ.

ವಿಧಾನ ಪರಿಷತ್ ಶಾಸಕರಾದ ಆಯನೂರು ಮಂಜುನಾಥ್ ಮಾತನಾಡಿ, ಯೋಗ ನಮ್ಮ ದೇಶದ ಅತ್ಯಂತ ಪ್ರಾಚೀನ ಶಾಸ್ತ್ರ. ದೇಹ ಮತ್ತು ಮನಸ್ಸನ್ನು ಸುಸ್ಥಿತಿಯಲ್ಲಿಡುವ ಮಹಾನ್ ವಿದ್ಯೆ. ಇಂತಹ ಯೋಗ ದಿನಾಚರಣೆಯನ್ನು ಸರ್ಕಾರದಿಂದ ಆಯೋಜಿಸುತ್ತಿರುವುದು ವಿಶೇಷವಾಗಿದೆ. ಆಯುರ್ವೇದ ಕೂಡ ವಿಶ್ವದ ಮೊಟ್ಟ ಮೊದಲ ವೈದ್ಯಕೀಯ ಕ್ಷೇತ್ರ. ಧನ್ವಂತರಿ, ಆರ್ಯಭಟರಂತಹವರ ಮೂಲಕ ಅನೇಕ ಆದಿಗಳನ್ನು ಕೊಟ್ಟಂತಹ ದೇಶ ಮಧ್ಯದಲ್ಲಿ ಕಳೆದುಕೊಳ್ಳುವ ಪರಿಸ್ಥಿತಿ ಎದುರಿಸುತ್ತಿದೆ. ಇಂತಹ ವೇಳೆಯಲ್ಲಿ ನಮ್ಮ ಪ್ರಧಾನಿಯವರು ಮತ್ತೆ ವಿಶ್ವಕ್ಕೆ ಯೋಗವನ್ನು ಪರಿಚಯಿಸಿದ್ದಾರೆ. ನಾವು ಬಹಳ ವಿಷಯದಲ್ಲಿ ಮೊದಲಿಗರಾಗಿದ್ದು ವಿಶ್ವಗುರು ಆಗುವ ಅರ್ಹತೆ ಇದೆ ಎಂದು ಹೇಳಿದ್ದಾರೆ.

ಯೋಗ ದಿನಾಚರಣೆ ಅಂಗವಾಗಿ ಕಾಲೇಜಿನ ವಿದ್ಯಾರ್ಥಿಗಳಿಗೆ ಆಯೋಜಸಲಾಗಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಸಾಮಾನ್ಯ ಯೋಗ ಶಿಷ್ಟಾಚಾರದಂತೆ ಯೋಗ ತರಬೇತುದಾರ ಗೋಪಾಲಕೃಷ್ಣ ಎಸ್ ರವರು ಯೋಗಾಭ್ಯಾಸ ಮಾಡಿಸಿದರು. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ, ಅಪರ ಜಿಲ್ಲಾಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಯೋಗಾಭ್ಯಾಸದಲ್ಲಿ ಪಾಲ್ಗೊಂಡಿದ್ದರು. ಈಶ್ವರೀಯ ಸಂಸ್ಥೆಯ ಮುಖ್ಯಸ್ಥೆ ಅನುಸೂಯಕ್ಕನವರು ಧ್ಯಾನದ ಮಹತ್ವ ತಿಳಿಸಿ, ಧ್ಯಾನ ಮಾಡಿಸಿದ್ದಾರೆ.

ಪಾಲಿಕೆ ಮಹಾಪೌರರಾದ ಸುನೀತಾ ಅಣ್ಣಪ್ಪ, ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ, ಜಿ.ಪಂ ಮಾಜಿ ಸದಸ್ಯ ಕೆ.ಇ ಕಾಂತೇಶ್, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್, ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್ ಹೊನ್ನಳ್ಳಿ, ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲ ಎಂ.ಎಸ್.ದೊಡ್ಮನಿ, ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಈಶ್ವರೀಯ ಸಂಸ್ಥೆ ಸೇರಿದಂತೆ ವಿವಿಧ ಯೋಗ ಸಂಸ್ಥೆಗಳ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ದಿ.ನವೀನ್ ಕುಟುಂಬಸ್ಥರನ್ನ ಭೇಟಿಮಾಡಿದ ಪ್ರಧಾನಿ ಮೋದೀಜಿ

0

ಕೊಮ್ಮಘಟ್ಟದಲ್ಲಿ ನಡೆದ ಸಾರ್ವಜನಿಕ ಸಮಾವೇಶದ ವೇದಿಕೆಯ ಹಿಂಭಾಗದಲ್ಲಿ ಉಕ್ರೇನ್ ನಲ್ಲಿ ಮೃತಪಟ್ಟ ಎಂಬಿಬಿಎಸ್ ವಿದ್ಯಾರ್ಥಿ ನವೀನ್ ಗ್ಯಾನ ಗೌಡರ್ ಕುಟುಂಬ ಸದಸ್ಯರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ನವೀನ್ ತಂದೆ ಶೇಖರ ಗೌಡ, ತಾಯಿ, ಸಹೋದರ ಪ್ರಧಾನಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ವೇಳೆ ಹಾಜರಿದ್ದರು.

ಖಾರ್ಕಿವ್ ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್ , ಮಾರ್ಚ್ 1 ರಂದು ಬೆಳಗ್ಗೆ ತಿಂಡಿ ತರಲೆಂದು ಹೊರಗೆ ಬಂದಿದ್ದ ವೇಳೆ ರಷ್ಯಾ ಪಡೆಗಳ ಶೆಲ್ ದಾಳಿಗೆ ಸಿಲುಕಿ ಮೃತಪಟ್ಟಿದ್ದ. 20 ದಿನಗಳ ನಂತರ ಕೇಂದ್ರ ಸರಕಾರ ಶತ ಪ್ರಯತ್ನಗಳನ್ನು ಮಾಡಿ ಮೃತ ದೇಹವನ್ನು ತಾಯ್ನಾಡಿಗೆ ತರಲಾಗಿತ್ತು.

ಇಡಿ ವಿಚಾರಣೆ:ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ

0

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯನ್ನು ಸೋಮವಾರವೂ (ಜೂನ್ 20) ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುತ್ತಿರುವುದನ್ನು ವಿರೋಧಿಸಿ ಸತ್ಯಾಗ್ರಹ ನಡೆಸುತ್ತಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.

ಈ ದೇಶದಲ್ಲಿ ಯಾರೊಬ್ಬರು ವಿಕ್ಟೋರಿಯಾ ರಾಣಿಯಾಗಲಿ ಅಥವಾ ರಾಜನಾಗಲಿ ಇಲ್ಲ.
ಎಲ್ಲರೂ ಕಾನೂನಿಗೆ ತಲೆಬಾಗಬೇಕು ಎಂದು ತಿರುಗೇಟು ನೀಡಿದೆ.

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಕಾಂಗ್ರೆಸ್ ಪ್ರತಿಭಟನೆ ಬಗ್ಗೆ ಕಿಡಿಕಾರಿದ್ದು, ನ್ಯಾಷನಲ್ ಹೆರಾಲ್ಡ್ ಹಗರಣದ ಮೂಲಕ ರಾಹುಲ್ ಗಾಂಧಿ ದೇಶದ ಹಣವನ್ನು ದುರುಪಯೋಗಪಡಿಸಿಕೊಳ್ಳುವಲ್ಲಿ ಶಾಮೀಲಾಗಿದ್ದಾರೆ ಎಂಬುದು ಸಾರ್ವಜನಿಕರಿಗೆ ತಿಳಿದಿದೆ ಎಂದು ಹೇಳಿದರು.

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ನಾಲ್ಕನೇ ದಿನವೂ ರಾಹುಲ್ ಗಾಂಧಿಯನ್ನು ವಿಚಾರಣೆಗೊಳಪಡಿಸಿದೆ. ಮತ್ತೊಂದೆಡೆ ಕಾಂಗ್ರೆಸ್ ಪಕ್ಷ ದೆಹಲಿಯಲ್ಲಿ ಧರಣಿ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಸಂಬಿತ್ ಪಾತ್ರ ಈ ಪ್ರತಿಕ್ರಿಯೆ ನೀಡಿದ್ದಾರೆ.