Tuesday, March 17, 2026
Tuesday, March 17, 2026
Home Blog Page 1514

ಕಬ್ಬು ಟನ್ ಗೆ ₹3500 ನಿಗದಿಮಾಡಲು ಬೆಳೆಗಾರರ ಆಗ್ರಹ

0

ಕಬ್ಬು ಬೆಳೆಯುವ ರೈತರಿಗೆ ಪ್ರತಿ ವರ್ಷ ವೆಚ್ಚ ಹೆಚ್ಚಾಗುತ್ತಿದ್ದು, ಸಕ್ಕರೆ ಕಾರ್ಖಾನೆಗಳು ಬೆಲೆ ನಿಗದಿ, ಕಟಾವು ಸಂದರ್ಭದಲ್ಲಿ ಮೋಸ ಮಾಡುತ್ತಿವೆ ಎಂದು ತಿಳಿದುಬಂದಿದೆ.

ಆದ್ದರಿಂದ ಪ್ರತಿ ಟನ್ ಕಬ್ಬಿನ ಬೆಲೆಯನ್ನು ಸರ್ಕಾರ ₹ 3500ರಂತೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ತೂಕದಲ್ಲಿ ಮೋಸವನ್ನು ತಡೆಯಬೇಕು. ಎಫ್‌ಆರ್‌ಪಿ ಪ್ರಕಾರ ಕಬ್ಬು ಖರೀದಿಸಿದ 15 ದಿನಗಳ ಒಳಗಾಗಿ ಅದರ ಮೊತ್ತವನ್ನು ರೈತರಿಗೆ ವಿತರಿಸಬೇಕು ಎಂದರು.
ಮನವಿ ಸ್ವೀಕರಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ರೈತ ಮುಖಂಡರ ಬೇಡಿಕೆಗಳನ್ನು ಆಲಿಸಿದರು. ಪ್ರತಿ ತಿಂಗಳೂ ರೈತರು, ರೈತ ಸಂಘಟನೆಗಳು ಹಾಗೂ ಕಾರ್ಖಾನೆ ಮಾಲೀಕರ ಸಭೆಯನ್ನು ಕರೆಯುವುದಾಗಿ ಭರವಸೆ ನೀಡಿದ್ದಾರೆ ಎಂದು ಸಂಘದ ಅಧ್ಯಕ್ಷ ಜಗದೀಶ ಪಾಟೀಲ ರಾಜಾಪುರ ತಿಳಿಸಿದರು.

ಉತ್ತರ ಪ್ರದೇಶದಲ್ಲಿ ರಾಜ್ಯ ಸಲಹಾ ಸಮಿತಿ ದರ ಪ್ರತಿ ಟನ್ನಿಗೆ ₹ 3500 ಇದೆ. ಕರ್ನಾಟಕ ಸರ್ಕಾರವು ₹ 3200 ಖರ್ಚು ತಗಲುತ್ತದೆ ಎಂದು ವರದಿ ನೀಡಿದೆ. ಪ್ರಸ್ತುತ ಕಬ್ಬಿನ ದರವನ್ನು ₹ 2300ರಂತೆ ಖರೀದಿ ಮಾಡುತ್ತಿವೆ. ಹಾಗಾಗಿ, ಕಬ್ಬು ಬೆಳೆಗಾರರ ನೆರವಿಗೆ ಬರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ₹ 3500 ದರ ನಿಗದಿ ಮಾಡಬೇಕು. ಸಕ್ಕರೆ ಕಾರ್ಖಾನೆಯವರು ಅವೈಜ್ಞಾನಿಕ ಕಟಾವು ಮತ್ತು ಟೋಳಿ ಸಂಯೋಜನೆಯಿಂದಾಗಿ ರೈತರಿಂದ ಪ್ರತಿ ಎಕರೆ ಕಟಾವು ಮಾಡಲು ₹ 10ರಿಂದ 12 ಸಾವಿರ ಹೆಚ್ಚುವರಿಯಾಗಿ ವಸೂಲಿ ಮಾಡುತ್ತಿದ್ದಾರೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಸಕ್ಕರೆ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಗಳ ಸಭೆ ಕರೆದು ಸುಲಿಗೆ ಆಗುವುದನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಬಸವರಾಜ ಪಾಟೀಲ ಅಂಕಲಗಿ, ಜಿಲ್ಲಾ ಉಪಾಧ್ಯಕ್ಷರಾದ ರಮೇಶ ಹೂಗಾರ, ಧರ್ಮರಾಯ ಸಾಹು, ಶಾಂತವೀರಪ್ಪ ಕಲಬುರಗಿ ಹೆಬ್ಬಾಳ, ನರಹರಿ ಪಾಟೀಲ, ಕಲಬುರಗಿ ತಾಲ್ಲೂಕು ಘಟಕದ ಅಧ್ಯಕ್ಷ ಶಾಂತವೀರ ಪಾಟೀಲ ದಸ್ತಾಪೂರ, ಚಿತ್ತಾಪುರ ತಾಲ್ಲೂಕು ಅಧ್ಯಕ್ಷ ನಾಗೇಂದ್ರರಾವ ದೇಶಮುಖ, ಜೇವರ್ಗಿ ತಾಲ್ಲೂಕು ಅಧ್ಯಕ್ಷ ಶರಣು ಬಿಲ್ಲಾಡ, ಕಮಲಾಪೂರ ತಾಲ್ಲೂಕು ಅಧ್ಯಕ್ಷ ಸತೀಶ ಹುಡಗಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಬ್ರಿಟನ್ ಸರ್ಕಾರದ ಹಣಕಾಸು ಸಚಿವ ರಿಷಿ ರಾಜಿನಾಮೆ

0

ಬ್ರಿಟನ್ ಸರ್ಕಾರದ ಹಣಕಾಸು ಖಾತೆ ಸಚಿವರಾಗಿದ್ದ ಇನ್ಫೋಸಿಸ್ ನಾರಾಯಣಮೂರ್ತಿ ಅಳಿಯ ರಿಷಿ ಸುನಾಕ್ ಹಾಗೂ ಬ್ರಿಟನ್ ಆರೋಗ್ಯ ಕಾರ್ಯದರ್ಶಿ ಸಜ್ಜಿದ್ ಜಾವೇದ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಹೊರ ಬಂದಿದ್ದಾರೆ ಎಂದು ತಿಳಿದುಬಂದಿದೆ.

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ವಿರುದ್ಧ ಭಿನ್ನಾಭಿಪ್ರಾಯದಿಂದ ಸಜ್ಜಿದ್ ಜಾವೇದ್ ರಾಜೀನಾಮೆ ನೀಡಿದ ಬೆನ್ನಲ್ಲೇ ರಿಷಿ ಸುನಾಕ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ರಾಜೀನಾಮೆ ಪತ್ರವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕೆಲದಿನಗಳ ಹಿಂದೆ ಅಮಾನತುಗೊಂಡಿರುವ ಸಂಸದ ಕ್ರಿಸ್ ಪಿಂಚರ್ ವಿರುದ್ಧ ಡೌನಿಂಗ್ ಸ್ಟ್ರೀಟ್‍ನ ಆರೋಪಗಳ ನಿರ್ವಹಣೆ ಬಗ್ಗೆ ಮಾಜಿ ನಾಗರಿಕ ಸೇವಕರು ದನಿಎತ್ತಿದ ಬಳಿಕ ಪ್ರಧಾನಿ ಹಾಗೂ ಸಚಿವರ ನಡುವೆ ರಾಜಕೀಯ ಭಿನ್ನಾಭಿಪ್ರಾಯ ಆರಂಭಕೊಂಡಿತ್ತು. ಇದೀಗ ಹಣಕಾಸು ಸಚಿವರು ಹಾಗೂ ಆರೋಗ್ಯ ಕಾರ್ಯದರ್ಶಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.

ಈ ಕುರಿತ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿರುವ ರಿಷಿ ಸುನಾಕ್, ಸರ್ಕಾರವನ್ನು ಸರಿಯಾದ ರೀತಿಯಲ್ಲಿ ಸಮರ್ಥವಾಗಿ ಮತ್ತು ಗಂಭೀರವಾಗಿ ನಡೆಸಬೇಕೆಂದು ಸಾರ್ವಜನಿಕರ ನಿರೀಕ್ಷೆ ಆಗಿರುತ್ತದೆ. ಇದು ನನ್ನ ಕೊನೆಯ ಮಂತ್ರಿ ಹುದ್ದೆ ಎಂದು ನಾನು ಭಾವಿಸುತ್ತೇನೆ. ಹಾಗಾಗಿ ನನ್ನ ಹುದ್ದೆಗೆ ರಾಜೀನಾಮೆ ನೀಡಿ ಹೋರಾಡಲು ನಿರ್ಧರಿಸಿದ್ದು ಸರಿಯಾದ ನಿರ್ಧಾರವೆಂದು ನಂಬಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಸಮಗ್ರ ವಚನ ಸಾಹಿತ್ಯ ಸಂಪಾದಿಸಿದ ಸಂರಕ್ಷಕ ಹಳಕಟ್ಟಿ

0

ಒಂದು ಸಾಹಿತ್ಯ ಸಂಗ್ರಹಕ್ಕೆ ಪೂರಕ ಸೌಲಭ್ಯ ಮತ್ತು ಅನುಕೂಲಗಳು ಇಲ್ಲದ ಕಾಲದಲ್ಲಿ ಸಮಗ್ರ ವಚನ ಸಾಹಿತ್ಯವನ್ನು ಸಂರಕ್ಷಿಸುವ ಕೆಲಸ ಮಾಡಿದ ಫ.ಗು.ಹಳಕಟ್ಟಿಯವರು ಸ್ಮರಣೀಯರು ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ(ಡಾ.ಫ.ಗು.ಹಳಕಟ್ಟಿರವರ ಜನ್ಮದಿನ)ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದೆಲ್ಲ ಸಾಹಿತ್ಯ ಸಂಗ್ರಹಣೆ ಮತ್ತು ಮುದ್ರಣ ಬಹಳ ಕಷ್ಟ ಇತ್ತು. ಪೇಪರ್, ಲೇಖನ ಸಾಮಗ್ರಿ, ಮುದ್ರಣ ಸೇರಿದಂತೆ ಇತರೆ ಸೌಲಭ್ಯಗಳು ಇರಲಿಲ್ಲ. ಅಂತಹ ಕಷ್ಟಕರ ಸ್ಥಿತಿಯಲ್ಲೂ ಫ.ಗು.ಹಳಕಟ್ಟಿಯವರು ವಚನ ಸಾಹಿತ್ಯವನ್ನು ಸಂರಕ್ಷಿಸುವ ಕೆಲಸ ಮಾಡಿರುವುದು ಉನ್ನತವಾದ ಕೆಲಸ. ಅವರ ಜನ್ಮದಿನದಂದು ನಾಡು, ನೆಲ, ಜಲ ಮತ್ತು ಭಾಷೆ ಸಂರಕ್ಷಣೆ ಕುರಿತು ಸಹ ಯೋಚನೆ ಮಾಡಬೇಕಾಗಿದೆ. ಸರ್ಕಾರದ ವತಿಯಿಂದ ಇದೇ ಮೊದಲ ವರ್ಷ ಅವರ ಜನ್ಮದಿನ ಪ್ರಯುಕ್ತ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಆಚರಿಸುವಂತೆ ಆಗಲಿ ಎಂದರು.

ಕರ್ನಾಟಕ ಸಂಘದ ಅಧ್ಯಕ್ಷರಾದ ಎಂ.ಎನ್.ಸುಂದರರಾಜ್ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಇಡೀ ಸಾಹಿತ್ಯ ವಲಯದಲ್ಲಿ ವಚನ ಸಾಹಿತ್ಯ ಪ್ರಮುಖ ಪಾತ್ರ ವಹಿಸುತ್ತದೆ. ಇದು ಜನ ಸಾಮಾನ್ಯರ ಸಾಹಿತ್ಯ. ಇಂತಹ ವಚನಗಳ ಒಂದು ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಹೊರತಂದ ಏಕೈಕ ವ್ಯಕ್ತಿ ಫ.ಗು.ಹಳಕಟ್ಟಿಯವರು. ಹಿಂದೆ ಕೇವಲ 40 ವಚನ ಸಾಹಿತಿಗಳ ಮಾಹಿತಿ ಲಭ್ಯವಿತ್ತು. ಆದರೆ ಇವರು 250 ಕ್ಕೂ ಹೆಚ್ಚು ವಚನಕಾರರ ಸಾಹಿತ್ಯ ಸಂಗ್ರಹಿಸಿ ಪರಿಚಯಿಸಿದ್ದಾರೆ.

ಫಕೀರಪ್ಪ ಗುರುಬಸಪ್ಪ ಹಳಕಟ್ಟಿಯವರು 1880 ರ ಜುಲೈ 2 ರಂದು ಧಾರವಾಡದಲ್ಲಿ ಜನಿಸಿದರು. ಶಿಕ್ಷಣ ಮುಗಿಸಿ ವಕೀಲರಾದ ಇವರು ಬೇರೆ ಬೇರೆ ಕಾರಣಗಳಿಗೆ ಹಳ್ಳಿಗಳ ಮನೆಗಳು, ಮಠ ಮಂದಿರಗಳಲ್ಲಿ ಬಟ್ಟೆಗಳಲ್ಲಿ ಕಟ್ಟುಗಳನ್ನು ಕಟ್ಟಿರುವುದನ್ನು ಕಂಡು ಕುತೂಹಲಗೊಂಡು ಅದರಲ್ಲಿದ್ದ ತಾಳೆಗರಿಯಲ್ಲಿನ ಸಾಹಿತ್ಯವನ್ನು ಸಂಗ್ರಹಿಸಿದರು. ಸುಮಾರು 1500 ಅಂತಹ ಕಟ್ಟುಗಳನ್ನು ಸಂಗ್ರಹಿಸಿ, ಸ್ವತಃ ತಮ್ಮ ಕೈಬರಹದಿಂದ 25 ಸಾವಿರಕ್ಕೂ ಹೆಚ್ಚು ವಚನಗಳನ್ನು ದಾಖಲಿಸಿದ್ದಾರೆ. ಅವರ ಕೈ ಸವೆದು ರಕ್ತ ಬರುವವರೆಗೆ ವಚನಗಳನ್ನು ಕಾಪಿ ಮಾಡಿದ್ದುಂಟು. ಆಗ ಮುದ್ರಣಕ್ಕಾಗಿ ಮಂಗಳೂರಿನಲ್ಲಿ ಕ್ರಿಶ್ಚಿಯನ್ ಮಿಷನರಿಗೆ ಸೇರಿದ ಒಂದು ಮುದ್ರಣಾಲಯ ಮಾತ್ರ ಇತ್ತು. ಅಲ್ಲಿಗೆ ತಾವು ಕೈಯಲ್ಲಿ ಬರೆದಂತಹ ವಚನಗಳನ್ನು ಮುದ್ರಣಕ್ಕೆ ಕಳುಹಿದಾಗ ಅವರು ಸಹ ಮುದ್ರಣ ಮಾಡದೇ ವಾಪಸ್ ಕಳುಹಿಸುತ್ತಾರೆ. ಆಗ ತಮಗೆ ಬಂದೊಗಿದ್ದ ಬಡತನದ ನಡುವೆಯೂ ಬಿಜಾಪುರದಲ್ಲಿ ಇದ್ದಂತಹ ಒಂದು ಮನೆಯನ್ನು ಮಾರಾಟ ಮಾಡಿ ತಾವೇ ಮುದ್ರಣ ಸ್ಥಾಪಿಸುತ್ತಾರೆ.

ನಂತರ ಶಿವಾನುಭವ ಗ್ರಂಥಮಾಲಿಕೆ ಸೇರಿದಂತೆ ವಚನ ಸಾಹಿತ್ಯದ 75 ಪುಸ್ತಕ ಪ್ರಕಟಿಸುತ್ತಾರೆ. ಶಿವಾನುಭವ ಎಂಬ ಮಾಸಿಕ ಮತ್ತು ನವಕರ್ನಾಟಕ ಎಂಬ ವಾರ ಪತ್ರಿಕೆ ತೆರೆದು ಅದರ ಮೂಲಕ ವಚನ ಸಾಹಿತ್ಯ ಪ್ರಚುರಪಡಿಸುತ್ತಾರೆ. ಕೆಲವು ಮಠಾಧೀಶರು ನೆರವು ನೀಡುತ್ತಾರೆ. ವೈಯಕ್ತಿಕ ಜೀವನದಲ್ಲಿ ಹಣಕಾಸು ಸೇರಿದಂತೆ ಅನೇಕ ಕಷ್ಟಕಾರ್ಪಣ್ಯಗಳು ಬಂದರೂ ವಿಚಲಿತರಾಗದೆ 25 ವರ್ಷ ಪತ್ರಿಕೆ ನಡೆಸಿ ವಚನ ಸಾಹಿತ್ಯ ಪ್ರಚಾರ ಮಾಡುತ್ತಾರೆ. ಕರ್ನಾಟಕ ವಿಶ್ವವಿದ್ಯಾಲಯ ಇವರನ್ನು ಗುರುತಿಸಿ ಡಾಕ್ಟರೇಟ್ ಪದವಿ ಪ್ರದಾನ ಮಾಡುತ್ತದೆ.

ಬಸವಣ್ಣನವರ ವಚನಗಳನ್ನು ಇಂಗ್ಲಿಷ್‍ಗೆ ತರ್ಜುಮೆ ಮಾಡುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ವಚನ ಸಾಹಿತ್ಯ ಪರಿಚಯಿಸಿದವರಲ್ಲಿ ಇವರು ಮೊದಲಿಗರು. ವಚನ ಸಾಹಿತ್ಯ ಸಂಗ್ರಹಿಸುವ ಮೂಲಕ ಒಂದು ವಿಶ್ವವಿದ್ಯಾಲಯ ಅಥವಾ ಸರ್ಕಾರ ಮಾಡಬಹುದಾದ ಕೆಲಸ ಇವರು ಮಾಡಿದ್ದಾರೆ. ಇಂತಹವರ ಜನ್ಮದಿನ ಪ್ರಯುಕ್ತ ವಚನ ಸಾಹಿತ್ಯ ಸಂಗ್ರಹ ದಿನಾಚರಣೆಯನ್ನು ಸರ್ಕಾರ ಮಾಡುತ್ತಿರುವುದಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಬಾರಂದೂರು ಪ್ರಕಾಶ್ ಮಾತನಾಡಿ, ಇಡೀ ಜಗತ್ತಿನಲ್ಲಿ ಶಕ್ತಿಶಾಲಿಯಾದ ಸಾಹಿತ್ಯ ವಚನ ಸಾಹಿತ್ಯ. ಇಂತಹ ವಚನ ಸಾಹಿತ್ಯ ಸಂರಕ್ಷಿಸಿದ ಫ.ಗು.ಹಳಕಟ್ಟಿರವರ ಜನ್ಮದಿನ ನಿಮಿತ್ತ ವಚನ ಸಾಹಿತ್ಯ ಸಂರಕ್ಷಣಾ ದಿನವನ್ನು ಸರ್ಕಾರ ಆಚರಿಸುತ್ತಿರುವುದು ಅಭಿನಂದನೀಯ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಸಾಹಿತಿಗಳು, ಬಸವ ಕೇಂದ್ರ, ಬಸವ ಬಳಗದ ಪ್ರತಿನಿಧಿಗಳು ಹಾಜರಿದ್ದರು.

ಶಿವಮೊಗ್ಗದಿಂದ ಬೆಂಗಳೂರು ರೈಲ್ವೆ ಸಂಚಾರ ಮಾಹಿತಿ

0

ಕಾಮಗಾರಿ ಕಾರಣದಿಂದಾಗಿ ಭಾಗಶಃ ಹಾಗೂ ಪೂರ್ಣ ಪ್ರಮಾಣದಲ್ಲಿ ರೈಲುಗಳ ಸಂಚಾರ ಕಡಿತಗೊಂಡಿತ್ತು. ಇದೀಗ ಇದೇ ಜುಲೈ 9 ಹಾಗೂ 10 ರಂದು ರೈಲುಗಳು ಈ ಎಲ್ಲಾ ಪ್ರದೇಶಗಳಲ್ಲಿ ಮತ್ತೆ ಓಡಾಟ ಆರಂಭಿಸಲಿದೆ. ಮತ್ತೆ ಓಡಾಡಲಿರುವ ರೈಲುಗಳ ವಿವರ ಇಲ್ಲಿದೆ.

ಮೈಸೂರು ವಿಭಾಗದ ಬಾಣಾವರ ರೈಲು ಮಾರ್ಗದಲ್ಲಿ ನಡೆಯುತ್ತಿದ್ದ ಇಂಜಿನಿಯರಿಂಗ್ ಕಾಮಗಾರಿ ಹಿನ್ನೆಲೆ ಭಾಗಶಃ ಹಾಗೂ ಪೂರ್ಣವಾಗಿ ಸ್ಥಗಿತಗೊಂಡಿದ್ದ ರೈಲುಗಳ ಪುನರ್ ಸಂಚಾರವನ್ನು ಆರಂಭಿಸುವುದಾಗಿ ನೈಋತ್ಯ ರೈಲ್ವೇ ವಲಯವು ತಿಳಿಸಿದೆ.

ಈ ಮಾರ್ಗದಲ್ಲಿ ರೈಲುಗಳ ಓಡಾಟ ಆರಂಭವಾಗುವುದರ ಜೊತೆಗೆ ಶಿವಮೊಗ್ಗ ನಗರದಿಂದ ಓಡಾಡುತ್ತಿದ್ದ ರೈಲುಗಳು ಮತ್ತೆ ಸಂಚಾರ ಆರಂಭಿಸಲಿದೆ.

ಹೀಗಾಗಿ ಪ್ರಯಾಣಿಕರು ರಾಜ್ಯ ರಾಜಧಾನಿ ಬೆಂಗಳೂರು, ಮೈಸೂರು, ತುಮಕೂರು ನಡುವೆ ಓಡಾಡುತ್ತಿದ್ದ ರೈಲುಗಳಲ್ಲಿ ಸಂಚಾರ ಮಾಡಬಹುದಾಗಿದೆ.

ತುಮಕೂರು- ಶಿವಮೊಗ್ಗ ದಿನಂಪ್ರತಿ ಓಡಾಡುತ್ತಿದ್ದ ಎಕ್ಸ್ ಪ್ರೆಸ್ ರೈಲು , ಬೆಂಗಳೂರು- ಶಿವಮೊಗ್ಗ ನಡುವೆ ಓಡಾಡುತ್ತಿದ್ದ ಜನ್ಮ ಶತಾಬ್ದಿ ರೈಲು ಓಡಾಟ ನಡೆಸಲಿದೆ.

ಇದೇ ಜುಲೈ 10 ರಂದು ಈ ಪ್ರದೇಶಗಳಲ್ಲಿ ರೈಲು ಸಂಚಾರ ಮರು ಓಡಾಟ ಆರಂಭಿಸಲಿದೆ. ಶಿವಮೊಗ್ಗ ನಗರದಿಂದ ತುಮಕೂರು ನಡುವೆ ಸಂಚರಿಸುತ್ತಿದ್ದ ರೈಲು, ಅರಸೀಕೆರೆ – SSS ಹುಬ್ಬಳ್ಳಿ ಎಕ್ಸ್ ಪ್ರೆಸ್, ಶಿವಮೊಗ್ಗ ನಗರದಿಂದ ಬೆಂಗಳೂರು ಜನ್ಮ ಶತಾಬ್ದಿ ಎಕ್ಸ್ ಪ್ರೆಸ್ ಓಡಾಟ ನಡೆಸಲಿದೆ.

ಇದೇ ಜುಲೈ 9 ರಂದು ಹರಿಹರದಿಂದ ದಾವಣಗೆರೆ, ಶಿವಮೊಗ್ಗ ನಗರದಿಂದ ಬೆಂಗಳೂರು ನಡುವೆ ಸಂಚರಿಸುವ ಜನ್ಮ ಶತಾಬ್ದಿ ಎಕ್ಸ್ ಪ್ರೆಸ್ ರೈಲು , ಹುಬ್ಬಳ್ಳಿ- ಅರಸೀಕೆರೆ ಎಕ್ಸ್ ಪ್ರೆಸ್ ಈ ಎಲ್ಲಾ ರೈಲುಗಳು ಹಿಂದೆ ಯಾವ ಸಮಯಕ್ಕೆ ಓಡಾಟ ನಡೆಸುತ್ತಿದ್ದವೋ ಅದೇ ಸಮಯಕ್ಕೆ ಓಡಾಟ ನಡೆಸಲಿರುವುದಾಗಿ ರೈಲ್ವೇ ಇಲಾಖೆಯು ತಿಳಿಸಿದೆ.

ರೈಲ್ವೇ ಸಂಬಂಧಿತ ಯಾವುದೇ ದೂರು, ಸಲಹೆ, ಮಾಹಿತಿ ಹಾಗೂ ಇನ್ನಿತರ ವಿಚಾರಣೆಗಳಿಗಾಗಿ ಸಹಾಯವಾಣಿ ಸಂಖ್ಯೆ 139 ಸಂಪರ್ಕಿಸಬಹುದಾಗಿದೆ.

ಇಂಧನದ ಮೇಲಿನ ವ್ಯಾಟ್ ತಗ್ಗಿಸಿದ ಮಹಾರಾಷ್ಟ್ರ ಸೀಎಂ

0

ಮಹಾರಾಷ್ಟ್ರದಲ್ಲಿ ಇಂಧನ ಬೆಲೆ ಅಗ್ಗವಾಗಲಿದೆ.

ವಿಶ್ವಾಸ ಮತ ಯಾಚನೆ ಬಳಿಕ ನಡೆದ ಸಂಪುಟ ಸಭೆಯಲ್ಲಿ ಶಿಂಧೆ ಸರ್ಕಾರ ಮಹತ್ವದ ಘೋಷಣೆ ಮಾಡಿದೆ. ಇಂಧನ ಮೇಲೆನ ರಾಜ್ಯ ವ್ಯಾಟ್ ಕಡಿತಗೊಳಿಸವುದಾಗಿ ಏಕನಾಥ್ ಶಂಧೆ ಹೇಳಿದ್ದಾರೆ. ಸದ್ಯ ಮುಂಬೈನಲ್ಲಿ ಪೆಟ್ರೋಲ್ ಬೆಲೆ 111.35 ರೂಪಾಯಿ ಪ್ರತಿ ಲೀಟರ್ ಹಾಗೂ ಡೀಸೆಲ್ ಬೆಲೆ 97.28 ಪ್ರತಿ ಲೀಟರ್ ಆಗಿದೆ.

ಮೇ ತಿಂಗಳಲ್ಲಿ ಮಹಾರಾಷ್ಟ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ರಾಜ್ಯ ತೆರಿಗೆಯಲ್ಲಿ ಕೊಂಚ ಕಡಿತ ಮಾಡಿತ್ತು. ಪೆಟ್ರೋಲ್ ಮೇಲೆ 1.44 ರೂಪಾಯಿ ಹಾಗೂ ಡೀಸೆಲ್ ಮೇಲೆ 2.08 ರೂಪಾಯಿ ಕಡಿತಗೊಳಿಸಲಾಗಿತ್ತು. ಮೇ. 21 ರಂದು ಕೇಂದ್ರ ಸರ್ಕಾರ ಪೆಟ್ರೋಲ್ ಮೇಲೆ 8 ರೂಪಾಯಿ ಹಾಗೂ ಡೀಸೆಲ್ ಮೇಲೆ 6 ರೂಪಾಯಿ ತೆರಿಗೆ ಕಡಿತಗೊಳಿಸಿತ್ತು.

ಮಹಾರಾಷ್ಟ್ರದ ರಾಜಕೀಯ ಗುದ್ದಾಟಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಸದ್ಯ ಶಿಂಧೆ ಸರ್ಕಾರ ಆಡಳಿತದತ್ತ ಗಮನಹರಿಸಿದೆ. ಇದರ ಮೊದಲ ಭಾಗವಾಗಿ ಇಂಧನ ಮೇಲೆ ತೆರಿಗೆ ಕಡಿತ ಮಾಡಿದೆ. ಇದೇ ವೇಳೆ ಸಿಎಂ ಸ್ಥಾನದ ಅವಕಾಶ ನೀಡಿದ ಹಾಗೂ ಹೊಸ ಸರ್ಕಾರ ರಚನೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.

ಬಿಜೆಪಿ ಶಾಸಕರ ಸಂಖ್ಯೆ ಹೆಚ್ಚಿದ್ದರೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಅವರು ಸಣ್ಣ ಪಕ್ಷದವನಾದ ನನಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ಸ್ಥಾನ ನೀಡಿದ್ದಾರೆ’ ಎಂದು ಏಕನಾಥ ಶಿಂಧೆ ಕೃತಜ್ಞತೆ ಸಲ್ಲಿಸಿದರು. ಭಾನುವಾರ ವಿಧಾನಸಭೆಯಲ್ಲಿ ಮಹಾರಾಷ್ಟ್ರದ ಸಿಎಂ ಆಗಿ ತಮ್ಮ ಮೊಟ್ಟಮೊದಲ ಭಾಷಣ ಮಾಡಿದ ಶಿಂಧೆ, ‘ದೇವೇಂದ್ರ ಫಡ್ನವೀಸ್‌ ಬಳಿ 115 ಶಾಸಕರು, ನನ್ನ ಬಳಿ ಕೇವಲ 50 ಶಾಸಕರ ಬೆಂಬಲವಿದೆ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್‌ ಶಾ ನನಗೆ ಸಿಎಂ ಪಟ್ಟನೀಡಿದ್ದು ಹಲವರ ಕಣ್ಣು ಅರಳುವಂತೆ ಮಾಡಿದೆ’ ಎಂದರು. ‘ಬಾಳಾ ಸಾಹೇಬ್‌ ಅವರ ಸಿದ್ಧಾಂತದ ಆಧಾರದ ಮೇಲೆ ಬಿಜೆಪಿ-ಶಿವಸೇನಾ ಸರ್ಕಾರ ರಾಜ್ಯದಲ್ಲಿ ಆಡಳಿತ ನಡೆಸಲಿದೆ’ ಎಂದೂ ಹೇಳಿದರು.
ಮಹಾರಾಷ್ಟ್ರ ವಿಧಾನಸಭೆಯ ವಿಶೇಷ ಅಧಿವೇಶನದ ಮೊದಲ ದಿನವಾದ ಭಾನುವಾರ ವಿಧಾನಸಭಾಧ್ಯಕ್ಷ ಚುನಾವಣೆಯಲ್ಲಿ ‘ಬಿಜೆಪಿ ಹಾಗೂ ಶಿಂಧೆ ಬಣ’ದ ಅಭ್ಯರ್ಥಿ ರಾಹುಲ್‌ ನಾರ್ವೇಕರ್‌ ಜಯಭೇರಿ ಬಾರಿಸಿದ್ದಾರೆ.

ಸ್ಪೀಕರ್‌ ಹುದ್ದೆಗೆ ಶಿವಸೇನೆಯಿಂದ ಸ್ಪರ್ಧಿಸಿದ್ದ ರಾಜನ್‌ ಸಲ್ವಿ ಅವರನ್ನು ಬಿಜೆಪಿ ರಾಹುಲ್‌ ನಾರ್ವೇಕರ್‌ ಅವರು ಮಣಿಸಿದ್ದಾರೆ.

ಜೊತೆಗೆ ರಾಹುಲ್‌, ದೇಶದಲ್ಲೇ ಅತ್ಯಂತ ಕಿರಿಯ ವಯಸ್ಸಿನ ಸ್ಪೀಕರ್‌ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ.

ಮಹಾ ಅಘಾಡಿ ಸರ್ಕಾರದಲ್ಲಿ ಸ್ಪೀಕರ್‌ ಆಗಿದ್ದ ನಾನಾ ಪಟೋಲೆ ರಾಜೀನಾಮೆ ನೀಡಿ, ರಾಜ್ಯ ಕಾಂಗ್ರೆಸ್‌ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ, ಉಂಟಾದ ಕೆಲ ಕಾನೂನು ಬಿಕ್ಕಟ್ಟುಗಳಿಂದಾಗಿ ಅಂದಿನಿಂದಲೂ ಸ್ಪೀಕರ್‌ ಹುದ್ದೆ ಖಾಲಿ ಉಳಿದಿತ್ತು. ಉಪ ಸ್ಪೀಕರ್‌ ಅವರೇ ಸ್ಪೀಕರ್‌ ಹುದ್ದೆ ಹೊಣೆ ನಿರ್ವಹಿಸುತ್ತಿದ್ದರು. ಆದರೆ ಇದೀಗ ಬಿಜೆಪಿ, ಶಿವಸೇನೆ ಬಂಡಾಯ ಶಾಸಕರ ನೂತನ ಸರ್ಕಾರ ರಚನೆಯಾದ ಹಿನ್ನೆಲೆಯಲ್ಲಿ ಹೊಸ ಸ್ಪೀಕರ್‌ ಆಯ್ಕೆ ಮಾಡಲಾಗಿದೆ. 287 ಶಾಸಕರ ಪೈಕಿ 271 ಜನರು ಭಾನುವಾರ ಮತ ಚಲಾಯಿಸಿದರು.

ಇಂಧನದ ಮೇಲಿನ ವ್ಯಾಟ್ ತಗ್ಗಿಸಿದ ಮಹಾರಾಷ್ಟ್ರ ಸೀಎಂ

0

ಮಹಾರಾಷ್ಟ್ರದಲ್ಲಿ ಇಂಧನ ಬೆಲೆ ಅಗ್ಗವಾಗಲಿದೆ.

ವಿಶ್ವಾಸ ಮತ ಯಾಚನೆ ಬಳಿಕ ನಡೆದ ಸಂಪುಟ ಸಭೆಯಲ್ಲಿ ಶಿಂಧೆ ಸರ್ಕಾರ ಮಹತ್ವದ ಘೋಷಣೆ ಮಾಡಿದೆ. ಇಂಧನ ಮೇಲೆನ ರಾಜ್ಯ ವ್ಯಾಟ್ ಕಡಿತಗೊಳಿಸವುದಾಗಿ ಏಕನಾಥ್ ಶಂಧೆ ಹೇಳಿದ್ದಾರೆ. ಸದ್ಯ ಮುಂಬೈನಲ್ಲಿ ಪೆಟ್ರೋಲ್ ಬೆಲೆ 111.35 ರೂಪಾಯಿ ಪ್ರತಿ ಲೀಟರ್ ಹಾಗೂ ಡೀಸೆಲ್ ಬೆಲೆ 97.28 ಪ್ರತಿ ಲೀಟರ್ ಆಗಿದೆ.

ಮೇ ತಿಂಗಳಲ್ಲಿ ಮಹಾರಾಷ್ಟ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ರಾಜ್ಯ ತೆರಿಗೆಯಲ್ಲಿ ಕೊಂಚ ಕಡಿತ ಮಾಡಿತ್ತು. ಪೆಟ್ರೋಲ್ ಮೇಲೆ 1.44 ರೂಪಾಯಿ ಹಾಗೂ ಡೀಸೆಲ್ ಮೇಲೆ 2.08 ರೂಪಾಯಿ ಕಡಿತಗೊಳಿಸಲಾಗಿತ್ತು. ಮೇ. 21 ರಂದು ಕೇಂದ್ರ ಸರ್ಕಾರ ಪೆಟ್ರೋಲ್ ಮೇಲೆ 8 ರೂಪಾಯಿ ಹಾಗೂ ಡೀಸೆಲ್ ಮೇಲೆ 6 ರೂಪಾಯಿ ತೆರಿಗೆ ಕಡಿತಗೊಳಿಸಿತ್ತು.

ಮಹಾರಾಷ್ಟ್ರದ ರಾಜಕೀಯ ಗುದ್ದಾಟಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಸದ್ಯ ಶಿಂಧೆ ಸರ್ಕಾರ ಆಡಳಿತದತ್ತ ಗಮನಹರಿಸಿದೆ. ಇದರ ಮೊದಲ ಭಾಗವಾಗಿ ಇಂಧನ ಮೇಲೆ ತೆರಿಗೆ ಕಡಿತ ಮಾಡಿದೆ. ಇದೇ ವೇಳೆ ಸಿಎಂ ಸ್ಥಾನದ ಅವಕಾಶ ನೀಡಿದ ಹಾಗೂ ಹೊಸ ಸರ್ಕಾರ ರಚನೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.

ಬಿಜೆಪಿ ಶಾಸಕರ ಸಂಖ್ಯೆ ಹೆಚ್ಚಿದ್ದರೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಅವರು ಸಣ್ಣ ಪಕ್ಷದವನಾದ ನನಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ಸ್ಥಾನ ನೀಡಿದ್ದಾರೆ’ ಎಂದು ಏಕನಾಥ ಶಿಂಧೆ ಕೃತಜ್ಞತೆ ಸಲ್ಲಿಸಿದರು. ಭಾನುವಾರ ವಿಧಾನಸಭೆಯಲ್ಲಿ ಮಹಾರಾಷ್ಟ್ರದ ಸಿಎಂ ಆಗಿ ತಮ್ಮ ಮೊಟ್ಟಮೊದಲ ಭಾಷಣ ಮಾಡಿದ ಶಿಂಧೆ, ‘ದೇವೇಂದ್ರ ಫಡ್ನವೀಸ್‌ ಬಳಿ 115 ಶಾಸಕರು, ನನ್ನ ಬಳಿ ಕೇವಲ 50 ಶಾಸಕರ ಬೆಂಬಲವಿದೆ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್‌ ಶಾ ನನಗೆ ಸಿಎಂ ಪಟ್ಟನೀಡಿದ್ದು ಹಲವರ ಕಣ್ಣು ಅರಳುವಂತೆ ಮಾಡಿದೆ’ ಎಂದರು. ‘ಬಾಳಾ ಸಾಹೇಬ್‌ ಅವರ ಸಿದ್ಧಾಂತದ ಆಧಾರದ ಮೇಲೆ ಬಿಜೆಪಿ-ಶಿವಸೇನಾ ಸರ್ಕಾರ ರಾಜ್ಯದಲ್ಲಿ ಆಡಳಿತ ನಡೆಸಲಿದೆ’ ಎಂದೂ ಹೇಳಿದರು.
ಮಹಾರಾಷ್ಟ್ರ ವಿಧಾನಸಭೆಯ ವಿಶೇಷ ಅಧಿವೇಶನದ ಮೊದಲ ದಿನವಾದ ಭಾನುವಾರ ವಿಧಾನಸಭಾಧ್ಯಕ್ಷ ಚುನಾವಣೆಯಲ್ಲಿ ‘ಬಿಜೆಪಿ ಹಾಗೂ ಶಿಂಧೆ ಬಣ’ದ ಅಭ್ಯರ್ಥಿ ರಾಹುಲ್‌ ನಾರ್ವೇಕರ್‌ ಜಯಭೇರಿ ಬಾರಿಸಿದ್ದಾರೆ.

ಸ್ಪೀಕರ್‌ ಹುದ್ದೆಗೆ ಶಿವಸೇನೆಯಿಂದ ಸ್ಪರ್ಧಿಸಿದ್ದ ರಾಜನ್‌ ಸಲ್ವಿ ಅವರನ್ನು ಬಿಜೆಪಿ ರಾಹುಲ್‌ ನಾರ್ವೇಕರ್‌ ಅವರು ಮಣಿಸಿದ್ದಾರೆ.

ಜೊತೆಗೆ ರಾಹುಲ್‌, ದೇಶದಲ್ಲೇ ಅತ್ಯಂತ ಕಿರಿಯ ವಯಸ್ಸಿನ ಸ್ಪೀಕರ್‌ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ.

ಮಹಾ ಅಘಾಡಿ ಸರ್ಕಾರದಲ್ಲಿ ಸ್ಪೀಕರ್‌ ಆಗಿದ್ದ ನಾನಾ ಪಟೋಲೆ ರಾಜೀನಾಮೆ ನೀಡಿ, ರಾಜ್ಯ ಕಾಂಗ್ರೆಸ್‌ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ, ಉಂಟಾದ ಕೆಲ ಕಾನೂನು ಬಿಕ್ಕಟ್ಟುಗಳಿಂದಾಗಿ ಅಂದಿನಿಂದಲೂ ಸ್ಪೀಕರ್‌ ಹುದ್ದೆ ಖಾಲಿ ಉಳಿದಿತ್ತು. ಉಪ ಸ್ಪೀಕರ್‌ ಅವರೇ ಸ್ಪೀಕರ್‌ ಹುದ್ದೆ ಹೊಣೆ ನಿರ್ವಹಿಸುತ್ತಿದ್ದರು. ಆದರೆ ಇದೀಗ ಬಿಜೆಪಿ, ಶಿವಸೇನೆ ಬಂಡಾಯ ಶಾಸಕರ ನೂತನ ಸರ್ಕಾರ ರಚನೆಯಾದ ಹಿನ್ನೆಲೆಯಲ್ಲಿ ಹೊಸ ಸ್ಪೀಕರ್‌ ಆಯ್ಕೆ ಮಾಡಲಾಗಿದೆ. 287 ಶಾಸಕರ ಪೈಕಿ 271 ಜನರು ಭಾನುವಾರ ಮತ ಚಲಾಯಿಸಿದರು.

ಮಹಾ ಅಧಿವೇಶನದಲ್ಲಿ ಸಿಎಂ ಶಿಂಧೆ ಭಾವೋದ್ವೇಗ ಭಾಷಣ

0

ವಿಧಾನಸಭೆಯಲ್ಲಿ ವಿಶ್ವಾಸ ಮತವನ್ನು ಗೆದ್ದ ಬಳಿಕ ಮುಖ್ಯಮಂತ್ರಿಯಾಗಿ ತನ್ನ ಮೊದಲ ಭಾಷಣ ಮಾಡಿದ ಏಕನಾಥ ಶಿಂದೆ ತೀವ್ರ ಭಾವೋದ್ವೇಗಕ್ಕೆ ಒಳಗಾಗಿದ್ದರು.
ತನ್ನ ಬಂಡಾಯಕ್ಕಾಗಿ ತನ್ನ ಕುಟುಂಬಕ್ಕೆ ಬೆದರಿಕೆಗಳು ಬಂದಿದ್ದವು ಎಂದ ಶಿಂದೆ ಮೃತಪಟ್ಟಿರುವ ತನ್ನಿಬ್ಬರು ಮಕ್ಕಳನ್ನು ನೆನೆದುಕೊಂಡು ದುಃಖವನ್ನು ತಡೆಯದೆ ಉಮ್ಮಳಿಸಿದರು.

ಅವರು ನನ್ನ ಕುಟುಂಬದ ಮೇಲೆ ದಾಳಿ ಮಾಡಿದ್ದರು. ನನ್ನ ತಂದೆ ಬದುಕಿದ್ದಾರೆ,ತಾಯಿ ಮೃತ ಪಟ್ಟಿದ್ದಾರೆ. ನಾನು ನನ್ನ ಹೆತ್ತವರಿಗೆ ಹೆಚ್ಚಿನ ಸಮಯ ನೀಡಲಾಗಲಿಲ್ಲ. ನಾನು ಮನೆಗೆ ಮರಳಿದಾಗ ಅವರು ಮಲಗಿರುತ್ತಿದ್ದರು,ನಾನು ಬೆಳಿಗ್ಗೆ ಮಲಗಿದ್ದಾಗ ಅವರು ಕೆಲಸಕ್ಕೆ ಹೋಗಿರುತ್ತಿದ್ದರು.

ನನ್ನ ಮಗ ಶ್ರೀಕಾಂತನಿಗೆ ಹೆಚ್ಚು ಸಮಯ ನೀಡಲು ನನಗೆ ಸಾಧ್ಯವಾಗಿರಲಿಲ್ಲ. ನನ್ನ ಇಬ್ಬರು ಮಕ್ಕಳು ಮೃತಪಟ್ಟಾಗ ಶಿವಸೇನೆಯ ಹಿರಿಯ ನಾಯಕ ಆನಂದ ನನಗೆ ಸಾಂತ್ವನ ಹೇಳಿದ್ದರು. ಬದುಕಿರುವುದರಲ್ಲಿ ಏನು ಅರ್ಥವಿದೆ ಎಂದು ನಾನು ಯೋಚಿಸುತ್ತಿದ್ದೆ. ಕಣ್ಣೀರನ್ನು ಒರೆಸಿಕೋ,ಇತರರ ಕಣ್ಣೀರನ್ನೂ ಒರೆಸು ಎಂದು ಹೇಳಿದ್ದಾರೆ.

ನಾನು ಚೇತರಿಸಿಕೊಳ್ಳಲು ನೆರವಾಗಿದ್ದರು. ಹಾಗೂ ವಿಧಾನಸಭೆಯಲ್ಲಿ ನನ್ನನ್ನು ಶಿವಸೇನೆ ನಾಯಕನನ್ನಾಗಿ ಮಾಡಿದ್ದರು ಎಂದು ಶಿಂದೆ ಹೇಳಿದ್ದಾರೆ.

ಪಿಎಸ್ಐ ನೇಮಕಾತಿ ಹಗರಣ: ಗೃಹಸಚಿವರು ರಾಜಿನಾಮೆ ಕೊಡಲಿ

0

ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ನಡೆದಿಲ್ಲ ಎಂದು ವಿಧಾನ ಮಂಡಲದ ದಾರಿ ತಪ್ಪಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ತಕ್ಷಣ ರಾಜೀನಾಮೆ ನೀಡಬೇಕು. ಈ ಪ್ರಕರಣವನ್ನು ಮುಚ್ಚಿ ಹಾಕಲು ಯಾರೆಲ್ಲಾ ರಾಜಕಾರಣಿಗಳು ಒತ್ತಡ ಹೇರಿದ್ದರೊ ಅವರೆಲ್ಲರ ಹೆಸರನ್ನು ಆತ್ಮಸಾಕ್ಷಿಯಿಂದ ಬಹಿರಂಗಪಡಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ಈ ಹಗರಣದ ಬಗ್ಗೆ ನಾನು ಮತ್ತು ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಜೊತೆಯಾಗಿ ಇಂದು ಮಾಧ್ಯಮಗೋಷ್ಠಿ ನಡೆಸಿ ಮಾತನಾಡುತ್ತೇವೆ ಎಂದು ಹೇಳಿದ್ದಾರೆ.

ಪಿಎಸ್‌ಐ ನೇಮಕಾತಿಯಲ್ಲಿ ಯಾವುದೇ ಹಗರಣ ನಡೆದಿಲ್ಲ. ಎಲ್ಲವೂ ಪಾರದರ್ಶಕವಾಗಿದೆ ಎಂದು ಗೃಹ ಸಚಿವರು ಹೇಳಿದ್ದರು. ಆದರೆ, ಇದೀಗ ಈ ಹಗರಣದಲ್ಲಿ ಐಪಿಎಸ್ ಅಧಿಕಾರಿ ಅಮ್ರಿತ್‌ ಪೌಲ್ ಬಂಧನವಾಗಿದೆ. ಅಕ್ರಮ ನಡೆದಿರುವುದನ್ನು ಗೃಹ ಸಚಿವರೇ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಅಕ್ರಮದಲ್ಲಿ ಭಾಗಿಯಾಗಿರುವ ಆರೋಪಿ ಮಾಗಡಿಯ ಅಭ್ಯರ್ಥಿಯನ್ನು ವಿಚಾರಣೆ ಮಾಡದಂತೆ ಯಾರು ಬೆಂಬಲವಾಗಿ ನಿಂತರು. ಆ ಅಭ್ಯರ್ಥಿಯನ್ನು ಬಿಟ್ಟು ಕಳುಹಿಸಿದ್ದು ಯಾಕೆ? ಬಳಿಕ 20 ದಿನ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡಿ ಮತ್ತೆ ಆತನನ್ನು ವಿಚಾರಣೆಗೆ ಕರೆತಂದದ್ದು, ಅದರಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂಬುದು ಬಹಿರಂಗವಾಗಬೇಕು ಎಂದು ಆಗ್ರಹಿಸಿದ್ದಾರೆ.

ಈ ಹಗರಣ ಮುಚ್ಚಿ ಹಾಕಲು ಸರ್ಕಾರ ದೊಡ್ಡ ಪ್ರಯತ್ನ ನಡೆಸಿತು. ಗೃಹ ಸಚಿವರು ಹಾಗೂ ದೊಡ್ಡ ಅಧಿಕಾರಿಗಳ ಭಾಗಿಯ ಬಗ್ಗೆ ನಾವು ಆರೋಪ ಮಾಡಿದೆವು. ಅಕ್ರಮವಾಗಿ ಹಣ್ಣು ತಿಂದವರನ್ನು ಮಾತ್ರ ಹಿಡಿದ್ದಾರೆ. ಅಕ್ರಮವಾಗಿ ಹಣ್ಣು ಮಾರಿದವರನ್ನು ಹಿಡಿಯಲಿಲ್ಲ. ಈ ಪ್ರಕರಣದಿಂದ ಇಡೀ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ಬರುವ ಕೆಲಸವನ್ನು ಸರ್ಕಾರ ಮಾಡಿದೆ ಎಂದು ತಿಳಿಸಿದ್ದಾರೆ.

ಭಯೋತ್ಪಾದಕರನ್ನ ಹೆಡೆಮುರಿ ಕಟ್ಟಿದ ಗ್ರಾಮಸ್ಥರು

0

ಭಾನುವಾರ ಎಲ್‌ಇಟಿಯ ಇಬ್ಬರು ಭಯೋತ್ಪಾದಕರನ್ನು ಅಲ್ಲಿನ ಗ್ರಾಮಸ್ಥರೇ ಬಂಧಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.

ಜಮ್ಮು ಹಾಗೂ ಕಾಶ್ಮೀರದಲ್ಲಿ ಸೈನಿಕರಷ್ಟೇ ಉಗ್ರರನ್ನು ಬಂಧಿಸಲು ಸಾಧ್ಯವಾಗುತ್ತಿತ್ತು.ಆದರೆ, ಈಗ ರಿಯಾಸಿ ಜಿಲ್ಲೆಯಲ್ಲಿ ಇಬ್ಬರು ಉಗ್ರರನ್ನು ಗ್ರಾಮಸ್ಥರೇ ಬಂಧಿಸಿದ್ದಾರೆ.

ತಮ್ಮಿಂದ ಉಗ್ರರನ್ನು ಬಂಧಿಸಲು ಹೇಗೆ ಸಾಧ್ಯವಾಯಿತು ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಗ್ರಾಮಸ್ಥನೊಬ್ಬರು, ನನಗೆ ನನ್ನ ಅಣ್ಣನಿಂದ ಕರೆ ಬಂದಿತ್ತು. ಇಬ್ಬರು ಉಗ್ರರು ತನ್ನನ್ನು ಕೊಲ್ಲಲು ಬರುತ್ತಿರುವುದಾಗಿ ತಿಳಿಸಿದ್ದ. ತಕ್ಷಣ ಆತ ಹೇಳಿದ ಪ್ರದೇಶಕ್ಕೆ ನಾನು ನನ್ನ ಸೋದರ ಸಂಬಂಧಿಗಳೊಂದಿಗೆ ಹೋದೆವು. ಆ ಸಂದರ್ಭ ಅಲ್ಲಿ ಇಬ್ಬರು ಎಲ್‌ಇಟಿ ಭಯೋತ್ಪಾದಕರು ಮಲಗಿರುವುದು ಕಂಡುಬಂದಿತು. ನಾವೆಲ್ಲಾ ಸೇರಿ ಅವರಿಬ್ಬರನ್ನು ಸೆರೆ ಹಿಡಿಯಲು ಬೆಳಗ್ಗೆಯವರೆಗೂ ಕಾದು ಕುಳಿತಿದ್ದೆವು ಎಂದು ವಿವರಿಸಿದ್ದಾರೆ.

ಅವರು ಮಲಗಿದ್ದ ಸಂದರ್ಭದಲ್ಲಿ ಅವರ ಶಸ್ತ್ರಾಸ್ತ್ರಗಳಿದ್ದ ಬ್ಯಾಗ್ ಅನ್ನು ನಾವು ಹೊರತೆಗೆದೆವು. ಈ ವೇಳೆ ಅವರಲ್ಲಿ ಒಬ್ಬ ಎಚ್ಚರಗೊಂಡು ಓಡಿ ಹೋಗಲು ಪ್ರಯತ್ನಿಸಿದರು. ಆದರೆ ನಾವು ಅವರನ್ನು ಹಿಡಿದು, ಹಗ್ಗಗಳಿಂದ ಕಟ್ಟಿ ಹಾಕಿದೆವು. ತಕ್ಷಣವೇ ಪೊಲೀಸರಿಗೆ ಕರೆ ಮಾಡಿದೆವು. ಕೆಲವೇ ಹೊತ್ತಿನಲ್ಲಿ ಪೊಲೀಸರು ಸ್ಥಳಕ್ಕೆ ಬಂದು, ಉಗ್ರರನ್ನು ಅವರ ಕೈಗೆ ಒಪ್ಪಿಸಿದೆವು ಎಂದು ಮಾಹಿತಿ ನೀಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಜನರು ಬದುಕಲು ಹೆದರುವಂತಹ ಪರಿಸ್ಥಿತಿ ಇತ್ತು.ಆದರೆ ಈಗ ಅದಕ್ಕೆಲ್ಲಾ ವ್ಯತಿರಿಕ್ತ ಎನ್ನುವಂತೆ ರಿಯಾಸಿ ಜಿಲ್ಲೆಯಲ್ಲಿ ನಡೆದ ಐಇಡಿ ಸ್ಫೋಟದ ರೂವಾರಿ ಲಷ್ಕರ್ ಮಾಂಡರ್ ತಾಲಿಬ್ ಹುಸೇನ್‌ನನ್ನು ಗ್ರಾಮಸ್ಥರೇ ಸದೆಬಡೆದು ಬಳಿಕ ಟುಕ್ಸಾನ್‌ನಲ್ಲಿ ಭದ್ರತಾ ಪಡೆಗಳಿಗೆ ಒಪ್ಪಿಸಿದ್ದಾರೆ. ಈತನ ಜೊತೆಗೆ ಮತ್ತೊಬ್ಬ ಉಗ್ರ ಫೈಝುಲ್ ಅಹಮದ್ ದಾರ್‌ನನ್ನು ಗ್ರಾಮಸ್ಥರು ಬಂಧಿಸಿದ್ದಾರೆ.

ಉಗ್ರರ ಹತ್ತಿರ 2 ಎಕೆ 47 ರೈಫಲ್‌ಗಳು, 7 ಗ್ರೆನೇಡ್‌ಗಳು, ಮತ್ತು ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.ಈಗ ಜಮ್ಮುವಿನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಗ್ರಾಮಸ್ಥರ ಧೈರ್ಯ, ಸಾಹಸವನ್ನು ಶ್ಲಾಘಿಸಿ, 5 ಲಕ್ಷ ರೂ. ಬಹುಮಾನ ಘೋಷಣೆ ಮಾಡಿದ್ದಾರೆ.

ಭಾರತ ಮಹಿಳಾತಂಡಕ್ಕೆ ಏಕದಿನ ಕ್ರಿಕೆಟ್ ಸರಣಿ ಗೆಲುವು

0

ಭಾರತ ಮತ್ತು ಶ್ರೀಲಂಕಾ ಮಹಿಳಾ ಕ್ರಿಕೆಟ್ ತಂಡದ ನಡುವಿನ ದ್ವಿತೀಯ ಏಕದಿನ ಪಂದ್ಯವನ್ನು 10 ವಿಕೆಟ್ ಗಳಿಂದ ಗೆದ್ದ ಭಾರತ ಮಹಿಳಾ ತಂಡ 3 ಪಂದ್ಯಗಳ ಸರಣಿ ತನ್ನದಾಗಿಸಿಕೊಂಡಿದೆ.

ಕಳೆದ ಪಂದ್ಯವನ್ನೂ ಭಾರತ ಗೆದ್ದುಕೊಂಡಿತ್ತು. ಇದೀಗ ಎರಡನೇ ಪಂದ್ಯದಲ್ಲೂ ಗೆಲುವು ಸಾಧಿಸಿದೆ. ಆದ್ದರಿಂದ ಹರ್ಮನ್ ಪ್ರೀತ್ ಕೌರ್ ಪಡೆ ಇನ್ನೂ ಪಂದ್ಯ ಬಾಕಿಯಿರುವಾಗಲೇ ಸರಣಿ ತನ್ನದಾಗಿಸಿಕೊಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಲಂಕಾ 50 ಓವರ್ ಗಳಲ್ಲಿ 173 ರನ್ ಗಳಿಗೆ ಆಲೌಟ್ ಆಗಿತ್ತು. ಭಾರತದ ಪರ ರೇಣುಕಾ ಸಿಂಗ್ 4 ವಿಕೆಟ್ ಕಬಳಿಸಿದರೆ ಮೇಘನಾ ಸಿಂಗ್ ಮತ್ತು ದೀಪ್ತಿ ಶರ್ಮಾ ತಲಾ 2 ವಿಕೆಟ್ ತಮ್ಮದಾಗಿಸಿಕೊಂಡರು. ಈ ಮೊತ್ತ ಬೆನ್ನತ್ತಿದ ಭಾರತ 25.4 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 174 ರನ್ ಗಳಿಸಿತು. ಶಫಾಲಿ ವರ್ಮ ಅಜೇಯ 71, ಸ್ಮೃತಿ ಮಂಥನಾ ಅಜೇಯ 94 ರನ್ ಗಳಿಸಿದರು.