Tuesday, March 17, 2026
Tuesday, March 17, 2026
Home Blog Page 1506

ಬಿಬಿಎಂಪಿ ವಾರ್ಡ್ ವಿಂಗಡಣೆ ಪುಟ್ಟ ಬದಲಾವಣೆಯೊಂದಿಗೆ ಅಧಿಕೃತ ಪ್ರಕಟಣೆ

0

ಎಲೆಕ್ಷನ್​ ನಡೆಸಲು ಕೋರ್ಟ್​ ಆದೇಶ ನೀಡುತ್ತಿದ್ದಂತೆ ಸರ್ಕಾರ ಹುಮ್ಮಸ್ಸಿನಿಂದ ಕೆಲಸ ಆರಂಭಿಸಿದೆ.

ಇದೀಗ ಬಿಬಿಎಂಪಿ ವಾರ್ಡ್ ಮರು ವಿಂಗಡಣೆ ಮಾಡಿ ಸರ್ಕಾರ ಅಂತಿಮ ಆದೇಶ ಪ್ರಕಟಿಸಿದೆ. 198 ಇದ್ದ ವಾರ್ಡ್ ಗಳನ್ನು ಡಿಲಿಮಿಟೇಷನ್ ಮಾಡಿ‌ 243 ವಾರ್ಡ್​ಗಳಾಗಿ ವಿಂಗಡಿಸಿದೆ.

ಸಾರ್ವಜನಿಕ ವಲಯದಿಂದ ಬಂದಿದ್ದ 2,500ಕ್ಕೂ ಅಧಿಕ ಆಕ್ಷೇಪಣಾ ಅರ್ಜಿ ವಿಲೇವಾರಿ ಮುಕ್ತಾಯಗೊಂಡಿದೆ. ಸಾರ್ವಜನಿಕರಿಂದ ಸಲಹೆ, ಸೂಚನೆಗಳನ್ನು ಅಳವಡಿಸಿ ಸಣ್ಣ ಪುಟ್ಟ ಬದಲಾವಣೆ ಮಾಡಿ ಡಿ ಲಿಮಿಟೇಷನ್ ಮಾಡಿ ರಾಜ್ಯ ಸರ್ಕಾರ ಅಧಿಕೃತ ಪ್ರಕಟಣೆ ಹೊರಡಿಸಿದೆ.

ನಟ ದಿವಂಗತ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್​ ಅವರಿಗೆ ಮತ್ತೊಮ್ಮೆ ಸರ್ಕಾರ ಗೌರವ ಸಲ್ಲಿಸಿದೆ. ಬಿಬಿಎಂಪಿ ವಾರ್ಡ್​ಗಳ ಮರು ವಿಂಗಡಣೆ ಮಾಡಿ, ವಾರ್ಡ್​ ನಂಬರ್​ 55ಕ್ಕೆ ದಿವಂಗತ ನಟ ಪುನೀತ್ ರಾಜ್ ಕುಮಾರ್ ಹೆಸರು ನಾಮಕರಣ ಮಾಡಿದೆ.

ಸರ್ಕಾರ 29 ಜನವರಿ 2021ರಲ್ಲಿ ಡಿಲಿಮಿಟೇಷನ್ ಕಮಿಟಿ ರಚಿಸಿತ್ತು ಈ ಸಮಿತಿಯಿಂದ 09 ಜೂನ್​ 2022 ರಂದು ಸರ್ಕಾರಕ್ಕೆ ವಾರ್ಡ್ ಮರುವಿಂಗಡಣಾ ಪಟ್ಟಿ ಸಲ್ಲಿಕೆ ಮಾಡಿತ್ತು. ಬಳಿಕ‌ ಸಾರ್ವಜನಿಕರ ಸಲಹೆ ಸೂಚನೆ ಮೇರೆಗೆ 15 ದಿನಗಳ ಕಾಲವಕಾಶ ನೀಡಿದ್ದ ಸರ್ಕಾರ ಇದೀಗ ಅಂತಿಮವಾಗಿ ಬೆಂಗಳೂರು ವಾರ್ಡ್ ಗಳ ಸಂಖ್ಯೆ 243ಕ್ಕೆ ಏರಿಕೆ ಮಾಡಿ ಆದೇಶ ಹೊರಡಿಸಿದೆ.

ರಾಜ್ಯ ಪತ್ರದಲ್ಲಿ 2011ರ ಜನಗಣತಿ ಪ್ರಕಾರ ಡಿ ಲಿಮಿಟೇಷನ್ ಮಾಡಿರುವುದಾಗಿ ಸರ್ಕಾರ ಹೇಳಿತ್ತು. ಬಿಬಿಎಂಪಿ ಅಧಿನಿಯಮ‌ 2020ರ ಕಲಂ 7ರ ಅಡಿಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ವಾರ್ಡ್ ವಿಂಗಡಣೆಯಾಗಿದೆ‌.

ನೂತನ ಸಂಸತ್ ಭವನದ ಅಶೋಕ ಚಕ್ರ ಲಾಂಛನ: ಶಿಲ್ಪಿಯ ಸ್ಪಷ್ಟನೆ

0

ನವದೆಹಲಿಯಲ್ಲಿ ನಿರ್ಮಿಸಲಾಗಿರುವ ಸಂಸತ್ ಭವನದ ಮೇಲೆ ಬೃಹತ್ ರಾಷ್ಟ್ರೀಯ ಲಾಂಛನವನ್ನು ಪ್ರಧಾನಿ ನರೇಂದ್ರ ಮೋದಿಯವರು ಅನಾವರಣಗೊಳಿಸಿದ್ದಾರೆ.

ಲಾಂಛನದಲ್ಲಿರುವ ಸಿಂಹಗಳ ಮುಖಭಾವದ ಕುರಿತು ಪ್ರತಿಪಕ್ಷಗಳ ನಾಯಕರು ತಕರಾರು ತೆಗೆದಿದ್ದಾರೆ.
ಸಿಂಹಗಳ ಮುಖಭಾವದಲ್ಲಿ ಅತಿಯಾದ ವ್ಯಗ್ರತೆ ಇದೆ ಎಂಬುದು ಪ್ರತಿಪಕ್ಷಗಳ ನಾಯಕರ ಆರೋಪವಾಗಿದೆ.

ಅಲ್ಲದೆ ರಾಷ್ಟ್ರೀಯ ಲಾಂಛನ ಅನಾವರಣಗೊಳಿಸುವ ಸಂದರ್ಭದಲ್ಲಿ ಪ್ರತಿಪಕ್ಷಗಳನ್ನು ಆಹ್ವಾನಿಸಿಲ್ಲ ಎಂಬ ಆಕ್ಷೇಪವೂ ಕೇಳಿ ಬಂದಿದೆ.

ಇದರ ನಡುವೆ ಲಾಂಛನ ನಿರ್ಮಿಸಿರುವ 49 ವರ್ಷದ ಶಿಲ್ಪಿ ಸುನಿಲ್ ಡಿಯೋರಾ ಈಗ ವಿವಾದದ ಕುರಿತು ಸ್ಪಷ್ಟನೆ ನೀಡಿದ್ದು, ಅಲ್ಲಿರುವ ಸಿಂಹಗಳ ಗಾತ್ರಕ್ಕೂ ನೂತನ ಸಂಸತ್ ಭವನದ ಮೇಲಿನ ಬೃಹತ್ ಲಾಂಛನದ ಸಿಂಹಗಳ ಗಾತ್ರಕ್ಕೂ ಭಾರಿ ವ್ಯತ್ಯಾಸವಿದ್ದು, ಆದರೂ ಕೂಡ ಸಿಂಹಗಳ ಮುಖಭಾವದಲ್ಲಿ ಸಾಮ್ಯತೆ ಕಾಪಾಡಿಕೊಳ್ಳಲಾಗಿದೆ.

ತದ್ರೂಪು ಬರುವಂತೆ ನೋಡಿಕೊಳ್ಳಲಾಗಿದ್ದು, ಮನಬಂದಂತೆ ಯಾವುದೇ ಮಾರ್ಪಾಡು ಮಾಡಿಲ್ಲ ಎಂದು ಹೇಳಿದ್ದಾರೆ.

ಸಂಸತ್ ಮೇಲೆ ನಿರ್ಮಾಣವಾಗಿರುವ ಲಾಂಛನದಲ್ಲಿನ ಸಿಂಹಗಳು ವಾರಣಾಸಿ ಬಳಿಯ ಸಾರಾನಾಥದಲ್ಲಿರುವ ಅಶೋಕ ಸ್ಥಂಭದ ಮೇಲಿನ ಸಿಂಹಗಳನ್ನೇ ಹೋಲುತ್ತವೆ ಎಂದು ತಿಳಿಸಿದ್ದಾರೆ.

ಅನುಕಂಪ ಆಧಾರದ ನೌಕರಿ ಕೇಂದ್ರ ಸರ್ಕಾರದನಿಯಮ ಸುಧಾರಣೆ

0

ಅನುಕಂಪದ ಆಧಾರದ ಮೇಲೆ ನಡೆಯಲಿರುವ ನೇಮಕಾತಿಗಳ ಕುರಿತು ಸರಕಾರ ಮಹತ್ವದ ಘೋಷಣೆ ಮಾಡಿದೆ. ವಾಸ್ತವವಾಗಿ, ಕೇಂದ್ರ ಗೃಹ ಸಚಿವಾಲಯವು ಅನುಕಂಪದ ನೇಮಕಾತಿ ನೀತಿಯಲ್ಲಿ ದೊಡ್ಡ ಬದಲಾವಣೆಯನ್ನ ಮಾಡಿದೆ.

ಗೃಹ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ, ‘ಸರ್ಕಾರಿ ನೌಕರನ ಅವಲಂಬಿತರಿಗೆ ಅನುಕಂಪದ ನೇಮಕಾತಿಯನ್ನ ಒದಗಿಸುವುದು ಅನುಕಂಪದ ನೇಮಕಾತಿ ಯೋಜನೆಯ ಉದ್ದೇಶವಾಗಿದೆ. ಸೇವೆಯಲ್ಲಿ ಮರಣ ಹೊಂದಿದ ಅಥವಾ ವೈದ್ಯಕೀಯ ಆಧಾರದ ಮೇಲೆ ನಿವೃತ್ತಿ ಹೊಂದಿದ ನೌಕರರು, ಯಾರ ಕುಟುಂಬಗಳು ಅಸಹಾಯಕತೆ ಹೊಂದಿದ್ದರೂ ಮತ್ತು ಜೀವನೋಪಾಯವಿಲ್ಲದೇ ಉಳಿದಿರುವವರು, ಅಂತಹ ಅವಲಂಬಿತರು ಇದರಿಂದ ಪ್ರಯೋಜನ ಪಡೆಯುತ್ತಾರೆ.

ಗೃಹ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ, ಸಂಬಂಧಪಟ್ಟ ಸರ್ಕಾರಿ ನೌಕರನ ಕುಟುಂಬವನ್ನ ಹೊರಗೆ ಕರೆತರುವುದು ಈ ನಿರ್ಧಾರದ ಉದ್ದೇಶವಾಗಿದೆ. ಹೊಸ ಮಾರ್ಗಸೂಚಿಗಳು ಹೆಚ್ಚು ಪಾರದರ್ಶಕತೆಯನ್ನ ಮತ್ತು ಸಹಾನುಭೂತಿಯ ನೇಮಕಾತಿ ಪ್ರಕ್ರಿಯೆಯನ್ನು ವಸ್ತುನಿಷ್ಠವಾಗಿಸುತ್ತದೆ.

ಸರ್ಕಾರದ ಈ ದೊಡ್ಡ ನಿರ್ಧಾರದ ನಂತರ ಇದೀಗ ಕೇಂದ್ರ ಅರೆಸೇನಾ ಪಡೆಗಳ ನೌಕರರ ಕುಟುಂಬಗಳಿಗೂ ಉದ್ಯೋಗ ಸಿಗಲಿದೆ.
ಇದಕ್ಕಾಗಿ MHA ಅನುಕಂಪದ ನೇಮಕಾತಿಗಳ ಪರಿಷ್ಕೃತ ನೀತಿಯನ್ನ ಅನುಮೋದಿಸಿದೆ.
ಈ ತಿದ್ದುಪಡಿಗೆ ಒಪ್ಪಿಗೆ ದೊರೆತ ನಂತರ ಸೇವಾವಧಿಯಲ್ಲಿ ಪ್ರಾಣ ಕಳೆದುಕೊಂಡ ನೌಕರರ ಬಂಧುಗಳಿಗೆ ಹಾಗೂ ವೈದ್ಯಕೀಯ ಕಾರಣದಿಂದ ನಿವೃತ್ತಿಯಾಗುವ ನೌಕರರ ಬಂಧುಗಳಿಗೆ ಅನುಕಂಪದ ನೇಮಕಾತಿಯನ್ನು ನೀಡಲಾಗುವುದು.

ಸರ್ಕಾರದ ಈ ಹೊಸ ನೀತಿಯಿಂದ ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಉದ್ಯೋಗಿಗಳಿಗೆ ಅನುಕೂಲವಾಗಲಿದೆ.

ಭಯೋತ್ಪಾದಕರ ದಾಳಿ, ಘರ್ಷಣೆ ಇತ್ಯಾದಿಗಳಲ್ಲಿ ಪ್ರಾಣ ಕಳೆದುಕೊಳ್ಳುವ ಕೇಂದ್ರ ಅರೆಸೇನಾ ಪಡೆಗಳ ಸಿಬ್ಬಂದಿಯನ್ನೂ ಪರಿಷ್ಕೃತ ನೀತಿಯಲ್ಲಿ ಸೇರಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಈ ನಿರ್ಧಾರದಿಂದ ಸೈನಿಕರ ಕುಟುಂಬಗಳಿಗೆ ದೊಡ್ಡ ಪರಿಹಾರ ನೀಡಿದೆ.

ರಿಷಿ ಸುನಕ್ ಮೊದಲ ಸುತ್ತಿನ ಮತದಾನದಲ್ಲಿ ಮುನ್ನಡೆ

0

ಬ್ರಿಟನ್ ಪ್ರಧಾನಿ ಅಭ್ಯರ್ಥಿ ರೇಸ್ ನಲ್ಲಿ ಮಾಜಿ ಚಾನ್ಸಿಲರ್ ರಿಷಿ ಸುನಕ್ ಅವರು ಮೊದಲ ಸುತ್ತಿನ ಮತದಾನದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಭಾರತೀಯ ಮೂಲದ ಅಭ್ಯರ್ಥಿ, ಅಟಾರ್ನಿ ಜನರಲ್ ಸುಯೆಲ್ಲಾ ಬ್ರಾವರ್ಮನ್, ಟ್ರೇಡ್ ಸಚಿವ ಪೆನ್ನಿ ಮೋರ್ಡೌಂಟ್ (67 ಮತಗಳು) ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ (50 ಮತಗಳು) ಮಾಜಿ ಸಚಿವ ಕೆಮಿ ಬಡೆನೊಚ್ (40 ಮತಗಳು) ಹಾಗೂ ಟಾಮ್ ತುಗೇಂಧತ್ (37 ಮತಗಳು) ರೇಸ್ ನಲ್ಲಿದ್ದಾರೆ.

ಕನ್ಸರ್ವೇಟೀವ್ ಪಕ್ಷದ ಸಂಸದರ ಪೈಕಿ ಅತಿ ಹೆಚ್ಚಿನ ಸಂಖ್ಯೆಯ ಮತಗಳು ಅಂದರೆ 88 ಮತಗಳು ರಿಷಿ ಸುನಕ್ ಪರವಾಗಿ ಚಲಾವಣೆಯಾಗಿದ್ದು, ಮೊದಲ ಹಂತದ ಮತದಾನದ ಬಳಿಕ ಅಭ್ಯರ್ಥಿಗಳ ಸಂಖ್ಯೆ 8 ರಿಂದ 6 ಕ್ಕೆ ಇಳಿಕೆಯಾಗಿದೆ.

ಪ್ರಧಾನ ಅಭ್ಯರ್ಥಿಗಳ ಪೈಕಿ ರಿಷಿ ಸುನಕ್ ಅವರು ನಿರಂತರತೆ ಕಾಯ್ದುಕೊಂಡಿದ್ದು, ಮೊದಲ ಹಂತದ ಮತದಾನದ ಫಲಿತಾಂಶದ ಬಗ್ಗೆ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್ ಸಂತಸ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರೆದಲ್ಲಿ ಪ್ರಧಾನಿ ಹುದ್ದೆಯಲ್ಲಿ ಅಂತಿಮವಾಗಿ ಇರಲಿರುವ ಮೂವರು ಅಭ್ಯರ್ಥಿಗಳ ಪೈಕಿ ರಿಷಿ ಸುನಕ್ ಕೂಡಾ ಒಬ್ಬರಾಗಿರಲಿದ್ದಾರೆ.

ಹೊಸದಾಗಿ ನೇಮಕಗೊಂಡಿರುವ ಚಾನ್ಸಿಲರ್ ನದೀಮ್ ಜಹಾವಿ ಹಾಗೂ ಮಾಜಿ ಕ್ಯಾಬಿನೆಟ್ ಸಚಿವ ಜೆರೆಮಿ ಹಂಟ್ ಕನಿಷ್ಠ ಅಗತ್ಯವಿರುವ 30 ಸಂಸದರ ಬೆಂಬಲವನ್ನು ಪಡೆಯುವಲ್ಲಿ ವಿಫಲರಾಗಿದ್ದು ಪ್ರಧಾನಿ ರೇಸ್ ನಿಂದ ಹೊರಬಂದಿದ್ದಾರೆ.

ಆನ್ ಲೈನ್ ನಲ್ಲೇ ರಾಜ್ಯ ನೌಕರರಿಗೆ ವಿಮೆಸಾಲ ಮಂಜೂರಾತಿ

0

ರಾಜ್ಯ ಸರ್ಕಾರದಿಂದ ಸರ್ಕಾರಿ ನೌಕರರ ಜೀವ ವಿಮಾ ಪಾಲಿಸಿಗಳ ಮೇಲೆ ಸಾಲ ಮಂಜೂರಾತಿ ಮತ್ತು ಎಲ್ಲಾ ಬಗೆಯ ಹಕ್ಕು ಪ್ರಕರಣಗಳನ್ನು ಆನ್ ಲೈನ್ ಮೂಲಕ ಇತ್ಯರ್ಥದ ವ್ಯವಸ್ಥೆಯನ್ನು ಜಾರಿಗೊಳಿಸಿದೆ.

ಈ ಬಗ್ಗೆ ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ನಿರ್ದೇಶಕರು ಅಧಿಕೃತ ಆದೇಶ ಹೊರಡಿಸಿದ್ದು, ಇಲಾಖೆಯ ಗಣಕೀಕರಣ ಕಾರ್ಯ ಪ್ರಗತಿಯಲ್ಲಿದೆ. ಎಲ್ಲಾ ಬಗೆಯ ಹಕ್ಕು ಪ್ರಕರಣಗಳನ್ನು ಇತ್ಯರ್ಥ ಪಡಿಸುವ ಸಾಫ್ಟ್ ವೇರ್ ನ ಅಭಿವೃದ್ಧಿಕಾರ್ಯ ಮುಗಿದಿದೆ. ಅಲ್ಲದೇ ಈ ಸಾಫ್ಟ್ ವೇರ್ ಬಳಕೆ ಬಗ್ಗೆ ತರಬೇತಿ ಕೂಡ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನೂ ಜೀವ ವಿಮಾ ಪಾಲಿಸಿಗಳ ಮೇಲೆ ಸಾಲ ಮಂಜೂರಾತಿ ಮತ್ತು ಎಲ್ಲಾ ಬಗೆಯ ಹಕ್ಕು ಪ್ರಕರಣಗಳನ್ನು ಕಡ್ಡಾಯವಾಗಿ ಆನ್ ಲೈನ್ ಮೂಲಕ ಇತ್ಯರ್ಥಗೊಳಿಸಲು ಪ್ರಾಯೋಗಿಕ ಪರೀಕ್ಷೆಗಾಗಿ ಬೆಂಗಳೂರು ನಗರ, ಬೆಳಗಾವಿ, ಕೊಡಗು, ಧಾರವಾಡ, ಮೈಸೂರು, ಯಾದಗಿರಿ ಮತ್ತು ಚಿಕ್ಕಮಗಳಊರು ಜಿಲ್ಲೆಯಲ್ಲಿ ಜಾರಿಗೆ ತರಲಾಗಿದೆ.

ತುಂಬಿ ಹರಿಯುತ್ತಿರುವ ತುಂಗಭದ್ರೆ

0

ತುಂಗಭದ್ರಾ ಭರ್ತಿಯಾಗಿ ನೀರನ್ನು ಹೊರ ಬಿಡಲಾಗಿದೆ.ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರೆದಿದೆ. ಶ್ರೀ ಗುರು ರಾಯರ ಆರಾಧನೆ ಹತ್ತಿರದಲ್ಲಿ ಇದ್ದು ಪ್ರತಿ ವರ್ಷದಂತೆ ಈ ಬಾರಿ ಮುಂಚಿತವಾಗಿ ಆಶೀರ್ವದಿಸಲು ಮಂತ್ರಾಲಯದ ಕಡೆ ಹರಿಯುತ್ತಿರುವ ದೃಶ್ಯ ಪ್ರವಾಸಿಗರ ಆಕರ್ಷಣೆಯಾಗಿದೆ.

ರಾಜ್ಯದ ಮೂರು ಜಿಲ್ಲೆಗಳು ಮತ್ತು ನೆರೆಯ ಆಂಧ್ರ-ತೆಲಂಗಾಣದ ಜೀವನಾಡಿ ತುಂಗಭದ್ರಾ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಮಂಗಳವಾರ ನದಿ ಮತ್ತು ಕಾಲುವೆಗೆ ನೀರು ಹರಿಸಲಾಯಿತು.ತುಂಗಭದ್ರ ಮಂಡಳಿ ಕಾರ್ಯದರ್ಶಿ ಶ್ರೀ ಜಿ.ನಾಗಮೋಹನ್ ಪೂಜೆ ನೆರವೇರಿಸಿದ ಬಳಿಕ ಜಲಾಶಯದ 5 ಕ್ರಸ್ಟ್ ಗೇಟ್‌ಗಳ ಮೂಲಕ ನದಿಗೆ ನೀರು ಹರಿಸಲಾಯಿತು.ಒಳ ಹರಿವು ಹೆಚ್ಚಾದ ಕಾರಣ ಗುರುವಾರ ಪೂರ್ಣ ಪ್ರಮಾಣದ ನೀರನ್ನು ಹೋರಬಿಡಲಾಗಿದೆ.

ಹೊಸಪೇಟೆಯ ತುಂಗಭದ್ರಾ ಜಲಾಶಯ ಸಂಪೂರ್ಣ ತುಂಬಿರುವುದರಿಂದ ನದಿಗೆ ಅಪಾರ ಪ್ರಮಾಣದ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ವಿಶ್ವಪ್ರಸಿದ್ಧ ಹಂಪಿ ಸ್ಮಾರಕಗಳು ಮುಳುಗಿವೆ. ಹತ್ತಿರದ ಹಂಪಿಯ ಪುರಂದರ ಮಂಟಪ, ವಿಜಯನಗರ ಕಾಲದ ಕಾಲು ಸೇತುವೆ, ರಾಮ ಲಕ್ಷ್ಮಣ ದೇವಸ್ಥಾನ, ಚಕ್ರತೀರ್ಥ ಸ್ನಾನಘಟ್ಟ ತುಂಗಭದ್ರಾ ನದಿ ಪಾತ್ರಕ್ಕೆ ಹೊಂದಿಕೊಂಡಿದ್ದು, ಜಲಾಶಯದ ಒಟ್ಟು 33 ಕ್ರಸ್ಟ್ ಗೇಟ್ ಗಳ ಪೈಕಿ 28 ಗೇಟ್ ಗಳಿಂದ ನದಿಗೆ ಒಂದು ಲಕ್ಷ ಕ್ಯುಸೆಕ್ ಗೂ ಅಧಿಕ ನೀರು ನದಿಗೆ ಹರಿಸಲಾಗುತ್ತಿದೆ. 105.788 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ದ ಜಲಾಶಯ ಈಗಾಗಲೇ ಸಂಪೂರ್ಣ ಭರ್ತಿಯಾಗಿದೆ. ಒಂದು ಲಕ್ಷ ಕ್ಯುಸೆಕ್ ಗೂ ಅಧಿಕ ಒಳಹರಿವು ಬರುತ್ತಿದೆ ಎಂದು ತಿಳಿದುಬಂದಿದೆ. ಒಂದೂವರೆ ಲಕ್ಷ ಕ್ಯುಸೆಕ್ ನೀರು ಯಾವುದೇ ಕ್ಷಣದಲ್ಲೂ ನದಿಗೆ ಹರಿಸಲಾಗುವುದು. ಜನ ಮುನ್ನೆಚ್ಚರಿಕೆ ವಹಿಸಬೇಕೆಂದು ಜಲಾಶಯ ಆಡಳಿತ ಮಂಡಳಿ ತಿಳಿಸಿರುತ್ತಾರೆ. ತುಂಗಭದ್ರಾ ಜಲಾಶಯದಿಂದ ನದಿಗೆ ಒಂದು ಲಕ್ಷ ಕ್ಯುಸೆಕ್ ನೀರು ಹರಿಸುತ್ತಿರುವುದರಿಂದ ಕಂಪ್ಲಿ-ಗಂಗಾವತಿ ಸೇತುವೆ ಮುಳುಗುವ ಹಂತಕ್ಕೆ ಬಂದಿದ್ದು, ಸಾರ್ವಜನಿಕ ಸಂಚಾರ ನಿರ್ಬಂಧಿಸಲಾಗಿದೆ. ವಾಹನಗಳು ಬುಕ್ಕಸಾಗರ-ಕಡೇಬಾಗಿಲು ಹೊಸ ಸೇತುವೆ ಮೂಲಕ ಸಂಚರಿಸುತ್ತಿವೆ.
600 ವರ್ಷಗಳ ಹಿಂದೆ ನಿರ್ಮಿಸಿರುವ ಪುರಂದರ ಮಂಟಪದ ಕಂಬವನ್ನು ಎಎಸ್‌ಐ ನಿಯಮಿತ ನಿರ್ವಹಣೆಗೆ ವಹಿಸುತ್ತದೆ. ಎಷ್ಟೋ ವರ್ಷಗಳಿಂದ ಕಂಬಗಳು ಗಟ್ಟಿಯಾಗಿ ನಿಂತಿವೆ. ಆದರೆ ಕಳೆದ ಕೆಲ ವರ್ಷಗಳಿಂದ ಮಳೆಯ ಪ್ರಮಾಣ ಹೆಚ್ಚಾಗಿದ್ದರಿಂದ ಮಂಟಪ ಮೊದಲಿಗಿಂತ ಹೆಚ್ಚು ಮುಳುಗಡೆಯಾಗುತ್ತಿದೆ. ನೀರಿನ ಮಟ್ಟ ಕಡಿಮೆಯಾದ ನಂತರ, ಎಎಸ್‌ಐ ತಂಡವು ಪರಿಸ್ಥಿತಿಯನ್ನು ಪರಿಶೀಲಿಸಿ ದುರಸ್ತಿ ಕಾರ್ಯ ಅಗತ್ಯವಿದ್ದರೆ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಹಂಪಿ ಯುನೆಸ್ಕೋ ಪರಂಪರೆಯ ತಾಣವಾಗಿರುವುದರಿಂದ ಯಾವುದೇ ಸ್ಮಾರಕಗಳನ್ನು ಮರುಸ್ಥಾಪಿಸಲು ನಾವು ಸಿಮೆಂಟ್ ಸೇರಿದಂತೆ ಕೃತಕ ವಸ್ತುಗಳನ್ನು ಬಳಸುವುದಿಲ್ಲ. ಕಲ್ಲು ಮತ್ತು ಕಲ್ಲಿನ ಚಪ್ಪಡಿಗಳನ್ನು ಬಳಸಲಾಗುತ್ತದೆ. ಕಳೆದ ವರ್ಷ ಅತಿವೃಷ್ಟಿಯಿಂದಾಗಿ ಹಂಪಿಯಲ್ಲಿ ಮೂರು ಕಟ್ಟಡಗಳು ಭಾಗಶಃ ಹಾನಿಗೊಳಗಾಗಿದ್ದವು. ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ. ಇತರ ಸ್ಮಾರಕಗಳು ಶಿಥಿಲಗೊಂಡಿವೆ ಎನ್ನುತ್ತಾರೆ ಅಧಿಕಾರಿಗಳು.

ಹಂಪಿಗೆ ಬರುವ ಪ್ರವಾಸಿಗರು ಪುರಂದರ ಮಂಟಪದಲ್ಲಿ ಫೋಟೋಗಳನ್ನು ತೆಗೆಯುವುದು ಸಾಮಾನ್ಯ. ಹಂಪಿಯನ್ನು ಬೇರೆ ಅನೇಕ ಸ್ಮಾರಕಗಳಿದ್ದರೂ ಕೂಡ ಬಹುತೇಕ ಪ್ರವಾಸಿಗರು ಇಲ್ಲಿ ಫೋಟೋ ತೆಗೆದುಕೊಳ್ಳದೆ ಹಿಂತಿರುಗುವುದಿಲ್ಲ, ನೀರಿನ ಮಟ್ಟ ಸಹಜ ಮಟ್ಟಕ್ಕೆ ಬರಲು ಪ್ರವಾಸಿಗರು ಕೂಡ ಕಾಯುತ್ತಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಪ್ರವಾಸಿಗರಿಗೆ ನದಿ ಪ್ರದೇಶದಲ್ಲಿ ನಿರ್ಬಂಧ ಹೇರಲಾಗಿದೆ.

ತುಂಗಭದ್ರಾ ಜಲಾಶಯದಿಂದ ನೀರು ಬಿಟ್ಟಿರುವುದರಿಂದ ಪ್ರವಾಹ ಭೀತಿ ಉಂಟಾಗಬಹುದು ಎಂದು ಈಗಾಗಲೇ ವಿಜಯನಗರ, ಬಳ್ಳಾರಿ, ರಾಯಚೂರು, ಕೊಪ್ಪಳ ಮತ್ತು ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲಾಡಳಿತಗಳು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಮಂಡಳಿ ತಿಳಿಸಿದೆ.

ಜಲಾಶಯ ಪೂರ್ಣವಾಗಿ ಡ್ಯಾಂ ಗೇಟ್ ಓಪನ್ ಮಾಡಿ ಹೊರ ಬಂದ ನದಿ ನೀರನ್ನು ನೋಡಲು ಹೆಚ್ಚು ಹೆಚ್ಚು ಜನ ಬರುತ್ತಿದ್ದಾರೆ. ಇದರಿಂದ ವಾಹನ ಓಡಾಟಕ್ಕೆ ಸಾಯಂಕಾಲ ತೊಂದರೆ ಆಗುತ್ತಿದೆ‌ ಇದರುಂದ ಪೋಲಿಸ್ ಇಲಾಖೆ ಹರಸಹಾಸ ಮಾಡುತ್ತಿರುವುದು ಕಂಡುಬಂದಿದೆ.

ಮುರುಳೀಧರ್ ನಾಡಿಗೇರ್

ಮಳೆರಾಯನ ಅಬ್ಬರ ಶಿವಮೊಗ್ಗ ಚಿಕ್ಕಮಗಳೂರು ಕೊಡಗು ಜಿಲ್ಲೆ ಆರೇಂಜ್ ಅಲರ್ಟ್

0

ರಾಜ್ಯದಲ್ಲಿ ನಿನ್ನೆ ಮಳೆಯ ಅಬ್ಬರ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತಿದೆ ಎನ್ನುವಾಗಲೇ ಇದೀಗ ರಾಜ್ಯದಲ್ಲಿ ಇನ್ನೂ ನಾಲ್ಕು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್, ಹಾಸನ ಸೇರಿದಂತೆ ಪಶ್ಚಿಮಘಟ್ಟ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.
ಉತ್ತರ ಕರ್ನಾಟಕದ ಕಲಬುರ್ಗಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.

ಪ್ರಮುಖವಾಗಿ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ಮಳೆಯಾಗಲಿದೆ.
ಕರಾವಳಿ ಜಿಲ್ಲೆಗಳಲ್ಲಿ ಇಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಮುಂದಿನ 48 ಗಂಟೆಗಳಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಮುಂಜಾನೆಯಿಂದ ಮೋಡಕವಿದ ವಾತಾವರಣವಿದ್ದು, ಅಲ್ಲಲ್ಲಿ ತುಂತುರು ಮಳೆಯಾಗುತ್ತಿದೆ. ಬೆಂಗಳೂರಿನಲ್ಲಿ ಇನ್ನೂ ಎರಡು ದಿನ ಮಳೆಯಾಗಲಿದೆ ಎಂದು ತಿಳಿಸಿದೆ.

ಸಾಲದ ಬಾಕಿ ತೀರಿಸಲು ಪಾಕ್ ಗೆ ಆರ್ಥಿಕ ಸಂಕಷ್ಟ

0

ಹೆಚ್ಚುತ್ತಿರುವ ಸಾಲದ ಹೊರೆ, ವಿದೇಶಿ ವಿನಿಮಯ ಮೀಸಲು ವೇಗವಾಗಿ ಕರಗುತ್ತಿರುವ ಕಾರಣ ಪಾಕಿಸ್ತಾನ ಸಹ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಆತಂಕ ಎದುರಿಸುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿವೆ.

ಕಳೆದ ತಿಂಗಳು ಚೀನಾ 2.3 ಶತಕೋಟಿ ಡಾಲರ್‌ ನೆರವು ನೀಡಿದೆ.

ಪಾಕಿಸ್ತಾನಕ್ಕೆ ನೆರವು ನೀಡುವುದನ್ನು ಐಎಂಎಫ್‌ ನಿಲ್ಲಿಸಿದೆ. ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ ವಿಶ್ವ ಬ್ಯಾಂಕ್‌ ಹಾಗೂ ಏಷ್ಯಾ ಅಭಿವೃದ್ಧಿ ಬ್ಯಾಂಕ್‌ ಅನುದಾನ ನೀಡುವುದನ್ನು ಸ್ಥಗಿತಗೊಳಿಸಿವೆ. ಇದು ಸಹ ದೇಶದ ಸಂಕಷ್ಟವನ್ನು ಹೆಚ್ಚಿಸಿದೆ ಎಂದು ತಜ್ಞರು ಹೇಳಿದ್ದಾರೆ.

ಸ್ಟೇಟ್‌ ಬ್ಯಾಂಕ್‌ ಆಫ್ ಪಾಕಿಸ್ತಾನದ ವಿದೇಶಿ ವಿನಿಮಯ ಮೀಸಲು ಒಂದಂಕಿಗೆ ಕುಸಿದಿದೆ. ಪ್ರತಿ ತ್ರೈಮಾಸಿಕದಲ್ಲಿ ವಿದೇಶಿ ಸಾಲದ ಪ್ರಮಾಣವೂ ಹೆಚ್ಚುತ್ತಿದೆ ಎಂದು ಡಾನ್‌ ಪತ್ರಿಕೆ ವರದಿ ಮಾಡಿದೆ.
ವಿದೇಶಿ ಸಾಲವನ್ನು ತೀರಿಸಲು ಸರ್ಕಾರವು ಅಧಿಕ ಬಡ್ಡಿದರದಲ್ಲಿ ಚೀನಾದಿಂದ ಸಾಲ ಪಡೆಯುತ್ತಿದೆ ಎನ್ನಲಾಗುತ್ತಿದೆ.

ಆದರೆ, ಪಾಕಿಸ್ತಾನ ಮುಸ್ಲಿಂ ಲೀಗ್‌-ನವಾಜ್‌ ನೇತೃತ್ವದ ಮೈತ್ರಿಕೂಟ ಸರ್ಕಾರ ಚೀನಾದಿಂದ ಪಡೆದಿರುವ ಸಾಲದ ಬಡ್ಡಿದರವನ್ನು ಬಹಿರಂಗಪಡಿಸುತ್ತಿಲ್ಲ ಆರ್ಥಿಕ ತಜ್ಞರ ಹೇಳಿಕೆಗಳನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ

ಹಿಜಾಬ್ ವಿರುದ್ಧ ಸಿಡಿದೆದ್ದ ಇರಾನ್ ಮಹಿಳಾ ಸಮೂಹ

0

‌ಹಿಜಾಬ್‌ ಕಡ್ಡಾಯಗೊಳಿಸಿದ ಸರ್ಕಾರದ ಆದೇಶವನ್ನು ಖಂಡಿಸಿ ಇರಾನ್‌ ಮಹಿಳೆಯರು ಬೀದಿಗಿಳಿದು ಪ್ರತಿಭಟನೆ ಆರಂಭಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ, ಈಶಾನ್ಯ ಇರಾನ್‌ನ ಮಶ್ಹದ್ ನಗರದ ಡೆಪ್ಯೂಟಿ ಪ್ರಾಸಿಕ್ಯೂಟರ್, ಮೆಟ್ರೋ, ಸರ್ಕಾರಿ ಕಚೇರಿ, ಬ್ಯಾಂಕ್‌ಗಳ ಪ್ರವೇಶಕ್ಕೆ ಹಿಜಬ್‌ ಕಡ್ಡಾಯಗೊಳಿಸಿ ಆದೇಶ ಪ್ರಕಟಿಸಿದ್ದರು.

ಈ ನಿರ್ಧಾರಕ್ಕೆ ನಗರದ ಮೇಯರ್ ವಿರೋಧ ವ್ಯಕ್ತಪಡಿಸಿದ್ದರೂ ಕೊನೆಗೆ ಅನುಮತಿ ನೀಡಿದ್ದರು ಎಂದು ವರದಿಯಾಗಿದೆ.#No2hijab ಹ್ಯಾಶ್‌ಟ್ಯಾಗ್‌ ಬಳಸಿ ಇರಾನಿ ಮಹಿಳೆಯರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ.

ಜುಲೈ 12 ರಂದು ಸರ್ಕಾರ ಹಿಜಾಬ್‌ ಮತ್ತು ಪರಿಶುದ್ಧತೆ ದಿನವನ್ನಾಗಿ ಆಚರಿಸಲು ಕರೆ ನೀಡಿತ್ತು. ಆದರೆ ಮಹಿಳೆಯರು ಈ ಆಚರಣೆಯನ್ನು ಖಂಡಿಸಿ ಸಾರ್ವಜನಿಕವಾಗಿ ಹಿಜಬ್‌ ತೆಗೆದು ಪ್ರತಿಭಟನೆ ನಡೆಸಿದ್ದಾರೆ.

1979ರ ಇಸ್ಲಾಮಿಕ್ ಕ್ರಾಂತಿಯ ನಂತರ ರಚಿಸಲಾದ ಇರಾನಿನ ಕಾನೂನಿನ ಪ್ರಕಾರ 9 ವರ್ಷ ಮೀರಿದ ಎಲ್ಲ ಹುಡುಗಿಯರು/ಮಹಿಳೆಯರು ಹಿಜಬ್‌ ಧರಿಸುವುದು ಕಡ್ಡಾಯ. ಈ ಕಾನೂನು ಉಲ್ಲಂಘನೆ ಮಾಡಿದರೆ ಭಾರೀ ದಂಡ ಮತ್ತು ಜೈಲು ಶಿಕ್ಷೆ ವಿಧಿಸಲಾಗುತ್ತದೆ. 2017 ರಿಂದ 2019ರ ಅವಧಿಯಲ್ಲಿ ಮಹಿಳೆಯರು ಭಾರೀ ಸಂಖ್ಯೆಯಲ್ಲಿ ಹಿಜಬ್‌ ಕಡ್ಡಾಯ ವಿರೋಧಿಸಿ ಪ್ರತಿಭಟನೆ ನಡೆಸಿದ್ದರು.

ಈ ಪ್ರತಿಭಟನೆಯ ಬಳಿಕ 2019ರಲ್ಲಿ ಸಾರ್ವಜನಿಕವಾಗಿ ಹಿಜಬ್‌ ತೆಗೆದು ವೀಡಿಯೋ ಮಾಡಿದರೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತಿದೆ.

ಡಾಲರ್ ಎದುರು ನಮ್ಮ ₹ 80 ರ ಗಡಿಯಲ್ಲಿದೆ

0

ಡಾಲರ್ ಎದುರು ರೂಪಾಯಿ ಮೌಲ್ಯ ಇದೇ ಮೊದಲ ಬಾರಿ 80ರೂ. ಗಡಿಯಲ್ಲಿದ್ದು, ಯಾವುದೇ ಕ್ಷಣದಲ್ಲಿ ಈ ಗಡಿಯನ್ನೂ ದಾಟುವ ಸಾಧ್ಯತೆ ಇದೆ. ಈ ಮೂಲಕ ಸಾರ್ವಕಾಲಿಕ ಪಾತಾಳಕ್ಕೆ ಕುಸಿದಿದೆ.

ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ ನಂತರ ಸತತ 26 ಬಾರಿ ರೂಪಾಯಿ ಮೌಲ್ಯ ಕುಸಿತ ಕಂಡಿದ್ದು, ಇದೇ ಮೊದಲ ಬಾರಿ ದಾಖಲೆಯ 80.ರೂ. ದಾಟಿದೆ.