Tuesday, March 17, 2026
Tuesday, March 17, 2026
Home Blog Page 1507

ಪರಪ್ಪನ ಅಗ್ರಹಾರ ಜೈಲಿಗೆ ಗೃಹಸಚಿವರ ದಿಢೀರ್ ಭೇಟಿ

0

ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರರವರು ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹೈ ಸೆಕ್ಯೂರಿಟಿ ಬ್ಯಾರಕ್ ಗಳ ಪರಿಶೀಲನೆ ಮತ್ತು ಮೊಬೈಲ್ ಅಥವಾ ಇನ್ನಿತರ ನಿಷೇಧಿತ ವಸ್ತುಗಳನನ್ನು ಜೈಲಿನೊಳಗೆ ಸಾಗಿಸಲಾಗಿದೆಯೇ ಎಂಬುದರ ಬಗ್ಗೆ ವಿಚಾರಣೆ ಮಾಡುವುದಲ್ಲದೆ, ಸ್ವತಃ ತಪಾಸಣೆ ಸಚಿವರೇ ಜೈಲಿಗೆ ಹೋಗಿ ತಪಾಸಣೆಗೆ ಇಳಿದಿದ್ದಾರೆ.

ತಮ್ಮ ಭೇಟಿಯ ಸಮಯದಲ್ಲಿ, ಕಾರಾಗೃಹದಲ್ಲಿ, ಮಹಿಳಾ ಕೈದಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯೂ ಸಚಿವರು ಕೈದಿಗಳ ಜೊತೆಗೆ ಸಂವಾದ ನಡೆಸಲಿದ್ದಾರೆ.

ಕೈದಿಗಳ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿರುವ ಆರೋಪದ ಹಿನ್ನೆಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಈ ದಿಢೀರ್ ಭೇಟಿ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಜೈಲು ಸಿಬ್ಬಂದಿ ಜೊತೆ ತೆರಳಿದ ಗೃಹ ಸಚಿವ ಆರಗ ಜ್ಞಾನೇಂದ್ರ ಕೈದಿಗಳ ಬ್ಯಾರಕ್‌ಗಳನ್ನು ತಪಾಸಣೆ ನಡೆಸಿದ್ದಾರೆ.

ಯಾವುದೇ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗದಂತೆ ಕೈದಿಗಳಿಗೆ ಸೂಚನೆ ನೀಡಿದ್ದಾರೆ. ಅತಿ ಭದ್ರತಾ ಬ್ಯಾರಕ್ ಗಳಿಗೆ ಭೇಟಿ ನೀಡಿ, ಮಾದಕ ವಸ್ತು ಮತ್ತು ಮೊಬೈಲ್ ಬಳಕೆ ಕುರಿತು ತಪಾಸಣೆ ಮಾಡಿದ್ದಾರೆ.

ಬ್ರಿಟನ್ ಪ್ರಧಾನಿ ಹುದ್ದೆ: ರೇಸ್ ನಲ್ಲಿ ಮುಂದಿರುವರಿಷಿ ಸುನಕ್

0

ಬ್ರಿಟನ್‌ನ ಮಾಜಿ ಹಣಕಾಸು ಸಚಿವ, ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಕ್‌ ಬ್ರಿಟನ್‌ನ ಮುಂದಿನ ಪ್ರಧಾನಿಯಾಗುವ ಸಾಧ್ಯತೆ ಈಗ ಇನ್ನಷ್ಟು ಹೆಚ್ಚಾಗಿದೆ.

ಆಡಳಿತಾರೂಢ ಕನ್ಸರ್ವೇಟಿವ್‌ ಪಕ್ಷದ 20ಕ್ಕೂ ಅಧಿಕ ಸಂಸದರು ಅವರಿಗೆ ಬೆಂಬಲ ನೀಡಿದ್ದಾರೆ.

ಬ್ರಿಟನ್‌ನ ಯಾರ್ಕ್‌ಶೈರ್‌ನಲ್ಲಿರುವ ರಿಚ್‌ಮಂಡ್‌ ಕ್ಷೇತ್ರದ ಸಂಸದರಾಗಿರುವ ಅವರು, ಪ್ರಧಾನಿ ಹುದ್ದೆ ಹಾಗೂ ಕನ್ಸರ್ವೇಟಿವ್‌ ಪಕ್ಷದ ನಾಯಕನ ಸ್ಥಾನಕ್ಕೆ ಅವರೇ ಮುಂಚೂಣಿಯಲ್ಲಿ ಇದ್ದಾರೆ. ಅವರ ಜೊತೆಗೆ ಪ್ರತಿಸ್ಪರ್ಧಿಗಳಾಗಿ ವಾಣಿಜ್ಯ ಸಚಿವ ಪೆನ್ನಿ ಮಾರ್ಡೆಂಟ್‌, ವಿತ್ತ ಸಚಿವ ನದೀಮ್‌ ಝಹಾವಿ, ಟಾಂ ಟಗ್ನೇಧಟ್‌ ಇದ್ದಾರೆ. ಅವರ ಜತೆಗೆ ಭಾರತೀಯ ಮೂಲದ ಸ್ವೆಲ್ಲಾ ಬ್ರವೆರ್ಮಾನ್‌, ವಿದೇಶಾಂಗ ಸಚಿವೆ ಲಿಜ್‌ ಟ್ರಸ್‌ ಸೇರಿದಂತೆ ಪ್ರಮುಖರು ಇದ್ದಾರೆ.

ನಿಜ ಬಾಯ್ಬಿಟ್ಟ ಪಾಕ್ ಬೇಹುಗಾರ ಪತ್ರಕರ್ತ

0

ಪಾಕಿಸ್ತಾನದ ಪತ್ರಕರ್ತರೊಬ್ಬರು ಭಾರತಕ್ಕೆ ಭೇಟಿ ನೀಡಿದಾಗಲೆಲ್ಲ ಅವರು ನಡೆಸಿರುವ ಬೇಹುಗಾರಿಕೆಯ ಸಂಗತಿ ಇದೀಗ ಬಯಲಾಗಿದೆ.

ನುಸ್ರತ್ ಮಿರ್ಜಾ ಎಂಬ ಪತ್ರಕರ್ತ ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತವಿದ್ದ ಸಂದರ್ಭದಲ್ಲಿ ಹಲವು ಸಲ ಭಾರತಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್‌ಐ ಜೊತೆ ಹಂಚಿಕೊಂಡಿರುವುದಾಗಿ ಅವರೇ ಬಹಿರಂಗಪಡಿಸಿದ್ದಾರೆ.

ರಾಜಕೀಯ ವಿಶ್ಲೇಷಕ ಶಕೀಲ್ ಚೌಧರಿ ನಡೆಸಿದ ಯೂಟ್ಯೂಬ್‌ ಸಂದರ್ಶನದಲ್ಲಿ ಅಂಕಣಕಾರ ನುಸ್ರತ್ ಮಿರ್ಜಾ ಮಾತನಾಡಿ, ಭಾರತಕ್ಕೆ ಭೇಟಿ ನೀಡಲು ನಾನು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದಿಂದ ವಿಶೇಷ ಪ್ರಯೋಜನಗಳನ್ನು ಪಡೆದಿದ್ದೇನೆ. ಸಾಮಾನ್ಯವಾಗಿ ಭಾರತಕ್ಕೆ ಆಗಮಿಸಲು ವೀಸಾಗೆ ಅರ್ಜಿ ಸಲ್ಲಿಸುವಾಗ 3 ಸ್ಥಳಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಆದರೆ 2002ರಿಂದ 2007ರವರೆಗೆ ಪಾಕಿಸ್ತಾನದಲ್ಲಿ ಖುರ್ಷಿದ್ ಕಸೂರಿ ವಿದೇಶಾಂಗ ಸಚಿವರಾಗಿದ್ದಾಗ 7 ನಗರಗಳಿಗೆ ಭೇಟಿ ನೀಡಲು ನಾನು ವೀಸಾ ಪಡೆದಿದ್ದೆ ಎಂದು ತಿಳಿಸಿದ್ದಾರೆ.

ಮಳೆ ಮುಂದುವರೆಯಲಿದೆ ಜಾಗ್ರತೆ!

0

ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆ ಇಂದು ಸಹ ಮುಂದುವರಿಯಲಿದೆ. ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಗೆ ಜನರು ಕಂಗಾಲಾಗಿದ್ದಾರೆ.ಇನ್ನು ಬಿತ್ತನೆ ಮಾಡಿರುವ ರೈತರು ಹೀಗೆ ಮಳೆ ಮುಂದುವರಿದರೆ, ಮುಂದೆ ಬೆಳೆಗಳು ರೋಗಕ್ಕೆ ತುತ್ತಾಗುವ ಆತಂಕದಲ್ಲಿದ್ದಾರೆ.

ಮತ್ತೊಂದು ಕಡೆ ಬಿತ್ತನೆ ಮಾಡಬೇಕಿರುವ ರೈತರು ಮಳೆ ನಿಂತ್ರೆ ಸಾಕು ಎಂದು ಹೇಳುತ್ತಿದ್ದಾರೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಜಲಾಶಯಗಳು ಭರ್ತಿಯಾಗಿವೆ. ಜಲಾಶಯಗಳಿಂದ ನದಿಗೆ ಸಾವಿರಾರು ಕ್ಯೂಸೆಕ್ ಪ್ರಮಾಣದಲ್ಲಿ ನೀರು ಹರಿಬಿಡಲಾಗ್ತಿದೆ. ಆದ್ದರಿಂದ ನದಿ ತೀರದ ಗ್ರಾಮಗಳ ಜನರಿಗೆ ಎಚ್ಚರಿಕೆಯಿಂದ ಇರಬೇಕೆಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಇಂದು ರಾಜಧಾನಿ ಬೆಂಗಳೂರಿನಲ್ಲಿ ಕನಿಷ್ಠ 19 ಮತ್ತು ಗರಿಷ್ಠ 25 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದೆ.ಹಲವೆಡೆ ಮಳೆಯಾಗುತ್ತಿದೆ.

ದಿನಸಿ ಬೆಲೆಯೇರಿಕೆ ಅತಂತ್ರ ಸ್ಥಿತಿಯಲ್ಲಿ ಗ್ರಾಹಕ

0

ದಿನನಿತ್ಯದ ಬಳಕೆಯ ವಸ್ತುಗಳ ಬೆಲೆಗಳು ನಿರಂತರವಾಗಿ ಏರಿಕೆಯಾಗುತ್ತಿದ್ದು, ಮನೆಯ ಬಜೆಟ್ ಮೇಲೆ ಪರಿಣಾಮ ಬೀರುತ್ತಿದೆ. ಬೆಲೆಏರಿಕೆ ಜನಸಾಮಾನ್ಯರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಆಹಾರ ಮಾತ್ರವಲ್ಲ, ವಿವಿಧ ಅಗತ್ಯ ವಸ್ತುಗಳ ಬೆಲೆಯೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ.

ಕಡಿಮೆ ಆದಾಯ ಮತ್ತು ಹೆಚ್ಚುತ್ತಿರುವ ವೆಚ್ಚಗಳ ನಡುವೆ, ಜನಸಾಮಾನ್ಯರಿಗೆ ತೊಂದರೆಯಾಗಿದೆ. ಈಗ ಜಿ.ಎಸ್.ಟಿ. ಹೆಚ್ಚಳದ ನಂತರ ಮನೆಯ ಬಜೆಟ್ ಮತತ್ಷ್ಟು ಹೆಚ್ಚಳವಾಗಲಿದೆ.

ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಜಿ.ಎಸ್.ಟಿ. ಮಂಡಳಿ ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ ಮುಂದಿನ ವಾರದಿಂದ ಕೆಲವು ಸೇವೆಗಳಿಗೆ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ.

ಜುಲೈ 18 ರಿಂದ ಹಲವಾರು ಅಗತ್ಯ ವಸ್ತುಗಳ ಬೆಲೆಗಳು ಹೆಚ್ಚಾಗಲಿವೆ. ದಿನನಿತ್ಯದ ಆಹಾರ ಪದಾರ್ಥಗಳಿಗೆ ಹೆಚ್ಚಿನ ಹಣ ನೀಡಬೇಕಾಗುತ್ತದೆ.

ಚೀಸ್, ಲಸ್ಸಿ, ಬೆಣ್ಣೆ ಹಾಲು, ಪ್ಯಾಕೇಜ್ ಮಾಡಿದ ಮೊಸರು, ಗೋಧಿ ಹಿಟ್ಟು, ಇತರ ಧಾನ್ಯಗಳು, ಜೇನುತುಪ್ಪ, ಪಾಪಡ್, ಧಾನ್ಯಗಳು, ಮಾಂಸ ಮತ್ತು ಮೀನು, ಬೆಲ್ಲದಂತಹ ಪ್ಯಾಕ್ ಮಾಡಿದ ಉತ್ಪನ್ನಗಳ ಬೆಲೆಗಳು ಜುಲೈನಿಂದ ಏರಿಕೆಯಾಗಲಿವೆ. ಈ ಉತ್ಪನ್ನಗಳ ಮೇಲಿನ ತೆರಿಗೆಗಳನ್ನು ಹೆಚ್ಚಿಸಲಾಗಿದೆ. ಪ್ರಸ್ತುತ ಬ್ರ್ಯಾಂಡೆಡ್ ಮತ್ತು ಪ್ಯಾಕ್ ಮಾಡಿದ ಆಹಾರ ಪದಾರ್ಥಗಳ ಮೇಲೆ ಶೇ.5ರಷ್ಟು ಜಿ.ಎಸ್.ಟಿ. ವಿಧಿಸಲಾಗುತ್ತಿದೆ. ಪ್ಯಾಕ್‌ ಗಳಿಲ್ಲದ ಮತ್ತು ಲೇಬಲ್ ಇಲ್ಲದ ಉತ್ಪನ್ನಗಳು ತೆರಿಗೆ ಮುಕ್ತವಾಗಿವೆ.

ಟೆಟ್ರಾ ಪ್ಯಾಕ್ ಮೊಸರು, ಲಸ್ಸಿ ಮತ್ತು ಬೆಣ್ಣೆ ಹಾಲಿಗೆ ಜುಲೈ 18 ರಿಂದ 5% ಜಿಎಸ್‌ಟಿ ವಿಧಿಸಲಾಗಿರುವುದರಿಂದ ಬೆಲೆ ಏರಿಕೆಯಾಗಲಿದೆ.

ಚೆಕ್‌ ಬುಕ್‌ ಗಳನ್ನು ನೀಡಲು ಬ್ಯಾಂಕ್ ಮೊದಲು ವಿಧಿಸುತ್ತಿದ್ದ ಸೇವಾ ತೆರಿಗೆಯು ಈಗ 18% ಜಿ.ಎಸ್‌.ಟಿ. ಅನ್ವಯಿಸಲಿದೆ.

ಆಸ್ಪತ್ರೆಗಳಲ್ಲಿ 5,000 ರೂ.ಗಿಂತ ಹೆಚ್ಚು ಮೌಲ್ಯದ ಕೊಠಡಿಗಳನ್ನು(ಐಸಿಯು ಅಲ್ಲದ) ಬಾಡಿಗೆಗೆ ನೀಡಿದರೆ 5 ಪ್ರತಿಶತ ಜಿ.ಎಸ್‌.ಟಿ. ವಿಧಿಸಲಾಗುತ್ತದೆ.

ಇವುಗಳ ಹೊರತಾಗಿ ಈಗ ಅಟ್ಲಾಸ್‌ ಗಳಿರುವ ನಕ್ಷೆಗಳಿಗೂ ಶೇ.12 ದರದಲ್ಲಿ ಜಿ.ಎಸ್‌.ಟಿ. ವಿಧಿಸಲಾಗುವುದು.

ದಿನಕ್ಕೆ 1,000 ರೂ.ಗಿಂತ ಕಡಿಮೆ ಇರುವ ಹೋಟೆಲ್ ಕೊಠಡಿಗಳಿಗೆ ಶೇ 12 ರಷ್ಟು ಜಿ.ಎಸ್‌.ಟಿ. ವಿಧಿಸಲಾಗುತ್ತದೆ.

ಎಲ್‌.ಇ.ಡಿ. ಲೈಟ್, ಎಲ್‌.ಇ.ಡಿ. ಲ್ಯಾಂಪ್‌ ಗಳು ಶೇಕಡಾ 18 ರಷ್ಟು ಜಿ.ಎಸ್‌.ಟಿ. ವ್ಯಾಪ್ತಿಗೆ ಸೇರಿವೆ.

ಬ್ಲೇಡ್‌ ಗಳು, ಪೇಪರ್ ಕತ್ತರಿಸುವ ಕತ್ತರಿ, ಪೆನ್ಸಿಲ್ ಶಾರ್ಪನರ್, ಚಮಚಗಳು, ಫೋರ್ಕ್‌ ಗಳು, ಸ್ಕಿಮ್ಮರ್‌ಗಳು ಮತ್ತು ಕೇಕ್ ಸರ್ವರ್‌ಗಳು ಈ ಹಿಂದೆ ಶೇಕಡಾ 12 ರ ಜಿ.ಎಸ್‌.ಟಿ. ಹೊಂದಿದೆ. ಅದೀಗ ಶೇಕಡ 18 ಕ್ಕೆ ಏರಿಕೆಯಾಗಲಿದೆ.

ದೇಶದಲ್ಲಿ ಕೊರೋನ ಸೋಂಕು ಏರಿಕೆ ಆತಂಕ

0

ಭಾರತದಲ್ಲಿ ಇಂದು ಮತ್ತೆ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 16,906 ಮಂದಿಗೆ ಹೊಸದಾಗಿ ಕೊರೋನಾ ಸೋಂಕು ದೃಢಪಟ್ಟಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಕಳೆದ 24 ಗಂಟೆಯಲ್ಲಿ 16,906 ಮಂದಿಗೆ ಹೊಸದಾಗಿ ಕೊರೋನಾ ಸೋಂಕು ದೃಢಪಟ್ಟಿದೆ.

ಕಳೆದ 24 ಗಂಟೆಯಲ್ಲಿ ಕೊರೊನಾ ಸೋಂಕಿನಿಂದ 45 ಮಂದಿ ಮೃತಪಟ್ಟಿದ್ದು, ಈ ಮೂಲಕ ದೇಶದಲ್ಲಿ ಕೊರೊನಾ ಮಹಾಮಾರಿಗೆ ಬಲಿಯಾದವರ ಸಂಖ್ಯೆ 525519 ಕ್ಕೆ ಏರಿಕೆಯಾಗಿದೆ.

ಕೊರೋನಾ ಸೋಂಕು ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 16,906 ಹೊಸ ಪ್ರಕರಣಗಳು, 15,447 ಚೇತರಿಕೆಗಳು ಮತ್ತು 45 ಸಾವುಗಳು ವರದಿಯಾಗಿವೆ.

ಸಕ್ರಿಯ ಪ್ರಕರಣಗಳು 1,32,457

ದೈನಂದಿನ ಪಾಸಿಟಿವಿಟಿ ದರ 3.68%

ತಿರುಪತಿಯಲ್ಲಿ ಶೀಘ್ರವೇ ನವೀಕೃತ ಕರ್ನಾಟಕ ಭವನ ಆರಂಭ

0

ಕರ್ನಾಟಕ ಭವನ ನವೀಕರಣ ವಸತಿಗೃಹಗಳ ನಿರ್ಮಾಣ ಸೇರಿದಂತೆ ಒಟ್ಟಾರೆ ಸುಮಾರು ₹236 ಕೋಟಿ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಇದರಲ್ಲಿ ಒಟ್ಟು 346 ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ.
ಹೈದರಾಬಾದ್: ತಿರುಪತಿ ತಿರುಮಲದಲ್ಲಿ ರಾಜ್ಯದ ಯಾತ್ರಾರ್ತಿಗಳಿಗೆ ಶೀಘ್ರವೇ 346 ಸುಸಜ್ಜಿತ ವಸತಿ ಕೊಠಡಿಗಳು ಸಿದ್ಧವಾಗಲಿವೆ ಎಂದು ಬಿಡಿಎ ಅಧ್ಯಕ್ಷ, ತಿರುಪತಿ ತಿರುಮಲ ಮಂಡಳಿ ಸದಸ್ಯ ಎಸ್.ಆರ್.ವಿಶ್ವನಾಥ್ ಅವರು ತಿಳಿಸಿದ್ದಾರೆ.

ತಿರುಪತಿ ತಿರುಮಲದಲ್ಲಿ ರಾಜ್ಯ ಸರ್ಕಾರದಿಂದ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ ತಿರುಮಲದಲ್ಲಿ ಕರ್ನಾಟಕದ ಯಾತ್ರಾರ್ತಿಗಳು ಬಂದು ವಾಸ್ತವೂಡಲು ಸೌಲಭ್ಯಗಳು ಅಷ್ಟಾಗಿ ಇರಲಿಲ್ಲ. ಜೊತೆಗೆ ರಾಜ್ಯಕ್ಕೆ ಸೇರಿದ ಸುಮಾರು 7 ಎಕರೆ ಜಾಗ ಕೂಡ ನ್ಯಾಯಾಲಯದಲ್ಲಿತ್ತು. ಅದೆಲ್ಲವನ್ನು ಈಗ ಸರಿಪಡಿಸಿ ಯಾತ್ರಾರ್ಥಿಗಳಿಗೆ ಅನುಕೂಲ ಆಗುವಂತೆ ಸುಸಜ್ಜಿತ ಕೊಠಡಿಗಳು ಮತ್ತು ಅಗತ್ಯ ಮೂಲತೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.

ದ್ರೌಪದಿ ಮುರ್ಮು ಅವರಿಗೆ ಶಿವಸೇನೆಯ ಬೆಂಬಲ

0

ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಬೆಂಬಲ ನೀಡುವಂತೆ ಶಿವಸೇನಾದ ಹಲವು ಸಂಸದರು ಉದ್ಧವ್ ಠಾಕ್ರೆ ಅವರನ್ನು ಒತ್ತಾಯಿಸಿದ ಬಳಿಕ ಉದ್ಧವ್ ಮಂಗಳವಾರ ಮುರ್ಮುಗೆ ಬೆಂಬಲ ನೀಡುವ ಬಗ್ಗೆ ಒಲವು ತೋರಿರುವುದಾಗಿ ವರದಿ ತಿಳಿಸಿದೆ.

ವಿರೋಧ ಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್ ಸಿನ್ಹಾ ಅವರ ಹೊರತಾಗಿಯೂ ಉದ್ಧವ್ ಠಾಕ್ರೆ, ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿ ಮುರ್ಮು ಅವರನ್ನು ಬೆಂಬಲಿಸುವುದಾಗಿ ಹೇಳಿದೆ. ಆದರೆ, ಇದರ ಅರ್ಥ ಬಿಜೆಪಿಯನ್ನು ಬೆಂಬಲಿಸುತ್ತಿದ್ದೇವೆ ಎಂಬುದಲ್ಲ ಎಂದು ಠಾಕ್ರೆ ಅವರು ತಿಳಿಸಿದ್ದಾರೆ.

ಶಿವಸೇನಾ ಯಾವ ನಿರ್ಧಾರ ತೆಗೆದುಕೊಳ್ಳುತ್ತಿದೆಯೋ ಅದು ಸರಿಯಾಗಿದೆ. ಈ ಹಿಂದೆಯೂ ಕೂಡಾ ನಾವು ಕಾಂಗ್ರೆಸ್ ಬೆಂಬಲಿತ ಟಿಎನ್ ಶೇಷನ್ ಹಾಗೂ ಯುಪಿಎ ಅಭ್ಯರ್ಥಿ ಪ್ರತಿಭಾ ಪಾಟೀಲ್, ಪ್ರಣಬ್ ಮುಖರ್ಜಿಯನ್ನು ಬೆಂಲಿಸಿದ್ದೇವೆ. ಶಿವಸೇನಾಕ್ಕೆ ರಾಜಕೀಯದ ಹೊರತಾದ ಸಂಪ್ರದಾಯವನ್ನು ಹೊಂದಿದೆ.

ಅವಧಿಗೆ ಮುನ್ನವೇ ಪೂರ್ಣಗೊಂಡ ಸಿಗಂದೂರು ಸೇತುವೆ

0

ರಾಜ್ಯದ ಪ್ರಮುಖ ಶಕ್ತಿಪೀಠ ಸಿಗಂದೂರಿಗೆ ಸಂಪರ್ಕ ಕಲ್ಪಿಸುವ ಹಾಗೂ ದೇಶದ ಎರಡನೇ ಅತಿ ದೊಡ್ಡ ಕೇಬಲ್‌ ಸೇತುವೆ ನಿರ್ಮಾಣಕ್ಕಿದ್ದ ತೊಡಕುಗಳನ್ನು ಮೀರಿ ಪ್ರಮುಖ ಕಾಮಗಾರಿಯು ಅವಧಿಗೆ ಮುನ್ನವೇ ಮುಗಿದಿದೆ. ಕಾಮಗಾರಿಗೆ ಲಿಂಗನ ಮಕ್ಕಿ ಜಲಾಶಯದ ನೀರು ತೊಡಕಾಗುತ್ತಿದೆ ಎನ್ನಲಾಗಿತ್ತು.

ಕಾಮಗಾರಿಗೆ ಪ್ರಮುಖ ಹಂತವಾದ ಪೈಲ್‌ ಕ್ಯಾಪ್‌ ಅಳವಡಿಕೆಯೇ ಸವಾಲಾಗಿತ್ತು. 2 ವರ್ಷ ಕಳೆದರೂ 5 ಪೈಲ್‌ ಕ್ಯಾಪ್‌ ಮಾತ್ರ ಅಳವ ಡಿಸಲಾಗಿತ್ತು. ಬಾಕಿ 14 ಪೈಲ್‌ ಕ್ಯಾಪ್‌ ಅಳವಡಿಸಲು ಜಲಾಶಯದ ನೀರನ್ನು ಮೀಟರ್‌ ಗೆ ತಗ್ಗಿಸಬೇಕೆಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬೇಡಿಕೆ ಇಟ್ಟಿತ್ತು. ಕಳೆದ ವರ್ಷ ಉತ್ತಮ ಮಳೆಯಾಗಿ 1819 ಅಡಿ ಗರಿಷ್ಠ ಮಟ್ಟದ ಜಲಾಶಯದಲ್ಲಿ 1815 ಅಡಿವರೆಗೂ ನೀರು ಸಂಗ್ರಹವಾಗಿತ್ತು. ಆದ್ದರಿಂದ ನೀರನ್ನು ಒಂದೇ ಬಾರಿ ಇಳಿಸುವುದು ಸವಾಲಿನ ಕೆಲಸವಾಗಿತ್ತು. ಕೊನೆಗೂ ಮೇ ತಿಂಗಳಲ್ಲಿ ನೀರು ಇಳಿದು ಕಾಮಗಾರಿಗೆ ಅವಕಾಶ ಸಿಕ್ಕಿದೆ.

2021ರಲ್ಲಿ ಕೆಪಿಸಿ ತಾಂತ್ರಿಕ ಕಾರಣಗಳಿಂದ ಜಲಾಶಯದಲ್ಲಿ ಹೆಚ್ಚಿನ ನೀರನ್ನು ಉಳಿಸಿತ್ತು. ಇದರಿಂದ ಕಾಮಗಾರಿಗೆ ನಿರೀಕ್ಷಿತ ವೇಗ ಸಿಕ್ಕಿರಲಿಲ್ಲ. ಸೇತುವೆ ನಿರ್ಮಾಣಕ್ಕೆ 2023ರ ಮೇ ವರೆಗೂ ಸಮಯ ನೀಡಲಾಗಿ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳುತ್ತದೆ ಅನುಮಾನವಾಗಿತ್ತು.

ನೀರು ಕಡಿಮೆ ಮಾಡಿಕೊಟ್ಟರೆ 120 ದಿನದಲ್ಲಿ ಕಾಮಗಾರಿ ಮುಗಿಸುತ್ತೇವೆ ಎಂದಿದ್ದ ಎಂಜಿನಿಯರ್‌ಗಳು ದಾಖಲೆ ಸಮಯದಲ್ಲಿ ಮುಗಿಸಿರುವುದು ಸ್ಥಳೀಯರಲ್ಲಿ ಸಂತಸ ತಂದಿದೆ.

300 ಜನ ಸಿಬಂದಿ ದಿನಪೂರ್ತಿ ಕೆಲಸ ಮಾಡಿದೆ. ಮುಂಗಾರು ಪೂರ್ವ ಮಳೆ ಇದ್ದಾಗಲೂ ಕಾಮಗಾರಿ ನಿಲ್ಲಿಸಲಿಲ್ಲ. ಮೇ 10ಕ್ಕೆ ಆರಂಭವಾದ ಕೆಲಸ ಜೂ.20ಕ್ಕೆ ಪೂರ್ಣಗೊಂಡಿದೆ. 423 ಕೋಟಿ ರೂ. ವೆಚ್ಚದ 2125 ಮೀಟರ್‌ ಉದ್ದದ ಸೇತುವೆ ಒಂದೂವರೆ ವರ್ಷದಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದೆ.

ಕನ್ನಡ ಸಿನಿಮಾಗಳಿಗೆ ಸಬ್ಸಿಡಿ ನಿರ್ಮಾಪಕರಿಂದ ಅರ್ಜಿ ಆಹ್ವಾನ

0

ಕರ್ನಾಟಕದಲ್ಲಿ ನಿರ್ಮಾಣಗೊಂಡಿರುವ ಕನ್ನಡ ಮತ್ತು ರಾಜ್ಯದ ಇತರೆ ಪ್ರಾದೇಶಿಕ ಭಾಷಾ ಚಲನಚಿತ್ರಗಳಿಗೆ ಅನ್ವಯಿಸಿದಂತೆ ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆಯು 2019 ರ ಕ್ಯಾಲೆಂಡರ್ ವರ್ಷದ ಸಹಾಯಧನಕ್ಕಾಗಿ ಅರ್ಹ ನಿರ್ಮಾಪಕರಿಂದ ಅರ್ಜಿ ಆಹ್ವಾನಿಸಿದೆ.

ಆನ್‌ಲೈನ್ ವ್ಯವಸ್ಥೆಯಡಿ ಅರ್ಜಿ ಸಲ್ಲಿಸಲು ಆಗಸ್ಟ್ 8 ಕೊನೆ ದಿನಾಂಕವಾಗಿದೆ.

ದಿ. 1.1.2019 ರಿಂದ ದಿ. 31.12.2019 ರವರೆಗೆ ಸಿಬಿಎಫ್‌ಸಿ ಯಿಂದ ಸೆನ್ಸಾರ್ ಪ್ರಮಾಣ ಪತ್ರ ಪಡೆದಿರುವ ಮತ್ತು ರಾಜ್ಯದಲ್ಲಿ ಚಿತ್ರೀಕರಣ ನಡೆಸಲು ಇಲಾಖೆಯಿಂದ ಅನುಮತಿ ಪಡೆದಿರುವ ಕನ್ನಡ ಮತ್ತು ಪ್ರಾದೇಶಿಕ ಭಾಷಾ ಚಲನಚಿತ್ರಗಳು ಮಾತ್ರ 2019 ರ ಕ್ಯಾಲೆಂಡರ್ ವರ್ಷದ ಸಹಾಯಧನಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅರ್ಹವಾಗಿರುತ್ತವೆ ಎಂದು ಇಲಾಖೆಯ ಆಯುಕ್ತ ಡಾ. ಪಿ. ಎಸ್. ಹರ್ಷ ಅವರು ಪ್ರಕಟಣೆಯಲ್ಲಿ ಮಾಹಿತಿ ನೀಡಿ ದ್ದಾರೆ.