ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಬೆಂಬಲ ನೀಡುವಂತೆ ಶಿವಸೇನಾದ ಹಲವು ಸಂಸದರು ಉದ್ಧವ್ ಠಾಕ್ರೆ ಅವರನ್ನು ಒತ್ತಾಯಿಸಿದ ಬಳಿಕ ಉದ್ಧವ್ ಮಂಗಳವಾರ ಮುರ್ಮುಗೆ ಬೆಂಬಲ ನೀಡುವ ಬಗ್ಗೆ ಒಲವು ತೋರಿರುವುದಾಗಿ ವರದಿ ತಿಳಿಸಿದೆ.
ವಿರೋಧ ಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್ ಸಿನ್ಹಾ ಅವರ ಹೊರತಾಗಿಯೂ ಉದ್ಧವ್ ಠಾಕ್ರೆ, ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿ ಮುರ್ಮು ಅವರನ್ನು ಬೆಂಬಲಿಸುವುದಾಗಿ ಹೇಳಿದೆ. ಆದರೆ, ಇದರ ಅರ್ಥ ಬಿಜೆಪಿಯನ್ನು ಬೆಂಬಲಿಸುತ್ತಿದ್ದೇವೆ ಎಂಬುದಲ್ಲ ಎಂದು ಠಾಕ್ರೆ ಅವರು ತಿಳಿಸಿದ್ದಾರೆ.
ಶಿವಸೇನಾ ಯಾವ ನಿರ್ಧಾರ ತೆಗೆದುಕೊಳ್ಳುತ್ತಿದೆಯೋ ಅದು ಸರಿಯಾಗಿದೆ. ಈ ಹಿಂದೆಯೂ ಕೂಡಾ ನಾವು ಕಾಂಗ್ರೆಸ್ ಬೆಂಬಲಿತ ಟಿಎನ್ ಶೇಷನ್ ಹಾಗೂ ಯುಪಿಎ ಅಭ್ಯರ್ಥಿ ಪ್ರತಿಭಾ ಪಾಟೀಲ್, ಪ್ರಣಬ್ ಮುಖರ್ಜಿಯನ್ನು ಬೆಂಲಿಸಿದ್ದೇವೆ. ಶಿವಸೇನಾಕ್ಕೆ ರಾಜಕೀಯದ ಹೊರತಾದ ಸಂಪ್ರದಾಯವನ್ನು ಹೊಂದಿದೆ.