Wednesday, April 1, 2026
Wednesday, April 1, 2026
Home Blog Page 1336

ಫೆಬ್ರವರಿ ತಿಂಗಳಿಂದ ಆದ್ಯತಾ ಪಡಿತರ ಚೀಟಿ ಹೊಂದಿದವರಿಗೆ ಹೆಚ್ಚುವರಿ 1 ಕೆಜಿ ಅಕ್ಕಿ ವಿತರಣೆ

0

ರಾಜ್ಯ ಸರ್ಕಾರವು 2023ರ ಜನವರಿಯಿಂದ ರಾಜ್ಯ ಎಲ್ಲಾ ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭಿವಿಗೆ ಎನ್‌ಎಫ್‌ಎಸ್‌ಎ ಹಂಚುವ 5 ಕೆ.ಜಿ. ಅಕ್ಕಿಯೊಂದಿಗೆ ಹೆಚ್ಚುವರಿಯಾಗಿ 1 ಕೆ.ಜಿ. ಅಕ್ಕಿಯನ್ನು ವಿತರಿಸಲು ಆದೇಶಿಸಿದ್ದು, ಸಕಾಲದಲ್ಲಿ ಅಕ್ಕಿ ಸರಬರಾಜು ಲಭ್ಯವಿಲ್ಲದ್ದರಿಂದ ಹಾಗೂ ನ್ಯಾಯಬೆಲೆ ಅಂಗಡಿಗಳ ಬಿಲ್ಲಿಂಗ್ ವ್ಯವಸ್ಥೆ ಮತ್ತು ಪಿಓಎಸ್ ಆರಂಭಗೊಂಡಿರುವ ಕಾರಣ 2023ರ ಫೆಬ್ರವರಿ ಮಾಹೆಯಿಂದ 1 ಕೆ.ಜಿ. ಅಕ್ಕಿ ವಿತರಣೆ ಮಾಡಲಾಗುವುದು.

ಈಗಾಗಲೇ ಆನ್‌ಲೈನ್ ಹಂಚಿಕೆಯಂತೆ ಜನವರಿ-2023ರ ಮಾಹೆಯಲ್ಲಿ ಪ್ರತಿ ಫಲಾನುಭವಿಗೆ ಎನ್‌ಎಫ್‌ಎಸ್‌ಎ 5 ಕೆ.ಜಿ.ಅಕ್ಕಿಯನ್ನು ಮಾತ್ರ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿಗಳ ಕಚೇರಿ ತಿಳಿಸಿದೆ.

ಪಾಕ್ ನಲ್ಲಿ ಬಿಗಡಾಯಿಸಿದ ನಾಗರಿಕರ ದೈನಿಕ ಜೀವನ

0

ಒಂದಲ್ಲ ಒಂದು ಕಾರಣದಿಂದ ಇಷ್ಟೂದಿನ ಪಾಕಿಸ್ತಾನ ಅಂತಾರಾಷ್ಟ್ರೀಯ ವಾಗಿ ಸುದ್ದಿಯಲ್ಲಿತ್ತು.
ಹೆಚ್ಚಾಗಿ ಸುದ್ದಿಗಳು ರಾಜಕಾರಣ,ಉಗ್ರವಾದಿಗಳು ಇತ್ಯಾದಿ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದವು.

ಈಗ ಅವೆಲ್ಲವೂ ಮೀರಿದ ಮನಕಲಕುವ ಸಮಾಚಾರಗಳು ಬರುತ್ತಿವೆ. ಒಂದು ದೇಶ ತನ್ನ ಆರ್ಥಿಕತೆಯ ಸ್ವಾಸ್ಥ್ಯ ಕಾಪಾಡಿಕೊಳ್ಳದಿದ್ದರೆ ಅದರ ಕೆಟ್ಟ ಪರಿಣಾಮ ಆ ದೇಶದ ನಾಗರಿಕರ ಮೇಲೇ ಬೀಳುತ್ತದೆ.
ಈಗ ಅಲ್ಲಿ ಆಹಾರದ ದರ ಏರುತ್ತಿದೆ.
ಆರ್ಥಿಕ ಬಿಕ್ಕಟ್ಟಿನಿಂದಾಗಿ ಪೆಟ್ರೋಲ್, ಡಿಸೆಲ್ ದರಗಳು ಗಗನಕ್ಕೇರಿವೆ. ಹಣದುಬ್ಬರ ಶೇ 25 ಆಗಿದೆ. ನಮ್ಮ ನೆರೆಯ ಶ್ರೀಲಂಕಾ ದಲ್ಲಿ ಈ ರೀತಿ ಹಾಹಾಕಾರವುಂಟಾಗಿತ್ತು.
ಸಾಮಾಜಿಕ ಜಾಲತಾಣಗಳಲ್ಲಿ ಒಂದು ಚೀಲ ಗೋದಿ ಹಿಟ್ಟಿಗಾಗಿ ನಾಕಾರು ಜನ ಕೈ ಕೈ ಮಿಲಾಯಿಸಿ ಹಿಟ್ಟಿಗಾಗಿ ಹೊಡೆದಾಡುವ ವಿಡಿಯೊ ಸರಿದಾಡುತ್ತಿದೆ.
ಕರಾಚಿಯಲ್ಲಿ ಒಂದು ಕೆಜಿ ಗೋಧಿ ಹಿಟ್ಟಿಗೆ
₹ 160. ಬಲೂಚಿಸ್ತಾನದಲ್ಲಿ 20 ಕೆಜಿ ಗೆ ₹ 3100.

ಇನ್ನೂ ಮೂರು ತಿಂಗಳು ಇದೇ ರೀತಿ ಪಾಕ್ ಅನುಭವಿಸಬೇಕಿದೆ.
ಆಪತ್ತಿನಲ್ಲಿ ನೆರವಿಗೆ ಸೌದಿ ಅರೆರಬಿಯಾ ಹತ್ತು ಶತಕೋಟಿ ಡಾಲರ್ ನೆರವು ಘೋಷಿಸಿದೆ.
ಪಾಕ್ ಪ್ರಧಾನಿ ಶಹಬಾಜ್ ಅವರ ರಾಜತಾಂತ್ರಿಕ ನಡಿಗೆ
ಮುಂದೆ ಹೇಗಿದೆ ಎಂಬುದೇ ವಿಶ್ವ ಕಾದು ನೋಡಬೇಕಿದೆ.

ಇವನ್ನೆಲ್ಲ ನೋಡಿದರೆ ನಮ್ಮ ಭಾರತ ಎಷ್ಟು ಸದೃಢ ಎನ್ನುವ ಅಭಿಮಾನ ತೃಪ್ತಿ ಮೂಡುತ್ತದೆ. ಆದರೂ ನಾವು ಅತ್ಯಂತ ಜಾಗರೂಕವಾಗಿ ನಮ್ಮ ಯೋಜನೆಗಳು, ಸಂಪನ್ಮೂಲಗಳನ್ನ ಸದ್ಬಳಕೆ ಮಾಡಿಕೊಳ್ಳಬೇಕಿದೆ

ಶಾಲೆಗಳಲ್ಲಿ ನೈತಿಕ ಶಿಕ್ಷಣ ಮುಂದಿನ ವರ್ಷದಿಂದ ಜಾರಿ ಬಗ್ಗೆ ಚಿಂತನೆ- ಸಚಿವ ನಾಗೇಶ್

0

ರಾಜ್ಯದ ಶಾಲೆಗಳಲ್ಲಿ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ಮತ್ತು ಸಾತ್ವಿಕ ಆಹಾರ ನೀಡುವ ಪ್ರಕ್ರಿಯೆ ಪ್ರಾರಂಭವಾಗಿದೆ. ಅದಕ್ಕಾಗಿ ರಾಜ್ಯದ ಎಲ್ಲ ಶಾಲೆಗಳಲ್ಲಿ ನೈತಿಕ ಶಿಕ್ಷಣದ ವರ್ಗದಲ್ಲಿ ಧಾರ್ಮಿಕ ಗ್ರಂಥಗಳ ಮಾಹಿತಿಯನ್ನು ನೀಡುವ ವಿಷಯದಲ್ಲಿ ಚರ್ಚೆ ಪ್ರಾರಂಭವಾಗಿದೆ.

ಮುಂದಿನ ಶೈಕ್ಷಣಿಕ ವರ್ಷದಿಂದ ಅದನ್ನು ಪ್ರಾರಂಭಿಸುವ ವಿಷಯದಲ್ಲಿ ಪ್ರಯತ್ನಿಸಲಾಗುವುದು ಎಂದು ಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ್ ಅವರು ತಿಳಿಸಿದ್ದಾರೆ.

ಅಧ್ಯಯನಕಾರರು ಶಿಕ್ಷಣದಲ್ಲಿ ನೈತಿಕ ಶಿಕ್ಷಣವನ್ನು ಸೇರ್ಪಡೆಗೊಳಿಸಲು ಬೆಂಗಳೂರಿನಲ್ಲಿ ಸಭೆಯನ್ನು ಏರ್ಪಡಿಸಿದ್ದರು.

ಅಭ್ಯಾಸಕ್ರಮದಲ್ಲಿ ಬದಲಾವಣೆ ತರಲು ಸಾಧ್ಯವಾದಷ್ಟು ಬೇಗನೆ ಸಮಿತಿಯನ್ನು ಸ್ಥಾಪಿಸಲಾಗುವುದೆಂದು ಹೇಳಿದರು.

ಸಭೆಯಲ್ಲಿ ಚರ್ಚಿಸಲಾಗಿರುವ ವಿಷಯಗಳ ಆಧಾರದಲ್ಲಿ ಮೌಲ್ಯಾಧಾರಿತ ಶಿಕ್ಷಣವನ್ನು ನೀಡಲು ವಿಭಾಗೀಯ ಮಟ್ಟದ ಸಭೆಯಲ್ಲಿ ಚರ್ಚೆ ನಡೆಸಿ ಅಂತಿಮ ನಿರ್ಣಯವನ್ನು ತೆಗೆದುಕೊಳ್ಳಲಾಗುವುದು ಎಂದರು.

ಈ ಸಭೆಯ ಮೂಲ ಉದ್ದೇಶ ಮಕ್ಕಳ ಆರೋಗ್ಯ ಚೆನ್ನಾಗಿರುವಂತೆ ಪ್ರಯತ್ನಿಸುವುದು, ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮತ್ತು ದೇವರ ಭಕ್ತಿಯನ್ನು ಕಲಿಸುವುದಾಗಿದೆ ಎಂದು ತಿಳಿಸಿದರು.

ಶಾಲೆಯಲ್ಲಿ ಸಾತ್ವಿಕ ಆಹಾರವನ್ನು ಪ್ರಾರಂಭಿಸುವ ವಿಷಯದಲ್ಲಿಯೂ ಸಭೆಯಲ್ಲಿ ವಿಚಾರ ಮಾಡಲಾಯಿತು.

ಈ ಸಭೆಯಲ್ಲಿ ಶಿಕ್ಷಣ ಮತ್ತು ಸಾಕ್ಷರಣಾ ಸಚಿವ ಬಿ.ಸಿ. ನಾಗೇಶ ಮತ್ತು ಶ್ರೀ ಶ್ರೀ ರವಿಶಂಕರ, ಅನೇಕ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಶಿವಮೊಗ್ಗ ಸಾಹಿತ್ಯ ಸಂಸ್ಕೃತಿ ಕಲೆ ಕಲಾವಿದರ ತವರು- ಸುಮತಿ ಕುಮಾರಸ್ವಾಮಿ

0

ಧನಾತ್ಮಕ ಆಲೋಚನೆ ನಮ್ಮಲ್ಲಿ ಬೆಳೆಯುವಲ್ಲಿ ಹಾಗೂ ಜೀವನವು ಸಾಧನೆಯ ಮಾರ್ಗದಲ್ಲಿ ಮುನ್ನಡೆಯಲು ಜೆಸಿಐ ಸಹಕಾರಿ ಆಗುತ್ತದೆ ಎಂದು ಸರ್ಜಿ ಸಮೂಹ ಸಂಸ್ಥೆ ಅಧ್ಯಕ್ಷ ಡಾ. ಧನಂಜಯ ಸರ್ಜಿ ಹೇಳಿದರು.

ಶಿವಮೊಗ್ಗ ನಗರದ ಸಾಯಿ ಇಂಟರ್‌ನ್ಯಾಷನಲ್ ಹೋಟೆಲ್‌ನಲ್ಲಿ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ವತಿಯಿಂದ ಆಯೋಜಿಸಿದ್ದ 2023ನೇ ಸಾಲಿನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಜೆಸಿಐ ನಂತಹ ಸಂಸ್ಥೆಗಳಲ್ಲಿ ನಿರಂತರ ಭಾಗವಹಿಸುವುದರಿಂದ ಸ್ವಯಂ ವ್ಯಕ್ತಿತ್ವ ವಿಕಸನ ಸಾಧ್ಯ. ನಿರಂತರ ಪರಿಶ್ರಮದ ಮೂಲಕ ಜೀವನದಲ್ಲಿ ಸಾಧಿಸಲು ಪ್ರೇರಣೆ ದೊರೆಯುತ್ತದೆ. ಉತ್ತಮ ಸಂವಹನದ ಕೌಶಲ್ಯದ ಜತೆಯಲ್ಲಿ ನಾಯಕತ್ವ ಗುಣ ಬೆಳೆಯಲು ಕಾರಣವಾಗುತ್ತದೆ. ಮಾನವೀಯ ಸೇವೆಯ ಮೌಲ್ಯದ ಅರಿವು ಮೂಡಿಸುತ್ತದೆ ಎಂದು ತಿಳಿಸಿದರು.

ಜೆಸಿಐ ಶಿವಮೊಗ್ಗ ಸಹ್ಯಾದ್ರಿಯ ಅಧ್ಯಕ್ಷರಾಗಿ ಸತೀಶ್ ಚಂದ್ರ ಅವರು ಒಂದು ವರ್ಷದ ಅವಧಿಯಲ್ಲಿ ಉತ್ತಮವಾಗಿ ಮಾಡಿದ ಕೆಲಸಗಳು ಎಲ್ಲರಿಗೂ ಸ್ಫೂರ್ತಿ. ಮುಂದಿನ ವರ್ಷದಲ್ಲಿ ಕಾರ್ಯ ನಿರ್ವಹಿಸಲಿರುವ ಹೊಸ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಜೆಸಿಐ ಸಂಸ್ಥೆಗೆ ಸೇರಿದ ಎಲ್ಲರಿಗೂ ಶುಭವಾಗಲಿ ಎಂದು ಆಶಿಸಿದರು.

ಜೆಸಿಐ ಸೆನೆಟರ್, ನಿಕಟಪೂರ್ವ ಅಧ್ಯಕ್ಷ ಸತೀಶ್ ಚಂದ್ರ ಮಾತನಾಡಿ, ಹಳ್ಳಿಯಲ್ಲಿ ಬೆಳೆದ ನನಗೆ ಜೀವನವನ್ನು ಉತ್ತಮ ಮಾರ್ಗದಲ್ಲಿ ಮುನ್ನಡೆಸಲು ಹಾಗೂ ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಗಳಿಸಲು ಜೆಸಿಐ ಸಂಸ್ಥೆಯಲ್ಲಿನ ನಿರಂತರ ಪಾಲ್ಗೊಳ್ಳುವಿಕೆ ಸಹಕಾರಿಯಾಯಿತು ಎಂದು ಹೇಳಿದರು.

ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷನಾಗಿದ್ದ ಒಂದು ವರ್ಷದ ಅವಧಿಯಲ್ಲಿ ವೈವಿಧ್ಯ, ವಿಭಿನ್ನ ಹಾಗೂ ವಿಶೇಷ ಕಾರ್ಯಕ್ರಮಗಳ ಮೂಲಕ ನಮ್ಮ ಸಂಸ್ಥೆಯು ಎಲ್ಲರ ಗಮನ ಸೆಳೆಯಿತು. ನನ್ನೂರಿನ ಬೀರನಕೆರೆಯ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಯಿತು.

ಶಾಲೆಗಳ ದತ್ತು ಸ್ವೀಕಾರ, ತರಬೇತಿ, ಕಾನೂನು ಅರಿವು ಕಾರ್ಯಾಗಾರ, ಮಹಿಳಾ ಸಾಧಕರಿಗೆ ಗೌರವ, ಅತ್ಯಂತ ಯಶಸ್ವಿ ಸಪ್ತಾಹ ಕಾರ್ಯಕ್ರಮಗಳು ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ನಡೆಸಲಾಯಿತು ಎಂದು ತಿಳಿಸಿದರು.

2023ನೇ ಸಾಲಿನ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷೆ ಸುಷ್ಮಾ ಬಿ. ಹಿರೇಮಠ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯಲ್ಲಿಯು ನಾಯಕತ್ವ ಬೆಳೆಯುವಲ್ಲಿ ಜೆಸಿಐ ಸಂಸ್ಥೆಯು ಮಹತ್ತರ ಪಾತ್ರ ವಹಿಸುತ್ತದೆ. ನಾನು ಜೆಸಿ ಸದಸ್ಯನಾದ ನಂತರ ಉತ್ತಮ ತರಬೇತಿ ದೊರೆಯಿತು. ಹೆಚ್ಚು ಹೆಚ್ಚು ಜನರ ಒಡನಾಟದ ಜತೆಯಲ್ಲಿ ಸೇವಾ ಕಾರ್ಯಗಳನ್ನು ನಡೆಸಲು ಸಾಧ್ಯವಾಯಿತು ಎಂದು ಹೇಳಿದರು.

ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಸಂಸ್ಥೆಯ 15 ವರ್ಷಗಳಲ್ಲಿ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ್ದು, ಒಂದು ವರ್ಷದ ಅವಧಿಯಲ್ಲಿ ಅತ್ಯಂತ ಹೆಚ್ಚಿನ ಸಮಾಜಮುಖಿ ಹಾಗೂ ಸೇವಾ ಕಾರ್ಯಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.

ಜೆಎಸ್‌ಎಸ್ ಕಾಲೇಜು ಪ್ರಾಚಾರ್ಯೆ ಡಾ. ಕವಿತಾ ರಾಜ್, ಜೆಸಿಐ ವಲಯ ಅಧ್ಯಕ್ಷ ಅನುಷ್ ಗೌಡ, ವಲಯ ಉಪಾಧ್ಯಕ್ಷ ಮಲ್ಲಿಕಾರ್ಜುನ್, ಕಾರ್ಯಕ್ರಮ ನಿರ್ದೇಶಕ ಮಂಜುನಾಥರಾವ್ ಕದಂ, 2023ರ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಕಾರ್ಯದರ್ಶಿ ಡಾ. ಲಲಿತಾ ಭರತ್, 2022ರ ಕಾರ್ಯದರ್ಶಿ ಸಂತೋಷ್ ಕುಮಾರ್ ಬಿ.ಎನ್., ಕಿಶೋರ್‌ಕುಮಾರ್.ಡಿ, ಕೀರ್ತನಾ ಕಿಶೋರ್, ಡಾ. ಅಖಿಲಾ, ಗೌರಿ ಸರ್ಜಿ ಮತ್ತಿತರರು ಉಪಸ್ಥಿತರಿದ್ದರು.

ಸಾಮಾಜಿಕ ಕಾರ್ಯಗಳಲ್ಲಿ ವಿದ್ಯಾರ್ಥಿಗಳು ನಿರಂತರ ಪಾಲ್ಗೊಳ್ಳಬೇಕು- ಸರ್ಜಾ ಜಗದೀಶ್

0

ಸಮಾಜಮುಖಿ ಮನೋಭಾವ ಬೆಳೆಸುವಲ್ಲಿ ಹಾಗೂ ನಾಯಕತ್ವ ಬೆಳೆಸುವಲ್ಲಿ ಇಂಟರ‍್ಯಾಕ್ಟ್ ಕ್ಲಬ್ ಸಹಕಾರಿಯಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ರೋಟರಿ ಕ್ಲಬ್ ಶಿವಮೊಗ್ಗ ಉತ್ತರ ಅಧ್ಯಕ್ಷ ಸರ್ಜಾ ಜಗದೀಶ್ ಹೇಳಿದರು.

ಶಿವಮೊಗ್ಗದ ಮಿಳಘಟ್ಟ ಸರ್ಕಾರಿ ಪ್ರೌಢಶಾಲೆಯಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಉತ್ತರ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂತನ ಇಂಟರ‍್ಯಾಕ್ಟ್ ಕ್ಲಬ್‌ಗೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ವೃದ್ಧಿಸುವ ಜತೆಯಲ್ಲಿ ಸಮಾಜಕ್ಕೆ ಕೊಡುಗೆ ನೀಡಲು ಆರಂಭಿಸುತ್ತಾರೆ. ನಾಯಕತ್ವ ಭಾವದಿಂದ ಎಲ್ಲರೂ ಮುಂದಾಳತ್ವ ವಹಿಸಿ ಸೇವೆ ಮಾಡಬೇಕು ಎಂದು ತಿಳಿಸಿದರು.

ಮಾಜಿ ಸಹಾಯಕ ಗವರ್ನರ್ ರವೀಂದ್ರನಾಥ ಐತಾಳ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ಲಬ್ ಆಶ್ರಯದಲ್ಲಿ ಆಯೋಜಿಸುವ ಸಾಮಾಜಿಕ ಕಾರ್ಯಗಳಲ್ಲಿ ವಿದ್ಯಾರ್ಥಿಗಳು ನಿರಂತರವಾಗಿ ಪಾಲ್ಗೊಳ್ಳಬೇಕು. ಇದರಿಂದ ಸ್ವಯಂ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ತರಬೇತಿ ಹಾಗೂ ವ್ಯಕ್ತಿತ್ವ ವಿಕಸನ ಸೇರಿದಂತೆ ಮಕ್ಕಳ ಶಿಕ್ಷಣಕ್ಕಾಗಿ ಅನುಕೂಲವಾಗುವ ಹಾಗೂ ಸೇವಾ ಕಾರ್ಯಗಳನ್ನು ನಡೆಸಲಾಗುತ್ತದೆ. ಉತ್ತಮ ಮೌಲ್ಯಯುತ ಅಂಶಗಳನ್ನು ಕ್ಲಬ್ ಮುಖಾಂತರ ಕಲಿಸಲಾಗುತ್ತದೆ ಎಂದು ಹೇಳಿದರು.

ಮಿಳಘಟ್ಟ ಸರ್ಕಾರಿ ಪ್ರೌಢಶಾಲೆಯಲ್ಲಿ ನೂತನ ಇಂಟರ‍್ಯಾಕ್ಟ್ ಕ್ಲಬ್ ನ ನೂತನ ಅಧ್ಯಕ್ಷರಾಗಿ ನಿರಂಜನ ಮತ್ತು ಕಾರ್ಯದರ್ಶಿಯಾಗಿ ಪಾರ್ಥ ಅವರು ಆಡಳಿತ ಮಂಡಳಿಯೊಂದಿಗೆ ಅಧಿಕಾರ ಸ್ವೀಕರಿಸಿದರು. ಇಂಟರ‍್ಯಾಕ್ಟ್ ಕ್ಲಬ್ ನಿಯಮಾವಳಿಯನ್ನು ಯುವಜನ ನಿರ್ದೇಶಕ ಬಸವರಾಜಪ್ಪ ತಿಳಿಸಿದರು.

ಮುಖ್ಯಶಿಕ್ಷಕ ಉಮಾಶಂಕರ ಮಾತನಾಡಿ, ಮಕ್ಕಳಲ್ಲಿ ಯುವ ಮುಖಂಡತ್ವ, ಸೇವಾ ಮನೋಭಾವ ಮತ್ತು ಅಂತರಾಷ್ಟ್ರೀಯ ತಿಳುವಳಿಕೆಗೆ ಒತ್ತು ನೀಡುವ ರೋಟರಿಯ ಕಾರ್ಯ ಪ್ರಶಂಸನೀಯ ಎಂದು ತಿಳಿಸಿದರು.

ಸಭೆಯಲ್ಲಿ ವಾರಿಜಾ ಜಗದೀಶ್ ಕಾರ್ಯಕ್ರಮದ ನಿರೂಪಣೆ ಮಾಡಿದರು. ಕಾರ್ಯದರ್ಶಿ ವೆಂಕಟೇಶ ವಂದನಾರ್ಪಣೆ ಮಾಡಿದರು.

ಫೆಬ್ರವರಿ 11 ರಂದು ಶಿವಮೊಗ್ಗದಲ್ಲಿ ರಾಷ್ಟ್ರೀಯ ಲೋಕ ಅದಾಲತ್

0

ಫೆಬ್ರವರಿ 11 ರ ಶನಿವಾರದಂದು ರಾಷ್ಟ್ರೀಯ ಲೋಕ್ ಅದಾಲತ್ ನಡೆಯಲಿದ್ದು, ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಸಿವಿಲ್ ಪ್ರಕರಣಗಳು, ರಾಜೀಯಾಗಬಹುದಾದ ಕ್ರಿಮಿನಲ್ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಮಾಡಲಾಗುವುದು.

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ನವದೆಹಲಿ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ಇವರ ನಿರ್ದೇಶನದ ಮೇರೆಗೆ 11.02.2023 ರಂದು ಜಿಲ್ಲೆಯಲ್ಲಿ ಲೋಕ್ ಅದಾಲತ್ ನಡೆಯಲಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಯಬಹುದು.

ಈ ಲೋಕ್ ಅದಾಲತ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಎಲ್ಲಾ
ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕಾಗಿ ಬಾಕಿ ಇರುವ ಸಿವಿಲ್, ವೈವಾಹಿಕ, ಮೋಟಾರು ಪರಿಹಾರ ಪ್ರಕರಣಗಳು, ಚೆಕ್ ಬೌನ್ಸ್, ರಾಜೀಯಾಗಬಹುದಾದ ಕ್ರಿಮಿನಲ್ ಪ್ರಕರಣಗಳು ಹಾಗೂ ಕಲಂ 6 ಹಿಂದೂ ವಾರಸು ಕಾಯ್ದೆಗೆ ಸಂಬಂಧಿಸಿದಂತೆ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯವು ವಿನೀತ ಶರ್ಮ ವಿರುದ್ಧ ರಾಕೇಶ್ ಶರ್ಮ ಮತ್ತು ಇತರರು ಪ್ರಕರಣದಲ್ಲಿ 2020 ರ ಆಗಸ್ಟ್ 11 ರಂದು ನೀಡಿರುವ ತೀರ್ಪಿನನ್ವಯ ಹೆಣ್ಣು ಮಕ್ಕಳಿಗೂ ಸಹ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಪಾಲಿರುವ ಕುರಿತು ಹಾಗೂ ವಿಭಜನಾ ಪ್ರಕರಣಗಳು ಮತ್ತು ಇತರೆ ಪ್ರಕರಣಗಳನ್ನು ಗುರುತಿಸಿ, ಈ ಪ್ರಕರಣಗಳ ಉಭಯ ಕಕ್ಷಿದಾರರನ್ನು ಕರೆಯಿಸಿಕೊಂಡು ಅವರ ಒಪ್ಪಿಗೆಯ ಪ್ರಕಾರ ರಾಜೀ ಸಂಧಾನದ ಮೂಲಕ ಪ್ರಕರಣಗಳ ಇತ್ಯರ್ಥ ಮಾಡಲಾಗುವುದು.

ಬ್ಯಾಂಕುಗಳಿಗೆ ಸಂಬಂಧಿಸಿದ ಸಾಲದ ಹಣದ ವಸೂಲಾತಿ ಪ್ರಕರಣಗಳು, ವಿದ್ಯುಚ್ಛಕ್ತಿ, ಜಲಮಂಡಳಿ ಹಾಗೂ ನ್ಯಾಯಾಲಯಕ್ಕೆ ಬರುವಂತಹ ಇತರೆ ಪ್ರಕರಣಗಳನ್ನು ಪೂರ್ವ ವ್ಯಾಜ್ಯಗಳೆಂದು ಪರಿಗಣಿಸಿ, ಅವುಗಳಲ್ಲಿ ಉಭಯ ಕಕ್ಷಿದಾರರನ್ನು ಕರೆಸಿ ರಾಜೀ ಸಂಧಾನದ ಮೂಲಕ ವಿವಾದವನ್ನು ಬಗೆಹರಿಸಿ ಅವಾರ್ಡ್ ಪಾಸು ಮಾಡಲಾಗುವುದು.

ಈ ಅವಾರ್ಡ್‌ ನ್ಯಾಯಾಲಯದಲ್ಲಿ ಮಾಡಬಹುದಾದ ಡಿಕ್ಕಿ ಇದ್ದಂತೆ, ಅಂತಹ ಅವಾಡ್‌ರ್ಗಳನ್ನು ಸಂಬಂಧಪಟ್ಟ ಸಿವಿಲ್ ನ್ಯಾಯಾಲಯಗಳಲ್ಲಿ ಅಮಲ್‌ಜಾವಣೆ ಮಾಡಲು ಕಾನೂನಿನಲ್ಲಿ ಅವಕಾಶ ಇದೆ.

ಇದರಿಂದ ಕಕ್ಷಿದಾರರಿಗೆ ನ್ಯಾಯಾಲಯದ ಖರ್ಚು ಹಾಗೂ ಅವರ ಸಮಯ ಉಳಿತಾಯವಾಗುತ್ತದೆ. ಅಲ್ಲದೇ ಶೀಘ್ರವಾಗಿ
ನ್ಯಾಯದಾನವಾಗುತ್ತದೆ. ಆದ್ದರಿಂದ ಜನತೆ ಇಂತಹ ಪ್ರಕ್ರಿಯೆಯ ಉಪಯೋಗ ಪಡೆದಕೊಳ್ಳಬಹುದಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ರಾಜಣ್ಣ ಸಂಕಣ್ಣನವರ್ ತಿಳಿಸಿದ್ದಾರೆ.

ಫೆಬ್ರವರಿ 11 ರಂದು ಶಿವಮೊಗ್ಗದಲ್ಲಿ ರಾಷ್ಟ್ರೀಯ ಲೋಕ ಅದಾಲತ್

0

ಫೆಬ್ರವರಿ 11 ರ ಶನಿವಾರದಂದು ರಾಷ್ಟ್ರೀಯ ಲೋಕ್ ಅದಾಲತ್ ನಡೆಯಲಿದ್ದು, ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಸಿವಿಲ್ ಪ್ರಕರಣಗಳು, ರಾಜೀಯಾಗಬಹುದಾದ ಕ್ರಿಮಿನಲ್ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಮಾಡಲಾಗುವುದು.

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ನವದೆಹಲಿ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ಇವರ ನಿರ್ದೇಶನದ ಮೇರೆಗೆ 11.02.2023 ರಂದು ಜಿಲ್ಲೆಯಲ್ಲಿ ಲೋಕ್ ಅದಾಲತ್ ನಡೆಯಲಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಯಬಹುದು.

ಈ ಲೋಕ್ ಅದಾಲತ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಎಲ್ಲಾ
ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕಾಗಿ ಬಾಕಿ ಇರುವ ಸಿವಿಲ್, ವೈವಾಹಿಕ, ಮೋಟಾರು ಪರಿಹಾರ ಪ್ರಕರಣಗಳು, ಚೆಕ್ ಬೌನ್ಸ್, ರಾಜೀಯಾಗಬಹುದಾದ ಕ್ರಿಮಿನಲ್ ಪ್ರಕರಣಗಳು ಹಾಗೂ ಕಲಂ 6 ಹಿಂದೂ ವಾರಸು ಕಾಯ್ದೆಗೆ ಸಂಬಂಧಿಸಿದಂತೆ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯವು ವಿನೀತ ಶರ್ಮ ವಿರುದ್ಧ ರಾಕೇಶ್ ಶರ್ಮ ಮತ್ತು ಇತರರು ಪ್ರಕರಣದಲ್ಲಿ 2020 ರ ಆಗಸ್ಟ್ 11 ರಂದು ನೀಡಿರುವ ತೀರ್ಪಿನನ್ವಯ ಹೆಣ್ಣು ಮಕ್ಕಳಿಗೂ ಸಹ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಪಾಲಿರುವ ಕುರಿತು ಹಾಗೂ ವಿಭಜನಾ ಪ್ರಕರಣಗಳು ಮತ್ತು ಇತರೆ ಪ್ರಕರಣಗಳನ್ನು ಗುರುತಿಸಿ, ಈ ಪ್ರಕರಣಗಳ ಉಭಯ ಕಕ್ಷಿದಾರರನ್ನು ಕರೆಯಿಸಿಕೊಂಡು ಅವರ ಒಪ್ಪಿಗೆಯ ಪ್ರಕಾರ ರಾಜೀ ಸಂಧಾನದ ಮೂಲಕ ಪ್ರಕರಣಗಳ ಇತ್ಯರ್ಥ ಮಾಡಲಾಗುವುದು.

ಬ್ಯಾಂಕುಗಳಿಗೆ ಸಂಬಂಧಿಸಿದ ಸಾಲದ ಹಣದ ವಸೂಲಾತಿ ಪ್ರಕರಣಗಳು, ವಿದ್ಯುಚ್ಛಕ್ತಿ, ಜಲಮಂಡಳಿ ಹಾಗೂ ನ್ಯಾಯಾಲಯಕ್ಕೆ ಬರುವಂತಹ ಇತರೆ ಪ್ರಕರಣಗಳನ್ನು ಪೂರ್ವ ವ್ಯಾಜ್ಯಗಳೆಂದು ಪರಿಗಣಿಸಿ, ಅವುಗಳಲ್ಲಿ ಉಭಯ ಕಕ್ಷಿದಾರರನ್ನು ಕರೆಸಿ ರಾಜೀ ಸಂಧಾನದ ಮೂಲಕ ವಿವಾದವನ್ನು ಬಗೆಹರಿಸಿ ಅವಾರ್ಡ್ ಪಾಸು ಮಾಡಲಾಗುವುದು.

ಈ ಅವಾರ್ಡ್‌ ನ್ಯಾಯಾಲಯದಲ್ಲಿ ಮಾಡಬಹುದಾದ ಡಿಕ್ಕಿ ಇದ್ದಂತೆ, ಅಂತಹ ಅವಾಡ್‌ರ್ಗಳನ್ನು ಸಂಬಂಧಪಟ್ಟ ಸಿವಿಲ್ ನ್ಯಾಯಾಲಯಗಳಲ್ಲಿ ಅಮಲ್‌ಜಾವಣೆ ಮಾಡಲು ಕಾನೂನಿನಲ್ಲಿ ಅವಕಾಶ ಇದೆ.

ಇದರಿಂದ ಕಕ್ಷಿದಾರರಿಗೆ ನ್ಯಾಯಾಲಯದ ಖರ್ಚು ಹಾಗೂ ಅವರ ಸಮಯ ಉಳಿತಾಯವಾಗುತ್ತದೆ. ಅಲ್ಲದೇ ಶೀಘ್ರವಾಗಿ
ನ್ಯಾಯದಾನವಾಗುತ್ತದೆ. ಆದ್ದರಿಂದ ಜನತೆ ಇಂತಹ ಪ್ರಕ್ರಿಯೆಯ ಉಪಯೋಗ ಪಡೆದಕೊಳ್ಳಬಹುದಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ರಾಜಣ್ಣ ಸಂಕಣ್ಣನವರ್ ತಿಳಿಸಿದ್ದಾರೆ.

ಕಂಪ್ಯೂಟರ್ ಪ್ರೊಜೆಕ್ಟರ್ ಸಾಧನಗಳನ್ನ ಸೂಕ್ತವಾಗಿ ವಿದ್ಯಾರ್ಥಿಗಳು ಬಳಸಬೇಕು

0

ಚಿಕ್ಕಮಗಳೂರು: ಗ್ರಾಮೀಣ ಶಾಲೆಯ ಮಕ್ಕಳು ಕ್ರೀಡಾ ಚಟುವಟಿಕೆ ಹಾಗೂ ಪಠ್ಯದಲ್ಲಿ ಹೆಚ್ಚು ಆಸಕ್ತಿಯಿಂದ ಅಧ್ಯಯನ ನಡೆಸುವ ಮೂಲಕ ಪಟ್ಟಣದ ಮಕ್ಕಳಿಗಿಂತ ತಾವೇನು ಕಡಿಮೆವಿಲ್ಲ ವೆಂಬಂತೆ ಬಿಂಬಿಸಿಕೊಳ್ಳಬೇಕು ಸಾಧನೆ ಮಾಡಬೇಕು ಎಂದು ಜಿಲ್ಲಾ ರೌಂಡ್ ಟೇಬಲ್ ಸಂಸ್ಥೆ ಅಧ್ಯಕ್ಷ ದೇವಾ ನಂದ್ ಅವರು ಹೇಳಿದರು.

ತಾಲ್ಲೂಕಿನ ಕೆಳಗೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಥೆ ವತಿಯಿಂದ ಉಚಿತ ಸ್ಮಾರ್ಟ್ಕ್ಲಾಸ್ ಕಾರ್ಯಕ್ರಮ ಆಯೋಜಿಸಿ ಮಂಗಳವಾರ ಅವರು ಮಾತನಾಡುತ್ತಿದ್ದರು.

ಶಾಲೆಯ ವಿದ್ಯಾರ್ಥಿಗಳಿಗೆ ಕಂಪ್ಯೂಟರ್, ಪ್ರಾಜೆಕ್ಟರ್ ಸೇರಿದಂತೆ ಅನೇಕ ರೀತಿಯ ಸ್ಮಾರ್ಟ್ಕ್ಲಾಸ್‌ನ್ನು ಪರಿಚಯಿಸಲಾಯಿತು. ಇವುಗಳನ್ನು ಮಕ್ಕಳು ಅತ್ಯಂತ ಶ್ರದ್ದೆಯಿಂದ ಅಭ್ಯಾಸಿಸುವ ಮೂಲಕ ಕಾರ್ಯ ಕ್ರಮದ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಸಂಸ್ಥೆ ಮಾಜಿ ಅಧ್ಯಕ್ಷ ಹೆಚ್.ಡಿ.ವಿನಯ್‌ರಾಜ್ ಮಾತನಾಡಿ ಇದೇ ಮೊದಲ ಬಾರಿಗೆ ಸಂಸ್ಥೆ ವತಿ ಯಿಂದ ಕೆಳಗೂರಿನಲ್ಲಿ ಸ್ಮಾರ್ಟ್ಕ್ಲಾಸ್ ಆಯೋಜನೆ ಮಾಡಲಾಗಿದೆ.

ಮುಂದಿನ ದಿನಗಳಲ್ಲಿ ಜನೋಪ ಯೋಗಿ ಹಾಗೂ ಮಕ್ಕಳಿಗೆ ಉತ್ತಮ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದು ತಿಳಿಸಿದರು.

ಇದೇ ವೇಳೆ ಸ್ಲಾರ್ಟ್ಕ್ಲಾಸ್ ಕಾರ್ಯಕ್ರಮದಲ್ಲಿ ಶಾಲೆಯ ಸುಮಾರು 300 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ನಾಗಾರ್ಜುನ್, ಕಾರ್ಯದರ್ಶಿ ಅಶ್ಚಿನ್, ಸ್ಥಳೀಯ ಮುಖಂಡ ಸತೀಶ್ ಕಬ್ಬಿಣಸೇತುವೆ ಹಾಗೂ ಶಾಲಾ ಸಿಬ್ಬಂದಿಗಳು ಹಾಜರಿದ್ದರು.

ದೇಶದಲ್ಲಿ ಕೊರೋನ ಸೋಂಕಿನ ಪ್ರಕರಣಇನ್ನೂ ಪತ್ತೆಯಾಗುತ್ತಿದೆ

0

ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 171 ಹೊಸ ಕೊರೊನಾವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಇದೇ ವೇಳೆ ಸಕ್ರಿಯ ಪ್ರಕರಣಗಳ ಸಂಖ್ಯೆ 2,342ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಲಭ್ಯವಾದ ಮಾಹಿತಿ ಪ್ರಕಾರ, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 4,46,80,386ಕ್ಕೆ ಏರಿಕೆಯಾಗಿದೆ. ಸಾವಿಗೀಡಾದವರ ಸಂಖ್ಯೆ 5,30,722ಕ್ಕೆ ಏರಿಕೆಯಾಗಿದೆ.

ಒಟ್ಟು ಸೋಂಕು ಪ್ರಕರಣಗಳ ಪೈಕಿ ಶೇ 0.01ರಷ್ಟು ಸಕ್ರಿಯ ಪ್ರಕರಣಗಳಿದ್ದು, ದೈನಂದಿನ ಪಾಸಿಟಿವಿಟಿ ದರ ಶೇ 0.09ರಷ್ಟಿದೆ ಮತ್ತು ಮರಣ ಪ್ರಮಾಣ 1.19ರಷ್ಟಿದೆ. ರಾಷ್ಟ್ರೀಯ ಕೊರೋನಾ ಚೇತರಿಕೆ ದರ ಶೇ 98.80ಕ್ಕೆ ಏರಿಕೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಇನ್ನು ಇದುವರೆಗೆ 4,41,47,322 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ದೇಶದಾದ್ಯಂತ ನಡೆಯುತ್ತಿರುವ ಲಸಿಕಾ ಅಭಿಯಾನದ ಅಡಿಯಲ್ಲಿ ಇದುವರೆಗೆ 220.15 ಕೋಟಿಗೂ ಅಧಿಕ ಕೊರೋನಾ ವಿರುದ್ಧದ ಲಸಿಕಾ ಡೋಸ್ಗಳನ್ನು ವಿತರಿಸಲಾಗಿದೆ ಎಂದು ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ.

ಏಕದಿನ ಕ್ರಿಕೆಟ್ ಶ್ರೀಲಂಕಾ ವಿರುದ್ಧ ಭಾರತಕ್ಕೆ ಪ್ರಯಾಸದ ಗೆಲುವು

0

ಭಾರತ ಮತ್ತು ಶ್ರೀಲಂಕಾ ನಡುವಣ ಮೊದಲ ಏಕದಿನ ಕ್ರಿಕೆಟ್ ಪಂದ್ಯ ಚೇತೋ ಹಾರಿಯಾಗಿತ್ತು. ಟಾಸ್ಕ್ ಗೆದ್ದ ಭಾರತ ನಿಗದಿತ 50 ಓವರ್ ಗಳಲ್ಲಿ 373 ರನ್ ಕಲೆ ಹಾಕಿತು.

ಇದರಲ್ಲಿ ಕೊಹ್ಲಿ ಬಾರಿಸಿದ 113 ರನ್ ಗಳು ಉತ್ತಮ ಕೊಡುಗೆಯಾಗಿತ್ತು. 87 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 12 ಬೌಂಡರಿಗಳಿದ್ದವು.

ಅವರು ಗಳಿಸಿದ ಶತಕಗಳಲ್ಲಿ ಇದು 45 ನೇಯದ್ದಾಗಿದೆ. ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿ 49 ಶತಕ ದಾಖಲಾಗಿವೆ. ಅಂದರೆ ಇನ್ನು ನಾಲ್ಕು ಶತಕಗಳನ್ನು ಮುಂಬರುವ ಏಕದಿನ ಪಂದ್ಯಗಳಲ್ಲಿ ಕೊಹ್ಲಿ ಅವರು ಗಳಿಸಿದರೆ, ಸರಿಸಾಟಿಯಾಗಬಹುದು.

ಭಾರತದ ಆರಂಭ ಉತ್ತಮ ಹಾಗೂ ಜಬರ್ದಸ್ತ್ ಆಗಿತ್ತು. ಇದರಲ್ಲಿರೋಹಿತ್ ಶರ್ಮಾ 83, ಗಿಲ್ 70, ಹೆಚ್ಚಿನ ಕೊಡುಗೆ ನೀಡಿದರು.

ಶ್ರೀಲಂಕಾ ತಂಡದ ಕಸುನ್ ರಜಿತ 3 ವಿಕೆಟ್ ಪಡೆದರೆ ಇನ್ನುಳಿದವರು ತಲ ಒಂದೊಂದು ವಿಕೆಟ್ ಪಡೆದರು. ಭಾರತ ತಂಡದ ಏಳು ವಿಕೆಟ್ ಕೀಳಲು ಲಂಕನ್ನರು ಸಫಲರಾದರು.

ಹಾಗೂ ಆಟ ಆರಂಭಿಸಿದ ಶ್ರೀಲಂಕಾ ಮೊದಲನೇ 19 ರನ್ ಗೆ ಪ್ರಥಮ ವಿಕೆಟ್ ಕಳೆದುಕೊಂಡಿತು. ಫರ್ನಾಂಡೊ ಅವರು ಉಮ್ರಾನ್ ಗೆ ತಮ್ಮ ವಿಕೆಟ್ ಒಪ್ಪಿಸಿದರು.

ಶ್ರೀಲಂಕಾ ಅತ್ಯಂತ ಪ್ರತಿರೋಧ ಒಡ್ಡಿ ಬ್ಯಾಟಿಂಗ್ ಆರಂಭಿಸಿತು. ಆದರೆ ಭಾರತದ ಬೌಲಿಂಗ್ ಆರಂಭದಲ್ಲಿ ಮೊನಚಾಗಿತ್ತು. 3 ವಿಕೆಟ್ ತಪ ತಪನೆ ಬಿದ್ದಿತು.ಆದರೆ ಮಧ್ಯಮ ಕ್ರಮಾಂಕ ಹಾಗೂ ಬಾಲಂ ಗೋಚಿಗಳು ಕಚ್ಚಿಕೊಂಡು ಬ್ಯಾಟ್ ಮಾಡಿದರು. ಅತ್ಯಂತ ಆಕರ್ಷಕವೆಂದರೆ ಶ್ರೀಲಂಕಾ ಕ್ಯಾಪ್ಟನ್ ಶನಕ ಅವರ ಬ್ಯಾಟಿಂಗ್ ವೈಖರಿ. 8 ನೇ ವಿಕೆಟ್ ಜೊತೆಯಾಗುವಂತೆ ಅತ್ಯಂತ ಜಾಗರೂಕ, ಜವಾಬ್ದಾರಿ ಬ್ಯಾಟಿಂಗ್ ಅವರದ್ದಾಗಿತ್ತು. ಕ್ರಿಕೆಟ್ ಪ್ರಿಯರಿಗೆ ಅವರ ಆಟ ಅವಿಸ್ಮರಣೀಯ ಒಟ್ಟಾರೆ 50 ಓವರ್ ಗಳಲ್ಲಿ ಶ್ರೀಲಂಕಾ 8 ವಿಕೆಟ್ ನಷ್ಟಕ್ಕೆ 306ರನ್ ಕಲೆ ಹಾಕಿತು. ಭಾರತ 67 ರನ್ ಗಳಿಂದ ಜಯಗಳಿಸಿ ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು.