Wednesday, April 1, 2026
Wednesday, April 1, 2026
Home Blog Page 1335

ವಿವೇಕಾನಂದರ ಜೀವನ ಸಂದೇಶ ಯುವಜನರಿಗೆ ಸ್ಫೂರ್ತಿ-ಎ.ಸಿ. ರಾಮಚಂದ್ರ

0

ದೇಶದ ಯುವಜನತೆಗೆ ಸ್ವಾಮಿ ವಿವೇಕಾನಂದರು ಸ್ಫೂರ್ತಿ. ಉತ್ತಮ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ಸ್ವಾಮಿ ವಿವೇಕಾನಂದರ ಜೀವನ ಸಂದೇಶ ಯುವಪೀಳಿಗೆಗೆ ದಾರಿದೀಪ ಎಂದು ರೋಟರಿ ಶಿವಮೊಗ್ಗ ಪೂರ್ವ ಎಜುಕೇಷನಲ್ ಮತ್ತು ಛಾರಿಬಟಲ್ ಟ್ರಸ್ಟ್ ಕಾರ್ಯದರ್ಶಿ ಎಸ್.ಸಿ.ರಾಮಚಂದ್ರ ಹೇಳಿದರು.

ರೋಟರಿ ಪೂರ್ವ ಆಂಗ್ಲ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ 160ನೇ ಜನ್ಮ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ನಾಡು ಕಂಡ ಅಪ್ರತಿಮ ಶ್ರೇಷ್ಠ ಸಂತ, ಚಿಕಾಗೋದ ಭಾಷಣದಿಂದ ಯುವಜನರು ಪರಿವರ್ತನೆಗೊಂಡಿದ್ದಾರೆ. ರಾಷ್ಟ್ರೀಯತೆ ಬಗ್ಗೆ ಮಾತನಾಡುವ ಜತೆಯಲ್ಲಿ ವಿಶ್ವ ಮಾನವ ಸಂದೇಶವನ್ನು ಸಾರಿದರು ಎಂದು ತಿಳಿಸಿದರು.

ರೋಟರಿ ಶಿವಮೊಗ್ಗ ಪೂರ್ವ ಎಜುಕೇಷನಲ್ ಮತ್ತು ಛಾರಿಬಟಲ್ ಟ್ರಸ್ಟ್ ಖಜಾಂಚಿ ಜಿ.ವಿಜಯ್ ಕುಮಾರ್ ಮಾತನಾಡಿ, ಯುವ ಸಮೂಹ ಪ್ರತಿಯೊಂದು ರಾಷ್ಟ್ರಗಳ ದಿವ್ಯ ಸಂಪತ್ತು. ಯುವ ಸಮೂಹದ ಶಕ್ತಿ, ಸಾಮರ್ಥ್ಯಗಳು ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ಎಂದು ಹೇಳಿದರು.

ಯುವಕರು ಆಧುನಿಕತೆ ಮತ್ತು ತಾಂತ್ರಿಕತೆಯ ಹರಿಕಾರರು ಹಾಗೂ ವಿಭಿನ್ನ ಕ್ಷೇತ್ರದಲ್ಲಿ ಕನಸುಗಳನ್ನು ಕಾಣುವ ಕನಸುಗಾರರು. ಆತ್ಮವಿಶ್ವಾಸ, ಧೈರ್ಯ, ಸ್ಥೈರ್ಯ ಮತ್ತು ಶ್ರಮಗಳ ಸಂಗಮವೇ ಯುವ ಸಮೂಹ. ಸ್ವಾಮಿ ವಿವೇಕರ ಜನ್ಮ ದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ರಾಷ್ಟ್ರದಾದ್ಯಂತ ಸಂಭ್ರಮದಿಂದ ಆಚರಿಸಿ ಗೌರವಿಸುತ್ತಿದ್ದೇವೆ ಎಂದು ತಿಳಿಸಿದರು.

ಜಂಟಿ ಕಾರ್ಯದರ್ಶಿ ನಾಗವೇಣಿ ಎಸ್.ಆರ್. ಮಾತನಾಡಿ, ಸ್ವಾಮಿ ವಿವೇಕಾನಂದರ ಕೃತಿಗಳಲ್ಲಿ ಭೋಧಿಸಿದ ಕರ್ಮ ಯೋಗ, ರಾಜ ಯೋಗ, ಭಕ್ತಿ ಯೋಗ ಮತ್ತು ಜ್ಞಾನ ಯೋಗಗಳ ಬಗ್ಗೆ ಇಂದಿನ ಯುವ ಜನರು ತಿಳಿದುಕೊಳ್ಳುವುದು ಒಳ್ಳೆಯದು ಎಂದರು.

ಈ ಸಮಾರಂಭದ ಪೂರ್ವದಲ್ಲಿ ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದರ ಭಾವಚಿತ್ರವನ್ನು ಬಿಡಿಸಲು ಹಾಗೂ ಸ್ವಾಮಿ ವಿವೇಕಾನಂದರ ಕುರಿತು ಪ್ರಬಂಧವನ್ನು ಬರೆಯಲು ವಿದ್ಯಾರ್ಥಿಗಳಿಗೆ ತಿಳಿಸಲಾಗಿತ್ತು. ಅತ್ಯುತ್ತಮವಾಗಿ ಚಿತ್ರ ಬಿಡಿಸಿದ ಮತ್ತು ಪ್ರಬಂಧವನ್ನು ಬರೆದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.

ರೋಟರಿ ಪೂರ್ವ ಆಂಗ್ಲ ಶಾಲೆಯ ಪ್ರಾಂಶುಪಾಲ ಸೂರ್ಯನಾರಾಯಣ್ ಆರ್., ರೋಟರಿ ಪೂರ್ವ ಕನ್ನಡ ಶಾಲೆಯ ಮುಖ್ಯೋಪಾಧ್ಯಾಯಿನಿ ಜಯಶೀಲಾ ಬಾಯಿ ಎಸ್. ಮತ್ತು ರಮ್ಯ, ಶಿಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು.

ಸಮಾಜಮುಖಿ ಆಶಯಗಳ ಕಾರ್ಯರೂಪಕ್ಕೆ ಜೆಸಿಐ ಅವಕಾಶ ಒದಗಿಸುತ್ತದೆ-ಗೀತಾಂಜಲಿ ಪ್ರಸನ್ನಕುಮಾರ್

0

ಸೇವೆಯೇ ಜೆಸಿಐ ಸಂಸ್ಥೆಯ ಪ್ರಮುಖ ಆಶಯ. ಸಮಾಜಮುಖಿ ಆಶಯವನ್ನು ಕಾರ್ಯರೂಪಕ್ಕೆ ತರುವ ವಿಶೇಷ ಅವಕಾಶವನ್ನು ಜೆಸಿಐ ಸಂಸ್ಥೆ ಒದಗಿಸುತ್ತದೆ ಎಂದು ಸೌರಭ ಟ್ರಸ್ಟ್ ನಿರ್ದೇಶಕಿ, ಲೇಖಕಿ ಗೀತಾಂಜಲಿ ಪ್ರಸನ್ನಕುಮಾರ್ ಹೇಳಿದರು.

ಶಿವಮೊಗ್ಗದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಜೆಸಿಐ ಶಿವಮೊಗ್ಗ ಭಾವನಾ ವತಿಯಿಂದ ಆಯೋಜಿಸಿದ್ದ 2023ನೇ ಸಾಲಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಜೆಸಿಐ ಸಂಸ್ಥೆಯಲ್ಲಿ ನಿರಂತರವಾಗಿ ಪಾಲ್ಗೊಳ್ಳುವುದರಿಂದ ಪ್ರತಿಯೊಬ್ಬರಲ್ಲಿ ನಾಯಕತ್ವ ಗುಣ ಬೆಳೆಯುತ್ತದೆ. ಸೇವಾ ಮನೋಭಾವ ಮತ್ತು ಸಮಾಜಮುಖಿ ಆಲೋಚನೆಗಳಿಗೆ ಜೆಸಿಐ ಪ್ರತಿರೂಪ ಎಂದು ತಿಳಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಜೆಸಿಐ ಶಿವಮೊಗ್ಗ ಭಾವನಾ‌ ಸಂಸ್ಥೆ ‌ಮಾಡಿರುವ ವಿಶೇಷ ಕಾರ್ಯಗಳು ಎಲ್ಲರಿಗೂ ಸ್ಫೂರ್ತಿ. ಮುಂದಿನ ಸಾಲಿನಲ್ಲಿಯೂ ಈ ಸಂಸ್ಥೆ ಉತ್ತಮ ಕೆಲಸಗಳನ್ನು ಮಾಡುವಂತಾಗಲಿ ಎಂದು ಆಶಿಸಿದರು.

ಜೆಸಿಐ ಶಿವಮೊಗ್ಗ ಭಾವನಾ 2022ರ ಅಧ್ಯಕ್ಷೆ ಶಾರದಾ ಶೇಷಗಿರಿಗೌಡ ಮಾತನಾಡಿ, ಜೆಸಿಐ ಅಧ್ಯಕ್ಷೆ ಆಗಿದ್ದ ಅವಧಿಯಲ್ಲಿ ವಿಶೇಷವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ‘ನಮ್ಮ ನಡಿಗೆ ಹಳ್ಳಿ ಕಡೆಗೆ’ ಎಂಬ ವಿಶೇಷ ಕಾರ್ಯಕ್ರಮ ರೂಪಿಸಿ ಸೇವಾ ಚಟುವಟಿಕೆಗಳನ್ನು ನಡೆಸಿದೆವು. ಗ್ರಾಮೀಣ ಭಾಗದಲ್ಲಿ ಮಹಿಳೆಯರು, ಕೃಷಿಕರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲರಿಗೂ ಉಪಯುಕ್ತ ಆಗುವಂತೆ ಆಯೋಜಿಸಿದ್ದ ಸಮಾಜಮುಖಿ ಚಟುವಟಿಕೆಗಳು ವಲಯ ಮಟ್ಟದಲ್ಲಿ ಯಶಸ್ವಿಯಾಯಿತು ಎಂದು ಹೇಳಿದರು.

ಆರೋಗ್ಯ ಉಚಿತ ತಪಾಸಣಾ ಶಿಬಿರ, ಮಡಿಲು ಕಾರ್ಯಕ್ರಮ, ಸರ್ಕಾರಿ ಶಾಲೆ ದತ್ತು ಸ್ವೀಕಾರ ಹಾಗೂ ಅಭಿವೃದ್ಧಿ, ಪರಿಸರ ಕಾಳಜಿ ಕಾರ್ಯಕ್ರಮ, ವಿದ್ಯಾರ್ಥಿಗಳಿಗೆ ತರಬೇತಿ, ಯೋಧರಿಗೆ ನಮನ, ಕಾರ್ಮಿಕರಿಗೆ ಕಿಟ್ ವಿತರಣೆ ಸೇರಿದಂತೆ ವಿಶೇಷ ಸೇವಾ ಕಾರ್ಯಗಳನ್ನು ನಡೆಸಿದೇವು.

ಜೆಸಿಐ ನಲ್ಲಿ ನಿರಂತರವಾಗಿ ಪಾಲ್ಗೊಳ್ಳುವುದರಿಂದ ತಾಳ್ಮೆ, ಸಹನೆ ಹಾಗೂ ಮುಂದಾಳತ್ವ ಗುಣ ಬೆಳೆಯುತ್ತದೆ ಎಂದು ತಿಳಿಸಿದರು.

ಜೆಸಿಐ ‌ಶಿವಮೊಗ್ಗ ಭಾವನಾ 2023ರ ಅಧ್ಯಕ್ಷೆ ಪೂರ್ಣಿಮಾ ಸುನೀಲ್ ಮಾತನಾಡಿ, ಪ್ರತಿಯೊಬ್ಬರಲ್ಲಿ ಸೇವಾ ಮನೋಭಾವ ಹಾಗೂ ಸಮಾಜಮುಖಿ ಆಲೋಚನೆ ಬೆಳೆಸುವಲ್ಲಿ ಜೆಸಿಐ ಸಂಸ್ಥೆ ಮಹತ್ತರ ಪಾತ್ರ ವಹಿಸುತ್ತದೆ. ಒಂದು ವರ್ಷದ ಅವಧಿಯಲ್ಲಿ ಅತ್ಯಂತ ಹೆಚ್ಚಿನ‌ ಸಾಮಾಜಿಕ ಕಳಕಳಿ ಕಾರ್ಯಗಳನ್ನು ನಿರಂತರವಾಗಿ ಆಯೋಜಿಸಲಾಗುವುದು.

ಆರೋಗ್ಯ ಶಿಬಿರ, ತರಬೇತಿ ಕಾರ್ಯಾಗಾರ, ಸಾರ್ವಜನಿಕರಿಗೆ ಉಪಯುಕ್ತ ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಸ್ವಾಮಿ‌ ವಿವೇಕಾನಂದ ಜನ್ಮ‌ದಿನ ಪ್ರಯುಕ್ತ ವಿವೇಕಾನಂದರ ಭಾವಚಿತ್ರಕ್ಕೆ ಗಣ್ಯರಯ ಪುಷ್ಪನಮನ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಸ್ಕೂಲ್ ಮಕ್ಕಳಿಗೆ ಬ್ಯಾಗ್ ವಿತರಿಸಲಾಯಿತು.

ಜೆಸಿಐ ‌ಶಿವಮೊಗ್ಗ ಭಾವನಾ 2023ರ ಅಧ್ಯಕ್ಷೆ ಪೂರ್ಣಿಮಾ ಸುನೀಲ್, ಜೆಸಿಐ ವಲಯ ಅಧ್ಯಕ್ಷ ಅನುಷ್ ಗೌಡ, ವಲಯ ಉಪಾಧ್ಯಕ್ಷ ಟಿ.ಎಂ.ವೀರಸ್ವಾಮಿ, ಜೆಸಿಐ ಇಂಡಿಯಾ ರಾಷ್ಟ್ರೀಯ ತರಬೇತುದಾರ ಪ್ರಜ್ವಲ್ ಎಸ್ ಜೈನ್, ಕಾರ್ಯಕ್ರಮ ನಿರ್ದೇಶಕಿ ವಿಜಯಾ ಶಿವಕುಮಾರ್, 2023ರ ಜೆಸಿಐ ಶಿವಮೊಗ್ಗ ಭಾವನಾ ಕಾರ್ಯದರ್ಶಿ ಕವಿತಾ ಜೋಯಿಸ್, ಜೆಸಿಐ ಶಿವಮೊಗ್ಗ ಭಾವನಾ ಮಾಜಿ ಅಧ್ಯಕ್ಷೆ ಸುಗುಣಾ ಸತೀಶ್, ಕುಮಾರಿ ಜನ್ಯ ಮತ್ತಿತರರು ಉಪಸ್ಥಿತರಿದ್ದರು.

ಮನಸ್ಸಿನಿಂದ ಮನಸ್ಸಿಗೆ -13

0

ನಾವು ಒಂದೇ ಬಾರಿಗೆ ರಷ್ಯಾದ 200 ಸೈನಿಕರನ್ನು ಕೊಂದೆವು….ಉಕ್ರೇನ್…

ನಾವು ಅದಕ್ಕೆ ಪ್ರತೀಕಾರವಾಗಿ 600 ಉಕ್ರೇನ್ ಸೈನಿಕರನ್ನು ಕೊಂದೆವು……ರಷ್ಯಾ….

ಮನುಷ್ಯನನ್ನು ಮತ್ತೊಬ್ಬ ಮನುಷ್ಯ ಕೊಂದು ಆ ಸಾವನ್ನು ಸಂಭ್ರಮಿಸುವುದನ್ನು ನೋಡಿದರೆ ರಾಕ್ಷಸ ಸಂತತಿ ಈಗಲೂ ಜೀವಂತವಿದೆ ಎನಿಸುತ್ತದೆ.

ಹೆಚ್ಚು ಕಡಿಮೆ ಇನ್ನೇನು ಒಂದು ವರ್ಷವಾಗುತ್ತಿದೆ ರಷ್ಯಾ ಉಕ್ರೇನ್ ದೇಶದ ಮೇಲೆ ಆಕ್ರಮಣ ಮಾಡಿ. ಸಾವಿನ ಸಂಖ್ಯೆ ಲಕ್ಷಗಳಲ್ಲಿ ಲೆಕ್ಕ ಹಾಕಬೇಕು, ಗಾಯಾಳುಗಳ ಸಂಖ್ಯೆ ಅದಕ್ಕಿಂತ ಹೆಚ್ಚು, ವಲಸಿಗರ ಸಂಖ್ಯೆ ಕೋಟಿಗಳಲ್ಲಿ, ಆರ್ಥಿಕನಷ್ಟ ಮಿಲಿಯನ್ ಡಾಲರ್ ಗಳಲ್ಲಿ, ಮಾನವೀಯತೆಯ ನಷ್ಟ ಲೆಕ್ಕಕ್ಕೆ ಸಿಗುವುದಿಲ್ಲ, ಆದರೆ ಯುದ್ಧದ ಸಾವು ನೋವುಗಳಿಗೆ ವಿಶ್ವದ ಜನರ ಪ್ರತಿಕ್ರಿಯೆಗಳ ಲೆಕ್ಕ ಮಾತ್ರ ಬಹುತೇಕ ಶೂನ್ಯ…….

ಈ ಭೂಮಿ ಕೇವಲ ರಷ್ಯಾ ಉಕ್ರೇನ್ ನವರಿಗೆ ಮಾತ್ರ ಸೇರಿದ್ದಲ್ಲ. ಇಡೀ ವಿಶ್ವದ ಎಲ್ಲಾ ಜೀವರಾಶಿಗಳಿಗೂ ಇದರಲ್ಲಿ ಹಕ್ಕಿದೆ. ಗಾಳಿ ನೀರಿನ ಚಲನೆ ಇಡೀ ವಿಶ್ವವನ್ನೇ ವ್ಯಾಪಿಸುತ್ತದೆ….

ಅವರ್ಯಾರೋ ಹೊಡೆದಾಡಿಕೊಂಡರೆ ಅದು ನಮಗೆ ಸಂಬಂಧಿಸಿಲ್ಲ ಎಂದು ಸುಮ್ಮನಿದ್ದರೆ ನಾವು ಸಹ ನಾಶವಾಗುವುದು ನಿಶ್ಚಿತ. ಏಕೆಂದರೆ ಇದು ಯುದ್ಧ. ಯಾರದೋ ತಂತ್ರ ಅಥವಾ ಕುತಂತ್ರದಿಂದ ಒಂದು ವೇಳೆ ಊಹಿಸಲಾಗದ ಅನಾಹುತ ರಷ್ಯಾದ ಮೇಲಾದರೆ ಅವರು ಅದಕ್ಕೆ ಪ್ರತಿಕಾರವಾಗಿ ಅಣುಬಾಂಬು – ಹೈಡ್ರೋಜನ್ ಬಾಂಬ್ ಪ್ರಯೋಗಿಸುವುದು ಖಚಿತ. ಆಗ ನಾವು ಸಹ ಅದರ ಫಲಾನುಭವಿಗಳು ಎಂದು ವಿಶ್ವದ ಇತರ ಜನರು ಅರ್ಥ ಮಾಡಿಕೊಳ್ಳುತ್ತಲೇ ಇಲ್ಲ.

ವಿಶ್ವಸಂಸ್ಥೆ ಏನು ಮಾಡುತ್ತಿದೆಯೋ ಮಾಹಿತಿ ಇಲ್ಲ. ಕ್ರಿಶ್ಚಿಯನ್ ಧರ್ಮಗುರು ಪೋಪ್‌ ಏನು ಪ್ರಯತ್ನ ಮಾಡುತ್ತಿದ್ದಾರೋ ಗೊತ್ತಿಲ್ಲ…..

ಅಮೆರಿಕ ನೇತೃತ್ವದ ನ್ಯಾಟೋ ಒಕ್ಕೂಟ ಮಾತ್ರ ಯುದ್ಧದ ಬೆಂಕಿಗೆ ತುಪ್ಪ ಸುರಿಯುತ್ತಲೇ ಇದೆ.

ಸಾಮಾನ್ಯ ಜನರಾದ ನಾವು ಏನು ಮಾಡಬಹುದು ಎಂದು ಯೋಚಿಸಿದಾಗ…..

ವಿಶ್ವಸಂಸ್ಥೆ – ರಷ್ಯಾ ಮತ್ತು ಉಕ್ರೇನ್ – ಅಮೆರಿಕ ಮತ್ತು ನ್ಯಾಟೋ ಮುಖ್ಯಸ್ಥರ ವಿಳಾಸ ಮತ್ತು Mail ಗೆ ಇಂಗ್ಲೀಷ್ ಭಾಷೆಯಲ್ಲಿ ” ದಯವಿಟ್ಟು ಯುದ್ಧ ನಿಲ್ಲಿಸಿ – ಸಂಧಾನ ಸಾಧಿಸಿ ” ಎಂಬ ಶೀರ್ಷಿಕೆ ನೀಡಿ ಯುದ್ಧದ ಭೀಕರತೆ, ಮುಂದಿನ ಪರಿಣಾಮಗಳು, ನಮ್ಮ ನೋವುಗಳನ್ನು ವಿವರಿಸಿ ಒಂದು ಪುಟ್ಟ ಪತ್ರ ಚಳವಳಿ ಮಾಡುವ ಆಲೋಚನೆ ಇದೆ.

ಕೇವಲ ಭಾರತೀಯರು ಮಾತ್ರವಲ್ಲ ಇಡೀ ವಿಶ್ವದ ಜಾಗೃತಾವಸ್ಥೆಯ ಮನಸ್ಸುಗಳು ಸಾಧ್ಯವಾದಷ್ಟೂ ಹೆಚ್ಚು ಪತ್ರಗಳನ್ನು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡರೆ ಯುದ್ಧ ಪೀಡಿತ ನಾಯಕರುಗಳ ಮೇಲೆ ಸ್ವಲ್ಪ ಒತ್ತಡವಾಗಿ ಏನಾದರೂ ಬದಲಾವಣೆ ಆಗಬಹುದು ಎಂಬ ನಿರೀಕ್ಷೆ ಇದೆ.
ಅಥವಾ ಕನಿಷ್ಠ ಮನುಷ್ಯರಾದ ನಾವು ಯುದ್ಧದ ಬಗ್ಗೆ ಸ್ವಲ್ಪವಾದರೂ ಪ್ರತಿಕ್ರಿಯೆ ನೀಡಿದ ಸಮಾಧಾನವಾದರು ಸಿಗುತ್ತದೆ.

ಪ್ರತಿನಿತ್ಯ ಈ ಕೊಲ್ಲುವ – ಸಾಯುವ ಆಟ ನೋಡಿಕೊಂಡು ಸುಮ್ಮನಿರುವುದು ಮನುಷ್ಯತ್ವಕ್ಕೆ ನಾವು ಮಾಡುತ್ತಿರುವ ವಂಚನೆಯಾಗುತ್ತದೆ. ಸೃಷ್ಟಿಗೆ ನಾವು ಮಾಡುತ್ತಿರುವ ದ್ರೋಹವಾಗುತ್ತದೆ.

ಗಾಳಿ ನೀರು ಭೂಮಿ ವಿಷಮಯವಾಗುವ ಮುನ್ನ ಎಚ್ಚೆತ್ತುಕೊಳ್ಳಬೇಕು. ಎಲ್ಲಾ ಮುಗಿದ ಮೇಲೆ ಪಶ್ಚಾತ್ತಾಪ ಪಡುವ ಮೂರ್ಖತನ ಮಾಡಬಾರದು…

ಶೀಘ್ರದಲ್ಲಿಯೇ ಒಂದು ಯುದ್ಧ ವಿರೋಧಿ
” ಕರಡು ” ( DRAFT ) ಪ್ರತಿ ಬರೆದು ವಿಳಾಸದ ಸಮೇತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಲಾಗುವುದು. ಅದು ಸರಿ ಎನಿಸಿದಲ್ಲಿ ಸಾಧ್ಯವಿರುವ ಪ್ರತಿಯೊಬ್ಬರೂ ಅದನ್ನು ಮರು ಹಂಚಿಕೆ ಮಾಡುವ ಪ್ರಯತ್ನ ಮಾಡೋಣ. ಅಷ್ಟರಮಟ್ಟಿಗೆ ಸೃಷ್ಟಿಯ ಉಳಿವಿಗೆ ಅಳಿಲು ಸೇವೆ ಸಲ್ಲಿಸೋಣ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್. ಕೆ.

ಜೆಡಿಎಸ್ ಬಡವರ ಪರ ಚಿಂತನೆ ಮಾಡುತ್ತಿದೆ- ತಿಮ್ಮಶೆಟ್ಟಿ

0

ಜೆಡಿಎಸ್‌ನ ಪಂಚರತ್ನ ಯೋಜನೆಗಳೇ ನಾಡಿನ ಜನತೆಯ ಸಮಸ್ಯೆ ಗಳನ್ನು ಆಲಿಸುವ ಜೊತೆಗೆ ಬಡ ಹಾಗೂ ಹಿಂದುಳಿದ ಜನಾಂಗದವರಿಗೆ ಸದೃಢವಾಗಿ ಸ್ಪಂದಿಸುವ ಪ್ರಾದೇಶಿಕ ಪಕ್ಷ ಎಂದು ಚಿಕ್ಕಮಗಳೂರು ವಿಧಾನಸಭಾ ಅಭ್ಯರ್ಥಿ ಬಿ.ಎಂ.ತಿಮ್ಮಶೆಟ್ಟಿ ಹೇಳಿದರು.

ಚಿಕ್ಕಮಗಳೂರಿನ ತಾಲ್ಲೂಕಿನ ಲಕ್ಯಾ ಹೋಬಳಿಯ ಕಣಿವೆಹಳ್ಳಿ ಹಾಗೂ ಕ್ಯಾತನಬೀಡು ಗ್ರಾಮಗಳಿಗೆ ಭೇಟಿ ನೀಡಿ ಮಾತನಾಡಿದ ಅವರು ಜನತೆಯು ಚುನಾವಣಾ ವಿಷಯವನ್ನು ಗಂಭೀರವಾಗಿ ಆಲೋಚಿಸಿ ಸೂಕ್ತ ಅಭ್ಯರ್ಥಿಯನ್ನು ಮತದಾನದ ಮೂಲಕ ಆಯ್ಕೆಗೊಳಿಸಬೇಕು ಎಂದು ಹೇಳಿದರು.

ಬಡವರ ಪರ ಉತ್ತಮ ಚಿಂತನೆ ಹೊಂದಿರುವ ಪ್ರಾದೇಶಿಕ ಪಕ್ಷ ಜೆಡಿಎಸ್. ಪ್ರತಿಯೊಬ್ಬರು ತಮ್ಮ ವ್ಯಾಪ್ತಿಗಳಲ್ಲಾಗಿರುವ ಅಭಿವೃದ್ದಿ ಶೂನ್ಯವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಮಕ್ಕಳ ವಿದ್ಯಾಭ್ಯಾಸದ ಉಜ್ವಲ ಭವಿಷ್ಯಕ್ಕಾಗಿ ಹಾಗೂ ಆರ್ಥಿಕವಾಗಿ ಸದೃಢವಾಗಲು ಪ್ರಾದೇಶಿಕ ಪಕ್ಷವನ್ನು ಬೆಂಬಲಿಸಿದರೆ ಮುಂದಿನ ದಿನಗಳಲ್ಲಿ ಜನತೆಗೆ ವರದಾನವಾಗಲಿದೆ ಎಂದು ಹೇಳಿದರು.

ಪಕ್ಷದ ವತಿಯಿಂದ ಇದುವರೆಗೂ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಅನೇಕ ಬಾರಿ ಆರೋಗ್ಯ ಮತ್ತು ನೇತ್ರ ತಪಾಸಣೆ ಶಿಬಿರವನ್ನು ಆಯೋಜಿಸಿ ಗ್ರಾಮಸ್ಥರನ್ನು ಸ್ಪಂದಿಸುವ ಕಾರ್ಯ ಮಾಡಲಾಗಿದೆ. ಈ ಆಲೋಚನೆಗಳು ಕೇವಲ ಜೆಡಿಎಸ್‌ನಲ್ಲಿದೆಯೇ ಹೊರತು ಇನ್ಯಾವ ರಾಷ್ಟ್ರೀಯ ಪಕ್ಷಗಳಲ್ಲಿರುವುದಿಲ್ಲ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡರುಗಳು ಹಾಗೂ ಪಕ್ಷದ ಕಾರ್ಯಕರ್ತರುಗಳು ಹಾಜರಿದ್ದರು.

ಅಪರಿಚಿತರೊಂದಿಗೆ ಉದ್ಯಮಿಗಳು ದಾಖಲೆ ಹಂಚಿಕೊಳ್ಳಬಾರದು- ಎನ್.ಗೋಪಿನಾಥ್

0

ಉದ್ಯಮದಾರರು ನಿವೇಶನ ಹಾಗೂ ಸ್ಥಳೀಯ ಸಂಸ್ಥೆಗಳ ದಾಖಲೆಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು ಹಾಗೂ ದಾಖಲೆಗಳ ದುರುಪಯೋಗ ಆಗದಂತೆ ಎಚ್ಚರ ವಹಿಸಬೇಕು ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಅವರು ತಿಳಿಸಿದ್ದಾರೆ.

ಜಿಎಸ್‌ಟಿ ಸೌಲಭ್ಯ ಪಡೆಯುವುದು ಆನ್‌ಲೈನ್ ವ್ಯವಸ್ಥೆ ಆಗಿರುವುದರಿಂದ ಯಾವುದೋ ಉದ್ಯಮಿಗಳ ನಿವೇಶನ ದಾಖಲೆಗಳನ್ನು ಬಳಸಿ ವಂಚಕರು ಜಿಎಸ್‌ಟಿ ಪಡೆದುಕೊಳ್ಳುವ ಸಾಧ್ಯತೆ ಇರುತ್ತದೆ. ಉದ್ಯಮಿಗಳು ಹಾಗೂ ಮಾಲೀಕರಿಗೆ ತಿಳಿಯದಂತೆ ದಾಖಲೆ ಸಲ್ಲಿಸಿ ಜಿಎಸ್‌ಟಿ ಸಂಖ್ಯೆ ಪಡೆದುಕೊಂಡು ಮೋಸ, ವಂಚನೆ ಮಾಡುವುದು ವಿವಿಧ ಕಡೆಗಳಲ್ಲಿ ಕಂಡುಬಂದಿದೆ ಎಂದು ತಿಳಿಸಿದ್ದಾರೆ.

ದೇಶದ ವಿವಿಧ ಕಡೆಗಳಲ್ಲಿ ವಂಚನೆ ನಡೆಸುತ್ತಿರುವ ಮೋಸಗಾರರು ಯಾವುದೋ ಸ್ಥಳಗಳಲ್ಲಿ ಕುಳಿತು ನಿಮ್ಮ ದಾಖಲೆಗಳನ್ನು ಬಳಸಿಕೊಂಡು ಜಿಎಸ್‌ಟಿ ಪಡೆಯುತ್ತಾರೆ. ನಂತರ ತೆರಿಗೆ ಪಾವತಿಸದೇ ದೇಶದ ಆರ್ಥಿಕ ವ್ಯವಸ್ಥೆಗೆ ನಷ್ಟ ಉಂಟುಮಾಡುತ್ತಾರೆ. ಪರಿಶೀಲನೆಗೆ ಬಂದ ಸಂದರ್ಭದಲ್ಲಿ ವಂಚನೆ ಆಗಿರುವುದು ಬೆಳಕಿಗೆ ಬರುತ್ತಿದೆ. ಆದ್ದರಿಂದ ಸ್ಥಳೀಯ ಉದ್ಯಮಿಗಳು ನಿಮ್ಮ ದಾಖಲೆಗಳ ಬಗ್ಗೆ ಎಚ್ಚರ ವಹಿಸಬೇಕು. ಅಪರಿಚಿತರೊಂದಿಗೆ ದಾಖಲೆಗಳನ್ನು ಹಂಚಿಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.

ಸ್ಥಳೀಯ ಸಂಸ್ಥೆಗಳು ನಿವೇಶನ ಮಾಹಿತಿಗಳನ್ನು ಎಲ್ಲರಿಗೂ ದೊರಕುವಂತೆ ಮಾಡದೇ ಸುರಕ್ಷತೆಗೆ ಕ್ರಮ ವಹಿಸಬೇಕು. ಮಾಹಿತಿ ಪಡೆಯುವ ನಿವೇಶನದಾರರು ಒಟಿಪಿ ಅಥವಾ ಸುರಕ್ಷತಾ ಪಾಸ್ ವರ್ಡ್ ಬಳಸಲು ಅನುವು ಮಾಡಬೇಕು. ಇದರಿಂದ ಎಲ್ಲೋ ಕುಳಿತಿರುವ ವಂಚಕ ಬೇರೆಯವರ ದಾಖಲೆಯ ಮಾಹಿತಿ ಪಡೆಯಲು ಅಸಾಧ್ಯವಾಗುತ್ತದೆ.

ತೆರಿಗೆ ಇಲಾಖೆ ಅಧಿಕಾರಿಗಳು ಯಾವುದೇ ವ್ಯಕ್ತಿ ಜಿಎಸ್‌ಟಿಗೆ ಅರ್ಜಿ ಸಲ್ಲಿಸಿದರೂ ಸ್ಥಳ ಪರಿಶೀಲನೆ ಮಾಡಿಯೇ ಜಿಎಸ್‌ಟಿ ನೀಡಬೇಕು. ಇಲ್ಲದಿದ್ದರೆ ಎಲ್ಲೋ ಕುಳಿತಿರುವ ವಂಚಕರು ಮತ್ತೊಬ್ಬರ ಹೆಸರಲ್ಲಿ ಜಿಎಸ್‌ಟಿ ಪಡೆದು ವಂಚಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಜಿಎಸ್ ಟಿ ತೆರಿಗೆ ಇಲಾಖೆ ಅಧಿಕಾರಿಗಳು ಜಿಎಸ್‌ಟಿ ನೀಡುವ ಮುನ್ನ ಪರಿಶೀಲಿಸಬೇಕು ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮನವಿ ಮಾಡಿದ್ದಾರೆ.

ರನ್ ವೇ ಸಿದ್ಧವಾಗಿದೆ ಯುವಜನತೆ ಅಭಿವೃದ್ಧಿ ದಿಗಂತದೆಡೆ ಹಾರಬೇಕು- ಮೋದೀಜಿ

0

ಹುಬ್ಬಳ್ಳಿ: ಡಿಜಿಟಲ್ ಇಂಡಿಯಾದ ಪ್ರಸ್ತುತ ಕಾಲಘಟ್ಟದಲ್ಲಿ ಕೌಶಲ್ಯಭರಿತ ಯುವಜನತೆಗೆ ಅವಕಾಶಗಳ ಬಾಗಿಲು ತೆರೆದಿದೆ. ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ”- ಎಂಬ ಸ್ವಾಮಿ ವಿವೇಕಾನಂದರ ಮಂತ್ರವನ್ನು ಮನದಲ್ಲಿಟ್ಟುಕೊಂಡು ಅಭಿವೃದ್ಧಿಯ ದಿಗಂತದ ಕಡೆಗೆ ದೇಶವನ್ನು ಕೊಂಡೊಯ್ಯಲು ಯುವಸಮುದಾಯ ಕೈಜೋಡಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದೀಜಿಯವರು ಕರೆ ನೀಡಿದರು.

“ವಿಕಸಿತ ಯುವ-ವಿಕಸಿತ ಭಾರತ” ಎಂಬ ಘೋಷವಾಕ್ಯದೊಂದಿಗೆ ಹುಬ್ಬಳ್ಳಿ-ಧಾರವಾಡದಲ್ಲಿ ಜನವರಿ 12 ರಿಂದ 16 ರವರೆಗೆ ನಡೆಯಲಿರುವ 26ನೇ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮಕ್ಕೆ ಕೇಶ್ವಾಪುರದ ರೈಲ್ವೆ ಮೈದಾನದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ಮೂರುಸಾವಿರ ಮಠ , ಸಿದ್ಧಾರೂಢ ಮಠ ಇಂತಹ ಅನೇಕ ಮಠಗಳ ಕ್ಷೇತ್ರಗಳಿಗೆ ನನ್ನ ನಮಸ್ಕಾರಗಳು..
ಚೆನ್ನಮ್ಮನ ನಾಡು, ರಾಯಣ್ಙನ ಬೀಡು ಪುಣ್ಯದ ನಾಡಿಗೆ ನನ್ನ ನಮಸ್ಕಾರಗಳು…. ಎಂದು ಕನ್ನಡದಲ್ಲಿ ಮಾತು ಆರಂಭಿಸಿದ ಪ್ರಧಾನಮಂತ್ರಿ ನರೇಂದ್ರ ಮೋದೀಜಿಯವರು, ದೇಶದ ಪ್ರಗತಿಯಲ್ಲಿ ಯುವಕರ ಪಾತ್ರವನ್ನು ಮನದಟ್ಟು ಮಾಡಿಕೊಟ್ಟರು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು, ಭೀಮಸೇನ್ ಜೋಶಿ, ಗಂಗೂಬಾಯಿ ಹಾನಗಲ್ ಸೇರಿದಂತೆ ಅನೇಕ ಸಂಗೀತ ಲೋಕದ ದಿಗ್ಗಜರನ್ನು ಸ್ಮರಿಸಿದರು.

“ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ”- ಎಂಬ ಸ್ವಾಮಿ ವಿವೇಕಾನಂದರ ಮಂತ್ರವನ್ನು ಕನ್ನಡದಲ್ಲಿ ಉಚ್ಛರಿಸಿದ ಪ್ರಧಾನಮಂತ್ರಿ ಮೋದೀಜಿಯವರು, ಇಂತಹ ಸಂದರ್ಭದಲ್ಲಿ ನಾವು ನಮ್ಮ ಕರ್ತವ್ಯಗಳನ್ನು ಅರಿತುಕೊಂಡ ದೇಶವನ್ನು ಮುನ್ನಡೆಸಬೇಕಿದೆ ಎಂದು ಯುವಕರಿಗೆ ಕಿವಿಮಾತು ಹೇಳಿದರು.

ಸ್ವಾಮಿ ವಿವೇಕಾನಂದರು ಕರ್ನಾಟಕದ ಜತೆ ಅವಿನಾಭಾವ ಸಂಬಂಧ ಹೊಂದಿದ್ದರು. ಬೆಂಗಳೂರು, ಹುಬ್ಬಳ್ಳಿ-ಧಾರವಾಡದಲ್ಲಿ ಸಂಚರಿಸಿದ್ದರು. ಮೈಸೂರು ಮಹಾರಾಜರು ವಿವೇಕಾನಂದ ಅವರು ಶಿಕ್ಯಾಗೊ ಸಮ್ಮೇಳನ ಹೋಗಲು ನೆರವು ನೀಡಿದ್ದರು ಎಂದು ನೆನಪಿಸಿದರು.

ಏಕ ಭಾರತ ಶ್ರೇಷ್ಠ ಭಾರತ ನಿರ್ಮಾಣಕ್ಕೆ ದೇಶವು ಹೊಸ ಸಂಕಲ್ಪದಿಂದ ಮುನ್ನಡೆದಿದೆ. ಯುವ ಶಕ್ತಿ ಸದೃಢವಾಗಿದ್ದರೆ ಸದೃಢ ದೇಶ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದು ಸ್ವಾಮಿ ವಿವೇಕಾನಂದರ ನಂಬಿಕೆಯಾಗಿತ್ತು.

ಚೆನ್ನಮ್ಮ ಎಂತಹ ಸಂಕಷ್ಟದ ಕಾಲದಲ್ಲೂ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಸಂಗೊಳ್ಳಿ ರಾಯಣ್ಣನ ಶೌರ್ಯವು ಬ್ರಿಟಿಷ್ ರ ಎದೆ ನಡುಗಿಸಿತ್ತು ಇಂತಹ ಮಹನೀಯರ ದೇಶಭಕ್ತಿ ನಮಗೆ ಆದರ್ಶವಾಗಬೇಕಿದೆ.

ವಿಶ್ವೇಶ್ವರಯ್ಯ ಅವರು ತಮ್ಮ ಪ್ರತಿಭೆಯ ಮೂಲಕ ಯುವ ಸಮುದಾಯವು ಹೇಗೆ ಎಲ್ಲೆಡೆ ಪಸರಿದೆ ಎಂಬುದಕ್ಕೆ ಉದಾಹರಣೆಯಾಗಿದ್ದಾರೆ.
ಜಾಗತಿಕ ಮಟ್ಟದಲ್ಲಿ ಗಣಿತದಿಂದ ವಿಜ್ಞಾನದ ಯಾವುದೇ ಸ್ಪರ್ಧೆ ನಡೆದರೂ ಭಾರತೀಯರ ಸಾಧನೆ ಅದ್ವಿತೀಯ.
ಇದು ಭಾರತದ ಯುವಶಕ್ತಿಯ ಸಂಕೇತವಾಗಿದೆ. ಯುವಶಕ್ತಿ ದೇಶವನ್ನು ನಡೆಸುವ ಶಕ್ತಿಯಾಗಿದೆ. ಮುಂದಿನ 25 ವರ್ಷಗಳಲ್ಲಿ ಭಾರತಕ್ಕೆ ಯುವಶಕ್ತಿ ದಿಕ್ಸೂಚಿಯಾಗಲಿದೆ ಎಂದರು.

ನಮ್ಮ ಚಿಂತನೆ ಹಾಗೂ ಪ್ರಯತ್ನಗಳು ಸಕಾರಾತ್ಮಕವಾಗಿ ಇರಬೇಕು. ಜಗತ್ತು ಸಮಸ್ಯೆಗಳ ಪರಿಹಾರಕ್ಕಾಗಿ ಭಾರತದ ಕಡೆ ನೋಡುತ್ತಿದೆ. ಇದರ ಹಿಂದೆ ಯುವಶಕ್ತಿಯ ಶ್ರಮವಿದೆ.

ಭಾರತವು ಜಗತ್ತಿನ 5 ನೇ ಅತೀ ದೊಡ್ಡ ಆರ್ಥಿಕ ಶಕ್ತಿಯಾಗಿದೆ. ಇದನ್ನು ಅಗ್ರ ಮೂರನೇ ಸ್ಥಾನಕ್ಕೆ ಕೊಂಡೊಯ್ಯುವ ಗುರಿ ನಮ್ಮದಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದೀಜಿ ಹೇಳಿದರು.
ಕೃಷಿ ಕ್ಷೇತ್ರದಲ್ಲಿ ಭಾರತವು ಜಗತ್ತಿನ ಮುಂಚೂಣಿಯಲ್ಲಿದ್ದು, ಈ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಕೆಯಿಂದ ಯುವ ಜನತೆಗೆ ಇನ್ನಷ್ಟು ಅವಕಾಶಗಳು ಲಭಿಸಲಿವೆ.

ಕ್ರೀಡಾ ಕ್ಷೇತ್ರದಲ್ಲಿ ಭಾರತವು ಪ್ರಕಾಶಿಸುತ್ತಿರುವುದಕ್ಕೆ ಯುವ ಸಮುದಾಯದ ಪ್ರಯತ್ನವೇ ಕಾರಣವಾಗಿದೆ.
ಇದೊಂದು ವಿಶೇಷ ಅವಕಾಶ. ಈಗಿರುವುದು ವಿಶೇಷ ಪೀಳಿಗೆ ಆಗಿದೆ. ದೇಶದ ಆರ್ಥಿಕತೆ ಸುಧಾರಣೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿ ಕಳೆದ ಒಂಭತ್ತು ವರ್ಷಗಳಲ್ಲಿ ಸಾಕಷ್ಟು ಕೆಲಸ ಮಾಡಲಾಗಿದೆ.
ಇದೀಗ ರನ್ ವೇ ಸಿದ್ಧವಾಗಿದೆ. ಯುವ ಸಮಯದಾಯ ಇದನ್ನು ಬಳಸಿಕೊಂಡು ಅಭಿವೃದ್ಧಿಯ ದಿಗಂತದ ಕಡೆಗೆ ಹಾರಲು ಮುಂದಾಗಬೇಕಿದೆ ಎಂದರು.

ಸ್ತ್ರೀಶಕ್ತಿಯು ರಾಷ್ಟ್ರಶಕ್ತಿಯನ್ನು ಮುನ್ನಡೆಸುವಲ್ಲಿ ಸಫಲರಾಗಿದ್ದಾರೆ. ಫೈಟರ್ ಜೆಟ್ ಹಾರಿಸುತ್ತಿರುವ ಮಹಿಳೆಯರು ವಿಜ್ಞಾನ, ತಂತ್ರಜ್ಞಾನ, ಕ್ರೀಡೆ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ಮುನ್ನುಗ್ಗುತ್ತಿದ್ದಾರೆ.

ಯುವಜನತೆ ವರ್ತಮಾನದಲ್ಲಿದ್ದಕೊಂಡು ಭವಿಷ್ಯದ ಕಡೆ ಸಕಾರಾತ್ಮಕವಾಗಿ ಯೋಚಿಸುವ ಮೂಲಕ ಹೊಸ ಹೊಸ ಆವಿಷ್ಕಾರಗಳತ್ತ ಚಿತ್ತವನ್ನು ಹರಿಸಬೇಕು.

10 ವರ್ಷಗಳ ಇಲ್ಲದ ಎಷ್ಟೋ ವಿಷಯಗಳಿಂದ ನಾವು ಈಗ ಚಕಿತರಾಗಿದ್ದೇವೆ ಈಗ ಸೈಬರ್ ಸೆಕ್ಯುರಿಟಿ, ಡೇಟಾ‌ ಸೈನ್ಸ್, ದೇಶದ ಸುರಕ್ಷತೆ ಸೇರಿ ಎಲ್ಲದರ ಸ್ವರೂಪ ಬದಲಾಗಿದೆ. ಯುವಸಮುದಾಯವು ತಂತ್ರಜ್ಞಾನದ ಈ ಬದಲಾವಣೆಯಿಂದ ಪಾಠ ಕಲಿತು ಹೊಸ ಕೌಶಲಗಳನ್ನು ಬೆಳೆಸಿಕೊಳ್ಳಬೇಕು.

ಪ್ರಸ್ತುತ ದಿನಗಳಲ್ಲಿ ಯುವಶಕ್ತಿಯ ಮುಂದೆ ಹತ್ತಾರು ಅವಕಾಶಗಳಿವೆ. ಆಯ್ಕೆ ಅವರ ಮುಂದಿದೆ. ಕ್ಷಿಪ್ರವಾಗಿ ಬದಲಾಗುತ್ತಿರುವ ಈ ಸಂದರ್ಭದಲ್ಲಿ ಯುವಕರು ವೈಯಕ್ತಿಕ ಸಾಧನೆಯ ಜೊತೆಗೆ ಸಾಂಸ್ಥಿಕ ಹಾಗೂ ಅನ್ವೇಷಣೆ ಮೂಲಕ ದೇಶದ ಪ್ರಗತಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಸ್ವಚ್ಛ ಭಾರತ, ಡಿಜಿಟಲ್ ಇಂಡಿಯಾ, ಕೊರೋನಾ ಲಸಿಕೆ ಹೀಗೆ ಪ್ರತಿಯೊಂದು ಮಜಲುಗಳಲ್ಲಿ ಕೆಲವರು ಅಪಹಾಸ್ಯ ಮಾಡಿದ್ದರು. ಆದರೆ ಭಾರತದ ಈ ಸಾಧನೆಯ ಬಗ್ಗೆ ಜಗತ್ತಿನಲ್ಲಿ ಈಗ ಚರ್ಚೆ ನಡೆದಿದೆ.

ಶ್ರೀ ಸ್ವಾಮಿ ವಿವೇಕಾನಂದರು

0

ಯುವಜನತೆಗೆ ಉತ್ಸಾಹದ ಕಿರಣವಾದ ಸ್ವಾಮಿ

ವಿವೇಕಾನಂದರು 1863 ರ ಜನವರಿ12ರಂದು ಕಲ್ಕತ್ತಾ ನಗರದಲ್ಲಿ ಜನಿಸಿದರು.19 ನೆಯ ಶತಮಾನದಲ್ಲಿ ಭಾರತದಲ್ಲಿ ಸಾಮಾಜಿಕ,ಧಾರ್ಮಿಕ ಜಾಗೃತಿ ಮೂಡಿಸಿದ ಅನೇಕ ಸಮಾಜ ಸುಧಾರಕರಲ್ಲಿ ಸ್ವಾಮಿ ವಿವೇಕಾನಂದರೂ ಒಬ್ಬರು.

ಇವರು ಹುಟ್ಟಿದ ಜನವರಿ 12 ನೆಯ ದಿನಾಂಕವನ್ನು ರಾಷ್ಟ್ರೀಯ ಯುವದಿನವನ್ನಾಗಿ ಆಚರಿಸಲಾಗುತ್ತದೆ.

ವಿವೇಕಾನಂದರು ಕಲಕತ್ತೆಯ ನಿವಾಸಿಗಳಾಗಿದ್ದ ವಿಶ್ವನಾಥದತ್ತ ಮತ್ತು ಭುವನೇಶ್ವರಿದೇವಿ ಎಂಬ ದಂಪತಿಗಳ ಮಗನಾಗಿ ಹುಟ್ಟಿದರು. ನರೇಂದ್ರನಾಥದತ್ತ ಎಂಬುದು ಇವರ ಜನ್ಮನಾಮ.

ನರೇಂದ್ರನು ಬಾಲಕನಾಗಿದ್ದಾಗಲೇ ಅಧ್ಯಯನದಲ್ಲಿ ಏಕಾಗ್ರತೆ ಮತ್ತು ಎಲ್ಲವನ್ನೂ ತಿಳಿದುಕೊಳ್ಳುವ ಕುತೂಹಲವಿತ್ತು. ನರೇಂದ್ರನು ಕಲ್ಕತ್ತಾ ನಗರದಲ್ಲಿದ್ದುದರಿಂದ ಆಂಗ್ಲಭಾಷೆಯಲ್ಲೇ ವಿದ್ಯಾಭ್ಯಾಸವನ್ನು ಮಾಡಬೇಕಾಯಿತು. ಆಟ ಪಾಠಗಳಲ್ಲಿ ಸದಾ ಮಂಚೂಣಿಯಲ್ಲಿದವನು ನರೇಂದ್ರ. ಒಳ್ಳೊಳ್ಳೆಯ ಪುಸ್ತಕಗಳನ್ನು ಓದಿ ತನ್ನ ಜ್ಞಾನವನ್ನು ಹೆಚ್ಚಿಸಿಕೊಂಡಿದ್ದನು. ಅಪ್ಪಟ ದೇಶಪ್ರೇಮವನ್ನು ಬೆಳೆಸಿಕೊಂಡಿದ್ದ.

ಅವರ ಜ್ಞಾನ ಬೆಳೆಯುತ್ತಾ ಹೋದಂತೆ ದೇವರಿದ್ದಾನೆಯೇ ಮತ್ತು ದೇವರನ್ನು ಯಾರಾದರೂ ನೋಡಿದ್ದಾರೆಯೇ ಎಂಬ ಜಿಜ್ಞಾಸೆ ಕಾಡತೊಡಗಿತು.ಕೊನೆಗೆ ಶ್ರೀರಾಮಕೃಷ್ಣ ಪರಮಹಂಸರು ಗುರುಗಳಾಗಿ ಸಿಕ್ಕ ಮೇಲಷ್ಟೇ ಅವರ ಜಿಜ್ಞಾಸೆ ಪರಿಹಾರವಾಯಿತು.

ಗುರುಗಳಾದ ಶ್ರೀರಾಮಕೃಷ್ಣ ಪರಮಹಂಸರು ಆಧ್ಯಾತ್ಮದ ಸಕಲ ಅನುಭವವನ್ನೂ ಮಾಡಿಕೊಟ್ಟರು. ಶ್ರೀರಾಮಕೃಷ್ಣಪರಮಹಂಸರ ಶಿಷ್ಯರಾದ ಇವರು ಸನ್ಯಾಸ ಸ್ವೀಕರಿಸಿ”ವಿವೇಕಾನಂದ”ರೆಂದು ಹೆಸರು ಪಡೆದರು. ಆಧ್ಯಾತ್ಮಿಕತೆಯನ್ನು ಎತ್ತಿ ಹಿಡಿಯಲು ಸಮರ್ಥ ಯುವಕನಾದ ವಿವೇಕಾನಂದ ನೆಂಬ ಸೂರ್ಯನ ಉದಯವಾಯಿತು.

ವಿವೇಕಾನಂದರು ಧರ್ಮ ಸಮ್ಮೇಳನದಲ್ಲಿ ಭಾಗವಹಿಸಲುಚಿಕಾಗೋನಗರಕ್ಕೆಹೋಗುತ್ತಾರೆ.ಸಮ್ಮೇಳನದಲ್ಲಿ ಹಿಂದೂಧರ್ಮದ ಬಗ್ಗೆ ತಿಳಿಸಿ, ವೇದಾಂತದ ಭಾವನೆಗಳನ್ನು ತಮ್ಮ ಭಾಷಣದ ಮೂಲಕ ಜನರ ಮುಂದಿರಿಸಿದರು. ಅವರ ಭಾಷಣದ ಸಾರ ಭಾರತದ ಶ್ರೇಷ್ಠತೆಯನ್ನು ಎತ್ತಿ ಹಿಡಿಯಿತು. ತಮ್ಮ ವಿದ್ವತ್ಪೂರ್ಣ ಭಾಷಣಗಳಿಂದ ವಿಶ್ವವಿಖ್ಯಾತರಾದರು. ಮೂರುವರ್ಷಗಳ ಕಾಲ ವಿದೇಶಗಳಲ್ಲಿ ಸಂಚರಿಸಿ,ಚರ್ಚಾಸಭೆಗಳಲ್ಲಿ ಭಾಗವಹಿಸಿ ಮತ್ತೆ ಭಾರತಕ್ಕೆ ಮರಳಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಯಾತ್ರೆಕೈಗೊಂಡು ತಮ್ಮ ಉಪನ್ಯಾಸದಿಂದ ಯುವಜನತೆಯಲ್ಲಿ ಜಾಗೃತಿ ಮೂಡಿಸಿದರು. ಭಾರತೀಯ ಯುವ ಜನತೆ ಇವರ ಮನಮುಟ್ಟುವ ಉಪನ್ಯಾಸದ ವೈಖರಿಗೆ ವಿವೇಕಾನಂದರಿಗೆ ಗುರುವಿನ ಸ್ಥಾನಕೊಟ್ಟು ಗೌರವಿಸಿದರು.

ಲೇ; ಎನ್.ಜಯಭೀಮ ಜೊಯಿಸ್. ಶಿವಮೊಗ್ಗ

ಭಾರತ್ ಜೋಡೋ ಯಾತ್ರೆ ಸಮಾರೋಪ:ಸಮಾನ ಮನಸ್ಕರ ಮಿಲನ

0

ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಜನವರಿ 30ರಂದು ಸಮಾಪನಗೊಳ್ಳಲಿದೆ. ಶ್ರೀನಗರದಲ್ಲಿ ಬೃಹತ್ ಕಾರ್ಯಕ್ರಮ ನಡೆಯಲಿದೆ.

ಕಾಂಗ್ರೆಸ್ ಈ ಯಾತ್ರೆಯ ಮುಕ್ತಾಯವನ್ನು ಇಡೀ ದೇಶವೇ ಗಮನ ಸೆಳೆಯುವಂತೆ ಮಾಡುವ ಪ್ರಯತ್ನ ಮಾಡಿದೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಈ ಬಗ್ಗೆ ವಿಸ್ತೃತ ಕಾರ್ಯ ಯೋಜನೆ ಹಮ್ಮಿಕೊಂಡಿದ್ದಾರೆ.

ಯಾತ್ರೆಯ ಮುಕ್ತಾಯ ಸಮಾರಂಭ ಆಕರ್ಷಕ ಮತ್ತು ಬಿಜೆಪಿ ವಿರೋಧಿ ಪಕ್ಷಗಳನ್ನ ಕಾಂಗ್ರೆಸ್ ಪರ ನಿಲ್ಲಿಸುವ ತಂತ್ರಗಾರಿಕೆಯೂ ಸಿದ್ಧವಾಗುತ್ತಿದೆ. ಹಿರಿಯ ರಾಜಕಾರಣಿ ಖರ್ಗೆ ಅವರ ಅನುಭವ ಈಗ
ಓರೆಗಲ್ಲಿಗೆ ಸಿಕ್ಕಿದಂತಿದೆ.

ದೇಶದ ಎಲ್ಲಾ ಸಮಾನ ಮನಸ್ಕರನ್ನ ಅಂದರೆ ಬಿಜೆಪಿ ನೀತಿ ವಿರೋಧಿಸುವ ಹಾಗೂ ಅತೃಪ್ತ ನಾಯಕರನ್ನ ತಮ್ಮತ್ತ ಸೆಳೆಯುಲ್ಲಿ ಕ್ರಿಯಾಶೀಲರಾಗಿದ್ದಾರೆ.

ದೇಶದ ಪ್ರಮುಖ ಪಕ್ಷಗಳು, ನಾಯಕರು ಹಾಗೂ ಪ್ರಾದೇಶಿಕ ಪಕ್ಷಗಳಿಗೆ ಈ ಕಾಂಗ್ರೆಸ್ ಈ ಯಾತ್ರೆಯ ಮುಕ್ತಾಯ ಸಮಾರಂಭಕ್ಕೆ ಆಮಂತ್ರಣ ಕಳುಹಿಸಲಿದೆ.

ಆರ್ ಜೆ ಡಿ ಎಸ್ ಲಾಲು ಪ್ರಸಾದ್, ತೇಜಸ್ವಿಮಾದಲ್, ಹಿರಿಯ ರಾಜಕಾರಣಿ, ಶರ
ದ್ ಯಾದಲ್ , ಓಮರ್ ಅಬ್ದುಲ್ಲ ಮುಂತಾದವರನ್ನ ಆಹ್ವಾನಿಸಿದ್ದಾರೆ.

ಮತ್ತು 21 ಸಮಾನ ಮನಸ್ಕ ಪಕ್ಷಗಳಿಗೆ ಕರೆಯೋಲೆ ಹೋಗಿದೆ.

ಇಡೀ ಭಾರತ ಯಾತ್ರೆಯ ಅನುಭವವನ್ನ ರಾಹುಲ್ ಗಾಂಧಿ ಹೇಗೆ ವರ್ಣಿಸುತ್ತಾರೆ.? ಸಾರ್ವಜನಿಕರು ಹಾಗೂ ಮಾಧ್ಯಮಗಳೊಂದಿಗೆ ಯಾವ ರೀತಿ ಹಂಚಿಕೊಳ್ಳುತ್ತಾರೆ ಎಂಬುದನ್ನ ಕಾದು ನೋಡಬೇಕಿದೆ.

ವಿವೇಕಾನಂದರ ಚಿಂತನೆಗಳನ್ನ ನಾವೆಲ್ಲಾ ಅಳವಡಿಸಿಕೊಳ್ಳಬೇಕು- ಡಾ.ಸೆಲ್ವಮಣಿ

0

ಯುವಜನತೆಗೆ ದಾರಿದೀಪವಾಗಿರುವ, ದೇಶದ ಹೆಮ್ಮೆಯಾಗಿರುವ ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ನಾವೆಲ್ಲ ಅಳವಡಿಸಿಕೊಂಡು ಅವರ ಮಾರ್ಗದರ್ಶನದಲ್ಲಿ ನಡೆಯಬೇಕೆಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರೂ ಯುವ ಕೇಂದ್ರ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಅಂಗವಾಗಿ ಇಂದು ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಯುವ ದಿನ ಹಾಗೂ ಯುವ ಸಪ್ತಾಹ ಕಾಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿವೇಕಾನಂದರು ಅಮೆರಿಕಾದ ಚಿಕಾಗೋ ನಲ್ಲಿ ನಡೆದ ವಿಶ್ವ ಧಾರ್ಮಿಕ ಸಭೆಯಲ್ಲಿ ಮಾಡಿದ ಭಾಷಣವನ್ನು ಎಲ್ಲ ವಿದ್ಯಾರ್ಥಿಗಳು ಕೇಳಬೇಕು. ಅದ್ಭುತವಾದ ಭಾಷಣ ಅದಾಗಿದ್ದು ಎಲ್ಲರೂ ಕೇಳಬೇಕು. ವಿವೇಕಾನಂದರ ಚಿಂತನೆಗಳು, ಮೌಲ್ಯಗಳ ಅಧ್ಯಯನ ಮಾಡಿ ಅವುಗಳನ್ನು ಅಳವಡಿಸಿಕೊಳ್ಳಬೇಕು.

ವಿದ್ಯಾರ್ಥಿಗಳು ಯಾವುದೇ ದುಶ್ಚಟಗಳು, ಬೇಡದ ಅಭ್ಯಾಸಗಳಿಗೆ ಬಲಿಯಾಗದೇ ಗುರುಗಳು, ಪೋಷಕರ ಮಾತನ್ನು ಕೇಳಿ, ಅವರ ಮಾರ್ಗದರ್ಶನದಲ್ಲಿ ಮುಂದೆ ಸಾಗಬೇಕು ಹಾಗೂ ಸಮಾಜಕ್ಕೆ, ದೇಶಕ್ಕೆ ಒಳ್ಳೆಯ ಹೆಸರು ತರುತ್ತೇನೆಂದು ಇಂದೇ ಸಂಕಲ್ಪ ಮಾಡಬೇಕು ಎಂದರು.

ಅತಿ ಹೆಚ್ಚು ಯುವಜನತೆಯನ್ನು ಹೊಂದಿದ ಯುವಕರ ದೇಶ ನಮ್ಮದು. ಹಾಗೂ ಜನಸಂಖ್ಯೆಯಲ್ಲಿ ಎರಡನೇ ದೊಡ್ಡ ರಾಷ್ಟ್ರ. ಇಂತಹ ಯುವ ರಾಷ್ಟ್ರದಲ್ಲಿ ಯುವಜನತೆಯ ಜವಾಬ್ದಾರಿ ಹೆಚ್ಚಿದೆ. ಸಾಕ್ಷರತೆ ಹೆಚ್ಚುತ್ತಿದೆ. ಇನ್ನೂ ಹೆಚ್ಚಬೇಕು ಮತ್ತು ಶಿಕ್ಷಣದೊಂದಿಗೆ ಕೌಶಲ್ಯವನ್ನು ಕೂಡ ಅಭಿವೃದ್ದಿಪಡಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ರೂಪಿಸಿ, ಕೌಶಲ್ಯ ಅಭಿವೃದ್ದಿಪಡಿಸುತ್ತಿದ್ದು, ಇದರ ಸದುಪಯೋಗವನ್ನು ಪಡೆಯಬೇಕೆಂದರು.

ಅಪರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅನಿಲ್‍ಕುಮಾರ್ ಭೂಮರೆಡ್ಡಿ ಮಾತನಾಡಿ, ಯಾವುದೇ ಸಮಸ್ಯೆಗೆ ಪರಿಹಾರ ಅದನ್ನು ಎದುರಿಸಿ ನಿಲ್ಲುವುದು, ಪಲಾಯನವಾದವಲ್ಲ. ಎದುರಿಸುವ ಎದೆಗಾರಿಕೆ ನಮ್ಮಲ್ಲಿ ಇರಬೇಕೆಂದು ವಿವೇಕಾನಂದರು ತಿಳಿಸಿದ್ದು, ಅವರ ದಾರಿಯಲ್ಲಿ ನಾವು ನಡೆಯಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ವ್ಯಕ್ತಿತ್ವ ವಿಕಸನ ಉಪನ್ಯಾಸಕರಾದ ರಮೇಶ್ ಉಮ್ರಾಣಿ ಮಾತನಾಡಿ, ವಿವೇಕಾನಂದರ ಪ್ರೇರಣೆ ಪಡೆದು ಹತ್ತು ಹಲವಾರು ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹನೀಯರನ್ನು ಕಾಣುತ್ತಿದ್ದೇವೆ. ವಿವೇಕಾನಂದರ ಪ್ರಕಾರ ಭಾರತದ ನೆಲ ಪುಣ್ಯಭೂಮಿ. ತಂದೆ, ತಾಯಿ ಗುರುಗಳೇ ಜೀವಂತ ದೇವರುಗಳು.

ಶಿಕ್ಷಣ ಅತಿ ಶಕ್ತಿಯುತವಾದದ್ದು, ಶಿಕ್ಷಣ ಕೇವಲ ಸಾಕ್ಷರತೆ ಮತ್ತು ಕೆಲಸ ಪಡೆಯಲು ಅಲ್ಲ, ಅದೊಂದು ಸಬಲೀಕರಣದ ಅಸ್ತ್ರ ಹಾಗೂ ಅದೊಂದು ಜವಾಬ್ದಾರಿ. ಪ್ರತಿಯೊಬ್ಬ ಮನುಷ್ಯನು ಆತ್ಮಾವಲೋಕನ ಮಾಡಿಕೊಂಡು ಬದುಕಿದಲ್ಲಿ ಸ್ವಯಂ ನಿಯಂತ್ರಣ, ಸ್ವಸ್ಥ ಸಮಾಜ ಸಾಧ್ಯವಾಗುತ್ತದೆ. ನಿನ್ನೊಳಗೆ ನಿಜವಾದ ಅರ್ಹತೆ, ಉತ್ಸಾಹ ಇದ್ದರೆ ಅದನ್ನು ತಡೆಹಿಡಿಯಲು ಯಾರಿಂದಲೂ ಸಾಧ್ಯವಿಲ್ಲ. ವಿದ್ಯಾರ್ಥಿ ಜೀವನವನ್ನು ಸದುಪಯೋಗಪಡಿಸಿಕೊಂಡಾಗ ಸಾರ್ಥಕ ಜೀವನ ಸಾಧ್ಯ ಎಂದಿದ್ದಾರೆ ವಿವೇಕಾನಂದರು. ವಿವೇಕಾನಂದರು ಯುವಜನತೆಯ ಸ್ಫೂರ್ತಿ. ಅವರ ಬಗ್ಗೆ ಎಲ್ಲರೂ ಅಧ್ಯಯನ ಮಾಡಬೇಕು ಎಂದು ಅವರು ಆಶಿಸಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ವಿನಯಾನಂದ ಸರಸ್ವತಿ ಸ್ವಾಮೀಜಿಯವರು ಸ್ವಾಮಿ ವಿವೇಕಾನಂದರ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಮಹಾನಗರಪಾಲಿಕೆ ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್, ಎನ್‍ಇಎಸ್ ನ ಅಶ್ವಥ್ ನಾರಾಯಣ್ ಇದ್ದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥಸ್ವಾಮಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕುವೆಂಪು ವಿವಿ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ನಾಗರಾಜ ಪರಿಸರ ಕಾರ್ಯಕ್ರಮ ನಿರೂಪಿಸಿದರು.

ತೋಟಗಾರಿಕೆ ಇಲಾಖೆಯಿಂದ ಜ. 26 ರಂದು ಫಲಪುಷ್ಪ ಪ್ರದರ್ಶನ

0

ಶಿವಮೊಗ್ಗ ತೋಟಗಾರಿಕೆ ಇಲಾಖೆಯು ಜ.26 ರಿಂದ 27ರವರೆಗೆ ನಗರದ ಗಾಂಧಿ ಪಾರ್ಕ್ ಆವರಣದಲ್ಲಿ 61ನೇ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಿದ್ದು, ರೈತರ ಪ್ರದರ್ಶಿಕೆಗಳ ಮತ್ತು ಹೂ, ಎಲೆ, ಕಾಯಿ, ಹಣ್ಣು, ಕಾಳುಗಳನ್ನು ಬಳಸಿ ರಂಗೋಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.