Wednesday, April 1, 2026
Wednesday, April 1, 2026
Home Blog Page 1334

ಸಾಹಸ ಸಿಂಹ ನ ಸ್ಮಾರಕ ರೆಡಿ ಅಭಿಮಾನಿಗಳಿಗೆ ಸಂತಸದ ಸುದ್ದಿ

0

ಜನಪ್ರಿಯ ಚಿತ್ರನಟ ವಿಷ್ಣುವರ್ಧನ್ ಅಭಿಮಾನಿಗಳಿಗೆ ಸಿಹಿ ಸುದ್ದಿ.ಇದೇ ಜನವರಿ 29 ರಂದು ಬಹುನಿರೀಕ್ಷಿತ ಚಿತ್ರನಟನ ಸ್ಮಾರಕ ಕಣ್ಣೆದುರು ನಿಲ್ಲಲಿದೆ.
ಡಾ.ರಾಜ್ ನಂತರ ಅಪಾರ ಅಭಿಮಾನಿಗಳನ್ನ ಪಡೆದಿದ್ದ ಸಾಹಸ ಸಿಂಹ ವಿಷ್ಣುವರ್ಧನ್ ಅವರ ನಿಧನಾನಂತರ ಸ್ಮಾರಕ ನಿರ್ಮಾಣ ನೆನೆಗುದಿಗೆ ಬಿದ್ದಿತ್ತು.ಹದಿಮೂರು ವರ್ಷಗಳ ದೀರ್ಘ ಹೋರಾಟ ಈಗ ನನಸಾಗಿದೆ.
ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ರಸ್ತೆಯಲ್ಲಿ ಹಾಲಾಳು ಗ್ರಾಮದಲ್ಲಿ ಸ್ಮಾರಕ ತಲೆಯೆತ್ತಿದೆ.

ಆಗಿನ ಮುಖ್ಉಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಈ ಸ್ಮಾರಕಕ್ಕೆ ಭೂಮಿಪೂಜೆಯನ್ನ 2020 ರ ಸೆ 15. ರಂದು ನೆರವೇರಿಸಿದ್ದರು.

ಸ್ಮಾರಕದ ಆವರಣದಲ್ಲಿ ವಿಷ್ಣುವರ್ಧನ್ ಅವರ ನಿಲುವಿನ ಶಿಲಾ ಪ್ರತಿಮೆ,ಸಭಾಂಗಣ,ಥಿಯೇಟರ್
ಕಲಾವಿದರ ಕೊಠಡಿ,
ಇತ್ಯಾದಿ ವಿನ್ಯಾಸನ್ನೊಳಗೊಂಡಿದೆ.
ಜನವರಿ 29 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು.
ದೀರ್ಘತಪಸ್ಸಿನ ಫಲವೆಂಬಂತೆ ವಿಷ್ಣುವರ್ಧನ್ ಅಳಿಯ. ನಟ ಅನಿರುಧ್ ಸಂತಸ ವ್ಯಕ್ತಪಡಿಸಿದ್ದಾರೆ.

ಯುವಜನರು ದುಶ್ಚಟಗಳ ದಾಸರಾಗಬಾರದು-ಪ್ರಜ್ವಲ್ ಎಸ್.ಜೈನ್

0

ಶಿವಮೊಗ್ಗ: ದುಶ್ಚಟಗಳಿಗೆ ದಾಸರಾದರೆ ಜೀವನ ಹಾಳಾಗುತ್ತದೆ.
ಆದ್ದರಿಂದ ಯುವಜನರು ಮಾದಕ ವಸ್ತುಗಳಿಂದ
ದೂರವಿರಬೇಕು ಎಂದು ಜೆಸಿಐ ಇಂಡಿಯಾ ರಾಷ್ಟ್ರೀಯ
ತರಬೇತುದಾರ ಪ್ರಜ್ವಲ್ ಎಸ್ ಜೈನ್ ಹೇಳಿದರು.
ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಜೆಸಿಐ ಶಿವಮೊಗ್ಗ
ಸಹ್ಯಾದ್ರಿ ವತಿಯಿಂದ ಶಿವಮೊಗ್ಗ ನಗರದ ಗಾಯತ್ರಿ ಶಾಲೆಯಲ್ಲಿ
ಆಯೋಜಿಸಿದ್ದ ರಾಷ್ಟಿçÃಯ ಯುವ ದಿನ ಕಾರ್ಯಕ್ರಮ ಹಾಗೂ
ಮಾದಕ ವಸ್ತು ವಿರೋಧಿ ಅಭಿಯಾನದಲ್ಲಿ ಮಾತನಾಡಿ,
ಯುವಜನತೆ ಉತ್ತಮ ಜೀವನ ರೂಪಿಸಿಕೊಳ್ಳಲು ಸ್ವಾಮಿ
ವಿವೇಕಾನಂದರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು.
ಸ್ವಾಮಿ ವಿವೇಕಾನಂದರ ಬಗ್ಗೆ ಹೆಚ್ಚು ಅಧ್ಯಯನ ನಡೆಸಬೇಕು
ಎಂದು ತಿಳಿಸಿದರು.
ಶಾಲಾ ವಿದ್ಯಾರ್ಥಿಗಳಿಗೆ ವಿವೇಕಾನಂದರ ಜೀವನದ ಪ್ರಮುಖ
ಘಟನೆಗಳು, ತತ್ವ ಸಿದ್ಧಾಂತಗಳು ಮತ್ತು ಈಗಿನ
ಯುವಜನತೆಗೆ ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ
ಅರಿವು ಮೂಡಿಸಲಾಯಿತು. ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು.
ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷೆ ಸುಷ್ಮಾ ಬಿ ಹಿರೇಮಠ ಅವರು
ಕಾರ್ಯಕ್ರಮದ ಪ್ರಾಸ್ತವಿಕ ನುಡಿಯನ್ನು ಮಾತನಾಡಿ, ರಾಷ್ಟç
ನಿರ್ಮಾಣದ ಕಾರ್ಯದಲ್ಲಿ ಯುವಜನತೆಯ ಪಾತ್ರದ ಬಗ್ಗೆ ಅರಿವು
ಮೂಡಿಸಿದರು.
ಕಾರ್ಯಕ್ರಮದಲ್ಲಿ ವಲಯ ಉಪಾಧ್ಯಕ್ಷ ಸತೀಶ್ ಚಂದ್ರ, ಜೆಸಿಐ
ಶಿವಮೊಗ್ಗ ಸಹ್ಯಾದ್ರಿ ಕಾರ್ಯದರ್ಶಿ ಡಾ. ಲಲಿತಾ, ಕಾರ್ಯಕ್ರಮ
ನಿರ್ದೇಶಕಿ ಸುಷ್ಮಾ ಅರವಿಂದ್, ಟ್ರಸ್ಟ್ ಖಜಾಂಚಿ ಚಂದ್ರಹಾಸ ಪಿ.ರಾಯ್ಕರ್
ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಶಾಲೆಯ ೪೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು
ಸದುಪಯೋಗ ಪಡೆದುಕೊಂಡರು. ಶಾಲೆಯ ಅಧ್ಯಾಪಕರು
ಮತ್ತು ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.

ಮನಸ್ಸಿನಿಂದ ಮನಸ್ಸಿಗೆ ಭಾಗ-14

0

ಆಹಾರ – ಆರೋಗ್ಯ – ಅನುಭವ…

ದಿನನಿತ್ಯದ ಬದುಕಿನಲ್ಲಿ ಒಂದಷ್ಟು ಸಾಮಾನ್ಯ ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ಕೆಲವು ಆಹಾರದ ಕ್ರಮಗಳನ್ನು ಅನುಸರಿಸುವ ಅಗತ್ಯವಿದೆ.

ಈಗಾಗಲೇ ಇದರಲ್ಲಿ ‌ಸಾಕಷ್ಟು ಪ್ರಯೋಗಗಳು ಆಗಿವೆ. ಮಾಹಿತಿಯೂ ಲಭ್ಯವಿದೆ.

ಆದರೂ, ವೈಯಕ್ತಿಕವಾಗಿ ನನ್ನ ಕೆಲವು ಅನುಭವದ ಸಲಹೆಗಳು…

ನಿಮ್ಮ ಆರ್ಥಿಕ ಪರಿಸ್ಥಿತಿ ತಕ್ಕಮಟ್ಟಿಗೆ ಉತ್ತಮವಾಗಿದ್ದರೆ ದಯವಿಟ್ಟು ಸಾಧ್ಯವಾದಷ್ಟು ನಿಮ್ಮ ಆಹಾರ ಕ್ರಮದಲ್ಲಿ ಇದನ್ನು ದಿನನಿತ್ಯ ಅಳವಡಿಸಿಕೊಳ್ಳಿ.

1) ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಒಂದು ಲೋಟ Green/Red/ White/Block Tea ಯಾವುದಾದರೂ ಒಂದನ್ನು Alternative day ಕುಡಿಯಿರಿ. ( ನಿಮ್ಮ ಹತ್ತಿರದ Organic shop ಗಳಲ್ಲಿ ಅಥವಾ ದೊಡ್ಡ ಅಂಗಡಿಗಳಲ್ಲಿ ದೊರೆಯುತ್ತದೆ.) ಅಥವಾ ಇದಕ್ಕೆ ಪರ್ಯಾಯವಾಗಿ ರಾಗಿ ಗಂಜಿ – ಸಿರಿ ಧಾನ್ಯಗಳ ಗಂಜಿ ಆದರೂ ಸೇವಿಸಬಹುದು.

2) ದಿನದ ಯಾವುದಾದರೂ ಸಮಯದಲ್ಲಿ ಹಸಿಯಾಗಿ ತಿನ್ನಬಹುದಾದ ಕ್ಯಾರೆಟ್ ಸೌತೆಕಾಯಿ ಈರುಳ್ಳಿ ಬೆಳ್ಳುಳ್ಳಿ ನವಿಲುಕೋಸು ಎಲೆ ಕೋಸು ಬೀನ್ಸ್ ಟೊಮ್ಯಾಟೊ ಬೀಟ್ ರೋಟ್ ಮೂಲಂಗಿ ಮುಂತಾದ ತರಕಾರಿ ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಿ ಅಥವಾ ಇತರೇ ತರಕಾರಿಗಳನ್ನು ಅರ್ಧ ಬೇಯಿಸಿ ಸಹ ತಿನ್ನಬಹುದು.

3) ನಿಮ್ಮ ಅನುಕೂಲಕ್ಕೆ ತಕ್ಕಂತೆ ಆಯಾ ಕಾಲದಲ್ಲಿ ಸಿಗುವ ಹಣ್ಣುಗಳನ್ನು ಮರೆಯದೆ ಸೇವಿಸಿ. ಕನಿಷ್ಠ ದಿನಕ್ಕೆ ಯಾವುದಾದರೂ ಒಂದು ಹಣ್ಣನ್ನಾದರೂ ಸೇವಿಸುವುದು ಕಡ್ಡಾಯ ಎಂದು ಭಾವಿಸಿ ಸಂಕಲ್ಪ ಮಾಡಿಕೊಳ್ಳಿ.

4) ಎಷ್ಟೇ ಕಷ್ಟವಾದರೂ ಹೆಸರು ಕಾಳು ಕಡಲೆ ಕಾಳು ಮುಂತಾದ ಸೇವಿಸಬಹುದಾದ ಸರಳ ಮೊಳಕೆ ಕಾಳುಗಳನ್ನು ವಾರಕ್ಕೆ ಕನಿಷ್ಠ ಐದು ದಿನ ಸ್ವಲ್ಪವಾದರೂ ಸೇವಿಸಲು ರೂಡಿಸಿಕೊಳ್ಳಿ.

5) ಬಾದಾಮಿ ಗೋಡಂಬಿ ಒಣ ದ್ರಾಕ್ಷಿ ಒಣ ಖರ್ಜೂರ ಅಂಜೂರ ವಾಲ್ ನಟ್ ಪಿಸ್ತಾ ಮುಂತಾದ ಡ್ರೈ ಪ್ರೂಟ್ ಗಳನ್ನು ನಿಮ್ಮ ಜೊತೆಯಲ್ಲೇ ಕೊಂಡೊಯ್ದು ಅಲ್ಪ ಪ್ರಮಾಣದಲ್ಲಿ ಆಗಾಗ ಸೇವಿಸುವ ಅಭ್ಯಾಸ ಮಾಡಿಕೊಳ್ಳಿ.

6) ಅಕ್ಕಿ ರಾಗಿ ಗೋದಿ ಜೋಳ ನವಣೆ ಸಜ್ಜೆ ಮುಂತಾದವುಗಳಿಂದ ತಯಾರಾದ ದಿನನಿತ್ಯದ ಊಟದ ಪದಾರ್ಥಗಳನ್ನು ಹಸಿವು ನೀಗಿಸಲು ಮಾತ್ರ ಕಡಿಮೆ ಪ್ರಮಾಣದಲ್ಲಿ ತೆಗೆದುಕೊಳ್ಳಿ ಮತ್ತು ಈ ಎಲ್ಲವೂ ಊಟದಲ್ಲಿ ಸೇರಿರುವಂತೆ ವಾರದ ಮೇನು ಸಿದ್ದಪಡಿಸಿಕೊಳ್ಳಿ.
( ಒಂದು ದಿನ ಒಂದೊಂದರಂತೆ)

7) ಹಾಲಿಗೆ ಹೆಚ್ಚು ನೀರು ಬೆರೆಸಿ ದಿನಕ್ಕೆ ಕೇವಲ ಒಂದು ಗ್ಲಾಸ್ ಕುಡಿಯಿರಿ.

8) ಮಾಂಸಾಹಾರಿಗಳು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಪ್ರಮಾಣದಲ್ಲಿ ಅದನ್ನು ಸೇವಿಸಿ. ಹೋಟೆಲ್‌ ಮಾಂಸಹಾರಕ್ಕಿಂತ ಮನೆಗಳಲ್ಲಿ ಮಾಡಿದ ಮಾಂಸಹಾರ ಉತ್ತಮ. ಮೀನು ಮೊಟ್ಟೆಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಪ್ರಯತ್ನಿಸಿ.

ಇದರ ಜೊತೆಗೆ,

  • ಪ್ರತಿನಿತ್ಯ ಕನಿಷ್ಠ ೩ ಕಿಲೋಮೀಟರ್ ಸಾಧಾರಣ ಓಟ ಮತ್ತು ೩ ಕಿಲೋಮೀಟರ್ ನಡಿಗೆ ಮಾಡಲೇ ಬೇಕೆಂಬ ದೃಡ ನಿರ್ಧಾರ ಮಾಡಿ.
    ನೀವು ಎಲ್ಲೇ ಇದ್ದರೂ ಇದಕ್ಕಾಗಿ ಯೋಜನೆ ರೂಪಿಸಿಕೊಳ್ಳಿ.
  • ಅನುಕೂಲ ಇದ್ದವರು ಯೋಗ Gym Aerobic Dance ಓಟ ಧ್ಯಾನ ಮುಂತಾದ ಯಾವುದಾದರೂ ಒಂದರಲ್ಲಿ ತೊಡಗಿಸಿಕೊಳ್ಳಿ.
    ಯೋಗ ನಿಮ್ಮ ಮೊದಲ ಆಯ್ಕೆಯಾಗಿರಲಿ.
  • ದೈಹಿಕ ಚಟುವಟಿಕೆಗಳ ಯಾವುದೇ ಅವಕಾಶವನ್ನು ಕಳೆದುಕೊಳ್ಳ ಬೇಡಿ. ಮುಖ್ಯವಾಗಿ ಪರಿಸರದೊಂದಿಗಿನ ಪ್ರವಾಸವನ್ನು ಸದಾ ಆಯ್ಕೆ ಮಾಡಿಕೊಳ್ಳಿ ಮತ್ತು ಅನುಭವಿಸಿ.
  • ಗೆಳೆಯರು ಮತ್ತು ಕುಟುಂಬದವರೊಂದಿಗೆ ಸ್ನೇಹ ಸಂಬಂಧ ಉತ್ತಮವಾಗಿದ್ದರೆ ಅದನ್ನು ಜತನವಾಗಿ ಕಾಪಾಡಿಕೊಳ್ಳಿ ಮತ್ತು ಸಾಧ್ಯವಾದಷ್ಟು ಹೆಚ್ಚು ಸಮಯ ಅವರೊಂದಿಗೆ ಕಳೆಯಿರಿ.
  • ಹೊಟ್ಟೆ ಪಾಡಿನ ಉದ್ಯೋಗದ ಜೊತೆಗೆ ಯಾವುದಾದರೂ ಒಂದು ಆಸಕ್ತಿಯ ವಿಷಯದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಸಮಾಜ ಸೇವೆ ಇವುಗಳಲ್ಲಿ ಉತ್ತಮ.

ಈ ಎಲ್ಲವನ್ನೂ ಒಂದು ಅನಿವಾರ್ಯ ಮತ್ತು ಅವಶ್ಯಕ ಉದ್ಯೋಗ ಎಂದು ಮಾಡಿಕೊಳ್ಳಿ.

ನಿಮ್ಮ ಎಲ್ಲಾ ವಿಲ್ ಪವರ್ ಅನ್ನು ಉಪಯೋಗಿಸಿ ಎಷ್ಟೇ ಬಾರಿ ವಿಫಲರಾದರೂ, ಎಷ್ಟೇ ಕಷ್ಟ ನಷ್ಟ ನೋವು ಅಸಹಾಯಕತೆ ಇದ್ದರೂ ಬಿಡದೆ ಮತ್ತೆ ಮತ್ತೆ ಪ್ರಯತ್ನಿಸುತ್ತಲೇ ಇರಿ.

ನೂರು ಬಾರಿ ನಿಮ್ಮ ಸಂಕಲ್ಪ ನಾನಾ ಕಾರಣಗಳಿಂದ ಸಾಧ್ಯವಾಗದಿದ್ದರೂ ನೂರೊಂದನೇ ಸಾರಿ ಪ್ರಯತ್ನಿಸುವುದನ್ನು ಬಿಡಬೇಡಿ‌.
ಈ ಪ್ರಯತ್ನದಲ್ಲಿ ಬರುವ ಸಣ್ಣಪುಟ್ಟ ದೈಹಿಕ – ಮಾನಸಿಕ ನೋವುಗಳನ್ನು ಪ್ರಜ್ಞಾ ಪೂರ್ವಕವಾಗಿ ಮೆಟ್ಟಿನಿಲ್ಲಿ.

ಈ ಅಭ್ಯಾಸಗಳನ್ನು ತಪ್ಪಿಸಿಕೊಳ್ಳಲು ಬಹಳಷ್ಟು ನೆಪಗಳು ನಿಮಗೆ ದಿನವೂ ಸಿಗುತ್ತಲೇ ಇರುತ್ತದೆ.

ನಿಮ್ಮ ಮನಸ್ಸಿನಲ್ಲಿ ಎರಡು ರೀತಿಯ ತೊಯ್ದಾಟಗಳು ಸದಾ ಜಾಗೃತವಾಗಿರುತ್ತದೆ.

ಒಂದು,
ಅಯ್ಯೊ ಎಷ್ಟು ಮಾಡಿದರೂ ಅಷ್ಟೆ. ಹಣೆಯಲ್ಲಿ ಬರೆದಿದ್ದು ಆಗುತ್ತದೆ. ಅದಕ್ಕಾಗಿ ಇಷ್ಟೊಂದು ಕಷ್ಟ ಏಕೆ. ಏನೂ ಅಭ್ಯಾಸವಿಲ್ಲದವರು ಸದಾ ವಾಕಿಂಗ್ ಮಾಡುತ್ತಿದ್ದವರು ಮೊನ್ನೆ ತಾನೆ ದಿಡೀರ್ ಸತ್ತರು ಎಂಬ ಆಲೋಚನೆ ನಿಮಗೆ ನೆಪವಾಗಿ ಬರುತ್ತದೆ. ಸೋಮಾರಿಗಳು ಇದನ್ನೇ ಪ್ರಮುಖವಾಗಿ ಹೇಳುತ್ತಿರುತ್ತಾರೆ.

ಎರಡು,
ಹೌದು ಕನಿಷ್ಠ ಮಟ್ಟದ ವ್ಯಾಯಾಮ ಮತ್ತು ಆಹಾರ ಪದ್ದತಿ ನನ್ನ ಜೀವನಮಟ್ಟವನ್ನು ಖಂಡಿತ ಉತ್ತಮ ಸ್ಥಿತಿಯಲ್ಲಿ ಇಟ್ಟಿರುತ್ತದೆ.ಅದಕ್ಕಾಗಿ ನಾನು ಈಗ ಸ್ವಲ್ಪ ಶ್ರಮ ಪಡಲೇಬೇಕು. ಇದು ಜೀವ ಇರುವವರೆಗೂ ಪಾಲಿಸ ಬೇಕಾದ ಕರ್ತವ್ಯ.

ನೀವು ಸಾಧ್ಯವಾದಷ್ಟು ಎರಡನೇ ಮನಸ್ಸಿನ ಮಾತುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ.

ಇದರಿಂದ ಫಲಿತಾಂಶಗಳನ್ನು ಬೇಗ ನಿರೀಕ್ಷೆ ಮಾಡಬೇಡಿ. ಇದು ದೀರ್ಘಾವಧಿಯ ನಿರಂತರ ಕ್ರಿಯೆ.
ಆದರೆ ಖಂಡಿತ ನಿಮ್ಮ ಜೀವನಶೈಲಿ ಆರೋಗ್ಯಕರ ವಾಗಿರುವುದಲ್ಲದೆ ಕನಿಷ್ಠ ಸಣ್ಣಪುಟ್ಟ ಖಾಯಿಲೆಗಳು ನಿಮ್ಮನ್ನು ಕಾಡುವುದು ಕಡಿಮೆಯಾಗುತ್ತದೆ ಎಂದು ಖಚಿತವಾಗಿ ಭರವಸೆ ನೀಡಬಲ್ಲೆ.

( ನಾನು ಡಾಕ್ಟರ್ ಅಥವಾ ಆಯುರ್ವೇದ ಪಂಡಿತ ಅಥವಾ Fitness ಗುರು ಅಲ್ಲ. ಒಬ್ಬ ಸಾಮಾನ್ಯ ವ್ಯಕ್ತಿ. ಇದು ಇಲ್ಲಿಯವರೆಗಿನ ಬದುಕಿನ ಅನುಭವದ ಅನಿಸಿಕೆಗಳು ಮಾತ್ರ. ಆಯ್ಕೆಗಳು ನಿಮ್ಮ ವಿವೇಚನೆಗೆ ಸೇರಿದ್ದು…)

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ಬರಹ: ವಿವೇಕಾನಂದ ಎಚ್. ಕೆ.

“ತ್ಯಾಜ್ಯ ವಿಲೇವಾರಿಯ ನಿರ್ಲಕ್ಷ್ಯವು ಮನುಕುಲದ ವಿನಾಶಕ್ಕೆ ಕಾರಣವಾಗಲಿದೆ” – ಹಿರಿಯ ಪತ್ರಕರ್ತ ಎಚ್.ಬಿ.ಮಂಜುನಾಥ

0

ದಾವಣಗೆರೆ.ಜ.13. ಆಧುನಿಕ ಜೀವನ ವಿಧಾನದಲ್ಲಿ ತ್ಯಾಜ್ಯಗಳು ಅಂದರೆ ಕಸದ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದ್ದು ಇದರ ವಿಲೇವಾರಿಯಲ್ಲಿನ ನಿರ್ಲಕ್ಷವು ಮನುಕುಲದ ಹಾಗೂ ಜೀವಸಂಕುಲದ ವಿನಾಶಕ್ಕೆ ಭವಿಷ್ಯದಲ್ಲಿ ಕಾರಣವಾಗಬಹುದು ಎಂದು ಹಿರಿಯ ಪತ್ರಕರ್ತ ಎಚ್.ಬಿ.ಮಂಜುನಾಥ್ ಎಚ್ಚರಿಕೆ ಕೊಟ್ಟರು. ಅವರಿಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಟ್ರಸ್ಟ್ ದೇವನಗರಿ ತಾಲೂಕು, ದಾವಣಗೆರೆ ಜಿಲ್ಲಾ ಕಛೇರಿ ವತಿಯಿಂದ ನಿಟುವಳ್ಳಿ ಬಳಿಯ ಭೂಮಿಕಾ ನಗರದ ಶ್ರೀ ಶಿರಡಿ ಸಾಯಿಬಾಬಾ ಮಂದಿರದ ಪರಿಸರದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ ಆಧುನಿಕ ಜೀವನ ಶೈಲಿಯ ಕೊಳ್ಳುಬಾಕ ಸಂಸ್ಕೃತಿ ಹಾಗೂ ಬಳಸು ಬಿಸಾಕು ಸಂಸ್ಕೃತಿಯು ಘನ ತ್ಯಾಜ್ಯ, ಕಸಗಳ ಪ್ರಮಾಣವನ್ನು ಹೆಚ್ಚಿಸುತ್ತಿದ್ದು ಇಂತಹ ಕಸಗಳ ಸೂಕ್ತ ವಿಂಗಡಣೆ ಹಾಗೂ ವಿಲೇವಾರಿ ಪ್ರಪಂಚದಾದ್ಯಂತ ಸಮರ್ಪಕವಾಗಿ ಆಗುತ್ತಿಲ್ಲ, ನಮ್ಮ ದೇಶದಲ್ಲೇ ವಾರ್ಷಿಕ ಸುಮಾರು 65 ಮಿಲಿಯನ್ ಟನ್ ಗಳಷ್ಟು ಕಸ ಉತ್ಪತ್ತಿಯಾಗುತ್ತಿದ್ದು ಇದರಲ್ಲಿ 45 ಮಿಲಿಯನ್ ಟನ್ನು ಮಾತ್ರ ಸಂಗ್ರಹವಾಗುತ್ತಿದೆ, ಇದರಲ್ಲಿ ಕೇವಲ 14 ಮಿಲಿಯನ್ ಟನ್ ಗಳಷ್ಟು ಮಾತ್ರ ಸಂಸ್ಕರಿಸಲ್ಪಡುತ್ತಿದ್ದು ಉಳಿದ 31 ಮಿಲಿಯನ್ ಟನ್ ಗಳಷ್ಟು ಕಸವು ಎಲ್ಲೆಂದರಲ್ಲಿ ಎಸೆಯಲ್ಪಡುತ್ತಿದೆ, ವಾರ್ಷಿಕ ಸುಮಾರು ನಾಲ್ಕು ಮಿಲಿಯನ್ ಟನ್ ಗಳಷ್ಟು ಪ್ಲಾಸ್ಟಿಕ್ ಕಸವು ಉತ್ಪತ್ತಿಯಾಗುತ್ತಿದ್ದು ಅಂತಿಮವಾಗಿ ಇದರಲ್ಲಿ ಹೆಚ್ಚಿನ ಪಾಲು ಸಮುದ್ರ ಸೇರುತ್ತಿದೆ, ಹೀಗೆ ಸಮುದ್ರ ಸೇರಿದ ಪ್ಲಾಸ್ಟಿಕ್ ಸೂಕ್ಷ್ಮ ಕಣಗಳಾಗಿ ಉಪ್ಪಿನ ಮುಖಾಂತರ, ಮೀನಿನ ಆಹಾರಗಳ ಮುಖಾಂತರ ನಮ್ಮ ದೇಹವನ್ನೇ ಸೇರುತ್ತಿದ್ದು ಇದು ಶ್ವಾಸಕೋಶದಲ್ಲಿ ಸಂಗ್ರಹವಾಗಿ ಕ್ಯಾನ್ಸರ್ ಗೂ, ಸಾವಿಗೂ ಕಾರಣವಾಗುತ್ತಿದೆ, ಬಳಸಿ ಬಿಸಾಕಿದ ಪ್ಲಾಸ್ಟಿಕ್ ನ ಸುಡುವಿಕೆಯಿಂದ ಅಪಾಯಕಾರಿ ಡಯಾಕ್ಸಿನ್, ಫ್ಯೂರಿನ್, ಫಿನೈಲ್ ಅನಿಲ ಸಂಯುಕ್ತಗಳು ಹೊಗೆ ರೂಪದಲ್ಲಿ ಗಾಳಿಗೆ ಸೇರಿ ಹೃದ್ರೋಗಕ್ಕೂ, ನರದೌರ್ಬಲ್ಯಕ್ಕೂ, ತಲೆ ನೋವಿಗೂ, ಕಿಡ್ನಿ ವೈಫಲ್ಯಕ್ಕೂ, ನಪುಂಸತೆಗೂ ಕಾರಣವಾಗುತ್ತಿದೆ, ನಾವು ನಮ್ಮ ಮೊಬೈಲ್ ಗಳಲ್ಲಿ ಬೇಡವಾದ ಸಂದೇಶಗಳನ್ನು ಡಿಲೀಟ್ ಮಾಡಿ ಡಸ್ಟ್ ಬಿನ್ನಿಗೆ ಹಾಕಿ ನಂತರ ರಿಸೈಕಲ್ ಬಿನ್ ಗೆ ಹಾಕುವಲ್ಲಿ ತೋರುವ ಆಸಕ್ತಿಯನ್ನು ನಿಜವಾದ ಕಸ ವಿಲೇವಾರಿಯಲ್ಲಿ ತೋರುತ್ತಿಲ್ಲ, ಇದರಿಂದ ಆಗುವ ಅಪಾಯಗಳನ್ನು ನಾವೀಗಾಗಲೇ ಎದುರಿಸುತ್ತಿದ್ದರೂ ಎಚ್ಚರಿಕೆ ವಹಿಸುತ್ತಿಲ್ಲ, ಮುಖ್ಯವಾಗಿ ಪ್ಲಾಸ್ಟಿಕ್ ಬ್ಯಾಗ್ ಗಳ ಬಳಕೆಯನ್ನು ಬಿಟ್ಟು ಬಟ್ಟೆ ಚೀಲಗಳನ್ನು, ಪೇಪರ್ ಕವರುಗಳನ್ನು ಬಳಸಬೇಕು ಎಂದರಲ್ಲದೆ ಸಮುದ್ರ ಸೇರುತ್ತಿರುವ ಪ್ಲಾಸ್ಟಿಕ್ ಕಸ ಗಳಿಂದಾಗಿ ಸಾಗರ ಸಸ್ಯಗಳು ವಿನಾಶವಾಗುತ್ತಿದ್ದು ಇದರಿಂದ ಆಮ್ಲಜನಕದ ಕೊರತೆಯನ್ನು ಭೂಮಿಯ ಜೀವಿಗಳು ಎದುರಿಸಬೇಕಾಗುತ್ತದೆ ಎಂಬುದನ್ನು ಎಚ್. ಬಿ. ಮಂಜುನಾಥ್ ನಿದರ್ಶನಗಳ ಸಹಿತ ವಿವರಿಸಿದರು. ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದ ಸಂಸ್ಥೆಯ ಯೋಜನಾಧಿಕಾರಿ ಬಾಬುರವರು ಧರ್ಮಸ್ಥಳ ಸಂಸ್ಥೆಯು ಪರಿಸರ ನೈರ್ಮಲ್ಯಕ್ಕೂ ಆದ್ಯತೆ ಕೊಡುತ್ತಿದ್ದು ಹೆಚ್ಚು ಜನರು ಬಂದು ಹೋಗುವ ದೇವಸ್ಥಾನಗಳು, ಪ್ರಾರ್ಥನಾ ಮಂದಿರಗಳು ಮುಂತಾದ ಪ್ರದೇಶಗಳಲ್ಲಿ ಜಾತಿ ಮತ ಭೇದವಿಲ್ಲದೆ ಸ್ವಚ್ಛತಾ ಕಾರ್ಯವನ್ನು ಸಂಸ್ಥೆಯು ಕೈಗೊಳ್ಳುತ್ತಿದ್ದು ಈ ಸಾಲಿನಲ್ಲಿ ಗ್ರಾಮಾಂತರ ಪ್ರದೇಶಗಳ ಸುಮಾರು 500 ದೇವಾಲಯ, ಪ್ರಾರ್ಥನಾ ಮಂದಿರಗಳ ಪರಿಸರವನ್ನು ಸ್ವಯಂ ಪ್ರೇರಣೆಯಿಂದ ಸ್ವಚ್ಛಗೊಳಿಸಲಾಗಿದೆ ಎಂದರು. ಧರ್ಮಸ್ಥಳ ಸಂಸ್ಥೆಯ ಅಧಿಕಾರಿ ಶ್ರೀಧರ್ ಸಂತೆಬೆನ್ನೂರು, ಜಿಲ್ಲಾ ಜನಜಾಗೃತಿಯ ಅಣಬೇರು ಮಂಜಣ್ಣ, ತಿಮ್ಮಪ್ಪ ಹೊನ್ನಾಳಿ, ಕಮಲಾಕ್ಷಿ, ಶ್ರೀ ಸಾಯಿಬಾಬಾ ದೇವಸ್ಥಾನ ಸಮಿತಿಯ ಅರ್ಚನಾ, ರಾಜೇಶ್ವರಿ, ರೂಪಾ ರಾಜೇಶ್ ಹಾಗೂ ಧರ್ಮಸ್ಥಳ ಸಂಸ್ಥೆಯ ಸಿಬ್ಬಂದಿ ವರ್ಗದವರು ಸ್ವಚ್ಛತಾ ಅಭಿಯಾನದಲ್ಲಿ ಉತ್ಸಾಹದಿಂದ ಕೈಜೋಡಿಸಿದ್ದರು.

ರಾಹುಲ್ ತಾಳ್ಮೆ ಬ್ಯಾಟಿಂಗ್ ಲಂಕನ್ನರ ವಿರುದ್ಧ ಏಕದಿನ ಸರಣಿಗೆದ್ದ ಭಾರತ

0

ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಕ್ರಿಕೆಟ್ ಪಂದ್ಯವನ್ನು ರಾಹುಲ್ ಅವಿಸ್ಮರಣೀಯವನ್ನಾಗಿಸಿದ್ದಾರೆ. ಸಹಜವಾಗಿ ಆರಂಭಿಕ ಬ್ಯಾಟರ್ ಆಗಿರುವ ರಾಹುಲ್ ಎರಡನೇ ಕ್ರಮಾಂಕದಲ್ಲಿ ಕ್ರೀಸ್ ಗಿಳಿದಿದ್ದರು.

ಆಟದ ಕೊನೆಯ ತನಕ ಅವರು ತೋರಿದ ಸಹನೆ, ಜವಾಬ್ದಾರಿ ಮರೆಯುವಂತಿಲ್ಲ. ರಾಹುಲ್ ಗಳಿಸಿದ ಅಜೇಯ 64 ರನ್ ಗಳಲ್ಲಿ 06 ಬೌಂಡರಿಗಳಿದ್ದವು.

ರೋಹಿತ್ ಶರ್ಮಾ 17, ಗಿಲ್ 21, ಕೊಹ್ಲಿ 4, ಶ್ರೇಯಸ್ 28 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. 86 ರನ್ ಗಳಿಗೆ ನಾಲ್ಕು ವಿಕೆಟ್ ಕಬಳಿಸಿದ ಶ್ರೀಲಂಕಾ ಗೆ ಈ ಪಂದ್ಯ ಬಾಯಿಗೆ ಬಂದ ತುತ್ತಾಗಿದ್ದಂತೆ ಕಂಡುಬಂದಿತು.

ಆದರೆ ರಾಹುಲ್ ಜೊತೆಗೂಡಿದ ಹಾರ್ದಿಕ್ ಪಾಂಡ್ಯ ರನ್ ಗತಿ ಹೆಚ್ಚಿಸಿದರು .53 ಬಾಲ್ ಗಳಲ್ಲಿ 35 ರನ್ ಗಳಿಸಿದ ಹಾರ್ದಿಕ್ ಬ್ಯಾಟಿಂಗ್ ಜಯದತ್ತ ಶೀಘ್ರ ಮುಖ ಮಾಡಿತ್ತು.

ಆದರೆ ಕರುಣಾ ರತ್ನೆ ಅವರ ಬೌಲಿಂಗ್ ನಲ್ಲಿ ಕಾಟ್ ಬಿಹೈಂಡ್ ಆದರು. ಮತ್ತೆ ಆಟಕ್ಕೆ ಮಂಕು ಕವಿಯಬಹುದೇನೋ ಅನ್ನಿಸಿತ್ತು. ಅಕ್ಸರ್ ಪಟೇಲ್ ಅವರು 21 ಬಾಲ್ ಗಳಲ್ಲಿ 21 ರನ್ ಸೇರಿಸಿದರು. ಬ್ಯಾಟಿಂಗ್ ಅದೇ ಬಿಸಿಯಲ್ಲಿತ್ತು.

ಅವರೂ ಹೆಚ್ಚು ಹೊತ್ತು ನಿಲ್ಲಲಿಲ್ಲ. ಡಿಸಿಲ್ವ ಅವರ ಬೌಲಿಂಗ್ ನಲ್ಲಿ ಔಟಾದರು. 191 ರನ್ ಗೆ 6 ವಿಕೆಟ್ ಸ್ಕೋರ್ ಆಗಿತ್ತು.
ಜಯ ಇನ್ನೇನು ಸಮೀಪವಿತ್ತು. ಕುಲದೀಪ್ ಯಾದವ್ ತಮ್ಮ ಬ್ಯಾಟಿಂಗ್ ಸಾಥ್ ನೀಡಿದರು. ಜಯದ ಬೌಂಡರಿ ಬಾರಿಸಿದರು.

ಅಂತೂ ರಾಹುಲ್ ಆತ್ಮವಿಶ್ವಾಸ ಕುದುರಿಸಿಕೊಂಡು ಶ್ರೀಲಂಕಾ ತಂಡದಿಂದ ಜಯ ಕಸಿದುಕೊಂಡರು.

ಶ್ರೀಲಂಕಾ -215 (39-4)
ಭಾರತ-219-06 (43.2)

ಕೈಗಾರಿಕಾ ಪ್ರದೇಶ ಮತ್ತು ವಾಣಿಜ್ಯೋದ್ಯಮ ಸ್ಥಳಗಳಲ್ಲಿ ಸುಗಮ ಸಂಚಾರಕ್ಕೆ ಮನವಿ

0

ಶಿವಮೊಗ್ಗ: ನಗರದ ವಿವಿಧ ಕೈಗಾರಿಕಾ ವಸಹಾತು ಮತ್ತು ನಗರದ ವಾಣಿಜ್ಯೋದ್ಯಮ ಸ್ಥಳಗಳಲ್ಲಿ ಟ್ರಕ್‌ಗಳು ಓಡಾಡಲು ಟ್ರಾಫಿಕ್ ನಿಯಮದ ವ್ಯವಸ್ಥೆಯನ್ನು ಸುಗಮಗೊಳಿಸಿ ಅನುಮತಿ ನೀಡುವಂತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಹಾಗೂ ವಿವಿಧ ಸಂಘಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಜಿಲ್ಲಾಡಳಿತದಿಂದ ಶಿವಮೊಗ್ಗ ನಗರದ ವಿವಿಧ ರಸ್ತೆಗಳಲ್ಲಿ ಸರಳ ಸಂಚಾರಕ್ಕೆ ಟ್ರಾಫಿಕ್ ನಿಯಮಾವಳಿಗಳನ್ನು ರೂಪಿಸಿ ಅಧಿಸೂಚನೆ ಹೊರಡಿಸಲಾಗಿದೆ. ಅದರಂತೆ ಕೆಲ ಮುಖ್ಯ ರಸ್ತೆಗಳಲ್ಲಿ ಬೆಳಗ್ಗೆ 8.00 ರಿಂದ ರಾತ್ರಿ 8.00ರವರೆಗೆ ಯಾವುದೇ ಸರಕು ಸಾಗಾಣಿಕ ವಾಹನಗಳು ಓಡಾಡದಂತೆ ನಿಬಂಧಿಸಲಾಗಿದೆ. ಸರಕು ಸಾಗಾಣಿಕೆ ಸಂಚಾರದ ವಾಹನಗಳನ್ನು ನಿರ್ಬಂಧದಿಂದ ವರ್ತಕರು ದಿನನಿತ್ಯದ ವ್ಯಾಪಾರ ನಡೆಸಲು ಅನಾನುಕೂಲವಾಗುತ್ತಿದೆ ಎಂದರು.

ಸಾಗರ ರಸ್ತೆ ಆರ್.ಎಂ.ಸಿ ಪಕ್ಕದಲ್ಲಿರುವ ಕೈಗಾರಿಕಾ ವಸಹಾತುವಿಗೆ ಲಾರಿಗಳ ಆಗಮನ ಮತ್ತು ನಿರ್ಗಮನ ನಿಷೇಧಿಸಲಾಗಿದೆ. ಶಿವಮೊಗ್ಗ ನಗರದ ಒಳಗೆ ಬರುವ ಸಾಗರ ರಸ್ತೆಯಲ್ಲಿ “ಯೂ” ಟನ್ ಇರುವ ಚರ್ಚ್ವರೆಗೂ ಲಾರಿಗಳ ನಿಷೇಧಿಸಿರುವ ಆಜ್ಞೆಯಿಂದ ಕೈಗಾರಿಕೋದ್ಯಮಿಗಳಿಗೆ ಉತ್ಪಾದನೆಗೆ, ಕಾರ್ಮಿಕರಿಗೆ ಅನಾನುಕೂಲವಾಗಿ ನಷ್ಟ ಅನುಭವಿಸುವಂತಾಗಿದೆ ಎಂದರು.

ಕೈಗಾರಿಕೆಗಳು ನಡೆಯಲು ಮತ್ತು ಅಭಿವೃದ್ಧಿಪಡಿಸಲು ಸರಕುಗಳ ಪೂರೈಕೆಗೆ ಸರಕು ವಾಹನಗಳು ಪೂರಕ
ಘಟಕಗಳಿಗೆ ಸಾಗಿಸುವುದು ಅವಶ್ಯವಾಗಿರುತ್ತದೆ. ಕೈಗಾರಿಕೆಯಲ್ಲಿ ತಯಾರಾದ ಸಾಮಗ್ರಿಗಳನ್ನು ಹೊರಗೆ ಕಳಿಸುವುದು ಅನಿವಾರ್ಯವಾಗಿರುತ್ತದೆ. ಆದ್ದರಿಂದ ವ್ಯಾಪಾರೋದ್ಯಮ ಸುಗಮವಾಗಿ ಸಾಗಲು ಕ್ರಮ ವಹಿಸುವಂತೆ ಮನವಿ ಮಾಡಿದರು.

ಶಿವಮೊಗ್ಗ ನಗರದ ವಿವಿಧ ವಾಣಿಜ್ಯೋದ್ಯಮ ಸ್ಥಳಗಳಲ್ಲಿ ಪ್ಲೆಕ್ಸ್ ಗಳು, ಬ್ಯಾನರ್ ಗಳನ್ನು ಕಟ್ಟುತ್ತಿರುವುದರಿಂದ ಅಡಚಣೆ ಆಗುತ್ತಿದ್ದು, ಕಟ್ಟುನಿಟ್ಟಿನ ನಿಯಮಾಳಿಗಳನ್ನು ಆದೇಶಿಸುವಂತೆ ಮನವಿ ಮಾಡಿದರು.

ಅಗ್ನಿಶಾಮಕ ದಳ ಕಚೇರಿಯಲ್ಲಿ ಅಗತ್ಯ ಆಧುನಿಕ ಸಾಮಾಗ್ರಿಗಳು ಹಾಗೂ ಅಗತ್ಯ ಸೌಕರ್ಯಗಳು ಇರುವಂತೆ ಕ್ರಮ ವಹಿಸಬೇಕು. ತುರ್ತು ಸಂದರ್ಭದಲ್ಲಿ ಮೂಲಸೌಕರ್ಯಗಳಿಲ್ಲದೇ ಅನಾಹುತಗಳಲ್ಲಿ ಸೂಕ್ತ ನೆರವು ನೀಡಲು ಸಾಧ್ಯವಾಗುವುದಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಕೂಡಲೇ ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾಡಳಿತದ ವತಿಯಿಂದ ಟ್ರಕ್ ಟರ್ಮಿನಲ್‌ಗೆ ಸ್ಥಳ ಅವಕಾಶ ಕಲ್ಪಿಸಿ ಕೂಡಲೇ ಕ್ರಮ ಕೈಗೊಳ್ಳಬೇಕು. ಯಶಸ್ವಿಯಾಗಿ ಹಿಂದೆ ನಡೆಯುತ್ತಿದ್ದ ಸಹ್ಯಾದ್ರಿ ಉತ್ಸವವನ್ನು ಶಿವಮೊಗ್ಗದಲ್ಲಿ ಮತ್ತೆ ಆರಂಭಿಸಬೇಕು ಎಂದು ಜಿಲ್ಲಾಧಿಕಾರಿ ಗಮನಕ್ಕೆ ತರಲಾಯಿತು.

ಹಾರ್ಡವೇರ್ ಅಸೋಸಿಯೇಷನ್, ದಿನಸಿ ವರ್ತಕರ ಸಂಘ, ಜಿಲ್ಲಾ ವಿತರಕರ ಸಂಘ, ಔಷಧಿ ವ್ಯಾಪಾರಿಗಳ ಸಂಘ, ಜವಳಿ ವರ್ತಕರ ಸಂಘ, ಗಾಂಧಿಬಜಾರ್ ವರ್ತಕರ ಸಂಘ, ಸಾಗರ ರಸ್ತೆ ಕೈಗಾರಿಕಾ ವಸಾಹತು, ಎಪಿಎಂಸಿ ವರ್ತಕರು ಹಾಗೂ ವಿವಿಧ ಕೈಗಾರಿಕಾ ಸಂಸ್ಥೆಗಳ ಪ್ರಮುಖರು ಹಾಜರಿದ್ದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್, ವಸಂತ ಹೋಬಳಿದಾರ್, ಅಶ್ವತ್ಥ ನಾರಾಯಣ ಶೆಟ್ಟಿ, ಜೆ.ಆರ್.ವಾಸುದೇವ್, ಜಿ.ವಿಜಯಕುಮಾರ್, ಜಗದೀಶ ಮಾತನವರ್, ಪ್ರದೀಪ್ ಎಲಿ, ಎಸ್.ಎಸ್.ಉದಯ್‌ಕುಮಾರ್, ಬಿ.ಗೋಪಿನಾಥ್, ಹಾಲಸ್ವಾಮಿ, ಶಿವರಾಜ್ ಉಡುಗಣಿ, ವೆಂಕಟೇಶಮೂರ್ತಿ ಮತ್ತಿತರರು ಹಾಜರಿದ್ದರು.

ಕಾಮಗಾರಿಗಳು ಲೇಔಟ್ ನಿರ್ಮಾಣಗಳಲ್ಲಿ ಆರಗ ಜ್ಞಾನೇಂದ್ರ ಸ್ವಜನ ಪಕ್ಷಪಾತ- ಕಿಮ್ಮನೆ ರತ್ನಾಕರ್

0

ಶಿವಮೊಗ್ಗ: ಹೊಸನಗರಗಳಲ್ಲಿನ ಪಿಡಬ್ಲ್ಯೂಡಿ ಕಾಮಗಾರಿಗಳೆಲ್ಲವನ್ನು ಗೃಹ ಸಚಿವರು ಅವರ ಸಂಬಂಧಿ ಸಿವಿ ಚಂದ್ರಶೇಖರ್ ಅವರಿಗೆ ನೀಡಿದ್ದಾರೆ. ಶೇ. 50ರಷ್ಟು ಪಾಲುದಾರಿಕೆಯು ಇದೆ ಎಂದು ಕಿಮ್ಮನೆ ರತ್ನಾಕರ್ ಅವರು ಆರಗ ಜ್ಞಾನೇಂದ್ರ ಅವರ ಮೇಲೆ ಆರೋಪಿಸಿದ್ದಾರೆ.

ಸರ್ಕಾರಿ ಭೂಮಿಯನ್ನು ಖಾಸಗಿ ಭೂಮಿಯನ್ನಾಗಿ ದಾಖಲಿಸಿ, ಲೇಔಟ್ ಗಳನ್ನ ಮಾಡುತ್ತಿದ್ದಾರೆ. ಇವರ ಮಗನೇ ಇದಕ್ಕೆ ಬಂಡವಾಳ ಹೂಡಿದ್ದಾರೆ ಎಂದು ಹೇಳಿದ್ದಾರೆ.

ಯಾವ ಅಧಿಕಾರಿಯನ್ನು ಎಲ್ಲಿಗೆ ವರ್ಗಾವಣೆ ಮಾಡಬೇಕು ಎಂಬ ಪಟ್ಟಿ, ಸ್ಯಾಂಟ್ರೋ ರವಿ ಬಳಿ ಇತ್ತು. ಅದರಂತೆ ವರ್ಗಾವಣೆ ಆಗಿದೆ. ಈ ವಿಚಾರದಲ್ಲಿ ಆರಗ ಜ್ಞಾನೇಂದ್ರ ಅವರನ್ನ ಬಂಧಿಸಬೇಕು. ಫೆಬ್ರವರಿ ಒಳಗೆ ಆರೋಗ್ಯ ಅವರು ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಕಿಮ್ಮನೆ ರತ್ನಾಕರ್ ಅವರು ಎಚ್ಚರಿಕೆ ನೀಡಿದ್ದಾರೆ.

ನಾನು 10 ವರ್ಷ ಶಾಸಕನಾಗಿದ್ದೇನೆ. ಬಿಜೆಪಿಯವರ ಇಂತಹ ರಾಜಕಾರಣಕ್ಕೆ ಹೆದರುವುದಿಲ್ಲ. ನಾನು ರಾಜಕೀಯಕ್ಕೆ ಬಂದಿದ್ದು ಸಮಾಜದ ಸೇವೆಗಾಗಿ. ಇದನ್ನು ಸವಾಲಾಗಿ ಸ್ವೀಕರಿಸುತ್ತೇನೆ. ಮಾನ್ಯ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರಿಗೆ ಈ ಬಗ್ಗೆ ಸವಾಲು ಎಸೆಯುತ್ತೇನೆ. ಅಮಿತ್ ಶಾ ಹಾಗೂ ಆರಗ ಜ್ಞಾನೇಂದ್ರ ಇವರಿಬ್ಬರೂ ನನ್ನ ವಿರುದ್ಧ ಈ ವಿಚಾರದಲ್ಲಿ ಸಿಬಿಐ ತನಿಖೆ ನಡೆಸಲಿ ಎಂದು ಮಾಧ್ಯಮಗೋಷ್ಠಿಯಲ್ಲಿ ಕಿಮ್ಮನೆ ರತ್ನಾಕರ್ ಅವರು ತಿಳಿಸಿದರು

ಸೋಲಾರ್ ಗ್ರಾಮ ಉದ್ಘೋಷಣೆ

0

ರಾಮಚಂದ್ರಾಪುರಮಠ ದಲ್ಲಿ ನಡೆದ, ಸಾವಯುವ ಸಿರಿ ಕಾರ್ಯಾಗಾರ ಹಾಗೂ
ಕಾರಣಗಿರಿಯಲ್ಲಿ ಸಾಂಸ್ಕೃತಿಕ ಭವನ ಉದ್ಘಾಟನೆ ಮತ್ತು ಸೋಲಾರ್ ಗ್ರಾಮ ಉದ್ಘೋಷಣೆ ಕಾರ್ಯಕ್ರಮ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು,ಪೂಜ್ಯ ಗುರುಗಳಾದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಆಶೀರ್ವಾದ ಪಡೆದರು.

ಗೃಹ ಸಚಿವರಾದ ಆರಗ ಜ್ಞಾನೇಂದ್ರ ರವರು, ಸಂಸದರಾದ ಬಿ.ವೈ ರಾಘವೇಂದ್ರ ರವರು, ಕೃಷಿ ಇಲಾಖೆ ಅಧಿಕಾರಿಗಳು, KREDL MD ರುದ್ರಪಯ್ಯ, ಹನಿಯ ರವಿ, ನಳಿನ್ ಚಂದ್ರ, ಚುನಾಯಿತ ಪ್ರತಿನಿಧಿಗಳು, ಕೃಷಿಕರು ಉಪಸ್ಥಿತರಿದ್ದರು.

ಯುವಜನೋತ್ಸವವು ದೇಶವನ್ನ ಭೌಗೋಳಿಕ,ಭಾವನಾತ್ಮಕವಾಗಿ ಒಂದುಗೂಡಿಸುತ್ತದೆ- ಸಚಿವ ಅನುರಾಗ್ ಠಾಕೂರ್

0

ಯುವಶಕ್ತಿಯನ್ನು ಕಟ್ಟಿಕೊಂಡು ದೇಶದಲ್ಲಿ ವಿಭಿನ್ನ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ದೇಶದ ಬೇರೆ‌ ಬೇರೆ ಭೌಗೋಳಿಕ ಪ್ರದೇಶಗಳ ಯುವಕರ ತಂಡಗಳು ಬಂದಿವೆ. ಇಲ್ಲಿನ ಸ್ಪರ್ಧೆಯಲ್ಲಿ ಯಾರೇ ಗೆದ್ದರೂ ಅಂತಿಮವಾಗಿ ಭಾರತವೇ ಗೆಲ್ಲುತ್ತದೆ.
ಆದ್ದರಿಂದ ಯುವಜನೋತ್ಸವದಲ್ಲಿ ಭಾಗವಹಿಸುವ ತಂಡಗಳು ವಿಕಸಿತ ಭಾರತ ಸಮರ್ಥ ಭಾರತವನ್ನು ಗಮನದಲ್ಲಿಟ್ಟುಕೊಂಡು ದೇಶವನ್ನು ಮುನ್ನಡೆಸಬೇಕು ಎಂದು ಕ್ರೀಡಾ ಸಚಿವರಾದ ಅನುರಾಗ್ ಸಿಂಗ್ ಠಾಕೂರ್ ಕರೆ ನೀಡಿದರು.

ರಾಷ್ಟ್ರೀಯ ಯುವಜನೋತ್ಸವವು ಇಡೀ ದೇಶವನ್ನು ಭೌಗೋಳಿಕವಾಗಿ ಹಾಗೂ ಭಾವನಾತ್ಮಕವಾಗಿ ಒಂದುಗೂಡಿಸುತ್ತದೆ ಎಂದು ಕೇಂದ್ರ ಯುವ ವ್ಯವಹಾರಗಳು ಹಾಗೂ ಕ್ರೀಡಾ ಸಚಿವರಾದ ಅನುರಾಗ್ ಸಿಂಗ್ ಠಾಕೂರ್ ಅಭಿಪ್ರಾಯಪಟ್ಟರು.

ಸ್ವಸ್ಥ ಶರೀರದಲ್ಲಿ ಸ್ವಸ್ಥ ಮನಸ್ಸು ಇರುತ್ತದೆ. ಆದ್ದರಿಂದ ಗೀತಾ-ರಾಮಾಯಣ ಓದುವ ಮೊದಲು ಫುಟ್ಬಾಲ್ ಆಡುವಂತೆ ಸ್ವಾಮಿ ವಿವೇಕಾನಂದರು ಹೇಳುತ್ತಿದ್ದರು.

ಪ್ರಸ್ತುತ ಪ್ರಧಾನ ಮಂತ್ರಿಗಳು ಕೂಡ ಅದೇ ಮಾರ್ಗದಲ್ಲಿ ದೇಶದ ಯುವ ಜನತೆಯನ್ನು ಕೊಂಡೊಯ್ಯುತ್ಯಿದ್ದಾರೆ.

ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ನಿರ್ಮಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಜೀಯವರ ಕನಸುಗಳ ಸಾಕಾರಕ್ಕೆ ಯುವಸಮುದಾಯ ಕೈಜೋಡಿಸುವ ಅಗತ್ಯವಿದೆ.

ಮೋದಿಜಿಯವರ ನಾಯಕತ್ವದಲ್ಲಿ ಜಿ-20 ಅಧ್ಯಕ್ಷತೆ ಸ್ಥಾನವು ಭಾರತಕ್ಕೆ ಲಭಿಸಿದೆ. ಕ್ರೀಡೆಗಳಲ್ಲಿ ಅತ್ಯುನ್ನತ ಸಾಧನೆಯನ್ನು ದೇಶವು ಸಾಧಿಸಿದೆ.

ಭಾರತವನ್ನು ವಿಕಸಿತಗೊಳಿಸುವ ಆಂದೋಲನವು ಒಬ್ಬ ನರೇಂದ್ರ ಮೋದಿ ಅವರಿಂದ ಆರಂಭಗೊಂಡು ಈಗ ಇನ್ನೊಬ್ಬ ನರೇಂದ್ರ ಅವರ ಮೂಲಕ ಮುಂದುವರಿದಿದೆ.

ಭ್ರಷ್ಟಾಚಾರ ಮುಕ್ತ, ನಶಾಮುಕ್ತವಾಗಿರುವ ಸ್ವಸ್ಥ ಮತ್ತು ಸದೃಢ ಭಾರತ ನಿರ್ಮಾಣಕ್ಕೆ ಯುವಜನತೆ ಕೈಜೋಡಿಸಬೇಕು ಎಂದು ಕೇಂದ್ರ ಸಚಿವ ಅನುರಾಗ ಸಿಂಗ್ ಠಾಕೂರ್ ಅವರು ಕರೆ ನೀಡಿದರು.

ಕೇಂದ್ರ ಸಂಸದೀಯ ವ್ಯವಹಾರಹಗಳು,ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಪ್ರಹ್ಲಾದ್ ಜೋಶಿ ಮಾತನಾಡಿ,ಸ್ವಾಮಿ ವಿವೇಕಾನಂದರ ಜಯಂತಿಯ ಈ ಸಂದರ್ಭದಲ್ಲಿ ಮೊಟ್ಟ ಮೊದಲ ಬಾರಿಗೆ ಉತ್ತರ ಕರ್ನಾಟಕದಲ್ಲಿ ರಾಷ್ಟ್ರೀಯ ಯುವಜನೋತ್ಸವ ಆಯೋಜಿಸಲಾಗಿದೆ.

ಜಗತ್ತಿನಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಹೊಂದಿರುವ ಭಾರತ ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದೆ.ಪ್ರಧಾನ ಮಂತ್ರಿಯವರ ಆಶೀರ್ವಾದದಿಂದ ಧಾರವಾಡ ಜಿಲ್ಲೆಗೆ ಐಐಟಿ,ಐಐಐಟಿ,ನವದೆಹಲಿಗೆ,ಕಾಶಿಗೆ ನೇರ ವಿಮಾನಯಾನ ಸೌಕರ್ಯ ದೊರೆತಿದೆ.ದೇಶದ ಯುವ ಜನತೆ ಉತ್ಸಾಹದಿಂದ ಉತ್ಸವದಲ್ಲಿ ಭಾಗವಹಿಸುತ್ತಿರುವುದು ಸಂತಸ ತಂದಿದೆ ಎಂದರು‌.

ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಕೈಮಗ್ಗ ಮತ್ತು ಜವಳಿ, ಸಕ್ಕರೆ ಮತ್ತು ಕಬ್ಬು ಅಭಿವೃದ್ಧಿ ಇಲಾಖೆಯ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಅಧ್ಯಕ್ಷತೆ ವಹಿಸಿದ್ದರು.

ಏಲಕ್ಕಿ ಹಾರ,ವಿವೇಕಾನಂದರ ವಿಗ್ರಹ, ರಾಷ್ಟ್ರಧ್ವಜ ಚೌಕಟ್ಟಿನ ಸ್ಮರಣಿಕೆ:

ಸಾಂಪ್ರದಾಯಿಕ ಶಾಲು ಹೊದಿಸಿ,ಹಾವೇರಿಯ ಏಲಕ್ಕಿ ಹಾರ,ಮುತ್ತಿನಿಂದ ಅಲಂಕರಿಸಿದ ಪೇಟ ತೊಡಿಸಿ,ತೇಗದ ಮರದಲ್ಲಿ ತಯಾರಿಸಿದ ಸ್ವಾಮಿ ವಿವೇಕಾನಂದರ ವಿಗ್ರಹ,ಗರಗ-ಬೆಂಗೇರಿಯಲ್ಲಿ ಸಿದ್ಧವಾಗುವ ರಾಷ್ಟ್ರಧ್ವಜವನ್ನು ಅಳವಡಿಸಿದ ಚೌಕಟ್ಟಿನ ಸ್ಮರಣಿಕೆ ನೀಡಿ ಪ್ರಧಾನಿಯವರನ್ನು ಗೌರವಿಸಲಾಯಿತು‌.

ಕೇಂದ್ರ ಗೃಹ ವ್ಯವಹಾರಗಳು ಹಾಗೂ ಯುವ ವ್ಯವಹಾರಗಳು ಮತ್ತು ಕ್ರೀಡಾ ಇಲಾಖೆಯ ರಾಜ್ಯ ಸಚಿವರಾದ ನಿಸಿತ್ ಪ್ರಮಾಣಿಕ್,
ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕರ್ನಾಟಕ ಸರ್ಕಾರದ ಯುವ ಸಬಲೀಕರಣ, ಕ್ರೀಡೆ ಹಾಗೂ ರೇಷ್ಮೆ ಇಲಾಖೆಯ ಸಚಿವರಾದ ಡಾ.ಕೆ.ಸಿ.ನಾರಾಯಣಗೌಡ,
ಗಣಿ-ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಆಚಾರ್ ಹಾಲಪ್ಪ ಬಸಪ್ಪ, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ,ಮಾಜಿ ಮುಖ್ಯಮಂತ್ರಿ,ಶಾಸಕ ಜಗದೀಶ ಶೆಟ್ಟರ್,ಶಾಸಕರಾದ ಅಮೃತ ದೇಸಾಯಿ,ಅರವಿಂದ ಬೆಲ್ಲದ,ವಿಧಾನಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರ,ಪ್ರದೀಪ ಶೆಟ್ಟರ್,ಬಯಲುಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ತವನಪ್ಪ ಅಷ್ಟಗಿ,ಜಂಗಲ್ ರೆಸಾರ್ಟ್ಸ ಅಭಿವೃದ್ದಿ ನಿಗಮ ಅಧ್ಯಕ್ಷ ರಾಜು ಕೋಟೆಣ್ಣವರ,ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಮಹಾಪೌರ ಈರೇಶ್ ಅಂಚಟಗೇರಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಚಿತ್ತಾಕರ್ಷಕ ಪಥಸಂಚಲನ:

ದೇಶದ ವೈವಿಧ್ಯಮಯ ಕಲೆ,ಪೋಷಾಕು,ಸಂಸ್ಕೃತಿಗಳನ್ನು ಪ್ರತಿಬಿಂಬಿಸುವ ಚಿತ್ತಾಕರ್ಷಕ ಪಥಸಂಚಲನವು ವಿವಿಧ ರಾಜ್ಯಗಳ ತಂಡಗಳಿಂದ ಜರುಗಿತು.ರಾಷ್ಟ್ರೀಯ ಯೋಗಾಸನ ಮತ್ತು ಕ್ರೀಡಾ ಫೆಡರೇಷನ್ನಿನ ವಿದ್ಯಾರ್ಥಿಗಳಿಂದ ಕಲಾತ್ಮಕ ಯೋಗಾಸನ ಮತ್ತು ಮಲ್ಲಕಂಬ ಸಾಹಸಗಳ ಪ್ರದರ್ಶನ ಜರುಗಿತು.

ವಿವೇಕಾನಂದರ ಆದರ್ಶಗಳನ್ನ ಯುವಜನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು- ಮೇಯರ್ ಶಿವಕುಮಾರ್

0

ಶಿವಮೊಗ್ಗ: ಸ್ವಾಮಿ ವಿವೇಕಾನಂದರು ಯುವಜನರಿಗೆ ಸ್ಫೂರ್ತಿ. ಅವರ ಜೀವನ ಆದರ್ಶಗಳನ್ನು ಯುವಜನರು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಶಿವಕುಮಾರ್ ಹೇಳಿದರು.

ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನ ಸಭಾಂಗಣದಲ್ಲಿ ಮಹಾನಗರ ಪಾಲಿಕೆ, ಸಹ್ಯಾದ್ರಿ ಕಲಾ ಕಾಲೇಜು ಮತ್ತು ಸಂಕಲ್ಪ ಫೌಂಡೇಷನ್ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದ ಯುವ ಯೋಜನೆಯಡಿ ಆಯೋಜಿಸಿದ್ದ ಸ್ವಾವಲಂಬಿ ಬದುಕಿಗೆ ಯಶಸ್ವಿ ಸೂತ್ರಗಳು ಉಪನ್ಯಾಸ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ವಾಮಿ ವಿವೇಕರ ಆದರ್ಶಗಳನ್ನು ಯುವಜನರಿಗೆ ತಲುಪಿಸುವ ಆಶಯದಿಂದ ಪ್ರತಿ ವರ್ಷ ಸ್ವಾಮಿ ವಿವೇಕಾನಂದ ಯುವ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತದೆ.
ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದು ತಿಳಿಸಿದರು.

ಆಡಳಿತ ಮತ್ತು ತರಬೇತಿ ಜಿಲ್ಲಾ ಸಂಸ್ಥೆಯ ಉಪನ್ಯಾಸಕಿ ಜ್ಯೋತಿಕುಮಾರಿ ಮಾತನಾಡಿ, ಸ್ವಾಮಿ ವಿವೇಕಾನಂದರ ವ್ಯಕ್ತಿತ್ವ ಅನನ್ಯ. ಅಖಂಡ ಭಾರತದ ಪರಿಕಲ್ಪನೆಯ ಅರಿವು ಮೂಡಬೇಕಾದರೆ ಸ್ವಾಮಿ ವಿವೇಕಾನಂದರ ಜೀವನದ ಅಧ್ಯಯನ ಅತ್ಯಂತ ಅವಶ್ಯಕ ಎಂದು ಹೇಳಿದರು.

ಸ್ವಾಮಿ ವಿವೇಕಾನಂದರು ಯುವಜನರ ಮೇಲೆ ಅಪಾರ ನಂಬಿಕೆ ಇಟ್ಟಿದ್ದರು. ಅಧ್ಬುತ ಶಕ್ತಿ ಹೊಂದಿರುವ ಯುವ ಸಮೂಹ ಅಸಾಧ್ಯವಾದುದನ್ನು ಸಾಧ್ಯವಾಗಿಸಬಲ್ಲರು. ಸ್ವಾಮಿ ವಿವೇಕರು ಜೀವನದ ಪ್ರತಿ ಹಂತದಲ್ಲಿಯೂ ಯುವ ಜನರಿಗೆ ಸಂದೇಶ ನೀಡಿದ್ದರು ಎಂದು ತಿಳಿಸಿದರು.

ಸ್ವಾವಲಂಬಿ ಜೀವನ ಎಂದರೆ ಕೇವಲ ಆರ್ಥಿಕವಾಗಿ ಸದೃಢರಾಗುವುದಲ್ಲ. ಸ್ವಂತ ವಿಚಾರಧಾರೆಗಳನ್ನು ಸೃಷ್ಠಿಸಿಕೊಳ್ಳುವಾತ ಸ್ವಾವಲಂಬಿ ಬದುಕು ನಡೆಸಬಲ್ಲ. ಸ್ವಂತ ವಿಚಾರ, ಸೃಜನಶೀಲ ಸಾಮಾರ್ಥ್ಯ, ಸ್ವದೇಶಿ ಚಿಂತನೆ ಒಳಗೊಂಡು ಸ್ವಾವಲಂಬಿ ಬದುಕು ರೂಢಿಸಿಕೊಳ್ಳಲು ಯುವಜನರು ಮುಂದಾಗಬೇಕು ಎಂದರು.

ಯುವಜನರು ಕೀಳರಿಮೆ ಮನೋಭಾವ ಬಿಡಬೇಕು. ಏಕಾಗ್ರತಾ ಶಕ್ತಿ ವೃದ್ಧಿಸಿಕೊಳ್ಳಬೇಕು. ಚಿಕ್ಕ ಚಿಕ್ಕ ವಿಷಯಗಳಲ್ಲೂ ಪರಿಪೂರ್ಣತೆ ಸಾಧಿಸಬೇಕು. ವಿವೇಕಾಂದರ ಚಿಂತನೆ ಬದುಕಿನಲ್ಲಿ ಅಳವಡಿಸಿಕೊಂಡರೆ ಉತ್ತಮ ರಾಷ್ಟ್ರ ನಿರ್ಮಾಣದಲ್ಲಿ ಕೊಡುಗೆ ನೀಡಲು ಸಾಧ್ಯವಿದೆ ಎಂದು ಹೇಳಿದರು.

ಪಾಲಿಕೆ ಸದಸ್ಯ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ದೇಶಕ್ಕಾಗಿ ಸಂಪೂರ್ಣ ಜೀವನ ನಡೆಸಿದ ಮಹಾನ್ ವ್ಯಕ್ತಿತ್ವ ಸ್ವಾಮಿ ವಿವೇಕಾನಂದರು. ರಾಷ್ಟ್ರದ ವಿಶೇಷ ಪರಿಕಲ್ಪನೆ ಹೊಂದಿದ್ದ ವ್ಯಕ್ತಿತ್ವ ವಿವೇಕರದು. ಸ್ವಾವಲಂಬಿ ಬದುಕು ನಡೆಸಬೇಕೆಂಬ ಉದಾತ್ತ ಚಿಂತನೆಯನ್ನು ಬದುಕಿನಲ್ಲಿ ಸಾರಿದವರು ಸ್ವಾಮಿ ವಿವೇಕಾನಂದರು ಎಂದು ಹೇಳಿದರು.

“ಸ್ವಾವಲಂಬಿ ಬದುಕಿಗೆ ಯಶಸ್ವಿ ಸೂತ್ರಗಳು” ಉಪನ್ಯಾಸ ಸಪ್ತಾಹ ಕಾರ್ಯಕ್ರಮಕ್ಕೆ ಮೇಯರ್ ಶಿವಕುಮಾರ್ ಚಾಲನೆ ನೀಡಿದರು.

ಜನವರಿ 13ರಿಂದ ಶಿವಮೊಗ್ಗ ನಗರದ ವಿವಿಧ ಕಾಲೇಜುಗಳಲ್ಲಿ ಜನವರಿ 19ರವರೆಗೆ ಉಪನ್ಯಾಸ ಸಪ್ತಾಹ ನಡೆಯಲಿದೆ.

ಉಪಮೇಯರ್ ಲಕ್ಷ್ಮೀ ಶಂಕ್ರನಾಯ್ಕ, ಆಡಳಿತ ಪಕ್ಷದ ನಾಯಕ ಜ್ಞಾನೇಶ್ವರ್, ಪಾಲಿಕೆ ಸದಸ್ಯ ಎಸ್.ಎನ್.ಚನ್ನಬಸಪ್ಪ, ಪಾಲಿಕೆ ಸದಸ್ಯ ಧೀರರಾಜ್ ಹೊನ್ನವಿಲೆ, ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಚಾರ್ಯ ಧನಂಜಯ್, ಸಂಪನ್ಮೂಲ ವ್ಯಕ್ತಿ ಶಿವಾಜಿ, ಸಮನ್ವಯ ಕಾಶಿ, ಅನುಪಮಾ, ಲೋಕೇಶ್, ಅಭಿ ಎಚ್.ಎನ್. ಗೌಡ ಮತ್ತಿತರರು ಉಪಸ್ಥಿತರಿದ್ದರು.