Wednesday, April 1, 2026
Wednesday, April 1, 2026
Home Blog Page 1333

ಕಾಂಗ್ರೆಸ್ ಕುಣಿಕೆಗೆ ಬಿದ್ದ ಪಕ್ವ ರಾಜಕಾರಣಿ ದತ್ತ

0

ಇತ್ತೀಚೆಗೆ ರಾಜ್ಯದ ರಾಜಕೀಯದಲ್ಲಿ ಅನಿರೀಕ್ಷಿತ ಏರುಪೇರುಗಳು ಕಂಡುಬರುತ್ತಿವೆ. ವಿವಿಧ ಪಕ್ಷಗಳ ನಾಯಕರು ನೀಡುವ ಹೇಳಿಕೆಗಳು ಚಾರಿತ್ರ್ಯ ಹನನ, ಹೈಕಮಾಂಡ್ ಗೆ ಇರಿಸು ಮುರಿಸು, ಪಕ್ಷಗಳ ಮುಖಕ್ಕೆ ಮಸಿ ಬಳಿಯುವಂತಹ ಪ್ರಸಂಗಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ.

ಪಕ್ಷ ಬಿಟ್ಟು ಬೇರೆ ಪಕ್ಷ ಸೇರುವ ಅಭಿಯಾನಗಳು ನಡೆಯುತ್ತವೆ. ರಾಜ್ಯದ ರಾಜಕಾರಣದಲ್ಲಿ ಗಮನಸೆಳೆಯುವ ಸಂಗತಿ ಎಂದರೆ ಜೆಡಿಎಸ್ ಕಟ್ಟಾಳು ವೈ.ಎಸ್.ವಿ. ದತ್ತಾ ಅವರು ಪಕ್ಷಕ್ಕೆ ಗುಡ್ ಬೈ ಹೇಳಿರುವುದು.

ದತ್ತಣ್ಣ, ಕಣ್ಣು ಬಿಟ್ಟಿದ್ದೇ, ದೇವೇಗೌಡರ ರಾಜಕೀಯ ಆಶ್ರಯದಲ್ಲಿ. ದೀರ್ಘಕಾಲ ಬೆಳೆದು ತಮ್ಮ ರಾಜಕೀಯ ನೆಲೆಯನ್ನ ಜೆಡಿಎಸ್ ನಲ್ಲಿ ಗುರುತಿಸಿಕೊಂಡಿದ್ದರು.

ಎಂಎಲ್ ಸಿ ಆದರು. ನಂತರ ಕಡೂರು ಕ್ಷೇತ್ರದ ಶಾಸಕರೂ ಆಗಿದ್ದರು. ನಂತರ ಬಿಜೆಪಿ ಅಲೆಯಲ್ಲಿ ಪರಾಭವಗೊಂಡಿದ್ದರು. ಜೆಡಿಎಸ್ ಪಕ್ಷದ ಪ್ರಚಾರ ಸಮಿತಿಯ ಅಧ್ಯಕ್ಷರು ಆಗಿದ್ದರು.

ಆದರೆ ,ದೊಡ್ಡ ಪ್ರಶ್ನೆ… ದತ್ತ ಯಾಕೆ ಪಕ್ಷ ಬಿಟ್ಟರು?
ಇತ್ತೀಚೆಗೆ ಜೆಡಿಎಸ್ ಕುಮಾರಣ್ಣನವರು ಸಾಮಾಜಿಕ ಜಾಲತಾಣದಲ್ಲಿ ದತ್ತಣ್ಣ ಅವರ ಬಗ್ಗೆ ಖಾರವಾಗಿಯೇ ಮಾತನಾಡಿದ ದೃಶ್ಯ ಕಂಡು ಬಂದಿತು.

ಅವರನ್ನ, ದೇವೇಗೌಡರ ಮಾನಸ ಪುತ್ರ ಅಂತ ನೀವು ಮಾಧ್ಯಮದವರು ಬರೀ ಬೇಡ್ರಿ… ಅಂತಲೇ ಹೇಳಿದ್ದಾರೆ.

ಇನ್ನೊಂದೆಡೆ ದತ್ತಣ್ಣ ಅವರು ಪಕ್ಷ ತೆರೆಯುವ ನಿರ್ಧಾರದ ಬಗ್ಗೆ ನೀಡಿದ ಹೇಳಿಕೆಯು ಸಾಮಾಜಿಕ ಜಾಲತಾಣದಲ್ಲಿದೆ. ದೇವೇಗೌಡರ ಹೇಳಿಕೆ ಮತ್ತು ಕುಮಾರಣ್ಣ ಅವರ ಹೇಳಿಕೆಗಳು ಪಕ್ಷದಲ್ಲಿ ಭಿನ್ನ-ಭಿನ್ನವಾಗಿ ಬರುತ್ತಿವೆ. ಅದನ್ನ ತಾನು ಅವರ ಗಮನಕ್ಕೆ ತಂದಿದ್ದೇನೆ ಎಂದಿದ್ದಾರೆ ದತ್ತಣ್ಣ.

ಜೆಡಿಎಸ್ ಪಕ್ಷದ ಅಭಿಮಾನವನ್ನೇ ಹಾಸಿಹೊದ್ದುಕೊಂಡಿದ್ದ ದತ್ತಣ್ಣ ಅವರ ಕೊಡುಗೆ ಆ ಪಕ್ಷಕ್ಕೆ ಕಡಿಮೆಯೇನಿಲ್ಲ… ಆದರೆ, ದೇವೇಗೌಡರನ್ನು ಮೀರಿದ ಶಕ್ತಿಯಿಂದ ಅವರಿಗೆ ‘ ಕೊಕ್ ‘ ಗ್ಯಾರೆಂಟಿ ಯಿತ್ತೋ ಏನೊ?

ದತ್ತಣ್ಣ ಅವರ ಕಾಂಗ್ರೆಸ್ ಸೇರ್ಪಡೆ ಹೆಚ್ಚುವರಿ ಅಂಕ ಸಿಗುತ್ತೆ ಅಂತ ಕಾಂಗ್ರೆಸ್ ಎಣಿಕೆ ಸಹಜ. ಪಕ್ಷ ಸೇರುವುದು, ಬಿಡುವುದು ಅವರವರ ವೈಯಕ್ತಿಕ. ಆದರೆ, ಪಕ್ಷಾಂತರ ಪರ್ವದಲ್ಲಿ ಹಿನ್ನೆಲೆಯ ಬಗ್ಗೆ ಸಾಮಾನ್ಯರು ಲೆಕ್ಕಚಾರ ಹಾಕೇ ಹಾಕುತ್ತಾರೆ.

ಪಕ್ಷದಲ್ಲಿ ಅವರಿಗೆ ಬೆಲೆ ಇಲ್ಲ. ಶಾಸಕರನ್ನಾಗಿ ಮಾಡಲು ಟಿಕೆಟ್ ನೀಡಲು ಇಷ್ಟವಿಲ್ಲ. ಅಧಿಕಾರ ಸಿಗಲಿಲ್ಲ ಅಂತ ಬೇರೆ ಪಾರ್ಟಿ ಸೇರ್ತಾರೆ… ಇವೆಲ್ಲ ಅಂಬೋಣಗಳು.

ಅಚ್ಚರಿ ಎಂದರೆ ದತ್ತಣ್ಣ ಅವರು, ನಾನು ಎಡಪಂಥೀಯ ಎಂಬ ಹೇಳಿಕೆ ಕೊಟ್ಟಿದ್ದಾರೆ. ಇದು ಕಾಂಗ್ರೆಸ್ ನಾಯಕರ ಓಲೈಕೆಯಷ್ಟೆ ಇಡೀ ಕಾಂಗ್ರೆಸ್ ಎಡಪಂಥೀಯರಿಗೆ ಮಣೆ ಹಾಕಿದೆ ಎಂಬ ಅಭಿಪ್ರಾಯ ಮೂಡಿಸಬಹುದು.

ಯಾವುದೇ ಷರತ್ತಿಲ್ಲದೇ ಕಾಂಗ್ರೆಸ್ ಸೇರಿರುವೆ ಎಂದಿದ್ದಾರೆ. ಶಾಸಕರಾಗಿದ್ದಾಗಿನ ಅವಧಿಯ ಯಾವ ಕಪ್ಪು ಚುಕ್ಕೆಯು ಅವರಿಗಿಲ್ಲ” ಮಿಸ್ಟರ್ ಕ್ಲೀನ್” ಅವರು ಮಿಸ್ಟರ್ ಕ್ಲೀನ್ ಅವರ ಗುಂಪಿಗೆ ಸೇರ್ಪಡೆಯಾಗಿದ್ದಾರೆ.

ಒಂದು ಮಾತಂತೂ ಸತ್ಯ. ದತ್ತಣ್ಣ ಕಾಂಗ್ರೆಸ್ ನಲ್ಲಿ ಮತ್ತೆ ಪ್ರಜ್ವಲಿಸುತ್ತಾರೋ, ಏನೋ ಗೊತ್ತಿಲ್ಲ… ಅಲ್ಲಿ ಬಹಳ ತಾರೆಗಳಿವೆ. ಆದರೆ, ಜೆಡಿಎಸ್ ಅವರನ್ನ ಈ ಪರಿಸ್ಥಿತಿಯಲ್ಲಿ ನಡೆಸಿಕೊಂಡ ಬಗ್ಗೆ ಮಾತ್ರ ಅಸಮಾಧಾನಕರ.

ಮಹಿಳಾ ಸಬಲೀಕರಣದತ್ತ ಬೊಮ್ಮಾಯಿ ಬಜೆಟ್

0

ರಾಜ್ಯದ ಮಹಿಳೆಯರಿಗೆ ಸ್ವಾಭಿಮಾನದ, ಸ್ವಾವಲಂಬನೆಯ ಬದುಕನ್ನು ಕಟ್ಟಿಕೊಡುವ ನಿಟ್ಟಿನಲ್ಲಿ, ಈ ಬಾರಿಯ ಬಜೆಟ್ ನಲ್ಲಿ ವಿಶೇಷ ಯೋಜನೆಗಳನ್ನು ಘೋಷಿಸಲಾಗುವುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿಗಳು ತಮ್ನ ಟ್ವೀಟ್ ಸಂದೇಶದಲ್ಲಿ ತಿಳಿಸಿದ್ದಾರೆ.

ತಾವು ಮಂಡಿಸಲಿರುವ ಬಜೆಟ್ ನಲ್ಲಿ ಮಹಿಳೆಯರಿಗೆ ಕುಟುಂಬ ನಿರ್ವಹಣೆ ಬಗ್ಗೆ ಅನುಕೂಲವಾಗಲು
ಮಾಸಿಕ 1000ರೂ. ದಿಂದ 3000ರೂ. ವರೆಗೆ ನೆರವು ನೀಡುವ ಯೋಜನೆ ಘೋಷಿಸುವ ಚಿಂತನೆಯಿದೆ ಎಂದೂ
ಮಾಧ್ಯಮಗಳಲ್ಲಿ ವರದಿಯಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು
ಈ ಬಾರಿಯ ಬಜೆಟ್ ಚುನಾವಣಾ ಬಜೆಟ್ ಆಗಲಿದೆ.ಜನಪರವಾಗಿರುತ್ತದೆ.
ಕೋವಿಡ್ ನಿಂದ ನರಳಿದವರಿಗೆ ಉಪಚಾರ,ಆರೋಗ್ಯ ಕುಟುಂಬ ನಿರ್ವಹಣೆಗೆ ವಿಶೇಷ ಒತ್ತು ಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಚುನಾವಣಾ ಪೂರ್ವ ಬಜೆಟ್ ಸಾಮಾನ್ಯವಾಗಿ ತೆರಿಗೆ ಭಾರವಿರುವುದಿಲ್ಲ.
ಮತದಾರರನ್ನ ಸೆಳೆಯುವ ಗಿಮಿಕ್ ಪಾಲಿಸುವುದು ಎಲ್ಲಾ ಆಡಳಿತ ಪಕ್ಷದವರ ಕಸರತ್ತು.
ಬಜೆಟ್ ಮಂಡನೆಯನ್ನ ನಾವೆಲ್ಲರೂ
ಕಾದು ನೋಡ ಬೇಕಿದೆ.

ಕ್ರೀಡೆಗಳು ಸಾಮಾಜಿಕ ಸಾಮರಸ್ಯ ಸಾರುತ್ತವೆ-ಕೆ.ಸಿ.ಧರ್ಮೇಶ್

0

ಚಿಕ್ಕಮಗಳೂರು: ಆಧುನಿಕ ಜಗತ್ತಿನಲ್ಲಿ ಗ್ರಾಮೀಣ ಕ್ರೀಡೆಗಳು ನಶಿಸುತ್ತಿರುವ ಹಿನ್ನೆಲೆಯಲ್ಲಿ ವಾಲಿಬಾಲ್ ಸೇರಿದಂತೆ ವಿವಿಧ ಕ್ರೀಡೆಗಳನ್ನು ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಆಸಕ್ತಿ ತೋರಬೇಕು ಎಂದು ಗ್ರಾಮದ ಹಿರಿಯ ಮುಖಂಡ ಕೆ.ಸಿ.ಧರ್ಮೇಶ್ ಅವರು ಹೇಳಿದರು.

ಚಿಕ್ಕಮಗಳೂರು ಧರಗುಣಿ ಗ್ರಾಮದಲ್ಲಿ ಜೈ ಭೀಮ್ ಯುವಕರ ಸಂಘವು ಆಯೋಜಿಸಿದ್ದ ಗ್ರಾಮೀಣ ಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕ್ರೀಡೆ ಸಾಮಾಜಿಕ ಮತ್ತು ಸಾಮರಸ್ಯವನ್ನು ಸಾರುತ್ತದೆ. ಮನುಷ್ಯ ಜೀವನದಲ್ಲಿ ಆರೋಗ್ಯದಿಂದ ಜೀವಿಸಲು ಕ್ರೀಡೆ ಅತ್ಯಂತ ಸಹಕಾರಿಯಾಗಲಿದೆ ಎಂದ ಅವರು ಸದೃಢ ಶರೀರವನ್ನು ಪಡೆಯಲು ಕ್ರೀಡಾಚಟುವಟಿಕೆಗಳಲ್ಲಿ ಭಾಗವಹಿಸಿದರೆ ದೈಹಿಕವಾಗಿ ಶಕ್ತಿ ತುಂಬುತ್ತದೆ ಎಂದು ತಿಳಿಸಿದರು.

ಕೆ.ಪಿ.ಎಸ್. ಸಂಘಟನೆ ಜಿಲ್ಲಾ ಕಾರ್ಯದರ್ಶಿ ಉಮೇಶ್‌ಕುಮಾರ್ ಮಾತನಾಡಿ ಧರಗುಣಿ ಗ್ರಾಮವು ಹಲವು ವಿಶೇಷತೆ ಯನ್ನು ಒಳಗೊಂಡಿರುವಂತಹ ಗ್ರಾಮ. ಸ್ಥಳೀಯ ಯುವಕರ ಬಳಗದ ಶ್ರಮದಿಂದ ಪ್ರತಿವರ್ಷವು ಪಂದ್ಯಾವಳಿ ನಡೆಸಿ ಪ್ರೇರೇಪಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜೈಭೀಮ್ ಯುವಕರ ಸಂಘದ ಅರುಣ್‌ಕುಮಾರ್ ಯುವಕರ ಬಳಗದ ಶ್ರಮದಿಂದ ಇಷ್ಟು ದೊಡ್ಡ ಮಟ್ಟದ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿದೆ. ಪ್ರಸ್ತುತ 60ಕ್ಕೂ ಅಧಿಕ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿವೆ. ಎಲ್ಲಾ ತಂಡಗಳಿಗೂ ಶುಭ ಕೋರಿದರು.

ಈ ಸಂದರ್ಭದಲ್ಲಿ ಹಿರೇಕೊಳಲೆ ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಕುಮಾರ್, ಪೂರ್ಣೇಶ್, ಮಾಜಿ ಸದಸ್ಯ ಸುರೇಶ್, ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಕೆ.ಕೆ.ಮಂಜುನಾಥ್, ಜೈ ಭೀಮ್ ಯುವಕರ ಸಂಘದ ಮುಖಂಡ ಕೆ.ಆರ್.ಮಂಜುನಾಥ್, ಕಬ್ಬಿನಹಳ್ಳಿ ಶಾಲೆಯ ಮುಖ್ಯೋಪಾಧ್ಯಾಯ ಸಿದ್ದೇಶ್ವರ್, ಅಂಗನವಾಡಿ ಶಿಕ್ಷಕಿ ಕು.ಕೃಪ.ಕೆ.ಎಲ್. ಮುಖಂಡರುಗಳಾದ ಕೆ.ಕೆ.ಮೋಹನ್, ಅಜೀಜ್, ದುಗ್ಗೇಶ್, ವಸಂತ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಗುರುಗಳ ಬೋಧನೆಯಿಂದ ಮಕ್ಕಳು ಜೀವನದಲ್ಲಿ ಯಶಸ್ಸುಗಳಿಸಬೇಕು-ಕೆ.ಪಿ.ವೆಂಕಟೇಶ್

0

ಚಿಕ್ಕಮಗಳೂರು: ಜ್ಞಾನದೇಗುಲದಲ್ಲಿ ಗುರುಗಳು ಕಲಿಸುವ ಪಾಠವನ್ನು ಕರಗತ ಮಾಡಿಕೊಂಡು ಮುಂದಿನ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಗಳಿಸಲು ಮಕ್ಕಳು ಪ್ರಯತ್ನಿಸಬೇಕು ಎಂದು ಸಫಾಯಿ ಕರ್ಮಚಾರಿ ನಿಗಮದ ಅಧ್ಯಕ್ಷ ಕೆ.ಪಿ.ವೆಂಕಟೇಶ್ ಅವರು ಹೇಳಿದರು.

ಚಿಕ್ಕಮಗಳೂರಿನ ಕುರುವಂಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿದೆಸೆಯಲ್ಲಿ ಮಕ್ಕಳು ಕಠಿಣ ಶ್ರಮವಹಿಸಿ ವಿದ್ಯಾಭ್ಯಾಸದಲ್ಲಿ ತೊಡಗಿದರೆ ಸಮಾಜದಲ್ಲಿ ಉನ್ನತ ಮಟ್ಟದ ಹುದ್ದೆ ಅಲಂಕರಿಸಲು ಸಾಧ್ಯ ಎಂದು ಕಿವಿಮಾತು ಹೇಳಿದರು.

ಮಕ್ಕಳು ಶಾಲೆಯಲ್ಲಿ ಆಯೋಜಿಸುವ ಕ್ರೀಡಾ ಚಟುವಟಿಕೆ, ರಸಪ್ರಶ್ನೆ ಸ್ಪರ್ಧೆ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು. ತಮ್ಮಲ್ಲಿರುವ ಪ್ರತಿಭೆಯನ್ನು ಶಿಕ್ಷಕರ ತಿಳಿಸುವ ಮೂಲಕ ಅಡಗಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಮುಂದಾಗಬೇಕು ಎಂದು ತಿಳಿಸಿದರು.

ಗ್ರಾಮೀಣ ಶಾಲೆಯ ಮಕ್ಕಳು ಖಾಸಗೀ ಶಾಲೆಯ ಮಕ್ಕಳಿಗಿಂತ ಹೆಚ್ಚು ಕ್ರಿಯಾಶೀಲರಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ ಮತ್ತು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸುತ್ತಿದ್ದು, ಇದಕ್ಕೆ ಪೂರಕವಾಗಿ ಶಾಲಾ ಶಿಕ್ಷಕರು ಕಾರ್ಯನಿರ್ವಹಿಸಿದ್ದಲ್ಲಿ ರಾಜ್ಯಮಟ್ಟದಲ್ಲಿ ಮಕ್ಕಳು ಹೆಸರು ಗಳಿಸಬಹುದು ಎಂದು ತಿಳಿಸಿದರು.

ಗ್ರಾಮದ ಶಾಲೆಯು 97 ವರ್ಷಗಳಿಂದ ಮುನ್ನಡೆಯುತ್ತಿದೆ. ಮುಂದಿನ 3 ವರ್ಷಗಳು ಕಳೆದರೆ ಶತಮಾನೋತ್ಸವ ಪೂರೈಸಲಿರುವ ಹಿನ್ನೆಲೆಯಲ್ಲಿ ಆ ಸಮಯಕ್ಕೆ ಗ್ರಾಮದ ಶಾಲೆಯಲ್ಲಿ ದೊಡ್ಡಮಟ್ಟದ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಕರ್ತಿಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಯತೀಶ್ ಮಾತನಾಡಿ ಮೊಬೈಲ್ ಆನ್‌ಲೈನ್ ಆಟಗಳಲ್ಲಿ ಹೆಚ್ಚು ತೊಡಗಿಸುತ್ತಿರುವ ಇಂದಿನ ಸಮಯದಲ್ಲಿ ಗ್ರಾಮೀಣ ಶಾಲೆಯ ಮಕ್ಕಳು ದೊಡ್ಡಮಟ್ಟದಲ್ಲಿ ಪಾಲ್ಗೊಂಡು ಪ್ರತಿಭೆ ಅನಾವರಣಗೊಳಿಸುತ್ತಿರುವುದು ಖುಷಿ ತಂದಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಕುಮಾರ್ ಶಾಲೆಯು ಸ್ವಾತಂತ್ರ್ಯ ಪೂರ್ವದ ಮೊದಲೇ ಪ್ರಾರಂಭಗೊಂಡಿದೆ. ಸಾವಿರಾರು ವಿದ್ಯಾರ್ಥಿಗಳು ಅಭ್ಯಾಸ ಮಾಡಿದ್ದಾರೆ. ಕೆಲವು ಮಕ್ಕಳು ಅತ್ಯಂತ ಉನ್ನತ ಹುದ್ದೆಯನ್ನು ಅಲಂಕರಿಸಿ ಗ್ರಾಮಕ್ಕೂ ಹಾಗೂ ಶಾಲೆಗೂ ಕೀರ್ತಿ ತರುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಇದೇ ವೇಳೆ ಶಾಲೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಂಡು ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ನೇತ್ರ ಕುಮಾರ್, ಸದಸ್ಯರಾದ ಮೋಹನ್, ಲೋಕೇಶ್, ಸೌಮ್ಯ ಪರಮೇಶ್, ಪುಟ್ಟಸ್ವಾಮಿಶೆಟ್ಟಿ, ರೇಖಾ ಶಂಕರ್, ಆಶಾ ಗುರುಸ್ವಾಮಿ, ಪಿಡಿಓ ಪ್ರಕಾಶ್, ಶಾಲೆಯ ಹಳೆಯ ಶಿಕ್ಷಕ ವಿಜಯಕುಮಾರ್, ವ್ಯವಸಾಯ ಸಹಕಾರ ಸಂಘದ ಅಧ್ಯಕ್ಷ ಜಗದೀಶ್, ಎಸ್.ಡಿ.ಎಂ.ಸಿ. ಮಾಜಿ ಅಧ್ಯಕ್ಷ ಗಂಗಪ್ಪ, ಕೆ.ಟಿ.ಮರಿಶೆಟ್ಟಿ ಮತ್ತು ಗ್ರಾಮಸ್ಥರು, ಮಕ್ಕಳು ಉಪಸ್ಥಿತರಿದ್ದರು.

ಸಾಧನೆಗೆ ಪ್ರೇರೇಪಿಸುವ ಶಿಕ್ಷಣ ಅಗತ್ಯ-ಎ.ಎಸ್.ನಿರಂಜನ

0

ದಾವಣಗೆರೆ : ಸಾಧನೆಯ ಹಾದಿಗೆ ಪ್ರೇರೇಪಿಸುವಂತಹ ಶಿಕ್ಷಣವು ಇಂದಿನ ಅವಶ್ಯವಾಗಿದೆ. ಪ್ರತಿ ವಿದ್ಯಾರ್ಥಿಯ ವೈಯಕ್ತಿಕ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವು ಶಿಕ್ಷಣ ಸಂಸ್ಥೆಗಳಿಂದ ಆಗಬೇಕಾಗಿದೆ ಎಂದು ಬಾಪೂಜಿ ವಿದ್ಯಾಸಂಸ್ಥೆಯ ಖಜಾಂಚಿ ಎ.ಎಸ್.ನಿರಂಜ ಅವರು ಅಭಿಪ್ರಾಯಪಟ್ಟರು.

ಅವರು, ದಾವಣಗೆರೆಯ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ವಿಜ್ಞಾನ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ವೇದಿಕೆ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ, ನಾಯಕತ್ವ ಗುಣ ಸೋದರತ್ವ ಭಾವ ಶಿಕ್ಷಣದೊಂದಿಗೆ ಬೆಳೆಸಿಕೊಳ್ಳಬೇಕು. ವ್ಯಕ್ತಿತ್ವರೂಪಣೆಗೆ ಶಿಕ್ಷಣ ಒಂದೇ ಸಾಲದು, ಪಠ್ಯೇತರ ಚಟುವಟಿಕೆಗಳಲ್ಲಿನ ಅನುಭವವೂ ಪೂರಕವಾಗಿ ಬೇಕು ಎಂದರಲ್ಲದೆ ಶಿಕ್ಷಕರ ಮಾರ್ಗದರ್ಶನವನ್ನು ವಿದ್ಯಾರ್ಥಿಗಳು ಸಹಾ ನಿರ್ಲಕ್ಷಿಸದೆ ಸ್ವೀಕರಿಸಿ ಅಳವಡಿಸಿಕೊಳ್ಳಬೇಕು ಎಂದರು.

ಪದವೀಧರರಾದರೂ ಕೃಷಿ ಕ್ಷೇತ್ರವನ್ನು ಪ್ರವೇಶಿಸಿ ರೈತರಾಗಲು ಹಿಂಜರಿಕೆ ಬೇಡ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಪಡೆದು ಭಾಗವಹಿಸಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳಬೇಕು ಇದಕ್ಕಾಗಿ ಮೊಬೈಲ್ ಚಟದಿಂದ ದೂರವಿದ್ದು ವಿದ್ಯಾರ್ಜನೆಯ ಕಡೆಗೆ ಗಮನ ನೀಡಿರಿ ಎಂದು ಕರೆಕೊಟ್ಟರು. ಪ್ರಸ್ತುತ ದೇಶದ ರಾಷ್ಟ್ರಪತಿ ಹಾಗೂ ಹಣ ಕಾಸು ಸಚಿವರಾಗಿ ಮಹಿಳೆಯರು ಉತ್ತಮ ಕಾರ್ಯ ನಿರ್ವಹಿಸುತ್ತಿದೆ. ಇದು ವಿದ್ಯಾರ್ಥಿನಿಯರಿಗೆ ಸ್ಪೂರ್ತಿದಾಯಕ ಅಂಶವಾಗಿದೆ ಎಂದರು.

ಸಮಾರೋಪ ಭಾಷಣ ಮಾಡಿದ ಶ್ರೀಮತಿ ಸರ್ವ ಮಂಗಳಮ್ಮ ಮಾಗನೂರು ಬಸಪ್ಪ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ. ಅನಿತಾ ಹೆಚ್. ದೊಡ್ಡ ಗೌಡರ್ ಸಾಧನೆ ಎಂದರೆ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಗಳಿಸುವುದು ಅಷ್ಟೇ ಅಲ್ಲ. ನಿಮ್ಮಲ್ಲಿನ ವಿಶೇಷತೆಯನ್ನು ನೀವೇ ಗುರುತಿಸಿಕೊಂಡು ಅದನ್ನು ಪ್ರತಿಭೆಯಾಗಿ ಮಾರ್ಪಡಿಸಿಕೊಂಡು ಬೆಳೆಯುವುದೇ ಸಾಧನೆ ಎಂದರಲ್ಲದೇ ಸ್ನೇಹ, ವಾಹನ ಹಾಗೂ ಮೊಬೈಲ್ ಮೋಹದ ಬಗ್ಗೆ ಜಾಗೃತರಾಗಿರಬೇಕು. ಇದು ಅತಿಯಾದರೆ ಹಾದಿತಪ್ಪುವ ಸಂಭವವಿದೆ ಎಂದರು.

ಅಭ್ಯಾಸಕ್ಕೆ ಸಮಯ ನಿಗದಿ ಪಡಿಸಿಕೊಂಡು ವೇಳಾಪಟ್ಟಿಯಂತೆ ಶಿಸ್ತು ಬದ್ಧವಾಗಿ ವ್ಯಾಸಂಗ ಮಾಡಬೇಕು. ಓದನ್ನು ತಪಸ್ಸು ಎಂದು ತಿಳಿಯಬೇಕೆ ಹೊರತು ಭಯಪಡಬಾರದು ಎಂದರು.

ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ. ಪಿ. ರುದ್ರಪ್ಪನವರು ಪ್ರಯತ್ನವಿಲ್ಲದೆ ಹೋದರೆ ಪ್ರತಿಭೆಯು ಪ್ರಕಟವಾಗುವುದಿಲ್ಲ, ಕ್ರೀಡಾ ಸಾಂಸ್ಕೃತಿಕ ಚಟುವಟಿಕೆಗಳು ಜೀವನ ಪರೀಕ್ಷೆಗೆ ಅವಶ್ಯ, ಓದು ಶಾಲಾ ಪರೀಕ್ಷೆಗೆ ಅವಶ್ಯ ಎಂದರು.

ಅನೇಕ
ಸ್ಪರ್ಧೆಗಳ ವಿಜೇತರಿಗೆ ಯುವ ನಟ ಪೃಥ್ವಿ ಶಾಮನೂರು ಬಹುಮಾನ ವಿತರಿಸಿ ಮಾತನಾಡಿದರು.

ಕೀರ್ತಿ ಮತ್ತು ಸಹನಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಜಯಶೀಲ ಹಾಡಿದರು. ಭಾವನಾ ಸ್ವಾಗತ ಕೋರಿದರೆ ಮುಖ್ಯ ಅತಿಥಿಗಳ ಪರಿಚಯವನ್ನು ಆಯಿಷಾ ಸಿದ್ಧಿಕ, ಅರ್ಪಿತ ಮಾಡಿದರು. ವಾರ್ಷಿಕ ವರದಿ ವಾಚನವನ್ನು ಜೀವಶಾಸ್ತ್ರ ಉಪನ್ಯಾಸಕಿ ಎಲ್.ಎಸ್. ಶರ್ಮಿಳ ಮಾಡಿದರು. ಬಹುಮಾನಿತರ ಹೆಸರುಗಳನ್ನು ರಸಾಯನ ಶಾಸ್ತ್ರ ಉಪನ್ಯಾಸಕ ಬಿ.ಎಂ. ಶಿವಕುಮಾರ್ ಘೋಷಿಸಿದರೆ, ಸಾಂಸ್ಕೃತಿಕ ಕಾರ್ಯಕ್ರಮಗಳ ನಿರೂಪಣೆಯನ್ನು ಭುವನೇಶ್ವರಿ, ಯಶೋಧ, ಸಂಜನಾ ನಿರ್ವಹಿಸಿದರು. ವಿದ್ಯಾರ್ಥಿ ವೇದಿಕೆ ಪದಾಧಿಕಾರಿಗಳಾದ ಶ್ರೀದೇವಿ, ಗೌತಮ್, ಸಚಿನ್, ಕೀರ್ತಿ, ದರ್ಶನ್ ಪಾಟೀಲ್, ಅಂಜಿನಿ, ಸಿಂಧು, ದೀಪಿಕಾ,ಅರುಣ್, ಪ್ರೀತಿ, ಬೀರೇಶ್ ಉಪಸ್ಥಿತರಿದ್ದು ಮಹಮ್ಮದ್ ಹುಜೇಫಾ ವಂದನೆ ಸಲ್ಲಿಸಿದರು.

ಹಾಡುಗಳ ಬರೆದಿಹೆ ರಂಗಸಮುದ್ರ ಸಿನಿಮಾಗೆ

0

ಚನ್ನಗಿರಿ ಅನ್ನೋ ಪುಟ್ಟ ಊರಿಂದ, ಬೆಂಗಳೂರು ಅನ್ನೋ ಮಹಾನಗರಕ್ಕೆ ಬಂದು, ಅದ್ರಲ್ಲೂ ಸಿನಿಮಾರಂಗ ಅನ್ನೋ ಸಾಗರಕ್ಕೆ ಬೀಳೋಕೆ ದೊಡ್ಡ ಸ್ಫೂರ್ತಿ #ಹಂಸಲೇಖ ಗುರುಗಳೇ ನೀವೇ. ಇಲ್ಲಿಂದ ಏನೇ ಬಂದ್ರೂ ಎಲ್ಲವೂ ನಿಮಗೆ ಅರ್ಪಣೆ ನನಗೆ ಸಿನಿಮಾ‌ರಂಗ ಬದುಕೋದು ಹೇಗೆ ಅನ್ನೋದನ್ನ ಬಹಳಾ ಚೆನ್ನಾಗ್ ಕಲಿಸಿದೆ. ಈ ಸಿನಿಮಾ ನನ್ನ ಬದುಕನ್ನ ನಾನು ಜೀವಿಸುವ ಹಾಗೆ ಮಾಡ್ತು. ಹಾಗೇ ತುಂಬಾ ಹೊಸತುಗಳನ್ನ ಕೊಟ್ಟಿದೆ. ನಾನೂ ಸಿನಿಮಾದಲ್ಲಿ ಕೆಲಸ ಮಾಡ್ಬೇಕು, ನನ್ ಹೆಸರು ಕೂಡ ಸ್ಕ್ರೀನ್ ಮೇಲೆ ಬರ್ಬೇಕು ಅನ್ನೊದು ಬಹಳ ವರ್ಷಗಳ ಕನಸು. ಕನಸು‌ ಕಾಣೋದು ಸುಲಭವೇ. ಆದ್ರೆ ಅದನ್ನ ತನ್ನದಾಗಿ ಗಿಟ್ಟುಸ್ಕೊಳೋದಿದಿಯಲ್ಲಾ, ಅದಕ್ಕೆ ಬಹಳಾನೇ ಶ್ರದ್ಧೆ, ಶ್ರಮ, ಸಮಯ, ಸಮಾಧಾನ, ಹೋರಾಟ, ಪ್ರೀತಿ ಎಲ್ಲವೂ ಬೇಕು. ನನಗೆ ಅದು ಈ ಹಾಡಿನ ಬಿಡುಗಡೆಯ ಮೂಲಕ ನೆರವೇರ್ತಿದೆ. ಇದಕ್ಕೆಲ್ಲ ಕಾರಣ ಅನ್ನದಾತರಾದ Hoysala Nimmondige ಸರ್. ನಿಮಗೆ ಸದಾ ಋಣಿ ಸರ್ . ಹಾಗೇ ಈ ಹಾಡುಗಳ ಪ್ರತಿ ಹಂತದಲ್ಲೂ ಜೊತೆಯಾಗಿ ನಿಂತು, ಕೂತು, ನಡೆದು ಕೆಲಸ ಮಾಡಿದ ದೇಸಿ ಮೋಹನ್ ಅಣ್ಣಾ ನಿಮಗೂ ಸದಾ ಋಣಿ. ಇವರ ಸಂಗೀತವಿರುವ ಈ ಹಾಡುಗಳನ್ನ ಕೇಳಿದ್ರೆ ಖಂಡಿತ ನಮ್ಮ ಮಣ್ಣಿನ‌ ಸೊಗಡಿನ, ವಿದ್ಯಾವಂತ ಸಂಗೀತ ನಿರ್ದೇಶಕನೊಬ್ಬ ನಮ್ಮ ಸಿನಿಮಾರಂಗಕ್ಕೆ ಸಿಕ್ಕ ಖುಷಿ, ಹೆಮ್ಮೆ ಎಲ್ಲವೂ ಆಗತ್ತೆ. ಇನ್ನೂ ನಿರ್ದೇಶಕ Raj Kumar Aski ಇವನ ಬಗ್ಗೆ ಸಿನಿಮಾ ರಿಲೀಸ್ ಟೈಮ್ ಅಲ್ಲಿ ಮಾತಾಡ್ತಿನಿ. ಆದ್ರೆ ಈ ದೊಡ್ಡ ಅವಕಾಶ ಕೊಟ್ಟಿದ್ದಕ್ಕೆ ಥ್ಯಾಂಕ್ಯೂ ಶಿವು..ಇನ್ನು ಕೇವಲ ಮೂರು ಘಂಟೆಯಲ್ಲಿ ನಮ್ಮ ಕೂಸು ನಿಮ್ಮ ಮಡಿಲಿಗೆ….ಕೇಳಿ, ನೋಡಿ, ಇಷ್ಟ ಆದ್ರೆ, ಯಾರೋ ಹೊಸ ಹುಡುಗರು ಚೆನ್ನಾಗ್ ಕೆಲಸ ಮಾಡಿದರಲ್ಲಾ ಅಂತ ಅನ್ಸಿದ್ರೆ, ಪ್ಲೀಸ್ ಮರಿದಲೇ ನಿಮ್ಮ ಎಲ್ಲಾ ಸೋಶಿಯಲ್ ಮೀಡಿಯಾ ಗ್ರೂಪ್ ಗಳಲ್ಲೂ ಶೇರ್ ಮಾಡಿ. ನಿಮ್ಮ‌‌ ಪ್ರೀತಿ ಆಶೀರ್ವಾದವೇ ನಮಗೆ ಸಂಜೀವಿನಿ…

ಸಿನಿಮಾ ನೋಡಿ.ಹಾಡು ಕೇಳಿ.

ನಿಮ್ಮ
ವಾಗೀಶ್ ಚನ್ನಗಿರಿ

ಕ್ರಿಕೆಟರ್ ರಾಹುಲ್ಅಥಿಯಾಗೆ ಕ್ಲೀನ್ ಬೌಲ್ಡ್

0

ಕೆ ಎಲ್ ರಾಹುಲ್ , ಭಾರತ ತಂಡದ ಈಗಿನ ಬೆಸ್ಟ್ ಓಪನರ್. ಮಿಡ್ಲ್ ಆರ್ಡರ್ ಬ್ಯಾಟಿಂಗಿಗೂ ಸೈ.
ಟಿ20, ಏಕದಿನ, ಟೆಸ್ಟ್ ಕ್ರಿಕೆಟ್ ಎಲ್ಲದರಲ್ಲೂ ಆತ ಫಿಟ್ ಆಟಗಾರ.

ಈ ಆಟಗಾರ ಈಗ ವೆಡಿಂಗ್ ರಿಂಗ್ ಒಳಗೆ ಬಂಧಿತನಾಗುತ್ತಿದ್ದಾರೆ.
ಬಾಲಿವುಡ್ ನಟ ಸುನೀಲ್ ಶೆಟ್ಟಿಯ ಪುತ್ರಿ ಅಥಿಯಾ ಶೆಟ್ಟಿಗೆ ಕ್ಲೀನ್ ಬೌಲ್ಡ್ ಆಗಿಬಿಟ್ಟಿದ್ದಾರೆ.
ಜನವರಿ 21 ವೆಡಿಂಗ್ ಫಿಕ್ಸ್.
ಸುನೀಲ್ ಶೆಟ್ಟಿ ಅವರ ಖಂಡಾಲದ ನಿವಾಸ ಈಗ ಸಿಂಗಾರಗೊಳ್ಳುತ್ತಿದೆ.
ಈಗಾಗಲೇ ಕ್ರಿಕೆಟ್ ತಾರೆ,ವರಿಷ್ಟರಿಗೆ ,ಆಪ್ತರಿಗೆ ಇನ್ವಟೇಷನ್ ಹೋಗಿದೆ.

ಮೊನ್ನೆ ತಾನೆ ಶ್ರೀಲಂಕಾ ವಿರುದ್ಧ ತಾಳ್ಮೆಯ ಬ್ಯಾಟಿಂಗ್ ಮಾಡಿ ಗೆಲುವಿಗೆ ರಾಹುಲ್ ಗಳಿಸಿದ 64 ರನ್ ಅಮೂಲ್ಯವಾಗಿದ್ದವು.

ಈಗ ರಾಹುಲ್ ಹಸೆಮಣೆ ಏರುವ ಮದುಮಗನೂ ಕೂಡ.
ನಮ್ಮ ಕನ್ನಡದ ಕುವರನಿಗೆ
ಕಂಗ್ರಾಟ್ಸ್ ..ರಾಹುಲ್
ಅನ್ನೋಣ.

ಶಿಕ್ಷಣ ಬಾಳಿಗೆ ಪೂರಕಶಕ್ತಿನಿರ್ವಹಣೆಯನ್ನ ಜೀವನ ಕಲೆಯಿಂದ ತಿಳಿಯಿರಿ- ರಾಜಶೇಖರ್ ಹೆಬ್ಬಾರ್

0

ಶಿವಮೊಗ್ಗ: ಜೀವನ ಕಲೆ ಮನುಷ್ಯನ ಬದುಕಿನಲ್ಲಿ ಹೊಸ ಭರವಸೆ ಮೂಡಿಸುತ್ತದೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ಹೆಚ್ಚುವರಿ ನಿರ್ದೇಶಕ ಪ್ರೊ. ರಾಜಶೇಖರ ಹೆಬ್ಬಾರ್ ಹೇಳಿದರು.
ಅವರು ಇಂದು ಎ.ಟಿ.ಎನ್.ಸಿ. ಕಾಲೇಜಿನಲ್ಲಿ ಆಯೋಜಿಸಿದ್ದ ಜೀವನ ಕಲೆ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿನ ಶಿಕ್ಷಣ ಪದ್ಧತಿಯಿಂದ ಕೇವಲ ಹುದ್ದೆ ಸಿಗುತ್ತದೆಯೇ ಹೊರತೂ ಬದುಕುವ ಪದ್ಧತಿಯಲ್ಲ, ಶಿಕ್ಷಣದಿಂದ ವಿಷಯ ಸಂಗ್ರಹಣೆ, ಅಕ್ಷರ ಜ್ಞಾನ ತಿಳಿದರೆ ಮಾತ್ರ ಸಾಲದು, ಅದು ಪೂರಕವಷ್ಟೇ. ಆದರೆ, ನಿರ್ವಹಣೆಯನ್ನು ಕಲಿಸುವುದೇ ನಿಜವಾದ ಜೀವನಕಲೆಯಾಗಿದೆ. ಜೀವನ ಶಿಕ್ಷಣ, ಶಿಕ್ಷಣ ಜೀವನ ಇವು ಜೊತೆಜೊತೆಯಾಗಿಯೇ ಸಾಗಬೇಕು ಎಂದರು.
ಜೀವನ ಕೌಶಲ್ಯ ಬೆಳೆಸಿಕೊಳ್ಳಬೇಕು. ಬದುಕಿನ ಮಹತ್ವ ಅರಿಯಬೇಕು. ನಮಗೆ ಅನ್ನದ ಶಿಕ್ಷಣದ ಜೊತೆಗೆ ಮೌಲ್ಯದ ಶಿಕ್ಷಣವೂ ಬೇಕು. ಹಾಗಾಗಿ ಇಂದಿನ ಶಿಕ್ಷಣ ಪದ್ಧತಿ ಜೀವನ ಕಲೆಯನ್ನು ಕಲಿಸುವಂತಾಗಬೇಕು. ಸಮಸ್ಯೆಗಳನ್ನು ಹೇಗೆ ಪರಿಹರಿಸಿಕೊಳ್ಳಬೇಕು ಎಂಬುದನ್ನು ತಿಳಿಸಬೇಕು. ಆಧುನಿಕ ಬದುಕಿನಲ್ಲಿ ಮನುಷ್ಯನ ಜೀವನ ತುಂಬಾ ಕಷ್ಟಕರವಾಗಿದೆ. ಅವನ ಒತ್ತಡಗಳನ್ನು ಜೀವನಕಲೆಯಿಂದ ನಿವಾರಿಸಕೊಳ್ಳಬಹುದು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ. ಓಂಪ್ರಕಾಶ್ ರಾಚೋಳೆ, ನಿವೃತ್ತ ಪ್ರಾಂಶುಪಾಲ ಪ್ರೊ. ಹೆಚ್.ಎಂ. ಸುರೇಶ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ. ವಿಜಯಕುಮಾರ್, ಎ.ಟಿ.ಎನ್.ಸಿ. ಕಾಲೇಜ್ ಪ್ರಾಂಶುಪಾಲ ಪ್ರೊ. ಖಾಜಿಂ ಷರೀಫ್, ಪ್ರೊ. ಕೆ.ಎಂ. ನಾಗರಾಜ್, ಪ್ರೊ. ಎಸ್. ಜಗದೀಶ್ ಇದ್ದರು

ಕೊಪ್ಪಳದ ಕಿರ್ಲೋಸ್ಕರ್ ಫೆರಸ್ ಕಾರ್ಖಾನೆವತಿಯಿಂದರಸ್ತೆ ಸುರಕ್ಷತಾ ಸಪ್ತಾಹ

0

ರಾಷ್ಟೀಯ ರಸ್ತೆ ಸುರಕ್ಷತಾ ಸಪ್ತಾಹ-2023ಕ್ಕೆ ಚಾಲನೆ*

ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ, ಭಾರತ ಸರ್ಕಾರವು ಎಲ್ಲರಿಗೂ ಸುರಕ್ಷಿತ ರಸ್ತೆಗಳ ಕಾರಣವನ್ನು ಪ್ರಚಾರ ಮಾಡಲು “ಸ್ವಚ್ಛತಾ ಪಖ್ವಾದ” ಅಡಿಯಲ್ಲಿ 11 ರಿಂದ 17 ಜನವರಿ 2023 ರವರೆಗೆ ರಸ್ತೆ ಸುರಕ್ಷತಾ ಸಪ್ತಾಹವನ್ನು ಆಚರಿಸುತ್ತಿದೆ. ವಾರದಲ್ಲಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ರಸ್ತೆ ಸುರಕ್ಷತೆಯ ಕಾರಣಕ್ಕೆ ಕೊಡುಗೆ ನೀಡಲು ಎಲ್ಲಾ ಪಾಲುದಾರರಿಗೆ ಅವಕಾಶವನ್ನು ನೀಡಲು ದೇಶದಾದ್ಯಂತ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಇದು ರಸ್ತೆ ಅಪಘಾತಗಳ ಕಾರಣಗಳು ಮತ್ತು ಅವುಗಳನ್ನು ತಡೆಗಟ್ಟುವ ಕ್ರಮಗಳಿಗೆ ಸಂಬಂಧಿಸಿದ ವಿವಿಧ ಜಾಗೃತಿ ಅಭಿಯಾನಗಳನ್ನು ಒಳಗೊಂಡಿದೆ.

ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಾರ್ಖಾನೆಯ ಆವರಣದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ದಿನಾಂಕ 11-1-2023 ರಿಂದ 17-1-2023 ರ ವರೆವಿಗೆ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಆಚರಣೆಯನ್ನು ಹಮ್ಮಿಕೊಂಡಿದ್ದು, ಇದರ ಅಂಗವಾಗಿ ಕಾರ್ಖಾನೆಯ ಆವರಣದಲ್ಲಿ ಕಾರ್ಮಿಕರು ಮತ್ತು ಆಡಳಿತ ವರ್ಗದ ಅದಿಕಾರಿಗಳು ಸೇರಿ ರಸ್ತೆ ಸುರಕ್ಷತಾ ಜಾತಾ ನಡೆಸಲಾಯಿತು. ಸುರಕ್ಷತಾ ನೆಡಿಗೆಯಲ್ಲಿ ಕಾರ್ಖಾನೆಯ ಮಾನವ ಸಂಪನ್ಮೂಲ ಮತ್ತು ಆಡಳಿತ ವಿಭಾಗದ ಸಂಯೋಜಕ ಉಪಾಧ್ಯಕ್ಷರಾದ ಶ್ರೀ ಪಿ.ನಾರಾಯಣ ಮತ್ತು ಬೀಡು ಕಬ್ಬಿಣ ವಿಭಾಗದ ಸಂಯೋಜಕ ಉಪಾದ್ಯಕ್ಷರಾದ ಶ್ರೀ ಎಂ.ಜಿ.ನಾಗರಾಜ್ ಹಾಗೂ ಹಿರಿಯ ಮತ್ತು ಕಿರಿಯ ಅಧಿಕಾರಿಗಳು, ಗುತ್ತಿಗೆದಾರರು, ಕಾರ್ಮಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾರ್ಯಕ್ರಮವನ್ನು ಸುರಕ್ಷತಾ ವಿಭಾಗ ಆಯೋಜಿಸಿದ್ದರು. ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಅಭಿಯಾನದ ನಂತರ ಪ್ರಾಜೆಕ್ಟ್ ಕಾರ್ಮಿಕರು ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ನಾಟಕ ಪ್ರದರ್ಶನ ಮಾಡಿದರು.
ಶ್ರೀ ಪಿ.ನಾರಾಯಣ ಮಾತನಾಡುತ್ತಾ ಅನೇಕ ಅಪಘಾತಗಳು ಮಾನವ ತಪ್ಪುಗಳಿಂದಲೇ ಆಗುತ್ತವೆ. ಅಮಾಯಕರು ಜೀವ ಕಳೆದುಕೊಂಡು ಅವಲಂಬಿಸಿರುವವರನ್ನು ಬೀದಿಪಾಲು ಮಾಡುತ್ತಾರೆ. ಚಾಲಕರು ವಾಹನದಲ್ಲಿ ಕುಳಿತ ಕೂಡಲೇ ತಮ್ಮ ಕುಟುಂಬ ಮತ್ತು ಅವಲಂಬಿತರನ್ನು ನೆನಪಿಸಿಕೊಳ್ಳಬೇಕು. ಎಲ್ಲಕ್ಕಿಂತ ಜೀವ ಮುಖ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಕುಡಿದು ವಾಹನ ಚಾಲನೆ ಮಾಡುವುದು, ಮೊಬೈಲ್‍ನಲ್ಲಿ ಮಾತನಾಡುತ್ತಾ ಚಾಲನೆ ಮಾಡುವುದನ್ನು ಕಡ್ಡಾಯವಾಗಿ ನಿಲ್ಲಿಸಬೇಕು ಚಾಲಕರು ರಸ್ತೆ ನಿಯಮಗಳನ್ನು ಹಾಗೂ ಸಂಚಾರ ಚಿಹ್ನೆಗಳನ್ನು ಚೆನ್ನಾಗಿ ಅರಿತುಕೊಳ್ಳಬೇಕು. ಸ್ವಲ್ಪವೂ ಬೇಜವಾಬ್ದಾರಿ ಅಥವಾ ನಿರ್ಲಕ್ಷ್ಯತೆ ತೋರದೆ ನಿಯಮ ಪಾಲನೆ ಮಾಡಬೇಕು. ಕಾರ್ಖಾನೆಗೆ ಬರುವ ದ್ವಿಚಕ್ರವಾಹನ ಸವಾರರು ಹೆಲ್ಮೆಟ್ ಧರಿಸಿರಬೇಕು. ಸಂಚಾರ ನಿಯಮಗಳನ್ನು ಪಾಲನೆ ಮಾಡಿದರೆ ಸಾಕಷ್ಟು ಅಪಘಾತಗಳನ್ನು ತಡೆಗಟ್ಟಬಹುದು ಎಂದರು.

ವರದಿ

ಮುರುಳಿಧರ್ ನಾಡಿಗೇರ್

ಜಗತ್ತಿನ ಅತ್ಯಂತ ಉದ್ದವಾದ ನದಿವಿಹಾರನೌಕೆಗಂಗಾ ವಿಲಾಸ್ ಆರಂಭ

0

ಈಗೀಗ ಪ್ರವಾಸ ,ವಿಹಾರಗಳು ಮನುಷ್ಯರ ತೀವ್ರ ಆಸಕ್ತಿಗಳಲ್ಲಿ ಪ್ರಾಮುಖ್ಯತೆ ಪಡೆಯುತ್ತಿದೆ. ಬಸ್ಸು ,ರೈಲು ಹಾಗೂ ವಿಮಾನಯಾನ ಸಾಮಾನ್ಯವಾಗಿದೆ.
ಈಗ ನೌಕಾಯಾನ ಪ್ರವಾಸಿಗರನ್ನ ಆಕರ್ಷಿಸುತ್ತಿದೆ.
ಭಾರತದ ಗಂಗಾನದಿಯಲ್ಲಿ ನೀವೀಗ ತೇಲಬಹುದು.ಅದೂ ಸುಸಜ್ಜಿತ ನೌಕೆಯಲ್ಲಿ!.
ಪ್ರಯಾಣ ವೆಚ್ಚ ಒಂದು ಸೀಟಿಗೆ ಎಷ್ಟು ಎಂದಿರ? ಕೇವಲ ₹20 ಲಕ್ಷ ಮಾತ್ರ.
ಐಷಾರಾಮಿ ಸಿರಿವಂತರಿಗೆ ಇದು ಸೂಕ್ತವಾಗಿದೆ ಎಂದು ಮೂಗುಮುರಿಯದಿರಿ. 51 ದಿನಗಳ ಈ ನೌಕಾಯಾತ್ರೆಯಲ್ಲಿ ದಿನಕ್ಕೆ ₹25000 ನಂತೆ ಒಬ್ಬರಿಗೆ ವೆಚ್ಚ ತಗುಲುತ್ತದೆ.
ವಾರಣಾಸಿಯಿಂದ ಹೊರಟು 3200 ಕಿಮೀ ಉದ್ದಕ್ಕೂ ಪಾಟ್ನಾ,ಕೋಲ್ಕತ್ತಾ, ಗುವಾಹಟಿ…ಹೀಗೆ ವಿವಿಧ ನಗರಗಳ ತೀರ ದರ್ಶನಮಾಡಬಹುದು.
ಈಗ ಈ ನೌಕೆಗೆ ಏನು ಹೆಸರಿಟ್ಟಿರಬಹುದು ?
ಎಂವಿ ಗಂಗಾ ವಿಲಾಸ್ ಎನ್ನುವ ಹೆಸರಿಡಲಾಗಿದೆ.
ಎಂವಿ ಅಂದರೇನು ಕೇಳುವಿರ? ಹಾಗಂದರೆ ಇಂಗ್ಲೀಷ್ ನಲ್ಲಿ
MotorVessel ಎಂದು ಬಿಡಿಸಿಹೇಳಬಹುದು.
ನಮ್ಮ ಪ್ರಧಾನಿ ಮೋದಿ ಅವರು ಇದಕ್ಕೆ ಶುಕ್ರವಾರವಷ್ಟೇ ಹಸಿರು ನಿಶಾನೆ ತೋರಿದ್ದಾರೆ.
ಇದರಲ್ಲಿ ಈಗ ಹೌಸ್ಫುಲ್.ಸ್ವಿಟ್ಝರ್ಲೆಂಡಿನ 23 ಪ್ರವಾಸಿಗರಿದ್ದಾರೆ.
ಜಗತ್ತಿನ ಅತ್ಯಂತ ಉದ್ದವಾದ ನದಿನೌಕೆ ಎಂಬ ಹೆಗ್ಗಳಿಕೆ ಗಂಗಾವಿಲಾಸ್ ನೌಕೆಗಿದೆ.
ವಿದೇಶಕ್ಕೆ ತೆರಳಿ ನೌಕಾವಿಹಾರ ಮಾಡಲಿಚ್ಛಿಸುವ ಭಾರತೀಯರು ಇನ್ನುಮುಂದೆ ಇಲ್ಲಿಯೇ ಆ ಮಜಾ ಸಂತೋಷ ಅನುಭವಿಸಬಹುದು.
ಪ್ರವಾಸೋದ್ಯಮಕ್ಕೆ ಇದು ಅದ್ಭುತ ಪ್ರೋತ್ಸಾಹ,ಉತ್ತೇಜನ ಎನ್ನುತ್ತಾರೆ ನಮ್ಮ ಪ್ರಧಾನಿ.