ಶಿವಮೊಗ್ಗ: ಜೀವನ ಕಲೆ ಮನುಷ್ಯನ ಬದುಕಿನಲ್ಲಿ ಹೊಸ ಭರವಸೆ ಮೂಡಿಸುತ್ತದೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ಹೆಚ್ಚುವರಿ ನಿರ್ದೇಶಕ ಪ್ರೊ. ರಾಜಶೇಖರ ಹೆಬ್ಬಾರ್ ಹೇಳಿದರು.
ಅವರು ಇಂದು ಎ.ಟಿ.ಎನ್.ಸಿ. ಕಾಲೇಜಿನಲ್ಲಿ ಆಯೋಜಿಸಿದ್ದ ಜೀವನ ಕಲೆ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿನ ಶಿಕ್ಷಣ ಪದ್ಧತಿಯಿಂದ ಕೇವಲ ಹುದ್ದೆ ಸಿಗುತ್ತದೆಯೇ ಹೊರತೂ ಬದುಕುವ ಪದ್ಧತಿಯಲ್ಲ, ಶಿಕ್ಷಣದಿಂದ ವಿಷಯ ಸಂಗ್ರಹಣೆ, ಅಕ್ಷರ ಜ್ಞಾನ ತಿಳಿದರೆ ಮಾತ್ರ ಸಾಲದು, ಅದು ಪೂರಕವಷ್ಟೇ. ಆದರೆ, ನಿರ್ವಹಣೆಯನ್ನು ಕಲಿಸುವುದೇ ನಿಜವಾದ ಜೀವನಕಲೆಯಾಗಿದೆ. ಜೀವನ ಶಿಕ್ಷಣ, ಶಿಕ್ಷಣ ಜೀವನ ಇವು ಜೊತೆಜೊತೆಯಾಗಿಯೇ ಸಾಗಬೇಕು ಎಂದರು.
ಜೀವನ ಕೌಶಲ್ಯ ಬೆಳೆಸಿಕೊಳ್ಳಬೇಕು. ಬದುಕಿನ ಮಹತ್ವ ಅರಿಯಬೇಕು. ನಮಗೆ ಅನ್ನದ ಶಿಕ್ಷಣದ ಜೊತೆಗೆ ಮೌಲ್ಯದ ಶಿಕ್ಷಣವೂ ಬೇಕು. ಹಾಗಾಗಿ ಇಂದಿನ ಶಿಕ್ಷಣ ಪದ್ಧತಿ ಜೀವನ ಕಲೆಯನ್ನು ಕಲಿಸುವಂತಾಗಬೇಕು. ಸಮಸ್ಯೆಗಳನ್ನು ಹೇಗೆ ಪರಿಹರಿಸಿಕೊಳ್ಳಬೇಕು ಎಂಬುದನ್ನು ತಿಳಿಸಬೇಕು. ಆಧುನಿಕ ಬದುಕಿನಲ್ಲಿ ಮನುಷ್ಯನ ಜೀವನ ತುಂಬಾ ಕಷ್ಟಕರವಾಗಿದೆ. ಅವನ ಒತ್ತಡಗಳನ್ನು ಜೀವನಕಲೆಯಿಂದ ನಿವಾರಿಸಕೊಳ್ಳಬಹುದು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ. ಓಂಪ್ರಕಾಶ್ ರಾಚೋಳೆ, ನಿವೃತ್ತ ಪ್ರಾಂಶುಪಾಲ ಪ್ರೊ. ಹೆಚ್.ಎಂ. ಸುರೇಶ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ. ವಿಜಯಕುಮಾರ್, ಎ.ಟಿ.ಎನ್.ಸಿ. ಕಾಲೇಜ್ ಪ್ರಾಂಶುಪಾಲ ಪ್ರೊ. ಖಾಜಿಂ ಷರೀಫ್, ಪ್ರೊ. ಕೆ.ಎಂ. ನಾಗರಾಜ್, ಪ್ರೊ. ಎಸ್. ಜಗದೀಶ್ ಇದ್ದರು
ಶಿಕ್ಷಣ ಬಾಳಿಗೆ ಪೂರಕಶಕ್ತಿನಿರ್ವಹಣೆಯನ್ನ ಜೀವನ ಕಲೆಯಿಂದ ತಿಳಿಯಿರಿ- ರಾಜಶೇಖರ್ ಹೆಬ್ಬಾರ್
Date: