Wednesday, April 1, 2026
Wednesday, April 1, 2026
Home Blog Page 1332

ದಿನವೂ ದೇವರ ಗುಡಿ ಸ್ವಚ್ಛ ಗೊಳಿಸುವ ಕಾರ್ಮಿಕ ವೆಂಗಯ್ಯನವರಿಗೆ ವಿಶೇಷ ಸನ್ಮಾನ

0

ಶಿವಮೊಗ್ಗ: ನಗರದ ಎನ್‌ಟಿ ರಸ್ತೆಯ ಐತಿಹಾಸಿಕ ಪ್ರಸಿದ್ಧ ಶ್ರೀ ಚೌಡೇಶ್ವರಿ ಅಮ್ಮನವರ ದೇವಳದಲ್ಲಿ ಪೊಂಗಲ್ ಮತ್ತು ಸಂಕ್ರಾಂತಿ ಸಂಭ್ರಮ ನಿಮಿತ್ತ ಅಮ್ಮನವರಿಗೆ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಜ.30 ರಂದು ನಿವೃತ್ತರಾಗಲಿರುವ ಶಿವಮೊಗ್ಗ ಮಹಾನಗರ ಪಾಲಿಕೆ ಪೌರ ನೌಕರರು ಹಾಗೂ ನಿರಂತರವಾಗಿ ದೇವರಗುಡಿಯನ್ನು ಸ್ವಚ್ಛಗೊಳಿಸುವ ಸೇವೆಯಲ್ಲಿ ತೊಡಗಿರುವ ವೆಂಗಯ್ಯ ಅವರನ್ನು ದೇವಾಲಯ ಸಮಿತಿಯಿಂದ 10 ಸಾವಿರ ರೂ.ಗೌರವಧನ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ದೇವಾಲಯ ಸಮಿತಿ ಗೌರವಾಧ್ಯಕ್ಷರಾದ ಬ್ಲೂ ಸ್ಟಾರ್ ಕೆ. ಲಕ್ಷ್ಮಣ್,ಅಧ್ಯಕ್ಷ ರಮೇಶ್, ಪದಾಧಿಕಾರಿಗಳು ಹಾಗೂ ಭಕ್ತರು, ಭಾರತಿ ಕಾಲೋನಿ ನಿವಾಸಿಗಳು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಕುಂಬಾರಗುಂಡಿ ಬಾಯ್ಸ್ ಕ್ರಿಕೆಟ್ ಪಂದ್ಯಾವಳಿ ವಿಜೇತರಿಗೆ ಬಹುಮಾನ ವಿತರಣೆ

0

ಶಿವಮೊಗ್ಗ: ನಗರದ ಕುಂಬಾರ ಗುಂಡಿ ಬಾಯ್ಸ್ ವತಿಯಿಂದ ನಡೆದ ಕ್ರಿಕೆಟ್ ಪಂದ್ಯಾವಳಿ ನಡೆಯಿತು.

ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನ ನೀಡಲಾಯಿತು. ಈ ಸಂದರ್ಭದಲ್ಲಿ ಅಭಿಷೇಕ್ ಮರಿಯಪ್ಪ, ರೈಲ್ವೇ ಸಲಹಾ ಸಮಿತಿ ಮಾಜಿ ಸದಸ್ಯ ಎಸ್. ಚಿನ್ನಪ್ಪ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಸುನಿಲ್ ಮತ್ತು ಪ್ರಮುಖರಾದ ಕುಪ್ಪಣ್ಣ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಕ್ಷಯರೋಗಿಗಳಿಗೆ ಉಚಿತ ಪೌಷ್ಠಿಕ ಆಹಾರದ ಕಿಟ್ ವಿತರಣೆ

0

ಶಿವಮೊಗ್ಗ: ಮೆಟ್ರೋ ಆಸ್ಪತ್ರೆ ವತಿಯಿಂದ ನಿಕ್ಷಯ್ ಮಿತ್ರ ಅಡಿಯಲ್ಲಿ ಕ್ಷಯ ರೋಗಿಗಳಿಗೆ 50 ಉಚಿತ ಪೌಷ್ಟಿಕ ಆಹಾರದ ಕಿಟ್‍ಗಳನ್ನು ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮೆಟ್ರೋ ಆಸ್ಪತ್ರೆ ವೈದ್ಯರು, ಸಿಬ್ಬಂದಿಗಳು ಮತ್ತು ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

ಜನವರಿ18 ಹೊಳಲೂರಿನಲ್ಲಿ ಸಚಿವ ಆರ್.ಅಶೋಕ್ ಗ್ರಾಮ ವಾಸ್ತವ್ಯ

0

ಶಿವಮೊಗ್ಗ: ಜ.28 ರಂದು ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದ ಪ್ರಯುಕ್ತ ಶಿವಮೊಗ್ಗ ತಾಲ್ಲೂಕಿನ ಹೊಳಲೂರಿನಲ್ಲಿ ಕಂದಾಯ ಸಚಿವರಾದ ಆರ್.ಅಶೋಕ್ ಇವರು ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಸಂಬಂಧಿಸಿದ ಎಲ್ಲಾ ತಾಲ್ಲೂಕು ಅಧಿಕಾರಿಗಳು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಬೇಕೆಂದು ತಹಶೀಲ್ದಾರ್ ಡಾ.ನಾಗರಾಜ್ ಸೂಚನೆ ನೀಡಿದರು.

ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ನಡೆಯುವ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಕುರಿತು ಪೂರ್ವಭಾವಿಯಾಗಿ ಚರ್ಚಿಸಲು ತಾಲ್ಲೂಕು ಕಚೇರಿಯಲ್ಲಿ ಕರೆಯಲಾಗಿದ್ದ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜ.28 ರಂದು ತಾಲ್ಲೂಕಿನ ಹೊಳಲೂರು ಗ್ರಾಮದ ಮಾರುತಿ ಪ್ರೌಢಶಾಲೆಯ ಆವರಣದಲ್ಲಿ ಬೆಳಿಗ್ಗೆ 11 ರಿಂದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಆರಂಭವಾಗಲಿದೆ. ತಾಲ್ಲೂಕು ಕಚೇರಿ ವ್ಯಾಪ್ತಿಯ 41 ಇಲಾಖೆಗಳಿಗೆ ಈಗಾಗಲೇ ಸಿದ್ದತೆ ಕುರಿತು ಮಾಹಿತಿ ನೀಡಲಾಗಿದೆ. ಅವಶ್ಯಕ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ಫಲಾನುಭವಿಗಳ ಪಟ್ಟಿ ತಯಾರಿಸಿ, ಅವರಿಗೆ ಸೂಕ್ತ ಆಸನ ವ್ಯವಸ್ಥೆ ಮಾಡಿ, ಆದೇಶಗಳ ಸುಗಮ ವಿತರಣೆಗೆ ಸೂಕ್ತ ಸಿದ್ದತೆ ಮಾಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.

ಶಿವಮೊಗ್ಗದ ಜಿಲ್ಲಾಧಿಕಾರಿಗಳಾದ ಡಾ.ಆರ್.ಸೆಲ್ವಮಣಿ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆದಿದೆ. ಎಲ್ಲ ಇಲಾಖೆಗಳು, ನಿಗಮಗಳು ತಮ್ಮ ತಮ್ಮ ವ್ಯಾಪ್ತಿಯ ಫಲಾನುಭವಿಗಳ ಪಟ್ಟಿ ತಯಾರಿಸಿ, ಕಾರ್ಯಕ್ರಮದ ಸಮರ್ಪಕ ಆಯೋಜನೆಗೆ ಸೂಕ್ತ ವ್ಯವಸ್ಥೆ ಮತ್ತು ಸಿದ್ದತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಮತ್ತು ಅಂದು ಇಲಾಖೆಗಳಿಂದ ಲಭ್ಯವಾಗುವ ವಿವಿಧ ಯೋಜನೆಗಳು, ಕಾರ್ಯಕ್ರಮಗಳ ಕುರಿತು ಮಾಹಿತಿ ಮತ್ತು ಪ್ರಾತ್ಯಕ್ಷಿತೆ ಒದಗಿಸುವ ವಿವಿಧ 14 ಮಳಿಗೆಗಳನ್ನು ತೆರೆಯಲು ಸೂಚನೆ ನೀಡಿರುವನ್ವಯ ಸಿದ್ದತೆ ಮಾಡಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.

ಆರಕ್ಷಕ ಇಲಾಖೆಯವರು ಪೂರ್ವಭಾವಿಯಾಗಿ ಸ್ಥಳ ಪರಿಶೀಲನೆ ನಡೆಸಿ, ವಾಹನಗಳ ಪಾರ್ಕಿಂಗ್, ಸುಗಮ ಸಂಚಾರ ಹಾಗೂ ಇತರೆ ಸುರಕ್ಷತಾ ವ್ಯವಸ್ಥೆಯ ಅಚ್ಚುಕಟ್ಟು ನಿರ್ವಹಣೆ ಕುರಿತು ಕ್ರಮ ಕೈಗೊಳ್ಳಬೇಕೆಂದರು.

ಸಭೆಯಲ್ಲಿ ಡಿವೈಎಸ್‍ಪಿ ಸುರೇಶ್, ಉಪ ತಹಶೀಲ್ದಾರ್ ಗಣೇಶ್, ತಾಲ್ಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

rtisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಭಾರತದ ಎದುರು ಬಾಲ ಮುದುರಿದ ಸಿಂಹಗಳು

0

ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವಣ ಟಿ20 ಪಂದ್ಯತಿರುವನಂತುರದಲ್ಲಿ ನಡೆಯಿತು. ಕುತೂಹಕವಿಲ್ಲದಿದ್ದರೂ ದಾಖಲೆ ಉತ್ತಮಿಸಲು ಭಾರತಕ್ಕೆ ಇಲ್ಲಿ ಪಡೆದ ವಿಜಯ ಸಹಾಯಕವಾಯಿತು.
317 ರನ್ ಗಳ ಅಂತರದ ಜಯ ದಾಖಲೆಯೇ ಆಯಿತು.

ಭಾರತಕ್ಕೆ ಅತ್ಯಂತ ಹೆಚ್ಚು ರನ್ ಅಂತರದ ವಿಜಯದ ದಾಖಲೆ.ಹಾಗೆಯೇ ಈ ಪಂದ್ಯದಲ್ಲಿ ಮತ್ತೊಂದು ದಾಖಲೆ ಮಾಡಿದವರೆಂದರೆ ವಿರಾಟ್ ಕೊಹ್ಲಿ.
ಏಕದಿನ ಕ್ರಿಕೆಟ್ ನಲ್ಲಿ ಸಚಿನ್ 20 ಶತಕ ಬಾರಿಸಿ ದಾಖಲೆಮಾಡಿದ್ದರು.ವಿರಾಟ್ 21 ನೇ ಶತಕ ಪಡೆದು ಆ ದಾಖಲೆಯನ್ನ ತಮ್ಮ ಹೆಸರಿಗೆ ವರ್ಗಾಯಿಸಿದರು.

ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಆರಂಭದಲ್ಲಿ
ರೋಹಿತ್ 42 ರನ್ ಗೆ ಔಟಾದರು. ನಂತರ ಸೇರಿದ ಕೊಹ್ಲಿ ಶುಭಮನ್ ಗಿಲ್ ಜೊತೆ ಅತ್ಯಂತ ಬಿರುಸಿನ ಆಟವಾಡಿದರು.ಇಬ್ರ ಜೋಡಿ ಆಟ ಹಾಗೆಯೇ ಆಕರ್ಷಕವಾಗಿತ್ತು.
ಗಿಲ್ 116 ರನ್ ಗಳಿಸಿದರು.ಅದು ಏಕದಿನ ಪಂದ್ಯದಲ್ಲಿ ಎರಡನೇ ಶತಕವಾಗಿದೆ.
ಗಿಲ್ ನಿರ್ಗಮನದ ನಂತರ ಕೊಹ್ಲಿ ತಮ್ಮದೇ ಆಕ್ರಮಣಕಾರಿ ಬ್ಯಾಟಿಂಗ್ ನಿಂದ ರನ್ ಮಳೆ ಸುರಿಸಿ ಶತಕಗಳಿಸಿದರು.( 166). ಅವರದ್ದು ಏಕದಿನ ಪಂದ್ಯದಲ್ಲಿ ಗಳಿಸಿದ46 ನೇ ಶತಕ.
ರೋಹಿತ್ 42, ಶ್ರೇಯಸ್ 38,.ರಾಹುಲ್7, ಸೂರ್ಯಕುಮಾರ್ 4
ಅಕ್ಸರ್ 4 ಹೀಗೆ 50 ಓವರ್ ಗಳಲ್ಲಿ ಭಾರತ 390 ಕಲೆಹಾಕಿತು.

ದೊಡ್ಡ ಮೊತ್ತವನ್ನ ಎದುರಿಸಿ ಬ್ಯಾಟ್ ಮಾಡಿದ ಲಂಕನ್ನರು ಸಿರಾಜ್ ವೇಗದ ಬೌಲಿಂಗ್ ಗೆ ತತ್ತರಿಸಿದರು. ಸಿರಾಜ್ 32 ರನ್ ನೀಡಿ 4 ವಿಕೆಟ್ ಪಡೆದರು. ಲಂಕನ್ನರಲ್ಲಿ ಮೂವರು ಮಾತ್ರ ಎರಡಂಕಿ ಮುಟ್ಟಿದರು.
ಸಿರಾಜ್ ಗೆ ಸಾಥ್ ನೀಡಿದ ಕುಲದೀಪ್ ಮತ್ತು ಶಮಿ ತಲಾ ಎರಡು ವಿಕೆಟ್ ಪಡೆದರು.
ಕೊನೆಯಲ್ಲಿ 73 ರನ್ ಗಳಿಗೆ 9 ವಿಕೆಟ್ ಕಳೆದುಕೊಂಡ ಶ್ರೀಲಂಕಾ ದಯನೀಯ ಸ್ಥಿತಿ ತಲುಪಿತು. ಕೊನೆಯ ಬ್ಯಾಟರ್ ಬಂಡಾರ ಗಾಯಾಳುವಾದ ಕಾರಣ ಕ್ರೀಸ್ ಗೆ ಬರಲಿಲ್ಲ. ಹೀಗೆ ಭಾರತ 317 ರನ್ ಗಳ ಅತ್ಯಧಿಕ ರನ್ ಅಂತರದಲ್ಲಿ ಗೆಲುವು ಸಾಧಿಸಿತು. ಸರಣಿಯಲ್ಲಿ ಆಡಿದ ಮೂರೂ ಪಂದ್ಯಗಳನ್ನ ಭಾರತ ಗೆದ್ದು ಬೀಗಿತು.

ಪತ್ರಕರ್ತರಿಗೆ ಸೂಕ್ತ ಭದ್ರತೆ ಮತ್ತು ಸೌಲಭ್ಯ ನೀಡಲು ಬೆಂಬಲ ನೀಡುವೆ- ಅಶೋಕ ನಾಯ್ಕ

0

ಹೊಳೆಹೊನ್ನೂರು:
ಇಂದಿಗೂ ಪತ್ರಿಕೆಗಳು ಜನರಲ್ಲಿ ವಿಶ್ವಾಸವನ್ನು ಉಳಿಸಿಕೊಂಡಿವೆ. ನಿಖರ ಹಾಗೂ ಸ್ಪಷ್ಟ ಸುದ್ದಿ ನೀಡುವಲ್ಲಿ ಪತ್ರಿಕೆಗಳ ಕಾರ್ಯ ಶ್ಲಾಘನೀಯ ಎಂದು ಶಾಸಕ ಕೆ.ಬಿ.ಅಶೋಕ್ ನಾಯ್ಕ ಅವರು ಹೇಳಿದರು.

ಹೊಳೆಹೊನ್ನೂರು ನಗರದ ವಿವೇಕಾನಂದ ಲಯನ್ಸ್ ವಿದ್ಯಾ ಸಂಸ್ಥೆಯಲ್ಲಿ ನಡೆದ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಹೊಳೆಹೊನ್ನೂರು ಘಟಕದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇತ್ತೀಚೆಗೆ ಕೆಲ ಮಾಧ್ಯಮಗಳು ಸತ್ಯಕ್ಕೆ ದೂರವಾದ ಸಂಗತಿಗಳನ್ನು ಬಿತ್ತರಿಸುತ್ತಿದೆ. ಪ್ರಸುತ ಕವಲು ದಾರಿಯಲ್ಲಿರುವ ಸಮಾಹವನ್ನು ಸರದಾರಿಗೆ ತರುವಲ್ಲಿ ಮಾಧ್ಯಮಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.

ಸುದ್ದಿಕೊಡುವ ಭರದಲ್ಲಿ ಅಪೂರ್ಣ ಹಾಗೂ ಅಸತ್ಯವಾದ ಮಾಹಿತಿ ಜನತೆಗೆ ತಲುಪಬಾರದು. ಜನರ ಮೇಲಷ್ಟೇ ಅಲ್ಲದೇ, ಸಮಾಜದ ಮೇಲೆಯೂ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಸುದ್ದಿಯ ಸತ್ಯಾಾಸತ್ಯತೆ ಅರಿತು ಪ್ರಕಟಿಸಿದಾಗ ಮಾತ್ರ ಸಮಾಜಕ್ಕೂ ಹಾಗೂ ಮಾಧ್ಯಮಗಳ ವಿಶ್ವಾಸರ್ಹತೆಗೂ ಅನುಕೂಲವಾಗಲಿದೆ.ಮುಂದಿನ ದಿನಗಳಲ್ಲಿ ಪತ್ರಕರ್ತರಿಗೆ ಸೂಕ್ತ ಭದ್ರತೆ ಮತ್ತು ಸೌಲಭ್ಯಗಳನ್ನು ನೀಡುವ ಮೂಲಕ ಬೆಂಬಲವಾಗಿ ನಿಲ್ಲುವ ಭರವಸೆ ನೀಡಿದರು.

ಘಟಕವನ್ನು ಉದ್ಘಾಟಿಸಿದ ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಮಾತನಾಡಿ, ದೃಶ್ಯ ಮಾಧ್ಯಮದ ಪೈಪೋಟಿಯ ನಡುವೆ ಪತ್ರಿಕೆಗಳ ಸಾಧನೆ ಶ್ಲಾಘನೀಯ. ಪ್ರಸ್ತುತ ಪತ್ರಕರ್ತರು ಅನೇಕ ಸವಾಲುಗಳನ್ನು ಎದುರಿಸಬೇಕಾಗಿದೆ. ಈಗಿರುವಾಗ ಪತ್ರಕರ್ತರಿಗೆ ಸಂಘಟನೆ ಅನಿವಾರ್ಯ. ಅದರಲ್ಲೂ ನಮ್ಮ ಹೊಳೆಹೊನ್ನೂರಿನಲ್ಲಿ ಹೋಬಳಿ ಘಟಕ ಅಸ್ಥಿತ್ವಕ್ಕೆ ಬಂದದ್ದು ಸಂತಸದ ಸಂಗತಿ ಎಂದರು.

ಹೊಳೆಹೊನ್ನೂರು ಠಾಣೆಯ ಸಿಪಿಐ ಆರ್.ಎಲ್.ಲಕ್ಷ್ಮೀಪತಿ ಮಾತನಾಡಿ, ಪತ್ರಿಿಕೆಗಳಿಂದ ಸಮಾಜದಲ್ಲಿ ಮಹತ್ತರ ಬದಲಾವಣೆಗಳು ಸಂಭವಿಸುತ್ತವೆ. ಪತ್ರಿಕೆ ಓದುವ ಹವ್ಯಾಸ ಯಾರಲ್ಲಿ ಹೆಚ್ಚಾಗಿರುವುದೋ ಅವರಿಗೆ ತಾವು ಬಳಸುವ ಭಾಷೆಯ ಮೇಲೆ ಹಿಡಿತ ಇರುತ್ತದೆ. ಸರ್ಕಾರದ 4ನೇ ಅಂಗವಾಗಿ ಮಾದ್ಯಮಗಳು ಕಾರ್ಯನಿರ್ವಹಿಸುತ್ತವೆ. ರಾಜ್ಯಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ಮಾಡದ ಕೆಲವು ಕೆಲಸಗಳು ಸುದ್ದಿ ಮಾದ್ಯಮಗಳಿಂದ ಆಗಿರುವ ಉದಾಹರಣೆಗಳಿವೆ ಎಂದರು.

ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ ಮಾತನಾಡಿ, ರಾಜ್ಯದಲ್ಲೇ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಥಮ ಹೊಬಳಿ ಘಟಕ ಇದಾಗಿದೆ. ನಮ್ಮ ಸಂಘವು ಪತ್ರಕರ್ತರ ಏಳಿಗೆ ಜೊತೆಗೆ ಸಮಾಜ ಮುಖಿ ಕಾರ್ಯವನ್ನು ಕೈಗೊಳ್ಳಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಅತ್ಯಂತ ಹಿಂದುಳಿದ ಮೂರು ಕುಗ್ರಾಮಗಳನ್ನು ಆಯ್ಕೆ ಮಾಡಿಕೊಂಡು, ಒಂದು ದಿನ ಪತ್ರಕರ್ತರೆಲ್ಲರೂ ಆ ಗ್ರಾಮದಲ್ಲೇ ವಾಸ್ತವ್ಯ ಹೂಡಿ, ಅಲ್ಲಿನ, ಸಮಸ್ಯೆಗಳನ್ನು ಪಟ್ಟಿ ಮಾಡಿ, ಸಂಭಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರುವುದು. ಆ ಮೂಲಕ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸುವುದು. ಜೊತೆಗೆ ಜಿಲ್ಲೆಯಲ್ಲಿ ಮಾದಕ ವ್ಯಸನಿಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಇದನ್ನು ತಡೆಯಲು ವರ್ಷಪೂರ್ತಿ ಮಾದಕ ವಸ್ತು ವಿರೋಧಿ ಅಭಿಯಾನ ಆರಂಭಿಸಲಾಗಿದೆ. ಈಗಾಗಲೇ ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸಿ ಯುವ ಜನರಿಗೆ ಮಾದಕ ವಸ್ತುಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ ಎಂದರು.

ಶಿವಮೊಗ್ಗ ಪ್ರೆಸ್‌ಟ್ರಸ್ಟ್‌‌ನ ಅಧ್ಯಕ್ಷ ಎನ್.ಮಂಜುನಾಥ್ ಮಾತನಾಡಿ, ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ನೈಜ ಪತ್ರಕರ್ತನನ್ನು ಗುರುತಿಸಿ ಸಂಘಟನೆಯ ವ್ಯಾಪ್ತಿಗೆ ತರುವಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಯಶಸ್ವಿಯಾಗಿದೆ. ಗ್ರಾಮೀಣ ಬಾಗದಲ್ಲಿ ಎಲೆಮರೆ ಕಾಯಿಯಂತೆ ಇರುವ ಪತ್ರಕರ್ತರನ್ನು ಗುರುತಿಸುವುದು, ಅವರೊಂದಿಗೆ ಸಮಾಜದ ಸಮಸ್ಯೆಗಳನ್ನು ಅರಿತು ಅವುಗಳಿಗೆ ಪರಿಹಾರ ಒದಗಿಸು ಕಾರ್ಯ ನಮ್ಮ ಸಂಘ ಮಾಡುತ್ತಿದೆ ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ, ಮಾಜಿ ಶಾಸಕಿ ಶಾರದಾ ಪೂರ್ಯಾನಾಯ್ಕ್, ಮಾಜಿ ಶಾಸಕ ಕೆ.ಜಿ.ಕುಮಾರ ಸ್ವಾಮಿ, ಕಾಂಗ್ರಸ್ ಮುಖಂಡ ಡಾ ಶ್ರೀನಿವಾಸ್ ಕರಿಯಣ್ಣ, ಕಾರ್ಯನಿರತ ಪರ್ತಕರ್ತರ ಸಂಘದ ಹೊಳೆಹೊನ್ನೂರು ಘಟಕದ ಅಧ್ಯಕ್ಷ ಹೆಚ್.ಜಿ.ವಿಜಯರಾಜ್, ಉಪಾಧ್ಯಕ್ಷ ರವಿಕುಮಾರ್, ಸಂಘದ ಕಾರ್ಯದರ್ಶಿ ಕೆ.ರಂಗನಾಥ್, ಸೇರಿದಂತೆ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

ಎಲ್ಲರ ಮನಸೆಳೆದ ವಿಶಿಷ್ಟ ಗಾಳಿಪಟ ಹಬ್ಬ

0

ಶಿವಮೊಗ್ಗ : ಮಕ್ಕಳಲ್ಲಿ ಕ್ರಿಯಾಶೀಲತೆ ಮೂಡಿಸಲು ಲಕ್ಷ್ಯ ಸ್ಕೂಲ್ ಮತ್ತು ಪೀಪಲ್ ಫಾರ್ ಎಜುಕೇಷನ್ ವತಿಯಿಂದ ನಗರದ ಸವಳಂಗ ರಸ್ತೆಯ ಕೃಷಿ ಕಾಲೇಜು ಮೈದಾನದಲ್ಲಿ ಗಾಳಿ ಪಟ ಹಬ್ಬ ಆಚರಿಸಲಾಯಿತು.

ಬೆಂಗಳೂರಿನಿಂದ ನುರಿತ ಗಾಳಿಪಟ ತಯಾರಕರು ಬಂದಿದ್ದರು ಮಕ್ಕಳಿಗೆ ಗಾಳಿಪಟ ತಯಾರಿಕೆ ಬಗ್ಗೆ, ಸೂತ್ರ ಹೇಗೆ ಕಟ್ಟುವುದು, ಅದರ ಬಾಲಂಗೋಚಿ ಎಷ್ಟಿರಬೇಕು ಎಂಬ ವಿಷಯವನ್ನು ಕಲಿಸಿದರು.

ಗಾಳಿಪಟ ಹಬ್ಬದಲ್ಲಿ ಸುಮಾರು 600 ಕ್ಕೂ ಹೆಚ್ಚು ಮಕ್ಕಳ ಜೊತೆಗೆ ಪಾಲಕರು ಭಾಗವಹಿಸಿದ್ದು ವಿಶೇಷವಾಗಿತ್ತು.

ಸಂಕ್ರಾಂತಿ ಹಬ್ಬದ ವಿಶೇಷವಾಗಿ ಲಕ್ಷ್ಯ ಸ್ಕೂಲ್ ಪೀಪಲ್ ಫಾರ್ ಎಜುಕೇಷನ್ ವತಿಯಿಂದ ಆಗಸದಲ್ಲಿ ಬಣ್ಣ ಬಣ್ಣದ ಚಿಟ್ಟೆಗಳು ಪಕ್ಷಿಗಳ ಜೊತೆಗೆ ಡ್ರ್ಯಾಗನ್ , ಸ್ಪೈಡರ್ ಮ್ಯಾನ್, ಅವತಾರ್, ತಿರಂಗ ಪ್ರತ್ಯಕ್ಷವಾಗಿದ್ದವು. ಮಕ್ಕಳು, ಮಹಿಳೆಯರು, ವೃದ್ಧರು ವಿಶೇಷ ಅತಿಥಿಗಳನ್ನು ಕಣ್ತುಂಬಿಕೊಂಡು ಸಂಭ್ರಮಿಸಿದರು.

ಸವಳಂಗ ರಸ್ತೆಯ ಕೃಷಿ ಕಾಲೇಜಿನ ಮೈದಾನದಲ್ಲಿ ಮಕ್ಕಳ ಗಾಳಿಪಟ ಹಬ್ಬದಲ್ಲಿ ಕಂಡುಬಂದ ಮನಮೋಹಕ ದೃಶ್ಯಗಳು. ಮಕ್ಕಳಲ್ಲಿ ಕ್ರಿಯಾಶೀಲತೆಯನ್ನು ಹೆಚ್ಚಿಸುವ ಸಲುವಾಗಿ 2ನೇ ಬಾರಿಗೆ ಸಂಸ್ಥೆಯು 3 ವರ್ಷದಿಂದ 18 ವರ್ಷದೊಳಗಿನವರಿಗೆ 2 ವಿಭಾಗದಲ್ಲಿ ಗಾಳಿಪಟ ಹಬ್ಬವನ್ನು ಆಯೋಜಿಸಿತ್ತು.

ಕೃಷಿ ಕಾಲೇಜಿನ ಆವರಣದಲ್ಲಿ ಬಣ್ಣ ಬಣ್ಣದ ಗಾಳಿಪಟಗಳು ಆಗಸದಲ್ಲಿ ರಾರಾಜಿಸಿದವು. ಗಾಳಿಪಟಗಳನ್ನು ಹಾರಿಸಿದ ಮಕ್ಕಳ ಸಂಭ್ರಮಕ್ಕೆ ಪಾರವೆ ಇರಲಿಲ್ಲ. ಅವರೊಂದಿಗೆ ಪಾಲಕರು ಕೂಡ ಗಾಳಿಪಟ ಹಾರಿಸಿ ಹಬ್ಬಕ್ಕೆ ಮೆರಗು ನೀಡಿದರು. 3 ರಿಂದ 13 ಮತ್ತು 13 ರಿಂದ 14 ವರ್ಷದೊಳಗಿನ ಅಂದಾಜು 450ಕ್ಕೂ ಅಧಿಕ ಮಕ್ಕಳು ಗಾಳಿಪಟ ಹಬ್ಬದಲ್ಲಿ ಪಾಲ್ಗೊಂಡಿದ್ದರು.

ಆಗಸದಲ್ಲಿ ಹಾರಾಡುತ್ತಿದ್ದ ಬಗೆ ಬಗೆಯ ಚಿತ್ತಾಕರ್ಷಕ ಗಾಳಿಪಟಗಳು ಜನರನ್ನು ಆಕರ್ಷಿಸಿದವು.

ದಾನಗಳಲ್ಲಿ ವಿದ್ಯಾದಾನವೇ ಶ್ರೇಷ್ಢ-ಡಾ.ಸರ್ಜಿ

0

ಶಿವಮೊಗ್ಗ: ಎಲ್ಲ ದಾನಗಳಿಗಿಂತ ವಿದ್ಯಾದಾನ ದೊಡ್ಡದು. ವಿದ್ಯೆಯನ್ನು ಒಲಿಸಿಕೊಂಡರೆ ಜೀವನದಲ್ಲಿ ಎಲ್ಲವನ್ನೂ ಪಡೆದುಕೊಳ್ಳಬಹುದು ಎಂದು ಸರ್ಜಿ ಫೌಂಡೇಶನ್ನಿನ ಮ್ಯಾನೇಜಿಂಗ್‌ ಟ್ರಸ್ಟಿ ಡಾ.ಧನಂಜಯ ಸರ್ಜಿ ಅವರು ಹೇಳಿದರು.

ಶಿವಮೊಗ್ಗದ ಕುವೆಂಪು ರಂಗ ಮಂದಿರದಲ್ಲಿ ಮೌಂಟೆನ್‌ ಇನೋವೇಟಿವ್‌ ಸ್ಕೂಲ್‌ನ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಮೌಂಟೆನ್‌ ಇನೋವೇಟಿವ್‌ ಶಿಕ್ಷಣ ಸಂಸ್ಥೆಯು ಉತ್ತಮ ಶಿಕ್ಷಣವನ್ನು ನೀಡುವ ಮೂಲಕ ಬಹು ಎತ್ತರಕ್ಕೆ ಬೆಳೆದಿದೆ. ಸಂಸ್ಥೆಯು ಇನ್ನಷ್ಟು ಬೃಹತ್‌ ಆಗಿ ಬೆಳೆಯಲಿ ಎಂದು ಆಶಿಸಿದರು.

ನೂರಾರು ವಿದ್ಯಾರ್ಥಿಗಳು ಅದ್ಭುತವಾಗಿ ಮನರಂಜನಾ ಕಾರ್ಯಕ್ರಮಗಳನ್ನು ಪ್ರದರ್ಶಿಸಿರುವುದು ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕರ ಹೊಣೆಗಾರಿಕೆಗಾರಿಕೆಗೆ ಸಾಕ್ಷಿಯಾಗಿದೆ. ಮನೆಯಲ್ಲಿ ಒಂದೆರಡು ಮಕ್ಕಳನ್ನು ಸಮರ್ಥವಾಗಿ ನಿಭಾಯಿಸುವುದು ಕಷ್ಟ. ಆದರೆ, ಎಲ್ಲರನ್ನೂ ಶಿಸ್ತಿನಿಂದ ಬೆಳೆಸುವ ಮೂಲಕ ಅವರಲ್ಲಿ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ತುಂಬುವ ಕಾಯಕವನ್ನು ಮಾಡುತ್ತಿದೆ ಎಂದು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಎಂಐಇಎಸ್‌ ಶೈಕ್ಷಣಿಕ ನಿರ್ದೇಶಕ ಶಿವಕುಮಾರ್‌ ಟಿ.ಎಸ್‌., ಕಾರ್ಯದರ್ಶಿ ಶಿಲ್ಪಶ್ರೀ, ಪ್ರಾಂಶುಪಾಲೆ ಶಿಲ್ಪ ಅರವಿಂದ್‌ ಮತ್ತಿತರರು ಉಪಸ್ಥಿತರಿದ್ದರು.

ಭೂಲೋಕದಲ್ಲಿ ಸೂರ್ಯನೇ ಪ್ರತ್ಯಕ್ಷ ದೇವರು- ಡಾ.ಧನಂಜಯ ಸರ್ಜಿ

0

ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿಯಲ್ಲಿ ಶನಿವಾರ ಮಕರ ಸಂಕ್ರಾಂತಿ ಮಹೋತ್ಸವ ಮತ್ತು ಶ್ರೀಗಳ ವರ್ಧಂತೋತ್ಸವ ಸಮಾರಂಭವು ಪರಮ ಪೂಜ್ಯ ಡಾ. ಶ್ರೀ ವಿಶ್ವ ಸಂತೋಷ ಭಾರತಿ ಶ್ರೀ ಪಾದಂಗಳವರ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯದಲ್ಲಿ ನೆರವೇರಿತು.

ಶ್ರೀ ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿ, ಕಾಯಕಯೋಗಿಗಳಾದ ಡಾ. ಶ್ರೀ ಶಾಂತವೀರ ಮಹಾಸ್ವಾಮೀಜಿ ದಿವ್ಯ ಉಪಸ್ಥಿತಿವಹಿಸಿದ್ದರು.

ಈ ಸಂದರ್ಭದಲ್ಲಿ ಶಿವಮೊಗ್ಗ ಸರ್ಜಿ ಫೌಂಡೇಶನ್ನಿನ ಮ್ಯಾನೇಜಿಂಗ್‌ ಟ್ರಸ್ಟಿ ಡಾ. ಧನಂಜಯ ಮಾತನಾಡಿ, ಭೂಲೋಕದ ಪ್ರತ್ಯಕ್ಷ ದೇವರೆಂದರೆ ಸೂರ್ಯ. ಉತ್ತರಾಯಣದ ಬಳಿಕ ಸೂರ್ಯ ದಕ್ಷಿಣಾಯಣದತ್ತ ತನ್ನ ಪಥವನ್ನು ಬದಲಿಸುತ್ತಾನೆ. ಪುರಾಣ ಮತ್ತು ಜ್ಯೋತಿಷ್ಯದ ಪ್ರಕಾರ ಉತ್ತರಾಯಣದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬ ನಂಬಿಕೆಯಿದೆ. ಮಹಾಭಾರತದ ಭೀಷ್ಮ ಪಿತಾಮಹನು ಬಾಣಗಳ ಮಂಚದ ಮೇಲೆ ಮಲಗಿ ಯಮ ಯಾತನೆ ಅನುಭವಿಸುತ್ತಿದ್ದರೂ ದಕ್ಷಿಣಾಯನದಲ್ಲಿ ತನ್ನ ದೇಹವನ್ನು ತ್ಯಜಿಸಲು ಒಪ್ಪದೆ ಉತ್ತರಾಯಣದ ಪುಣ್ಯಕಾಲದ ಅಷ್ಟಮಿ ದಿನ ಸಾವನ್ನು ಬರ ಮಾಡಿಕೊಳ್ಳುತ್ತಾನೆ. ಅಂತ ಒಂದು ಪುಣ್ಯಕಾಲವಿದು ಎಂದರು.

ಸಂಕ್ರಾಂತಿಯಂದು ನಡೆಯುವ ಈ ದೇವರ ಆರಾಧನೆಯೇ ಒಂದು ವಿಶೇಷ. ಭಾರತೀಯ ಸಂಸ್ಕೃತಿಯಲ್ಲಿ ಪ್ರತಿ ಹಬ್ಬಗಳಿಗೂ ಒಂದೊಂದು ವಿಶೇಷ ಸಂಪ್ರದಾಯ, ಆಚರಣೆಯ ಮಹತ್ವವಿದೆ. ಹಾಗೆಯೇ ಪ್ರತಿ ವರ್ಷ ಸಂಕ್ರಾಂತಿಯ ಹಬ್ಬದ ದಿನ ಸಂಜೆ ಶಬರಿಮಲೆಯಲ್ಲಿ ಅಯ್ಯಪ್ಪ ಸ್ವಾಮಿಯು ಜ್ಯೋತಿ ರೂಪದಲ್ಲಿ ಹಾಗೂ ಗರುಡ ದರ್ಶನದ ಕಂಡು ನಾವೆಲ್ಲಾ ಪುನೀತರಾಗುತ್ತೇವೆ. ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ರೈತರು ಆ ದಿನ ಎತ್ತುಗಳಿಗೆ ಪೂಜೆ ಸಲ್ಲಿಸಿ ಕಿಚ್ಚು ಹಾಯಿಸುತ್ತಾ, ತಾವು ಬೆಳೆದ ಬೆಳೆಗಳನ್ನು ರಾಶಿ ರಾಶಿಯಾಗಿ ಹಾಕಿ ಪೂಜೆ ಸಲ್ಲಿಸಿ ಸುಗ್ಗಿಯ ಹಬ್ಬವಾಗಿ ಸಂಭ್ರಮಿಸುತ್ತಾರೆ. ಈ ಹಬ್ಬವು ನಾಡಿಗೆ ಸಮೃದ್ದಿಯನ್ನು ನೀಡಲಿ ಎಂದು ಪ್ರಾರ್ಥಿಸಿದರು.

ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ರಕ್ಷಣಾ ಮತ್ತು ಪ್ರವಾಸೋದ್ಯಮದ ರಾಜ್ಯ ಸಚಿವರಾದ ಶ್ರೀಪಾದನಾಯಕ್‌ , ವಿಧಾನ ಪರಿಷತ್‌ ಸದಸ್ಯೆ ಭಾರತೀ ಶೆಟ್ಟಿ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯ ನಿರ್ದೇಶಕರಾದ ಆರ್‌. ಮದನ್‌ ಮತ್ತಿತರ ಗಣ್ಯರು ಹಾಜರಿದ್ದರು. ಹಾಗೂ ಸಾವಿರಾರು ಅಯ್ಯಪ್ಪಸ್ವಾಮಿ ಭಕ್ತರು ಸೇರಿದ್ದರು.

ಕ್ರಿಕೆಟ್ ಪ್ರತಿಭೆ ಕು.ಅದಿತಿಗೆ ಶುಭಹಾರೈಸಿ

0

ಶಿವಮೊಗ್ಗ: ಕ್ರಿಕೆಟ್ ಪಂದ್ಯಾವಳಿ ಮೊದಲು ಪುರುಷರಿಗೆ ಅನ್ನೋ ಮಾತು ಇತ್ತು. ಆದರೆ ಈಗ ಮಹಿಳೆಯರಿಗೂ ಕ್ರಿಕೆಟ್ ಪಂದ್ಯಾವಳಿಗಳಿವೆ. ಅದೇ ತರ ಭಾರತೀಯ ಮಹಿಳಾ ಕ್ರಿಕೆಟ್ ಟೀಮ್ ಗೆ ನಮ್ಮ ಶಿವಮೊಗ್ಗದ ಡಿವಿಎಸ್ ಪದವಿ ಕಾಲೇಜಿನ ಬಿಕಾಂ ವಿದ್ಯಾರ್ಥಿನಿ ಅದಿತಿ ಅವರು ಆಯ್ಕೆಯಾಗಿದ್ದಾಳೆ.

ಪಿ .ವಿ. ನಾಗರಾಜ್, ಅದಿತಿಯ ಕೋಚ್ ಆಗಿದ್ದಾರೆ.ಭಾರತೀಯ ಮಹಿಳಾ ಕ್ರಿಕೆಟ್ ಟೀಮ್ ಗೆ ನಮ್ಮ ಶಿವಮೊಗ್ಗದ ವಿದ್ಯಾರ್ಥಿನಿ ಆಯ್ಕೆ ಆಗಿರುವುದು ಹೆಮ್ಮೆಯ ವಿಚಾರ.
ಅವರಿಗೆ ಶುಭವಾಗಲಿ ಎಂದು ಕೆ ಲೈವ್ ಬಳಗ ಹಾರೈಸುತ್ತದೆ