Wednesday, April 1, 2026
Wednesday, April 1, 2026
Home Blog Page 1337

ಸೆಮಿಸ್ಟರ್ ಸ್ಕೀಂ ಪದವಿ ಪೂರೈಕೆ ಪರೀಕ್ಷೆಗೆ ಕೊನೇ ಅವಕಾಶ

0

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯ ಸಂಯೋಜಿತ ಕಾಲೇಜುಗಳಲ್ಲಿ ಸ್ನಾತಕ ಪದವಿಗಳಿಗೆ 2003-04 ರಲ್ಲಿ ಹಾಗೂ ಆನಂತರ ಪ್ರವೇಶ ಪಡೆದ ಸೆಮಿಸ್ಟರ್ ಸ್ಕೀಂನಲ್ಲಿ ಅಧ್ಯಯನ ಮಾಡಿ, ಕೋರ್ಸ್ ಪೂರ್ಣಗೊಳಿಸಲು ನಿಗದಿಪಡಿಸಿಲಾಗಿದ್ದ ಅವಧಿ(ಡಬಲ್ ದ ಡ್ಯುರೇಷನ್) ಮುಗಿದರೂ ಸಹ ಈವರೆವಿಗೂ ಪದವಿ ಪೂರ್ಣಗೊಳಿಸಲಾಗದೆ.

ಕೆಲವು ವಿಷಯಗಳಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಕೊನೆಯ ಅವಕಾಶವನ್ನು ನೀಡಲಾಗಿದೆ.

ಇಂತಹ ವಿದ್ಯಾರ್ಥಿಗಳಿಗೆ ಏಪ್ರಿಲ್/ಮೇ 2023 ರ ಮಾಹೆಯಲ್ಲಿ ಪರೀಕ್ಷೆಗಳನ್ನು ನಡೆಸಲು ಯೋಜಿಸಲಾಗಿದೆ. ಪರೀಕ್ಷಾ ಶುಲ್ಕ ಮತ್ತು ವೇಳಾಪಟ್ಟಿಯನ್ನು ನಂತರ ಪ್ರಕಟಿಸಲಾಗುತ್ತದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವರು ತಿಳಿಸಿದ್ದಾರೆ.

ಬೊರ್ ವೆಲ್ ಕೊರೆಸಲು ಫಲಾನುಭವಿಗಳ ಖಾತೆಗೆ ನೇರ ಹಣಜಮಾ -ಸಚಿವ ಶ್ರೀನಿವಾಸ ಪೂಜಾರಿ

0

ರೈತರಿಗೆ ಒಂದು ಗುಡ್ ನ್ಯೂಸ್ ನ್ನು ರಾಜ್ಯ ಸರ್ಕಾರ ನೀಡಿದೆ.ಅದೇನು ಅಂದ್ರೆ, ಗಂಗಾ ಕಲ್ಯಾಣ ಯೋಜನೆ ಅಡಿ ಕೊಳವೆಬಾವಿ ಕೊರಿಸಲು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗುತ್ತದೆ ಎಂದು ಸಮಾಜ ಕಲ್ಯಾಣ ಸಚಿವರಾದ ಕೋಟಾ ಶ್ರೀನಿವಾಸ್ ಪೂಜಾರಿ ಅವರು ರೈತ ಸಮುದಾಯಕ್ಕೆ ಸಿಹಿ ಸುದ್ದಿ ನೀಡಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಅವರು, ಕೊಳವೆಬಾವಿ ಕೊರಿಸಲು, ವಿದ್ಯುತ್ ಸಂಪರ್ಕ, ಪಂಪ್ ಸೆಟ್ ಹೀಗೆ ಅನೇಕ ಸೌಲಭ್ಯ ಕಲ್ಪಿಸಲು ಟೆಂಡರ್ ನೀಡಲಾಗುತ್ತಿತ್ತು. ಆದರೆ, ಈಗ ಟೆಂಡರ್ ಪದ್ಧತಿಯನ್ನು ತೆಗೆದುಹಾಕಲಾಗಿದೆ. ಫಲಾನುಭವಿಗಳ ಖಾತೆಗೆ ನೇರವಾಗಿ ಕೊಟ್ಟಿರುವ ಹಣದಲ್ಲಿ ಬೋರ್ವೆಲ್ ಕೊರೆಸಲು ಪಂಪ್ಸೆಟ್ ಖರೀದಿ ಮಾಡಲು ಹೀಗೆ ಮುಂತಾದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಮಾಹಿತಿ ನೀಡಿದ್ದಾರೆ.

ಈ ಸೌಲಭ್ಯವನ್ನು ಪಡೆದುಕೊಳ್ಳಲು ಯಾವುದೇ ವಯೋಮಿತಿ ಇಲ್ಲ. ಕೊಳವೆ ಬಾವಿ ಸೌಲಭ್ಯವನ್ನು ಪಡೆಯಲು ಎಲ್ಲರೂ ಅರ್ಜಿ ಸಲ್ಲಿಸಬಹುದು. ಈ ವರ್ಷದಲ್ಲಿ 1,700 ಕೊಳವೆ ಬಾವಿಗಳು ಕೊರಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು

ಕೇಂದ್ರ ನಾಯಕರ ನಿರ್ಧಾರದಂತೆಈಶ್ವರಪ್ಪ ಅವರಿಗೆ ಮಂತ್ರಿಗಿರಿ – ಯಡಿಯೂರಪ್ಪ

0

ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮತ್ತೊಮ್ಮೆ ಸಚಿವರಾಗಬೇಕು ಎಂಬುದು ನನ್ನ ಆಸೆ, ಆದರೆ, ಈ ಕುರಿತ ನಿರ್ಧಾರ ಪಕ್ಷದ ಹೈಕಮಾಂಡ್ ಬಿಟ್ಟದ್ದು ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ ಮಾತನಾಡಿದ ಯಡಿಯೂರಪ್ಪನವರು,
ರಾಜ್ಯದಲ್ಲಿ ಹಲವು ವರ್ಷ ಆಡಳಿತ ನಡೆಸಿದರೂ ಈ ರೀತಿ ಮಾಡಿಲ್ಲ. ನಾವೇ ಮಾಡಿದ್ದೇವೆ. ಈ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಎಸ್ಸಿ/ಎಸ್ಟಿಗಳಿಗೆ ಮೀಸಲಾತಿ ಕೋಟಾವನ್ನು ಹೆಚ್ಚಿಸುವ ಬಿಜೆಪಿ ಸರ್ಕಾರದ ನಿರ್ಧಾರದ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸತ್ಯವನ್ನು ತಿರುಚುತ್ತಿದ್ದಾರೆ ಕಾಂಗ್ರೆಸ್ ಯಾತ್ರೆಗಳಿಗೆ ಬೆಲೆ ಇಲ್ಲ ಎಂದರು.

ಈಶ್ವರಪ್ಪನವರಿಗೆ ಸಚಿವ ಸ್ಥಾನ ನೀಡುವ ಕುರಿತು ಕೇಂದ್ರ ನಾಯಕರು ನಿರ್ಧಾರ ಕೈಗೊಳ್ಳಲಿದ್ದಾರೆ. ಆದರೆ ನಾನು ಈಶ್ವರಪ್ಪ ಅವರನ್ನು ರಾಜ್ಯ ಸಚಿವ ಸಂಪುಟದಲ್ಲಿ ನೋಡಬೇಕು ಎಂದು ತಿಳಿಸಿದರು.

ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಸಾಂವಿಧಾನಿಕ ಸ್ಥಾನಮಾನ ನೀಡುವಂತೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಗಡುವು ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಇದನ್ನು ಸ್ವಾಗತಿಸುವ ಬದಲು ಕಾಂಗ್ರೆಸ್ ನಾಯಕರು ಈ ವಿಷಯದಲ್ಲಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಹಿರಿಯ ನಾಯಕರಾದ ಸ್ಯಾಂಟ್ರೋ ರವಿ ಪ್ರಕರಣದಲ್ಲಿ ಸುತ್ತಾಡುತ್ತಿರುವ ಕೆಲವು ಸಚಿವರ ಹೆಸರ ಕುರಿತ ಪ್ರಶ್ನೆಗೆ ಉತ್ತರಿಸಿ, ತನಿಖೆಯಿಂದ ಸತ್ಯಾಂಶ ಹೊರಬರಲಿದೆ. “ಆದರೆ, ಸರ್ಕಾರ ಖಂಡಿತವಾಗಿಯೂ ಸ್ಯಾಂಟ್ರೋ ರವಿ ವಿರುದ್ಧ ಕ್ರಮ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು.

ರಕ್ತದಾನ ಜಾತಿ ಮತ ಧರ್ಮ ಒಗ್ಗೂಡಿಸುವ ಸಂಕೇತವೂ ಆಗಿದೆ- ಡಾ.ಅರುಣ್

0

ರಕ್ತದಾನ ಜಾತಿ, ಮತ, ಧರ್ಮ ಮತ್ತು ಹೆಚ್ಚಿನದನ್ನು ಲೆಕ್ಕಿಸದೆ ಜನರನ್ನು ಒಂದುಗೂಡಿಸುವ ಮಾನವೀಯತೆಯ ಸಂಕೇತವೂ ಆಗಿದೆ ಎಂದು ಐಎಂಎ ಅಧ್ಯಕ್ಷ ಡಾ . ಅರುಣ್ ಎಂ ಎಸ್ ಹೇಳಿದರು .

ವೈದ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಪ್ರೇರಿತರಾಗಿ ಬಂದು ರಕ್ತದಾನ ಮಾಡಿದ್ದು ಬಹಳ ಖುಷಿಕೊಟ್ಟಿದೆ ಎಂದರು.

ದಿನಾಂಕ 8.1.2023 ರಂದು
ಭಾರತೀಯ ವ್ಯದ್ಯಕೀಯ ಸಂಘವು ರಕ್ತದಾನ ಶಿಬಿರವನ್ನು ಏರ್ಪಡಿಸಿತ್ತು. ಭಾನುವಾರ ಬೆಳಿಗ್ಗೆ 9-00 ಘಂಟೆಯಿಂದ ಮಧ್ಯಾಹ್ನ 1.30ರ ವರೆಗೆ ನಗರದ ಐಎಂಎ ಹಾಲ್ ನಲ್ಲಿ ಅಭಿರುಚಿ ಶಿವಮೊಗ್ಗ, ರೋಟರಿ ರಕ್ತನಿಧಿ ಕೇಂದ್ರ ಇವುಗಳ ಸಹಯೋಗದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

2 ಸಂಘದ ಸದಸ್ಯರು , ಅವರ ಕುಟುಂಬದವರು , ಆಸ್ಪತ್ರೆ ಸಿಬ್ಬಂಧಿಗಳು , ವೈದ್ಯಕೀಯ ವಿದ್ಯಾರ್ಥಿಗಳು ಹಾಗು ಸಮಾಜದ ಪ್ರಜ್ಞಾವಂತ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ರಕ್ತದಾನ ಮಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಸುಮಾರು 52 ರಷ್ಟು ರಕ್ತದ ಯುನಿಟ್ ಸಂಗ್ರಹಕ್ಕೆ ಕಾರಣೀಭೂತರಾಗಿದ್ದಾರೆ. ಜೀವ ಉಳಿಸುವ ಈ ಒಂದು ಶ್ರೇಷ್ಠ ವಾದ ಕಾರ್ಯವನ್ನು ಆಯೋಜಿಸಿ ಭಾರತೀಯ
ವೈದ್ಯಕೀಯ ಸಂಘ ಸಾಮಾಜಿಕ ಒಳಿತಿಗೆ ಕಾರಣವಾಗಿದೆ . ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಾರ್ಡ್ ನಂ .21 ರ ಕಾರ್ಪೋರೇಟೋರ್ ಶ್ರೀಮತಿ ಮೀನಾ ಗೋವಿಂದರಾಜು ಆಗಮಿಸಿದ್ದರು .

ಒಬ್ಬ ವ್ಯಕ್ತಿಯು ಸಮಾಜಕ್ಕೆ ನೀಡಬಹುದಾದ ಮಹತ್ವದ ಕೊಡುಗೆಗಳಲ್ಲಿ ರಕ್ತದಾನವು ಒಂದು. ವಯಸ್ಕ ವ್ಯಕ್ತಿಗೆ ರಕ್ತದಾನ ಮಾಡುವುದು ಹಾನಿಕಾರಕವಲ್ಲ. ದಾನಿಯ ದೇಹವು ಕೆಲವೇ ದಿನಗಳಲ್ಲಿ ರಕ್ತವನ್ನು ಪುನರುತ್ಪಾದಿಸುತ್ತದೆ. ಇದು ದೇಹದ ಚಯಾಪಚಯ ಕ್ರಿಯೆಗೆ ಯಾವುದೇ ಅಪಾಯವನ್ನುಂಟು ಮಾಡುವುದಿಲ್ಲವೆಂದು ಅಭಿರುಚಿ ಅಧ್ಯಕ್ಷರಾದ ಡಾ . ಶಿವರಾಮಕೃಷ್ಣ ಅವರು ಹೇಳಿದರು.

ರಕ್ತದಾನ ಮಾಡಲು ಅರ್ಹರಾಗಿರುವ ವ್ಯಕ್ತಿಯು 19-55 ವರ್ಷ ವಯಸ್ಸಿನವರಾಗಿರಬೇಕು. ಅವರು 50 ಕೆಜಿಗಿಂತ ಹೆಚ್ಚು ತೂಕವಿರಬೇಕು ಮತ್ತು ಉತ್ತಮ ಆರೋಗ್ಯವನ್ನು ಹೊಂದಿರಬೇಕು. ಮಧುಮೇಹ, ಅಧಿಕ ರಕ್ತದೊತ್ತಡ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿರುವವರು ರಕ್ತದಾನ ಮಾಡುವಂತಿಲ್ಲ ಎಂದು ರೋಟರಿ ಬ್ಲಡ್ ಬ್ಯಾಂಕ್ ವತಿಯಿಂದ ಆಗಮಿಸಿದ ಡಾ . ಸಂಜಯ್ ಅವರು ತಿಳಿಸಿದರು.

ಐಎಂಎ ಕಾರ್ಯದರ್ಶಿ ಡಾ . ರಕ್ಷಾ ರಾವ್ , ಖಜಾಂಚಿ ಡಾ . ಶಶಿಧರ್ , ಜಂಟಿ ಕಾರ್ಯದರ್ಶಿ ಡಾ . ಅನೂಪ್ ರಾವ್ , ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ ಕೌಸ್ತುಭಾ ಅರುಣ್ , ಅಭಿರುಚಿ ಕಾರ್ಯದರ್ಶಿ ಶ್ರೀ ಕುಮಾರ ಶಾಸ್ತ್ರೀ , ಶ್ರೀ ಬಾಪಟ್ ಉಪಸ್ಥಿತರಿದ್ದರು .

ಜನವರಿ 12 ರಂದು ಜಿಲ್ಲಾ ಗ್ರಾಮೀಣ ಕ್ರೀಡಾಕೂಟ

0

ಶಿವಮೊಗ್ಗ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಶಿವಮೊಗ್ಗ ಜಿಲ್ಲಾ ಮಟ್ಟದ ಗ್ರಾಮೀಣ ಕ್ರೀಡಾಕೂಟವನ್ನು ನೆಹರೂ ಕ್ರೀಡಾಂಗಣದಲ್ಲಿ ಜನವರಿ 12 ರಂದು ಏರ್ಪಡಿಸಲಾಗಿದೆ.

 ಶಿವಮೊಗ್ಗ ಜಿಲ್ಲೆಯ 7 ತಾಲ್ಲೂಕುಗಳಲ್ಲಿ ನಡೆದ ತಾಲ್ಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟದಲ್ಲಿ ಕಬಡ್ಡಿ, ಯೋಗ,

ಖೋ-ಖೋ, ಕುಸ್ತಿ, ಎತ್ತಿನಗಾಡಿ ಓಟ, ಕಂಬಳ ಕ್ರೀಡೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ ಕ್ರೀಡಾಪಟುಗಳು ಜಿಲ್ಲಾ ಮಟ್ಟದ ಗ್ರಾಮೀಣ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆದಿರುತ್ತಾರೆ.

ಗ್ರಾಮೀಣ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳು ದಿನಾಂಕ: 12-01-2023 ರ ಬೆಳಿಗ್ಗೆ 10 ಗಂಟೆಗೆ ನೆಹರೂ ಕ್ರೀಡಾಂಗಣದಲ್ಲಿ ವರದಿ ಮಾಡಿಕೊಳ್ಳಬೇಕೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಏಪ್ರಿಲ್ 29 ರಂದು ಜವಾಹರ್ ನವೋದಯ ವಿದ್ಯಾಲಯ ಆಯ್ಕೆ ಪರೀಕ್ಷೆ

0

ಶಿವಮೊಗ್ಗ: 2023-24 ನೇ ಸಾಲಿನ ಜವಾಹರ ನವೋದಯ ವಿದ್ಯಾಲಯ ಆಯ್ಕೆ ಪರೀಕ್ಷೆಯು ಏಪ್ರಿಲ್ 29 ರಂದು ಜಿಲ್ಲೆಯ 07 ತಾಲ್ಲೂಕುಗಳಲಿ ನಡೆಯಲಿದೆ.

ಜವಾಹರ ನವೋದಯ ವಿದ್ಯಾಲಯದ 6ನೇ ತರಗತಿ ಪ್ರವೇಶ ಪರೀಕ್ಷೆಗೆ ಆನ್‍ಲೈನ್ ನೋಂದಣಿ ಪೋರ್ಟಲ್ https://navodaya.gov.in ಈಗಾಗಲೇ ಲಭ್ಯವಿದ್ದು, ಆನ್‍ಲೈನ್ ಮೂಲಕ ಮಾತ್ರ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಬಹುದು.

ಜನವರಿ 31 ಆನ್‍ಲೈನ್ ನೋಂದಣಿಗೆ ಕಡೆಯ ದಿನವಾಗಿದೆ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಂಡು ಪರೀಕ್ಷೆ ತೆಗೆದುಕೊಳ್ಳುವಂತೆ ಜವಾಹರ ನವೋದಯ ವಿದ್ಯಾಲಯದ ಪ್ರಕಟಣೆ ತಿಳಿಸಿದೆ.

ಎಂ.ಎಲ್. ಹಳ್ಳಿಯಲ್ಲಿ ಸಾಗರ ತಾಲ್ಲೂಕು ಮಕ್ಕಳ ಸಾಹಿತ್ಯ ಸಮ್ಮೇಳನ

0

ಸಾಗರ: ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯು ಸಾಗರದ ಎಂ. ಎಲ್. ಹಳ್ಳಿ ಯಲ್ಲಿರುವ ಶ್ರೀ ರಾಮಕೃಷ್ಣ ವಸತಿ ವಿದ್ಯಾಲಯ ಆವರಣದಲ್ಲಿ ಸಾಗರ ತಾಲ್ಲೂಕು 11 ನೆಯ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಜನವರಿ 6 ರಂದು ಬೆಳಿಗ್ಗೆ ಯಿಂದ ಸಂಭ್ರಮದಿಂದ ನಡೆಯಿತು.

ಸಾಗರ ತಾಲ್ಲೂಕು ಕಾನಲೆ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಕು. ರಕ್ಷಿತಾ ಪಿ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಭಾಗವಹಿಸಿದ್ದರು. ಯುವ ಸಾಹಿತಿ ಪೃಥ್ವಿ ಎಸ್. ಸಾಗರ ಅವರು ಉದ್ಘಾಟಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು, ಕಸಾಸಾಂ ವೇದಿಕೆ, ಕಜಾಪ ಜಿಲ್ಲಾ ಸಮಿತಿ ಅಧ್ಯಕ್ಷರಾದ ಡಿ. ಮಂಜುನಾಥ ಅವರು ಮಾತನಾಡಿದರು.

ಶ್ರೀ ರಾಮಕೃಷ್ಣ ವಸತಿ ವಿದ್ಯಾಲಯದ ಅಧ್ಯಕ್ಷರಾದ ದೇವರಾಜ್, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ತಾಲ್ಲೂಕು ಸಮಿತಿ ಅಧ್ಯಕ್ಷರಾದ ಕಸ್ತೂರಿ ಸಾಗರ್ ಆಶಯ ಮಾತುಗಳನ್ನು ಆಡಿದರು.

ದತ್ತಾತ್ರೇಯ ಭಟ್, ವಿ. ಟಿ. ಸ್ವಾಮಿ, ಜಿ. ಪರಮೇಶ್ವರಪ್ಪ, ಮಹಾಬಲೇಶ್ವರ, ಲಕ್ಷ್ಮಣನಾಯ್ಕ, ಕಜಾಪ ತಾಲ್ಲೂಕು ಅಧ್ಯಕ್ಷರಾದ ಸತ್ಯನಾರಾಯಣ ಸಿರಿವಂತೆ, ಕೆ. ಜಗನ್ನಾಥ ಕೆ., ಭಾರತ ಸೇವಾದಲದ ಅಧ್ಯಕ್ಷರಾದ ಉಮೇಶ್ ಹಿರೇನೆಲ್ಲೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಚಂದ್ರಶೇಖರ ಸಿರಿವಂತೆ, ಸತ್ಯನಾರಾಯಣ, ಸರೋಜಮ್ಮ, ಸಿದ್ದಾನಾಯ್ಕ, ಡಿ. ಎಸ್. ಸ್ಮಿತಾ ದಯಾನಂದ, ಸಹನಾ ಜಿ. ಕೆ., ಶಿವಾನಂದ, ಸಹನಾ ಶಿವಯೋಗಿ, ರಾಜು ಜನ್ನೆಹಕ್ಲು, ನಟರಾಜ್, ಪತ್ರಕರ್ತ ನಾಗೇಶ್ ಸೇರಿದಂತೆ ಹಲವರು ಅನೇಕ ಕಾರ್ಯಗಳನ್ನು ನಿರ್ವಹಿಸಿದರು.

ಹಳ್ಳಿಹಳ್ಳಿಗಳಲ್ಲಿ ಬಿಜೆಪಿ ಕಾರ್ಯಕರ್ತರ ಪಡೆ ಸದೃಢವಾಗಿದೆ- ಯಡಿಯೂರಪ್ಪ

0

ಹೊಸನಗರ: ರಾಜ್ಯದಲ್ಲಿ ಅನೇಕ ಪಾದಯಾತ್ರೆಗಳ ಮೂಲಕ ಪಕ್ಷ ಕಟ್ಟಿ ಬೆಳೆಸಿದ್ದೇನೆ. ಅಂದಿನ ಹೋರಾಟದ ಫಲ ಇಂದು ಬಿಜೆಪಿ ಅಧಿಕಾರ ನಡೆಸುವಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹೇಳಿದರು.

ಹೊಸನಗರ ತಾಲೂಕಿನ ಬ್ರಹ್ಮೇಶ್ವರ ಗ್ರಾಮದಲ್ಲಿ 3 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ಅಖಿಲ ಭಾರತ ವೀರಶೈವ ಸಮಾಜದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಹೋರಾಟದ ದಿನದಲ್ಲಿ ಶಾಸಕರಾಗಿದ್ದವರು ನಾನು ಹಾಗೂ ದಕ್ಷಿಣ ಕನ್ನಡದ ವಸಂತ ಬಂಗೇರ. ಆದರೆ ಇಂದು ಹಳ್ಳಿಹಳ್ಳಿಯಲ್ಲೂ ಬಿಜೆಪಿ ಕಾರ್ಯಕರ್ತರ ಪಡೆ ಸದೃಢವಾಗಿದೆ ಎಂದು ತಮ್ಮ ಸಂತಸವನ್ನು ವ್ಯಕ್ತಪಡಿಸಿದರು.

ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶ ಕಂಡ ದಣಿವರಿಯದ ನಾಯಕರಾಗಿದ್ದು, ಅವರ ನೇತೃತ್ವದಲ್ಲಿ ನಾವೆಲ್ಲ ಕೆಲಸ ಮಾಡಬೇಕಾಗಿದೆ. ಸಮೃದ್ಧ ಭಾರತ ಕಟ್ಟಬೇಕಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗೃಹ ಸಚಿವರಾದ ಆರಗ ಜ್ಞಾನೇಂದ್ರ, ಸಾಗರ ಶಾಸಕರಾದ ಹರತಾಳು ಹಾಲಪ್ಪ, ಮಳಲಿ ಮಠದ ಶ್ರೀ ಷ.ಬ್ರ.ಡಾ. ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು, ಮೂಲೆಗದ್ದೆ ಮಠದ ಶ್ರೀ ಮ.ನಿ.ಪ್ರ. ಅಭಿನವ ಚನ್ನಬಸವ ಮಹಾಸ್ವಾಮಿಗಳು, ಸಂಸದರಾದ ಶ್ರೀ ಬಿ ವೈ ರಾಘವೇಂದ್ರ ರವರು, ಶ್ರೀ ಟಿ ಡಿ ಮೇಘರಾಜ್, ಶ್ರೀ ಎಸ್ ಎಸ್ ಜ್ಯೋತಿಪ್ರಕಾಶ್,ಶ್ರೀ ಎಸ್ ಆರ್ ಷಡಕ್ಷರಿ, ಶ್ರೀ ಚನ್ನವೀರಪ್ಪ,ಶ್ರೀ ಜಿ.ಯುವರಾಜ್, ಶ್ರೀ ಜಯಶೀಲಪ್ಪ ಗೌಡ್ರು,ಶ್ರೀ ಹಾಲಪ್ಪ ಗೌಡ್ರು,ಶ್ರೀ ಚಂದ್ರ ಮೌಳಿ, ಶ್ರೀ ಹಾಲಪ್ಪ ಚಿಕ್ಕಮಣತಿ, ಶ್ರೀಮತಿ ಅನಿತಾ ರವಿಶಂಕರ್,ಶ್ರೀ ಹೆಚ್ ಆರ್ ತೀರ್ಥೇಶ್, ಹಾಗೂ, ಮಹಾಸಭಾ ಎಲ್ಲಾ ಸದಸ್ಯರು, ಯುವ ವೇದಿಕೆಯ ಎಲ್ಲಾ ಸದಸ್ಯರು, ಮಹಿಳಾ ವೇದಿಕೆಯ ಎಲ್ಲಾ ಸದಸ್ಯರು, ವೀರಭದ್ರೇಶ್ವರ ದೇವನ ಸ್ಥಾನ ಸಮಿತಿಯ ಎಲ್ಲಾ ಸದಸ್ಯರು, ಇನ್ನೂ ಮುಂತಾದ ಗಣ್ಯರು ಉಪಸ್ಥಿತರಿದ್ದರು

ಇಂದಿನ ಸಾಮಾಜಿಕ ಜಾಲತಾಣದಲ್ಲಿ ಬೌದ್ಧಿಕ ಅಧಃಪತನ-ಬಾಲರಾಜ್

0

ಶಿವಮೊಗ್ಗ:
ಇಂದಿನ ತಾಂತ್ರಿಕ ಯುಗದ ಸಾಮಾಜಿಕ ಜಾಲತಾಣಗಳಲ್ಲಿ ಬೌದ್ಧಿಕ ಅದಃಪತನ ಎದ್ದುಕಾಣುತ್ತಿದೆ. ಕ್ರಿಯಾಶೀಲತೆ ಮರೆಯಾಗುತ್ತಿದೆ. ಮಾನಸಿಕತೆ ಕುಂದುತ್ತಿದೆ ಎಂದು ಶಿವಮೊಗ್ಗ ಪೊಲೀಸ್ ಉಪ ಅಧೀಕ್ಷಕರಾದ ಬಾಲರಾಜ್ ಅವರು ಹೇಳಿದರು.

ಶಿವಮೊಗ್ಗದ ಮಥುರಾ ಪ್ಯಾರೆಡೈಸ್‌ನಲ್ಲಿ ತುಂಗಾ ತರಂಗ ದಿನಪತ್ರಿಕೆಯ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡುತ್ತಾ, ಓದುವ ಹವ್ಯಾಸ ಎಲ್ಲಾ ಮನಸ್ಸುಗಳಲ್ಲಿ ಬೆಳೆಯಬೇಕಿದೆ ಎಂದರು.

ಸಾಮಾಜಿಕ ಜಾಲತಾಣಗಳ ದುರ್ಬಳಕೆಯಿಂದ ಕುಗ್ಗಿರುವ ಬೌದ್ಧಿಕತೆಯ ನಡುವೆ ತುಂಗಾ ತರಂಗ ದಿನಪತ್ರಿಕೆ ಪ್ರತಿ ವರ್ಷ ವಾರ್ಷಿಕ ವಿಶೇಶಾಂಕ ಕ್ಯಾಲೆಂಡರ್ ಬಿಡುಗಡೆಯಂತಹ ಸಮಾರಂಭಗಳನ್ನು ಆಯೋಜಿಸಿರುವುದು ಸ್ವಾಗತಾರ್ಹ ವಿಷಯ. ಇಂದಿನ ಅವಸರದ ಯುಗದ ಓಟದಲ್ಲಿ ಮನುಷ್ಯ ತನ್ನ ಬದುಕನ್ನೇ ಕಳೆದುಕೊಳ್ಳುತ್ತಿದ್ದಾನೆ. ಒಂದಿಷ್ಟು ಚಿಂತಿಸುವ ವ್ಯವದಾನ ಇಲ್ಲದಿರುವುದು ದುರಂತವೇ ಹೌದು ಎಂದು ಹೇಳಿದರು.

ದೃಶ್ಯ ಮಾಧ್ಯಮಗಳ ಓಟದ ನಡುವೆ ಮುದ್ರಣ ಮಾಧ್ಯಮ ಸೊರಗುತ್ತಿದೆ. ಆದರೆ, ನಿಜವಾಗಿಯೂ ಮುದ್ರಣ ಮಾದ್ಯಮ ಬದುಕನ್ನು ಕಟ್ಟಿಕೊಡುತ್ತದೆ. ಓದುವ ಹವ್ಯಾಸ ಇಂದಿನ ಯುವ ಪೀಳಿಗೆಯಲ್ಲಿ ಕಡಿಮೆಯಾಗುತ್ತಿರುವುದನ್ನು ತಪ್ಪಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕರು, ತೆರಿಗೆ ಇಲಾಖೆ ಅಧಿಕಾರಿಗಳಾದ ವೆಂಕಟೇಶ್ವರ ಬಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಸಂಪಾದಕ ಎಸ್.ಕೆ.ಗಜೇಂದ್ರಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ತುಂಗಾ ತರಂಗ ಪತ್ರಿಕೆ ಕಳೆದ 12 ವರ್ಷಗಳಿಂದ ನಿರಂತರವಾಗಿ ವಾರ್ಷಿಕ ವಿಶೇಷಾಂಕ, ವಾರ್ಷಿಕ ಕ್ಯಾಲೆಂಡರ್ ಜೊತೆಗೆ ಸಮಗ್ರ ಮಾಹಿತಿಯ ಸಚಿತ್ರ ವರದಿಗಳು, ತನಿಖಾ ವರದಿಗಳನ್ನು ನೀಡುತ್ತಾ, ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ದೇಶ ವಿದೇಶಗಳಲ್ಲಿಯೂ ಗುರುತಿಸಿಕೊಂಡಿರುವ ತುಂಗಾ ತರಂಗ ಶಿವಮೊಗ್ಗ ಜಿಲ್ಲೆಯಲ್ಲಿ ಮುದ್ರಣಗೊಂಡು ಹಂಚಿಕೆಯಾಗುತ್ತಿದೆ ಇದಕ್ಕೆ ಕಾರಣಕರ್ತರಾದ ಎಲ್ಲಾ ಓದುಗರನ್ನು ಹಾಗೂ ಜಾಹೀರಾತುದಾರರಿಗೆ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಸ್ಮಾರ್ಟ್‌ಸಿಟಿ ಕಂಪನಿಯ ಜನರಲ್ ಮ್ಯಾನೇಜರ್ ಶರತ್, ಶ್ರೀನಿಧಿ ಸಂಸ್ಥೆಯ ವೆಂಕಟೇಶ್‌ಮೂರ್ತಿ, ಮೆಸ್ಕಾಂ ಇಂಜಿನಿಯರ್ ಜಗದೀಶ್, ಭಾರತೀಯ ಮಾನವ ಹಕ್ಕುಗಳ ಕಮಿಟಿಯ ಕೆ. ನಾಗರಾಜ್, ರಮೇಶ್ ಎಸ್., ಶಾರದಾ ಶೇಷಗಿರಿಗೌಡ, ಹಾಡೋನಹಳ್ಳಿ ಜಗದೀಶ್, ಎಸ್.ಹೆಚ್.ಕೃಷ್ಣಮೂರ್ತಿ, ಶೇಖರಪ್ಪ, ಡಾ.ಅರವಿಂದ್, ಆರುಂಡಿ ಶ್ರೀನಿವಾಸ್‌ಮೂರ್ತಿ, ಭರತೇಶ್, ಶಿ.ಜು.ಪಾಶ, ಚಂದ್ರಶೇಖರ್, ಸೋಮಶೇಖರ್, ಮೋಹನ್, ಅಭಿನಂದನ್, ಗಣೇಶ್, ಅರುಣ್, ಮಾಲತೇಶ್, ಮಾಲತೇಶ್, ಮಂಜುನಾಥ್, ಶಿಕ್ಷಕಿ ವೀಣಾರಾಣಿ, ಮಲ್ಲಿಕ್, ಉದಯ್, ದರ್ಶನ್, ರವಿ, ಬಿ.ಇ. ಪದವೀಧರ ತಿಮ್ಮೇಶ್, ಉಮೇಶ್, ರಾಕೇಶ್ ಸೋಮಿನಕೊಪ್ಪ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಕವಿ ದೊಡ್ಡ ರಂಗೇಗೌಡರ ದೊಡ್ಡ ಧ್ವನಿ

0

“ವಿಭಿನ್ನ ದೃಷ್ಟಿಯ ಮೂಲಕ ಸೆಳೆದ ಕವಿ ದೊಡ್ಡರಂಗೇಗೌಡ”

86ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲಿ ಜರುಗಿದೆ. ಕಳೆದ ಸಮ್ಮೇಳನ ಗಳಿಗೆ ಹೋಲಿಸಿದರೆ ಈ ಬಾರಿ ಸಮ್ಮೇಳನ ಅಧ್ಯಕ್ಷರ ಭಾಷಣ ಗಮನಾರ್ಹವಾಗಿದೆ ಅನ್ನಬಹುದು.

ಕವಿಗಳು, ಸಾಹಿತಿಗಳು ಬರಹದಲ್ಲಿ ಮಾತ್ರ ಮೊ ನಚಾಗುವರು. ಆದರೆ, ಅಕ್ಷರದಲ್ಲಿ ಮಾತ್ರ, ಮೃದೂನಿ ಕುಸುಮಾದಪಿ ಎಂಬ ಅಭಿಪ್ರಾಯವಿತ್ತು.

ಈ ಬಾರಿ ಕವಿ ದೊಡ್ಡ ರಂಗೇಗೌಡರು ತಮ್ಮ ಅಧ್ಯಕ್ಷ ಭಾಷಣದಲ್ಲಿ ಸ್ವಲ್ಪ ಬದಲಾಯಿಸಿದ್ದಾರೆ.

ಉದ್ಘಾಟನಾ ಸಮಾರಂಭದಲ್ಲಿ ಕನ್ನಡ ಭಾಷೆಗೆ ಶಾಸ್ತ್ರೀಯ ಮಾನ್ಯತೆ ಇನ್ನೂ ಪರಿಪೂರ್ಣವಾಗದ ಬಗ್ಗೆ ತಮ್ಮ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಕನ್ನಡ ಪರವಾಗಿ ಹೋರಾಡಿದ ಕನ್ನಡಿಗರ ಮೇಲೆ ಹಾಕಿರುವ ಪೊಲೀಸ್ ಕೇಸ್ ಹಾಗೂ ಇತರೆ ಕ್ರಮಗಳನ್ನು ಖಂಡಿಸಿದ್ದಾರೆ.

ಕನ್ನಡಿಗರಾಗಿ ಹೋರಾಡಿದ ಕನ್ನಡಿಗರನ್ನ ಕಾರಾಗೃಹಕ್ಕೆ ತಳ್ಳುವುದು ಯಾವ ನ್ಯಾಯ? ಅಂತಃಕರಣ ತೋರಿಸಿ, ಅವರ ಮೇಲಿನ ಕೇಸುಗಳನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ವೇದಿಕೆ ಹಂಚಿಕೊಂಡಿದ್ದ ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಲ್ಲಿ ಕಳಕಳಿಯ ಮನವಿ ಕೂಡ ಮಾಡಿದ್ದಾರೆ.

ಇದುವರೆಗೂ ಯಾವ ಸಮ್ಮೇಳನಾಧ್ಯಕ್ಷರೂ ವೇದಿಕೆಯಲ್ಲೇ ಈ ಹಿರಿತನ ತೋರಿರಲಿಲ್ಲ. ಕವಿ ದೊಡ್ಡ ರಂಗೇಗೌಡರು ಕನ್ನಡದ ಮೇಲಿನ ಇನ್ನಾವುದೇ ಭಾಷೆಯ ಹೇರಿಕೆಯನ್ನು ಖಂಡಿಸಿದ್ದಾರೆ.

ಅವರ ಮಾತು ಎಷ್ಟು ಸೂಕ್ಷ್ಮವಾಗಿದೆ ಎಂದರೆ, ಭಾಷಾವಾರು ಪ್ರಾಂತ್ಯಗಳ ವಿಂಗಡನೆ ಸಂಸ್ಕೃತಿ ತಳ ಹದಿಯನ್ನು ನೋಡಲೇಬೇಕಿತ್ತು ಎಂದಿದ್ದಾರೆ.

ಭಾಷಾವಾರು ಪ್ರಾಂತ್ಯಗಳನ್ನಾಗಿ ಪುನರ್ ವಿಂಗಡನೆ ಆಗಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

86ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಹೀಗಿವೆ…

  • ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ.
  • ಸುಗ್ರೀವಾಜ್ಞೆ ಮೂಲಕ ಕನ್ನಡ ಸಮಗ್ರ ಭಾಷಾ ಅಭಿವೃದ್ಧಿ ವಿಧೇಯಕ ಜಾರಿ.
  • ಸುಪ್ರೀಂ ಮಾರ್ಗದರ್ಶನದಂತೆ ಮಹಾಗಡಿ ವಿವಾದ ಬಗೆಹರಿಸಲು ಸೂಕ್ತ ಕ್ರಮ.
  • ಕನ್ನಡ ಹೋರಾಟಗಾರರ ವಿರುದ್ಧ ದಾಖಲಾದ ಮುಖದಮೆಗಳ ವಜಾಕ್ಕೆ ಆಗ್ರಹ.
  • ಕನ್ನಡ ಭಾಷೆ ಮೇಲೆ ಹಿಂದಿ ಸೇರಿ ಇತರ ಭಾಷೆಗಳ ಹೇರಿಕೆ, ಆಕ್ರಮಣಕ್ಕೆ ಖಂಡನೆ.
  • ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಆ ಯೋಜನೆಯಲ್ಲಿ ಕಸಾಪ ಸಹಯೋಗವಿರಲಿ.