“ವಿಭಿನ್ನ ದೃಷ್ಟಿಯ ಮೂಲಕ ಸೆಳೆದ ಕವಿ ದೊಡ್ಡರಂಗೇಗೌಡ”
86ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲಿ ಜರುಗಿದೆ. ಕಳೆದ ಸಮ್ಮೇಳನ ಗಳಿಗೆ ಹೋಲಿಸಿದರೆ ಈ ಬಾರಿ ಸಮ್ಮೇಳನ ಅಧ್ಯಕ್ಷರ ಭಾಷಣ ಗಮನಾರ್ಹವಾಗಿದೆ ಅನ್ನಬಹುದು.
ಕವಿಗಳು, ಸಾಹಿತಿಗಳು ಬರಹದಲ್ಲಿ ಮಾತ್ರ ಮೊ ನಚಾಗುವರು. ಆದರೆ, ಅಕ್ಷರದಲ್ಲಿ ಮಾತ್ರ, ಮೃದೂನಿ ಕುಸುಮಾದಪಿ ಎಂಬ ಅಭಿಪ್ರಾಯವಿತ್ತು.
ಈ ಬಾರಿ ಕವಿ ದೊಡ್ಡ ರಂಗೇಗೌಡರು ತಮ್ಮ ಅಧ್ಯಕ್ಷ ಭಾಷಣದಲ್ಲಿ ಸ್ವಲ್ಪ ಬದಲಾಯಿಸಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ ಕನ್ನಡ ಭಾಷೆಗೆ ಶಾಸ್ತ್ರೀಯ ಮಾನ್ಯತೆ ಇನ್ನೂ ಪರಿಪೂರ್ಣವಾಗದ ಬಗ್ಗೆ ತಮ್ಮ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಕನ್ನಡ ಪರವಾಗಿ ಹೋರಾಡಿದ ಕನ್ನಡಿಗರ ಮೇಲೆ ಹಾಕಿರುವ ಪೊಲೀಸ್ ಕೇಸ್ ಹಾಗೂ ಇತರೆ ಕ್ರಮಗಳನ್ನು ಖಂಡಿಸಿದ್ದಾರೆ.
ಕನ್ನಡಿಗರಾಗಿ ಹೋರಾಡಿದ ಕನ್ನಡಿಗರನ್ನ ಕಾರಾಗೃಹಕ್ಕೆ ತಳ್ಳುವುದು ಯಾವ ನ್ಯಾಯ? ಅಂತಃಕರಣ ತೋರಿಸಿ, ಅವರ ಮೇಲಿನ ಕೇಸುಗಳನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ವೇದಿಕೆ ಹಂಚಿಕೊಂಡಿದ್ದ ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಲ್ಲಿ ಕಳಕಳಿಯ ಮನವಿ ಕೂಡ ಮಾಡಿದ್ದಾರೆ.
ಇದುವರೆಗೂ ಯಾವ ಸಮ್ಮೇಳನಾಧ್ಯಕ್ಷರೂ ವೇದಿಕೆಯಲ್ಲೇ ಈ ಹಿರಿತನ ತೋರಿರಲಿಲ್ಲ. ಕವಿ ದೊಡ್ಡ ರಂಗೇಗೌಡರು ಕನ್ನಡದ ಮೇಲಿನ ಇನ್ನಾವುದೇ ಭಾಷೆಯ ಹೇರಿಕೆಯನ್ನು ಖಂಡಿಸಿದ್ದಾರೆ.
ಅವರ ಮಾತು ಎಷ್ಟು ಸೂಕ್ಷ್ಮವಾಗಿದೆ ಎಂದರೆ, ಭಾಷಾವಾರು ಪ್ರಾಂತ್ಯಗಳ ವಿಂಗಡನೆ ಸಂಸ್ಕೃತಿ ತಳ ಹದಿಯನ್ನು ನೋಡಲೇಬೇಕಿತ್ತು ಎಂದಿದ್ದಾರೆ.
ಭಾಷಾವಾರು ಪ್ರಾಂತ್ಯಗಳನ್ನಾಗಿ ಪುನರ್ ವಿಂಗಡನೆ ಆಗಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
86ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಹೀಗಿವೆ…
- ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ.
- ಸುಗ್ರೀವಾಜ್ಞೆ ಮೂಲಕ ಕನ್ನಡ ಸಮಗ್ರ ಭಾಷಾ ಅಭಿವೃದ್ಧಿ ವಿಧೇಯಕ ಜಾರಿ.
- ಸುಪ್ರೀಂ ಮಾರ್ಗದರ್ಶನದಂತೆ ಮಹಾಗಡಿ ವಿವಾದ ಬಗೆಹರಿಸಲು ಸೂಕ್ತ ಕ್ರಮ.
- ಕನ್ನಡ ಹೋರಾಟಗಾರರ ವಿರುದ್ಧ ದಾಖಲಾದ ಮುಖದಮೆಗಳ ವಜಾಕ್ಕೆ ಆಗ್ರಹ.
- ಕನ್ನಡ ಭಾಷೆ ಮೇಲೆ ಹಿಂದಿ ಸೇರಿ ಇತರ ಭಾಷೆಗಳ ಹೇರಿಕೆ, ಆಕ್ರಮಣಕ್ಕೆ ಖಂಡನೆ.
- ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಆ ಯೋಜನೆಯಲ್ಲಿ ಕಸಾಪ ಸಹಯೋಗವಿರಲಿ.