ಹೊಸನಗರ: ರಾಜ್ಯದಲ್ಲಿ ಅನೇಕ ಪಾದಯಾತ್ರೆಗಳ ಮೂಲಕ ಪಕ್ಷ ಕಟ್ಟಿ ಬೆಳೆಸಿದ್ದೇನೆ. ಅಂದಿನ ಹೋರಾಟದ ಫಲ ಇಂದು ಬಿಜೆಪಿ ಅಧಿಕಾರ ನಡೆಸುವಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹೇಳಿದರು.

ಹೊಸನಗರ ತಾಲೂಕಿನ ಬ್ರಹ್ಮೇಶ್ವರ ಗ್ರಾಮದಲ್ಲಿ 3 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ಅಖಿಲ ಭಾರತ ವೀರಶೈವ ಸಮಾಜದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಹೋರಾಟದ ದಿನದಲ್ಲಿ ಶಾಸಕರಾಗಿದ್ದವರು ನಾನು ಹಾಗೂ ದಕ್ಷಿಣ ಕನ್ನಡದ ವಸಂತ ಬಂಗೇರ. ಆದರೆ ಇಂದು ಹಳ್ಳಿಹಳ್ಳಿಯಲ್ಲೂ ಬಿಜೆಪಿ ಕಾರ್ಯಕರ್ತರ ಪಡೆ ಸದೃಢವಾಗಿದೆ ಎಂದು ತಮ್ಮ ಸಂತಸವನ್ನು ವ್ಯಕ್ತಪಡಿಸಿದರು.
ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶ ಕಂಡ ದಣಿವರಿಯದ ನಾಯಕರಾಗಿದ್ದು, ಅವರ ನೇತೃತ್ವದಲ್ಲಿ ನಾವೆಲ್ಲ ಕೆಲಸ ಮಾಡಬೇಕಾಗಿದೆ. ಸಮೃದ್ಧ ಭಾರತ ಕಟ್ಟಬೇಕಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗೃಹ ಸಚಿವರಾದ ಆರಗ ಜ್ಞಾನೇಂದ್ರ, ಸಾಗರ ಶಾಸಕರಾದ ಹರತಾಳು ಹಾಲಪ್ಪ, ಮಳಲಿ ಮಠದ ಶ್ರೀ ಷ.ಬ್ರ.ಡಾ. ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು, ಮೂಲೆಗದ್ದೆ ಮಠದ ಶ್ರೀ ಮ.ನಿ.ಪ್ರ. ಅಭಿನವ ಚನ್ನಬಸವ ಮಹಾಸ್ವಾಮಿಗಳು, ಸಂಸದರಾದ ಶ್ರೀ ಬಿ ವೈ ರಾಘವೇಂದ್ರ ರವರು, ಶ್ರೀ ಟಿ ಡಿ ಮೇಘರಾಜ್, ಶ್ರೀ ಎಸ್ ಎಸ್ ಜ್ಯೋತಿಪ್ರಕಾಶ್,ಶ್ರೀ ಎಸ್ ಆರ್ ಷಡಕ್ಷರಿ, ಶ್ರೀ ಚನ್ನವೀರಪ್ಪ,ಶ್ರೀ ಜಿ.ಯುವರಾಜ್, ಶ್ರೀ ಜಯಶೀಲಪ್ಪ ಗೌಡ್ರು,ಶ್ರೀ ಹಾಲಪ್ಪ ಗೌಡ್ರು,ಶ್ರೀ ಚಂದ್ರ ಮೌಳಿ, ಶ್ರೀ ಹಾಲಪ್ಪ ಚಿಕ್ಕಮಣತಿ, ಶ್ರೀಮತಿ ಅನಿತಾ ರವಿಶಂಕರ್,ಶ್ರೀ ಹೆಚ್ ಆರ್ ತೀರ್ಥೇಶ್, ಹಾಗೂ, ಮಹಾಸಭಾ ಎಲ್ಲಾ ಸದಸ್ಯರು, ಯುವ ವೇದಿಕೆಯ ಎಲ್ಲಾ ಸದಸ್ಯರು, ಮಹಿಳಾ ವೇದಿಕೆಯ ಎಲ್ಲಾ ಸದಸ್ಯರು, ವೀರಭದ್ರೇಶ್ವರ ದೇವನ ಸ್ಥಾನ ಸಮಿತಿಯ ಎಲ್ಲಾ ಸದಸ್ಯರು, ಇನ್ನೂ ಮುಂತಾದ ಗಣ್ಯರು ಉಪಸ್ಥಿತರಿದ್ದರು