Wednesday, April 1, 2026
Wednesday, April 1, 2026
Home Blog Page 1338

ಜನವರಿ 31 ರೊಳಗೆ ಶಿವಮೊಗ್ಗ ಹೇಗಿರಬೇಕು? ಲೇಖನ ಸಲ್ಲಿಸಿ- ಎನ್.ಗೋಪಿನಾಥ್

0

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಶಿವಮೊಗ್ಗ ವಿಷನ್ 2050 ಡಾಕ್ಯುಮೆಂಟ್ ತರಲು ಉದ್ದೇಶವಿದೆ. 2050 ರಲ್ಲಿ ಶಿವಮೊಗ್ಗ ಹೇಗಿರಬೇಕು ಎಂಬ ಕಲ್ಪನೆಯೊಂದಿಗೆ ಕನಸಿನ ಅಮೂರ್ತ ರೂಪಕ್ಕೆ ಮೂರ್ತರೂಪ ಕೊಟ್ಟು ಯೋಜನೆ ರೂಪಿಸಿ, ಕಾರ್ಯಗತಗೊಳಿಸಿ, ನಮ್ಮ ಶಿವಮೊಗ್ಗವನ್ನು ಮಾದರಿ ಶಿವಮೊಗ್ಗವನ್ನಾಗಿ ರೂಪಿಸುವ ಉದ್ದೇಶ. ಈಗಿನ ಶಿವಮೊಗ್ಗ ನಗರದ ಜನಸಂಖ್ಯೆ ಸುಮಾರು ನಾಲ್ಕು ಲಕ್ಷ ಗಳಾಗಿದೆ. 2050 ರಲ್ಲಿ ಹಿಂದಿನ ಅಂಕಿ ಅಂಶದಂತೆ ಅಂದಾಜು 9 ಲಕ್ಷ ಆಗುವ ಸಾಧ್ಯತೆ ಇದೆ. ಆದ್ದರಿಂದ, ಅಂದಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವ ದೃಷ್ಟಿಯಿಂದ ಈಗಲೇ ಅದಕ್ಕೆ ಯೋಜನೆ ರೂಪಿಸುವ ಅವಶ್ಯಕತೆ ಇದೆ. ಮುಖ್ಯವಾಗಿ ಶಿಕ್ಷಣ ಆರೋಗ್ಯ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಒತ್ತು ನೀಡಿ ಬೆಳೆಸುವ ಯೋಜನೆಗಳು ರೂಪಗೊಳ್ಳಬೇಕಾಗಿದೆ .ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿವೆ. ಜಿಲ್ಲೆ ಪ್ರಧಾನವಾಗಿ ಕೃಷಿ ಆಧಾರಿತ ಜಿಲ್ಲೆಯಾಗಿದ್ದು ಕೃಷಿಗೆ ಪೂರಕವಾದಂತ ಕೈಗಾರಿಕಾಗಳನ್ನು ಸ್ಥಾಪಿಸಿ ರೈತರು ಬೆಳೆದ ಬೆಳಗ್ಗೆ ಮೌಲ್ಯವನ್ನು ತಂದುಕೊಡಬೇಕಾದ ಅವಶ್ಯಕತೆ ಇದೆ.

ಎಲ್ಲಾ ರಂಗಗಳ ಸರ್ವೋ ತಮ ಅಭಿವೃದ್ಧಿಗೆ ಯೋಚಿಸಿ ,ಯೋಜನೆ ರೂಪಿಸಿ, ಕಾರ್ಯಕರ್ತಗೊಳಿಸಿದಲ್ಲಿ ಶಿವಮೊಗ್ಗ ಜಿಲ್ಲೆ ಮಾದರಿ ಜಿಲ್ಲೆಯಾಗಿ ಅಭಿವೃದ್ಧಿ ಹೊಂದುತ್ತದೆ. ಶಿಕ್ಷಣ ರಂಗದಲ್ಲಿ ಹಲವಾರು ವಿದ್ಯಾ ಸಂಸ್ಥೆಗಳು ಕೆಲಸ ಮಾಡುತ್ತಿದೆ.

ಶಿವಮೊಗ್ಗವನ್ನು ಎಲ್ಲಾ ರೀತಿಯ ಶಿಕ್ಷಣ ಸಿಗುವ ಜಿಲ್ಲೆ ಮಾಡಬೇಕಾಗಿದೆ. ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಈಗಾಗಲೇ ಶಿವಮೊಗ್ಗ ಹೆಲ್ತ್ ಬ್ ಆಗಿ ರೂಪಗೊಳ್ಳುತ್ತಿದ್ದ, ಅದನ್ನು ಭದ್ರ ಬುನಾದಿಯ ಮೇಲೆ ಬೆಳೆಸಬೇಕಾದ ಅವಶ್ಯಕತೆ ಇದೆ.

ಜೊತೆಗೆ ಆಯುಷ್ ವಿಶ್ವವಿದ್ಯಾ ನಿಲಯ ಪ್ರಾರಂಭವಾಗುತ್ತಿದೆ. ಆರೋಗ್ಯ ಪುನಃ ಚೇತನ ಗೊಳಿಸುವ ಆರೋಗ್ಯ ದಾಮಗಳನ್ನು ಪ್ರಾರಂಭಿಸಬಹುದಾಗಿದೆ. ಕೈಗಾರಿಕಾ ರಂಗದಲ್ಲಿ ಪೌಂಡರಿ ಕ್ಷೇತ್ರ ಹೆಸರುಗಳಿಸಿದೆ. ಜೊತೆಗೆ ಸೆಮಿಕಂಡಕ್ಟರ್, ಟೆಕ್ಸ್ಟೈಲ್ ಮುಂತಾದ ಕೈಗಾರಿಗಳನ್ನು ಪ್ರಾರಂಭಿಸಬಹುದಾಗಿದೆ.

ಶಿವಮೊಗ್ಗ ಜಿಲ್ಲೆ 3 ರಾಷ್ಟ್ರೀಯ ಹೆದ್ದಾರಿ, ಒಳ್ಳೆಯ ರೈಲು ಸೌಲಭ್ಯ ಹಾಗೂ ವಾಯು ಯಾನ ಸೌಲಭ್ಯ ವಿದೆ. ಅಭಿವೃದ್ಧಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಪಡೆದುಕೊಂಡಿದೆ. ಶಿವಮೊಗ್ಗದ ಪ್ರತಿಯೊಬ್ಬ ನಾಗರೀಕನು ಯಾವುದಾದರೂ ಒಂದು ಕೌಶಲ್ಯನನ್ನು ಪಡೆದಿರಬೇಕೆಂಬುದು ನಮ್ಮ ಆಶಯ ಹಾಗಾಗಿ ಸುಸಜ್ಜಿತ ಹೊಸ ತಂತ್ರಜ್ಞಾನದೊಂದಿಗೆ ಕೌಶಲ್ಯ ಕೇಂದ್ರವನ್ನು ಪ್ರಾರಂಭಿಸುವ ಉದ್ದೇಶ ನಮ್ಮ ಸಂಸ್ಥೆಯದು. ಶಿವಮೊಗ್ಗದ ಪ್ರತಿಯೊಬ್ಬ ನಾಗರೀಕರಿಗೂ ಪ್ರಯೋಜನ ವಾಗುವ ರೀತಿಯಲ್ಲಿ ಯೋಜನೆ ರೂಪಿಸಿ ಜಾರಿಗೆ ತರುವ ದೃಷ್ಟಿಯಿಂದ ವಿಷನ್ ಡಾಕ್ಯುಮೆಂಟ್ ತಯಾರಿಸಲಾಗುತ್ತಿದೆ. ಶಿವಮೊಗ್ಗದ ನಾಗರಿಕರು ತಮ್ಮ ಕಲ್ಪನೆಯ ಶಿವಮೊಗ್ಗದ ಬಗ್ಗೆ ಕನಸು ಕಂಡು, ಯೋಜನೆಗಳ ಮುಖಾಂತರ ಸಾಕಾರಗೊಳಿಸುವ ಯೋಜನೆಗಳನ್ನು ನಮ್ಮೊಡನೆ ಹಂಚಿಕೊಳ್ಳಬೇಕಾಗಿ ವಿನಂತಿಸಿಕೊಳ್ಳುತ್ತೇವೆ.

ಬಿಜೆಪಿ ಬೂತ್ ವಿಜಯ್ ಅಭಿಯಾನದ ಬಗ್ಗೆ ಜಿಲ್ಲಾ ಕಾಂಗ್ರೆಸ್ ವಕ್ತಾರ ಚಂದ್ರಕಾತ್ ಪ್ರತಿಕ್ರಿಯೆ

0

ಶಿಕಾರಿಪುರ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಮುಖ್ಯಮಂತ್ರಿಆಗಿದ್ದಾಗತಾನೇ ಮುಂದಿನ 20 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿರುತ್ತೇನೆ ಎನ್ನುತ್ತಿದ್ದರು.

ಆದರೆ, ಮುಂದೆ ಏನಾಯಿತು ಎನ್ನುವ ಬಗ್ಗೆ ಬಿ.ಎಸ್‌ಯಡಿಯೂರಪ್ಪನವರೇ ನೆನಪು ಮಾಡಿಕೊಳ್ಳಬೇಕೆಂದು ಜಿಲ್ಲಾಕಾಂಗ್ರೇಸ್ ವಕ್ತಾರರಾದ ವೈ.ಬಿ.ಚಂದ್ರಕಾಂತ್ ಅವರು ಪ್ರಶ್ನಿಸಿದ್ದಾರೆ.

ಶಿಕಾರಿಪುರದಲ್ಲಿ ನಡೆದ ವಿಜಯಅಭಿಯಾನಕಾರ್ಯಕ್ರಮದಲ್ಲಿ ಮುಂದಿನ ಚುನಾವಣೆಯಲ್ಲಿ 150 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಭಾರತೀಯಜನತಾ ಪಕ್ಷಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದು, ಅವರು ಹೇಳಿರುವ ಭವಿಷ್ಯತಾವು ಮುಖ್ಯಮಂತ್ರಿಆಗಿದ್ದಾಗ ಮುಂದಿನ 20 ವರ್ಷಗಳ ಕಾಲ ನಾನೇ ಮುಂಖ್ಯಮಂತ್ರಿ ಎಂದು ಹೇಳುತ್ತಿದ್ದಂತೆ ಇದೆ.

ಆದರೆ, ಬಿ.ಜೆ.ಪಿ ವರಿಷ್ಠರಕಟ್ಟಾಜ್ಞೆಯ ಮೇರೆಗೆ ಮುಖ್ಯಮಂತ್ರಿ ಸ್ಥಾನದಿಂದ ಇಳಿದಾಗ ಕಣ್ಣೀರಧಾರೆ ಹರಿಸಿದ್ದವರು.

ಈಗ ಇದೇಯಡಿಯೂರಪ್ಪರವರು 150 ಸ್ಥಾನಗಳನ್ನು ಭಾರತೀಯಜನತಾ ಪಕ್ಷಗೆಲ್ಲಲಿದೆಎಂದು ಹೇಳಿರುವುದು ಒಂದೇಆಗಲಿದೆ ಎಂದು ವೈ.ಬಿ.ಚಂದ್ರಕಾಂತ್ ಅವರು ಲೇವಡಿ ಮಾಡಿದ್ದಾರೆ.

ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ದೇಶದಜನರತಲೆಯ ಮೇಲೆ ಶೋಷಣೆಯರೀತಿಯಲ್ಲಿ ಮಿತಿಮೀರಿದತರಿಗೆಯನ್ನು ವಿಧಿಸಿದೆ. ಇಂತಹತೆರಿಗೆಯ ಹಣದಲ್ಲಿ ಶೇ.40ರಷ್ಟು ಮಾತ್ರಅಭಿವೃದ್ದಿ ಕಾರ್ಯಗಳು ನಡೆದಿವೆ.

ಹೀಗಿರುವಾಗ ರಾಜ್ಯದ ಜನರು ಮುಂದಿನ ವಿಧಾನಸಭಾಚುನಾವಣೆಯಲ್ಲಿ 150 ಸ್ಥಾನಗಳಲ್ಲಿ ಬಿ.ಜೆ.ಪಿ ಅಭ್ಯರ್ಥಿಗಳನ್ನು ಹೇಗೆ ತಾನೆಗೆಲ್ಲಿಸಲು ಸಾಧ್ಯ.ರಾಜ್ಯದಲ್ಲಿ 150 ಸ್ಥಾನಗಳಲ್ಲಿ ಬಿ.ಜೆ.ಪಿ.ಗೆಲುವು ಕಾಣಲಿದೆ. ತಮ್ಮ ಪಕ್ಷದ ಸರ್ಕಾರವೇ ಪುನಃ ಆಡಳಿತಕ್ಕೆ ಬರಲಿದೆ ಎಂದು ಭಾವಿಸಿರುವುದು ಬಿ.ಜೆ.ಪಿ.ಪಾಲಿಗೆ ತಿರುಕನಕನಸಾಗಲಿದೆ ಎಂದು ವಕ್ತಾರರಾದ ವೈ.ಬಿ.ಚಂದ್ರಕಾಂತ್ ತಿರುಗೇಟು ನೀಡಿದ್ದಾರೆ.

ಹಿಂದೆ ಯಡಿಯೂರಪ್ಪರವರು ಬಿ.ಜೆ.ಪಿ.ತೊರೆದುಕೆ.ಜೆ.ಪಿ. ಸ್ಥಾಪಿಸಿದಾಗ ಯಡಿಯೂರಪ್ಪರವರನ್ನು ಕೊಳೆತ ನದಿಗೆ ಹೋಲಿಸಿದ್ದರು. ಬಿ.ಎಸ್.ವೈ ಬಿ.ಜೆ.ಪಿ ತೊರೆದಿರುವುದು ಗಂಗಾ ನದಿ ಪವಿತ್ರವಾದಂತೆ ಆಗಿದೆ ಎಂದಿದ್ದ ಮಾಜಿ ಸಚಿವೆ ಎಸ್. ಈಶ್ವರಪ್ಪನವರು ಈಗ ತಮಗೆ ವಿಧಾನಸಭಾಟಿಕೆಟ್ ಪಡೆಯುವ ಏಕೈಕ ಉದ್ದೇಶದಿಂದ ಬಿ.ಎಸ್.ಯಡಿಯೂರಪ್ಪರವರನ್ನು ಹಾಡಿ ಹೊಗಳುತ್ತಿದ್ದಾರೆ ಎಂದು ವೈ.ಬಿ.ಚಂದ್ರಕಾಂತ್ ಅವರು ಹೇಳಿದ್ದಾರೆ.

ಕೂಡಿ ಬಾಳು ಹಂಚಿ ತಿನ್ನು ಇದು ಭಾರತೀಯ ಸಂಸ್ಕೃತಿ- ಎಚ್.ಬಿ.ಮಂಜುನಾಥ್

0

ದಾವಣಗೆರೆ: ತರ,ತಮ, ಉಚ್ಚ, ನೀಚ, ಬಡವ, ಬಲ್ಲಿದ ಎಂಬ ಭೇದವಿಲ್ಲದೆ ಕೂಡಿ ಬಾಳುವುದು ಹಾಗೂ ಹಂಚಿ ತಿನ್ನುವುದು ಇವು ನಮ್ಮ ಭಾರತೀಯ ಸಂಸ್ಕೃತಿಯ ಮೂಲ ತತ್ವವಾಗಿದ್ದು ಸಾಮೂಹಿಕವಾಗಿ ಆಚರಿಸುವ ಧಾರ್ಮಿಕ ಕಾರ್ಯಕ್ರಮಗಳು ಇದಕ್ಕೆ ಪೂರಕವಾಗಿವೆ ಎಂದು ಕಿರಿಯ ಪತ್ರಕರ್ತ ಎಚ್. ಬಿ. ಮಂಜುನಾಥ್ ಅಭಿಪ್ರಾಯ ಪಟ್ಟರು.

ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ದೇವನಗರಿ ತಾಲ್ಲೂಕು ಹಾಗು ಕುಕ್ಕುವಾಡ ಮತ್ತು ಕೈದಾಳೆ ವಲಯಗಳ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಆಶ್ರಯದಲ್ಲಿ ಕುಕ್ಕವಾಡದ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನ ಆವರಣದಲ್ಲಿ ಏರ್ಪಾಡಾಗಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜಾ ಕಾರ್ಯಕ್ರಮದ ಧಾರ್ಮಿಕ ಸಭೆಯ ಪ್ರಧಾನ ಉಪನ್ಯಾಸಕರಾಗಿ ಮಾತನಾಡುತ್ತಾ ಸತ್ಕಾರ್ಯಗಳಲ್ಲಿ ಶ್ರದ್ಧೆ ಹಾಗೂ ಪ್ರತಿಫಲ ಅಪೇಕ್ಷೆ ಇಲ್ಲದ ಭಗವದ್ಭಕ್ತಿ ಇವು ಎರಡು ಆಧ್ಯಾತ್ಮಿಕ ಕಾರ್ಯಗಳಲ್ಲಿ ಅತ್ಯವಶ್ಯವಾಗಿದ್ದು ಸಾಮೂಹಿಕವಾಗಿ ಮಾಡುವ ಇಂತಹ ಕಾರ್ಯಕ್ರಮಗಳಿಂದ ನೂರಾರು ಮನಸ್ಸುಗಳು ಒಂದಾಗಿ “ನಾನು” ಎನ್ನುವ ಅಹಂ ಭಾವ ದೂರಾಗಿ “ನಾವು” ಎನ್ನುವ ಹೃದಯ ವೈಶಾಲ್ಯ ಸಾಕಾರವಾಗುತ್ತದೆ, ಭಾರತದ ಅಭಿವೃದ್ಧಿಯು ಗ್ರಾಮೀಣಾಭಿವೃದ್ಧಿಯನ್ನು ಅವಲಂಬಿಸಿದ್ದು ಗ್ರಾಮಗಳಲ್ಲಿನ ಸಾಮಾಜಿಕ ಸಾಮರಸ್ಯಕ್ಕೆ ಸಾಮೂಹಿಕವಾದ ಶ್ರದ್ಧಾ ಕಾರ್ಯಗಳು ಅವಶ್ಯಕ ಎಂದು ಅಭಿಪ್ರಾಯ ಪಟ್ಟ ಎಚ್. ಬಿ. ಮಂಜುನಾಥ್ ಸ್ತ್ರೀಯರಲ್ಲಿ ಧಾರಣ ಶಕ್ತಿಯು ಪುರುಷರಿಗಿಂತ ಅಧಿಕವಾಗಿದ್ದು ಮಹಿಳೆಯರ ಚಿಂತನೆಗಳನ್ನು ಉಪೇಕ್ಷಿಸದೆ ಸಮಾನ ಅವಕಾಶಗಳನ್ನು ಒದಗಿಸಿದಲ್ಲಿ ಕೇವಲ ಕೌಟುಂಬಿಕ ಅಭಿವೃದ್ಧಿ ಅಷ್ಟೇ ಅಲ್ಲ ನಿಜವಾದ ಸಾಮಾಜಿಕ ಅಭಿವೃದ್ಧಿಯೂ ಸಾಧ್ಯ ಎಂದರು. ಕಾರ್ಯಕ್ರಮ ಉದ್ಘಾಟಿಸಿ ಪ್ರಾಸ್ತಾವಿಕ ನುಡಿಗಳನ್ಡಾಡಿದ ಸಂಸ್ಥೆಯ ಯೋಜನಾಧಿಕಾರಿ ಬಾಬುರವರು ಹೃದಯ ಶ್ರೀಮಂತಿಕೆ ಇದ್ದಲ್ಲಿ ಎಲ್ಲ ಕಾರ್ಯಗಳೂ ಯಶಸ್ವಿಯಾಗುತ್ತವೆ, ಶ್ರದ್ಧೆ ಮತ್ತು ಭಕ್ತಿ ಇರುವವರ ಸಂಕಲ್ಪಗಳನ್ನು ಭಗವಂತ ಈಡೇರಿಸುತ್ತಾನೆ, ಆರ್ಥಿಕ ಭದ್ರತೆ, ಸ್ವಾವಲಂಬನೆ ಮೂಲಕ ವ್ಯಕ್ತಿ, ಕುಟುಂಬ ಮತ್ತು ಗ್ರಾಮಗಳ ಅಭಿವೃದ್ಧಿಯು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ಉದ್ದೇಶವಾಗಿದೆ ಎಂದರು.

ಕುಕವಾಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಕೆ. ವೈ.ಮಂಜುಳಾರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದಾವಣಗೆರೆ ಬೆಸ್ಕಾಂನ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಸುಧೀರ್ ಕುಮಾರ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಲಕ್ಷ್ಮಿ ದೇವಿ, ಕುಕ್ಕುವಾಡ ಗ್ರಾಮದ ಗಣ್ಯರಾದ ಡಿ. ಮಲ್ಲೇಶಪ್ಪ, ಜಿ.ಎಂ.ರುದ್ರೇಗೌಡ, ಕೆ. ಟಿ. ಮಹಾಂತಪ್ಪ, ಒಕ್ಕೂಟದ ಅಧ್ಯಕ್ಷೆ ಎ. ಪಿ. ಲತಾ ಮುಂತಾದವರು ಮಾತುಗಳ ನಾಡಿದರು. ಉಪನ್ಯಾಸಕರಾದ ಕೆ. ಎಂ. ಕುಮಾರಸ್ವಾಮಿ, ಜಿಲ್ಲಾ ಜನಾಜಾಗ್ರತಿ ವೇದಿಕೆ ಸದಸ್ಯರಾದ ಮಲ್ಲಿಕಾರ್ಜುನ ವೈ.ಟಿ ವೈದ್ಯರಾದ ಪರಮಶಿವಯ್ಯ, ಆನಂದಪ್ಪ, ಶಂಕರ್ ಮಹಾದೇವಪ್ಪ, ಕೈದಾಳೆ ಮಲ್ಲಿಕಾರ್ಜುನಪ್ಪ, ನಾಗರಾಜ್, ಕಾಂತೇಶ್, ರೂಪ ಮುಂತಾದವರು ಉಪಸ್ಥಿತರಿದ್ದ ಕಾರ್ಯಕ್ರಮದ ನಿರೂಪಣೆಯನ್ನು ಭರತ್ ಮಾಡಿದರೆ ಪ್ರಾರ್ಥನೆಯನ್ನು ಅನಿತಾ ಹಾಡಿದರು, ಶಿಕ್ಷಕ ವೀರೇಶ್ ಸ್ವಾಗತ ಕೋರಿದರು, 350ಕ್ಕೂ ಹೆಚ್ಚು ಸ್ತ್ರೀ ಪುರುಷರು ಸಾಮೂಹಿಕ ಸತ್ಯನಾರಾಯಣ ಪೂಜೆಯನ್ನು ನೆರವೇರಿಸಿದರೆ ಗ್ರಾಮದ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.

ಶಿವಮೊಗ್ಗದಲ್ಲಿ ಶ್ರೀಬಾಲ ಗಂಗಾಧರನಾಥ ಸ್ವಾಮೀಜಿ ಸಂಸ್ಮರಣಾ ಮಹೋತ್ಸವ

0

ಶಿವಮೊಗ್ಗ: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ 71ನೇ ಪೀಠಾಧ್ಯಕ್ಷರಾಗಿ ಸಿದ್ಧ ಸಿಂಹಾಸನಾರೋಹಣ ಮಾಡಿದಂತಹ ಪರಮಪೂಜ್ಯ ಯುಗ ಯೋಗಿ ಜಗದ್ಗುರು ಪದ್ಮಭೂಷಣ ಶ್ರೀ ಶ್ರೀ ಶ್ರೀ ಡಾ.ಬಾಲಗಂಗಾಧರನಾಥ ಮಹಾ ಸ್ವಾಮಿಗಳವರು ಜನಸಾಮಾನ್ಯರ ಉದ್ಧಾರಕ್ಕಾಗಿ ಅನ್ನ, ಅಕ್ಷರ, ಆರೋಗ್ಯ, ಆಶ್ರಯ, ಆಕಳು, ಪರಿಸರ ಮುಂತಾದ ಕ್ಷೇತ್ರಗಳಲ್ಲಿ ಆಂದೋಲನವನ್ನೇ ಮಾಡಿದರು. ಶೈಕ್ಷಣಿಕ, ಧಾರ್ಮಿಕ ಹಾಗೂ ಸಮಾಜ ಕ್ಷೇತ್ರದಲ್ಲಿ ಅಪಾರ ಸೇವೆಯನ್ನು ಸಲ್ಲಿಸಿದ್ದಾರೆ.

ಪರಮ ಪೂಜ್ಯರ ಅವಿಶ್ರಾಂತ ಕಾಯಕದ ಫಲವಾಗಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಅಡಿಯಲ್ಲಿ 475 ಕ್ಕೂ ಹೆಚ್ಚಿನ ವಿದ್ಯಾಸಂಸ್ಥೆಗಳು ಸ್ಥಾಪನೆಗೊಂಡಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಒಂದು ಲಕ್ಷದ ಹತ್ತು ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪೂರ್ವ ಪ್ರಾಥಮಿಕ ಶಾಲೆಯಿಂದ ಸಂಸ್ಕೃತ ವೇದಾಗಮ ಹಾಗೂ ತಾಂತ್ರಿಕ, ವೈದ್ಯಕೀಯ ವಿಜ್ಞಾನದ ವರಗೆ ಯಾವುದೇ ಜಾತಿ, ಮತ, ಲಿಂಗ ಭೇದ ವಿಲ್ಲದೆ ವ್ಯಾಸಂಗ ಮಾಡುತ್ತಿದ್ದಾರೆ. ಶ್ರೀ ಮಠದ ವತಿಯಿಂದ ವಿವಿಧ ಕಾರ್ಯಕ್ರಮಗಳು ಜನವರಿ 12 ರಿಂದ 18ರ ವರೆಗೆ 10ನೇ ಸಂಸ್ಮರಣಾ ಮಹೋತ್ಸವ ನಡೆಯಲಿದೆ.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಜಗದ್ಗುರು ಶ್ರೀಶ್ರೀಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ವಹಿಸಲಿದೆ.

ಜ. 12 ರಂದು ರೈತರ ಸಮಾವೇಶ,13 ರಂದು ಹೋಮ, ಹವನಾದಿ ಧಾರ್ಮಿಕ ಕಾರ್ಯಕ್ರಮ,14 ರಂದು ಹಿರಿಯ ವಿದ್ಯಾರ್ಥಿಗಳ ವೇದಿಕೆ ಸಮಾರಂಭ,15 ರಂದು ಮಕ್ಕಳ ಸಾಹಿತ್ಯ ಸಮ್ಮೇಳನ,16 ರಂದು ಕುವೆಂಪು ಸಾಹಿತ್ಯ ದರ್ಶನ, 17 ರಂದು ರಾಜ್ಯಮಟ್ಟದ ಚುಂಚಾದ್ರಿ ಮಹಿಳಾ ಸಮಾವೇಶ, ಹಾಗೂ 18 ರಂದು ಜಯಂತ್ಯುತ್ಸವ ಹಾಗೂ ಸಂತ ಭಕ್ತ – ಸಂಗಮ ನಡೆಯಲಿದೆ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಂಭಾಪುರಿ ಶ್ರೀ ವೀರಸೋಮೇಶ್ವರಜಗದ್ಗುರುಗಳ 68 ನೇ ಜನ್ಮದಿನೋತ್ಸವ

0

ಮೂಡಿಗೆರೆ: ಮನಸ್ಸಿಗೆ ಶಾಂತಿ ನೀಡುವ ಸಂಪತ್ತನ್ನು ಪಡೆಯಲು ನಾಗರೀಕರು ಧರ್ಮದ ದಾರಿಯಲ್ಲಿ ಮುನ್ನೆಡೆದು ಸಾಗಿದ್ದಲ್ಲಿ ಮಾತ್ರ ಲಭಿಸಲಿದೆ ಎಂದು ಶ್ರೀ ರೇಣುಕಾ ಚಾರ್ಯ ಟ್ರಸ್ಟ್ ನ ಸದಸ್ಯ ಬಿ.ಬಿ.ರೇಣುಚಾರ್ಯ ಅವರು ಹೇಳಿದರು.

ಮೂಡಿಗೆರೆ ಪಟ್ಟಣದ ಅವಿನ್ ಸ್ವರಸಂಗಮ ಸ್ಟುಡಿಯೋ, ಪುಷ್ಪಗಿರಿ ಸಾಂಸ್ಕತಿಕ ಪ್ರತಿಷ್ಠಾನ (ರಿ), ಅವಿನ್ ಟಿವಿ ಸಹಯೋಗದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಶಿವಾಚಾರ್ಯ ಜಗದ್ಗುರು ಗಳ 68ನೇ ಜನ್ಮದಿನೋತ್ಸವ ಪ್ರಯುಕ್ತ ಸಂಗೀತ ಸೌರಭ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾಡು ಕಂಡ ಪೂಜ್ಯ ರಂಭಾಪುರಿ ಶ್ರೀ ಗಳು ನಾಡಿನೆಲ್ಲೆಡೆ ಧರ್ಮ ಉಳಿಯುವಿಕೆಗಾಗಿ ಶಾಂತಿ, ಸಮೃದ್ಧಿ ಸರ್ವರಿಗೂ ಲಭಿಸಲು, ಸಾಹಿತ್ಯ ಸಾಂಸ್ಕತಿಕ ಸಂವರ್ಧಿಸಲಿ ಎಂಬ ಆಶಯದೊಂದಿಗೆ ದೇಶದೆಲ್ಲೆಡೆ ನಿರಂತರವಾಗಿ ಸಂಚರಿಸಿ ವೀರಶೈವ ಧರ್ಮದ ಬಗ್ಗೆ ತಿಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಸಂಸ್ಥಾಪಕ ಡಾ.ಮೋಹನ್ ರಾಜಣ್ಣ ಮಾತನಾಡಿ ರಂಭಾಪುರಿ ಶ್ರೀ ಗಳು ರೇಣುಕಾಧಿ ಪಂಚಾಚಾರ್ಯರು, ಬಸವಾದಿ ಶಿವಶರಣರ ತತ್ವ ಆದರ್ಶಗಳನ್ನು ಎಲ್ಲೆಡೆ ಪಸರಿಸುತ್ತಾ ಧರ್ಮ ಸಾಂಸ್ಕೃತಿಕ ಆಚರಣೆ ಉಳಿಸುವ ಮೂಲಕ ಆರೋಗ್ಯಯುತ ಸಮಾಜ ನಿರ್ಮಾಣ ಮಾಡುವ ಉದ್ದೇಶದಿಂದ ಕಾರ್ಯೋನ್ನಮ್ಮಖರಾಗಿದ್ದಾರೆ ಎಂದರು.

ಅವಿನ್ ಟಿವಿ ಯ ವ್ಯವಸ್ಥಾಪಕ ಮಗ್ಗಲಮಕ್ಕಿ ಗಣೇಶ್ ಮಾತನಾಡಿ, ಎಲ್ಲಾ ಜಾತಿಯವರಿಗೂ ಸಂಸ್ಕಾರ ಕೊಡುವ ಧರ್ಮ ಎಂದರೆ ಅದು ವೀರಶೈವ ಧರ್ಮ. ಅಂತಹ ಧರ್ಮದ ಮೂಲಕ ಸಂಸ್ಕಾರ ಕೊಡುವ ಕೆಲಸ ಜಗದ್ಗುರು ಮಾಡುತ್ತಿದ್ದಾರೆ. ಅವರು ಶತಾಯುಷಿಗಳಾಗಿ ಬಾಳಲಿ ಎಂದು ಪ್ರಾರ್ಥಿಸಿದರು.

ಇದೇ ಸಂದರ್ಭದಲ್ಲಿ, ಸಂಗೀತ ಸೌರಭ ಕಾರ್ಯಕ್ರಮವನ್ನು ಬಕ್ಕಿ ಮಂಜುನಾಥ್ ಸುಚಿತ್ರಪ್ರಸನ್ನ, ಅಶ್ವಿನಿ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಮಹಾಸಭಾ ನಿರ್ದೇಶಕ ಹೆಚ್.ಆರ್ ಕಾಂತರಾಜ್, ಸಿದ್ದಾರ್ಥ, ವಸಂತ್ ಹಾರ್ಗೋಡ್, ಮಹಮ್ಮದ್ ಸಿದ್ದಿಕ್ ಮುಂತಾದವರು ಇದ್ದರು.

ಮನಸ್ಸಿನಿಂದ ಮನಸ್ಸಿಗೆ – 11

0

ಖ್ಯಾತ ಶೇರ್ ಬ್ರೋಕರ್ ರಾಕೇಶ್ ಜುಂಜುನ್ ವಾಲಾ ಬಡತನದಲ್ಲಿ ಬೆಳೆದು ಕೊನೆಗೆ ಸಾವಿನ ಸಮಯದಲ್ಲಿ ಸುಮಾರು ‌40 ಸಾವಿರ ಕೋಟಿಯಷ್ಟು ಹಣವನ್ನು ಸಂಪಾದಿಸುತ್ತಾನೆ. ಬಹುತೇಕ ಎಲ್ಲರೂ ಆತನನ್ನು ಒಬ್ಬ ಯಶಸ್ವಿ ಉದ್ಯಮಿ ಎಂದೇ ಕರೆಯುತ್ತಾರೆ ಮತ್ತು ಒಪ್ಪಿಕೊಳ್ಳುತ್ತಾರೆ.
ಆದರೆ ಮದ್ಯ ವಯಸ್ಸಿನಲ್ಲಿಯೇ ಅನಾರೋಗ್ಯಕ್ಕೆ ತುತ್ತಾಗುವ ಆತ ಆ ಒತ್ತಡದ ಕಾರಣದಿಂದ ನಾನೊಬ್ಬ ವಿಫಲ ವ್ಯಕ್ತಿ ಎಂದೇ ತನ್ನನ್ನು ಭಾವಿಸುತ್ತಾನೆ ಎಂಬ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ……….

62 ನೆಯ ವಯಸ್ಸಿನಲ್ಲಿ ಆತ ದೀರ್ಘಕಾಲದ ಅನಾರೋಗ್ಯದಿಂದ ಇಹಲೋಕ ತ್ಯಜಿಸುತ್ತಾನೆ.

ಹಾಗಾದರೆ ಬದುಕಿನ ನೆಮ್ಮದಿಯ ಇನ್ನೊಂದು ಮುಖವನ್ನು ಕುರಿತು ಯೋಚಿಸಿದಾಗ……

ಕೂಲಿಕಾರರೊಬ್ಬರ ಬದುಕಿನ ಆತ್ಮಕಥನ…….

” ಇಂದಿಗೆ ಸರಿಯಾಗಿ ನಾನು ಕೂಲಿ ಕೆಲಸ ಮಾಡಲು ಆರಂಭಿಸಿ 70 ವರ್ಷವಾಯಿತು.

7 ನೇ ವಯಸ್ಸಿನಲ್ಲಿ ಪ್ರಾರಂಭವಾದ ನನ್ನ ಕೂಲಿ ಕೆಲಸ ಈಗಿನ ನನ್ನ 77 ನೆಯ ಈ ವಯಸ್ಸಿನಲ್ಲೂ ನಿರಂತರವಾಗಿ ನಡೆಯುತ್ತಿದೆ…………….

ಕೂಲಿ ಎಂದರೆ ಪೇಟೆ ಅಂಗಡಿಗಳಲ್ಲಿ ತರಕಾರಿ ಮೂಟೆ ಹೊರುವುದು. ಲಾರಿಗಳಿಗೆ ಮೂಟೆ ತುಂಬಿಸುವುದು ಮತ್ತು ಇಳಿಸುವುದು.

ಈಗಿನ ಹುಡುಗರಿಗೆ ತುಂಬಾ ಆಶ್ಚರ್ಯವಾಗಬಹುದು ಅಥವಾ ಕೆಲವರು ನಂಬದೇ ಇರಬಹುದು.
ಇಲ್ಲಿಯವರೆಗೂ ನಾನು ಒಮ್ಮೆಯೂ ಯಾವುದೇ ಗಾಯ ಅಥವಾ ಖಾಯಿಲೆಯಿಂದ ಆಸ್ಪತ್ರೆಗೆ ಹೋಗಿಲ್ಲ. 65 ನೆಯ ವಯಸ್ಸಿನಲ್ಲಿ ಒಮ್ಮೆ ಹೊಟ್ಟೆ ನೋವು ಮತ್ತು 73 ನೆಯ ವಯಸ್ಸಿನಲ್ಲಿ ಹಲ್ಲು ನೋವು ಬಂದಾಗ ಔಷಧಿ ಅಂಗಡಿಯಿಂದ ಎರಡೆರಡು ಮಾತ್ರೆ ತೆಗೆದುಕೊಂಡಿದ್ದು ಬಿಟ್ಟರೆ ಆ ಕಡೆ ತಲೆಯೇ ಹಾಕಿಲ್ಲ.

ನನಗೆ 6 ಜನ ಮಕ್ಕಳು. 4 ಗಂಡು 2 ಹೆಣ್ಣು. ನನ್ನಾಕೆಯ ಎಲ್ಲಾ ಹೆರಿಗೆಗಳು ಸಹಜವಾಗಿ ಮತ್ತು ಮನೆಯಲ್ಲಿಯೇ ಆಗಿದೆ.

2 ದಿನಕ್ಕೆ ಒಮ್ಮೆ ಹಲ್ಲುಜ್ಜುವ ನನ್ನ ಎಲ್ಲಾ ಹಲ್ಲುಗಳು ಈಗಲೂ ಕಬ್ಬನ್ನು ಕಚ್ಚಿ ತಿನ್ನುವಷ್ಟು ಗಟ್ಟಿಯಾಗಿಯೇ ಇದೆ.

ಈಗಲೂ ತಲೆಯಲ್ಲಿ ದಟ್ಟ ಕೂದಲಿದೆ. ತಿಂಗಳಿಗೊಮ್ಮೆ ಕಟಿಂಗ್ ಮಾಡಿಸಿದರೂ ಕೂದಲು ಸೊಂಪಾಗಿ ಬೆಳೆಯುತ್ತದೆ. ನಾನು ವಾರಕ್ಕೆ ಒಮ್ಮೆ ಮಾತ್ರ ತಲೆಗೆ ಸ್ನಾನ ಮಾಡುವುದು.

ಕಣ್ಣುಗಳು ಸಹ ಇರುವಂತೆಯೇ ಇದೆ. ಸಮಯವಾದಾಗ ಬರಿಗಣ್ಣಿನಿಂದ ಕನ್ನಡ ಪತ್ರಿಕೆ ಓದುತ್ತೇನೆ. ದೂರದ ವಸ್ತುಗಳೂ ಸ್ಪಷ್ಟವಾಗಿ ಕಾಣುತ್ತದೆ.

ಊಟದಲ್ಲಿ ಪಥ್ಯ ಎಂಬುದೇ ಗೊತ್ತಿಲ್ಲ. ಮನೆ ಊಟದ ಜೊತೆಗೆ ಹೊರಗಡೆ ಯಾರು ಏನೇ ಕೊಟ್ಟರೂ ಅಥವಾ ಕೊಡಿಸಿದರು ತಿನ್ನುತ್ತೇನೆ.

ಯಾವುದೇ ಸಮಯದಲ್ಲೂ ದಿಂಬಿನ ಮೇಲೆ ತಲೆ ಇಟ್ಟರೆ ಸಾಕು ಮೈ ಮರೆಯುವಷ್ಟು ನಿದ್ದೆ ಮಾಡುತ್ತೇನೆ.

ಸಿಗರೇಟು ಮದ್ಯದ ದುರಭ್ಯಾಸ ಮಾತ್ರ ಇಲ್ಲ.

ಮೂಟೆ ಕೂಲಿಯ ಕೆಲಸದ ನನಗೆ ಸುಳ್ಳು ಹೇಳುವ ಅವಕಾಶವೇ ಬರಲಿಲ್ಲ.
ಆಸೆ ಪಡುವಷ್ಟು ಆಯ್ಕೆಗಳೂ ನನಗಿರಲಿಲ್ಲ.
ಪ್ರವಾಸ ತೀರ್ಥಯಾತ್ರೆ ಒಮ್ಮೆಯೂ ಹೋಗಿಲ್ಲ.

ಎಲ್ಲಾ 6 ಮಕ್ಕಳಿಗೂ ಮದುವೆಯಾಗಿದೆ. ನನ್ನ ಹೆಂಡತಿಯ ಸಂಬಂಧಿಕರಲ್ಲೇ ಋಣಾನುಬಂಧ ಕೂಡಿ ದೇವಸ್ಥಾನಗಳಲ್ಲಿ ಮದುವೆ ಮಾಡಿ ಕೊಟ್ಟೆವು. ಮದುವೆ ದಿನ ಕೂಡ ನಾನು ಅರ್ಧ ದಿನ ಕೂಲಿ ಮಾಡಿದೆ.

ನನ್ನ ಯಾವ ಮಕ್ಕಳೂ ಶಾಲೆಗೆ ಹೋಗಿಲ್ಲ. ಅವರೂ ಕೂಲಿ ಮಾಡುತ್ತಲೇ ಬದುಕು ಕಟ್ಟಿಕೊಂಡವರು.

ಮನೆಯೇ ಇಲ್ಲದೆ ಸ್ವಾತಂತ್ರ್ಯ ಪೂರ್ವದಲ್ಲಿ ಬೀದಿಯಿಂದ ಪ್ರಾರಂಭವಾದ ಬದುಕು ಮೊದಲು ಗುಡಿಸಲು, ಬಳಿಕ ಧರ್ಮ ಛತ್ರ, ಆಮೇಲೆ ಕೊಳಗೇರಿ, ಅನಂತರ ಈಗ ಸರ್ಕಾರ ಉಚಿತವಾಗಿ ಕೊಟ್ಟಿರುವ ಮನೆಯಲ್ಲಿ
ಜೀವನ ನಡೆಸುತ್ತಿದ್ದೇನೆ.

ಯಾವುದೇ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿಯೂ ಬಿಪಿ ಶುಗರ್ ಅಥವಾ ಇನ್ಯಾವುದೂ ಚೆಕ್ ಮಾಡಿಸಿಲ್ಲ‌. ಈಗಾಗಲೇ 77 ರಲ್ಲಿರುವ ನಾನು ಶಿವ ಕರೆದಾಗ ಹೋಗಲು ಸಿದ್ದನಾಗಿದ್ದೇನೆ.

ಅದ್ಯಾರೋ ಬಸವಣ್ಣ ಅಂತ ಒಬ್ಬರು ಬಹಳ ಹಿಂದೆಯೇ ಹೇಳಿದ್ದರಂತೆ

ಕಾಯಕವೇ ಕೈಲಾಸ ಅಂತ.

ಅದು ನಿಜವಿರಬೇಕು ಅನಿಸುತ್ತಿದೆ…

ಇದೂ ಸಹ ಪರಿಪೂರ್ಣವಲ್ಲ…

ಆದರೆ ಬದುಕಿನ ನೆಮ್ಮದಿಯ ಒಂದು ಮುಖ ಮಾತ್ರ. ಆದರೆ ಅರ್ಥ ಮಾಡಿಕೊಳ್ಳಲು ಮತ್ತು ಅಳವಡಿಸಿ ಕೊಳ್ಳಲು ಇಬ್ಬರಿಂದಲೂ ಸಾಕಷ್ಟು ಪಾಠಗಳಿವೆ ಅಲ್ಲವೇ……….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ.

ಬರಹ: ವಿವೇಕಾನಂದ ಎಚ್. ಕೆ.

ರಾಜ್ಯದ ಎಲ್ಲ ಹಳ್ಳಿಗಳಲ್ಲಿ ಮಿಲ್ಕ್ ಡೈರಿ ಆಗಬೇಕು-ಸಚಿವ ಪ್ರಹ್ಲಾದ ಜೋಷಿ

0

ಎಂಎಫ್ ಮತ್ತು ಗುಜರಾತ್‍ನ ಅಮೂಲ್ ವಿಲೀನದ ಪ್ರಶ್ನೆ ಇಲ್ಲ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಹೇಳಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರುಹೊಸ ಸಾಫ್ಟ್‍ವೇರ್ ಅಳವಡಿಸಲು ಶೇ 60ರಷ್ಟು ಹಣವನ್ನು ಕೇಂದ್ರ ಸರಕಾರ ಕೊಡಲಿದೆ. ಒಂದೇ ನಿಯಮಾವಳಿ, ಒಂದೇ ಸಾಫ್ಟ್‍ವೇರ್ ಅಳವಡಿಕೆ ಆಗಲಿದೆ. ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ರೇóಶನ್ ಡಿಪೊ, ಪೆಟ್ರೋಲ್ ಬಂಕ್ ನಿರ್ವಹಣೆ ಇನ್ನಿತರ ಅವಕಾಶಗಳಿದ್ದರೆ ಅನುಮತಿ ಕೊಡಲು ಯೋಜಿಸಿದೆ. ಇಂಥ ಸಹಕಾರ ಸಂಘಗಳು ಮತ್ತು ಹಾಲಿನ ಸೊಸೈಟಿಗಳು ಶಕ್ತಿಶಾಲಿಯಾಗಿ ಕಾರ್ಯ ನಿರ್ವಹಿಸಬೇಕೆಂಬ ಚಿಂತನೆ ಮಾಡಿ ಅದರ ಅನುಷ್ಠಾನ ಆಗುತ್ತಿದೆ ಎಂದು ತಿಳಿಸಿದರು.

ಮಿಲ್ಕ್ ಯೂನಿಯನ್ ಮತ್ತು ಫೆಡರೇಶನ್ ಗುಜರಾತ್‍ನಷ್ಟೇ ಪ್ರಬಲವಾಗಿ ಬೆಳೆದಿದೆ. ವಿಲೀನ ಪ್ರಸ್ತಾಪ ಇಲ್ಲವೆಂದು ಮುಖ್ಯಮಂತ್ರಿಗಳೂ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿದ್ದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೂ ಇದರ ಬಗ್ಗೆ ಸ್ಪಷ್ಟವಾಗಿ ತಿಳಿಸಿದ್ದಾರೆ. ಕರ್ನಾಟಕದ ಪ್ರತಿ ಗ್ರಾಮಗಳಲ್ಲೂ ಮಿಲ್ಕ್ ಡೈರಿ ಮಾಡಬೇಕು; ಪತ್ತಿನ ಸಹಕಾರ ಸಂಘಕ್ಕೆ ಹೊಸ ನಿಯಮಾವಳಿ ಮಾಡಬೇಕು. 3 ವರ್ಷಗಳೊಳಗೆ ಒಂದೇ ಸಾಫ್ಟ್‍ವೇರ್ ಅಳವಡಿಸಿಕೊಳ್ಳಬೇಕು ಎಂದು ಕೇಂದ್ರ ಸರಕಾರ ಸೂಚಿಸಿದೆ ಎಂದು ಹೇಳಿದರು.

ಕೆಎಂಎಫ್ ವಿಲೀನದ ಕುರಿತು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಮಾತನಾಡಿಲ್ಲ, ಕೆಎಂಎಫ್ ಬಲಿಷ್ಠ ಸಂಸ್ಥೆ.
15 ಮಿಲ್ಕ್ ಯೂನಿಯನ್, 9 ಲಕ್ಷ ಮಹಿಳೆಯರು ಸೇರಿ 26 ಲಕ್ಷ ಇದರಡಿ ಬರುತ್ತಾರೆ. ಸಾವಿರಾರು ಕೋಟಿ ವ್ಯವಹಾರ ನಡೆಯುತ್ತಿದೆ ಎಂದು ತಿಳಿಸಿದರು.

ಕೆನರಾಬ್ಯಾಂಕ್ ಗಾಮೀಣ ಸ್ವ ಉದ್ಯೋಗ ತರಬೇತಿ ಬಗ್ಗೆ ಅರ್ಜಿ ಆಹ್ವಾನ

0

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಹೊಳಲೂರು (ಶಿವಮೊಗ್ಗ ತಾಲ್ಲೂಕು) ಇಲ್ಲಿ ಇನ್ಸ್ಟಲೇಷನ್ & ಸರ್ವಿಸಿಂಗ್ ಬಗ್ಗೆ
13 ದಿನಗಳ ತರಬೇತಿಯನ್ನು ಹಮ್ಮಿಕೊಂಡಿದ್ದು ಆಸಕ್ತಿ ಇರುವ ನಿರುದ್ಯೋಗಿ ಯುವಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅಭ್ಯರ್ಥಿಯು 18 ರಿಂದ 45 ವರ್ಷ ವಯೋಮಿತಿ ಒಳಗಿನವರಾಗಿರಬೇಕು. 8ನೇ ತರಗತಿ ಉತ್ತೀರ್ಣರಾಗಿರಬೇಕು, ಗ್ರಾಮೀಣ ಭಾಗದ ಪಡಿತರ ಚೀಟಿ ಹೊಂದಿರಬೇಕು ಮತ್ತು ಸ್ವ-ಉದ್ಯೋಗ ಪ್ರಾರಂಭಿಸಲು ಆಸಕ್ತಿ ಇರಬೇಕು. ತರಬೇತಿ ಅವಧಿಯಲ್ಲಿ ಉಚಿತ ಊಟ-ವಸತಿ ವ್ಯವಸ್ಥೆ ಇರುತ್ತದೆ.

ತರಬೇತಿಯು 30/01/2023 ರಿಂದ ಪ್ರಾರಂಭವಾಗಲಿದ್ದು ಆಸಕ್ತರು ಹೆಸರು, ವಿಳಾಸ, ಮೊಬೈಲ್ ನಂ. ವಿದ್ಯಾರ್ಹತೆ, ಮತ್ತು ವಯಸ್ಸಿನ ವಿವರಗಳೊಂದಿಗೆ:
ನಿರ್ದೇಶಕರು,
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ -ಉದ್ಯೋಗ ತರಬೇತಿ ಸಂಸ್ಥೆ,
ಹೊನ್ನಾಳಿ ರಸ್ತೆ, ಹೊಳಲೂರು-577216 (ಶಿವಮೊಗ್ಗ ತಾಲ್ಲೂಕು)
ಇವರಿಗೆ ಕೂಡಲೇ / ತಕ್ಷಣವೇ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ. 8660062583, 9481955721, ,9743429579 ಅನ್ನು
ಸಂಪರ್ಕಿಸಬಹುದಾಗಿದೆ.

ಚಲನಚಿತ್ರ ಕಲಾವಿದ ಅನಂತನಾಗ್ ಅವರಿಗೆ ಕೆರೆಮನೆ ಶಿವರಾಂ ಹೆಗಡೆ ರಾಷ್ಟ್ರೀಯ ಪ್ರಶಸ್ತಿಯ ಗರಿ

0

ಪ್ರಖ್ಯಾತ ಹಿರಿಯ ಚಲನಚಿತ್ರ ಹಾಗೂ ರಂಗಭೂಮಿ ಕಲಾವಿದರಾದ ಅನಂತ ನಾಗ್‌ ಇವರಿಗೆ 2023ರ ಪ್ರತಿಷ್ಠಿತ “ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ’ ಮತ್ತು ಪ್ರಸಿದ್ಧ ಸ್ತ್ರೀವೇಷಧಾರಿಗಳಾಗಿದ್ದ “ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ’ ಯಕ್ಷಗಾನದ ಕಲಾವಿದರಾದ ತಿಮ್ಮಪ್ಪ ಹೆಗಡೆ ಶಿರಳಗಿ ಇವರಿಗೆ ಎಂದು ನಾಟ್ಯೋತ್ಸವ ಸಲಹಾ ಸಮಿತಿ ಮತ್ತು ಪ್ರಶಸ್ತಿ ಆಯ್ಕೆ ಸಮಿತಿ ನಿರ್ಧರಿಸಿದೆ.

ಫೆಬ್ರವರಿ 3ರಿಂದ ಫೆಬ್ರವರಿ 7ರವರೆಗೆ ಗುಣವಂತೆ ಯಕ್ಷಾಂಗಣದಲ್ಲಿ ನಡೆಯಲಿರುವ ಐದು ದಿನಗಳ “ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ’ದ ಸಂದರ್ಭದಲ್ಲಿ ಫೆಬ್ರವರಿ 3ರಂದು ಆಗಮಿಸುವ ಗಣ್ಯರ ಸಮ್ಮುಖದಲ್ಲಿ ಶಿವರಾಮ ಹೆಗಡೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿಯನ್ನು ಫೆಬ್ರವರಿ 4ರಂದು ಆಗಮಿಸುವ ಗಣ್ಯರ ಸಮ್ಮುಖದಲ್ಲಿ ಪ್ರದಾನ ಮಾಡಲಾಗುವುದು.

ಶಿವರಾಮ ಹೆಗಡೆ ಪ್ರಶಸ್ತಿಯು ರೂ.25 ಸಾವಿರ ರೂಪಾಯಿ ನಗದು, ಪ್ರಶಸ್ತಿ ಪತ್ರ ಮತ್ತು ಇತರ ಗೌರವಗಳನ್ನು ಒಳಗೊಂಡಿದೆ. ಗಜಾನನ ಹೆಗಡೆ ಪ್ರಶಸ್ತಿಯು ರೂ.15 ಸಾವಿರ ನಗದು, ಪ್ರಶಸ್ತಿ ಪತ್ರ, ಶಾಲು ಇತ್ಯಾದಿ ಗೌರವಗಳನ್ನು ಹೊಂದಿದೆ.

ಭಾರತದ ಯುವಕರ ಕಾರ್ಯವನ್ನು ಮೆಚ್ಚಿದ ವಿದೇಶಾಂಗ ಸಚಿವ ಜೈ ಶಂಕರ್

0

ದೇಶವನ್ನು ಅಂತಾರಾಷ್ಟ್ರೀಯ ಸಮುದಾಯದೊಂದಿಗೆ ಸಂಪರ್ಕ ಸಾಧಿಸಲು ಸಹಕರಿಸಿದ ಭಾರತೀಯ ಯುವಕರನ್ನು ವಿದೇಶಾಂಗ ಸಚಿವ ಜೈಶಂಕರ್ ಪ್ರಶಂಸಿದ್ದಾರೆ.

ಮಧ್ಯಪ್ರದೇಶದ ಇಂದೋರ್‍ನಲ್ಲಿ ನಡೆದ 17 ನೇ ಪ್ರವಾಸಿ ಭಾರತೀಯ ದಿವಸ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು,ಆನ್‍ಲೈನ್ ಕಾರ್ಯವಿಧಾನಗಳ ಮೂಲಕ ಕುಂದುಕೊರತೆಗಳ ಪರಿಹಾರದ ಮೇಲೆ ಕೇಂದ್ರೀಕರಿಸಲು. ದೇಶ ಮತ್ತು ವಿದೇಶಗಳಲ್ಲಿನ ಭಾರತೀಯ ಯುವಕರು ಈ ದೇಶದ ಬೆಳವಣಿಗೆಯನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುತ್ತಾರೆ ಎಂದು ನನಗೆ ವಿಶ್ವಾಸವಿದೆ. ನಾವು ಉತ್ತಮ ಕೆಲಸದ ಸ್ಥಳ ಮತ್ತು ತಾರತಮ್ಯರಹಿತ ವಿಧಾನವನ್ನು ರಚಿಸಲು ಪ್ರಯತ್ನಿಸುತ್ತೇವೆ ಎಂದರು.

ತಂತ್ರಜ್ಞಾನದ ಸ್ಟಾರ್ಟ್‍ಅಪ್ ಆಗಿರಲಿ, ಭಾರತವನ್ನು ಜಗತ್ತಿಗೆ ಸಂಪರ್ಕಿಸುವಲ್ಲಿ ಯುವ ಪೀಳಿಗೆ ಮುಂಚೂಣಿಯಲ್ಲಿದೆ, ಇದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ.

34 ಮಿಲಿಯನ್ ಭಾರತೀಯ ಮೂಲದ ಜನರೊಂದಿಗೆ ದೇಶದ ಸಂಬಂಧವೇ ನಮ್ಮನ್ನು ಇಲ್ಲಿಗೆ ತಂದಿದೆ ಎಂದು ಹೇಳಿದರು. ಕೊರೊನಾ ಸೋಂಕಿನ ಸವಾಲುಗಳ ನಡುವೆ ಈ ಸಂಬಂಧವು ತುಂಬಾ ಸ್ಪಷ್ಟವಾಗಿತ್ತು. Pಐu ನಿಂದ ನಮಗೆ ದೊರೆತ ಪ್ರಚಂಡ ಪ್ರತಿಕ್ರಿಯೆಯನ್ನು ನಾವು ಗುರುತಿಸಿದ್ದೇವೆ. ಎಲ್ಲಾ ಪ್ರಯೋಗಗಳ ಪರಿಣಾಮವಾಗಿ ನಮ್ಮ ಬಾಂಧವ್ಯವು ಎಂದಿಗೂ ದೃಢವಾಗಿದೆ. ಡಯಾಸ್ಪೊರಾ ಗುರುತನ್ನು ಪಡೆಯಲಾಗಿದೆ ಎಷ್ಟು ನಿಕಟ ಸಂಪರ್ಕ ಹೊಂದಿದೆ ಎಂದು ತಿಳಿಸಿದರು.