Wednesday, April 1, 2026
Wednesday, April 1, 2026
Home Blog Page 1339

ಮಗನ ಪ್ರಾಣವುಳಿಸಿ ತನ್ನ ಜೀವ ಕಳೆದುಕೊಂಡ ತಂದೆ

0

ಶಾರ್ಟ್ ಸರ್ಕ್ಯೂಟ್ ನಿಂದಾಗಿ ಸ್ಟೆಬಿಲೈಜರ್ ಸ್ಫೋಟದ ಹಿನ್ನೆಲೆ
ಶಿವಮೊಗ್ಗದ ಮನೆಯೊಂದರಲ್ಲಿ ಬೆಂಕಿ ಅನಾಹುತ ಸಂಭವಿಸಿದೆ.
ಮಗನನ್ನು ಉಳಿಸಲು ಹೋಗಿ ತಂದೆ ಪ್ರಾಣ ಕಳೆದುಕೊಂಡಿದ್ದಾರೆ.

ಶಿವಮೊಗ್ಗದ ಕುವೆಂಪು ರಸ್ತೆಯ ಜಿಪಂ ಕಚೇರಿ ಮುಂಭಾಗದಲ್ಲಿರುವ ಪ್ರತಿಷ್ಠಿತ ಭೂಪಾಳಂ ಕುಟುಂಬದವರ ಮನೆಯಲ್ಲಿ ಈ ಅವಘಡ ಸಂಭವಿಸಿದೆ.

ಎಸ್. ಶರತ್ (39) ಸಾವನ್ನಪ್ಪಿದ್ದಾರೆ.
ಎಸ್. ಶರತ್ ಪುತ್ರ ಸಂಚಿತ್ (12) ಅವರಿಗೆ ಗಂಭೀರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಜು ಮುಸುಕಿದ ದೆಹಲಿ ವಿಮಾನ ಸಂಚಾರ ವ್ಯತ್ಯಯ

0

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಟ್ಟ ಮಂಜು ಆವರಿಸಿದ್ದು ತೀವ್ರ ಶೀತ ಅಲೆಯಂತಹ ಪರಿಸ್ಥಿತಿಯನ್ನು ದಾಖಲಿಸಿದೆ. ಅಧಿಕ ಚಳಿಗೆ ಜನ ಮನೆ ಬಿಟ್ಟು ಹೊರಬಾರದಂತ ಸ್ಥಿತಿ ನಿರ್ಮಾಣವಾಗಿದೆ. ಕೆಲ ಪ್ರದೇಶದಲ್ಲಿ ಅತ್ಯಂತ ಕಡಿಮೆ ತಾಪಮಾನ ದಾಖಲಾಗಿದೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ.

ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ದಟ್ಟ ಮಂಜಿನಿಂದಾಗಿ ವಿಮಾನಗಳು ತಡವಾಗುವ ಸಾಧ್ಯತೆಯ ಬಗ್ಗೆ ಮುನ್ಸೂಚನೆಯನ್ನು ನೀಡಿದೆ.

ವಿಮಾನ ನಿಲ್ದಾಣದಲ್ಲಿ ಕಡಿಮೆ ಗೋಚರತೆಯ ಅಪಾಯವನ್ನು ಎದುರಿಸಲು ವಿಮಾನ ನಿಲ್ದಾಣದಲ್ಲಿ ಹಲವಾರು ಕಾರ್ಯವಿಧಾನಗಳನ್ನು ಕೈಗೊಳ್ಳಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಪ್ರಯಾಣಿಕರಿಗೆ ಸಲಹೆ ನೀಡಿದ್ದಾರೆ.

ಮಂಜಿನಿಂದಾಗಿ ಉತ್ತರ ರೈಲ್ವೆ ಪ್ರದೇಶದಲ್ಲಿ ಸುಮಾರು 32 ರೈಲುಗಳು ತಡವಾಗಿ ಸಂಚರಿಸುತ್ತಿವೆ. ಜೊತೆಗೆ ಕೆಟ್ಟ ಹವಾಮಾನ ಸಮಸ್ಯೆಗಳಿಂದ ದೆಹಲಿ ವಿಮಾನ ನಿಲ್ದಾಣದಿಂದ ಸುಮಾರು 34 ದೇಶೀಯ ನಿರ್ಗಮನ ವಿಮಾನಗಳು ವಿಳಂಬವಾಗಿವೆ.

ವಿವಿಧ ಸ್ಥಳಗಳಿಂದ ವಿಮಾನ ನಿಲ್ದಾಣದಲ್ಲಿ 12ಕ್ಕೂ ಹೆಚ್ಚು ಆಗಮನದ ವಿಮಾನಗಳು ವಿಳಂಬವಾಗಿವೆ. ಸಫ್ದರ್‌ಜಂಗ್‌ನಲ್ಲಿ 2.2 ಡಿಗ್ರಿ ಸೆಲ್ಸಿಯಸ್ ತಾಪಮಾನ ಹಾಗೂ ಲೋಧಿ ರಸ್ತೆಯಲ್ಲಿ ಕನಿಷ್ಠ 2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ ಎಂದು ಐಎಂಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಅಲ್ಲದೆ ದಟ್ಟವಾದ ಮಂಜು ವಾಯುವ್ಯ ಭಾರತದ ಮೇಲೆ ಮತ್ತು ದೇಶದ ಮಧ್ಯ ಮತ್ತು ಪೂರ್ವ ಭಾಗಗಳಲ್ಲಿ ಅಧಿಕ ಆವರಿಸಿದೆ. ಇದರಿಂದಾಗಿ ವಾಹನ ಮತ್ತು ರೈಲು ಸಂಚಾರಕ್ಕೆ ಅಡ್ಡಿಯನ್ನುಂಟು ಮಾಡಿದೆ.

ಎಲ್ಲಾ ವಿಮಾನ ಕಾರ್ಯಾಚರಣೆಗಳು ಪ್ರಸ್ತುತ ಸಾಮಾನ್ಯವಾಗಿವೆ. ಆದಾಗ್ಯೂ, ವಿಮಾನದ ಬಗ್ಗೆ ಇತ್ತೀಚಿನ ಮಾಹಿತಿಗಾಗಿ ಸಂಬಂಧಪಟ್ಟ ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸಲು ವಿಮಾನ ನಿಲ್ದಾಣವು ಪ್ರಯಾಣಿಕರಿಗೆ ವಿನಂತಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಜು ಮತ್ತು ಕಡಿಮೆ ಗೋಚರತೆಯ ಪರಿಸ್ಥಿತಿಗಳಿಂದಾಗಿ ಹಲವಾರು ವಿಮಾನಗಳು ವಿಳಂಬವಾಗಿವೆ ಎಂದು ತಿಳಿದುಬಂದಿದೆ.

ಸಾಹಿತ್ಯ ಸಮ್ಮೇಳನದಲ್ಲಿ ಕಣ್ಮನ ಸೆಳೆದ ಫಲಪುಷ್ಪ ಪ್ರದರ್ಶನ

0

ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ಆರಂಭವಾಗಿದೆ. ಸಾಹಿತ್ಯ ಸಮ್ಮೇಳನದ 2ನೇ ದಿನವಾದ ಜ.7ರಂದು ಫಲ ಪುಷ್ಪ ಪ್ರದರ್ಶನ ಜನಮನ ಸೆಳೆದಿದೆ.

ಕಲ್ಲಂಗಡಿಯಲ್ಲಿ ಅರಳಿದ ನಟ ಪುನೀತ್ ರಾಜ್‌ಕುಮಾರ್ ಅವರ ನಗು ಮುಖವನ್ನು ಕಂಡು ಜನರು ಫೋಟೋ ಕ್ಲಿಕ್ಕಿಸಿಕೊಂಡರು. ಜಿಲ್ಲೆಯಲ್ಲಿ ಬೆಳೆಯುವ ತರಕಾರಿ, ಹಣ್ಣುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ನಾಲ್ಕಕ್ಕೂ ಹೆಚ್ಚು ಬಗೆಯ ಕುಂಬಳಕಾಯಿ, ಪಪ್ಪಾಯಿ, ಕಬ್ಬು ಹೀಗೆ ವಿವಿಧ ತರಕಾರಿಗಳನ್ನು ಇಡಲಾಗಿತ್ತು.

ರಾಜ್ಯ ಕಾನೂನು ಪ್ರಾಧಿಕಾರ ರಚನೆಗೆ ಒತ್ತಾಯ

0

ಉನ್ನತ ನ್ಯಾಯಾಂಗದ ಮಹತ್ವದ ತೀರ್ಪುಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಮತ್ತು ಕನ್ನಡದಲ್ಲಿ ಕಾನೂನು ಪುಸ್ತಕಗಳ ಬರವಣಿಗೆ ಮತ್ತು ಪ್ರಕಟಣೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕರ್ನಾಟಕ ಕಾನೂನು ಪ್ರಾಧಿಕಾರವನ್ನು ಸ್ಥಾಪಿಸಬೇಕು ಎಂದು ಕಾನೂನು ತಜ್ಞರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಕನ್ನಡದಲ್ಲಿ ಕಾನೂನು ಸಾಹಿತ್ಯ’ ಕುರಿತು ನಡೆದ ಚರ್ಚೆಯಲ್ಲಿ ಮಾತನಾಡಿ ಕಾನೂನು ತಜ್ಞರು, ಮಾತೃಭಾಷೆಯಲ್ಲಿ ಪುಸ್ತಕಗಳು ಲಭ್ಯವಿಲ್ಲದ ಕಾರಣ ಸಾಮಾನ್ಯ ಜನರಿಗೆ ಕಾನೂನಿನ ಪ್ರಮುಖ ಅಂಶಗಳ ಬಗ್ಗೆ ತಿಳಿಯದಂತಾಗಿದೆ.

ನ್ಯಾಯಾಲಯದ ಕಾರ್ಯವೈಖರಿಯನ್ನು ಬಹುಪಾಲು ಇಂಗ್ಲಿಷ್ನಲ್ಲಿ ಮಾಡಲಾಗುತ್ತಿರುವ ಕಾರಣ ಕೆಲವರಿಗಷ್ಟೇ ಕಾನೂನಿನ ತೀರ್ಪಿನ ಬಗ್ಗೆ ತಿಳಿಯುವಂತಾಗುತ್ತಿದೆ ಎಂದು ಹೇಳಿದ್ದಾರೆ.

ನ್ಯಾಯಮೂರ್ತಿ ಅರಳಿ ನಾಗರಾಜ್ ಮಾತನಾಡಿ, ಸರ್ಕಾರ ಕರ್ನಾಟಕ ಕಾನೂನು ಪ್ರಾಧಿಕಾರವನ್ನು ಸ್ಥಾಪಿಸಲಿ ಅಥವಾ ಇಲ್ಲದಿರಲಿ, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು ಕನ್ನಡ ಭಾಷೆಯಲ್ಲಿ ಕಾನೂನು ಸಾಹಿತ್ಯವನ್ನು ಹೊರತರಲು ಮುಂದಾಗಬೇಕು ಎಂದು ತಿಳಿಸಿದರು.

ಎಸ್ ಬಿ ಐ ನಲ್ಲಿ ನೇಮಕಾತಿ _ಆನ್ ಲೈನ್ ನೋಂದಣಿ ಕೊನೇ ದಿನಾಂಕ ಜ.10

0

ಎಸ್ ಬಿಐ ನೇಮಕಾತಿ 2022ರ ಅಡಿಯಲ್ಲಿ 1438 ಹುದ್ದೆಗಳಿಗೆ ನೋಂದಣಿ ಪ್ರಕ್ರಿಯೆ ಜನವರಿ 10, 2023 ರಂದು ಕೊನೆಗೊಳ್ಳಲಿದೆ.

ಅಭ್ಯರ್ಥಿಗಳು ಎಸ್ಬಿಐನ ಅಧಿಕೃತ ಸೈಟ್ sbi.co.in ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಮೊದಲು ತಮ್ಮ ಅರ್ಜಿ ನಮೂನೆಯನ್ನು ಭರ್ತಿ ಮಾಡಲು ಸೂಚಿಸಲಾಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಂದಿನ ವಾರ ಎಸ್ಬಿಐ ಆರ್ಬಿಒ ನೇಮಕಾತಿ 2022 ರ ನೋಂದಣಿ ಪ್ರಕ್ರಿಯೆಯನ್ನು ಮುಚ್ಚಲಿದೆ. ನೋಂದಣಿ ಪ್ರಕ್ರಿಯೆಯು ಡಿಸೆಂಬರ್ 22 ರಂದು ಪ್ರಾರಂಭವಾಯಿತು ಮತ್ತು ಜನವರಿ 10, 2023 ರಂದು ಕೊನೆಗೊಳ್ಳುತ್ತದೆ. ಅಭ್ಯರ್ಥಿಗಳು ಎಸ್ಬಿಐನ ಅಧಿಕೃತ ಸೈಟ್ sbi.co.in ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.

ಆಯ್ಕೆಯು ಶಾರ್ಟ್ ಲಿಸ್ಟ್ ಮತ್ತು ಸಂದರ್ಶನವನ್ನು ಆಧರಿಸಿರುತ್ತದೆ. ಸಂದರ್ಶನವು 100 ಅಂಕಗಳನ್ನು ಹೊಂದಿರುತ್ತದೆ. ಸಂದರ್ಶನದಲ್ಲಿ ಅರ್ಹತಾ ಅಂಕಗಳನ್ನು ಬ್ಯಾಂಕ್ ನಿರ್ಧರಿಸುತ್ತದೆ. ಈ ನಿಟ್ಟಿನಲ್ಲಿ ಯಾವುದೇ ಪತ್ರವ್ಯವಹಾರ ಇರುವುದಿಲ್ಲ. ಅಂತಿಮ ಆಯ್ಕೆಗಾಗಿ ಮೆರಿಟ್ ಪಟ್ಟಿಯನ್ನು ಸಂದರ್ಶನದಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮಾತ್ರ ತಯಾರಿಸಲಾಗುತ್ತದೆ.

ಈ ನೇಮಕಾತಿ ಡ್ರೈವ್ ಮೂಲಕ, ಸಂಸ್ಥೆಯಲ್ಲಿ 1438 ಹುದ್ದೆಗಳನ್ನ ನೇಮಕ ಮಾಡಿಕೊಳ್ಳಲಾಗುತ್ತದೆ. ಎಸ್ಬಿಐನ ನಿವೃತ್ತ ಅಧಿಕಾರಿಗಳು / ಉದ್ಯೋಗಿಗಳು ಮತ್ತು ಎಸ್ಬಿಐನ ಮಾಜಿ ಅಸೋಸಿಯೇಟ್ಸ್ ಬ್ಯಾಂಕ್ (ಇ-ಎಬಿ) ಮೇಲಿನ ಹುದ್ದೆಗಳಿಗೆ ಮಾತ್ರ ಅರ್ಜಿ ಸಲ್ಲಿಸಬಹುದು.

ರಾಯಚೂರು ಕೃಷಿ ವಿವಿಯಿಂದ ಸಾವಯವ ಸಿರಿಧಾನ್ಯ ಕೃಷಿಮೇಳ

0

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ವತಿಯಿಂದ “ಸಿರಿಧಾನ್ಯಗಳ ಸಾರ ಜೀವಕ್ಕೆ ಆಧಾರ” ಎಂಬ ಧ್ಯೇಯ ವಾಕ್ಯದೊಂದಿಗೆ ಜನವರಿ 10, 11 ಮತ್ತು 12ರಂದು ಮೂರು ದಿನಗಳವರೆಗೆ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿ “ಕೃಷಿಮೇಳ”ವನ್ನು ಆಯೋಜಿಸಿಲಾಗಿದೆ.

ಈ ಮೇಳದಲ್ಲಿ ಸಿರಿಧಾನ್ಯ ಉತ್ಪಾದನೆ, ಸಂಸ್ಕರಣೆ ಹಾಗೂ ಮೌಲ್ಯವರ್ಧನೆ, ನೀರು ಸಂರಕ್ಷಣೆ-ಮಳೆನೀರು ಕೊಯ್ಲು ಮತ್ತು ಅಂತರ್ಜಲ ಮರುಪೂರಣ, ಅಲಂಕಾರಿಕ ಮೀನು ಸಾಕಾಣಿಕೆ, ಬೀಜಗಳು, ಔಷಧೀಯ ಮತ್ತು ಸುಗಂಧಿತ ಸಸ್ಯಗಳು, ಸಾವಯವ ಮತ್ತು ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕರು, ಜೈವಿಕ ಗೊಬ್ಬರಗಳು, ಹಾಲಿನ ಮೌಲ್ಯವರ್ಧಿತ ಉತ್ಪನ್ನಗಳು, ಪಶುಸಂಗೋಪನೆ, ಸ್ವ-ಸಹಾಯ ಗುಂಪುಗಳ ಸಬಲೀಕರಣ, ಉನ್ನತ ತೋಟಗಾರಿಕೆ ತಂತ್ರಜ್ಞಾನ, ಗುಡಿ ಕೈಗಾರಿಕೆಗಳು, ಕೃಷಿ ಯಂತ್ರೋಪಕರಣಗಳು, ಕೊಯ್ಲು ಮತ್ತು ಕೊಯ್ಲೋತ್ತರ ಯಂತ್ರಗಳು, ಹನಿ ಮತ್ತು ತುಂತುರು ನೀರಾವರಿ, ಬೀಜ ಸಂಸ್ಕರಣೆ ಮತ್ತು ಆಹಾರ ಸಂಸ್ಕರಣಾ ಯಂತ್ರಗಳು, ಸಾಂಪ್ರದಾಯಿಕವಲ್ಲದ ಶಕ್ತಿ ಉಪಕರಣಗಳು, ನೈಜ ಬೆಳೆಗಳ ಪ್ರಾತ್ಯಕ್ಷಿಕೆ, ರೈತರಿಂದ ರೈತರಿಗೆ-ವಿಶೇಷ ಕಾರ್ಯಕ್ರಮ, ಫಲಪುಷ್ಪ ಪ್ರದರ್ಶನ, ಜಾನುವಾರು-ಮತ್ಸ್ಯ ಪ್ರದರ್ಶನ ಇವು ಕೃಷಿ ಮೇಳದ ಪ್ರಮುಖ ಆಕರ್ಷಣೆಗಳಾಗಿವೆ.

ಈ ಕಾರ್ಯಕ್ರಮಕ್ಕೆ ಆಸಕ್ತ ರೈತರು, ಪ್ರಗತಿಪರ ರೈತರು ಹಾಗೂ ರೈತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕೃಷಿ ಚಟುವಟಿಕೆಗಳ ಮಾಹಿತಿ ಹೊಂದಬೇಕೆಂದು ಹೂವಿನಹಡಗಲಿಯ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ.ಸಿ.ಎಂ.ಕಾಲಿಬಾವಿ ಅವರು ತಿಳಿಸಿದ್ದಾರೆ.

ಪ್ರತಿಭಾಕಾರಂಜಿಯಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆ – ಸಚಿವ ನಾಗೇಶ್

0

ಶಿವಮೊಗ್ಗ: ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕಾರ್ಯಕ್ರಮವನ್ನು ಶಿಕ್ಷಣ ಸಚಿವರಾದ ಸನ್ಮಾನ್ಯಶ್ರೀ ನಾಗೇಶ ರವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು,ಭಾರತ ದೇಶ ಬ್ರಿಟಿಷರ ದಬ್ಬಾಳಿಕೆ ಯಲ್ಲಿ ಇದ್ದಂತಹ ವೇಳೆಯಲ್ಲಿ, ನಮ್ಮ ದೇಶದಲ್ಲಿ ಇದ್ದಂತಹ ಶಿಕ್ಷಣ ಪದ್ಧತಿಯನ್ನು ತೆಗೆದುಹಾಕಿದರು. ನಂತರ ತಮಗೆ ಬೇಕಾಗುವ ರೀತಿಯಲ್ಲಿ ಶಿಕ್ಷಣ ಪದ್ಧತಿಯನ್ನು ರೂಪಿಸಿದರು ಎಂದು ಶಿಕ್ಷಣ ಸಚಿವರಾದ ನಾಗೇಶ್ ಅವರು ಹೇಳಿದರು.

ಸರ್ವ ಶಿಕ್ಷಣ ಅಭಿಯಾನದ ಮೂಲಕ ನಮ್ಮ ದೇಶದ ಪ್ರತಿಯೊಂದು ಮಗುವಿಗೂ ಶಿಕ್ಷಣ ತಲುಪಬೇಕು. ದೇಶದ ಪ್ರತಿಯೊಂದು ಮಗುವಿಗೂ ಜ್ಞಾನ ದೊರಕಬೇಕು. ಪ್ರತಿಯೊಂದು ಮಗು ಸ್ವಾವಲಂಬಿ, ಸ್ವಾಭಿಮಾನಿ ಪ್ರಜೆಯಾಗಿ ಹೊರಹೊಮ್ಮಬೇಕು. ಈ ಎಲ್ಲಾ ಕಲ್ಪನೆಗಳನ್ನು ಇಟ್ಟುಕೊಂಡು 2000ರಲ್ಲಿ ಸರ್ವ ಶಿಕ್ಷಣ ಅಭಿಯಾನ ಎಂಬುದನ್ನು ಈ ದೇಶದಲ್ಲಿ ಘೋಷಣೆ ಮಾಡಲಾಯಿತು ಎಂದರು.

ಮಕ್ಕಳು ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಇದು ಸಹಾಯಕ ಎಂದು ಸಲಹೆ ನೀಡಿದರು.

ಕಾರ್ಯಕ್ರಮಕ್ಕೆ ವಿವಿಧ ಜಿಲ್ಲೆಗಳಿಂದ ಹಲವು ಪ್ರತಿಭೆಗಳು ಆಗಮಿಸಿದ್ದರು. ಇಂದು ಮೊದಲ ದಿನ ಪ್ರತಿಭಾ ಕಾರಂಜಿ ಕಾರ್ಯಕ್ರಮ ಅತ್ಯಂತ ಸುಂದರ ಆಕರ್ಷವಾಗಿ ನಡೆಯಿತು.

ಈ ಸಂದರ್ಭದಲ್ಲಿ ಶಿವಮೊಗ್ಗ ಶಾಸಕ ಕೆ.ಎಸ್. ಈಶ್ವರಪ್ಪ, ಡಿಎಸ್ ಅರುಣ್, ಜಿಲ್ಲಾಧಿಕಾರಿಗಳಾದ ಡಾ.ಸೆಲ್ವ ಮಣಿ ಇನ್ನೂ ಮುಂತಾದ ಗಣ್ಯರು ಉಪ್ಥಿತರಿದ್ದರು.

ಮೋದಿ ಅವರ ಜೀವನ ಶೈಲಿ ಎಲ್ಲರಿಗೂ ಆದರ್ಶ-ಯಡಿಯೂರಪ್ಪ

0

ಶಿಕಾರಿಪುರ: ಶಿಕಾರಿಪುರ ನಗರದಲ್ಲಿ ನಿಕಟ ಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿಯ ವಿಜಯ ಅಭಿಯಾನದ ಅಂಗವಾಗಿ ಕಾರ್ಯಕರ್ತರ ಮನೆಯಲ್ಲಿ ಧ್ವಜಾರೋಹಣ ಮಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗೆಲುವು ಸಾಧಿಸಿದಲ್ಲಿ ಮಾತ್ರ ನಾವು ತಾಲೂಕು ಜಿಲ್ಲೆಯ ರಾಜ್ಯ ದೇಶ ಕಟ್ಟಲು ಸಾಧ್ಯ. ನರೇಂದ್ರ ಮೋದಿಯಂತಹ ನಾಯಕರು , ಅವರ ಕಾರ್ಯಕ್ರಮಗಳು, ಅವರ ಜೀವನಶೈಲಿ, ಎಲ್ಲರಿಗೂ ಆದರ್ಶ ಎಂದು ಹೇಳಿದರು.

ಕಾರ್ಯಕ್ರಮದ ಲೋಕಸಭಾ ಸದಸ್ಯರ ಬಿ ವೈರಾಘವೇಂದ್ರ ಎಂ ಇ ಡಿ ಅಧ್ಯಕ್ಷರಾದ ಕೆ ಎಸ್ ಗುರುಮೂರ್ತಿ, ಜಿಲ್ಲಾ ಅಧ್ಯಕ್ಷರಾದ ಟಿ ಡಿ ಮೇಘರಾಜ್, ತಾಲೂಕು ಅಧ್ಯಕ್ಷ ವೀರೇಂದ್ರ ಪಾಟೀಲ್ ನಗರ್ ಅಧ್ಯಕ್ಷ ಟಿಎಸ್ ಮೋಹನ್, ಕೆ . ಹಾಲಪ್ಪ, ವಸಂತಗೌಡ, ಕಬಾಡಿ ರಾಜಣ್ಣ ಪುರಸಭಾ ಅಧ್ಯಕ್ಷರಾದ ರೇಖಾ ಬಾಯಿ ಮುಂತಾದವರು ಉಪಸ್ಥಿತರಿದ್ದರು.

ಮಕ್ಕಳ ಮನಸ್ಸಿನಲ್ಲಿ ದ್ವೇಷಾಸೂಯೆ ಬಿತ್ತಬೇಡಿ- ಭೀಮೇಶ್ವರ ಜೋಷಿ

0

ಕಳಸ: ಮುಂದಿನ ಭವಿಷ್ಯದಲ್ಲಿ ಉಜ್ವಲಿಸುವ ಯುವ ಪೀಳಿಗೆಯ ಮಕ್ಕಳು ಬಾಳಿನಲ್ಲಿ ಎಂದಿಗೂ ದ್ವೇಷ, ಅಸೂಯೆ ಎಂಬ ವಿಷಬೀಜವನ್ನು ಮನಸ್ಸಿನಲ್ಲಿ ಬಿತ್ತಿಕೊಳ್ಳದೇ ಭವ್ಯ ಭಾರತದ ಉತ್ತಮ ಪ್ರಜೆಗಳಾಗಬೇಕು ಎಂದು ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರ ಧರ್ಮಕರ್ತ ಶ್ರೀ ಭೀಮೇಶ್ವರ ಜೋಷಿ ಹೇಳಿದರು.

ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರದ ಮಾಂಗಲ್ಯ ಮಂಟಪದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಭಾರತ ಸೇವಾದಳ ಜಿಲ್ಲಾ ಸಮಿತಿ, ಮೂಡಿಗೆರೆ ತಾಲ್ಲೂಕು ಸಮಿತಿ ಸಂಯುಕ್ತಾಶ್ರಯದಲ್ಲಿ ಗುರುವಾರ ತಾಲ್ಲೂಕು ಮಟ್ಟದ ಭಾರತ ಸೇವಾದಳದ ವಿದ್ಯಾರ್ಥಿ ನಾಯಕತ್ವ ತರಬೇತಿ ಶಿಬಿರ ಹಾಗೂ ಮಕ್ಕಳ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಸಾಮಾನ್ಯವಾಗಿ ತೋಟಗಳ ಬೆಳೆಗಳಿಗೆ ಹಾಕುವ ಗೊಬ್ಬರವು ಫಸಲು ಉತ್ತಮವಾಗಿ ದೊರಕಲೆಂದು ಆಶಿಸುತ್ತೇವೆ. ಕೆಲವೊಮ್ಮೆ ಅದೇ ಗೊಬ್ಬರದಿಂದ ಅಕ್ಕಪಕ್ಕದಲ್ಲಿ ಬೇಡದ ಸಸಿಗಳು ಬೆಳೆಯುವುದನ್ನು ಕಂಡರೆ ಕಿತ್ತೊಗೆದು ಬದಿಗೆ ಸರಿಸುವ ರೀತಿಯಲ್ಲೇ ಮಕ್ಕಳು ಬೇಡದ ವಿಷಯದ ಬಗ್ಗೆ ಹೆಚ್ಚಾಗಿ ಅವಲೋಕಿಸದೇ ಮನಸ್ಸಿನಿಂದ ಬದಿಗೆ ಸರಿಸಿ ಮುಂದೆ ಸಾಗಬೇಕು ಎಂದು ತಿಳಿಸಿದರು.

ಸಮಾಜದಲ್ಲಿ ಇರುವಷ್ಟು ದಿನ ನಾವುಗಳು ಇತರರೊಂದಿಗೆ ಪ್ರೀತಿ, ವಿಶ್ವಾಸ, ಗೌರವ, ಒಳ್ಳೆಯ ಸಂಬಂಧ ಮತ್ತು ಧಾರ್ಮಿಕ ವಿಚಾರಗಳನ್ನು ಶ್ರೇಷ್ಟವಾಗಿ ಉಳಿಸಿಕೊಳ್ಳುವ ಜೊತೆಗೆ ಎಲ್ಲಾ ಧರ್ಮವನ್ನು ಪ್ರೀತಿಯಿಂದ ಕಾಣಬೇಕು. ನಾವು ಅನುಸರಿಸುವ ಧರ್ಮಗಳಿಗೆ ಗೌರವಿಸಿದಂತೆ ಇತರೆ ಧರ್ಮಗಳಿಗೆ ಗೌರವಿಸುವುದನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲ್ಲೂಕು ಸೇವಾದಳ ಅಧ್ಯಕ್ಷ ಪಿ.ಕೆ.ಹಮೀದ್ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ನಿಟ್ಟಿನಲ್ಲಿ ಶಿಬಿರ ಹಾಗೂ ಮಕ್ಕಳ ಮೇಳವನ್ನು ಆಯೋಜಿಸಲಾಗಿದ್ದು ಸುಮಾರು 100 ವಿದ್ಯಾರ್ಥಿಗಳು ಭಾಗವಹಿಸಿ ತರಬೇತಿ ಪಡೆಯುತ್ತಿರುವುದು ಸಂತಸ ವಿಷಯ ಎಂದರು.

ಈ ಸಂದರ್ಭದಲ್ಲಿ ಭಾರತ ಸೇವಾದಳ ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಹೆಚ್.ನರೇಂದ್ರ ಪೈ, ಕೇಂದ್ರ ಸಮಿತಿ ಸದಸ್ಯ ಐ.ಬಿ.ಶಂಕರ್, ಕಾರ್ಯದರ್ಶಿ ಹಂಪಯ್ಯ, ಖಜಾಂಚಿ ಜಗದೀಶಾಚಾರ್, ಜಿಲ್ಲಾ ಸಂಘಟಕ ಕೆ.ಬಿ.ಚಂದ್ರಕಾಂತ್, ತಾಲ್ಲೂಕು ಸಂಘಟಕ ಫೈರೋಜ್ ಅಹಮದ್, ದೈಹಿಕ ಶಿಕ್ಷಣಾಧಿಕಾರಿ ಕೆ.ಬಿ.ಶ್ರೀನಿ ವಾಸ್ ಮತ್ತಿತರರು ಹಾಜರಿದ್ದರು.

ಕನ್ನಡದ ಕಾಂತಾರಕ್ಕೆ ನೂರುದಿನದ ಮೆರುಗು

0

2022 ರ ಸಾಲಿನಲ್ಲಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದಿರುವ ಸಿನಿಮಾ ಎಂದರೆ ಅದು ಕಾಂತಾರ. ಇದರಲ್ಲಿ ರಿಷಬ್‌ ಶೆಟ್ಟಿ ಅವರದ್ದು ಪ್ರಧಾನ ಭೂಮಿಕೆ. ರಿಷಬ್ ಶೆಟ್ಟಿ ಅವರ ಅಭಿನಯ ಪ್ರೇಕ್ಷಕರ ಮನದಲ್ಲಿ ಅಚ್ಚೊತ್ತಿದೆ.

ಈ ಜನಪ್ರಿಯ ಪಡೆದ ಕಾಂತಾರ ಸಿನಿಮಾವು ತೆರೆಕಂಡು100 ದಿನಗಳು ಕಳೆದಿವೆ. ಭಾರತದಲ್ಲಿ ರಿಷಬ್‌ ಶೆಟ್ಟಿ ಅವರಿಗೆ ಹೆಸರು ತಂದುಕೊಟ್ಟ ಸಿನಿಮಾ ಎಂದೇ ಖ್ಯಾತಿ ಗಳಿಸಿದೆ. ಈಗ ಈ ಸಿನಿಮಾವು 100 ದಿನದ ಸಂಭ್ರಮದಲ್ಲಿದೆ.

ಕಾಂತಾರ ಸಿನಿಮಾವು 16 ಕೋಟಿ ರೂ. ಬಜೆಟ್‌ ನಲ್ಲಿ ತಯಾರಾಗಿದೆ. ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣ ಮಾಡಿದ ಈ ಸಿನಿಮಾ ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಹಾಗೂ ತುಳು ಭಾಷೆಯಲ್ಲೂ ಕೂಡ ಡಬ್ ಆಗಿದೆ.

ಚಿತ್ರೀಕರಣ,ಕಥೆ,ಅಭಿನಯ, ಲೊಕೇಶನ್, ಎಲ್ಲಾ ದೃಷ್ಟಿಯಿಂದ ತಯಾರಾಗಿ ಕಾಂತಾರ
ಊಹೆಗೂ ಮೀರಿದ ಗಲ್ಲಾ ಪೆಟ್ಟಿಗೆ ಯಶಸ್ಸು ಗಳಿಸಿದೆ.

ಕಾಂತಾರ ಸಿನಿಮಾವನ್ನು ಅಮೇಜಾನ್‌ ಪ್ರೈಮ್‌ ಓಟಿಟಿ ಖರೀದಿ ಮಾಡಿರುವುದು ಅದರ ಹೆಗ್ಗಳಿಕೆ.

ಇದೇ ಜ.15 ರಂದು ಕಿರುತೆರೆಯಲ್ಲೂ ಕಾಂತಾರ ಸಿನಿಮಾ ಶೋ ಆಗಲಿದೆ.

ತುಳುನಾಡಿನ ಆಚರಣೆ ಮತ್ತು ಅಲ್ಲಿನ, ಕಾಡಿನಲ್ಲಿವಾಸಿಸುವ ಜನರ ಬದುಕನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ದೈವದ ಬಗೆಗಿನ ನಂಬಿಕೆಯ ಮೇಲೆ ಸಿನಿಮಾ ಸಾಗುತ್ತದೆ.

ಸಾಮಾನ್ಯವಾಗಿ ಇಂಥಹ ಸಿನಿಮಾಗಳು ಕರಾವಳಿ ಭಾಗದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಆದರೆ ಕಾಂತಾರ ಮಾತ್ರ ಕರಾವಳಿ ಮಾತ್ರವಲ್ಲದೆ, ಇಡೀ ದೇಶದಲ್ಲಿ ತನ್ನದೇ ಜನಪ್ರಿಯತೆ ಪಡೆದಿದೆ.

ರಜಿನಿಕಾಂತ್‌, ಕಮಲ್‌ ಹಾಸನ್‌ ಹೀಗೆ ಅನೇಕ ದೊಡ್ಡ ದೊಡ್ಡ ಸ್ಟಾರ್‌ ಗಳು ಸಿನಿಮಾದ ಬಗ್ಗೆ ಶ್ಲಾಘಿಸಿದ್ದಾರೆ.

ಸಿನಿಮಾಕ್ಕೆ ಎಲ್ಲೆಡೆ ಸಿಕ್ಕ ಪ್ರತಿಕ್ರಿಯೆ ನೋಡಿದಾಗ ಪ್ರತಿಕ್ರಿಯೆ ಅತ್ಯಂತ ಆಪ್ತವಾಗಿದೆ. ಅಷ್ಟೇ ಅಲ್ಲ ಇದರ ಎರಡನೇ ಭಾಗ ಚಲನಚಿತ್ರ ಆಗಬೇಕೆಂದು ಪ್ರೇಕ್ಷಕರು ಬಯಸಿದ್ದಾರೆ. ಆದರೆ, ಇದುವೆರೆಗೂ ಕಾಂತಾರ -2 ಸಿನಿಮಾ ಬರುತ್ತದೆ ಎನ್ನುವ ಬಗ್ಗೆ ಅಧಿಕೃತವಾಗಿ ಮಾಹಿತಿ ಇನ್ನೂ ಹೊರ ಬಿದ್ದಿಲ್ಲ.

ಸಿನಿಮಾ ರಿಲೀಸ್ ಆಗಿ 100 ದಿನಗಳು ಪೂರೈಸಿದೆ. ಈ ಬಗ್ಗೆ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಅವರು ಟ್ವಿಟರ್‌ ನಲ್ಲಿ ಹೀಗೆ ಬರೆದು ಕೊಂಡಿದ್ದಾರೆ. ” ಬೆಳಕು..!! ಆದರೆ, ಇದು ಬೆಳಕಲ್ಲಾ 100 ದಿನದ ದರ್ಶನ” ಎಂದು ಬರೆದುಕೊಂಡಿದ್ದಾರೆ. ಹೀಗೆ ಕಾಂತಾರ ಸಿನಿಮಾದ 100 ದಿನದ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.