ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಇತ್ತೀಚಿನ ದಿನಗಳಲ್ಲಿ ಆಹಾರದಲ್ಲಿ ಕಲಬೆರಕೆ ಹೆಚ್ಚುತ್ತಿರುವುದು ಜನರ ಆರೋಗ್ಯಕ್ಕೆ ಗಂಭೀರ ಅಪಾಯವನ್ನುಂಟು ಮಾಡುತ್ತಿರುವ ಹಿನ್ನಲೆಯಲ್ಲಿ, ಸುರಕ್ಷಿತ, ಶುದ್ಧ ಹಾಗೂ ಗುಣಮಟ್ಟದ ಆಹಾರವನ್ನು ಜನರಿಗೆ ಒದಗಿಸುವ ಉದ್ದೇಶದಿಂದ “ಕಲಬೆರಕೆ ತಡೆಗೆ – ನಮ್ಮ ನಡಿಗೆ” ಆಹಾರ ಸುರಕ್ಷತಾ ಅಭಿಯಾನ – 2026 ಅನ್ನು ಹಮ್ಮಿಕೊಳ್ಳಲಾಗಿದೆ.
ಈ ಅಭಿಯಾನದ ಮೂಲಕ ಆಹಾರ ಕಲಬೆರಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ಆಹಾರ ಸುರಕ್ಷತಾ ಕಾಯ್ದೆ-2006ರ ಮಹತ್ವವನ್ನು ತಿಳಿಸುವುದರ ಜೊತೆಗೆ, ಸುರಕ್ಷಿತ ಆಹಾರದ ಬಳಕೆಯನ್ನು ಉತ್ತೇಜಿಸುವುದು ಮುಖ್ಯ ಗುರಿಯಾಗಿದೆ. ಜನಸಾಮಾನ್ಯರ ಸಹಕಾರದೊಂದಿಗೆ ಶುದ್ಧ ಆಹಾರ ಸಂಸ್ಕೃತಿಯನ್ನು ಬೆಳೆಸಿ, ಉತ್ತಮ ಆರೋಗ್ಯಯುತ ಸಮಾಜ ನಿರ್ಮಿಸುವುದೇ ಈ ಅಭಿಯಾನದ ಆಶಯವಾಗಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ರ ಅನ್ವಯ ಆಹಾರ ವಸ್ತುಗಳ ಉತ್ಪಾದನೆ ಸಂಸ್ಕರಣೆ ಮತ್ತು ಮಾರಾಟ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿರುವ ಸಣ್ಣ ಮಧ್ಯಮ ಪರಮಾಣದ ಉತ್ಪಾದಕರು, ಬೀದಿ ಬದಿ ಆಹಾರ ವಸ್ತುಗಳ ವ್ಯಾಪಾರಿಗಳು, ಪಾಸ್ಟ್ ಫುಡ್ ಕೇಂದ್ರಗಳು, ಬೇಕರಿಗಳು, ಹೋಟೆಲ್ ಮತ್ತು ರೆಸ್ಟೋರೆಂಟ್, ಜ್ಯೂಸ್ ಸೆಂಟರ್, ಐಸ್ ಕ್ರೀಮ್ ಹಾಗೂ ಕಾಂಡಿಮೆಂಟ್ಸ್ ಮಾಲೀಕರುಗಳು ಇಲ್ಲಿ ನೀಡಿರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು.
ಆಹಾರ ತಯಾರಿಕೆ, ಸಂಗ್ರಹಣೆ, ಸಾಗಾಣಿಕೆ, ಮಾರಾಟ ಮಾಡುವವರು ಕಡ್ಡಾಯವಾಗಿ FSSAI ನ ನೊಂದಣಿ/ಪರವಾನಿಗೆಯನ್ನು ಹೊಂದಿರಬೇಕಾಗಿರುವುದು ಕಡ್ಡಾಯ. ನಿಷೇಧಿತ ಕೃತಕ ಬಣ್ಣಗಳು ಮತ್ತು ಹಾನಿಕಾರಕ ರಸಾಯನಿಕ ವಸ್ತುಗಳನ್ನು ಆಹಾರ ತಯಾರಿಕೆಯಲ್ಲಿ ಬಳಸಬಾರದು. ಆಹಾರ ತಯಾರಿಕೆಯಲ್ಲಿ ಕೃತಕ ರುಚಿಕಾರಕಗಳನ್ನು (ಎಂಎಸ್‌ಜಿ/ಟೆಸ್ಟಿಂಗ್ ಪೌಂಡರ್) ಬಳಕೆ ಮಾಡಬಾರದು. ಕಳಪೆ ಗುಣಮಟ್ಟದ, ಕಲಬೆರಕೆಯಾಗಿರುವ, ಹಾನಿಕಾರಕ ಆಹಾರ ವಸ್ತುಗಳ ತಯಾರಿಕೆ ದಾಸ್ತಾನು ವಿತರಣೆ ಮತ್ತು ಮಾರಾಟ ಮಾಡುವಂತಿಲ್ಲ. ಅವಧಿ ಮೀರಿದ ಆಹಾರ ಪದಾರ್ಥಗಳು ಮತ್ತು ಅವಧಿ ಮುಗಿಯುವ ದಿನಾಂಕ ಹೊಂದಿರದ ಆಹಾರ ಪದಾರ್ಥಗಳನ್ನು ಮಾರಾಟ ಮಾಡಬಾರದು. ತಪ್ಪುದಾರಿಗೆ ಎಳೆಯುವ ಜಾಹೀರಾತು ನೀಡುವ ಮೂಲಕ ಆಹಾರ ವಸ್ತುಗಳ ಉತ್ಪಾದನೆ, ಸಂಸ್ಕರಣೆ ಮತ್ತು ಮಾರಾಟ ಮಾಡಬಾರದು. ಆಹಾರ ಪದಾರ್ಥಗಳನ್ನು ಅನಾರೋಗ್ಯಕರ ಮತ್ತು ಅನೈರ್ಮಲ್ಯಕರ ವಾತಾವರಣದಲ್ಲಿ ಸಂಸ್ಕರಿಸುವುದು ಮತ್ತು ತಯಾರಿಸುವುದು ನಿಷೇಧಿಸಲಾಗಿದೆ. ಆಹಾರ ತಯಾರಿಕೆ ಸಂಸ್ಕರಣೆಯಲ್ಲಿ ಶುದ್ದಿಕರಿಸಿದ ನೀರುನ್ನು ಬಳಕೆ ಮಾಡಬೇಕು. ಕಲಬೆರಕೆ ಕಾರಕ ವಸ್ತುಗಳನ್ನು ಆಹಾರ ತಯಾರಿಕಾ ಸ್ಥಳದಲ್ಲಿ ಹೊಂದಿರಬಾರದು. ಆಹಾರ ತಯಾರಿಕೆ, ಸಂಸ್ಕರಣೆಯಲ್ಲಿ ಶುದ್ಧವಾದ ನೀರನ್ನು ಬಳಕೆ ಮಾಡಬೇಕು. ಮಹಾನಗರ ಪಾಲಿಕೆ/ನಗರಸಭೆ/ಪುರಸಭೆ/ಪಟ್ಟಣ ಅಥವಾ ಗ್ರಾಮ ಪಂಚಾಯಿತಿಯ ವ್ಯಾಪಾರೋಧ್ಯಮ ಪರವಾನಿಗೆ ಹೊಂದಿರಬೇಕಾಗಿರುವುದು ಕಡ್ಡಾಯ. ಗೃಹ ಬಳಕೆಯ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಕೆ ಮಾಡುವಂತಿಲ್ಲ.
ಇವೇ ಮೊದಲಾದ ಉಪಬಂಧಗಳಿಗೆ ಸಂಬಂಧಪಟ್ಟಂತೆ ಆಹಾರ ವಸ್ತಗಳ ಉತ್ಪಾದನೆ, ಸಂಸ್ಕರಣ ಮತ್ತು ಮಾರಾಟ ವ್ಯವಹಾರದಲ್ಲಿ ತೊಡಗಿರುವ ವ್ಯಕ್ತಿ ಮತ್ತು ಸಂಸ್ಥೆಗಳು ಈ ಮೇಲ್ಕಂಡ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ಕಂಡುಬಂದಲ್ಲಿ ಅಂತಹ ಅಪರಾಧಗಳಿಗೆ ಗರಿಷ್ಟ 05 ಲಕ್ಷದವರೆಗೆ ದಂಡ ಮತ್ತು ಗರಿಷ್ಟ 03 ವರ್ಷಗಳವರೆಗೆ ಕಾರಗೃಹ ವಾಸ ಮತ್ತು ಈ ಎರಡು ದಂಡನೆಗಳಿಗೆ ಗುರಿಮಾಡಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ರನ್ವಯ ಅವಕಾಶ ಕಲ್ಪಿಸಲಾಗಿದ್ದು, ಎಲ್ಲಾ ರೀತಿಯ ಆಹಾರ ವಸ್ತು ಪ್ರವರ್ತಕರುಗಳಿಗೆ ಈ ಮೂಲಕ ಸಾರ್ವಜನಿಕ ತಿಳುವಳಿಕೆ ನೀಡಲಾಗಿದೆ.
ಈ ಯಾವುದೇ ಉಲ್ಲಂಘನೆಗಳು ಕಂಡುಬಂದಲ್ಲಿ ಸಾರ್ವಜನಿಕರು, ಆಹಾರ ಸುರಕ್ಷತಾ ಗುಣಮಟ್ಟ ಪ್ರಾಧಿಕಾರದ ಕಛೇರಿ ಮತ್ತು ಆಹಾರ ಸುರಕ್ಷತಾ ಅಧಿಕಾರಿಗಳನ್ನು ಹಾಗೂ ಟೋಲ್ ಫ್ರೀ ನಂ.080-22270035 ಅನ್ನು ಅಥವಾ ಆರೋಗ್ಯ ನೀರಿಕ್ಷಕರು/ ಮಹಾನಗರ ಪಾಲಿಕೆ/ ಆಹಾರ ನೀರಿಕ್ಷಕರು/ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಇವರನ್ನು ಸಂಪರ್ಕಿಸಲು ಕೋರಿದೆ.
“ಕಲಬೆರಕೆ ತಿಂಡಿ ತಿನಿಸು ಸೇವಿಸದಿರಿ” ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯಿಂದ ಸಾರ್ವಜನಿಕ ಜಾಗೃತಿ
ಬೆಜ್ಜವಳ್ಳಿಯಲ್ಲಿ ಇರುಮುಡಿ ಅರ್ಪಿಸಿದ ನಟ ಶಿವರಾಜ್ ದಂಪತಿ
ಮಕರ ಸಂಕ್ರಮಣ ಅಂಗವಾಗಿ ಕರ್ನಾಟಕದ ಶಬರಿಮಲೆ ಅಯ್ಯಪ್ಪ ಸ್ವಾಮಿ ಕ್ಷೇತ್ರ ಎಂದು ಪ್ರಸಿದ್ಧಿ ಪಡೆದ ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿಯಲ್ಲಿ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ನಡೆದ ಮಕರ ಸಂಕ್ರಾಂತಿ ಉತ್ಸವ ಹಾಗೂ ಪೀಠ ಸ್ಥಾಪನೆಯ 14ನೇ ವರ್ಷದ ವರ್ಧಂತ್ಯುತ್ಸವ ಕಾರ್ಯಕ್ರಮದಲ್ಲಿ ಖ್ಯಾತ ಚಿತ್ರನಟ ಡಾ.ಶಿವರಾಜ್ ಕುಮಾರ್ ಹಾಗೂ ಶ್ರೀಮತಿ ಗೀತಾ ಶಿವರಾಜ್ ಕುಮಾರ್ ದಂಪತಿಗಳು ಮಾಲೆ ಧರಿಸಿ, ಇರುಮುಡಿ ಕಟ್ಟಿ ದೇವಸ್ಥಾನಕ್ಕೆ ತೆರಳಿದರು.
ಈ ವೇಳೆ ಗರುಡ ದರ್ಶನ ಪಡೆದು, ಸಾವಿರಾರು ಭಕ್ತರ ಸಮ್ಮುಖದಲ್ಲಿ ಅಯ್ಯಪ್ಪ ಸ್ವಾಮಿ ಉತ್ಸವ ಮೂರ್ತಿಯನ್ನು ಹೊತ್ತ ಪಲ್ಲಕ್ಕಿ ಮೆರವಣಿಗೆಯಲ್ಲಿ ಭಾಗವಹಿಸಿ, ಅಯ್ಯಪ್ಪ ಸ್ವಾಮಿಯ ದಿವ್ಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು
Department of Labour ಕಾರ್ಮಿಕ ಇಲಾಖೆಯಿಂದ ದಿಢೀರ್ ಧಾಳಿ: 4 ಕಿಶೋರ ಕಾರ್ಮಿಕರ ಪತ್ತೆ
Department of Labour ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಮಕ್ಕಳ ಸಹಾಯವಾಣಿ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ಅನಿರೀಕ್ಷಿತ ತಪಾಸಣೆಯನ್ನು ಹಮ್ಮಿಕೊಳ್ಳಲಾಗಿದ್ದು, 04 ಕಿಶೋರಾ ಕಾರ್ಮಿಕರು ಪತ್ತೆಯಾಗಿರುತ್ತಾರೆ. ಈ ಕಿಶೋರಾ ಕಾರ್ಮಿಕರನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರು ಪಡಿಸಲಾಗಿದೆ ಎಂದು ಕಾರ್ಮಿಕ ಅಧಿಕಾರಿಗಳು ತಿಳಿಸಿರುತ್ತಾರೆ.
ಈ ತಪಾಸಣೆಯಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರಾ ಕಾರ್ಮಿಕ(ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ಹಾಗೂ ತಿದ್ದುಪಡಿಕಾಯ್ದೆ 2016ರಡಿ ಶಿವಮೊಗ್ಗ ನಗರದ ತೀರ್ಥಹಳ್ಳಿ ರಸ್ತೆ, ಬೈಪಾಸ್, ನ್ಯೂ ಮಂಡ್ಲಿಯ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳು, ಆಟೋವಕ್ಸ್, ಬೀದಿ ಬದಿ ವ್ಯಾಪಾರಿಗಳಿಗೆ, ಬಾಲ ಕಾರ್ಮಿಕ ಕಾಯ್ದೆಯ ಕುರಿತು ಅರಿವು ಮೂಡಿಸಲಾಯಿತು. ಈ ತಪಾಸಣೆಯಲ್ಲಿ ಕೃಷ್ಣ ಎಂ. ಕಾರ್ಮಿಕ ನಿರೀಕ್ಷಕರು, ಶಿವಮೊಗ್ಗ, ರಘುನಾಥ ಎ.ಎಸ್. ಯೋಜನಾ ನಿರ್ದೇಶಕರು, ಲಕ್ಷಣ್, ಪೊಲೀಸ್ ಇಲಾಖೆ ಮತ್ತು ಪುನೀತ್ ಜಿಲ್ಲಾ ಮಕ್ಕಳ ರಕ್ಷಣಾಘಟಕ, ರಾಮಪ್ಪ ಶಿಕ್ಷಕರು ಈ ತಂಡದಲ್ಲಿ ಭಾಗವಹಿಸಿದ್ದರು.
ಅಭಿಮಾನಿ ಮಿತ್ರರೊಂದಿಗೆ ಸಂಕ್ರಾತಿ ಸಂಭ್ರಮದಲ್ಲಿ ಪಾಲ್ಗೊಂಡ ಸಂಸದ ರಾಘವೇಂದ್ರ
ಶಿವಮೊಗ್ಗದ ಸಂಸದ ರಾಘವೇಂದ್ರ ನಿವಾಸದಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು.
ಎಲ್ಲರಿಗೂ ಎಳ್ಳು-ಬೆಲ್ಲ ಹಂಚಿ, ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ ಸರ್ಜಿ, ಭದ್ರಾವತಿ ಬಿಜೆಪಿ ಮುಖಂಡರು, ವೈದ್ಯ ಮಿತ್ರರು ಹಾಗೂ ಅಭಿಮಾನಿಗಳು, ಕಾರ್ಯಕರ್ತರು ಉಪಸ್ಥಿತರಿಕರು.
S.N. Channabasappa “ವಿಷಮುಕ್ತ ತುಂಗಭದ್ರಾ ರೈತರ ಫಸಲು ಭದ್ರ” ಜನಜಾಗೃತಿಯಲ್ಲಿ ಪಾಲ್ಗೊಂಡ ಶಾಸಕ ಚೆನ್ನಿ
S.N. Channabasappa ಇಂದು ಪವಿತ್ರ ತುಂಗಭದ್ರಾ ಸಂಗಮ ಸ್ಥಳವಾದ ಕೂಡಲಿ ಪುಣ್ಯಕ್ಷೇತ್ರದಲ್ಲಿ, ‘ನಿರ್ಮಲಾ ತುಂಗಾ ಅಭಿಯಾನ’ದ ಅಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ “ವಿಷಮುಕ್ತ ತುಂಗಭದ್ರಾ, ರೈತರ ಫಸಲು ಸುಭದ್ರ” ಜಾಗೃತಿ ಕಾರ್ಯಕ್ರಮದಲ್ಲಿ ಶಿವಮೊಗ್ಗ ನಗರದ ಶಾಸಕ ಎಸ್.ಎನ್.ಚನ್ನಬಸಪ್ಪ ಭಾಗವಹಿಸಿದ್ದರು.
ನಮ್ಮ ಜೀವನದಿಯಾಗಿರುವ ತುಂಗಭದ್ರೆಯನ್ನು ಮಾಲಿನ್ಯಮುಕ್ತವಾಗಿಡುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ.
ಬನ್ನಿ, ನಮ್ಮ ನದಿಗಳನ್ನು ವಿಷಮುಕ್ತವಾಗಿಸೋಣ, ಮುಂದಿನ ಪೀಳಿಗೆಗೆ ಶುದ್ಧ ಜಲವನ್ನು ಉಳಿಸೋಣ.
ಈ ನಿಟ್ಟಿನಲ್ಲಿ, ಪುಣ್ಯಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಲ್ಲಿ ಅರಿವು ಮೂಡಿಸುವ ಸಲುವಾಗಿ, ನದಿಯಲ್ಲಿ ಸ್ನಾನ ಮಾಡುವಾಗ ಸೋಪು, ಶ್ಯಾಂಪು ಹಾಗೂ ಇತರೆ ರಾಸಾಯನಿಕಯುಕ್ತ ವಸ್ತುಗಳನ್ನು ಬಳಸುವ ಬದಲಿಗೆ, ನೈಸರ್ಗಿಕವಾದ ಕಡ್ಲೆಹಿಟ್ಟನ್ನು ಬಳಸುವಂತೆ ಯಾತ್ರಿಗಳಿಗೆ ವಿನಂತಿಸಿದರು.
S.N. Channabasappa ನದಿಯ ಪಾವಿತ್ರ್ಯತೆ ಮತ್ತು ಪರಿಸರ ಸಮತೋಲನವನ್ನು ಕಾಪಾಡುವ ಉದ್ದೇಶದಿಂದ ಭಕ್ತಾದಿಗಳಿಗೆ ಕಡ್ಲೆಹಿಟ್ಟನ್ನು ವಿತರಿಸುವ ಮೂಲಕ ಈ ವಿಶೇಷ ಅಭಿಯಾನಕ್ಕೆ ಸಾಥ್ ನೀಡಲಾಯಿತು.
ಈ ಸಂದರ್ಭದಲ್ಲಿ ಹಿರಿಯರಾದ ಶ್ರೀ ಗಿರೀಶ್ ಪಟೇಲ್, ಪ್ರಮುಖರಾದ ಶ್ರೀ ಪ್ರಭಾಕರ್, ಅಭಿಯಾನದ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
Shivaganga Yoga Center ಮಾನವ ಸಂಬಂಧಗಳನ್ನ ಮಕರ ಸಂಕ್ರಾಂತಿ ಘಟ್ಟಿಗೊಳಿಸುತ್ತದೆ: ಎಸ್.ಎಸ್.ಜ್ಯೋತಿಪ್ರಕಾಶ್
Shivaganga Yoga Center ಶ್ರೀ ಶಿವಗಂಗಾ ಯೋಗ ಕೇಂದ್ರದ ವಿಶ್ವಸ್ಥ ಮಂಡಳಿ ಸದಸ್ಯರು, ಅಧ್ಯಕ್ಷರು ಬಸವೇಶ್ವರ ವೀರಶೈವ ಲಿಂಗಾಯಿತ ಸಮಾಜ ಸೇವಾ ಸಂಘ, ಶಾಖೆಯ ಯೋಗ ಅಭ್ಯಾಸಿಯವರಾದ ಶ್ರೀಯುತರು ಯೋಗ ಶಿಕ್ಷಣಾರ್ಥಿಗಳಿಗೆ ಶುಭ ಹಾರೈಸುತ್ತಾ ಮಾನವ ಸಂಬಂಧಗಳನ್ನು ಗಟ್ಟಿಗೊಳಿಸುವ ಸಂಕ್ರಾಂತಿ ಹೊಸ ವರ್ಷದ ಪ್ರಥಮ ಹಬ್ಬವಾಗಿದೆ, ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡೋಣ ಹಾಗೆ ನಮ್ಮ ನಡೆನುಡಿಯಲ್ಲೂ ಸಹ ಶುದ್ಧವಾಗಿರಲು ಪ್ರಯತ್ನಿಸೋಣ ಎಂದು ನುಡಿದರು.
ಅವರು ಶಿವಗಂಗಾ ಯೋಗ ಕೇಂದ್ರದ ರಾಘವ ಶಾಖೆಯಲ್ಲಿ ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು ಹಬ್ಬಗಳು ನಮಗೆ ಜೀವನೋತ್ಸಾಹವನ್ನು ಮೂಡಿಸುತ್ತದೆ ಸೂರ್ಯನು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಪ್ರವೇಶ ಮಾಡುವುದರ ಜೊತೆಗೆ ಹೆಚ್ಚು ಬೆಳಕನ್ನ ನೀಡುತ್ತದೆ ಎಂದ ಅವರು ಹಬ್ಬಗಳು ನಮ್ಮ ಸಂಸ್ಕೃತಿಯ ಪ್ರತೀಕ ಹಾಗೆ ಸ್ತ್ರೀಯರಿಗೆ. ರೈತರಿಗೆ ಸಂಭ್ರಮದ ಹಬ್ಬವಾಗಿದೆ.
Shivaganga Yoga Center ಇದೇ ಸಂದರ್ಭದಲ್ಲಿ ಯೋಗ ಶಿಕ್ಷಕರಾದ ಜಿ.ಎಸ್.ಓಂಕಾರ್ ಅವರು ಮಾತನಾಡುತ್ತಾ ಸೂರ್ಯದೇವನು ಉತ್ತರಾಯಣಕ್ಕೆ ಪ್ರವೇಶ ನೀಡುವ ಶುಭದಿನ ನಮ್ಮ ಆಲೋಚನೆಗಳು ಒಳ್ಳೆಯ ದಿಕ್ಕಿನತ್ತ ತಿರುಗಲಿ ಬದುಕು ಎಳ್ಳು ಬೆಲ್ಲದಂತೆ ಮಿಶ್ರವಾಗಿರುವಂತೆ ನಮ್ಮ ನಡೆ-ನುಡಿಗಳು ಮಧುರ ಬಾಂಧವ್ಯವನ್ನ ಮೂಡಿಸಲಿ ಈ ಹಬ್ಬಕ್ಕೆ ಸಾಕಷ್ಟು ಆಧ್ಯಾತ್ಮಿಕ ಹಿನ್ನೆಲೆ ಇದೆ ಈ ಸುಗ್ಗಿ ಹಬ್ಬ ಎಲ್ಲರಲ್ಲೂ ಚೈತನ್ಯವನ್ನು ಮೂಡಿಸುತ್ತದೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಎಲ್ಲಾ ಶಿಬಿರಾರ್ಥಿಗಳಿಗೆ ಎಳ್ಳು ಬೆಲ್ಲ ಸಿಹಿ ಕಬ್ಬು ವಿತರಿಸಿ ಪರಸ್ಪರಲ್ಲಿ ಶುಭಾಶಯ ಕೋರಲಾಯಿತು. ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕರ ವಿಜಯ ಕೃಷ್ಣ. ಹರೀಶ್ . ರೋಟರಿ ಜಿ ವಿಜಯಕುಮಾರ್. ಸುಬ್ರಮಣಿ. ಶ್ರೀನಿವಾಸ್. ನರಸೂಜಿ ರಾವ್. ಶಂಕರ್. ಸುಜಾತಾ. ಗಾಯಿತ್ರಿ. ಶೋಭಾ, ಗಾಯತ್ರಿ ರಮೇಶ್
ಉಪಸ್ಥಿತರಿದ್ದರು.
Shivamogga District Health and Family Welfare Department ನೇತ್ರ ಸಹಾಯಕರ ಹುದ್ದೆಗೆ ಆಯ್ಕೆ ಪಟ್ಟಿ ಪ್ರಕಟ: ಆಕ್ಷೇಪಣೆ ಸಲ್ಲಿಸುವವರಿಗೆ ಅವಕಾಶ
Shivamogga District Health and Family Welfare Department ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮದಡಿ ಗುತ್ತಿಗೆ ಆಧಾರದ ಮೇಲೆ ನೇತ್ರ ಸಹಾಯಕರ 5 ಹುದ್ದೆಗೆ 2ನೇ ಹಂತದಲ್ಲಿ ಅಂತಿಮವಾಗಿ ಆಯ್ಕೆಯಾದವರ ಹಾಗೂ ಆಯ್ಕೆಯಾಗದವರ ಪಟ್ಟಿಯನ್ನು ಇಲಾಖೆಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದ್ದು, ಆಕ್ಷೇಪಣೆಗಳಿದ್ದಲ್ಲಿ ಜ. 21 ರೊಳಗಾಗಿ ಸಲ್ಲಿಸುವಂತೆ ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮಾಧಿಕಾರಿಗಳು ತಿಳಿಸಿರುತ್ತಾರೆ.
Shivamogga District Health and Family Welfare Department ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮ ವಿಭಾಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಶಿವಮೊಗ್ಗ , ದೂ.ಸಂ.: 8197094440/ 9481691580/ 08182-222382 ಗಳನ್ನು ಸಂಪರ್ಕಿಸಬಹುದಾಗಿದೆ.
Azim Premji Foundation ಪದವಿ ಮೊದಲ ವರ್ಷದ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ಪಡೆಯಲು ಅರ್ಜಿ ಆಹ್ವಾನ
Azim Premji Foundation ಅಜೀಂ ಪ್ರೇಂ ಜೀ ಫೌಂಡೇಶನ್‌ನವರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಒಂದು ವಿನೂತನ ಕಾರ್ಯಕ್ರಮ ಆರಂಭಿಸಿದ್ದು ಪದವಿ ಮೊದಲನೇ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ ರೂ.32,000 ವಿದ್ಯಾರ್ಥಿವೇತನವನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಯನ್ನು ಸರ್ಕಾರಿ ಶಾಲೆಯಲ್ಲಿ ಓದಿ ಪ್ರಸ್ತುತ ಪದವಿಯನ್ನು ಖಾಸಗಿ ಅಥವಾ ಸರ್ಕಾರಿ ಯಾವುದಾದರೂ ಕಾಲೇಜಿನಲ್ಲಿ ಓದುತ್ತಿರುವಂತಹ ಪದವಿ ಮೊದಲನೇ ವರ್ಷದ ವಿದ್ಯಾರ್ಥಿನಿಯರಿಗೆ ರೂ.32,000 ವಿದ್ಯಾರ್ಥಿ ವೇತನವನ್ನು ನೀಡುವ ಯೋಜನೆ ಇದಾಗಿದೆ. ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಜ.31 ಕಡೆಯ ದಿನವಾಗಿದ್ದು, ಅರ್ಜಿ ಸಲ್ಲಿಕೆ ವಿಧಾನ, ಇತರೆ ಹೆಚ್ಚಿನ ಮಾಹಿತಿಗಾಗಿ ಈ https://www.youtube.com/watch?v=dR0q9nozo-4, https://www.youtube.com/@azimpremjischolarship ಯೂಟ್ಯೂಬ್ ಲಿಂಕನ್ನು ಸಂಪರ್ಕಿಸಬಹುದೆಂದು ಜಿ.ಪಂ.ಸಿಇಓ ಎನ್ ಹೇಮಂತ್ ತಿಳಿಸಿದ್ದಾರೆ.
Dinesh Gundu Rao ನರಮಂಡಲ ಕಾಯಿಲೆ “ಗಿಲೆನ್ ಬಾರಿ” ಗೆ ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಯೋಜನೆ ವ್ಯಾಪ್ತಿಗೆ- ಸಚಿವ ದಿನೇಶ್ ಗುಂಡೂರಾವ್.
Dinesh Gundu Rao ರಾಜ್ಯದಲ್ಲಿ ಗಿಲೆನ್-ಬಾರಿ ಸಿಂಡ್ರೋಮ್ (GBS) ಎಂಬ ನರಮಂಡಲದ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ದುಬಾರಿ ಚಿಕಿತ್ಸೆಯನ್ನು ಕೈಗೆಟುಕುವಂತೆ ಮಾಡುವ ಮೂಲಕ ನೆರವಾಗಲು ನಮ್ಮ ಸರ್ಕಾರ ಒಂದು ಮಹತ್ವದ ನಿರ್ಧಾರ ಕೈಗೊಂಡಿದೆ.
ಈ ಕಾಯಿಲೆಯ ಚಿಕಿತ್ಸೆಯಲ್ಲಿ ಅತ್ಯಂತ ಪ್ರಮುಖವೂ ಮತ್ತು ದುಬಾರಿಯೂ ಆದ ‘ಇಂಟ್ರಾವೆನಸ್ ಇಮ್ಯುನೊಗ್ಲಾಬ್ಯುಲಿನ್’ (IVIG) ಚಿಕಿತ್ಸೆಯನ್ನು ಈಗ ‘ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ’ (AB PMJAY-CM’s ArK) ಯೋಜನೆಯ ವ್ಯಾಪ್ತಿಗೆ ತರಲಾಗಿದೆ. ಈ ಕುರಿತು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ಮೂಲಕ ನೂತನ ಸುತ್ತೋಲೆಯನ್ನು ಹೊರಡಿಸಲಾಗಿದೆ. ಅದರಂತೆ,
- ದುಬಾರಿ ಚಿಕಿತ್ಸೆಗೆ ಸರ್ಕಾರಿ ಸವಲತ್ತು: ಈ ಹಿಂದೆ ಜಿ.ಬಿ.ಎಸ್ ಕಾಯಿಲೆಗೆ ನೀಡಲಾಗುತ್ತಿದ್ದ ಮೂಲ ಚಿಕಿತ್ಸೆಯ ಜೊತೆಗೆ, ಈಗ ಅತ್ಯಗತ್ಯವಾದ IVIG ಥೆರಪಿಯನ್ನೂ ಯೋಜನೆಯಡಿ ತರಲಾಗಿದೆ. ಇದಕ್ಕಾಗಿ ವಿಶೇಷ ಪ್ರೊಸೀಜರ್ ಕೋಡ್‌ಗಳನ್ನು (2B.M1.00061D ಮತ್ತು 2B.M1.00061E) ನಿಗದಿಪಡಿಸಲಾಗಿದೆ.
- ಚಿಕಿತ್ಸಾ ವೆಚ್ಚ ಮತ್ತು ಮಿತಿ: ಪ್ರತಿ ರೋಗಿಗೆ ಗರಿಷ್ಠ 2 ಲಕ್ಷ ರೂಪಾಯಿಗಳವರೆಗೆ ಈ ಚಿಕಿತ್ಸಾ ಸೌಲಭ್ಯ ದೊರೆಯಲಿದೆ. ಔಷಧಿಯ ದರವನ್ನು ಪ್ರತಿ ಗ್ರಾಂಗೆ 2,000 ರೂಪಾಯಿಗಳಂತೆ ನಿಗದಿಪಡಿಸಲಾಗಿದ್ದು, ರೋಗಿಯ ತೂಕದ ಆಧಾರದ ಮೇಲೆ ಡೋಸೇಜ್ ನೀಡಲು ಸೂಚಿಸಲಾಗಿದೆ.
- ಪಾರದರ್ಶಕತೆಗೆ ಆದ್ಯತೆ: ಯೋಜನೆಯ ದುರುಪಯೋಗ ತಡೆಯಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಆಸ್ಪತ್ರೆಗಳು ಚಿಕಿತ್ಸೆ ನೀಡುವಾಗ ಔಷಧದ ಬಾಟಲಿ (Vial), ಅದರ ಬ್ಯಾಚ್ ಸಂಖ್ಯೆ, ರೋಗಿಯ ಹೆಸರಿರುವ ಫೋಟೋ ಹಾಗೂ ವೈದ್ಯರು ದೃಢೀಕರಿಸಿದ ಡೋಸೇಜ್ ಪಟ್ಟಿಯನ್ನು ಕಡ್ಡಾಯವಾಗಿ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕೆಂದು ಸೂಚಿಸಲಾಗಿದೆ.
- ಎಲ್ಲಾ ಆಸ್ಪತ್ರೆಗಳಿಗೆ ಅನ್ವಯ: ಈ ಸೌಲಭ್ಯವು ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಹಾಗೂ ಯೋಜನೆಯಡಿ ನೋಂದಾಯಿತವಾಗಿರುವ (Empanelled) ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರಲಿದೆ.
ಬಡ ಮತ್ತು ಸಾಮಾನ್ಯ ವರ್ಗದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದ್ದು, ನರರೋಗಕ್ಕೆ ಸಂಬಂಧಿಸಿದ ಈ ಕಠಿಣ ಚಿಕಿತ್ಸೆಯ ವೆಚ್ಚವನ್ನು ಸರ್ಕಾರವೇ ಭರಿಸುವುದರಿಂದ ಸಾವಿರಾರು ರೋಗಿಗಳಿಗೆ ಅನುಕೂಲವಾಗಲಿದೆ.
Dinesh Gundu Rao ಬಡ ಮತ್ತು ಸಾಮಾನ್ಯ ವರ್ಗದ ರೋಗಿಗಳಿಗೆ ಸಾವಿರಾರು ರೂಪಾಯಿ ವೆಚ್ಚದ ಈ ಚಿಕಿತ್ಸೆಯನ್ನು ಉಚಿತವಾಗಿ ಒದಗಿಸುವ ಮೂಲಕ ಅವರ ಬದುಕಿಗೆ ಆಸರೆಯಾಗುವುದು ನಮ್ಮ ಸರ್ಕಾರದ ಬದ್ಧತೆಯಾಗಿದೆ.
Klive Special Article ಲೇಖನಮಾಲೆ: ಶ್ರೀಮದ್ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ
ಲೇ : ಡಾ.ರಾಮಕೃಷ್ಣ ಮುದ್ದೇಪಾಲ
ಭಾಗ – 1
ಅಪರಾಧ ,ಪರಿಕಲ್ಪನೆ
ಭಗವದ್ಗೀತೆ ಭಾರತೀಯರಿಗೆ ಪವಿತ್ರ ಗ್ರಂಥ. ಅದರಲ್ಲಿನ ಸಂದೇಶಗಳು ಪ್ರಸ್ತುತವಾಗಿರುವ ಬಗ್ಗೆ ವಿದ್ವಾಂಸರು ತಮ್ಮ ಪ್ರವಚನ, ಬರವಣಿಗೆ ಮೂಲಕ ಹಂಚಿಕೊಳ್ಳುತ್ತಿದ್ದಾರೆ.
ಇಂಥದೊಂದು ಪ್ರಯತ್ನವನ್ನ ಸೋಂದಾ – ಸ್ವರ್ಣವಲ್ಲಿ ಮಹಾಸಂಸ್ಥಾನದ ಪೂಜ್ಯ ಶ್ರೀಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು
ಶಿವಮೊಗ್ಗ ಜಿಲ್ಲೆಯಲ್ಲಿ ಕೈಗೊಂಡಿದ್ದರು.
ಭಗವದ್ಗೀತಾ ಅಭಿಯಾನದ ವಿಶೇಷವಾಗಿ ” ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ” ವಿಚಾರವಾಗಿ ವಿಚಾರ ಸಂಕಿರಣವನ್ನ ಕುವೆಂಪು ವಿವಿಯಲ್ಲಿ ಏರ್ಪಡಿಸಲಾಗಿತ್ತು.
ಪೊಲೀಸ್ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವ ಡಾ.ರಾಮಕೃಷ್ಣ ಮುದ್ದೇಪಾಲ ಅವರು
ಅಪರಾಧ ನಿಯಂತ್ರಣದಲ್ಲಿ ಭಗವದ್ಗೀತೆಯ ಅಂಶಗಳು ಹೇಗೆ ಸಹಕಾರಿ ಎಂಬುದನ್ನ ಸೋದಾಹರಣ ಪ್ರಸ್ತುತಪಡಿಸಿದರು.
ಉಪನ್ಯಾಸ ಮಾಲಿಕೆಯಲ್ಲಿ ನಾಲ್ಕು ಭಾಗಗಳಿವೆ. ಮೊದಲ ಭಾಗ ಇಲ್ಲಿದೆ.
Klive Special Article ಅಪರಾಧಶಾಸ್ತ್ರದ ದೃಷ್ಟಿಯಿಂದ ಭಗವದ್ಗೀತೆಯನ್ನು ಅಪರಾಧ ನಿಯಂತ್ರಣಕ್ಕೆ ಹೇಗೆ ಉಪಯೋಗಿಸಬಹುದು?
“ಅಪರಾಧ” ಎನ್ನುವ ಪರಿಕಲ್ಪನೆ ಮಾನವ ನಾಗರಿಕತೆಯಷ್ಟೇ ಪುರಾತನವಾದುದು. ನಮ್ಮ ಸ್ಮೃತಿಕಾರರು ವಿವಿಧ ರೀತಿಯ ಅಪರಾಧಗಳನ್ನು ಮತ್ತು ಅವುಗಳಿಗೆ ವಿಧಿಸಬಹುದಾದ ಶಿಕ್ಷೆಗಳನ್ನು ಉಲ್ಲೇಖಿಸಿದ್ದಾರೆ. ಆದರೆ ಆಧುನಿಕ ಅಪರಾಧಶಾಸ್ತ್ರವು 19ನೇ ಶತಮಾನದಿಂದೀಚೆಗೆ ಬೆಳೆದು ಬಂದಿರುತ್ತದೆ. ಅಪರಾಧಶಾಸ್ತ್ರವನ್ನು ಸಮಾಜಶಾಸ್ತ್ರದ ಭಾಗವಾಗಿಯೇ ಪರಿಗಣಿಸಲಾಗುತ್ತದೆ. ಅಪರಾಧಶಾಸ್ತ್ರವು ಮಾನವನ ಅಪರಾಧ ವರ್ತನೆಯ ವೈಜ್ಞಾನಿಕ ಅಧ್ಯಯನವಾಗಿದ್ದರೂ ಕೂಡ ಅದು ಸ್ವತಃ ವಿಜ್ಞಾನವಲ್ಲ. ಯಾಕೆಂದರೆ ಅದು ಸಂಕೀರ್ಣ ಮತ್ತು ಸಾಪೇಕ್ಷ ವಿಷಯವಾಗಿದ್ದು ದೇಶ ಮತ್ತು ಕಾಲಮಿತಿಗೆ ಒಳಪಟ್ಟಿದೆ. ಅಪರಾಧಶಾಸ್ತ್ರವು ಸಮಾಜಶಾಸ್ತ್ರ, ಮನಃಶಾಸ್ತ್ರ, ಮಾನವ ಶಾಸ್ತ್ರ, ಕಾನೂನು, ಶಿಕ್ಷಾಶಾಸ್ತ್ರ, ಅಪರಾಧ ಸಂತ್ರಸ್ತಶಾಸ್ತ್ರ ಮತ್ತು ವಿಧಿವಿಜ್ಞಾನ ಈ ವಿಷಯಗಳೊಂದಿಗೆ ನಿಕಟ ಸಂಬಂಧ ಹೊಂದಿದ್ದು ಅದು ಅಪರಾಧಗಳ ಕಾರಣ, ನಿಗ್ರಹ ಮತ್ತು ಪರಿಹಾರವನ್ನು ಒಳಗೊಂಡಿರುತ್ತದೆ. ಅಪರಾಧಶಾಸ್ತ್ರ ಮತ್ತು ಅಪರಾಧಕ್ಕೆ ಹಲವಾರು ವ್ಯಾಖ್ಯೆಗಳನ್ನು ಕೊಟ್ಟಿದ್ದರೂ ಸಹ ಅವೆಲ್ಲವೂ ಅಪೂರ್ಣವಾಗಿವೆ ಕಾರಣ, ಅಪರಾಧಕ್ಕಿರುವ ಸಂಕೀರ್ಣತೆ ಮತ್ತು ಸಾಪೇಕ್ಷತೆ. ಆಧುನಿಕ ಮನುಷ್ಯನ ಜೀವನ ಸಂಕೀರ್ಣವಾದ ಹಾಗೆ ಅಪರಾಧಗಳು ಸಂಕೀರ್ಣವಾಗುತ್ತಿವೆ.
Klive Special Article ಅಪರಾಧಶಾಸ್ತ್ರದ ಪ್ರಕಾರ ಅಪರಾಧ ಒಂದು ಸಮಾಜವಿರೋಧಿ ಕೃತ್ಯ. ಯಾವುದೇ ಕೃತ್ಯವು ಸರ್ಕಾರದಿಂದ ಕಾನೂನುಬಾಹಿರವೆಂದು ಪರಿಗಣಿಸಲ್ಪಟ್ಟು ಅದಕ್ಕೆ ಶಿಕ್ಷೆ ವಿಧಿಸಲ್ಪಟ್ಟಿದ್ದರೆ ಆ ಕೃತ್ಯವನ್ನು ಅಪರಾಧವೆಂದು ಪರಿಗಣಿಸಬಹುದು. ಯಾವುದೇ ಕೃತ್ಯವು ಅಪರಾಧವೆಂದೆನಿಸಲು ಆ ಕೃತ್ಯದ ಹಿಂದೆ ಅಪರಾಧೀ ಮನಸ್ಸಿರಬೇಕು. ಅಪರಾಧವೆಸಗುವ ಮನಸ್ಸು, ಯೋಚನೆ ಅಥವಾ ಯೋಜನೆಯಿಲ್ಲದಿದ್ದರೆ ಆ ಕೃತ್ಯವನ್ನು ” ಸಾಮಾನ್ಯ ಅಪವಾದ ” ವೆಂದು ಪರಿಗಣಿಸಿ ಕಾನೂನಿನಲ್ಲಿ ಯಾವುದೇ ಶಿಕ್ಷೆಯನ್ನು ವಿಧಿಸಲಾಗುವುದಿಲ್ಲ. ಅಂದರೆ ಅಪರಾಧಿಗೆ ಕರ್ತೃತ್ವದ ಭಾವವಿರುತ್ತದೆ ಮತ್ತು ಅಪರಾಧದ ಉದ್ದೇಶ ಮುಖ್ಯವಾಗುತ್ತದೆ. ಕರ್ಮಫಲದ ಕುರಿತು ಭಗವದ್ಗೀತೆಯಲ್ಲಿ ಶ್ರೀಕೃಷ್ಣನ ಮಾತು ಗಮನಾರ್ಹ.
ಯಸ್ಯ ನಾಹಂಕೃತೋ ಭಾವೋ ಬುದ್ಧಿರ್ಯಸ್ಯ ನ ಲಿಪ್ಯತೇI
ಹತ್ವಾsಪಿ ಸ ಇಮಾಂಲ್ಲೋಕಾನ್ನ ಹಂತಿ ನ ನಿಬಧ್ಯತೇII18.17II
ಯಾವನಿಗೆ ನಾನು ʼಕರ್ತೃʼ ಎಂಬ ಭಾವವಿರುವುದಿಲ್ಲವೋ, ಯಾವನ ಬುದ್ಧಿಯು ಲಿಪ್ತವಾಗುವುದಿಲ್ಲವೋ ಅಂಥವನು ಈ ಲೋಕಗಳನ್ನು ಕೊಂದರೂ ಕೊಲ್ಲುವುದಿಲ್ಲ, ಬಂಧಿಸಲ್ಪಡುವುದಿಲ್ಲ.
ʼಅಪರಾಧʼ ಕಾನೂನಿನ ವಿಷಯವಾದರೆ ʼಪಾಪʼವನ್ನು ನೈತಿಕ ಮತ್ತು ಧಾರ್ಮಿಕ ನೆಲೆಯಲ್ಲಿ ನೋಡಬೇಕಾಗುತ್ತದೆ. ಉದಾಹರಣೆಗೆ ಸುಳ್ಳು ಹೇಳುವುದು ನೈತಿಕ ದೃಷ್ಟಿಯಿಂದ ಪಾಪವಾದರೂ ಕಾನೂನಿನ ದೃಷ್ಟಿಯಲ್ಲಿ ಅಪರಾಧವೆನಿಸುವುದಿಲ್ಲ. ಸಾಮಾನ್ಯವಾಗಿ ಎಲ್ಲ ಅಪರಾಧಗಳು ಪಾಪಕೃತ್ಯಗಳಾಗುತ್ತವೆ. ಆದರೆ ಎಲ್ಲ ಪಾಪಕೃತ್ಯಗಳು ಅಪರಾಧಗಳಾಗುವುದಿಲ್ಲ.
ಕೇವಲ ಮಾನಸಿಕ ಕ್ರಿಯೆ ಪಾಪವಾಗಬಹುದು ಆದರೆ ಅಪರಾಧವಾಗುವುದಿಲ್ಲ.
ಕರ್ಮೇಂದ್ರಿಯಾಣಿ ಸಂಯಮ್ಯ ಯ ಆಸ್ತೇ ಮನಸಾ ಸ್ಮರನ್I
ಇಂದ್ರಿಯಾರ್ಥಾನ್ ವಿಮೂಢಾತ್ಮಾ ಮಿಥ್ಯಾಚಾರಃ ಸ ಉಚ್ಯತೇII3.6II
ಯಾವನು ಕರ್ಮೇಂದ್ರಿಯಗಳನ್ನು ನಿಗ್ರಹಿಸಿ ಇಂದ್ರಿಯವಿಷಯಗಳನ್ನು ಮನಸ್ಸಿನಿಂದ ಸ್ಮರಿಸುತ್ತಿರುವನೋ ಅವನು ವಿಮೂಢಾತ್ಮನೆಂದೂ ಮಿಥ್ಯಾಚಾರನೆಂದೂ ಹೇಳಲ್ಪಡುತ್ತಾನೆ.
ಅಪರಾಧ ಮತ್ತು ಪಾಪ ಇವೆರಡೂ ಸ್ಥಳದಿಂದ ಸ್ಥಳಕ್ಕೆ ಮತ್ತು ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಹೋಗುವುದನ್ನು ಗಮನಿಸಬಹುದು.
