Wednesday, September 16, 2026
Wednesday, September 16, 2026

ಹೊಸನಗರ ಸಾಹಿತ್ಯ ಸಮ್ಮೇಳನಕ್ಕೆ ಪ್ರಭಾಕರ ಕಾರಂತರು ಸರ್ವಾಧ್ಯಕ್ಷರಾಗಿ ಆಯ್ಕೆ

Date:

ಪ್ರಭಾಕರ ಕಾರಂತರೆಂದರೆ ಗಂಭೀರ ಮನಸ್ಸಿನ ,ಆಳ ವಸ್ತುಕಾಳಜಿಗೊಂದು ರೂಪಕದಂತಹ ವ್ಯಕ್ತಿತ್ವ.
ಬರಹಗಳಲ್ಲಿ ಅನನ್ಯ ಜೀವನ ಶ್ರದ್ಧೆ, ಅಪ್ಪಟ ಮಾನುಷ ಮಿಡಿತವುಳ್ಳವರು.
ಅವರ ಸಖ್ಯವೆಂದರೆ ಎತ್ತರದ ಅನುಭವಗಳನ್ನ ನಮ್ಮ ಎದೆಯೊಳಗೆ ಇಡುವಂಥ ಸುಲಭ ಸಾಧ್ಯದ ಸಂವೇದನೆ ನೀಡುವಂಥದ್ದು.
ಕಾರಂತರೀಗ ಹೊಸನಗರ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಅವರ ಕಿರುಪರಿಚಯವನ್ನ ಇನ್ನೋರಗವ ಮಲೆನಾಡಿನ ಪ್ರತಿಭೆ ಬೇಗಾರ್ ನೀಡಿದ್ದಾರೆ..

ತವರು ಮನೆಯನ್ನೂ – ಸೇರಿದ ಮನೆಯನ್ನೂ ಬೆಳಗು ಎಂಬ ಜನಪ್ರಿಯ ನುಡಿಯನ್ನು ಪುರುಷರಿಗೂ ಅನ್ವಯ ಮಾಡಿ ಹೇಳುವುದಾದರೆ ನಮ್ಮ ಹೊಸಕೊಪ್ಪ ದ ಪ್ರಭಾಕರ ಕಾರಂತ್ ರಿಗೆ ತುಂಬಾ ಚನ್ನಾಗಿ ಒಪ್ಪುತ್ತದೆ.

ಏಕೆಂದರೆ ಹೊಸನಗರ ದ ಮುಳುಗಡೆ ಪ್ರದೇಶ ದಿಂದ ಬಂದರೂ ಅವರು ಹೊಸ ಕೊಪ್ಪದ ಹಳೆಯ ಕಾರಂತರು. ಅತ್ತ ಹೊಸನಗರ ದಲ್ಲೂ ಸರ್ವ ಮಾನ್ಯರು.

ತಾನಿರುವ ಜಾಗದಲ್ಲೇ ಅಸ್ಮಿತೆ ಯ ಆವರಿಸಿಕೊಳ್ಳಬಲ್ಲ ಕಾರಂತ್ ರ ಶಕ್ತಿ ಅವರ ಪ್ರೀತಿ ಮತ್ತು ನೀತಿ.
ತನ್ನ ನಿಷ್ಠೆ, ಅಸಾಧಾರಣ ಧೈರ್ಯ, ಮನಸೆಳೆವ ಬರಹ, ಅನನ್ಯ ಜೀವನ ಪ್ರೀತಿ ಮತ್ತು ಸಹೃದಯ ಸಜ್ಜನಿಕೆಯಿಂದ ಸರ್ವರ ಗೌರವ ಕ್ಕೆ ಮತ್ತೊಂದು ರೂಪಕವೇ ಕಾರಂತ್ ಅವರು.

ಇದೀಗ ಅಂದರೆ 2026 ರ ಏಪ್ರಿಲ್ 24 ರಂದು ಹೊಸನಗರ ದಲ್ಲಿ ನಡೆವ ಸಾಹಿತ್ಯ ಸಮ್ಮೇಳನ ದ ಸರ್ವಾಧ್ಯಕ್ಷ ರಾಗಿರುವುದು ಅವರ ಸಂಸರ್ಗ ದ ನಮ್ಮೆಲ್ಲರಿಗೂ ಅತೀವ ಹೆಮ್ಮೆ ಮತ್ತು ಸಂತೋಷದ ಸಂಗತಿ.

ಅಂದ ಹಾಗೇ ಈ ಸಮ್ಮೇಳನದಲ್ಲಿ ಕಾರಂತ ರ ಬದುಕು – ಬರಹದ ಬಗ್ಗೆ ಮಾತಾಡುವ ಸದವಕಾಶ ನನಗೇ ಸಿಕ್ಕಿರುವುದು ಖುಷಿ ಯ ಇಮ್ಮಡಿಯಾಗಿದೆ

ಬರಹ: ರಮೇಶ್ ಬೇಗಾರ್
ಚಲನಚಿತ್ರ ನಿರ್ದೇಶಕರು.. ..

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...