Sunday, August 2, 2026
Sunday, August 2, 2026

ಪ್ರಾಣಿಗಳಿಗೆ ಕುಡಿಯುವ ನೀರಿನ ಸೌಲಭ್ಯ ನೀಡುತ್ತಿರುವ ಸಂಸ್ಥೆಗಳ ಕಾರ್ಯ ಶ್ಲಾಘನೀಯ- ಆರಗ ಜ್ಞಾನೇಂದ್ರ

Date:

ಪ್ರಾಣಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿರುವ ಸಂಸ್ಥೆಗಳ ಕಾರ್ಯ ಶ್ಲಾಘನೀಯ ಎಂದು ಮಾಜಿ ಗೃಹ ಸಚಿವ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಜೆಸಿಐ ತೀರ್ಥಹಳ್ಳಿ, ಕಾಳಿಕಾಂಬ ಮಾರುತಿ ಸರ್ವಿಸ್ ಸೆಂಟರ್, ಅನಂತ ಆಯುರ್ವೇದ ಟ್ರಸ್ಟ್ ಹಿರೇಸರ ಹಾಗೂ ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ತೀರ್ಥಹಳ್ಳಿ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಜಾನುವಾರು ಕುಡಿಯುವ ನೀರಿನ ಟ್ಯಾಂಕ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬೇಸಿಗೆ ಕಾಲಕ್ಕೆ ಪಶುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿರುವುದು ಬಹಳ ಪ್ರಶಂಸನೀಯ ಕಾರ್ಯವಾಗಿದೆ. ಗೋವುಗಳ ಆಶೀರ್ವಾದ ಸಂಘ ಸಂಸ್ಥೆಗಳ ಮೇಲೆ ಸದಾ ಇರುತ್ತದೆ ಎಂದು ತಿಳಿಸಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್ ನಾರಾಯಣ್ ರಾವ್ ಮಾತನಾಡಿ, ಜೆಸಿಐ ತೀರ್ಥಹಳ್ಳಿ ಸಂಸ್ಥೆಯು ಯುವಜನರಲ್ಲಿ ಹಾಗೂ ಸಮಾಜದಲ್ಲಿ ಉತ್ತಮ ಬದಲಾವಣೆಗಳನ್ನು ತರುವುದರಲ್ಲಿ ಯಶಸ್ವಿಯಾಗಿದೆ. ಕಾರ್ಯಕ್ರಮದ ನಿರ್ದೇಶಕ ರಾಜೇಂದ್ರ ಆಚಾರ್ಯ ಉತ್ತಮ ಕೆಲಸ ಮಾಡುತ್ತಿದ್ದು, ಸಮಾಜಕ್ಕೆ ನಿರಂತರವಾಗಿ ಉತ್ತಮ ಕೊಡುಗೆಗಳನ್ನು ನೀಡಬೇಕು ಎಂದು ಹೇಳಿದರು.

ಅನಂತ ಆಯುರ್ವೇದ ಟ್ರಸ್ಟ್ ಸಂಸ್ಥಾಪಕ ಡಾ. ಸಮೇಧ ಕಟ್ಟೆ ಮಾತನಾಡಿ, ಜನರಿಗೆ ಆಯುರ್ವೇದ ಎಂದರೆ ಕೇವಲ ಗಿಡಮೂಲಿಕೆ ಎಂದು ಭಾವಿಸಿದ್ದಾರೆ. ಆದರೆ ಆಯುರ್ವೇದದಲ್ಲಿ ಹಲವು ಖನಿಜ ಸಂಪತ್ತುಗಳನ್ನು ಸಹ ಸಂಸ್ಕರಿಸಿ ಉಪಯೋಗಿಸುತ್ತೇವೆ ಎಂದು ತಿಳಿಸಿದರು.

ಜೆಸಿಐ ತೀರ್ಥಹಳ್ಳಿ ಸಂಸ್ಥೆ ಅಧ್ಯಕ್ಷ ನಟೇಶ್ ಕಾಮತ್, ಕೃಷ್ಣಮೂರ್ತಿ ಸರ್ಜಾ, ಕೈಲಾಸ ಸರ್ಜಾ, ವಲಯದ ಉಪಾಧ್ಯಕ್ಷ ಅಭಿಜಿತ್, ಪೂರ್ವಾಧ್ಯಕ್ಷ ಹರೀಶ್ ಸರ್ಜಾ, ಅರುಣ್ ಕುಮಾರ್, ಪುಷ್ಪ ಸರ್ಜಾ, ಅನ್ವಿತಾ ಹರೀಶ್, ಸ್ವಾಗತ್, ರವಿ ಆಚಾರ್ಯ, ಮನೋಜ್, ನವೀನ್, ಅನುಷಾ, ವೈದ್ಯರಾದ ಡಾ. ಧನುಷ್, ಡಾ. ಸನತ್, ಸುರೇಶ್, ಮಂಜುನಾಥ್, ಸೂರಜ್ ಆಚಾರ್ಯ, ಆತ್ರೇಯ ಸರ್ಜಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ತೀರ್ಥಹಳ್ಳಿಯಲ್ಲಿ ಮಳೆಗೆ ಶೆಡ್ ಕುಸಿತ: ಮೂವರ ಸಾವು.ಡಿಸಿಎಂ. ಡಾ.ಜಿ.ಪರಮೇಶ್ವರ ಸಂತಾಪ.

Breaking News ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ಭಾರೀ ಮಳೆಗೆ ಗುಡ್ಡ...

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...