ದೈವರಾದನೆಯಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರಕುವುದರ ಜೊತೆಗೆ ಭಕ್ತಿಯಿಂದ ಪೂಜಿಸಿದಾಗ ಸಕಲ ಇಷ್ಟಾರ್ಥಗಳು ನೆರವೇರುತ್ತವೆ ಎಂದು ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಗುರು ಸಂದೇಶ ಉಪಾಧ್ಯ ಹೇಳಿದರು.
ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿರುವ ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನ ನಾಗ ಕ್ಷೇತ್ರದಲ್ಲಿ ಸಮಿತಿಯ ವತಿಯಿಂದ ನಾಲ್ಕು ದಿನ ಹಮ್ಮಿಕೊಳ್ಳಲಾದ ಬ್ರಹ್ಮ ಕಲಶೋತ್ಸವ. ಕುಲ ದೇವತಾ ಪ್ರಾರ್ಥನೆ, ಗುರು ಗಣಪತಿ ಪೂಜೆ, ಕಲಾ ತತ್ವ ಹೋಮ, ಆದಿ ವಾಸ ಹೋಮ, ಬ್ರಹ್ಮ ಕುಂಭಾಭಿಷೇಕ ಮತ್ತು ಸಾಮೂಹಿಕ ಆಶ್ಲೇಷ ಬಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿ ವರ್ಷ ನಮ್ಮಲ್ಲಿ ಸಮಿತಿಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಬಡಾವಣೆಯಲ್ಲಿರುವ ಭಕ್ತರು ಮತ್ತು ಭಜನಾ ಮಂಡಳಿಯ ಸದಸ್ಯರು ಸಂಪೂರ್ಣ ಸಹಕಾರ ನೀಡುತ್ತ ಬಂದಿದ್ದಾರೆ. ಇದರಿಂದ ಭಕ್ತರಿಗೆ ಆತ್ಮ ಸಂತೋಷ ಹಾಗೂ ದೈವಭಕ್ತಿ ವೃದ್ಧಿಸುವುದರ ಜೊತೆಗೆ ಕಷ್ಟ ಕಾರ್ಪಣ್ಯಗಳು ದೂರವಾಗುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನ ಸಮಿತಿ ಅಧ್ಯಕ್ಷ ಎಚ್.ರಾಮಲಿಂಗಪ್ಪ ಮಾತನಾಡಿ, ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನ ವಿಶೇಷವಾದ ಮಹಿಮೆ ಇರುವ ಸ್ಥಳವಾಗಿದೆ. ಎಲ್ಲಾ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನೆರವೇರುತ್ತದೆ ಎಂದರು.
ನಾಗಸುಬ್ರಹ್ಮಣ್ಯನ ಕೃಪೆಯಿಂದ ನಾಲ್ಕು ದಿನವೂ ಭಕ್ತರು ನಿರಂತರವಾಗಿ ಆಗಮಿಸಿ ದೇವರ ಸೇವೆಯಲ್ಲಿ ಪಾಲ್ಗೊಂಡು ಭಗವಂತನ ಕೃಪೆಗೆ ಪಾತ್ರರಾದರು. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಬಿಂದು ವಿಜಯಕುಮಾರ್ ಪಾಲ್ಗೊಂಡಿದ್ದರು.
ನಾಗಕ್ಷೇತ್ರ ಸ್ವಾಮಿ ವಿವೇಕಾನಂದ ಬಡಾವಣೆ ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನದ ಹದಿನೇಳನೇ ಬ್ರಹ್ಮಕಲಶೋತ್ಸವದಲ್ಲಿ ನಡೆದ ಆಶ್ಲೇಷ ಬಲಿ ಪೂಜೆಯಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಸಂದೇಶ್ ಉಪಾಧ್ಯ, ವಸಂತ ಭಟ್, ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ರಾಮಲಿಂಗಪ್ಪ ಹಾಗೂ ಶಾರದಾ ಶಂಕರ ಭಜನಾ ಮಂಡಳಿಯ ಸದಸ್ಯರಾದ ಶಾಲಿನಿ, ಸುಜಾತಾ ಮತ್ತು ಚಿತ್ರಲೇಖ ಉಪಸ್ಥಿತರಿದ್ದರು.
ದೇವರ ಸೇವೆಯಿಂದ ಭಕ್ತರಲ್ಲಿ ಆತ್ಮತೃಪ್ತಿ ಮತ್ತು ದೈವಭಕ್ತಿ ವೃದ್ಧಿ.- ಸಂದೇಶ್ ಉಪಾಧ್ಯ
Date:
