Thursday, June 18, 2026
Thursday, June 18, 2026

ಮಹಿಳಾ ಮೀಸಲಾತಿ ಮಸೂದೆ ಬಿಜೆಪಿ , ಡ್ರಾಮಾ ಮಾಡುತ್ತಿದೆ : ವೈ.ಬಿ.ಚಂದ್ರಕಾಂತ್

Date:

ದೇಶದ ಸಂಸತ್ತಿನಲ್ಲಿ ಬಿ.ಜೆ.ಪಿ ಸರ್ಕಾರದ ಅಧಿಕಾರದ ಅವಧಿಯಲ್ಲೆ ಈಗಾಗಲೇ ಮಹಿಳಾ ಮೀಸಲಾತಿ
ಪಾಸ್ ಆಗಿದ್ದರೂ ಅದನ್ನು ಕೇಂದ್ರದ ಬಿ.ಜೆ.ಪಿ. ಸರ್ಕಾರ ಜಾರಿಗೆ ತರದೆ ಬಿ.ಜೆ.ಪಿ. ನಾಯಕರು ಚುನಾವಣೆಗಳ
ರಾಜಕೀಯ ಲಾಭ ಪಡೆಯಲು ದೊಂಬರಾಟ ಮಾಡುತ್ತಿದ್ದಾರೆಂದು ಎಂದು ಜಿಲ್ಲಾ ಕಾಂಗ್ರೇಸ್ ವಕ್ತಾರರಾದ
ವೈ.ಬಿ. ಚಂದ್ರಕಾಂತ ಅವರು ಟೀಕಿಸಿದ್ದಾರೆ.
ಬಿ.ಜೆ.ಪಿ. ಪಕ್ಷ, ಬಿ.ಜೆ.ಪಿ. ನಾಯಕರು ಈ ಹಿಂದೆಯೂ ಮಹಿಳೆಯರ ಪರವಾಗಿಲ್ಲ. ಇಂದು ಇಲ್ಲ,
ಮುಂದೆಯೂ ಇರುವುದಿಲ್ಲ ಎನ್ನುವುದಕ್ಕೆ ಸಂವಿಧಾನ ಶಿಲ್ಪಿ ಡಾ ಬಿ.ಆರ್. ಅಂಬೇಡ್ಕರ್ ಅವರು ೧೯೫೦ ರಲ್ಲೆ ಹಿಂದೂ
ಕೋಡ್ ಬಿಲ್‌ನ್ನು ಸಂಸತ್ತಿನಲ್ಲಿ ಮಂಡಿಸಿದಾಗ ಇಂದಿನ ಬಿ.ಜೆ.ಪಿ. ನಾಯಕರ ಪೂರ್ವಜರೆ ತೀವ್ರ ವಿರೋಧ
ಮಾಡಿದ್ದರಿಂದಲೆ ಮಹಿಳೆಯರ ಪರವಾದ ಹಿಂದೂ ಕೋಡ್ ಬಿಲ್‌ಗೆ ಸೋಲಾಯಿತು. ಆಗ ಮಹಿಳೆಯರ ಪರವಾಗಿ
ಇರದ ಬಿ.ಜೆ.ಪಿ.ಗೆ ಈಗ ಚುನಾವಣೆಗಳ ಹಿನ್ನೆಲೆಯಲ್ಲಿ ಎಲ್ಲಿಲ್ಲದ ಕಾಳಜಿ, ಪ್ರೀತಿ ಒಟ್ಟೂಟ್ಟಿಗೆ ಬಂದುದ್ದಾದರೂ
ಹೇಗೆAದು ಅವರು ಪ್ರಶ್ನಿಸಿದ್ದಾರೆ.
ಈ ಹಿಂದೆಯೆ ಸಂಸತ್ತಿನಲ್ಲಿ ಪಾಸ್ ಆಗಿರುವ ಮಹಿಳೆಯರ ಮೀಸಲಾತಿ ಮಸೂದೆಯನ್ನು ಕೇಂದ್ರ ಸರ್ಕಾರ
ಜಾರಿಗೆ ತರುವುದು ಬಿಟ್ಟು ಆನೆಯ ಮಗ್ಗುಲಲ್ಲಿ ಆಡು ಹೋದಂತೆ ಎಂಬ ಗಾದೆ ಮಾತಿನಂತೆ ಉತ್ತರ ಭಾರತದ
ರಾಜ್ಯಗಳಲ್ಲಿ ಸಂಸತ್ ಸದಸ್ಯರ ಸ್ಥಾನಗಳನ್ನು ಹೆಚ್ಚಿಗೆ ಮಾಡಿಕೊಂಡು ದಕ್ಷಿಣದ ರಾಜ್ಯಗಳ ಮೇಲೆ ರಾಜಕೀಯ
ಸವಾರಿ ಮಾಡುವ ದುರುದ್ದೇಶದಿಂದ ಮತ್ತೊಮ್ಮೆ ಮಹಿಳಾ ಮೀಸಲಾತಿಯನ್ನು ಸಂಸತ್ ಸದಸ್ಯರ ಸ್ಥಾನಗಳ ಹೆಚ್ಚು
ಮಾಡಿಕೊಳ್ಳುವ ಮಸೂದೆಯೊಂದಿಗೆ ಸೇರಿಸಿ ಸಂಸತ್ತಿನ ಒಪ್ಪಿಗೆ ಪಡೆಯುವ ಕುತಂತ್ರ ಮಾಡಿರುವುದು ಬಿ.ಜೆ.ಪಿ.
ನಾಯಕರ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ವಕ್ತಾರರಾದ ವೈ.ಬಿ. ಚಂದ್ರಕಾಂತ ಅವರು ಟೀಕಿಸಿದ್ದಾರೆ.
ಬಿ.ಜೆ.ಪಿ. ನಾಯಕರು ಹಿಂದಿನಿಂದಲೂ ರಾಜಮಾರ್ಗದಲ್ಲಿ ಎಂದಿಗೂ ರಾಜಕೀಯ ಮಾಡಿದವರಲ್ಲ. ವಾಮ
ಮಾರ್ಗದಲ್ಲೆ ರಾಜಕೀಯ ಮಾಡಿಕೆಂಡು ಬಂದಿದ್ದಾರೆ. ಈಗ ಈ ಹಿಂದೆಯೆ ಸಂಸತ್ತಿನಲ್ಲಿ ಪಾಸ್ ಆಗಿರುವ
ಮಸೂದೆಯನ್ನು ಪುನಹ ಮಂಡಿಸಿ ದುರ್ಲಾಭ ಪಡೆಯುವ ಕುತಂತ್ರಕ್ಕೆ ದೇಶದ ವಿರೋಧ ಪಕ್ಷಗಳು ಸರಿಯಾದ
ಪಾಠ ಕಲಿಸಿರುವುದನ್ನು ಸಹಿಸಿಕೊಳ್ಳಲಾಗದೆ ಇದೇ ಏಪ್ರೀಲ್ 24 ರಂದು ಕಾಂಗ್ರೇಸ್ ಪಕ್ಷದ ವಿರುದ್ದ ಪ್ರತಿಭಟನೆ
ಮಾಡ ಹೊರಟಿರುವುದನ್ನು ಕೈಬಿಟ್ಟು ಮಹಿಳೆಯರ ಪರವಾಗಿ ಬಿ.ಜೆ.ಪಿ. ಪಕ್ಷಕ್ಕೆ ನಿಜವಾದ ಕಾಳಜಿ ಇದ್ದುದ್ದೆ ಆದಲ್ಲಿ
ಈಗಾಗಲೆ ಸಂಸತ್ತಿನಲ್ಲಿ ಪಾಸ್ ಆಗಿರುವ ಮಹಿಳಾ ಮೀಸಲಾತಿ ಕಾಯ್ದೆ ಜಾರಿ ಮಾಡುವಂತೆ ಬಿ.ಜೆ.ಪಿ ಪಕ್ಷದ
ವಿರುದ್ದ ಪ್ರತಿಭಟನೆ ಮಾಡಲಿ ಎಂದು ಜಿಲ್ಲಾ ಕಾಂಗ್ರೇಸ್ ವಕ್ತಾರರಾದ ವೈ.ಬಿ.ಚಂದ್ರಕಾಂತ ಅವರು ಸವಾಲ್
ಹಾಕಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...