Thursday, September 17, 2026
Thursday, September 17, 2026

Health Minister Dinesh Gundu Rao ಅತ್ಯಂತ ದುಬಾರಿ ಎನಿಸುವ ಮಂಡಿ ಮತ್ತು ಕೀಲು ಬದಲಿ ಶಸ್ತ್ರಚಕಿತ್ಸೆಗಳು ಈಗ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ – ಸಚಿವ ದಿನೇಶ್ ಗುಂಡೂರಾವ್

Date:

Health Minister Dinesh Gundu Rao ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾದ ‘ಆರೋಗ್ಯ ಕರ್ನಾಟಕ’ ನಿರ್ಮಾಣದತ್ತ ನಾವು ಮತ್ತೊಂದು ದಿಟ್ಟ ಹೆಜ್ಜೆ ಇಟ್ಟಿದ್ದೇವೆ. ರಾಜ್ಯದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅತ್ಯಂತ ದುಬಾರಿ ಎನಿಸುವ ಮೊಣಕಾಲು (TKR) ಮತ್ತು ಸೊಂಟದ (THR) ಕೀಲು ಬದಲಿ ಶಸ್ತ್ರಚಿಕಿತ್ಸೆಗಳನ್ನು ಈಗ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಅತ್ಯಂತ ಯಶಸ್ವಿಯಾಗಿ ಮತ್ತು ಉಚಿತವಾಗಿ ನೀಡಲಾಗುತ್ತಿದೆ.ಎಂದು ರಾಜ್ಯದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ನಾವು ತಂದಿರುವ ಮಹತ್ವದ ಸುಧಾರಣೆಗಳ ಮುಖ್ಯಾಂಶಗಳು ಇಲ್ಲಿವೆ:

ಸರ್ಕಾರಿ ಆಸ್ಪತ್ರೆಗಳ ಪಾಲು ಹೆಚ್ಚಳ: 2023-24ರಲ್ಲಿ ಶೇ. 35ರಷ್ಟಿದ್ದ ಸರ್ಕಾರಿ ಆಸ್ಪತ್ರೆಗಳ ಶಸ್ತ್ರಚಿಕಿತ್ಸಾ ಪಾಲು, ಈಗ ಶೇ. 99ಕ್ಕೆ ಏರಿಕೆಯಾಗಿದೆ. ಅಂದರೆ, ಇಂದು ಕೀಲು ಬದಲಿ ಚಿಕಿತ್ಸೆಗಾಗಿ ಜನರು ಖಾಸಗಿ ಆಸ್ಪತ್ರೆಗಳ ಮೇಲೆ ಅವಲಂಬಿತವಾಗುವುದು ಬಹುತೇಕ ತಪ್ಪಿದೆ.

ವಿಸ್ತೃತ ಜಾಲ: ಈ ಹಿಂದೆ ಕೇವಲ 17 ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಸೌಲಭ್ಯವಿತ್ತು. ಈಗ ನಾವು ವೈದ್ಯಕೀಯ ಕಾಲೇಜುಗಳು ಮತ್ತು ತಾಲೂಕು ಆಸ್ಪತ್ರೆಗಳು ಸೇರಿದಂತೆ ಹೆಚ್ಚುವರಿ 22 ಆಸ್ಪತ್ರೆಗಳನ್ನು ಈ ಜಾಲಕ್ಕೆ ಸೇರಿಸಿದ್ದೇವೆ. ಪ್ರಸ್ತುತ ರಾಜ್ಯಾದ್ಯಂತ 40 ಸರ್ಕಾರಿ ಕೇಂದ್ರಗಳಲ್ಲಿ ಈ ಚಿಕಿತ್ಸೆ ಲಭ್ಯವಿದೆ.

ಮಾರ್ಗದರ್ಶನ ಮತ್ತು ತರಬೇತಿ: ಪರಿಣಿತ ಶಸ್ತ್ರಚಿಕಿತ್ಸಕರಿಂದ ನಮ್ಮ ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಇದರ ಫಲವಾಗಿ ಈಗಾಗಲೇ ನಮ್ಮ ವೈದ್ಯರು ಸ್ವತಂತ್ರವಾಗಿ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನೆರವೇರಿಸುತ್ತಿದ್ದಾರೆ.

ಜನರ ಮನೆಬಾಗಿಲಿಗೆ ಚಿಕಿತ್ಸೆ: ಚಿಕಿತ್ಸೆಗಾಗಿ ಈ ಹಿಂದೆ ರೋಗಿಗಳು 300 ರಿಂದ 500 ಕಿ.ಮೀ ದೂರ ಪ್ರಯಾಣಿಸಬೇಕಿತ್ತು. ಆದರೆ ಈಗ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲೇ ಸುಧಾರಿತ ಶಸ್ತ್ರಚಿಕಿತ್ಸೆಗಳು ಲಭ್ಯವಿರುವುದರಿಂದ ಜನರ ಆರ್ಥಿಕ ಹೊರೆ ಮತ್ತು ಸಮಯ ಉಳಿತಾಯವಾಗುತ್ತಿದೆ.

Health Minister Dinesh Gundu Rao ಕಲ್ಯಾಣ ಕರ್ನಾಟಕಕ್ಕೆ ಆದ್ಯತೆ: ಹಿಂದೆ ನಿರ್ಲಕ್ಷಿತವಾಗಿದ್ದ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಈಗ ದಾಖಲೆ ಸಂಖ್ಯೆಯ ಶಸ್ತ್ರಚಿಕಿತ್ಸೆಗಳು ಉಚಿತವಾಗಿ ನಡೆಯುತ್ತಿವೆ.
ನಮ್ಮ ಸರ್ಕಾರಿ ಆಸ್ಪತ್ರೆಗಳು ಈಗ ಕೇವಲ ಚಿಕಿತ್ಸಾ ಕೇಂದ್ರಗಳಲ್ಲ, ಅವು ನಂಬಿಕೆಯ ಕೇಂದ್ರಗಳಾಗಿ ಮಾರ್ಪಟ್ಟಿವೆ. ಪ್ರತಿಯೊಬ್ಬ ನಾಗರಿಕನಿಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದು ನಮ್ಮ ಸಂಕಲ್ಪ.

ನಿಮ್ಮ ಆರೋಗ್ಯ ನಮ್ಮ ಆದ್ಯತೆ ಎಂದು ಸಚಿವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...