Shikaripura Station ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ತನಿಖೆಯ ಕಾಲದಲ್ಲಿ ವಶಪಡಿಸಕೊಂಡಿದ್ದ ಎರಡು ಕಬ್ಬಿಣದ ಬೋಟ್, ಒಂಭತ್ತು ಕಬ್ಬಿಣದ ಪೈಪ್ ಹಾಗೂ ಎರಡು ಪ್ಲೇಟ್ಸ್ ಗಳನ್ನು ವಿಲೇವಾರಿ ಮಾಡುವ ಸಲುವಾಗಿ ಹರಾಜು ಮಾಡಲಾಗುವುದು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
Youth Hostel Association ಸರ್ ಪಾಸ್ ಹಿಮಾಲಯ ಚಾರಣವು ಪ್ರತಿಯೊಬ್ಬರಿಗೂ ಸಂತಸ ಹೆಚ್ಚಿಸುತ್ತದೆ- ಎಸ್.ಎಸ್.ವಾಗೀಶ್.
Youth Hostel Association ಚಾರಣಿಗರ ಸ್ವರ್ಗ ಹಿಮಾಲಯ ಪ್ರದೇಶ. ಪ್ರತಿ ದಿನ ಪ್ರಾಕೃತಿಕ ವಿಸ್ಮಯ ಗೋಚರಿಸಿ ವಿಶೇಷ ಅನುಭವ ನೀಡುವ ಸರ್ ಪಾಸ್ ಅನ್ನು ಚಾರಣಗಳ ರಾಜ ಎನ್ನಲಾಗುತ್ತದೆ ಎಂದು ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ತರುಣೋದಯ ಘಟಕದ ಚೇರ್ಮನ್ ಎಸ್.ಎಸ್.ವಾಗೇಶ್ ಹೇಳಿದರು.
ಶಿವಮೊಗ್ಗ, ತರುಣೋದಯ, ಹೊಸನಗರ, ಚಿಕ್ಕಮಗಳೂರು, ಮೈಸೂರು, ಬೆಂಗಳೂರು ಘಟಕಗಳ 56 ಚಾರಣಿಗ ಸದಸ್ಯರು ಶಿವಮೊಗ್ಗ ರೈಲ್ವೆ ನಿಲ್ದಾಣದಿಂದ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಮಾತನಾಡಿ, ಸರ್ ಪಾಸ್ ಹಿಮಾಲಯ ಚಾರಣವು ಪ್ರತಿಯೊಬ್ಬರಿಗೂ ಸಂತಸ ಹೆಚ್ಚಿಸುತ್ತದೆ ಎಂದು ತಿಳಿಸಿದರು.
Youth Hostel Association ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ರಾಜ್ಯ ಘಟಕದ ಮಾಜಿ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಹಿಮಾಲಯ ದೇವ ಭೂಮಿ. ಯೂತ್ ಹಾಸ್ಟೆಲ್ ಸಹಕಾರ ನೀಡಿ ಉತ್ತಮ ಅನುಕೂಲ ಒದಗಿಸಿ, ಚಾರಣಿಗರಿಗೆ ನೆರವು ನೀಡುತ್ತಾ ಬಂದಿದೆ. ಪ್ರತಿ ವರ್ಷ ಸಾವಿರಾರು ಚಾರಣಿಗರು ಇದರ ಪ್ರಯೋಜನ ಪಡೆಯುತ್ತಿದ್ದಾರೆ ಪ್ರತಿಯೊಬ್ಬರೂ ಈ ಸಂಸ್ಥೆಯ ಸದಸ್ಯರಾಗಿ ಇದರ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳಬೇಕು ಎಂದರು.
ಚಾರಣ ಮಿತ್ರ ಸಂಸ್ಥೆಯ ಪ್ರಮುಖರಾದ ಹರೀಶ್ ಪಂಡಿತ್ ಮಾತನಾಡಿ, ಈಗಾಗಲೇ ನಮ್ಮ ಸಂಸ್ಥೆ ವತಿಯಿಂದ ಸಾಕಷ್ಟು ರಾಜ್ಯ, ರಾಷ್ಟ್ರ ಹಾಗೂ ಸ್ಥಳೀಯ ಮಟ್ಟದ ಚಾರಣಗಳನ್ನು ಹಮ್ಮಿಕೊಳ್ಳುತ್ತ ಬಂದಿದ್ದೇವೆ. ಚಾರಣದಿಂದ ದೇಹ ಮನಸ್ಸು ಸದೃಢವಾಗುವುದರ ಜೊತೆಗೆ ನಮಗೆ ಸ್ಥಳದ ಮಹತ್ವ ಹಾಗೂ ಬೇರೆ ಬೇರೆ ಚಾರಣಿಗರ ಸಂಪರ್ಕ ಸಿಗುತ್ತದೆ ಎಂದು ನುಡಿದರು.
ಪ್ರವೀಣ್ ಅಕ್ಕಸಾಲಿ ಎಲ್ಲರನ್ನು ಸ್ವಾಗತಿಸಿದರು. ರಮೇಶ್ ನಾಡಿಗ್ ಪ್ರಾಸ್ತಾವಿಕ ಮಾತನಾಡಿದರು. ಪ್ರಶಾಂತ್ ವಂದಿಸಿದರು. ಗಣೇಶ್ ಮತ್ತಿತರರು ಹಾಜರಿದ್ದರು.
Shivamogga News ಎಮ್ಮೆಹಟ್ಟಿಯಲ್ಲಿ ಮನಸೆಳೆದ ಮೆಲೋಡಿ ರಮೇಶ್ ತಂಡದ ಸಾಂಸ್ಕೃತಿಕ ಕಾರ್ಯಕ್ರಮ.
Shivamogga News ಮೆಲೋಡಿ ರಮೇಶ್ ತಂಡದಿಂದ ಎಮ್ಮೆಹಟ್ಟಿಯಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಮೆಚ್ಚುಗೆ ಗಳಿಸಿತು.
ಶ್ರೀ ಉಜ್ಜಯಿನಿ ಮರುಳ ಸಿದ್ದೇಶ್ವರ ಸ್ವಾಮಿಯ ನೂತನ ದೇವಸ್ಥಾನ ಉದ್ಘಾಟನೆ ಪ್ರಯುಕ್ತ ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಗ್ರಾಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು.
ಮೆಲೋಡಿ ರಮೇಶ್ ತಂಡದಿಂದ ಭಕ್ತಿಗೀತೆ, ಭಾವಗೀತೆ ಹಾಗೂ ಜನಪದ ಗೀತೆಗಳ ಮನಮೋಹಕ ಕಾರ್ಯಕ್ರಮ ನಡೆಯಿತು. ಕೀಬೋರ್ಡ್ ಮತ್ತು ಕೊಳಲು ವಾದನವನ್ನು ಶಿವಮೊಗ್ಗದ ಎಲ್.ವೇಣುಗೋಪಾಲ್ ನಿರ್ವಹಿಸಿದರು.
ಗಾಯಕರಾಗಿ ಮೆಲೋಡಿ ರಮೇಶ್, ಮೇಘನಾ, ಆಕಾಶವಾಣಿ ಗಾಯಕರಾದ ಎಲ್.ವೇಣುಗೋಪಾಲ್ ಹಾಗೂ ಹಿನ್ನೆಲೆ ಗಾಯಕರಾದ ಆರ್.ಸುಮಿತ್ ಭಾಗವಹಿಸಿದ್ದದರು. ತಬಲಾ ವಾದನವನ್ನು ಪ್ರಶಾಂತ್ ಮತ್ತು ರಿದಮ್ ಅನ್ನು ವಿಠ್ಠಲ್ ನಿರ್ವಹಿಸಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದರು.
Shivamogga News ಕಾರ್ಯಕ್ರಮಕ್ಕೆ ಗ್ರಾಮಸ್ಥರು ಭಾರಿ ಸಂಖ್ಯೆಯಲ್ಲಿ ಹಾಜರಾಗಿದ್ದರು. ಕಲಾವಿದರ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
Summer Camps In Shimoga ಯಕ್ಷಗಾನದ ಅರಿವು , ಕಲಿಕೆ,ಯೋಗಾಭ್ಯಾಸ ನೃತ್ಯ ,ವಿವಿಧ ಆಟೋಟಗಳು ಮಕ್ಕಳಿಗೆ ಹೊಸ ಚೈತನ್ಯ ನೀಡುತ್ತವೆ- ವಿಜಯಲಕ್ಷ್ಮಿ.
Summer Camps In Shimoga ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ ಬೇಸಿಗೆ ಶಿಬಿರವು ಅತ್ಯಂತ ಸಹಕಾರಿಯಾಗುತ್ತದೆ ಎಂದು ಜೆಸಿಐ ಶಿವಮೊಗ್ಗ ವಿವೇಕ್ ಸಂಸ್ಥೆಯ 2026ನೇ ಸಾಲಿನ ಅಧ್ಯಕ್ಷೆ ವಿಜಯಲಕ್ಷ್ಮೀ ಹೇಳಿದರು.
“ದಾನ್ 2026” ಬೇಸಿಗೆ ಶಿಬಿರದ ಸಮಾರೋಪದಲ್ಲಿ ಮಾತನಾಡಿ, ಯಕ್ಷಗಾನದ ಅರಿವು ಮತ್ತು ಕಲಿಕೆ, ಯೋಗಾಭ್ಯಾಸ, ನೃತ್ಯ, ನೈತಿಕ ಕಥೆಗಳು ಹಾಗೂ ವಿವಿಧ ಆಟೋಟ ಸ್ಪರ್ಧೆಗಳ ಮೂಲಕ ಮಕ್ಕಳಲ್ಲಿ ಹೊಸ ಚೈತನ್ಯವನ್ನು ಮೂಡಿಸಿದೆ ಎಂದು ತಿಳಿಸಿದರು.
ವಿಶೇಷವಾಗಿ ಶಿಬಿರದಲ್ಲಿ ಪಾಲ್ಗೊಂಡ ಜೂನಿಯರ್ ಜೆಸಿ ಮಕ್ಕಳಿಗೆ ಮತ್ತು ಅವರ ಪೋಷಕರಿಗೆ ಧನ್ಯವಾದಗಳು. ಮಕ್ಕಳ ಮುಖದ ಮೇಲಿನ ನಗು ಹಾಗೂ ಅವರು ಕಲಿತ ಹೊಸ ವಿದ್ಯೆಗಳೇ ಈ ಕಾರ್ಯಕ್ರಮದ ನಿಜವಾದ ಯಶಸ್ಸು ಎಂದರು.
ಶಿಬಿರದ ಸಮಾರೋಪ ಸಮಾರಂಭ “ದಾನ್ 2026” ಹಬ್ಬದಂತೆ ಯಶಸ್ವಿಯಾಗಿ ಜರುಗಿತು. ಶಿಬಿರದ ಮಕ್ಕಳಿಗೆ ರುಚಿಕರವಾದ ಲಘು Summer Camps In Shimoga ಉಪಹಾರವನ್ನು ಹೋಟೆಲ್ ಶುಭಂನ ಉದಯ್ ಕಡಂಬ, ಚಂದ್ರಹಾಸ ಕಡಂಬ ಒದಗಿಸಿದ್ದರು. ಸ್ಟೈಲ್ ಡ್ಯಾನ್ಸ್ ಅಕಾಡೆಮಿಯ ಶಶಿ ಕಾರ್ಯಕ್ರಮಕ್ಕೆ ಸುಸಜ್ಜಿತ ವೇದಿಕೆ ಕಲ್ಪಿಸಿಕೊಟ್ಟು, ಅಕಾಡೆಮಿಯ ಪ್ರತಿಯೊಬ್ಬ ಸದಸ್ಯರ ಸಹಕಾರದೊಂದಿಗೆ ಶಿಬಿರದ ಯಶಸ್ಸಿಗೆ ಶ್ರಮಿಸಿದರು.
ಕಾರ್ಯಕ್ರಮದ ರೂವಾರಿಗಳಾದ ಕಾರ್ಯದರ್ಶಿ ಶ್ವೇತಾ ಸಚಿನ್, ಸುಚಿತಾ ಪ್ರವೀಣ್ ಹಾಗೂ ಸಂಸ್ಥೆಯ ಎಲ್ಲಾ ಸದಸ್ಯರು ಭಾಗವಹಿಸಿದ್ದರು.
Purdal ಪುರದಾಳ್ “ಗ್ರಾಪಂ” ಅಧ್ಯಕ್ಷರಾಗಿ ಎಸ್.ಪ್ರದೀಪ್ ಆಯ್ಕೆ.
Purdal ತಾಲೂಕಿನ ಪುರದಾಳು ಗ್ರಾಮ ಪಂಚಾಯಿತಿಯ ಅಧ್ಯಕ್ಷರ ಸ್ಥಾನಕ್ಕೆ ದಿನಾಂಕ 02/05/2026 ರಂದು ನಡೆದ ಚುನಾವಣೆಯಲ್ಲಿ ಪ್ರದೀಪ್ ಎಸ್. ಹೆಬ್ಬೂರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ
ಎಂದು ಪುರದಾಳು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಿಳಿಸಿದ್ದಾರೆ.
Manipal ಮಾಹೆ ಮತ್ತು ಸ್ಪೆಷಲ್ ಒಲಂಪಿಕ್ಸ್ ಭಾರತ್ ಪರಸ್ಪರ ಮಹತ್ವದ ಒಪ್ಪಂದಕ್ಕೆ ಸಹಿ.
Manipal ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯು ಇತ್ತೀಚೆಗೆ ‘ಸ್ಪೆಷಲ್ ಒಲಿಂಪಿಕ್ಸ್ ಭಾರತ್’ ಸಂಸ್ಥೆಯೊಂದಿಗೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ. ಎಲ್ಲರನ್ನೂ ಸಮಾನವಾಗಿ ಕಾಣುವ, ಪರಸ್ಪರ ಸಹಕಾರ ಮತ್ತು ಸಾಮಾಜಿಕ ಸುಧಾರಣೆಯತ್ತ ಇಟ್ಟಿರುವ ಒಂದು ಮಹತ್ವದ ಹೆಜ್ಜೆ ಇದಾಗಿದೆ.
ಶಿಕ್ಷಣ ಮತ್ತು ವಿವಿಧ ಜಾಗೃತಿ ಕಾರ್ಯಕ್ರಮಗಳ ಮೂಲಕ ವಿಶೇಷ ಚೇತನರನ್ನು ಸಬಲೀಕರಿಸಲು ಈ ಒಪ್ಪಂದ ಸಹಕಾರಿಯಾಗಿದೆ. ಸಮಾಜದಲ್ಲಿ ಅವರಿಗೆ ಸಮಾನ ಸ್ಥಾನಮಾನ ಮತ್ತು ಗೌರವ ಸಿಗುವಂತೆ ಮಾಡುವಲ್ಲಿ ಹಾಗೂ ಅವರ ಸರ್ವತೋಮುಖ ಏಳಿಗೆಗಾಗಿ ಎರಡೂ ಸಂಸ್ಥೆಗಳು ಜೊತೆಯಾಗಿ ಕೆಲಸ ಮಾಡಲಿವೆ.
ಈ ಸಂದರ್ಭದಲ್ಲಿ ಸ್ಪೆಷಲ್ ಒಲಿಂಪಿಕ್ಸ್ ಏಷ್ಯಾ ಪೆಸಿಫಿಕ್‌ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕ ದೀಪಕ್ ನಟಾಲಿ, ಸ್ಪೆಷಲ್ ಒಲಿಂಪಿಕ್ಸ್ ಭಾರತ್‌ನ ಅಧ್ಯಕ್ಷ ಡಾ| ಮಲ್ಲಿಕಾ ನಡ್ಡಾ, ಮಾಹೆ ಸಹ ಕುಲಾಧಿಪತಿ ಡಾ| ಎಚ್. ಎಸ್. ಬಲ್ಲಾಳ್, ಲೆಫ್ಟಿನೆಂಟ್ ಜನರಲ್ (ಡಾ|) ಎಂ.ಡಿ. ವೆಂಕಟೇಶ್, ಸಲಹೆಗಾರರು, ಎಂಇಎಂಜಿ, ಮಾಹೆ ಕುಲಸಚಿವ ಡಾ| ಪಿ. ಗಿರಿಧರ್ ಕಿಣಿ ಹಾಗೂ ನಾರಾಯಣ ಸಭಾಹಿತ, ಸಹ ಕುಲಪತಿಗಳು ಮತ್ತು ಸ್ಪೆಷಲ್ ಒಲಿಂಪಿಕ್ಸ್ ಭಾರತ್‌ನ ಪ್ರಧಾನ ಕಾರ್ಯದರ್ಶಿ ಶ್ರೀ ಡಿ. ಜಿ. ಚೌಧರಿ ಅವರು ಉಪಸ್ಥಿತರಿದ್ದರು.
Manipal ಸಮಾರಂಭದ ಭಾಗವಾಗಿ ಡಾ. ಮಲ್ಲಿಕಾ ನಡ್ಡಾ ಮತ್ತು ಡಾ. ಪಿ. ಗಿರಿಧರ್ ಕಿನಿ ಅವರು ಸಾಂಕೇತಿಕವಾಗಿ ಈ ಒಪ್ಪಂದಕ್ಕೆ ಸಹಿ ಹಾಕಿದರು. ಸಮಾಜಕ್ಕೆ ಪ್ರಯೋಜನಕಾರಿಯಾದ ಪರಿಣಾಮಕಾರಿ ಕಾರ್ಯಕ್ರಮಗಳನ್ನು ಜಾರಿಗೆ ತರುವಲ್ಲಿ ಎರಡೂ ಸಂಸ್ಥೆಗಳಿಗಿರುವ ಬದ್ಧತೆಯನ್ನು ಈ ಕಾರ್ಯವು ಎತ್ತಿ ತೋರಿಸಿತು.
ಮಾಹೆ ಮತ್ತು ಸ್ಪೆಷಲ್ ಒಲಿಂಪಿಕ್ಸ್ ಭಾರತ್ ಸಂಸ್ಥೆಗಳು ಒಟ್ಟಾಗಿ ಶಿಕ್ಷಣ ಮತ್ತು ಸಮಾಜದ ವಿವಿಧ ಹಂತಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಿವೆ. ಜನರಲ್ಲಿ ಮತ್ತು ಇತರ ಸಂಸ್ಥೆಗಳಲ್ಲಿ ಸಹಾನುಭೂತಿ ಬೆಳೆಸುವ ಹಾಗೂ ಎಲ್ಲರನ್ನೂ ಸಮಾನವಾಗಿ ಕಾಣುವ ಭವಿಷ್ಯ ಕಟ್ಟಲು ಪ್ರೇರಣೆ ನೀಡುವುದು ಈ ಒಪ್ಪಂದದ ಗುರಿಯಾಗಿದೆ.
Pillangeri Sri Venkataramana Swamy ಮೇ 9. ಪಿಳ್ಳಂಗೇರಿ ಶ್ರೀವೆಂಕಟರಮಣ ಸ್ವಾಮಿ ಬ್ರಹ್ಮ ರಥೋತ್ಸವ.
Pillangeri Sri Venkataramana Swamy ಮಹೇಂದ್ರ ಗಿರಿ ಎಂದೇ ಹೆಸರಾದ ಪಿಳ್ಳಯ್ಯನಗಿರಿ ಶ್ರೀ ಲಕ್ಷ್ಮೀರಮಣ ಸನ್ನಿಽಯಲ್ಲಿ ಮೇ. ೦೯ರಂದು ಬ್ರಹ್ಮ ರಥೋತ್ಸವ ನಡೆಯಲಿದೆ.
ಇದರ ಅಂಗವಾಗಿ ಅಂದು ಬೆಳಿಗ್ಗೆ ೦೯.೦೦ ಗಂಟೆಯಿAದ ಅಭಿಷೇಕ, ಅಲಂಕಾರ ಸೇವೆ ಗುರುವಾರ ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ಸಂಜೆ ೦೬.೦೦ ಗಂಟೆಗೆ ಅನುಜ್ಞೆ ಪುಣ್ಯಾಹ, ಮೃತ್ತಿಕಾ ಸಂಗ್ರಹಣ, ಅಂಕುರಾರ್ಪಣೆ, ರಕ್ಷಬಂಧನ ಮಂಗಳಾರತಿ, ತೀರ್ಥ-ಪ್ರಸಾದ ವಿನಿಯೋಗ ನಡೆಯಲಿದ್ದು, ಮೇ.೦೮ರ ಬೆಳಿಗ್ಗೆ ೦೯.೦೦ ಗಂಟೆಗೆ ನಿತ್ಯಸೇವೆ, ದ್ವಾರತೋರಣ, ಕುಂಭಾರಾಧನೆ ಶುಕ್ರವಾರ ಹೋಮ, ಧ್ವಜಾರೋಹಣ, ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಸಂಜೆ ೦೬.೦೦ ಗಂಟೆಗೆ ಗರುಡೋತ್ಸವ, ವಸಂತಸೇವೆ. ಶ್ರೀನಿವಾಸ ಕಲ್ಯಾಣೋತ್ಸವ, ಮಂಗಳಾರತಿ, ತೀರ್ಥ-ಪ್ರಸಾದ ವಿನಿಯೋಗ ಹಾಗೂ ಮೇ. ೦೯ರಬೆಳಿಗ್ಗೆ ೦೭.೩೦ ರಿಂದ ನಿತ್ಯಸೇವೆ, ಯಾಗ ಶಾಲೆಯಲ್ಲಿ ರಥಾಂಗ, ಶನಿವಾರ ಹೋಮಾದಿಗಳು, ೦೯.೦೦ ಗಂಟೆಯಿAದ ಮಂಟಪೋತ್ಸವ, ೧೨.೦೦ಕ್ಕೆ ಅಭಿಜಿನ್ ಮುಹೂರ್ತದಲ್ಲಿ ಶ್ರೀಯವರ ರಥಾರೋಹಣ ಮತ್ತು ರಥೋತ್ಸವ ನಡೆಯಲಿದೆ.
Pillangeri Sri Venkataramana Swamy ಮೇ. ೧೦ರ ಬೆಳಿಗ್ಗೆ ೦೯.೦೦ ಗಂಟೆಯಿAದ ನಿತ್ಯಸೇವೆ, ಕುಂಕುಮೋತ್ಸವ, ಭಾನುವಾರ ೧೧.೦೦ ಗಂಟೆಗೆತುAಗಾನದಿಯಲ್ಲಿ ಅವಕೃತ ಸ್ನಾನ, ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ಸಂಜೆ ೦೭.೦೦ ಗಂಟೆಗೆ ಯಾಗಶಾಲೆಯಲ್ಲಿ ರಥಾಂಗ, ಪೂರ್ಣಾಹುತಿ, ಧ್ವಜ ಅವರೋಹಣ, ಕುಂಭ ಪ್ರೋಕ್ಷಣೆ, ಮಂಗಳಾರತಿ, ತೀರ್ಥ-ಪ್ರಸಾದ ವಿನಿಯೋಗ ನಡೆಯಲಿದೆ.
ಮೇ. ೧೧ರ ಬೆಳಿಗ್ಗೆ ೦೯.೦೦ ಗಂಟೆಗೆ ಮಹಾಭಿಷೇಕ, ಸೋಮವಾರ ೧೧.೦೦ ಗಂಟೆಗೆ ಮಂಗಳಾರತಿ. ತೀರ್ಥಪ್ರಸಾದ ವಿನಿಯೋಗ, ಸಂಜೆ ೦೭.೦೦ ಗಂಟೆಗೆ ಶಯನೋತ್ಸವ, ಮಂಗಳಾರತಿ, ತೀರ್ಥ-ಪ್ರಸಾದ ವಿನಿಯೋಗವಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಲಾಗಿದೆ.
K.S. Eshwarappa ಶಿವಮೊಗ್ಗದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ರಿವರ್ ಸ್ಟೋರ್ ಮಳಿಗೆ ಉದ್ಘಾಟನೆ
K.S. Eshwarappa ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ರಿವರ್ ಮೊಬಿಲಿಟಿಯು ಶಿವಮೊಗ್ಗದಲ್ಲಿ ತನ್ನ ಮೊದಲ ಮಳಿಗೆಯನ್ನು ಪ್ರಾರಂಭಿಸಿದೆ. MAG ಎಂಟರ್ಪ್ರೈಸಸ್ನ ಸಹಭಾಗಿತ್ವದಲ್ಲಿ ಪ್ರಾರಂಭ ವಾದ ರಿವರ್ ಸ್ಟೋರ್ ಅನ್ನು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಉದ್ಘಾಟಿಸಿದರು.
ಈ ಹೊಸ ಮಳಿಗೆಯು ಗ್ರಾಹಕರಿಗೆ ಪರೀಕ್ಷಾ ಸವಾರಿಗಳು, ಮಾರಾಟ, ಪರಿಕರಗಳು ಮತ್ತು ಸೇವಾ ಬೆಂಬಲವನ್ನು ಒಳಗೊಂಡ ಸಂಪೂರ್ಣ ಮಾಲೀಕತ್ವದ ಅನುಭವ ನೀಡುತ್ತದೆ.
ಈಗಾಗಲೇ, ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ಮಂಗಳೂರು, ಮೈಸೂರು ಮತ್ತು ತುಮಕೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಈಗಾಗಲೇ 14 ಮಳಿಗೆಗಳನ್ನು ನಿರ್ವಹಿಸುತ್ತಿದ್ದು, ಶಿವಮೊಗ್ಗದಲ್ಲಿ ನೂತನ ಮಳಿಗೆಯ ಉದ್ಘಾಟನೆಯೊಂದಿಗೆ, ರಿವರ್, ಕರ್ನಾಟಕದಲ್ಲಿ ತನ್ನ ಹೆಜ್ಜೆ ಗುರುತನ್ನು ವಿಸ್ತರಿಸುತ್ತಿದೆ. ಕಂಪನಿಯ ಒಡೆತನದ ಮಳಿಗೆಗಳು ಮತ್ತು ಡೀಲರ್ಶಿಪ್ ಪಾಲುದಾರಿಕೆಗಳ ಮೂಲಕ ಪ್ರಮುಖ ಭಾರತೀಯ ನಗರಗಳಲ್ಲಿ ಅಸ್ತಿತ್ವ ಸ್ಥಾಪಿಸುವ ರಿವರ್ನ ವಿಶಾಲ ರಾಷ್ಟ್ರೀಯ ವಿಸ್ತರಣಾ ಕಾರ್ಯತಂತ್ರದ ಭಾಗವಾಗಿದೆ.
“ಕಂಪನಿಯ ವ್ಯಾವಹಾರಿಕ ಪಯಣದ ಹೃದಯಭಾಗದಲ್ಲಿದೆ ಕರ್ನಾಟಕ ಮತ್ತು ಶಿವಮೊಗ್ಗಕ್ಕೆ ವಿಸ್ತರಿಸುವುದು ಮುಂದಿನ ಹೆಜ್ಜೆಯಾಗಿದೆ. ರಾಜ್ಯದ ಗ್ರಾಹಕರಿಂದ ಬಂದ ಬಲವಾದ ಬೆಂಬಲವು ಇಲ್ಲಿಯವರೆಗೆ ಕಂಪನಿಯ ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸಿದೆ.
ನೂತನ ಮಳಿಗೆ ಕುರಿತು ಪ್ರತಿಕ್ರಿಯಸಿದ ರಿವರ್ ಮೊಬಿಲಿಟಿಯ ಮಾರಾಟ ಮುಖ್ಯಸ್ಥ ಕೆ.ವಿ.ದಿನೇಶ್ ಮಾತನಾಡಿ, ಬಿಎಚ್ ರಸ್ತೆಯಲ್ಲಿ ಸ್ಥಾಪಿತ ರಿವರ್ ಸ್ಟೋರ್ʼನ ಉತ್ಪನ್ನಗಳು ಮತ್ತು ಸೇವೆಗಳು ಗ್ರಾಹಕರಿಗೆ ಸುಲಭವಾಗಿ ದಕ್ಕುವಂತೆ ಮಾಡುವ ಮೂಲಕ ಮತ್ತು ತಡೆರಹಿತ ಮಾಲೀಕತ್ವದ ಅನುಭವ ನೀಡುವ ಗುರಿಯನ್ನು ನಾವು ಹೊಂದಿದ್ದೇವೆ. ಕರ್ನಾಟಕದಾದ್ಯಂತ ನಮ್ಮ ಉಪಸ್ಥಿತಿಯನ್ನು ಬಲಪಡಿಸುವುದನ್ನು ಮುಂದುವರಿಸಲು ಉತ್ಸುಕ ರಾಗಿದ್ದೇವೆ” ಎಂದು ಹೇಳಿದರು.
“ಶಿವಮೊಗ್ಗದಲ್ಲಿ ರಿವರ್ ಶಾಖೆ ತೆರೆಯಲು ಮತ್ತು ಗ್ರಾಹಕರಿಗೆ ವಿದ್ಯುತ್ ಚಲನಶೀಲತೆಯ ಅನುಭವ ನೀಡಲು ಹೆಮ್ಮೆಯಿದೆ. ಇಂಡೀ ಮತ್ತು ರಿವರ್ನ ಗ್ರಾಹಕರೇ-ಮೊದಲು ಎನ್ನುವ ತತ್ವದೊಂದಿಗೆ ನಗರದಲ್ಲಿ ಬಲವಾದ ಆಕರ್ಷಣೆ ಉಂಟುಮಾಡುವ ವಿಶ್ವಾಸ ನಮಗಿದೆ” ಎಂದು MAG ಎಂಟರ್ಪ್ರೈಸಸ್ನ ವ್ಯವಸ್ಥಾಪಕ ನಿರ್ದೇಶಕ ಸೈಯದ್ ಗೌಸ್ ಪೀರ್ ಪಾಲುದಾರಿಕೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.
ಕಂಪನಿಯ ಬೆಳವಣಿಗೆಯ ಆವೇಗಕ್ಕೆ ಅನುಗುಣವಾಗಿ, ಕಳೆದ ಏಪ್ರಿಲ್ನಲ್ಲಿ, ರಿವರ್ನ ಒಟ್ಟಾರೆ ಮಾರಾ ಟಕ್ಕೆ 26% ಕ್ಕಿಂತ ಹೆಚ್ಚಿನ ಕೊಡುಗೆಯನ್ನು ಕರ್ನಾಟಕ ನೀಡಿತು. ಭಾರತದಲ್ಲಿ ಬ್ರ್ಯಾಂಡ್ಗೆ ಎರಡನೇ ಅತಿದೊಡ್ಡ ಇವಿ ಮಾರುಕಟ್ಟೆಯಾಗಿದೆ. ರಾಜ್ಯವು ಬ್ರ್ಯಾಂಡ್ಗೆ ಪ್ರಮುಖ ಮಾರುಕಟ್ಟೆಯಾಗಿ ಮುಂದು ವರೆದಿದೆ. ಹೆಚ್ಚುತ್ತಿರುವ ವಿದ್ಯುತ್ ಚಾಲಿತ ವಾಹನಗಳ ಅಳವಡಿಕೆ ಮತ್ತು ವೇಗವಾಗಿ ವಿಕಸನ ಗೊಳ್ಳುತ್ತಿರುವ ಪರಿಸರ ವ್ಯವಸ್ಥೆ ಬೆಂಬಲಿತ ರಿವರ್ ಇಂಡೀ, ವಾಹನದ ಉಪಯುಕ್ತತೆ-ಮೊದಲ ವಿನ್ಯಾಸ, ಬೃಹತ್ ಸಂಗ್ರಹಣೆಗೆ ಸ್ಥಳಾವಕಾಶ, ಹವಾಮಾನ ವಿಶ್ವಾಸಾರ್ಹತೆಯೊಂದಿಗೆ ಶಿವಮೊಗ್ಗದಂತಹ ನಗರ ಗಳಲ್ಲಿ ದೈನಂದಿನ ಸವಾರರ ಅಗತ್ಯಗಳನ್ನು ಪೂರೈಸಲು ಸೂಕ್ತವಾಗಿರುತ್ತದೆ.
K.S. Eshwarappa ಇಂಡೀ ಕಾರಿನ ಬೆಲೆ INR 1,55,199 (ಎಕ್ಸ್-ಶೋರೂಂ, ಶಿವಮೊಗ್ಗ). ಗ್ರಾಹಕರು ವಾಹನದ ಪರೀಕ್ಷೆ ಮಾಡಲು ಮಳಿಗೆಗೆ ಭೇಟಿ ನೀಡಬಹುದು. ಸರಕುಗಳನ್ನು ಪರಿಶೀಲಿಸಬಹುದು ಅಥವಾ ಬುಕ್ ಮಾಡಬಹುದು. www.rideriver.com ನಲ್ಲಿ ಟೆಸ್ಟ್ ಡ್ರೈವ್ ಮಾಡಲು ಬುಕ್ ಮಾಡಬಹುದು ಅಥವಾ ಖರೀದಿಗಳನ್ನು ಮಾಡಬಹುದು.
ಶಿವಮೊಗ್ಗದ ಬಿಎಚ್ ರಸ್ತೆಯಲ್ಲಿ ಅರವಿಂದ್ ಮೋಟಾರ್ಸ್ ಎದುರು ಕರ್ನಾಟಕ – 577201 ರಲ್ಲಿರುವ ಎಂಬಲ್ಲಿ ರಿವರ್ ಸ್ಟೋರ್ ಮಳಿಗೆ ಇದೆ.
JCI Shimoga Malnad ಬೇಸಿಗೆ ನೀರಿನ ಬೇಗೆ ನೀಗಲುಜೆಸಿಐ ಭಾವನಾ ದಿಂದ ಹಕ್ಕಿಗಳಿಗೆ ನೀರುಣಿಸುವ ಚಟುವಟಿಕೆ- ಪೂರ್ಣಿಮಾ ಸುನೀಲ್.
JCI Shimoga Malnad ಜೆಸಿಐ ಶಿವಮೊಗ್ಗ ಭಾವನಾ ಸಂಸ್ಥೆಯು ನಿರಂತರ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದ್ದು, ಸಂಸ್ಥೆಯ ಸಮಾಜಮುಖಿ ಕಾರ್ಯ ಅರ್ಥಪೂರ್ಣ ಎಂದು ಜೆಸಿಐ ಸಂಸ್ಥೆಯ ಜಡ್‌ವಿಸಿ ಪೂರ್ಣಿಮಾ ಸುನೀಲ್ ಹೇಳಿದರು.
ಜೆಸಿಐ ಶಿವಮೊಗ್ಗ ಭಾವನಾದ ಅಲೂಮ್ನಿ ಕ್ಲಬ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಜನಸಂಖ್ಯೆ ಹೆಚ್ಚಾದಂತೆ ಪ್ರಕೃತಿಯ ಮೇಲಿನ ಕಾಳಜಿಯು ಕಡಿಮೆಯಾಗುತ್ತಿದೆ. ಮಲೆನಾಡು ಶಿವಮೊಗ್ಗ ಅತಿ ಹೆಚ್ಚು ಬಿಸಿಲು ಹೊಂದಿದ ಜಿಲ್ಲೆಗಳಲ್ಲಿ ಒಂದಾಗುತ್ತಿದೆ. ಇಂತಹ ಬಿಸಿಲ ಬೇಗೆಯಿಂದ ಸುಡುತ್ತಿರುವ ಮೂಕ ಪಕ್ಷಿಗಳನ್ನು ಕೇಳುವವರಿಲ್ಲ. ಇದಕ್ಕಾಗಿ ಜೆಸಿಐ ಸಂಸ್ಥೆ ಹಕ್ಕಿಗಳಿಗೆ ತಮ್ಮದೇ ಮನೆಯ ತಾರಸಿ ಮೇಲೆ ಆಗಿರಬಹುದು ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಆಗಿರಬಹುದು. ಹಕ್ಕಿಗಳು ಅತಿ ಹೆಚ್ಚು ಇರುವ ಸ್ಥಳಗಳಲ್ಲಿ ನೀರು ಸಿಗುವಂತೆ ಮಾಡುವ ವಿಶೇಷ ಕಾರ್ಯಕ್ರಮ ರೂಪಿಸಿದೆ ಎಂದು ತಿಳಿಸಿದರು.
JCI Shimoga Malnad ಜೆಸಿಐ ಸಂಸ್ಥೆಯು ತನ್ನದೇ ಆದ ರೀತಿಯಲ್ಲಿ ಸಮಾಜ ಸೇವೆ ಮಾಡುತ್ತಾ ಬಂದಿದ್ದು, ಇತ್ತೀಚೆಗೆ ಹಕ್ಕಿಗಳಿಗೆ ನೀರುಣಿಸಲು ಅನುಕೂಲವಾಗುವ ವ್ಯವಸ್ಥೆ ಮಾಡಲಾಯಿತು ಎಂದರು.
ಜೆಸಿಐ ಸಂಸ್ಥೆಯ ಜಡ್‌ವಿಸಿ ಉದಯ್ ಕಡಂಬ, ಕೋಆರ್ಡಿನೇಟರ್ ದಿವ್ಯಾ, ಸುರೇಖಾ ಮುರುಳಿಧರ್, ಜೆಸಿಐ ಶಿವಮೊಗ್ಗ ಭಾವನದ ಅಧ್ಯಕ್ಷೆ ಕರಿಬಸಮ್ಮ, ಜೆಸಿಐ ಶಿವಮೊಗ್ಗ ವಿವೇಕ್ ಅಧ್ಯಕ್ಷೆ ವಿಜಯಲಕ್ಷ್ಮೀ ಉದಯ್ ಹಾಗೂ ಎಲ್ಲ ಸದಸ್ಯರು ಪಾಲ್ಗೊಂಡಿದ್ದರು.
