Wednesday, August 12, 2026
Wednesday, August 12, 2026

K.S. Eshwarappa ಶಿವಮೊಗ್ಗದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ರಿವರ್ ಸ್ಟೋರ್ ಮಳಿಗೆ ಉದ್ಘಾಟನೆ

Date:

K.S. Eshwarappa ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ರಿವರ್ ಮೊಬಿಲಿಟಿಯು ಶಿವಮೊಗ್ಗದಲ್ಲಿ ತನ್ನ ಮೊದಲ ಮಳಿಗೆಯನ್ನು ಪ್ರಾರಂಭಿಸಿದೆ. MAG ಎಂಟರ್ಪ್ರೈಸಸ್ನ ಸಹಭಾಗಿತ್ವದಲ್ಲಿ ಪ್ರಾರಂಭ ವಾದ ರಿವರ್ ಸ್ಟೋರ್ ಅನ್ನು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಉದ್ಘಾಟಿಸಿದರು.
ಈ ಹೊಸ ಮಳಿಗೆಯು ಗ್ರಾಹಕರಿಗೆ ಪರೀಕ್ಷಾ ಸವಾರಿಗಳು, ಮಾರಾಟ, ಪರಿಕರಗಳು ಮತ್ತು ಸೇವಾ ಬೆಂಬಲವನ್ನು ಒಳಗೊಂಡ ಸಂಪೂರ್ಣ ಮಾಲೀಕತ್ವದ ಅನುಭವ ನೀಡುತ್ತದೆ.
ಈಗಾಗಲೇ, ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ಮಂಗಳೂರು, ಮೈಸೂರು ಮತ್ತು ತುಮಕೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಈಗಾಗಲೇ 14 ಮಳಿಗೆಗಳನ್ನು ನಿರ್ವಹಿಸುತ್ತಿದ್ದು, ಶಿವಮೊಗ್ಗದಲ್ಲಿ ನೂತನ ಮಳಿಗೆಯ ಉದ್ಘಾಟನೆಯೊಂದಿಗೆ, ರಿವರ್, ಕರ್ನಾಟಕದಲ್ಲಿ ತನ್ನ ಹೆಜ್ಜೆ ಗುರುತನ್ನು ವಿಸ್ತರಿಸುತ್ತಿದೆ. ಕಂಪನಿಯ ಒಡೆತನದ ಮಳಿಗೆಗಳು ಮತ್ತು ಡೀಲರ್ಶಿಪ್ ಪಾಲುದಾರಿಕೆಗಳ ಮೂಲಕ ಪ್ರಮುಖ ಭಾರತೀಯ ನಗರಗಳಲ್ಲಿ ಅಸ್ತಿತ್ವ ಸ್ಥಾಪಿಸುವ ರಿವರ್ನ ವಿಶಾಲ ರಾಷ್ಟ್ರೀಯ ವಿಸ್ತರಣಾ ಕಾರ್ಯತಂತ್ರದ ಭಾಗವಾಗಿದೆ.
“ಕಂಪನಿಯ ವ್ಯಾವಹಾರಿಕ ಪಯಣದ ಹೃದಯಭಾಗದಲ್ಲಿದೆ ಕರ್ನಾಟಕ ಮತ್ತು ಶಿವಮೊಗ್ಗಕ್ಕೆ ವಿಸ್ತರಿಸುವುದು ಮುಂದಿನ ಹೆಜ್ಜೆಯಾಗಿದೆ. ರಾಜ್ಯದ ಗ್ರಾಹಕರಿಂದ ಬಂದ ಬಲವಾದ ಬೆಂಬಲವು ಇಲ್ಲಿಯವರೆಗೆ ಕಂಪನಿಯ ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸಿದೆ.
ನೂತನ ಮಳಿಗೆ ಕುರಿತು ಪ್ರತಿಕ್ರಿಯಸಿದ ರಿವರ್ ಮೊಬಿಲಿಟಿಯ ಮಾರಾಟ ಮುಖ್ಯಸ್ಥ ಕೆ.ವಿ.ದಿನೇಶ್ ಮಾತನಾಡಿ, ಬಿಎಚ್ ರಸ್ತೆಯಲ್ಲಿ ಸ್ಥಾಪಿತ ರಿವರ್ ಸ್ಟೋರ್ʼನ ಉತ್ಪನ್ನಗಳು ಮತ್ತು ಸೇವೆಗಳು ಗ್ರಾಹಕರಿಗೆ ಸುಲಭವಾಗಿ ದಕ್ಕುವಂತೆ ಮಾಡುವ ಮೂಲಕ ಮತ್ತು ತಡೆರಹಿತ ಮಾಲೀಕತ್ವದ ಅನುಭವ ನೀಡುವ ಗುರಿಯನ್ನು ನಾವು ಹೊಂದಿದ್ದೇವೆ. ಕರ್ನಾಟಕದಾದ್ಯಂತ ನಮ್ಮ ಉಪಸ್ಥಿತಿಯನ್ನು ಬಲಪಡಿಸುವುದನ್ನು ಮುಂದುವರಿಸಲು ಉತ್ಸುಕ ರಾಗಿದ್ದೇವೆ” ಎಂದು ಹೇಳಿದರು.
“ಶಿವಮೊಗ್ಗದಲ್ಲಿ ರಿವರ್ ಶಾಖೆ ತೆರೆಯಲು ಮತ್ತು ಗ್ರಾಹಕರಿಗೆ ವಿದ್ಯುತ್ ಚಲನಶೀಲತೆಯ ಅನುಭವ ನೀಡಲು ಹೆಮ್ಮೆಯಿದೆ. ಇಂಡೀ ಮತ್ತು ರಿವರ್ನ ಗ್ರಾಹಕರೇ-ಮೊದಲು ಎನ್ನುವ ತತ್ವದೊಂದಿಗೆ ನಗರದಲ್ಲಿ ಬಲವಾದ ಆಕರ್ಷಣೆ ಉಂಟುಮಾಡುವ ವಿಶ್ವಾಸ ನಮಗಿದೆ” ಎಂದು MAG ಎಂಟರ್ಪ್ರೈಸಸ್ನ ವ್ಯವಸ್ಥಾಪಕ ನಿರ್ದೇಶಕ ಸೈಯದ್ ಗೌಸ್ ಪೀರ್ ಪಾಲುದಾರಿಕೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.
ಕಂಪನಿಯ ಬೆಳವಣಿಗೆಯ ಆವೇಗಕ್ಕೆ ಅನುಗುಣವಾಗಿ, ಕಳೆದ ಏಪ್ರಿಲ್ನಲ್ಲಿ, ರಿವರ್ನ ಒಟ್ಟಾರೆ ಮಾರಾ ಟಕ್ಕೆ 26% ಕ್ಕಿಂತ ಹೆಚ್ಚಿನ ಕೊಡುಗೆಯನ್ನು ಕರ್ನಾಟಕ ನೀಡಿತು. ಭಾರತದಲ್ಲಿ ಬ್ರ್ಯಾಂಡ್ಗೆ ಎರಡನೇ ಅತಿದೊಡ್ಡ ಇವಿ ಮಾರುಕಟ್ಟೆಯಾಗಿದೆ. ರಾಜ್ಯವು ಬ್ರ್ಯಾಂಡ್ಗೆ ಪ್ರಮುಖ ಮಾರುಕಟ್ಟೆಯಾಗಿ ಮುಂದು ವರೆದಿದೆ. ಹೆಚ್ಚುತ್ತಿರುವ ವಿದ್ಯುತ್ ಚಾಲಿತ ವಾಹನಗಳ ಅಳವಡಿಕೆ ಮತ್ತು ವೇಗವಾಗಿ ವಿಕಸನ ಗೊಳ್ಳುತ್ತಿರುವ ಪರಿಸರ ವ್ಯವಸ್ಥೆ ಬೆಂಬಲಿತ ರಿವರ್ ಇಂಡೀ, ವಾಹನದ ಉಪಯುಕ್ತತೆ-ಮೊದಲ ವಿನ್ಯಾಸ, ಬೃಹತ್ ಸಂಗ್ರಹಣೆಗೆ ಸ್ಥಳಾವಕಾಶ, ಹವಾಮಾನ ವಿಶ್ವಾಸಾರ್ಹತೆಯೊಂದಿಗೆ ಶಿವಮೊಗ್ಗದಂತಹ ನಗರ ಗಳಲ್ಲಿ ದೈನಂದಿನ ಸವಾರರ ಅಗತ್ಯಗಳನ್ನು ಪೂರೈಸಲು ಸೂಕ್ತವಾಗಿರುತ್ತದೆ.
K.S. Eshwarappa ಇಂಡೀ ಕಾರಿನ ಬೆಲೆ INR 1,55,199 (ಎಕ್ಸ್-ಶೋರೂಂ, ಶಿವಮೊಗ್ಗ). ಗ್ರಾಹಕರು ವಾಹನದ ಪರೀಕ್ಷೆ ಮಾಡಲು ಮಳಿಗೆಗೆ ಭೇಟಿ ನೀಡಬಹುದು. ಸರಕುಗಳನ್ನು ಪರಿಶೀಲಿಸಬಹುದು ಅಥವಾ ಬುಕ್ ಮಾಡಬಹುದು. www.rideriver.com ನಲ್ಲಿ ಟೆಸ್ಟ್ ಡ್ರೈವ್ ಮಾಡಲು ಬುಕ್ ಮಾಡಬಹುದು ಅಥವಾ ಖರೀದಿಗಳನ್ನು ಮಾಡಬಹುದು.
ಶಿವಮೊಗ್ಗದ ಬಿಎಚ್ ರಸ್ತೆಯಲ್ಲಿ ಅರವಿಂದ್ ಮೋಟಾರ್ಸ್ ಎದುರು ಕರ್ನಾಟಕ – 577201 ರಲ್ಲಿರುವ ಎಂಬಲ್ಲಿ ರಿವರ್ ಸ್ಟೋರ್ ಮಳಿಗೆ ಇದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive special Article ಆಧ್ಯಾತ್ಮದ ಆನಂದ ಹಂಚಿದ ದಾವಣಗೆರೆಯ ಶ್ರೀಶಿವಾನಂದ ತೀರ್ಥರು ...

"ಅಧ್ಯಾತ್ಮಾನಂದ ನೀಡುತ್ತಿದ್ದ ದಾವಣಗೆರೆಯ ಶ್ರೀ ಶಿವಾನಂದ ತೀರ್ಥರು" ( ಅವರ ಜಯಂತ್ಯೋತ್ಸವ ತನ್ನಿಮಿತ್ತಈವಿಶೇಷಲೇಖನ) -Klive...

Kuvempu University ಆಗಸ್ಟ್ 13 & 14. ರಂದು ಕುವೆಂಪು ವಿವಿಯ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ

2026-27ನೇ ಸಾಲಿಗೆ ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಕ್ಯಾಂಪಸ್, ಮತ್ತು ವಿವಿ...