Monday, July 13, 2026
Monday, July 13, 2026

Chamber of Commerce Shivamogga ಕೇಂದ್ರ ಜಿಎಸ್ ಟಿ ಸಹಾಯವಾಣಿಯು ತೆರಿಗೆದಾರರಿಗೆ ಸೂಕ್ತ ಸಮಯಕ್ಕೆ ನೆರವು, ಸಮಸ್ಯೆ ಪರಿಹಾರ ನೀಡಲು ವಿನ್ಯಾಸಗೊಳಿಸಲಾಗಿದೆ- ವಿಜಯಕುಮಾರ್

Date:

Chamber of Commerce Shivamogga ತೆರಿಗೆದಾರರ ಕುಂದುಕೊರತೆಗಳಿಗೆ ಪರಿಹಾರವನ್ನು ಒದಗಿಸಲು ಇಲಾಖೆ ಬದ್ಧವಾಗಿದೆ ಎಂದು ಕೇಂದ್ರೀಯ ಸರಕು ಮತ್ತು ಸೇವಾ ತೆರಿಗೆ ಸಹಾಯಕ ಆಯುಕ್ತ ವಿಜಯ್‌ಕುಮಾರ್ ಹೇಳಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಪೇರೋ ಕಾಸ್ಟ್ ಸಭಾಂಗಣದಲ್ಲಿ ಜಿಲ್ಲಾ ಸರಕು ಮತ್ತು ಸೇವಾ ತೆರಿಗೆ ಕಚೇರಿ ಕೇಂದ್ರ ವ್ಯಾಪ್ತಿ ಶಿವಮೊಗ್ಗ ವಲಯ ವತಿಯಿಂದ ಏರ್ಪಡಿಸಿದ್ದ ಸಹಾಯ ವಾಣಿ ಉದ್ಘಾಟಿಸಿ ಮಾತನಾಡಿದರು.
ತೆರಿಗೆ ಸಲಹೆಗಾರರು, ಚಾರ್ಟೆಡ್ ಅಕೌಂಟೆಂಟ್ ಗಳು, ತೆರಿಗೆ ಪಾವತಿದಾರರೆಲ್ಲರೂ ಒಂದೇ ವ್ಯವಸ್ಥೆಯ ಭಾಗಿದಾರರು. ತೆರಿಗೆ ಪಾವತಿದಾರರು ಮತ್ತು ಇಲಾಖೆ ಮಧ್ಯೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಪ್ರಮುಖ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಕೇಂದ್ರೀಯ ಸರಕು ಮತ್ತು ಸೇವಾ ತೆರಿಗೆ ಸಹಾಯ ವಾಣಿ ಏರ್ಪಡಿಸಿರುವುದು ಕರದಾತರಿಗೆ ತುಂಬಾ ಪ್ರಯೋಜನವಾಗಲಿದೆ. ಇದರಿಂದ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ ಜಾರಿಯಲ್ಲಿನ ಬಗ್ಗೆ ಇದ್ದಂತ ಗೊಂದಲ, ಆಸ್ಪಷ್ಟತೆ ನಿವಾರಣೆಯಾಗಲಿದೆ. ತೆರಿಗೆ ಕಾನೂನುಗಳಲ್ಲಿ ಆಗಾಗ ಬದಲಾವಣೆಗಳು ಆಗುತ್ತಿರುತ್ತವೆ. ಅಂತಹ ಸಂದರ್ಭದಲ್ಲಿ ಪರಸ್ಪರ ಚರ್ಚೆಗಾಗಿ ಸಹಾಯವಾಣಿ ಏರ್ಪಡಿಸುವ ಅಗತ್ಯವಿರುತ್ತದೆ ಎಂದರು.
ಕೇಂದ್ರ ಜಿಎಸ್‌ಟಿ ಸಹಾಯವಾಣಿ ಕಾರ್ಯಕ್ರಮವು ತೆರಿಗೆದಾರರಿಗೆ ನೈಜ ಸಮಯದ ನೆರವು, ಸಮಸ್ಯೆ ಪರಿಹಾರ ಮತ್ತು ಕುಂದುಕೊರತೆ ಪರಿಹಾರವನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ತೆರಿಗೆದಾರರು ಸಹಾಯವಾಣಿ, ವಲಯ ಇಮೇಲ್ ವಿಳಾಸ ಅಥವಾ ಜಿಎಸ್ಟಿ ಸೇವಾ ಕೇಂದ್ರಗಳ ಮೂಲಕ ಸಂಪರ್ಕಿಸಬಹುದು. ತಾಂತ್ರಿಕ ಸಮಸ್ಯೆಗಳನ್ನು ಲಾಗ್ ಮಾಡಲು ಮತ್ತು ಟ್ರ‍್ಯಾಕ್ ಮಾಡಲು, ಟಿಕೆಟ್‌ಗಳನ್ನು ನೇರವಾಗಿ ಜಿಎಸ್ಟಿ ಸ್ವಯಂ ಸೇವಾ ಪೋರ್ಟಲ್‌ನಲ್ಲಿ ಸಲ್ಲಿಸಬಹುದು ಎಂದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಮಾತನಾಡಿ, ಕರ್ನಾಟಕ ಆದಾಯ ತೆರಿಗೆಯಲ್ಲಿ ಮಾತ್ರವಲ್ಲ, ಸರಕು ಮತ್ತು ಸೇವಾ ತೆರಿಗೆ ಸಂಗ್ರಹಣೆಯಲ್ಲೂ ಸಹ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಜಿಎಸ್ಟಿ ತೆರಿಗೆದಾರರ ಸಂಖ್ಯೆ ಮೇ 2026 ರ ವೇಳೆಗೆ 1.65 ಕೋಟಿಗೆ ಏರಿದೆ. ಜಿಎಸ್ಟಿ ಸಂಗ್ರಹವು 2025-26 ರಲ್ಲಿ ₹22.27 ಲಕ್ಷ ಕೋಟಿಗೆ ಏರಿದೆ. ಕರದಾತರಿಗೆ ಅನುಕೂಲವಾಗುವ ಕಾರ್ಯಕ್ರಮಗಳಿಗೆ ಮುಂದೆಯೂ ಸಹ ಶಿವಮೊಗ್ಗ ಸರಕು ಮತ್ತು ಸೇವಾ ತೆರಿಗೆ ಕಚೇರಿ ಕೇಂದ್ರ ವ್ಯಾಪ್ತಿ ಶಿವಮೊಗ್ಗ ವಲಯ ಜತೆಗೆ ಸಂಘವು ಕೈಜೋಡಿಸುತ್ತದೆ ಎಂದರು.
Chamber of Commerce Shivamogga ಬೆಳಗ್ಗೆ 11 ಗಂಟೆಯಿಂದ ಸಂಜೆ 5.30ರವರೆಗೆ ಕೇಂದ್ರ ವ್ಯಾಪ್ತಿಯ ತಂಡದವರು ಕೇಂದ್ರ ತೆರಿಗೆ ವ್ಯಾಪ್ತಿಗೆ ಸಂಬಂಧ ಪಟ್ಟಂತೆ ಕರದಾತರಿಂದ ಕುಂದು ಕೊರತೆ, ಸಲಹೆ, ಅಭಿಪ್ರಾಯಗಳನ್ನು ಪಡೆದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ್ ಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್.ಮನೋಹರ, ನಿರ್ದೇಶಕರು ಇದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B. Y. Raghavendra ಕೆರೆ ತುಂಬಿಸಿದ ಏತ ನೀರಾವರಿ: ಉಡುಗಣಿ- ತಾಳಗುಂದ- ಹೊಸೂರು ಗ್ರಾಮಸ್ಥರ ಕಣ್ಣಲ್ಲಿ ಆನಂದ ಭಾಷ್ಪ

B. Y. Raghavendra ಶಿಕಾರಿಪುರ ತಾಲೂಕಿನ ಕೃಷಿ ರಂಗದ ಇತಿಹಾಸದಲ್ಲೇ ಅತ್ಯಂತ...

U.T. Khader ತೀರ್ಥಹಳ್ಳಿ ಸಾರ್ವಜನಿಕ ಆಸ್ಪತ್ರೆಗೆ ಆರೋಗ್ಯ ಸಚಿವ ಖಾದರ್ ಭೇಟಿ: ಪ್ರತೀ ವಾರ್ಡಿನ ರೋಗಿಗಳೊಂದಿಗೆ ಕ್ಷೇಮ ವಿಚಾರಣೆ

U.T. Khader ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಜಯಚಾಮರಾಜೇಂದ್ರ ಸರ್ಕಾರಿ ಆಸ್ಪತ್ರೆಗೆ ಆರೋಗ್ಯ...

Klive Special Article ಸಕಲ ವಿದ್ಯಾಸಂಪನ್ನ, ಮಹಾಮಹಿಮ ಶ್ರೀವಿಜಯೀಂದ್ರ ತೀರ್ಥರು. ...

ದಿನದ ಒಳ್ಳೆಯಮಾತು(ಯತಿಗಳ ಸ್ಮರಣೆ) ವಿಜಯೀಂದ್ರತೀರ್ಥ ಗುರುಸಾರ್ವಭೌಮರು Klive Special Article ಶ್ರೀವಿಜಯೀಂದ್ರತೀರ್ಥಗುರುಗಳು ಕಲಿಯುಗ ಕಲ್ಪತರು...